Tag: ಶೃಂಗೇರಿ ಶ್ರೀ

  • 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳಿಂದ ಹಾನಿಗೊಳಗಾಗಿದ್ದ ಶಾರದಾ ಮಂದಿರ ಪುನರ್‌ ನಿರ್ಮಾಣ – ಶೃಂಗೇರಿ ಶ್ರೀ ಭೇಟಿ

    1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳಿಂದ ಹಾನಿಗೊಳಗಾಗಿದ್ದ ಶಾರದಾ ಮಂದಿರ ಪುನರ್‌ ನಿರ್ಮಾಣ – ಶೃಂಗೇರಿ ಶ್ರೀ ಭೇಟಿ

    ಚಿಕ್ಕಮಗಳೂರು: 1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಪಾಕ್‌ ಆಕ್ರಮಿತ ಕಾಶ್ಮೀರದ ತೀತ್ವಾಲ್‌ನಲ್ಲಿರುವ ಶಾರದಾ ಮಂದಿರವನ್ನು ಪುನರ್‌ ನಿರ್ಮಾಣ ಮಾಡಲಾಗಿದ್ದು, ಅಲ್ಲಿಗೆ ಶೃಂಗೇರಿ ಶ್ರೀಗಳು ಭೇಟಿ ನೀಡಿದ್ದಾರೆ.

    ತೀತ್ವಾಲ್‌ನಲ್ಲಿ ಸ್ಥಾಪನೆಗೊಂಡಿರುವ ಶಾರದಾಂಬೆ ವಿಗ್ರಹಕ್ಕೆ ಶೃಂಗೇರಿಯ ಗುರುವತ್ರಯರಾದ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರು ಪ್ರತಿಷ್ಠಾಪನಾ ಪೂಜೆ ನೆರವೇರಿಸಲಿದ್ದಾರೆ. ಪಂಚಲೋಹದ ವಿಗ್ರಹಕ್ಕೆ ಪೂಜೆ ಮಾಡಲಿದ್ದಾರೆ. ಅಲ್ಲದೇ ಇದೇ ಜೂ.5 ರಂದು ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿವೆ. ಇದನ್ನೂ ಓದಿ: ಪಂಚ ಗ್ಯಾರಂಟಿಗೆ ಪಿಎಂ ಕಿಸಾನ್‌ ಯೋಜನೆಗೆ ಕತ್ತರಿ?

    ಆರ್ಟಿಕಲ್ 370 ರದ್ದತಿ ನಂತರ ಪುನರ್‌ ನಿರ್ಮಾಣಗೊಂಡ ಶಾರದಾ ಮಂದಿರವನ್ನು ಯುಗಾದಿಯಂದು ಲೋಕಾರ್ಪಣೆಗೊಳಿಸಲಾಗಿತ್ತು. ಆದಿ ಶಂಕರಾಚಾರ್ಯರು, ಸರ್ವಜ್ಞರ ಪೀಠ ಇಲ್ಲಿದೆ.

    ಮಾರ್ಚ್ 18 ರಂದು ಕಾಶ್ಮೀರಿ ಪಂಡಿತರು ಶೃಂಗೇರಿಯಿಂದ ಪಂಚಲೋಹದ ಶಾರದಾಂಬೆ ವಿಗ್ರಹ ಕೊಂಡೊಯ್ದಿದ್ದರು. ಮಾರ್ಚ್‌ 22 ರಂದು‌ ತೀತ್ವಾಲ್‌ನಲ್ಲಿ ಕಾಶ್ಮೀರಿ ಪಂಡಿತರು ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಪಂಚಲೋಹದ ವಿಗ್ರಹಕ್ಕೆ‌ ಇದೀಗ‌‌ ಶೃಂಗೇರಿ ಶ್ರೀಗಳು ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಐದರ ಪೈಕಿ 3 ಗ್ಯಾರಂಟಿ ಆರಂಭದಲ್ಲಿ ಜಾರಿ – ಷರತ್ತುಗಳು ಏನಿರಬಹುದು?

  • ಶೃಂಗೇರಿಗೆ ಶ್ರೀಗಳಿಗೆ ಅಪಮಾನಗೈದ ವ್ಯಕ್ತಿಗೆ 10 ಸಾವಿರ ದಂಡ, 3 ವರ್ಷ ಜೈಲು

    ಶೃಂಗೇರಿಗೆ ಶ್ರೀಗಳಿಗೆ ಅಪಮಾನಗೈದ ವ್ಯಕ್ತಿಗೆ 10 ಸಾವಿರ ದಂಡ, 3 ವರ್ಷ ಜೈಲು

    ಚಿಕ್ಕಮಗಳೂರು: ಶೃಂಗೇರಿ ಶ್ರೀಗಳಿಗೆ ಅಪಮಾನ ಮಾಡಿದ್ದ ವ್ಯಕ್ತಿಗೆ ಶೃಂಗೇರಿ ಕೋರ್ಟ್ ಮೂರು ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

    ಶೃಂಗೇರಿ ಹಿಂದೂಸ್ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಶೃಂಗೇರಿ ಶ್ರೀ ಮಠದ ಗುರುಪರಂಪರೆ ಕುರಿತ ಮಾಹಿತಿ ನೀಡುವ ಪೋಸ್ಟ್‌ ಹಾಕಲಾಗಿತ್ತು. ಅದರಲ್ಲಿ ಶೃಂಗೇರಿ ಶ್ರೀಗಳ ಫೋಟೋ ಸಹ ಇತ್ತು. ಈ ಪೋಸ್ಟ್‌ಗೆ 2015ರ ನವೆಂಬರ್ 19ರಂದು ಹುಬ್ಬಳ್ಳಿ ಮೂಲದ ಮುನ್ನಾ ಅಜರ್ ಅವಾಚ್ಯ ಪದಗಳನ್ನು ಬಳಸಿ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದ. ಈ ಕುರಿತು ಶೃಂಗೇರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಶೃಂಗೇರಿ ಮಠದ ಭಕ್ತರು ಪ್ರತಿಭಟನೆ ನಡೆಸಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು.

    Sringeri

    ಈ ಬಗ್ಗೆ ತನಿಖೆ ಕೈಗೊಂಡ ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿ ಕೆಲವೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ್ದರು. ಶೃಂಗೇರಿ ಠಾಣೆಯ ವೃತ್ತ ನಿರೀಕ್ಷಕರಾಗಿದ್ದ ಸುಧೀರ್ ಹೆಗ್ಡೆ ನೇತೃತ್ವದ ತನಿಖಾ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಇದನ್ನೂ ಓದಿ: ಮಳೆ ನಿಲ್ಲಲು ಶೃಂಗೇರಿ ಜಗದ್ಗುರುಗಳ ಮೊರೆ ಹೋದ ಬಿಜೆಪಿ, ಕಾಂಗ್ರೆಸ್

    ಸುದೀರ್ಘ ವಿಚಾರಣೆಯ ನಡೆಸಿದ ಶೃಂಗೇರಿ ಕೋರ್ಟ್ ನ್ಯಾಯಾಧೀಶ ಕ್ರಾಂತಿಕುಮಾರ್‌ ಮುನ್ನಾ ಅಜರ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಆರೋಪಿಯ ವಿರುದ್ಧವಾಗಿ ವಕೀಲೆ ಹರೀಣಾಕ್ಷಿ ವಾದ ಮಂಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕೇರಳದಲ್ಲಿ ಶೃಂಗೇರಿ ಶ್ರೀಗಳಿಗೆ ಅವಮಾನ – ವೇದಿಕೆಯಿಂದ ಪೀಠ ತೆರವು ಮಾಡಿದ ಮುಜರಾಯಿ ಸಚಿವ

    ಕೇರಳದಲ್ಲಿ ಶೃಂಗೇರಿ ಶ್ರೀಗಳಿಗೆ ಅವಮಾನ – ವೇದಿಕೆಯಿಂದ ಪೀಠ ತೆರವು ಮಾಡಿದ ಮುಜರಾಯಿ ಸಚಿವ

    – ಟ್ವಿಟ್ಟರ್‍ನಲ್ಲಿ ಶೋಭಾ ಕರಂದ್ಲಾಜೆ ಆಕ್ರೋಶ

    ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಶೃಂಗೇರಿ ವಿಧುಶೇಖರ ಭಾರತಿ ಸ್ವಾಮೀಜಿಗೆ ಅವಮಾನ ಮಾಡಲಾಗಿದೆ.

    ತಿರುವನಂತಪುರಂನಲ್ಲಿರುವ ಮಹಾವಿಷ್ಣು ದೇವಸ್ಥಾನ ಕೆರೆ ಅಭಿವೃದ್ಧಿಯ ಕಾಮಗಾರಿಯ ಲೋಕಾರ್ಪಣೆಗೆ ಸ್ವಾಮೀಜಿ ಹೋಗಿದ್ದರು. ಆದ್ರೆ ಶ್ರೀಗಳಿಗೆ ಮೀಸಲಾಗಿದ್ದ ಆಸನ ತೆಗೆದು ಎಡಪಂಥೀಯ ಸರ್ಕಾರದ ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್, ಕಾಂಗ್ರೆಸ್ ಶಾಸಕ ಶಿವಕುಮಾರ್ ದುರಂಹಕಾರ ಪ್ರದರ್ಶಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

    ಶ್ರೀಗಳಿಗೆ ಮಾಡಲಾದ ಅವಮಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

    https://twitter.com/ShobhaBJP/status/874521327566114816

    https://twitter.com/ShobhaBJP/status/874524051825229825

    ಇತ್ತ ತಮ್ಮ ಕ್ರಮವನ್ನು ಸಚಿವ ಕಡಕಂಪಲ್ಲಿ ಸುರೇಂದ್ರನ್ ಸಮರ್ಥಿಸಿಕೊಂಡಿದ್ದಾರೆ. ವೇದಿಕೆಯಲ್ಲಿ ಅತಿಥಿಗಳಿಗೆ ಕೂರಲು ಜಾಗ ಸಾಕಾಗುತ್ತಿರಲಿಲ್ಲ. ಈ ಬಗ್ಗೆ ತಿಳಿದು ವಿಶೇಷ ಕುರ್ಚಿಯನ್ನು ತೆಗೆಸಿದೆ. ಅಲ್ಲಿ ಮಂತ್ರಿಗಳಿಗಾಗಲಿ, ಸ್ವಾಮೀಜಿಗಳಿಗಾಗಲೀ ವಿಶೇಷ ಕುರ್ಚಿಯನ್ನು ಹಾಕೋ ಅಗತ್ಯವಿರಲಿಲ್ಲ. ಸ್ವಾಮೀಜಿಗೆ ಹಾಕಿದ್ದ ವಿಶೇಷ ಕುರ್ಚಿಯನ್ನು ಬಿಜೆಪಿ ಶಾಸಕ ಒ. ರಾಜಗೋಪಾಲ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಕುಮ್ಮನಂ ರಾಜಶೇಖರನ್ ಸಹಾಯದಿಂದ ತೆಗೆಸಿದೆ. ವೇದಿಕೆಯಲ್ಲಿ ಎಲ್ಲರಿಗೂ ಕೂರಲು ಕಷ್ಟ ಆಗ್ತಿತ್ತು ಅನ್ನೋದನ್ನು ಅವರೂ ಅರ್ಥ ಮಾಡಿಕೊಂಡಿದ್ದರು ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

    ವಿಶೇಷ ಪೀಠ ತೆಗೆಸಿದ್ದರ ಕಾರಣ ಕಾರ್ಯಕ್ರಮಕ್ಕೆ ಬಂದಿದ್ದ ಶೃಂಗೇರಿ ವಿಧುಶೇಖರ ಭಾರತಿ ಸ್ವಾಮೀಜಿ ವೇದಿಕೆ ಹತ್ತಲಿಲ್ಲ.