Tag: ಶೂ ಎಸೆತ

  • ಬಿಜೆಪಿ ಕಚೇರಿಯಲ್ಲಿ ಜಿವಿಎಲ್ ರಾವ್ ಮೇಲೆ ಶೂ ಎಸೆತ

    ಬಿಜೆಪಿ ಕಚೇರಿಯಲ್ಲಿ ಜಿವಿಎಲ್ ರಾವ್ ಮೇಲೆ ಶೂ ಎಸೆತ

    ನವದೆಹಲಿ: ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರಿಗೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ.

    ಮಾಲೆಂಗಾವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಯಾಗಿ ಭೋಪಾಲ್‍ನಿಂದ ಸ್ಪರ್ಧೆ ನಡೆಸುವ ವಿಚಾರ ಸಂಬಂಧ ಜಿವಿಎಲ್ ರಾವ್ ಸುದ್ದಿಗೋಷ್ಠಿ ನಡೆಸುತ್ತಿದ್ದರು.

    ಈ ವೇಳೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ. ಶೂ ಎಸೆದ ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಬಿಜೆಪಿ ಕಾರ್ಯರ್ತರು ಆತನ ಹಿಡಿದುಕೊಂಡು ಹೊರಗಡೆ ಎಳೆದುಕೊಂಡು ಹೋಗಿದ್ದಾರೆ.

    ಶೂ ಎಸೆದ ವ್ಯಕ್ತಿಯನ್ನು ಶಕ್ತಿ ಭರ್ಗವ್ ಎಂದು ಗುರುತಿಸಲಾಗಿದ್ದು ಸರ್ಜನ್ ಆಗಿದ್ದಾನೆ. ಐಪಿ ಎಸ್ಟೇಟ್ ಪೊಲೀಸ್ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.