ಬಿಗ್‍ಬಾಸ್ ಮನೆ ಸದಸ್ಯರಲ್ಲಿ ರಘು ಕೊಂಚ ಡಿಫ್ರೆಂಟ್ ಎಂದು ಹೇಳಿದರೆ ತಪ್ಪಾಗಲಾರದು. ರಘು ಸೀರಿಯಸ್ ಆಗಿನೂ ಮಾತನಾಡುತ್ತಾರೆ. ಕಾಮಿಡಿನೂ ಮಾಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಬಿಗ್‍ಬಾಸ್ ಮನೆಯಲ್ಲಿ ಒಂದು ಘಟನೆ ನಡೆದಿದೆ.
ರಘು ಮನೆಯಲ್ಲಿ ಬೆಲ್ಲಿ ಡಾನ್ಸ್ ಮಾಡಲು ತಯಾರಿ ನಡೆಸಿದ್ದಾರೆ. ಈ ವೇಳೆ ಮನೆ ಸದಸ್ಯರ ಬಳಿ ಹುಡುಗಿಯ ಹಾಗೇ ಹಾವ-ಭಾವದಲ್ಲಿ ಮಾತನಾಡುತ್ತಿದ್ದಾರೆ. ಮನೆಯವರು ರಘುವನ್ನು ಚುಡಾಯಿಸುತ್ತಾ ಸಖತ್ ಮಜಾ ತಗೋತ್ತಿದ್ದಾರೆ.
ರಘು ಬಾರೆ… ಇಲ್ಲಿ.. ಎಂದು ಶುಭ ಪೂಂಜಾ ಮಾದಕ ಧ್ವನಿಯಲ್ಲಿ ಕರೆದಿದ್ದಾರೆ. ಈ ವೇಳೆ ರಘು ಏನೇ… ಎಂದು ನಾಚುತ್ತಾ ಮಾತನಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ವಿಶ್ವನಾಥ್, ವೈಷ್ಣವಿ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ ಜೋರಾಗಿ ನಕ್ಕಿದ್ದಾರೆ.
ಏನೇ ಹೊಟ್ಟೆ ಎಲ್ಲಾ ಬಿಟ್ಟ್ಕೊಂಡಿದ್ದಿಯಾ ಮೊಟ್ಟೆತರ ಎಂದು ದಿವ್ಯ ಸುರೇಶ್, ರಘು ಅವರಿಗೆ ಹೇಳಿದ್ದಾರೆ. ಈ ವೇಳೆ ರಘು ನಾಚುತ್ತಾ ತುಂಬಾ ಕಾಣಿಸ್ತಾ ಇದ್ಯಾ. ಕ್ರಾಪ್ ಟಾಪ್ ಅಂತ ಅಂಗಡಿಯವನು ಕೊಟ್ಟ. ತುಂಬಾ ಕ್ರಾಪ್ ಆಗಿ ಹೋಯ್ತಾ. ಇದನ್ನು ಹಾಕಿಕೊಳ್ಳೊಕೆ ಅಂತಾನೆ ದಿನಾ ವರ್ಕ್‍ಔಟ್ ಮಾಡುತ್ತೇನೆ ಎಂದು ಹುಡುಗಿಯ ಧ್ವನಿಯಲ್ಲಿ ನಾಚುತ್ತಾ ಹೇಳಿದ್ದಾರೆ.
ಮನೆಯವರು ಕೇಳುತ್ತಿರುವ ಪ್ರಶ್ನೆಗಳಿಗೆ ರಘು ನಗುತ್ತಾ ನಾಚುತ್ತಾ ಹೆಣ್ಣಿನ ಧ್ವನಿಯಲ್ಲಿ ಉತ್ತರಿಸಿದ್ದಾರೆ. ಮನೆಯ ಹೆಂಗಳೆಯರೆಲ್ಲಾ ಸೇರಿ ರಘುವನ್ನು ಚುಡಾಯಿಸಿ ಜೋರಾಗಿ ನಕ್ಕಿದ್ದಾರೆ.
ದೊಡ್ಮನೆಗೆ ಎಂಟ್ರಿ ಕೊಟ್ಟ ಕೆಲವು ಬ್ಯಾಚುಲರ್ ಹುಡುಗರಲ್ಲಿ ಬ್ರೋಗೌಡ ಕೂಡ ಒಬ್ಬರು. ಮೊನ್ನೆ ಟಾಸ್ಕ್ ನಲ್ಲಿ ಕಿರುಚಾಡುತ್ತಾ, ಕಿತ್ತಾಡಿ, ಗುದ್ದಾಡಿಕೊಂಡಿದ್ದ ಬಿಗ್‍ಬಾಸ್ ಮಂದಿ ನಿನ್ನೆ ಹಾಸ್ಯದ ಹೊನಲಿನಲ್ಲಿ ತೇಲಿದ್ದಾರೆ.
ಬಿಗ್‍ಬಾಸ್ ಮನೆಗೆ ಬಂದಾಗನಿಂದ ಮಗುವಿನಂತೆ ಎಲ್ಲರೊಂದಿಗೆ ಬೆರೆತು, ಸಿರಿಯಸ್ ಸಮಯದಲ್ಲಿ ಕೂಡ ಹಾಸ್ಯ ಚಟಾಕಿ ಹರಿಸುವ ನಟಿ ಶುಭಾ ಪೂಂಜಾ ನಿನ್ನೆ ಬ್ರೋ ಗೌಡರ ಕಾಲೆಳೆದಿದ್ದಾರೆ. ನಿನ್ನೆ ಮನೆ ಮಂದಿಯೆಲ್ಲಾ ಒಟ್ಟಾಗಿ ಲೀವಿಂಗ್ ಏರಿಯಾದಲ್ಲಿ ಟೈಪಾಸ್ ಮಾಡುತ್ತಿದ್ದ ವೇಳೆ ಮಂಜು ಸುಮ್ ಸುಮ್ ನೇ ನಗ್ತಾಳೆ ಎಂದು ದಿವ್ಯಾ ಸುರೇಶ್ ನೋಡುತ್ತಾ ಹಾಡು ಹೇಳಿದ್ದಾರೆ. ಇದಕ್ಕೆ ದಿವ್ಯಾ ಮುಖ ತಿರುಗಿಸಿಕೊಂಡು ಬೇರೆ ಕಡೆ ನೋಡುತ್ತಾರೆ. ಅದಕ್ಕೆ ಮಂಜು ನಾನು ಹೇಳಿದೆ ಅಲ್ಲವಾ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ಅವಳ ಕೈನಲ್ಲಿ ಆಗುವುದಿಲ್ಲ ಎಂದು ಹೇಳುತ್ತಾರೆ.
ರಾಜೀವ್, ಬ್ರೋ ಗೌಡ ಬರುವವರೆಗೂ ಹೀಗೆ ಹಾಡು ಹೇಳು ಎನ್ನುತ್ತಾರೆ. ಈ ವೇಳೆ ಶುಭಾ ಅವನು ಸುಮ್ನೆ ರೆಡಿಯಾಗಿ ಬೇರೆಯವರಿಗೆ ಹೇಳುವುದಾಯ್ತು. ಇಲ್ಲಿಯವರೆಗೂ ಒಂದು ಹುಡುಗಿಯನ್ನು ಪಟಾಯಿಸುವುದಕ್ಕೆ ಆಗಲಿಲ್ಲ. ಹೊರಗಡೆ ನೋಡಿದರೆ ನನಗೆ ಇಷ್ಟು ಜನ ಹುಡುಗಿಯರು ಬಿದ್ದಿದ್ದರು, ಅಷ್ಟು ಜನ ಹುಡುಗಿಯರು ಬಿದ್ದಿದ್ದಾರೆ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಾನೆ. ಹೊರಗಡೆ 22 ಜನ ಹುಡುಗಿಯರು ಬಿದ್ದಿರುವ ಅವನಿಗೆ ಬಿಗ್‍ಬಾಸ್ ಮನೆಯಲ್ಲಿ ಒಬ್ಬರನ್ನು ಕೂಡ ಬೀಳಿಸಲು ಆಗಲಿಲ್ಲ. ಮೊದಲನೇಯದಾಗಿ ಅವನಿಗೆ ಹುಡುಗಿಯರನ್ನು ಬೀಳಿಸುವ ನ್ಯಾಕ್ ಗೊತ್ತಿಲ್ಲ. ನೋಡಿದಾಗಲೆಲ್ಲ ಎಲ್ಲ ಹುಡುಗಿಯರಿಗೂ ಕೆಲಸ ಕೊಡುತ್ತಾನೆ. ಅವನಿಗ್ಯಾರು ಬೀಳುತ್ತಾರೆ? ಎಂದು ನಗೆ ವ್ಯಂಗ್ಯ ಮಾಡಿದರು. ಇದನ್ನು ಕೇಳಿ ಮನೆಯ ಸದಸ್ಯರೆಲ್ಲರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಈ ವೇಳೆ ಲ್ಯಾಂಗ್ ಮಂಜು ನಾನೇದರೂ ಕ್ಯಾಪ್ಟನ್ ಆದರೆ ನನ್ನ ಎರಡು ಕಣ್ಣುಗಳಿಗೆ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಇದರಿಂದ ರೊಚ್ಚಿಗೆದ್ದ ಶುಭಾ ಪೂಂಜಾ, ಮಗನೇ ಹಾಗಾದರೆ ನಮ್ಮ ಕೈನಲ್ಲಿ ಕೆಲಸ ಮಾಡಿಸ್ತಿಯಾ ಎಂದು ವಾಟರ್ ಬಾಟಲ್‍ನಿಂದ ಹೊಡೆಯುತ್ತಾರೆ.
ಬಳಿಕ ಲ.. ಲವರ್ ಬಾಯ್ ಬಾ ಇಲ್ಲಿ ಎಂದು ಬ್ರೋಗೌಡರನ್ನು ಕರೆದ ಶುಭಾ, ನಿನಗೊಂದು ಟಾಸ್ಕ್ ಈ ವೀಕೆಂಡ್ ಒಳಗೆ ಒಬ್ಬರನ್ನಾದರೂ ನೀನು ಬೀಳಿಸಬೇಕು. ಕಮಾನ್ ಶಮಂತ್ ಎದ್ದು ತೊಡೆ ತಟ್ಟುತ್ತಾ ಸವಾಲೆಸೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಬ್ರೋ ಗೌಡ ವೇಟ್ ವೇಟ್. ನಾನು ಈಗಲೇ ಏನು ಹೇಳುವುದಿಲ್ಲ ಎನ್ನುತ್ತಾರೆ.
ಇದಕ್ಕೆ ಶುಭಾ ನೀನು ಹೆಣ್ಣು ಮಕ್ಕಳನ್ನು ನೋಡಿದಾಗೆಲ್ಲಾ ಕಸ ಗುಡಿಸಿ, ಪಾತ್ರೆ ತೊಳೆಯಿರಿ, ಕ್ಲೀನ್ ಮಾಡಿ ಎಂದರೆ ನಿನಗೆ ಯಾರು ಬೀಳುವುದಿಲ್ಲ ಎಂದು ಹೇಳುವ ಮೂಲಕ ಬ್ರೋ ಗೌಡ ಕಾಲೆಳೆದಿದ್ದಾರೆ.
ದೊಡ್ಮನೆಯಲ್ಲಿ ಬುಧವಾರ ನಡೆದ ಮನುಷ್ಯರು ಮತ್ತು ವೈರಸ್ ಟಾಸ್ಕ್ ಬಗ್ಗೆ ಮನೆಯ ಸದಸ್ಯರು ಶ್ರದ್ಧೆ, ಗಮನ ವಹಿಸದೇ ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಗ್ ಟಾಸ್ಕ್ ನನ್ನು ರದ್ದು ಗೊಳಿಸಿದ್ದರು.
ಮೊದಲ ಭಾಗದಲ್ಲಿ ಹಲವು ಬಾರಿ ಗೆದ್ದ ವೈರಸ್ ತಂಡ, ಎರಡನೇ ಭಾಗದಲ್ಲಿ ಗೆಲ್ಲಲು ಪ್ರಯತ್ನವನ್ನು ಮಾಡದೇ ಪಂದ್ಯವನ್ನು ಸುಲಭವಾಗಿ ಕೈಚೆಲ್ಲಿ ಸೋಲನ್ನು ಅನುಭವಿಸಿತು. ಈ ವಿಚಾರವಾಗಿ ವೈರಸ್ ತಂಡ ಸೋಲಲು ಪ್ರಮುಖ ಕಾರಣ ದಿವ್ಯಾ ಸುರೇಶ್ ಹಾಗೂ ನಿಧಿ ಸುಬ್ಬಯ್ಯ ಎಂದು ಮನೆಯ ಎಲ್ಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಲ್ಯಾಗ್ ಮಂಜು ಬೆಳಗ್ಗೆ ಆಟದ ಬಗ್ಗೆ ದಿವ್ಯಾ ಸುರೇಶ್ ಜೊತೆ ಚರ್ಚೆ ನಡೆಸಿದರು. ನೀನು ಪಂದ್ಯವನ್ನು ಕೈ ಚೆಲ್ಲಿದ್ದು ಏಕೆ? ಅಷ್ಟೇಲ್ಲಾ ಕಷ್ಟಪಟ್ಟು, ಅಷ್ಟು ಮಂದಿ ಹುಡುಗರ ಮದ್ಯೆ ಸಮವಾಗಿ ಆಟ ಆಡಿದ್ದೀಯಾ. ಏಕಾಂಗಿಯಾಗಿ ಆಟವಾಡಲು ಆರಂಭಿಸಿದಾಗ ನೀನು ನಿನ್ನ ಬಲವನ್ನು ತೋರಿಸಬೇಕಿತ್ತು. ಸೋತರೂ ಪರವಾಗಿಲ್ಲ ಕೇವಲ ಪಂದ್ಯದಲ್ಲಿ ಭಾಗವಹಿಸಬೇಕಾಗಿತ್ತು. ನೀನು ಒಬ್ಬಳು ಕ್ರೀಡಾಪಟುವಾಗಿ ನೀನು ನಿನ್ನ ಬಲವನ್ನು ಪ್ರದರ್ಶಿಸಬೇಕಿತ್ತು. ನೀನು ಮಾಡಿದ್ದು ತಪ್ಪಲ್ಲವೇ? ಈ ವಿಚಾರವಾಗಿ ನನಗೆ ನಿನ್ನ ಮೇಲೆ ಬಹಳ ಸಿಟ್ಟಿತ್ತು. ಹಾಗಾಗಿ ಆತ್ಮೀಯವಾಗಿದ್ದೇನೆ, ಏನಾದರೂ ತಪ್ಪಾಗಿ ಮಾತನಾಡಿಬಿಡುತ್ತೇನೆ ಎಂದು ನಾನು ನಿನ್ನೆ ನಿನ್ನೊಂದಿಗೆ ಮಾತನಾಡಿಲ್ಲ. ನಾವು ಇಲ್ಲಿಗೆ ಬರಲು ಬೇರೆಯವರ ಮಾತನ್ನು ಕೇಳಿಕೊಂಡು ಬಂದಿದ್ದೇವಾ? ಇಲ್ಲ ಅಲ್ಲವೇ? ಬೇರೆಯವರು ಹೀಗೋ ಆಟ ಆಡುತ್ತಾರೆ ಎಂದು ನಾವು ಅವರ ರೀತಿಯಲ್ಲಿಯೇ ಆಟವಾಡುವುದಕ್ಕೆ ಆಗುತ್ತಾ? ಬೇರೆ ಯಾರು ಹೇಗಾದರೂ ಆಡಿಕೊಳ್ಳಲಿ ಅದು ನಮಗೆ ಸಂಬಂಧವಿಲ್ಲದ ವಿಚಾರ. ನಾವು ಏಕಾಂಗಿಯಾಗಿ ನಿಂತ ಮೇಲೆ ನಾವು ಏಕಾಂಗಿಯಾಗಿ ಹೋರಾಟ ಮಾಡಬೇಕು. ನೀನು ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದೀಯಾ ಎಂಬುವುದರ ಬಗ್ಗೆ ಆಲೋಚಿಸು. ಒಟ್ಟಾರೆ ನೀನು ನಿನ್ನೆ ಮಾಡಿದ್ದು ನೂರಕ್ಕೆ ನೂರರಷ್ಟು ತಪ್ಪು ಎಂದು ತಿಳಿ ಹೇಳಿದರು.
ಈ ವೇಳೆ ಪಂದ್ಯ ಸೋಲುವುದಕ್ಕೆ ದಿವ್ಯಾ ಸುರೇಶ್ ಕಾರಣರೆಂದು ನೀವು ಹೇಳಿದ್ದೀರಿ ಎಂಬ ಮಾತನ್ನು ರಾಜೀವ್‍ರವರು ಹೇಳುತ್ತಿದ್ದರು ಎಂದು ದಿವ್ಯಾ ಸುರೇಶ್ ಲ್ಯಾಗ್ ಮಂಜುಗೆ ಪ್ರತಿಕ್ರಿಯಿಸಿದರು. ಇದಕ್ಕೆ ಪ್ರತಿಯಾಗಿ ಲ್ಯಾಗ್ ಮಂಜು ಬೇರೆಯವರು ಹೇಳುವ ಮಾತನ್ನು ನೀನು ನಂಬಿ ಬಿಡುತ್ತೀಯಾ? ನಿನ್ನ ಬುದ್ದಿಗೆ ಏನಾಗಿದೆ? ನಾವೇನು ಪಂದ್ಯದ ವೇಳೆ ಡಂಬಲ್ಸ್ ಹಾಕಲು ಬಂದಿದ್ದೇವಾ ಕೇವಲ ನೀರನ್ನಷ್ಟೇ ತಾನೇ ಹಾಕಲು ಮುಂದಾದೇವು ಎಂದು ಕಿಡಿಕಾರಿದರು.
ನಾನು ಕೊನೆಯವರೆಗೂ ಸರಿಯಾದ ರೀತಿಯಲ್ಲಿ ಆಟವಾಡಿದೆ. ಆದರೆ ಪ್ರಶಾಂತ್‍ರವರು ಕನ್ಫೆಷನ್ ರೂಮ್‍ಗೆ ಹೋಗಿ ಹಿಂದಿರುಗಿ ಬಂದ ನಂತರ ನನ್ನ ಮೇಲೆ ನಾನು ನಾನು ಮಾಡದೇ ಇರುವ ಆರೋಪಗಳನ್ನು ಹೊರಿಸಿದರು ಎಂದು ಲ್ಯಾಗ್ ಮಂಜುಗೆ ದಿವ್ಯಾ ಸುರೇಶ್ ಆರೋಪಿಸಿದರು. ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದರು.
ಬಳಿಕ ಮನೆಯ ಸದಸ್ಯರಿಗೆ ದಿವ್ಯಾ ನಾನು ಮಾಡಿದ್ದು ತಪ್ಪು ಎಂದು ಕ್ಷಮೆ ಯಾಚಿಸಿದರು. ಈ ವೇಳೆ ಶುಭಾ ಪೂಂಜಾ ಬೇರೆಯವರ ಆಲೋಚನೆಗೆ ಪ್ರೇರಿತವಾಗಿ ಯಾವ ಕೆಲಸವನ್ನು ಮಾಡಬೇಡ. ನಾವು ಇಲ್ಲಿ ಆಟವಾಡಲು ಏಕಾಂಗಿಯಾಗಿ ಬಂದಿದ್ದೇವೆ. ನಮಗೆ ನಮ್ಮದೇಯಾದಂತಹ ವೈಯಕ್ತಿಕ ಅಭಿಪ್ರಾಯಗಳಿರುತ್ತದೆ. ಒಂದು ಟೀಂ ಎಂದು ಬಂದಾಗ ಟೀಂನಲ್ಲಿರುವವರೆಲ್ಲ ಸರಿ ಎಂದು ಹೇಳಲು ಸಾಧ್ಯವಾಗುವುದಿಲ್ಲ. ನಮಗೆ ಹಾನಿಯಾಗುತ್ತದೆ, ಬೇಸರವಾಗುತ್ತದೆ ಎಂದು ನಾವು ಪಂದ್ಯವನ್ನು ಅರ್ಧದಲ್ಲಿಯೇ ಕೈಚೆಲ್ಲಿ ಬಂದೆವಾ ಆಟ ಪೂರ್ಣಗೊಳಿಸಲಿಲ್ಲವೇ? ನಾವು ಆಟ ಆಡಿದಾಗ ನೀವು ಆಟದ ಬಗ್ಗೆ ಅಸಡ್ಡೆ ತೋರಿದ್ದೀರಾ ಎಂಬುವುದು ನಮಗಿಂತ ಜನರಿಗೆ ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆದ ದಿವ್ಯಾ ಸುರೇಶ್ ರಾಜೀವ್ ಅವರ ಭುಜದ ಮೇಲೆ ಒರಗಿಕೊಂಡು ಗಳಗಳನೇ ಅಳಲು ಆರಂಭಿಸಿದರು. ನಂತರ ರಾಜೀವ್ ಹಾಗೂ ಸಮರ್ಥ್, ಮಂಜು ಸಮಾಧಾನ ಪಡಿಸುವ ಮೂಲಕ ದಿವ್ಯಾ ಸುರೇಶ್ ಮುಖದಲ್ಲಿ ನಗು ತರಿಸಿದರು.
ಬೆಂಗಳೂರು: ಬಹುತೇಕರಿಗೆ ಪೆಟ್ ಡಾಗ್ ಎಂದರೆ ಎಲ್ಲಿಲ್ಲದ ಪ್ರೀತಿ, ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಸಾಕಿರುತ್ತಾರೆ. ಅವುಗಳ ಜೊತೆ ಯಾವಾಗಲೂ ಕಾಲ ಕಳೆಯುತ್ತಿರುತ್ತಾರೆ. ಈ ಮೂಲಕ ಕೆಲಸದ ದಣಿವನ್ನು ನೀಗಿಸಿಕೊಳ್ಳುತ್ತಿರುತ್ತಾರೆ. ಹೀಗೆ ಸಾಕು ಪ್ರಾಣಿಗಳು ಅವರ ಜೀವನದ ಭಾಗವೇ ಆಗಿರುತ್ತವೆ. ಅದೇ ರೀತಿ ನಟಿ ಶುಭ ಪೂಂಜಾ ಸಹ ನಾಯಿಯನ್ನು ಸಾಕಿದ್ದರು. ಆದರೆ ಅದು ಈಗ ಸಾವನ್ನಪ್ಪಿದೆ. ನಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಶುಭ ಪೂಂಜ ಕೊರಗುತ್ತಿದ್ದಾರೆ.
ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಇರುವ ಶುಭ ಪೂಂಜಾ ತಮ್ಮ ಪ್ರೀತಿಯ ನಾಯಿಯೊಂದಿಗೆ ಕಾಲ ಕಳೆಯುತ್ತಿದ್ದರು. ಆದರೆ ಇದೇ ಸಮಯದಲ್ಲಿ ನಾಯಿ ಸಾವನ್ನಪ್ಪಿರುವುದು ಶುಭ ಅವರಿಗೆ ತೀವ್ರ ಬೇಸರವನ್ನುಂಟುಮಾಡಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ನಟಿ ಐಂದ್ರಿತಾ ರೇ ಕಮೆಂಟ್ ಮಾಡಿ ಸಮಾಧಾನ ಹೇಳಿದ್ದು, ಹೋ ಡಿಯರ್ ಟೇಕ್ ಕೇರ್ ಶುಭ, ನಮ್ಮ ಜೀವನದಲ್ಲಿ ಇದು ಬಹುದೊಡ್ಡ ನಷ್ಟ. ನಿನಗಾಗಿರುವ ನಷ್ಟ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ನನಗೆ ತಿಳಿದಿದೆ. ಟೇಕ್ ಕೇರ್ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಜಲವು ನಟ, ನಟಿಯರು ಸಹ ಕಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಲಾಕ್‍ಡೌನ್ ವೇಳೆ ಮನೆಯಲ್ಲಿರದೆ ಶುಭ ಪೂಂಜಾ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಬಡವರಿಗೆ, ನಿರ್ಗತಿಕರಿಗೆ ಆಹಾರದ ಕಿಟ್ ನೀಡುತ್ತಿದ್ದಾರೆ. ತಮ್ಮದೇ ಟೀಮ್ ಕಟ್ಟಿಕೊಂಡು ಉಡುಪಿಯ ಕಾಪು ಸುತ್ತಲಿನ ಪ್ರದೇಶಗಳಲ್ಲಿನ ಬಡವರಿಗೆ ಆಹಾರದ ಕಿಟ್ ವಿತರಿಸುತ್ತಿದ್ದಾರೆ. ತಮ್ಮ ಎಲ್ಲ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಡೇಟ್ ನೀಡುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ನೋವು ತೋಡಿಕೊಂಡಿರುವ ಶುಭ ಪೂಂಜಾ, ನನ್ನ ಜಗತ್ತನ್ನು ಕಳೆದುಕೊಂಡಿದ್ದೇನೆ. ನನಗೆ ಇವನೇ ಒಂದು ಜಗತ್ತು ಆಗಿದ್ದ. ಸ್ನೇಹಿತರೆ ನಿಮಗೆ ಗೊತ್ತಾ, ಇವನು ಇನ್ನಿಲ್ಲ. ಆದರೆ ಇವನು ಯಾವಾಗಲೂ, ಪ್ರತಿ ಸೆಕೆಂಡ್ ನನ್ನ ಜೊತೆಗೆ ಇರುತ್ತಾನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ದುಃಖ ತೋಡಿಕೊಂಡಿದ್ದಾರೆ.
ನಟಿ ಶುಭ ಪೂಂಜಾಗೆ ಇತ್ತೀಚೆಗೆ ಹೆಚ್ಚು ಆಫರ್ ಬರುತ್ತಿದ್ದು, ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನರಗುಂದ ಬಂಡಾಯ ಸಿನಿಮಾ ಬಿಡುಗಡೆಯಾಗಿ ಜನಪ್ರಿಯತೆ ಗಳಿಸುತ್ತಿದ್ದಂತೆ, ಇದೀಗ ತ್ರಿದೇವಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದ್ದು, ಈ ಚಿತ್ರ ಕನ್ನಡ ಹಾಗೂ ಮಲಯಾಳಂನಲ್ಲಿ ಸಿದ್ಧವಾಗುತ್ತಿದೆ. ಶುಭ ಪುಂಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.