Tag: ಶುಭ್ರಾ ಅಯ್ಯಪ್ಪ

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ವಜ್ರಕಾಯ’ ನಟಿ ಶುಭ್ರಾ ಅಯ್ಯಪ್ಪ

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ವಜ್ರಕಾಯ’ ನಟಿ ಶುಭ್ರಾ ಅಯ್ಯಪ್ಪ

    `ವಜ್ರಕಾಯ’ (Vajrakaya) ಸಿನಿಮಾ ಖ್ಯಾತಿಯ ಶುಭ್ರಾ ಅಯ್ಯಪ್ಪ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ (Vishal Sivappa) ಜೊತೆ ನಟಿ ಶುಭ್ರಾ ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ.

    ಶಿವರಾಜ್‌ಕುಮಾರ್‌ಗೆ (Shivarajkumar) ನಾಯಕಿಯಾಗುವ ಮೂಲಕ ಕೂರ್ಗ್ ಬ್ಯೂಟಿ ಶುಭ್ರಾ (Shubra Aiyappa) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದರು. ಇದೀಗ ಸಿನಿಮಾ ಅವಕಾಶಗಳು ಅರಸಿ ಬರುತ್ತಿರುವ ಬೆನ್ನಲ್ಲೇ ಉದ್ಯಮಿ ವಿಶಾಲ್ (Businessmen Vishal) ಜೊತೆ ಮದುವೆಗೆ ಸಿದ್ಧರಾಗಿದ್ದಾರೆ.

    ಸತತ 6 ವರ್ಷಗಳ ಡೇಟಿಂಗ್ (Dating) ನಂತರ ಗುರುಹಿರಿಯರ ಸಮ್ಮುಖದಲ್ಲಿ ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ಶಿವಪ್ಪ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಉದ್ಯಮಿ ವಿಶಾಲ್ ಮೊದಲು ಶುಭ್ರಾಗೆ ಪ್ರಪೋಸ್ ಮಾಡಿದ್ರಂತೆ, ಕೊಂಚ ಸಮಯಾವಕಾಶದ ನಂತರ ವಿಶಾಲ್ ಪ್ರೀತಿಗೆ ನಟಿ ಗ್ರೀನ್ ಸಿಗ್ನಲ್ ಕೊಟ್ಟರು. ಇದನ್ನೂ ಓದಿ: ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

    ಇದೀಗ ಜನವರಿ 18ರಂದು ಫ್ಯಾಮಿಲಿ ಜೊತೆ ಕೂರ್ಗ್‌ನಲ್ಲಿ ವಿಶಾಲ್ ಮತ್ತು ಶುಭ್ರಾ ಸರಳವಾಗಿ ಮದುವೆಯಾಗುತ್ತಿದ್ದಾರೆ. ಇನ್ನೂ ಜ.20 ಮತ್ತು 21ರಂದು ಮೈಸೂರಿನಲ್ಲಿ ಸಿನಿಮಾ ರಂಗದ ಸ್ನೇಹಿತರಿಗೆ, ಗಣ್ಯರಿಗೆ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಏಳು ವರ್ಷಗಳ ನಂತರ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯನಿಗಾಗಿ ಬಂದ ಶುಭ್ರಾ ಅಯ್ಯಪ್ಪ

    ಏಳು ವರ್ಷಗಳ ನಂತರ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯನಿಗಾಗಿ ಬಂದ ಶುಭ್ರಾ ಅಯ್ಯಪ್ಪ

    ರೋಬ್ಬರಿ ಏಳು ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಶುಭ್ರ ಅಯ್ಯಪ್ಪ (Shubhra Ayyappa). ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಸಿನಿಮಾದ ನಂತರ ಮತ್ತೆ ಇವರು ಯಾವ ಸಿನಿಮಾಗಳಲ್ಲೂ ನಟಿಸಿರಲಿಲ್ಲ. ಇದೀಗ ಏಳು ವರ್ಷಗಳ ನಂತರ ಮತ್ತೆ ಸ್ಯಾಂಡಲ್ ವುಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಎರಡೆರಡೂ ಸಿನಿಮಾಗಳ ಮೂಲಕ ಎನ್ನುವುದು ಮತ್ತೊಂದು ವಿಶೇಷ.

    ಈ ಹಿಂದೆ ಶುಭ್ರ ಅಯ್ಯಪ್ಪ ಅವರು ರಾಮನ ಅವತಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ನಂತರ ಅದು ನಿಜವೂ ಆಯಿತು. ಇದೀಗ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ (Thimmaiah and Thimmaiah) ಸಿನಿಮಾದಲ್ಲಿ ನಟಿಸಲಿದ್ದಾರೆ. ಸಂಜಯ್ ಶರ್ಮಾ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದ ವಿಶೇಷ ಅಂದರೆ, ಅನಂತ್ ನಾಗ್‌ (Ananth Nag) ಮತ್ತು ದಿಗಂತ್ (Digant) ಕಾಂಬಿನೇಷನ್ ನ ಸಿನಿಮಾ ಇದಾಗಿದೆ. ಇದನ್ನೂ ಓದಿ: ಕಾಂತಾರ ನೋಡಿ, ಆದ್ರೆ ಓ.. ಎಂದು ಕೂಗ್ಬೇಡಿ – ಆಚಾರಕ್ಕೆ ಧಕ್ಕೆಯಾಗುತ್ತೆ ಎಂದ ರಿಷಬ್

    ತಾತ ಮತ್ತು ಮೊಮ್ಮಗನ ಕಥೆಯನ್ನು ಆಧರಿಸಿ ಈ ಸಿನಿಮಾ ಮೂಡಿ ಬರುತ್ತಿದ್ದು, ಅನಂತ್ ನಾಗ್ ತಾತನಾಗಿ, ದಿಗಂತ್ ಮೊಮ್ಮಗನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಒಂದು ಪಾತ್ರವನ್ನು ಐಂದ್ರಿತಾ ರೇ (Aindritha Ray) ಮಾಡಿದರೆ, ಮತ್ತೊಂದು ಪಾತ್ರವನ್ನು ಶುಭ್ರಾ ಅಯ್ಯಪ್ಪ ನಿರ್ವಹಿಸುತ್ತಿದ್ದಾರೆ.

    ಇದೊಂದು ತಾತ ಮತ್ತು ಮೊಮ್ಮಗನ ನಡುವಿನ ಕಥೆಯಾಗಿದ್ದು, ಮೂವತ್ತು ವರ್ಷಗಳ ಕಾಲ ಇಬ್ಬರೂ ಒಬ್ಬರನ್ನೊಬ್ಬರು ಭೇಟಿ ಮಾಡುವುದಿಲ್ಲ. ಯಾವುದೇ ಒಂದು ಸನ್ನಿವೇಶದಲ್ಲಿ ಇಬ್ಬರೂ ಮೂರು ತಿಂಗಳ ಕಾಲ ಒಟ್ಟಿಗೆ ಇರುವಂತಹ ಸನ್ನಿವೇಶ ಎದುರಾಗುತ್ತದೆ. ಆ ಮೂರು ತಿಂಗಳು ಹೇಗೆ ಕಳೆಯುತ್ತಾರೆ ಎನ್ನುವುದೇ ಸಿನಿಮಾ. ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದು, ಮಿಮಿಕ್ರಿ ಗೋಪಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಸೆಮಣೆ ಏರಲು ಸಿದ್ಧರಾದ ವಜ್ರಕಾಯ ಬೆಡಗಿ ಶುಭ್ರಾ ಅಯ್ಯಪ್ಪ

    ಹಸೆಮಣೆ ಏರಲು ಸಿದ್ಧರಾದ ವಜ್ರಕಾಯ ಬೆಡಗಿ ಶುಭ್ರಾ ಅಯ್ಯಪ್ಪ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶುಭ್ರಾ ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಶುಭ್ರಾ ಅಯ್ಯಪ್ಪ ಅವರು ತಮ್ಮ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಹುಡುಗನ ಪ್ರೀತಿಯನ್ನು ಒಪ್ಪಿಕೊಂಡಿರುವುದಾಗಿ ಶುಭ್ರಾ ಅಯ್ಯಪ್ಪ ಅವರು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

    ಶುಭ್ರಾ ಅವರ ಕೈ ಹಿಡಿಯುತ್ತಿರುವ ಹುಡುಗನ ಹೆಸರು ವಿಶಾಲ್ ಶಿವಪ್ಪ. ಭಾವಿ ಪತಿಯ ಫೋಟೋ  ಹಂಚಿಕೊಂಡ ನಟಿ ನಾನು ನನ್ನ ಪಾಂಡಾಗೆ ಎಸ್ ಎಂದು ಹೇಳಿದೆ ಎಂದು ಬರೆದುಕೊಂಡು ಹಾರ್ಟ್ ಮತ್ತು ಉಂಗುರದ ಸಿಂಬಲ್ ಹಾಕಿದ್ದಾರೆ.  ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲವಾಗಿ ಶುಭ್ರಾ ಅಯ್ಯಪ್ಪ ಅವರಿಗೆ ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಅವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್‌ ಪ್ರಿಯರು

     

    View this post on Instagram

     

    A post shared by Shubra Aiyappa (@shubra.aiyappa)

    ಶುಭ್ರಾ ಅಯ್ಯಪ್ಪ ಅವರ ರೀತಿಯಲ್ಲೇ, ವಿಶಾಲ್ ಶಿವಪ್ಪ ಅವರು ಕೂಡ ಫೋಟೊ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೀತಿ ಪೂರ್ವಕ ಸಾಲುಗಳನ್ನು ಬರೆದು ಶುಭ್ರಾ ಅಯ್ಯಪ್ಪ ಅವರಿಗೆ ಟ್ಯಾಗ್ ಮಾಡಿದ್ದಾರೆ. ಪ್ರೀತಿಯಿಂದ ತುಂಬಿದ ಜೀವನಕ್ಕಾಗಿ ಹಾಗೂ ನಮ್ಮ ಕನಸುಗಳನ್ನು ಮುಂದಕ್ಕೆ ಸಾಗಿಸಲು ದೇವರು ನಮ್ಮನ್ನು ಎಲ್ಲಾ ರೀತಿಯಲ್ಲಿ ಆಶೀರ್ವದಿಸಲಿ. ನನ್ನ ಕನಸಿನ ಹುಡುಗಿ ಪ್ರೀತಿಗೆ ಒಪ್ಪಿಗೆ ಸೂಚಿಸಿದಳು ಎಂದು ವಿಶಾಲ್ ಶಿವಪ್ಪ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಮದುವೆ ಯಾವಾಗ ಎಂದು ಎಲ್ಲರೂ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುವ ಮೂಲಕ ಪ್ರಶ್ನಿಸಿದ್ದಾರೆ. ಆದರೆ ಈ ಬಗ್ಗೆ ಶುಭ್ರಾ ಅವರು ಸ್ಪಷ್ಟ ಪಡಿಸಿಲ್ಲ.

     

    View this post on Instagram

     

    A post shared by Vishal Sivappa (@vishalsivappa)

    ಶಿವರಾಜ್ ಕುಮಾರ್ ಅವರು ನಟಿಸಿರುವ ವಜ್ರಕಾಯ ಸಿನಿಮಾದಲ್ಲಿ ನಟಿಸುವ ಮೂಲವಾಗಿ ಸ್ಯಾಂಡಲ್‍ವುಡ್‍ಗೆ ಪರಿಚಯವಾಗಿದ್ದಾರೆ. ಶುಭ್ರಾ ಅಯ್ಯಪ್ಪ ಅವರು ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ಮಾಡಿದ್ದಾರೆ. ಸಿನಿಮಾಗಿಂತಲೂ ಶುಭ್ರಾ ಅಯ್ಯಪ್ಪ ಅವರು ಮಾಡಲಿಂಗ್ ಪ್ರಪಂಚದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ.