Tag: ಶುಭಾ ಪೂಂಜ

  • ಬಿಗ್‍ಬಾಸ್ ಮನೆಗೆ ಪಿಕ್‍ನಿಕ್‍ಗೆ ಬಂದಂತೆ ವರ್ತನೆ- ರೊಚ್ಚಿಗೆದ್ದ ನಿಧಿ

    ಬಿಗ್‍ಬಾಸ್ ಮನೆಗೆ ಪಿಕ್‍ನಿಕ್‍ಗೆ ಬಂದಂತೆ ವರ್ತನೆ- ರೊಚ್ಚಿಗೆದ್ದ ನಿಧಿ

    ಬಿಗ್ ಮನೆಯಲ್ಲಿ ಎರಡನೇ ಇನ್ನಿಂಗ್ಸ್ ಆಡುತ್ತಿರುವ ಸ್ಪರ್ಧಿಗಳು ಒಬ್ಬರಿಗೊಬ್ಬರು ಕತ್ತಿಮಸೆಯುವ ಮಾತು ಮತ್ತೆ ಮುಂದುವರಿದಿದೆ. ಉತ್ತಮ ಸ್ನೇಹಿತರಾಗಿದ್ದವರು ಇದೀಗ ಕೋಪಿಸಿಕೊಂಡು ಒಬ್ಬರಿಗೊಬ್ಬರು ಮಾತು ಬಿಡುವಷ್ಟರ ಮಟ್ಟಿಗೆ ಹೋಗಿದ್ದಾರೆ.

    ಹೌದು ನಿಧಿ ಸುಬ್ಬಯ್ಯ ಮತ್ತು ಶುಭಾ ಪೂಂಜ ಉತ್ತಮ ಸ್ನೇಹಿತರಾಗಿದ್ದರು. ಆದರೆ ಇದೀಗ ನಿಧಿ, ತನ್ನ ಆತ್ಮೀಯ ಸ್ನೇಹಿತೆ ಶುಭಾ ಆಟವನ್ನು ಕಂಡು ನನಗೆ ನೆತ್ತಿವರೆಗೆ ಬಂದು ನಿಂತಿದೆ ಎಂದು ಸಹ ಸ್ಪರ್ಧಿಗಳಲ್ಲಿ ದೂರಿಕೊಂಡಿದ್ದಾರೆ.

    ಶುಭಾ ಎಲ್ಲವನ್ನೂ ಸ್ಪರ್ಧೆ ಎಂದು ನೋಡಬೇಡಿ. ಅದು ಮಾಡಬೇಡ, ಇದು ಮಾಡಬೇಡ ಎಂದು ನಮ್ಮ ಬಳಿ ಹೇಳುತ್ತಾರೆ. ನಾವೆಲ್ಲ ಇಲ್ಲಿ ಆಡೋಕೆ ಬಂದಿದ್ದೇವೆ ಅವರು ಮಾತ್ರ ಪಿಕ್‍ನಿಕ್ ಬಂದಂತೆ ವರ್ತಿಸುತ್ತಿದ್ದಾರೆ ಎಂದು ನಿಧಿ, ದಿವ್ಯಾ ಸುರೇಶ್ ಮತ್ತು ಮಂಜು ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.

    ನಾವು ಇಲ್ಲಿ ಫ್ರೇಂಡ್‍ಶಿಪ್ ಎಲ್ಲ ಪಕ್ಕಕ್ಕೆ ಇಟ್ಟು ಆಟ ಎಂದು ಬಂದಾಗ ಸರಿಯಾಗಿ ಆಟವಾಡಬೇಕು. ಟಾಸ್ಕ್ ಮುಗಿದ ಮೇಲೆ ಬೇಕಾದರೆ ಏನೇ ಮಾಡಲಿ ನಾವು ಡ್ಯಾನ್ಸ್, ಹರಟೆ ಕಾಮಿಡಿ ಎಲ್ಲ ಮಾಡೋಣ ಆದರೆ ಟಾಸ್ಕ್ ಬಂದಾಗ ಸರಿಯಾಗಿ ಇರಬೇಕು ಎಂದು ದಿವ್ಯಾ ಕೂಡ ಶುಭಾ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ :ಈ ಭೂಮಿ ಆಕಾಶ ಇರುವವರೆಗೆ ಇದು ಸಾಧ್ಯವಿಲ್ಲ ಎಂದ ಮಂಜ

    ಬಿಗ್‍ಬಾಸ್ ನೀಡಿದ್ದ ಪೈಂಟ್ ಮಾಡುವ ಟಾಸ್ಕ್ ವೇಳೆ ಶುಭಾ ನಾವು ಮಾಡುತ್ತಿದ್ದ ಪೈಂಟ್ ಬಿಟ್ಟು ಬೇರೆ ಏನೊ ಮಾಡುತ್ತಾ ನಮ್ಮ ಸ್ಪರ್ಧೆಗೆ ಅಡ್ಡಿಮಾಡಿದ್ದಾರೆ. ಇದು ಫ್ರೆಂಡ್‍ಶಿಪ್ ತರ ಕಾಣಿಸುತ್ತಿಲ್ಲ ಇದರಿಂದ ತುಂಬಾ ಕಿರಿಕಿರಿ ಆಗುತ್ತದೆ. ನಮ್ಮ ಎದುರಾಳಿ ತಂಡ ಆರಾಮವಾಗಿ ಗೆಲ್ಲುತ್ತಿದೆ. ನಾವು ಸೋಲುತ್ತಿದ್ದೇವೆ. ನಮ್ಮ ತಂಡದಿಂದಾಗಿ ಪೈಂಟ್ ಹೊಡೆಯುವ ಟಾಸ್ಕ್‍ನಲ್ಲಿ ಎದುರಾಳಿ ತಂಡ ಗೆದ್ದಿದೆ. ಶುಭಾ ಮಾಡಿದಂತಹ ಕೆಲಸದಿಂದಾಗಿ ನಮ್ಮ ತಂಡ ಗೆದ್ದಿದೆ ಎಂದು ವೈಷ್ಣವಿ ಧನ್ಯವಾದ ಹೇಳಿದ್ದರು ಇದನ್ನೆಲ್ಲ ನೋಡಿ ತುಂಬಾ ಬೇಸರವಾಗುತ್ತಿದೆ ಎಂದು ನಿಧಿ ಶುಭಾ ವಿರುದ್ಧ ರೊಚ್ಚಿಗೆದ್ದಿದ್ದಾರೆ.

  • ಈ ಭೂಮಿ ಆಕಾಶ ಇರುವವರೆಗೆ ಇದು ಸಾಧ್ಯವಿಲ್ಲ ಎಂದ ಮಂಜ

    ಈ ಭೂಮಿ ಆಕಾಶ ಇರುವವರೆಗೆ ಇದು ಸಾಧ್ಯವಿಲ್ಲ ಎಂದ ಮಂಜ

    ದೊಡ್ಮನೆಯಲ್ಲಿ ಒಂದು ಕಡೆ ಟಾಸ್ಕ್ ಭರಾಟೆಯಾದರೆ. ಇನ್ನೊಂದು ಕಡೆ ಸ್ಪರ್ಧಿಗಳ ನಡುವೆ ಜಗಳ, ಮನಸ್ತಾಪ ಜೋರಾಗಿದೆ. ಈ ನಡುವೆ ಬೆಳಗ್ಗೆ ಎದ್ದು ಮಾತಿಗಿಳಿದ ಶುಭಾ ಪೂಂಜಾ ಅವರಿಗೆ ಮಂಜು ಈ ವಿಷಯ ಮಾತ್ರ ಈ ಭೂಮಿ ಆಕಾಶ ಇರುವವರೆಗೆ ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.

    ಬಿಗ್ ಮನೆಯಲ್ಲಿ ಬೆಳಗ್ಗೆ ಎದ್ದು ಮಂಜು, ಶಮಂತ್, ದಿವ್ಯಾ ಉರುಡುಗ ಕಿಚನ್ ನಲ್ಲಿ ಅಡುಗೆ ತಯಾರಿಯಲ್ಲಿ ತೊಡಗಿಕೊಂಡಿದ್ದಾಗ ಬಂದ ಶುಭಾ ಮಾತಿಗಿಳಿದಿದ್ದಾರೆ ಬಳಿಕ ನಾನು ಸ್ನಾನಕ್ಕೆ ಹೋಗುತ್ತೇನೆ ಎಂದು ಹೊರಟಿದ್ದಾರೆ. ಈ ಸಂದರ್ಭ ದಿವ್ಯಾ ಮತ್ತು ಮಂಜು ದಯವಿಟ್ಟು ಹೋಗು ಮೊದಲಿಗೆ ಆ ಕೆಲಸ ಮಾಡು ಎಂದಿದ್ದಾರೆ. ಇದನ್ನು ಕೇಳಿಸಿಕೊಂಡ ಶುಭಾ ಆಯ್ತು ನಾನು ಈ ದಿನ ಪೂರ್ತಿ ನಿಮ್ಮಿಂದ ದೂರ ಇರುತ್ತೇನೆ. ನಿಮ್ಮ ಹತ್ತಿರ ಬರುವುದಿಲ್ಲ ನೀವೇ ಬೋರ್ ಆಯ್ತು ಬಾ ಎಂದು ಕರೆಯಬೇಕು ಎಂದರು.

    ಈ ಮಾತನ್ನು ಕೇಳಿಸಿಕೊಂಡ ಮಂಜು ದಯವಿಟ್ಟು ಇದನ್ನು ಮಾಡು ಪ್ಲೀಸ್. ನೀನು ಜೀವನದಲ್ಲಿ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೀಯ. ನಿನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಬೇಡ ನೀನೊಬ್ಬಳು ಸ್ವಾಭಿಮಾನಿ ಎಂಬುದನ್ನು ತೋರಿಸಿಕೊಡು ಎಂದಿದ್ದಾರೆ. ಇದನ್ನೂ ಓದಿ : ಅಂದುಕೊಂಡಂತೆ ಮಾಡಿದ ದಿವ್ಯಾ – ಕ್ಯಾಪ್ಟನ್ ಆಗಿ ಹೊಸ ದಾಖಲೆ

    ನೀನು ಮತ್ತು ದಿವ್ಯಾ ಇಬ್ಬರೂ ಕೂಡ ನಮಗೆ ಈ ರೀತಿ ಇರಲು ಸಾಧ್ಯವಿಲ್ಲ ದಯಾವಿಟ್ಟು ಮಾತನಾಡು ವಾಪಸ್ ಬಾ. ನಾವಿಬ್ಬರು ನಿನ್ನೊಂದಿಗೆ ಮಾತನಾಡದೆ ಇರಲಾಗದೆ ಸಾಯುತ್ತಿದ್ದೇವೆ. ನಮ್ಮ ಲೈಫ್‍ನಲ್ಲಿ ಈ ರೀತಿ ಇರಲು ಸಾಧ್ಯವಿಲ್ಲ ಎಂದು ನನ್ನ ಬಳಿ ಹೇಳಬೇಕು ಅಲ್ಲಿವರೆಗೆ ನಾನು ಬರಲ್ಲ ಈ ರೀತಿ ಮಾತನಾಡದೆ ಇರುತ್ತೇನೆ ಎಂದು ಶುಭಾ ಹೇಳಿದ್ದಾರೆ.

    ಈ ಭೂಮಿ ಆಕಾಶ ಇರುವವರೆಗೆ ನೀನು ನಮ್ಮೊಂದಿಗೆ ಮಾತನಾಡದೆ ಇರಲು ಸಾಧ್ಯವಿಲ್ಲ. ನಿನ್ನಿಂದ ಮಾತನಾಡದೆ ಇರಲು ಖಂಡಿತ ಆಗುವುದಿಲ್ಲ ಎಂದು ಮತ್ತೆ ಮಂಜು ಶುಭಾ ಗೆ ಟಾಂಗ್ ನೀಡಿದ್ದಾರೆ. ಹಾಗೆ ದಿವ್ಯಾ ಕೂಡ ನೀನು ದಿನ ಪೂರ್ತಿ ಬಿಡು ತಿಂಡಿ ತಿನ್ನುವ ವರೆಗೆ ನಮ್ಮೊಂದಿಗೆ ಮಾತನಾಡದೆ ಇರು ಎಂದು ಹೇಳಿದ್ದಾರೆ.

  • ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ

    ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ

    ದೊಡ್ಮನೆಯಲ್ಲಿ ಮತ್ತೆ ಮಾತಿನ ಕಲಹ ಪ್ರಾರಂಭವಾಗಿದೆ. ಪರಸ್ಪರ ಎದುರಾಳಿಗಳಾಗಿ ಟಾಸ್ಕ್ ಗಳಲ್ಲಿ ಆಡುತ್ತಿರುವ ಅರವಿಂದ್ ಮತ್ತು ನಿಧಿ ಸುಬ್ಬಯ್ಯ ಒಬ್ಬರಿಗೊಬ್ಬರು ಮಾತನಾಡದೆ ಇರುವಷ್ಟರ ಮಟ್ಟಿಗೆ ಜಗಳವಾಡಿಕೊಂಡು ಮನೆಯಲ್ಲಿ ಕುತೂಹಲ ಮೂಡಿಸಿದ್ದಾರೆ.

    ಅರವಿಂದ್ ಮತ್ತು ನಿಧಿ ಜಗಳದ ಬಳಿಕ ಅರವಿಂದ್ ಬಳಿ ಬಂದ ಶುಭಾ ಪೂಂಜಾ ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಈ ವೇಳೆ ಅರವಿಂದ್, ನನಗೆ ನಿಧಿ ಯಾರು ಅಂತಾನೆ ಗೊತ್ತಿರಲಿಲ್ಲಾ ಬಿಗ್‍ಬಾಸ್ ಮನೆಗೆ ಬಂದ ನಂತರ ಗೊತ್ತಾಗಿದ್ದು, ನಾನು ಅವಳ ಬಗ್ಗೆ ಕೆಟ್ಟದಾಗಿ ಏನು ಮಾತನಾಡಿಲ್ಲ ಎಂದಿದ್ದಾರೆ. ಇದಕ್ಕೆ ಶುಭಾ ನನಗೆ ನೀವಿಬ್ಬರು ಚೆನ್ನಾಗಿ ಗೊತ್ತು ನೀವಿಬ್ಬರು ಕೂಡ ನನ್ನ ಉತ್ತಮವಾದ ಸ್ನೇಹಿತರು. ಇದೀಗ ನೀವು ಹೀಗೆ ಜಗಳ ಮಾಡಿಕೊಂಡರೆ ನಾನು ಏನು ಮಾಡೋದು. ನನಗೆ ಇಲ್ಲಿ ಇರುವವರೆಲ್ಲಾ ಸ್ನೇಹಿತರೆ. ನಾನೀಗ ಯಾರ ಪರ ನಿಲ್ಲುವುದು ಎಂದು ಅರವಿಂದ್‍ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದಿವ್ಯಾ ಸುರೇಶ್‍ಗೆ ಬುದ್ಧಿವಾದ ಹೇಳಿದ ಮಂಜು

    ನಾನು ಮತ್ತು ಮಂಜು ಮಾತನಾಡುತ್ತಿರುವಾಗ ಮಧ್ಯೆ ಮಾತನಾಡಿದ್ದಕ್ಕೆ ನಾನು ಮುಚ್ಚು ಎಂದಿದ್ದೆ ಅದರಲ್ಲಿ ಏನು ತಪ್ಪು ಎಂದು ಅರವಿಂದ್ ಶುಭಾಗೆ ಮರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶುಭಾ ನೀನು ಎಲ್ಲರ ಮುಂದೆ ಆ ರೀತಿ ಹೆಳಿದರೆ ಅವಳಿಗೂ ನೋವಾಗಲ್ವ ಎಂದಿದ್ದಾರೆ. ಬಳಿಕ ಅರವಿಂದ್ ಅವಳು ನನಗೆ ಏನೇನೊ ಹೇಳಿದ್ದಾಳೆ ನನಗೆ ಹೇಗೆ ಅನಿಸಬೇಕು. ನಾನು ಉದ್ದೇಶಪೂರ್ವಕವಾಗಿ ಕಟ್ಟ ಪದ ಬಳಸಿಲ್ಲ. ಅವಳು ದೊಡ್ಡ ಫಿಗರ್ ಆದರೆ ನಾನು ಕೂಡ ಫಿಗರ್. ನನಗೆ ಇಲ್ಲಿ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ಈ ಬಗ್ಗೆ ನಾನು ಇನ್ನೂ ಅವಳೊಂದಿಗೆ ಏನು ಮಾತನಾಡೊದಕ್ಕೆ ಹೋಗುವುದಿಲ್ಲ ಎಂದಿದ್ದಾರೆ.

    ಅರವಿಂದ್ ಮತ್ತು ನಿಧಿ ಜಗಳದ ಮಧ್ಯೆ ಇದೀಗ ಶುಭಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದೆ ಅರವಿಂದ್ ಮತ್ತು ನಿಧಿ ನಡುವೆ ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಸರಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.