Tag: ಶುಭಾ ಪುಂಜಾ

  • ವಿಚಿತ್ರ ಕಥಾಹಂದರದ ಜೊತೆ ಬೆಚ್ಚಿ ಬೀಳಿಸಲು ಬರ್ತಿದ್ದಾಳೆ ಅಂಬುಜ : ನಿರ್ದೇಶಕ ಶ್ರೀನಿ

    ವಿಚಿತ್ರ ಕಥಾಹಂದರದ ಜೊತೆ ಬೆಚ್ಚಿ ಬೀಳಿಸಲು ಬರ್ತಿದ್ದಾಳೆ ಅಂಬುಜ : ನಿರ್ದೇಶಕ ಶ್ರೀನಿ

    ನೀವೆಂದೂ ಕಂಡು ಕೇಳರಿಯದ ವಿಚಿತ್ರ ಕಥಾಹಂದರದ ಜೊತೆ ನಿಮ್ಮನ್ನೆಲ್ಲಾ ಬೆಚ್ಚಿ ಬೀಳಿಸಲು ಬರ್ತಿದ್ದಾಳೆ ಅಂಬುಜ, ಶ್ರೀನಿ ಹನುಮಂತರಾಜು ಹೊಸ ಸಾಹಸ, ಚಿತ್ರ ಪ್ರೇಮಿಗಳನ್ನು ಬೆರಗುಗೊಳಿಸಲಿದೆ ಎತ್ತಿನ ಭುಜ!

    ಕನ್ನಡ ಚಿತ್ರರಂಗದಲ್ಲಿ ಕ್ರೈಮ್ ಸ್ಟೋರಿ ಕುರಿತಾದ ನೂರೆಂಟು ಸಿನಿಮಾಗಳು ಬಂದಿವೆ. ಇದೀಗ ಅನ್‍ಟೋಲ್ಡ್ ಕ್ರೈಮ್ ಸ್ಟೋರಿ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಅಂಬುಜ (Ambuja) ರೆಡಿಯಾಗಿದ್ದಾಳೆ. ನೈಜ ಘಟನೆಯನ್ನ ಆಧಾರವಾಗಿಟ್ಟುಕೊಂಡು ನಿರ್ದೇಶಕ ಶ್ರೀನಿ ಹನುಮಂತರಾಜು ಅಂಬುಜ ಸಿನಿಮಾವನ್ನ ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲ ನೋಟದಲ್ಲೇ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿ,  ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಭರವಸೆ ಹುಟ್ಟಿಸಿರುವ ಅಂಬುಜ, ಅಂಬಾರಿ ಮೇಲೆ ಕೂತು ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೊರಡುವ ಸಮಯ ಸನ್ನಿಹಿತವಾಗಿದೆ. ಇದೇ ಹೊತ್ತಿಗೆ ಎತ್ತಿನ ಭುಜದ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ನಿರ್ದೇಶಕ ಶ್ರೀನಿ (Srini Hanumantharaju) ಹಲವು ನಿಗೂಢಗಳನ್ನು ಹೊರಹಾಕಿ ಕುತೂಹಲ ಕೆರಳಿಸಿದ್ದಾರೆ.

    ಎತ್ತಿನ ಭುಜ ಚಿಕ್ಕಮಂಗಳೂರಿನ ಬಳಿಯಿರುವ ಅತೀ ಎತ್ತರದ ಬೆಟ್ಟ. ಈ ಬೆಟ್ಟದ ಸುತ್ತಮುತ್ತ ಕೆಲವು ಸಿನಿಮಾ ಮಂದಿ ಶೂಟಿಂಗ್ ಮಾಡಿದ್ದಾರೆ. ಆದರೆ, ಬರೋಬ್ಬರಿ ಮೂರು ಕಿಲೋಮೀಟರ್ ಗಳಷ್ಟು ಎತ್ತರವಿರುವ ಎತ್ತಿನ ಭುಜ ಬೆಟ್ಟವನ್ನೇರುವ ಸಾಹಸವನ್ನು ಯಾರೊಬ್ಬರು ಮಾಡಿರಲಿಲ್ಲ. ಇದೇ ಮೊದಲ ಭಾರಿಗೆ ಅಂಬುಜ ಸಿನಿಮಾ ತಂಡ ಎತ್ತಿನ ಭುಜದ ತುತ್ತ ತುದಿಯನ್ನೇರಿ ಹಾಡೊಂದನ್ನು ಚಿತ್ರೀಕರಿಸಿದೆ. ಸ್ಯಾಂಡಲ್‍ವುಡ್‍ನ ಸಪೌಷ್ಠಿಕ ಸುಂದರಿ ಶುಭಪುಂಜಾ ಹಾಗೂ ದೀಪಕ್ ಸುಬ್ರಮಣ್ಯ ಕಾಂಬಿನೇಷನ್‍ನಲ್ಲಿ ಈ ಹಾಡು ಸುಂದರವಾಗಿ ಮೂಡಿಬಂದಿದೆ.

    ಹೀಗೆ ಎತ್ತಿನ ಭುಜದ ಬೆಟ್ಟದಲ್ಲಿ ಶೂಟಿಂಗ್ ಮಾಡಿ ಹೊಸದೊಂದು ದಾಖಲೆ ಬರೆದ ಚಿತ್ರತಂಡ, `ಮಗು ತಾಯಿಗೆ ಲಾಲಿ ಹಾಡುವ’ ಹಾಡೊಂದನ್ನು ರಚನೆ ಮಾಡುವುದರ ಮೂಲಕ ಗಂಧದಗುಡಿಯಲ್ಲಿ ಇತಿಹಾಸ ನಿರ್ಮಿಸಿದೆ. ಚಿತ್ರದ ನಿರ್ಮಾಪಕರಾದ ಕಾಶಿನಾಥ್ ಅವ್ರು ಸಾಹಿತ್ಯ ಬರೆದಿರುವ, ಪ್ರಸನ್ನ ಕುಮಾರ್ ಸಂಗೀತ ಸಂಯೋಜಿಸಿರುವ ಈ ಹಾಡು, ಈಗಾಗಲೇ ಯೂಟ್ಯೂಬ್‍ನಲ್ಲಿ ರಿಲೀಸ್ ಆಗಿದ್ದು, ಕನ್ನಡ ಕಲಾಭಿಮಾನಿಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡಿದೆ. ತಾಯಿ ಪಾತ್ರದಲ್ಲಿ ಅಮೃತ ವರ್ಷಿಣಿ ಖ್ಯಾತಿಯ ರಜಿನಿ ಕಾಣಿಸಿಕೊಂಡಿದ್ದು, ಮಗಳ ಪಾತ್ರದಲ್ಲಿ ಬೇಬಿ ಆಕಾಂಕ್ಷ ಮಿಂಚಿದ್ದಾಳೆ. ಇಬ್ಬರು ಲಂಬಾಣಿ ವೇಷಭೂಷಣ ತೊಟ್ಟು ಲಾಲಿ ಹಾಡಿಗೆ ಮೆರಗು ತುಂಬಿದ್ದಾರೆ.

    ಅಂಬುಜ ಒಂದು ಮಹಿಳಾ ಪ್ರಧಾನ ಚಿತ್ರ. ಇಲ್ಲಿ ಅಮೃತ ವರ್ಷಿಣಿ ಖ್ಯಾತಿಯ ರಜಿನಿ (Rajini)ಹಾಗೂ ಶುಭಾ ಪುಂಜಾ (Shubha Punja) ಇಬ್ಬರು ಮುಖ್ಯಭೂಮಿಕೆಯಲ್ಲಿದ್ದಾರೆ. ಕ್ರೈಮ್ ರಿಪೋರ್ಟರ್ ಪಾತ್ರದಲ್ಲಿ ಶುಭ ಪುಂಜಾ ಕಾಣಸಿಗ್ತಾರೆ. ಪದ್ಮಜ ರಾವ್, ದೀಪಕ್ ಸುಬ್ರಮಣ್ಯ, ಗೋವಿಂದೇಗೌಡ, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್,  ಬೇಬಿ ಆಕಾಂಕ್ಷ, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಈ ಹಿಂದೆ ನಿರ್ದೇಶಕ ಶ್ರೀನಿಯವರು ‘ಕೆಲವು ದಿನಗಳ ನಂತರ’ ಹೆಸ್ರಲ್ಲೊಂದು ಸಿನಿಮಾ ಮಾಡಿದ್ದರು. ಹಾರರ್ ಕಥೆ ಮೂಲಕ ಕಣಕ್ಕಿಳಿದಿದ್ದ ಇವ್ರು ಪ್ರೇಕ್ಷಕ ಮಹಾಷಯರನ್ನ ಸೀಟಿನ ತುದಿಗೆ ತಂದು ಕೂರಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಅಂಬುಜ ಚಿತ್ರದ ಮೂಲಕ ಕಂಬ್ಯಾಕ್ ಆಗಿದ್ದಾರೆ. ಮರ್ಡರ್ ಮಿಸ್ಟ್ರಿ, ಹಾರರ್, ಥ್ರಿಲ್ಲರ್ ಎಲಿಮೆಂಟ್ಸ್ ಒಳಗೊಂಡಿರುವ ಅಂಬುಜ ಚಿತ್ರವನ್ನ ಪ್ರೇಕ್ಷಕರ ಮಡಿಲಿಗೆ ಹಾಕೋದಕ್ಕೆ ಹೊರಟಿದ್ದಾರೆ. ಈ ಕುರಿತು ಮಾತನಾಡಿದ ಡೈರೆಕ್ಟರ್ ಶ್ರೀನಿಯವರು, ಹಾರರ್ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ಕ್ಯಾಮರಾ ಸಡನ್ನಾಗಿ ಆಫ್ ಆಗ್ತಿತ್ತು, ಸಿನಿಮಾ ಟೀಮ್‍ನ ಸದಸ್ಯರಿಗೆ ಆರೋಗ್ಯ ಹದಗೆಡುತ್ತಿತ್ತು ಅಂತೇಳಿ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಕಾರಣ ನೆಗಟೀವ್ ಎನರ್ಜಿನಾ ಅನ್ನೋದು ಪ್ರಶ್ನೆ.

    ಅಂದ್ಹಾಗೇ, ಬೆಂಗಳೂರು, ಚಿಕ್ಕಮಂಗಳೂರು, ಗದಗದಲ್ಲಿ ಅಂಬುಜ ಸಿನಿಮಾ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಒದಗಿಸುವುದರ ಜೊತೆಗೆ ನಿರ್ಮಾಣದ ಜವಬ್ದಾರಿ ಹೊತ್ತ ಕಾಶಿನಾಥ್ ಡಿ ಮಡಿವಾಳರ್ (Kashinath Madiwalar) ಅವರು ಎಸ್.ಕೆ.ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಂಬುಜ ಚಿತ್ರವನ್ನ ತೆರೆಗೆ ತರುತ್ತಿದ್ದಾರೆ. ಲೋಕೇಶ್ ಭೈರವ, ಶಿವಪ್ರಕಾಶ್. ಎನ್ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಂಡಿದ್ದು ವಿಜಯ್ ಎಂ ಕುಮಾರ್ ಸಂಕಲನ, ಮುರುಳೀಧರ್ ಎಂ. ಛಾಯಾಗ್ರಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ತ್ಯಾಗರಾಜ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ. ಆಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ಲೈಟಿಂಗ್ ಅಂಡ್ ಕಲರ್ ಗ್ರೇಡಿಂಗ್‍ನಲ್ಲಿ ಹೊಸತನ ತೋರಿಸಿದ್ದಾರೆ.  ಜುಲೈ 21ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು, ಮಾರ್ಸ್  ಸುರೇಶ್ ವಿತರಣೆ ಜವವ್ದಾರಿ ಹೊತ್ತಿದ್ದಾರೆ. ಎನಿವೇ ನಿರ್ದೇಶಕರ ಡೆಬ್ಯೂ ಚಿತ್ರ ಕೆಲವು ದಿನಗಳ ನಂತರ ಕಮಾಯಿ ಮಾಡಿದಂತೆ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗೆ ಡಬ್ ಆದಂತೆ ಈ ಸಿನಿಮಾವೂ ಪರಭಾಷೆಗೆ ಹೋಗಲಿ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

    ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿ ನಿಧಿ ಸುಬ್ಬಯ್ಯ ಹಿಮಾಚಲ ಪ್ರದೇಶಕ್ಕೆ ಹಾರಿದ್ದು, ಬೆಂಗಳೂರಿಗೆ ಬಂದು ಮಂಜು ಪಾವಗಡ ಅವರನ್ನು  ಭೇಟಿಯಾಗಿದ್ದಾರೆ.

    nidhi

    ಬಿಗ್‍ಬಾಸ್ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಿಧಿ ತಮ್ಮ ದಿನನಿತ್ಯದ ಅಪ್ಡೇಟ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇಂದು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ನಾನು ಮತ್ತೆ ಬೆಂಗಳೂರಿಗೆ ಬಿಗ್‍ಬಾಸ್ ವಿನ್ನರ್ ಮಂಜು ಪಾವಗಡ ಜೊತೆ ಬಂದಿದ್ದು, ನಮ್ಮನ್ನು ಬಿಟ್ಟ ಶುಭಾಗೆ ಧನ್ಯವಾದ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಶುಭಾ ಇದಕ್ಕೆ ಪ್ರತಿಕ್ರಿಯಿಸಿದ್ದು, ಮುಂದಿನ ಬಾರಿ ಬಿಡುವುದು ಮಾತ್ರವಲ್ಲ, ಬೇಗ ಸಿಗೋಣ ನಾನು ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ:  ಫರಾ ಖಾನ್‍ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ

     

    View this post on Instagram

     

    A post shared by Nidhi Subbaiah (@nidhisubbaiah)

    ಬಿಗ್‍ಬಾಸ್ ನಂತರ ನಿಧಿ ಸುಮಾರು 22 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದು, ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದನ್ನು ನೋಡಿದ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ: 22 ದಿನ ಹಿಮಾಚಲ ಪ್ರದೇಶದಲ್ಲಿ ನಿಧಿ ಸುಬ್ಬಯ್ಯ ಮಾಡಿದ್ದೇನು?

    nidhi

    ಮದುವೆಯ ನಂತರ ನಿಧಿ ಸಿನಿಮಾಗಳಿಗೆ ಬ್ರೇಕ್ ತೆಗೆದುಕೊಂಡಿದ್ದರು. ಬಿಗ್‍ಬಾಸ್ ನಂತರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಯಾವ ರೀತಿಯ ಪಾತ್ರಗಳನ್ನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.

  • ಗೇಮ್ ಓವರ್ ಎನ್ನುತ್ತಾ ಆಟ ಮುಗಿಸಿದ ಬಿಗ್‍ಬಾಸ್

    ಗೇಮ್ ಓವರ್ ಎನ್ನುತ್ತಾ ಆಟ ಮುಗಿಸಿದ ಬಿಗ್‍ಬಾಸ್

    ಕೊರೊನ ಇರುವ ಕಾರಣದಿಂದಾಗಿ ಶೋ ಎಂಡ್ ಮಾಡುತ್ತಿದ್ದೇವೆ ಎಂದು ಹೇಳಿರುವುದಕ್ಕೆ ಬಿಗ್‍ಬಾಸ್ ಸ್ಪರ್ಧಿಗಳಿಗೆ ಬೇಸರವಾಗಿದೆ. ಕೊರೊನಾ ಇರುವ ಕಾರಣದಿಂದ ನಮ್ಮ ಪ್ಯಾಮಿಲಿ ಹೇಗೆ ಇದ್ದಾರೆ ಈ ಸುಂದರ ಜರ್ನಿ ಹೀಗೆ ಎಂಡ್ ಆಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.

    ಎಲ್ಲಾ ಸ್ಪರ್ಧಿಗಳು ಒಂದೊಂದು ಕನಸನ್ನು ಕಟ್ಟಿಕೊಂಡು ಬಂದಿದ್ದರು. ಅದೆಲ್ಲವೂ ಅರ್ಧಕ್ಕೆ ನಿಂತಿದೆ. ಹೀಗಾಗಿ ಬಿಗ್‍ಬಾಸ್ ಸ್ಪರ್ಧಿಗಳು ಅವರ ಜರ್ನಿಯನ್ನು ಅರ್ಧಕ್ಕೆ ಮುಗಿಸಿದ್ದಾರೆ. ಬಿಗ್‍ಬಾಸ್ ನಮ್ಮ ಜರ್ನಿ ಮುಂದುವರಿಯುತ್ತಲೇ ಇರುತ್ತದೆ. ಅಪೂರ್ಣವಾದ ನಮ್ಮ ಜರ್ನಿ ಪರಿಪೂರ್ಣವಾಗಿಲ್ಲ ಆದರೆ ಬೇರೆ ಎಲ್ಲಾ ಸೀಜನ್‍ಗಳ ಜರ್ನಿ ಮುಗಿದಿರಬಹುದು ಆದರೆ ನಮ್ಮ ಬಿಗ್‍ಬಾಸ್ ಪ್ರಯಾಣ ಮುಂದುವರೆಯುತ್ತಲೇ ಇರುತ್ತದೆ ಎಂದು ಸ್ಪರ್ಧಿಗಳು ಹೇಳಿದ್ದಾರೆ.

    ಇಲ್ಲಿಂದ ಜೀವನ ಕಟ್ಟಿಕೊಳ್ಳೊಣ ಎಂದು ಬಂದಿದ್ದೆ. ಬೇರೆಯವರು ಹೇಗೊ ನನಗೆ ಗೊತ್ತಿಲ್ಲ. ಭಗವಂತ ನಮಗೆ ಇಟ್ಟನಲ್ಲ… ಇಂತಹ ಜಾಗಕ್ಕೂ ಬಂದರೂ ಬಿಡಲಿಲ್ಲ ಅಲ್ಲವಾ. ಇದಕ್ಕಿಂತಲೂ ಚೆನ್ನಾಗಿರುವ ವೇದಿಕೆ ನನಗೆ ಮುಂದೆ ಸಿಗುತ್ತದೆ ಎಂದು ನಂಬಿಕೆ ಮೇಲೆ ಹೋಗೊಣ ಎಂದು ಹೇಳುತ್ತಾ ಮಂಜು ಪ್ರಿಯಾಂಕ ಬಳಿ ಹೇಳಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ಏನೆಲ್ಲಾ ಕನಸು ಕಟ್ಟಿಕೊಂಡಿದ್ದೆ. ನನಗೆ ಮುಂದೆ ಏನು ಅಂತಾನೆ ಗೊತ್ತೇ ಆಗುತ್ತಿಲ್ಲ. ನಮ್ಮ ಮನೆಯವರನ್ನು ಎಲ್ಲಾ ಇಲ್ಲಿಗೆ ಕರೆಸಿದ್ದೇನು. ಅವರೆಲ್ಲ ಹೇಗೆ ಇದ್ದಾರೆ ಎನ್ನುವುದೆ ನನಗೆ ಅರ್ಥವಾಗುತ್ತಿಲ್ಲ ಎಂದು ದಿವ್ಯಾ ಬಳಿ ಹೇಳಿಕೊಂಡಿದ್ದಾರೆ. ಆಗ ದಿವ್ಯಾ ನಾನು ಮನೆಗೆ ಇವಾಗಲೇಹೋಗಬೇಕು ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಆಗ ಮಂಜು ನಾವೆಲ್ಲ ಹೋಗೊದೆ ಈವಾಗ ಎಂದು ಹೇಳುತ್ತಾ ಸಮಾಧಾನ ಮಾಡಿದ್ದಾರೆ.

    ರಘು ಮನೆಯವರಿಗೆಲ್ಲಾ ನೆನಪಿಗಾಗಿ ಅವರ ಬಳಿ ಇರುವ ಕೆಲವು ಬಟ್ಟೆಗಳನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ಕೆಲವರು ನಾವು ಆಚೆ ಸಿಗುವ ಎಂದು ಮಾತನಾಡಿಕೊಂಡಿದ್ದಾರೆ. ಬಿಗ್‍ಬಾಸ್ ಮನೆಯ ಸುದಂರದ ಜರ್ನಿಯಿಂದ ನನಗೆ ಆಚೆ ಹೋಗಲು ಇಷ್ಟ ಇಲ್ಲ.. ಬಿಗ್‍ಬಾಸ್ ಮನೆಯಲ್ಲಿರುವ ರೇಷನ್ ಅಷ್ಟರಲ್ಲಿಯೇ ನಾವು ಇರುತ್ತೇವೆ ಎಂದು ಶುಭಾ ಹೇಳಿದ್ದಾರೆ. ನಿಧಿ ಯಾರು ಯಾವ ದಿನ ಸಿಗಬೇಕು ಎನ್ನುವುದನ್ನು ಹೇಳಿದ್ದಾರೆ. ಸ್ಪರ್ಧಿಗಳಿಗೆ ಮನೆಯನ್ನು ಬಿಟ್ಟುಹೋಗಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆಯಾಗಿ ಬಿಗ್‍ಬಾಸ್ ಮನೆಯಿಂದ ಹೋಗುತ್ತಿರುವುದು ಸ್ಪರ್ಧಿಗಳಿಗೆ ಸಖತ್ ಬೇಸರವನ್ನುಂಟು ಮಾಡಿದೆ. ಈ ಸುದ್ದಿ ಕನಸು ಎಂಬುವಂತೆ ಸ್ಪರ್ಧಿಗಳಿಗಿದೆ. ಗೇಮ್ ಓವರ್ ಎನ್ನುತ್ತಾ ತಮ್ಮ ಆಟವನ್ನು ಮುಗಿಸಿದ್ದಾರೆ.

     

  • ಎಲ್ಲರೂ ಸಾಲಾಗಿ ಮಲಗಿಕೊಂಡು ಕನಸು ಕಂಡ ಮಹಿಳಾ ಮಣಿಗಳು

    ಎಲ್ಲರೂ ಸಾಲಾಗಿ ಮಲಗಿಕೊಂಡು ಕನಸು ಕಂಡ ಮಹಿಳಾ ಮಣಿಗಳು

    ಬಿಗ್‍ಬಾಸ್‍ಮನೆಯ ಸ್ಪರ್ಧಿಗಳಿಗೆ ಇತ್ತೀಚೆಗೆ ನಿದ್ದೆ ಹೆಚ್ಚಾಗುತ್ತಿದೆ. ಬಿಗ್‍ಬಾಸ್ ಮನೆಯ ರೂಲ್ಸ್ ಪ್ರಕಾರ ಹಗಲು ಮಲಗುವಂತಿಲ್ಲ. ಬಿಗ್‍ಬಾಸ್ ಮನೆಯ ಲೈಟ್ ಆಫ್ ಆದ್ಮೇಲೆನೇ ನಿದ್ದೆ ಮಾಡಬೇಕು. ಹಾಗೇ ಲೈಟ್ ಆನ್ ಆಗುತ್ತಿದ್ದಂತೆ ಸ್ಪರ್ಧಿಗಳು ಎದ್ದು ಅವರ ಪ್ರತಿನಿತ್ಯದ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಆದರೆ ಸ್ಪರ್ಧಿಗಳು ಮಾತ್ರ ನಿದ್ದೆ ಮಾಡಲು ಪ್ರಾರಂಭಿಸಿದ್ದಾರೆ. ಅದರಲ್ಲಿಯೂ ಮಹಿಳಾ ಸ್ಪರ್ಧಿಗಳು ಅತಿ ಹೆಚ್ಚಾಗಿ ನಿದ್ದೆ ಮಾಡುತ್ತಿದ್ದಾರೆ.

    ಇಂದು ಬೆಳಗ್ಗೆ ಬಿಗ್‍ಬಾಸ್ ವೇಕ್ ಅಪ್ ಸಾಂಗ್ ಹಾಕಿದರೂ ಕೂಡ ಶುಭಾ, ನಿಧಿ ಎದ್ದೇಳದೆ ಹಾಗೇ ಮಲಗಿದ್ದರು. ಆಗ ಬಿಗ್‍ಬಾಸ್ ಎದ್ದೇಳು ಮಂಜುನಾಥ ಎದ್ದೇಳು ಎಂದು ಸಾಂಗ್ ಹಾಕಿದ್ದಾರೆ. ಈ ವೇಳೆ ಶುಭಾ, ಬಿಗ್‍ಬಾಸ್ ನಾನು ಎದ್ದೇಳುವುದಿಲ್ಲ. ಗೇಮ್ ಪ್ರಾಪರ್ಟಿ ಆಟದ ನಂತರ ಮುಟ್ಟಿರುವುದಕ್ಕೆ ನೀವು ಟೀ, ಕಾಫಿ ಕೊಡದೆ ಇದ್ದೀರಾ. ನನಗೆ ಟಿ, ಕಾಫಿ ಬೇಕು ಬಿಗ್‍ಬಾಸ್ ಎಂದು ಹಠ ಮಾಡಿದ್ದಾರೆ. ಬಿಗ್‍ಬಾಸ್ ಮಾತ್ರ ಏನು ಮಾತನಾಡದೇ ಸುಮ್ಮನಾಗಿದ್ದಾರೆ.

    ವೈಷ್ಣವಿ ನಿದ್ದೆ ಮಾಡುತ್ತಾ ಜ್ಞಾನ ಮಾಡುತ್ತಾರೆ ಎಂದು ಮನೆಮಂದಿ ತಮಾಷೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅದರಂತೆ ವೈಷ್ಣವಿ ಮತ್ತೆ ಜ್ಞಾನ ಮಾಡುತ್ತೇನೆ ಎಂದು ಕುಳಿತುಕೊಂಡಿದ್ದಾರೆ. ಆಗ ಮಂಜು ಮಾತ್ರ ವೈಷ್ಣವಿಗೆ ಕಣ್ಣು ಬಿಟ್ಟು ಜ್ಞಾನ ಮಾಡು ನೋಡೋಣ, ಕಂಡಿದ್ದೇವೆ ನಿನ್ನ ಜ್ಞಾನವನ್ನು ಎಂದು ಹೇಳುತ್ತಾ ತಮಾಷೆ ಮಾಡಿದ್ದಾರೆ.

    ಇತ್ತ ಬಿಗ್‍ಬಾಸ್ ಮನೆಯಲ್ಲಿ ನಿಧಿ, ಶುಭಾ, ಪ್ರಿಯಾಂಕ, ವೈಷ್ಣವಿ ಮನೆಯ ಹಾಲ್‍ನಲ್ಲಿ ಕುಳಿತು ನಿದ್ದೆಗೆ ಜಾರಿದ್ದಾರೆ. ಇದನ್ನು ಕಂಡ ಮಂಜು ಮತ್ತು ಶಮಂತ್ ನಿದ್ದೆ ಮಾಡುತ್ತಿದ್ದಾರೆ ಬಿಗ್‍ಬಾಸ್ ಈಗ ಹೇಳುತ್ತಾರೆ ಎಂದು ಮಾತನಾಡಿಕೊಳ್ಳುತ್ತಿರುವಾಗ ಬಿಗ್‍ಬಾಸ್ ಮತ್ತೆ ಎದ್ದೇಳು ಮಂಜುನಾಥ ಎದ್ದೇಳು ಎಂದು ಸಾಂಗ್ ಹಾಕಿದ್ದಾರೆ. ಆಗ ನಿದ್ದೆಗೆ ಜಾರಿರುವ ಮಹಿಳಾ ಮಣಿಗಳು ಎದ್ದು ಕುಳಿತಿದ್ದಾರೆ. ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಇತ್ತೀಚೆಗೆ ಅತಿ ಹೆಚ್ಚು ನಿದ್ದೆ ಮಾಡುತ್ತಿರುವ ದೃಶ್ಯಗಳು ಕಾಣುತ್ತಿವೆ.

  • ಮಂಜುಗೆ ಒದಿಬೇಕಿತ್ತು ಅನ್ನಿಸಿತ್ತು: ದಿವ್ಯಾ ಉರುಡುಗ

    ಮಂಜುಗೆ ಒದಿಬೇಕಿತ್ತು ಅನ್ನಿಸಿತ್ತು: ದಿವ್ಯಾ ಉರುಡುಗ

    ಬಿಗ್‍ಬಾಸ್ ಮನೆಯಲ್ಲಿ ಗೊರಕೆ ಹೊಡೆಯುವುದರ ಕುರಿತಾಗಿ ದಿವ್ಯಾ ಉರುಡುಗ ಮತ್ತು ಶುಭಾ ಪೂಂಜಾ ಮಂಜು ಬಳಿ ಹೇಳಿ ತಮಾಷೆ ಮಾಡಿದ್ದಾರೆ. ಏನಪ್ಪಾ ನಿನ್ನ ಮೋಟರ್ ಬೈಕ್ ನಿನ್ನೆ ರಾತ್ರಿ ಸ್ಟಾರ್ಟ್ ಮಾಡಿಬಿಟ್ಟಿದ್ದೆ. ಏನೋ ಕೇಳೊಕೆ ಆಗ್ತಾ ಇರಲಿಲ್ಲ ಎಂದು ಶುಭಾ ಹೇಳುವಾಗ ಮಂಜುಗೆ ಸಖತ್ ನಾಚಿಕೆಯಾಗಿದೆ.

    ಹೌದು ನಾನು ಗೊರಕೆ ಹೊಡೆಯುವುದು ನಿಲ್ಲಿಸಿಬಿಟ್ಟ ಎಂದು ಅಂದುಕೊಳ್ಳವುದರಲ್ಲಿ ಮತ್ತೆ ಹೊರಳಿ ಗೊರಕೆ ಹೊಡೆಯುತ್ತಿದ್ದನು. ಟಾಪ್ ಗೇರ್‍ಗೆ ಹಾಕಿ ನಿನ್ನ ಬೈಕ್ ನಾ ಓಡಿಸ್ತಾ ಇದ್ದೆ ನೀನು. ನಮಗೆ ಯಾರಿಗೂ ನಿದ್ದೆ ಇಲ್ಲಾ. ದಿವ್ಯಾ ನೀನು ನನ್ನ ಪಕ್ಕಾ ಮಲಗಿದರು ನೀನು ನನ್ನ ಪಕ್ಕಾ ಮಲಗಿದ್ದೀಯಾ ಎಂದು ಗೊತ್ತಾಗಿರಲ್ಲಾ.. ಆದರೆ ಮಂಜಾ ಗೊರಕೆ ಹೊಡೆಯುವುದು ಕೇಳಿದರೆ ನನ್ನ ಪಕ್ಕಾನೆ ಮಲಗಿದ್ದಾನೆ ಎಂದು ಅನ್ನಿಸುತ್ತೆ ಎಂದು ಪ್ರಿಯಾಂಕ ಹೇಳುತ್ತಾ ಇದ್ದಳು ಎಂದು ದಿವ್ಯಾ ಹೇಳಿದ್ದಾಳೆ.

    ಹೌದು ನಿನ್ನ ಊಟ, ನಿದ್ದೆ, ಚಿಕನ್ ಎಲ್ಲಾ ಕಂಪರ್ಟ್ ಆಗಿತ್ತು. ಹಾಗಾಗಿ ನನಗೆ ನಿದ್ದೆ ಹಾಯಾಗಿ ಮಾಡಿದ್ದೇನೆ. ಮನಸ್ಸು ತುಂಬಾ ತೃಪ್ತಿಯಿಂದ ಇದ್ದಾಗ ನನಗೆ ಅಂತಹ ನಿದ್ದೆ ಬರುತ್ತದೆ. ಮತ್ತೆ ಅಂತಹ ನಿದ್ದೆ ಬರಲ್ಲಾ ಎಂದು ಮಂಜು ನಗುತ್ತಾ ಹೇಳಿದ್ದಾನೆ.

     ನನಗೆ ನಿದ್ದೆ ಇಲ್ಲಾ ನೀನು ಮಾತ್ರ ಗೇರ್ ಹಾಕಿ ಬೈಕ್ ಹೊಡೆದಿದ್ದೆ ಹೊಡೆದಿದ್ದು ಎಂದು ಶುಭಾ ಹೇಳಿದ್ದಾಳೆ. ಹೌದು ಒಂದು ಒದ್ದು ಬಿಡೋಣ ಅನ್ನಿಸಿತ್ತು ನನಗೆ ಮಂಜಾ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಆಗ ಮಂಜು ಮುಟ್ಟಬೇಕಿತ್ತು ಅಲ್ಲೋಲ ಕಲ್ಲೋಲ ಆಗಿರುತ್ತಾ ಇತ್ತು ಎಂದು ಮಂಜು ತಮಾಷೆಯಾಗಿ ಹೇಳಿದ್ದಾರೆ.

  • ನಂಗೆ ಕಹಿ ಘಟನೆ ಆಗಿಲ್ಲ, ಮೀಟೂ ಬಂದಿರೋದು ಬೇಜಾರಾಗಿದೆ- ನಟಿ ಶುಭಾ ಪುಂಜಾ

    ನಂಗೆ ಕಹಿ ಘಟನೆ ಆಗಿಲ್ಲ, ಮೀಟೂ ಬಂದಿರೋದು ಬೇಜಾರಾಗಿದೆ- ನಟಿ ಶುಭಾ ಪುಂಜಾ

    ಹುಬ್ಬಳ್ಳಿ: ಮೀಟೂ ಬಂದಿರೋದು ನನಗೂ ಒಂದು ಕಡೆ ಬೇಜಾರಾಗಿದೆ ಎಂದು ನಟಿ ಶುಭ ಪೂಂಜಾ ಬೇಸರ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಶುಭಾ ಪುಂಜಾ ಮಾಧ್ಯಮಗಳೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗ ಹೆಣ್ಣು ಮಕ್ಕಳಿಗೆ ಬಹಳ ಗೌರವ ನೀಡುತ್ತೆ. ಈಗ ಮೀಟೂ ಬಂದಿರೋದು ನನಗೆ ಬೇಜಾರಾಗಿದೆ. ಮೀಟೂ ಬಗ್ಗೆ ಇರುವ ಆರೋಪ ಪ್ರತ್ಯಾರೋಪವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಬಗೆಹರಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ನಾನು 10-12 ವರ್ಷಗಳಿಂದ ಇದ್ದೇನೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳ ಪ್ರೀತಿ, ಗೌರವ ನನಗೆ ಸಿಕ್ಕಿದೆ. ಹೀಗಾಗಿ ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಯಾವುದೇ ಕಹಿ ಅನುಭವಗಳು ಆಗಿಲ್ಲ ಎಂದು ತಿಳಿಸಿದರು.

    ಎಲ್ಲಾ ರಂಗಗಳಲ್ಲೂ ಮೀಟೂ ಅಂತಹ ಕಹಿ ಅನುಭವದ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಕಹಿ ಅನುಭವಗಳಿಂದ ನೋವಾಗಿರುವವರು ಧ್ವನಿ ಎತ್ತುತ್ತಿದ್ದಾರೆ. ಸಿನಿ ರಂಗದಲ್ಲಿ ಈ ಪ್ರಕರಣಗಳನ್ನು ನೋಡಿಕೊಳ್ಳಲು ಹಿರಿಯರು ಇದ್ದಾರೆ. ಅವರು ಈ ಪ್ರಕರಣಗಳನ್ನು ಬಗೆಹರಿಸಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸ್ತಾರೆ ಎಂದು ಹೇಳಿದರು.

    ನಟಿ ಸಂಜನಾ ಕ್ಷಮೆ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಶುಭಾ, ಸಂಜನಾ ಕ್ಷಮೆ ಕೇಳಿರೋದು ಅವರ ವೈಯಕ್ತಿಕ ವಿಚಾರ, ಅದರ ಬಗ್ಗೆ ಅವರನ್ನೇ ಕೇಳಬೇಕು. ನಾನು ಬೇರೆಯವರ ವೈಯಕ್ತಿಕ ವಿಚಾರವನ್ನು ಮಾತನಾಡೋದು ತಪ್ಪಾಗುತ್ತದೆ. ಬೇರೆ ಅವರಿಗೆ ಚಿತ್ರರಂಗದಲ್ಲಿ ಕಹಿ ಅನುಭವಗಳು ಆಗಿರಬಹುದು ಅದು ನನಗೆ ಗೊತ್ತಿಲ್ಲ. ಆದ್ರೆ ನನಗೆ ಈ ರೀತಿಯ ಯಾವುದೇ ಅನುಭವ ಆಗಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews