Tag: ಶುಭಾಪೂಂಜಾ

  • ಶುಭಾನನ್ನು ನೋಡಲು ಹಳ್ಳಿಗೆ ಹೋದ ನೀತು

    ಶುಭಾನನ್ನು ನೋಡಲು ಹಳ್ಳಿಗೆ ಹೋದ ನೀತು

    ಬೆಂಗಳೂರು: ಚಂದನವನದ ನಟಿ ಶುಭಾಪೂಂಜಾರನ್ನು ನೋಡಲು ಸ್ನೇಹಿತೆ ನೀತು ಅವರ ಹಳ್ಳಿಗೆ ಹೋಗಿದ್ದಾರೆ.

    ನೀತು ಮತ್ತು ಶುಭಾ ಚಂದನವನದ ನಟಿಯರು. ಇವರಿಬ್ಬರು ಒಳ್ಳೆಯ ಸ್ನೇಹಿತರು. ಇತ್ತೀಚೆಗಷ್ಟೇ ಶುಭಾಪೂಂಜಾ ತಮ್ಮ ಬಹುಕಾಲದ ಗೆಳೆಯ ಸುಮಂತ್ ಜೊತೆ ಊರಿನ ಮಜಲಬೆಟ್ಟುಬೀಡುವಿನಲ್ಲಿರುವ ಮನೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಗೆ ನೀತು ಬಂದಿರಲಿಲ್ಲ. ಹೀಗಾಗಿ ನೀತು ಶುಭಾ ಇರುವ ಅವರ ಅಜ್ಜಿಯ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿದ್ದಾರೆ. ನೀತು ಬಂದ ಕಾರಣ ಶುಭಾ ಫುಲ್ ಖುಷ್ ಆಗಿದ್ದು, ನೀತು ಜೊತೆಗೆ ಸಮಯ ಕಳೆದ ಫೋಟೋಗಳನ್ನು ಇನ್‍ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

    ಫೋಟೋ ಶೇರ್ ಮಾಡಿದ ಶುಭಾ, ಕೊನೆಗೂ ನಮ್ಮ ಮನೆಗೆ ನೀತು ಬಂದಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನೀತು ಸಹ ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ, ವಧುವನ್ನು ಅವಳ ಊರಿನಲ್ಲೇ ಭೇಟಿಯಾದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಶುಭಾ ಮತ್ತು ನೀತು ತೋಟಕ್ಕೆ ಹೋಗಿರುವ ಫೋಟೋವನ್ನು ಇವರು ಶೇರ್ ಮಾಡಿಕೊಂಡಿದ್ದು, ಇಬ್ಬರು ಫುಲ್ ಎಂಜಯ್ ಮೂಡಿನಲ್ಲಿ ಇದ್ದಾರೆ. ಇನ್ನೊಂದು ಫೋಟೋದಲ್ಲಿ ಶುಭಾ, ಪತಿ ಸುಮಂತ್ ಮತ್ತು ಇತರೆ ಸ್ನೇಹಿತರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: 180 ಮಿಲಿಯನ್ ವರ್ಷದ ಹಳೆಯ ‘ಸೀ ಡ್ರ್ಯಾಗನ್’ ಅತೀ ದೊಡ್ಡ ಪಳೆಯುಳಿಕೆ ಪತ್ತೆ

    ಶುಭಾ ತಾನು ಮದುವೆಯಾದ ಪಾರಂಪರಿಕ ಮನೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ಕುರಿತು ಇನ್‍ಸ್ಟಾದಲ್ಲಿ ಅವರು, ನನ್ನ ಮನೆ ಮಜಲಬೆಟ್ಟುಬೀಡು. ನಾನು ಮದುವೆಯಾದ ಮನೆಯನ್ನು ತೋರಿಸುವಂತೆ ಸಾಕಷ್ಟು ಜನ ಕೇಳಿದ್ದರು. ಇದು ನನ್ನ ಅಜ್ಜಿಯ ಮನೆ. ಇದು 800 ವರ್ಷಗಳ ಪರಂಪರೆ ಹೊಂದಿರುವ ಮನೆಯಾಗಿದೆ. ಈ ಮನೆಯಲ್ಲಿಯೇ ನಾನು ಬೆಳೆದಿದ್ದು, ನಾನು ಯಾವಾಗಲೂ ಈ ಮನೆಯಲ್ಲಿಯೇ ಮದುವೆಯಾಗಬೇಕೆಂದು ಅಂದುಕೊಂಡಿದ್ದೆ ಎಂದು ಬರೆದುಕೊಂಡಿದ್ದರು.

  • ಹುಡುಗಿ ಕೈ ಹೇಗೆ ಹಿಡಿಯಬೇಕು..? – ಮಂಜುಗೆ ಶುಭಾ ಟ್ರೈನಿಂಗ್

    ಹುಡುಗಿ ಕೈ ಹೇಗೆ ಹಿಡಿಯಬೇಕು..? – ಮಂಜುಗೆ ಶುಭಾ ಟ್ರೈನಿಂಗ್

    ಬಿಗ್‍ಬಾಸ್ ಮನೆಯಲ್ಲಿ ಮಂಜು ಮದುವೆ ವಿಚಾರವಾಗಿ ಭಾನುವಾರ ಚರ್ಚೆ ನಡೆದಿದೆ. ಈ ವೇಳೆ ಒಂದು ಹುಡುಗಿಯ ಕೈಯನ್ನು ಹೇಗೆ ಮುಟ್ಟಬೇಕು ಎಂದು ಶುಭಾ ಪೂಂಜಾ ಮಂಜುಗೆ ಟ್ರೈನಿಂಗ್ ನೀಡಿರುವುದಾಗಿ ಹೇಳಿದ್ದಾರೆ.

    ಈ ವಿಚಾರವಾಗಿ ಸುದೀಪ್‍ರವರು, ಮ್ಯಾರೇಜ್ ವಿಚಾರವಾಗಿ ಶುಭಾ ಹತ್ತಿರ ನೀವು ಟ್ಯೂಶನ್ ತೆಗೆದುಕೊಳ್ಳುತ್ತಿದ್ರಿ ಎಂದು ಕೇಳುತ್ತಿದ್ದಂತೆಯೇ ಮಂಜು ಹೌದು, ಹುಡುಗಿಯನ್ನು ಹೇಗೆ ಮುಟ್ಟಬೇಕು, ಹೇಗೆ ನಿಭಾಯಿಸಬೇಕು ಎಂದು ಹೇಳಿ ಕೊಡುತ್ತಿದ್ದರು ಎಂದಿದ್ದಾರೆ. ಆಗ ಶುಭಾ, ನಾವು ಅವನ ಪಕ್ಕ ಕುಳಿತುಕೊಂಡಿದ್ದಾಗ, ತುಂಬಾ ಜೋರಾಗಿ ನಟ್ಟಿಗೆ ತೆಗೆಯುತ್ತಾನೆ. ಅವನು ತುಂಬಾ ಒರಟು, ಒಂದು ರೀತಿ ಪ್ರಾಣಿಯಂತೆ ಹುಡುಗಿಯರ ಕೈಯಿಂದ ನಟ್ಟಿಗೆ ತೆಗೆಯುತ್ತಾನೆ. ಹಾಗಾಗಿ ನೀನು ಮದುವೆಯಾದರೆ ಹೇಗೆ ನಿನ್ನ ಪರಿಸ್ಥಿತಿ ಎಂದು ಹೇಳುತ್ತಾ ಸ್ವಲ್ಪ ಸಮಾಧಾನದಿಂದ ಇರು, ಒಂದು ಹುಡುಗಿ ಕೈಯನ್ನು ಸಾಫ್ಟ್ ಆಗಿ ಹಿಡಿದುಕೋ ಎಂದು ಹೇಳಿಕೊಟ್ಟೆ. ಅದು ಅಲ್ಲದೇ ಈ ವರ್ಷ ಮದುವೆಯಾಗುತ್ತಾನೆ ಅಲ್ವಾ ಸರ್ ಎಂದು ಹೇಳುತ್ತಾರೆ.

    ಮಂಜು ನಾನು ಹೇಳಿಕೊಡುತ್ತಿರುವುದನ್ನು ಸರಿಯಾಗಿ ಕಲಿಯುತ್ತಿಲ್ಲ. ಒಂದು ಹುಡುಗಿ ಕೈಯನ್ನು ಹೀಗೆ ಹಿಡಿದುಕೊಳ್ಳಬೇಕು ಎಂದರೆ ಒಳ್ಳೆ ಚಪಾತಿ ರೀತಿ ಕೈ ಇಡುತ್ತಾನೆ ಎನ್ನುತ್ತಾರೆ. ಆಗ ಸುದೀಪ್, ಮಂಜುಗೆ ಅರವಿಂದ್ ಕೈಯನ್ನು ಹುಡುಗಿ ಕೈ ಎಂದು ತಿಳಿದುಕೊಂಡು ಹಿಡಿದುಕೊಳ್ಳುವಂತೆ ಹೇಳುತ್ತಾರೆ. ಈ ವೇಳೆ ಅರವಿಂದ್ ಮಂಜುಗೆ ಕೈ ನೀಡಲು ಆಟ ಆಡಿಸುತ್ತಾರೆ. ನಂತರ ಹೀಗೆ ಹಿಡಿದುಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದಾರೆ ಎಂದು ಮಂಜು ಕೈ ಹಿಡಿದು ತೋರಿಸುತ್ತಾರೆ. ಈ ವೇಳೆ ಸುದೀಪ್‍ರವರು, ಇಷ್ಟು ಕೆಟ್ಟದಾಗಿ ಹೇಳಿಕೊಟ್ರಾ? ಇಷ್ಟು ದಿನ ಡೀಲ್ ಮಾಡಿರುವುದೇ ಚಪಾತಿ ಜೊತೆ, ಯಾರು ಮಂಜು ನನ್ನ ಕೈ ಹಿಡಿದುಕೋ ಎಂದು ಕೈ ನೀಡಿದ್ದಾರೆ. ಈಗ ಅರವಿಂದ್‍ರವರೇ ನಿಮಗೆ ಕೈ ಕೊಡಲಿಲ್ಲ ಎಂದು ಹಾಸ್ಯ ಮಾಡುತ್ತಾರೆ.

    ಜೊತೆಗೆ ಒಂದು ಕ್ಯೂಟ್ ಎಕ್ಸ್‌ಪ್ರೇಶನ್‌ ಕೂಡ ಹೇಳಿಕೊಟ್ಟಿರುವುದಾಗಿ ಹೇಳಿ ಕೊಟ್ಟಿದ್ದೇನೆ. ಆದರೆ ಅದು ಕೂಡ ಅವನಿಗೆ ಬರುವುದಿಲ್ಲ ಎಂದು ಶುಭಾ ಬೈಯ್ಯುತ್ತಾರೆ. ಆಗ ಆ ಎಕ್ಸ್‌ಪ್ರೇಶನ್‌ ತೋರಿಸುವಂತೆ ಸುದೀಪ್ ಮಂಜುಗೆ ಕೇಳಿದಾಗ ತಪ್ಪಾಯಿತು ಬಿಟ್ಟುಬಿಡಿ ಸರ್, ನನಗೆ ಆ ರೀತಿ ಎಕ್ಸ್‌ಪ್ರೇಶನ್‌ ನೀಡಲು ಬರುವುದಿಲ್ಲ. ಕೈ ಕಾಲು ನಡುಗುತ್ತಿದೆ ಎನ್ನುತ್ತಾರೆ. ನಂತರ ವೈಷ್ಣವಿ ಕಡೆಗೆ ಮಂಜು ಪ್ರೀತಿಯ ಎಕ್ಸ್‍ಪ್ರೇಶನ್ ಕೊಡುತ್ತಾರೆ. ಅದಕ್ಕೆ ಅವನು ಸರಿಯಾಗಿ ಎಕ್ಸ್‌ಪ್ರೇಶನ್‌ ತೋರಿಸುವುದಿಲ್ಲ ಎಂದು ಶುಭಾ ಜಸ್ಟ್ ಲೈಟ್ ಆಗಿ, ರೊಮ್ಯಾಂಟಿಕ್ ಆಗಿ, ಹೈಬ್ರೋ ಎತ್ತಿ, ಕ್ಯೂಟ್ ಆಗಿ ನೋಡಬೇಕು ಎಂದು ಎಕ್ಸ್‌ಪ್ರೇಶನ್‌ ತೋರಿಸುತ್ತಾರೆ.

    ಇದನ್ನು ಕಂಡು ಸುದೀಪ್‍ರವರು ಇದನ್ನು ಇನ್ಮುಂದೆ ನಾನು ಟ್ರೈ ಮಾಡುತ್ತೇನೆ, ಎಲ್ಲರೂ ಟ್ರೈ ಮಾಡಿ, ಇಡೀ ವಾರ ಯಾರೇ ಎದುರುಗಡೆ ಬಂದರೆ ಇದೇ ಎಕ್ಸ್‌ಪ್ರೇಶನ್‌ ಕೊಡೋಣಾ ಮುಂದೆ ಏನೇನು ಆಗುತ್ತದೆ. ಯಾರು ಹೊಡಿಸಿಕೊಳ್ಳುತ್ತೀರಿ, ಯಾರು ಬೈಸಿಕೊಳ್ಳುತ್ತೀರಾ ಆಮೇಲೆ ನೋಡೋಣಾ ಎನ್ನುತ್ತಾರೆ. ಈ ವೇಳೆ ಮನೆಮಂದಿಯೆಲ್ಲಾ ಶುಭಾ ಎಕ್ಸ್‌ಪ್ರೇಶನ್‌, ಸುದೀಪ್ ಜೋಕ್ ಕೇಳಿ ಎದ್ದು ಬಿದ್ದು ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇದನ್ನೂ ಓದಿ:ವೈಷ್ಣವಿಯಂತೆ ಇನ್ನೊಬ್ಬರು ಮನೆಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಸುದೀಪ್ 

  • ಗೋಲ್ಡನ್ ಪಾಸ್ ಬಳಸಿ ನಾಮಿನೇಷನ್ ನಿಂದ ಬಚಾವ್ ಆದ ಶುಭಾ

    ಗೋಲ್ಡನ್ ಪಾಸ್ ಬಳಸಿ ನಾಮಿನೇಷನ್ ನಿಂದ ಬಚಾವ್ ಆದ ಶುಭಾ

    ಪ್ರತಿವಾರ ಬಿಗ್‍ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುವಂತೆ ಈ ವಾರವೂ ನಡೆಯಿತು. ಈ ವಾರ ಮನೆಯಿಂದ ಹೊರಹೋಗಬೇಕೆಂದು ದೊಡ್ಮನೆ ಸದಸ್ಯರು ಲ್ಯಾಗ್ ಮಂಜು, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಅರವಿಂದ್ ಹೆಸರನ್ನು ಸೂಚಿಸಿದ್ದರು. ಅಲ್ಲದೇ ಈ ಮೊದಲನೇ ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕ್ ನೇರವಾಗಿ ನಾಮಿನೇಟ್ ಆಗಿದ್ದರು.

    ಈ ಎಲ್ಲದರ ಮಧ್ಯೆ ವಾರದ ಕ್ಯಾಪ್ಟನ್ ಆಗಿದ್ದ ರಘು, ಶುಭಾ ಪೂಂಜಾ ಬಳಿ ಗೋಲ್ಡನ್ ಪಾಸ್ ಇದೆ. ಅದನ್ನು ಅವರು ಬಳಸುತ್ತಾರೋ ಇಲ್ಲವೋ ಎಂಬ ಕೂತೂಹಲ ಇರುವುದರಿಂದ ನಾನು ಅವರನ್ನು ನೇರವಾಗಿ ನಾಮಿನೇಟ್ ಮಾಡುತ್ತೇನೆ ಎಂದು ಸೂಚಿಸಿದ್ದರು.

    ಅದರಂತೆ ಸುದೀಪ್ ಅನುಪಸ್ಥಿತಿಯಲ್ಲಿ ಬಿಗ್‍ಬಾಸ್ ಕಾರ್ಯಕ್ರಮ ಎಂದಿನಂತೆ ನಡೆಯಿತು. ಈ ವೇಳೆ ಬಿಗ್‍ಬಾಸ್ ಶುಭಾ ಗೋಲ್ಡನ್ ಪಾಸ್ ಬಳಸಿ ನಾಮಿನೇಷನ್‍ನಿಂದ ಹೊರಬರಲು ಇಚ್ಛಿಸುತ್ತೀರಾ ಎಂದು ಕೇಳಿದ್ದಾರೆ. ಆಗ ಶುಭಾ, ಹೌದು ನಾನು ಗೋಲ್ಡನ್ ಪಾಸ್ ಬಳಸುತ್ತೀನಿ ಎಂದು ಹೇಳಿ, ಈ ವಾರ ಡೈರೆಕ್ಟ್ ನಾಮಿನೇಷನ್ ನಿಂದ ಹೊರಬಂದಿದ್ದಾರೆ.

    ಬಿಗ್‍ಬಾಸ್ ನೀಡಿದ್ದ ವಿಶೇಷ ಗೋಲ್ಡನ್ ಪಾಸ್ ಬಳಸಿಕೊಳ್ಳದೇ ಕಳೆದ ವಾರ ನಾಮಿನೇಟ್ ಆಗಿ ರಾಜೀವ್ ದೊಡ್ಮನೆಯಿಂದ ಹೊರ ಬಂದಿದ್ದರು. ಈ ವೇಳೆ ರಾಜೀವ್ ಮನೆಯಿಂದ ಹೊರಗೆ ಬರುವ ಮುನ್ನ ನಟಿ ಶುಭಾ ಪೂಂಜಾಗೆ ತಮಗೆ ದೊರೆತಿದ್ದ ಗೋಲ್ಡನ್ ಪಾಸ್ ನೀಡಿದ್ದರು. ಅಲ್ಲದೆ ಮನೆಯ ಎಲ್ಲಾ ಸ್ಪರ್ಧಿಗಳಿಗೂ ಶುಭಾ ಕೈನಲ್ಲಿದ್ದ ಗೋಲ್ಡನ್ ಪಾಸ್ ಮೇಲೆ ಒಂದು ಕಣ್ಣಿತ್ತು. ಆದರೆ ಇದೀಗ ಶುಭಾ ಗೋಲ್ಡನ್ ಪಾಸ್ ಬಳಸುವ ಮೂಲಕ ದೊಡ್ಮನೆಯಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ.

  • ಮೊಗ್ಗಿನ ಮನಸಿನ ಹುಡುಗಿಗೆ ಕೂಡಿ ಬಂತು ಕಂಕಣ ಭಾಗ್ಯ

    ಮೊಗ್ಗಿನ ಮನಸಿನ ಹುಡುಗಿಗೆ ಕೂಡಿ ಬಂತು ಕಂಕಣ ಭಾಗ್ಯ

    ಬೆಂಗಳೂರು: ಮಹಾಮಾರಿ ಕೊರೊನಾ, ಲಾಕ್‍ಡೌನ್ ಇದ್ದರೂ ಸ್ಯಾಂಡಲ್‍ವುಡ್‍ನಲ್ಲಿ ಕೆಲ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಸ್ಯಾಂಡಲ್‍ವುಡ್ ನಟಿ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದನ್ನೂ ಓದಿ: ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಜೊತೆ ವಿನಾಯಕ್ ಜೋಷಿ ಮದ್ವೆ

    ನಟಿ ಶುಭಾ ಪೂಂಜಾ ಸುಮಂತ್ ಎಂಬ ಹುಡುಗನ ಕೈ ಹಿಡಿಯುತ್ತಿದ್ದಾರೆ. ಹುಡುಗ ಸುಮಂತ್ ಮಹಾಬಲ ಮಂಗಳೂರು ಮೂಲದವರಾಗಿದ್ದು, ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿದ್ದಾರೆ. ಅಲ್ಲದೇ ಸುಮಂತ್ ಮಹಾಬಲ ಬಿಸಿನೆಸ್ ಮ್ಯಾನ್ ಕೂಡ ಆಗಿದ್ದಾರೆ.

    ಸುಮಂತ್ ಮತ್ತು ಶುಭಾ ಪೂಂಜಾ ಇಬ್ಬರು ಪರಸ್ಪರ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರ ಬಳಿ ಹೇಳಿಕೊಂಡಿದ್ದಾರೆ. ಎರಡು ಕುಟುಂಬದರು ಇವರ ಪ್ರೀತಿ ಒಪ್ಪಿಗೆ ಸೂಚಿಸಿದ್ದು, ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇದೀಗ ಒಂದು ವರ್ಷದ ಪ್ರೀತಿಗೆ ಅಧಿಕೃತವಾಗಿ ಮದುವೆ ಎಂಬ ಮುದ್ರೆ ಬೀಳುತ್ತಿದೆ.

    ನಟಿ ಶುಭಾ ಪೂಂಜಾ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಕನ್ನಡದಲ್ಲಿ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಸಿದ್ದಾರೆ. ಶುಭಾ ಪೂಂಜಾ ‘ಜಾಕ್ ಪಾಟ್’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದರು.  ಇದೇ ವರ್ಷ ನಟಿ ಶುಭಾ ಪೂಂಜಾ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.