Tag: ಶುಭಾ

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ಶುಭಾ ಪೂಂಜಾ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಶುಭಾ ಪೂಂಜಾ

    ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ, ಬಿಗ್‍ಬಾಸ್ ಖ್ಯಾತಿಯ ಶುಭಾ ಪೂಂಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ. ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಮದುವೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಮಂಗಳೂರಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆದಿದೆ. ಆಪ್ತರು, ಸ್ನೇಹಿತರು  ಮದುವೆಯಲ್ಲಿ ಭಾಗಿಯಾಗಿದ್ದಾರೆ.  ಬಿಗ್‌ಬಾಸ್‌ ವಿನ್ನರ್‌ ಮಂಜು ಪಾವಗಡ, ಮಜಾಭಾರತ ಖ್ಯಾತಿಯ ರಾಘು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಶುಭಾ ಅವರ ಮದುವೆಯ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

    SHUBHA POONJA

    ಹಲವು ವರ್ಷಗಳಿಂದ ಸಮಾಜ ಸೇವಕ ಸುಮಂತ್ ಅವರನ್ನು ಪ್ರೀತಿಸುತ್ತಿದ್ದ ಶುಭಾ, 2021 ಡಿಸೆಂಬರ್ ಅಥವಾ 2022ರ ಜನವರಿ ಮೊದಲ ವಾರದಲ್ಲಿ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು. ಸುಮಂತ್ ಅವರು ಉಡುಪಿಯಲ್ಲಿರುವುದು ಹಾಗೂ ನನ್ನ ಕುಟುಂಬಸ್ಥರು ಮಂಗಳೂರಿನಲ್ಲಿರುವ ಕಾರಣ ನಾವು ಅಲ್ಲಿಯೇ ಮದುವೆ ಆಗುತ್ತೇವೆ ಈ ಹಿಂದೆ ಶುಭಾ ಹೇಳಿದ್ದರು. ಅದರಂತೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಶುಭಾ, ಸುಮಂತ್ ದೀರ್ಘಕಾಲದ ಸ್ನೇಹಿತರು. ಶುಭಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಗೆಳೆಯನ ಜೊತೆಯಿರುವ ಚಿತ್ರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಬಿಗ್‌ಬಾಸ್‌ ಮನೆಯಲ್ಲಿಯೂ ಕೂಡಾ ತಮ್ಮ ಭಾವಿ ಪತಿಯ ಕುರಿತಾಗಿ ಹೇಳಿಕೊಂಡಿದ್ದರು. ಧರ್ಮಸ್ಥಳ, ಶಿರಸಿ  ಸೇರಿಂದತೆ ವಿವಿಧ ಕಡೆ ಪ್ರವಾಸವನ್ನು ಮಾಡಿರುವ  ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಮದುವೆ ವಿಚಾರವಾಗಿ ಹಂಚಿಕೊಂಡಿದ್ದಾರೆ.

    2004ರಲ್ಲಿ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶುಭಾ, ‘ಜಾಕ್​ಪಾಟ್’ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಪ್ರವೇಶಿಸಿದರು. ‘ಚಂಡ’, ‘ಮೊಗ್ಗಿನ ಮನಸು’ ಖ್ಯಾತಿ ತಂದುಕೊಟ್ಟವು. ಮೊಗ್ಗಿನ ಮನಸು ಚಿತ್ರದ ಪಾತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ನಟಿ ಪಡೆದಿದ್ದಾರೆ. ಇತ್ತೀಚೆಗೆ ‘ನರಗುಂದ ಬಂಡಾಯ’ ಚಿತ್ರದಲ್ಲಿ ಶುಭಾ ಬಣ್ಣಹಚ್ಚಿದ್ದರು.

  • ಎಲಿಮಿನೇಷನ್ ನಂತರ ಶುಭಾ ಮನದಾಳದ ಮಾತು

    ಎಲಿಮಿನೇಷನ್ ನಂತರ ಶುಭಾ ಮನದಾಳದ ಮಾತು

    ಬಿಗ್‍ಬಾಸ್ ಮನೆಯಿಂದ ಹೊರಬಂದ ಶುಭಾ ಪೂಂಜಾ ಬಿಗ್‍ಬಾಸ್ ನನ್ನ ಜೀವನದ ಬೆಸ್ಟ್ ಡಿಷಿಶನ್ ಎಂದು ಹೇಳಿದ್ದಾರೆ.

    ಭಾನುವಾರ ವೇದಿಕೆ ಮೇಲೆ ಮಾತನಾಡಿದ ಶುಭಾ, 7 ಸೀಸನ್‍ನಲ್ಲಿಯೂ ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಬರುತ್ತೀರಾ ಎಂದು ಕೇಳಿದ್ದರು. ಆದರೆ 8ನೇ ಸೀಸನ್ ಬಂದಿದ್ದು, ನನಗೆ ಲಾಭ ಎನಿಸಿತು. ನಾನು ಮನೆಯಲ್ಲಿ ಕೂಡ ಬಹಳ ಎಂಟರ್ ಟೈನರ್, ಹಾಗೆಯೇ ಬಿಗ್‍ಬಾಸ್ ಮನೆಯಲ್ಲಿಯೂ ನಾನು ಲೈವ್‍ಲೀ ಯಾಗಿರಬೇಕು, ಎಂಟರ್ ಟೈನರ್ ಆಗಿರಬೇಕು, ಜನರನ್ನು, ಮನೆಯಲ್ಲಿರುವವರು ನಗಿಸಬೇಕು ಅಂದುಕೊಂಡಿದ್ದೆ. ನಾನು ಮನೆಯಲ್ಲಿ ಇರುವ ಕೊನೆಯ ಕ್ಷಣದವರೆಗೂ ಎಂಟರ್ ಟೈನ್ ಮಾಡಬೇಕು ಅಂದುಕೊಂಡಿದ್ದೆ. ಆ ಗುರಿ ತಲುಪಿದ್ದೇನೆ ಅಂದುಕೊಂಡಿದ್ದೇನೆ. ಇನ್ನೂ ಲೈಫ್‍ನಲ್ಲಿ ನಾನು ಬಹಳ ಏರುಪೇರು ನೋಡಿದ್ದರಿಂದ, ಯಾವುದಕ್ಕೂ ತುಂಬಾ ಉದ್ರೇಕಕ್ಕೆ ಒಳಗಾಗದೇ ಇರುವ ಚಿಕ್ಕಜೀವನವನ್ನು ಖುಷಿಯಾಗಿ ನಡೆಸಬೇಕು ಎಂದಿದ್ದಾರೆ.

    ನನಗೆ ಇಷ್ಟ ಆಗುವಂತಹವರನ್ನು ನಾನು ಎಂದೂ ಹೆಸರಿಟ್ಟು ಕರೆಯುವುದಿಲ್ಲ. ಅವರಿಗೆ ಒಂದು ಅಡ್ಡ ಹೆಸರನ್ನು ಇಟ್ಟೆ ಇಡುತ್ತೇನೆ. ಮಂಜುಗೆ ಚಂಪೂ, ರಾಜೀವ್‍ಗೆ ಗುಡ್ಡು, ಡಿಯುಗೆ ಬಿಟ್ಟು ಹೀಗೆ ಅಡ್ಡ ಹೆಸರಿನಲ್ಲಿ ನಾನು ಕರೆಯುವವರು ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.

    ನಂತರ ಬಿಗ್‍ಬಾಸ್ ಮನೆಯಲ್ಲಿ ಜರ್ನಿ ವೀಡಿಯೋ ನೋಡಿ ಭಾವುಕರಾದ ಶುಭಾ, ಬಿಗ್‍ಬಾಸ್ ನನ್ನ ಜೀವನದಲ್ಲಿ ತೆಗೆದುಕೊಂಡು ಬೆಸ್ಟ್ ಡಿಷಿಶನ್. ನಾನು ಬಿಗ್‍ಬಾಸ್ ಮನೆಯಲ್ಲಿ ಬಹಳ ಎಂಜಾಯ್ ಮಾಡಿದ್ದೇನೆ. ಬಿಗ್‍ಬಾಸ್ ನನಗೆ ಮರೆಯಲಾದ ನೆನಪು ಎಂದಿದ್ದಾರೆ. ಜೊತೆಗೆ ಫೈನಲ್‍ನಲ್ಲಿ ಅರವಿಂದ್ ಹಾಗೂ ಮಂಜು ಪ್ರತಿ ಸ್ಪರ್ಧಿಗಳಾಗಿರುತ್ತಾರೆ. ಅದರಲ್ಲಿ ಮಂಜು ವಿನ್ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಿಗ್‍ಬಾಸ್ ನಂತರ ಏನು ಎಂಬ ಸುದೀಪ್ ಪ್ರಶ್ನೆಗೆ, ಶುಭಾ 6 ತಿಂಗಳು ಫಿಯಾನ್ಸೆ ನನಗೆ ಸಪೋರ್ಟ್ ಮಾಡಿ ಬಿಗ್‍ಬಾಸ್ ಮನೆಗೆ ಕಳುಹಿಸಿ 6 ತಿಂಗಳ ಕಾಲ ಕಾದಿದ್ದಾರೆ. ಅವರೇ ನನಗೆ ಬಿಗ್‍ಬಾಸ್ ಮನೆಗೆ ಹೋಗು ಎಂದಿದ್ದರು. ನನಗೋಸ್ಕರ ಫಸ್ಟ್ ಇನ್ನಿಂಗ್ಸ್ ಕಾದು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಕಾದಿದ್ದಾರೆ. ಈಗ ಮದುವೆಯಾಗುವುದಾಗಿ ತಿಳಿಸಿದ್ದಾರೆ.

    ಬಳಿಕ ಸುದೀಪ್ ಹಾಗೂ ಬಿಗ್‍ಬಾಸ್ ವೇದಿಕೆಗೆ ಧನ್ಯವಾದ ತಿಳಿಸುತ್ತಾ ಶುಭಾ ವಿದಾಯ ಹೇಳಿದರು. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಶಮಂತ್ ಔಟ್

  • ತಂಬಿಟ್ಟು, ಬೆಂಡು, ಬತ್ತಾಸಿನ ಮೇಲೆ ಶುಭಾ ಮನಸ್ಸು – ಮಂಜುಗೆ ಉಂಡೆ ಕೋಳಿ ಆಸೆ

    ತಂಬಿಟ್ಟು, ಬೆಂಡು, ಬತ್ತಾಸಿನ ಮೇಲೆ ಶುಭಾ ಮನಸ್ಸು – ಮಂಜುಗೆ ಉಂಡೆ ಕೋಳಿ ಆಸೆ

    ಬಿಗ್‍ಬಾಸ್ ದಿವ್ಯಾ ಉರುಡುಗ ಹಾಗೂ ಮಂಜುಗೆ ನ್ಯಾಕ್(ಕೌಶಲ್ಯವನ್ನು ಬಳಸಿಕೊಂಡು ಸಮತೋಲನವನ್ನು ಕಾಪಾಡಿಕೊಂಡು ಆಡುವಂತ ಆಟ)ವನ್ನು ನೀಡಿದ್ದರು. ಇದರಲ್ಲಿ ಗೆದ್ದವರಿಗೆ ವೈಯಕ್ತಿಕ ಲಕ್ಷುರಿ ನೀಡುವುದಾಗಿ ತಿಳಿಸಿದ್ದರು.

    ಅದರಂತೆ ಈ ಟಾಸ್ಕ್‌ನಲ್ಲಿ ಮಂಜು ಗೆಲ್ಲುತ್ತಾರೆ. ಬಳಿಕ ಶುಭಾ ಮಂಜುಗೆ ಲಕ್ಷುರಿಯಾಗಿ ಏನು ಕೇಳುವುದು ಎಂದು ತಲೆ ಕೆಡಿಸಿಕೊಂಡು ಮನೆಯೆಲ್ಲಾ ಸುತ್ತಾಡುತ್ತಾ ಕಡಲೆ ಪಪ್ಪು ಕೇಳೋಣ್ವಾ ಅಥವಾ ಹಾಲ್ಕೋವಾ ಕೇಳೋಣ್ವಾ? ಅಂತ ಚರ್ಚೆ ನಡೆಸಿದ್ದಾರೆ. ಆಗ ಮಂಜು ನೀವೆಲ್ಲಾ ಏನೇ ಹೆಳಿದರೂ ನಾನು ಮಾತ್ರ ಚಿಕನ್‍ನನ್ನೇ ಕೇಳುವುದು ಎಂದು ಪಟ್ಟು ಹಿಡಿಯುತ್ತಾರೆ.

    ಆಗ ಶುಭಾ ಬೇಡ ಮಂಜು, ನನಗೆ ನೀನು ಏನು ತಿನ್ನಬೇಕು ಅಂತ ಇಷ್ಟ ಆಗುತ್ತಿದ್ಯೋ ಅದನ್ನ ಕೇಳೋಣ ಎನ್ನುತ್ತಾ ಕೊನೆಗೆ ಮಂಜುಗೆ ಲಕ್ಷುರಿ ಕುಪನ್‍ನಲ್ಲಿ ಬೆಂಡು ಬತ್ತಾಸು, ತಂಬಿಟ್ಟು ಬೇಕಂತೆ ಕಳುಹಿಸಿಕೊಡಿ ಬಿಗ್‍ಬಾಸ್, ಅವರಿಗೆ ಕ್ಯಾಮೆರಾ ಮುಂದೆ ಬಂದು ಹೇಳಲು ಬೇಜಾರಾಗುತ್ತಿದ್ಯಂತೆ ಹಾಗಾಗಿ ನನ್ನ ಕೈನಲ್ಲಿ ಹೇಳಿಸುತ್ತಿದ್ದಾರೆ ಎಂದಿದ್ದಾರೆ.

    ಇದರ ಮಧ್ಯೆ ಮಂಜು ನಾನು ತಿನ್ನುವುದು ನೀನಲ್ಲ. ಬಾ ಇಲ್ಲಿ, ನೀನು ಆ ಕಡೆ ಹೋಗು ಕ್ಯಾಮೆರಾಯಿಂದ ಪಕ್ಕಕ್ಕೆ ಶುಭಾರನ್ನು ತಳ್ಳುತ್ತಾರೆ. ಆದರೂ ಶುಭಾ ಮಂಜುಗೆ ಕ್ಯಾಮೆರಾ ಮುಂದೆ ಚಿಕನ್ ಕೇಳಲು ಬಿಡದೇ ಆಟ ಆಡಿಸಿದ್ದಾರೆ. ಕೊನೆಗೆ ಶುಭಾ ಬಾಯಿ ಮುಚ್ಚಿ ಮಂಜು ಬಿಗ್‍ಬಾಸ್ ನನಗೆ ಗ್ರೀಲ್ ಆಗಿರುವ ಫುಲ್ ಉಂಡೆ ಕೋಳಿ ಅಂದರೆ ತಂದೂರಿ ಚಿಕನ್ ಬೇಕು ಎಂದು ಕೇಳಿದ್ದಾರೆ.

    ಅದರಂತೆ ಬಿಗ್‍ಬಾಸ್ ಒಂದು ಪ್ಲೇಟ್‍ನಲ್ಲಿ ತಂದೂರಿ ಚಿಕನ್ ಕಳುಹಿಸಿಕೊಟ್ಟಿದ್ದಾರೆ. ಅದನ್ನು ಮಂಜು ಪ್ಲೇಟ್‍ನಲ್ಲಿ ಹಿಡಿದು ಮನೆಯ ಎಲ್ಲ ಸ್ಪರ್ಧಿಗಳಿಗೂ ತೋರಿಸುತ್ತಾ ಹೊಟ್ಟೆ ಉರಿಸಿ, ಕೊನೆಗೆ ಒಂದು ಫುಲ್ ಉಂಡೇ ಕೋಳಿ ಸವಿದಿದ್ದಾರೆ. ಇದನ್ನು ಕಂಡು ದಿವ್ಯಾ ಉರುಡುಗ ಕೂಡ ಆಸೆ ಪಟ್ಟು ಬಿಗ್‍ಬಾಸ್ ನನಗೂ ಒಂದು ತಂದೂರಿ ಚಿಕನ್‍ನನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ

  • ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ

    ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ

    ಬಿಗ್‍ಬಾಸ್ ಈ ವಾರ ಮನೆಯ ಸ್ಪರ್ಧಿಗಳಿಗೆ ಒಂದೊಂದು ಸೀಕ್ರೆಟ್ ಟಾಸ್ಕ್ ನೀಡುತ್ತಾ ಬಂದಿದ್ದಾರೆ. ಅದರಂತೆ ಬಿಗ್‍ಬಾಸ್ ಈ ಬಾರಿ ದಿವ್ಯಾ ಸುರೇಶ್‍ಗೆ ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್‍ನನ್ನು ಪೂರ್ಣಗೊಳಿಸಲು ದಿವ್ಯಾ ಸುರೇಶ್ ಪಟ್ಟ ಕಷ್ಟ ಮಾತ್ರ ಅಷ್ಟಿಷ್ಟಲ್ಲ, ಆದರೂ ಎಷ್ಟೇ ಪ್ರಯತ್ನಿಸಿದರೂ ಈ ಟಾಸ್ಕ್ ಕಂಪ್ಲೀಟ್ ಮಾಡುವಲ್ಲಿ ಕೊನೆಗೆ ದಿವ್ಯಾ ಸುರೇಶ್ ವಿಫಲರಾಗಿದ್ದಾರೆ.

    ಬಿಗ್‍ಬಾಸ್ ಮನೆಯ ಸ್ಪರ್ಧಿಗಳ ಬಲು ಅಚ್ಚು-ಮೆಚ್ಚಿನ ಸೀಟ್ ಎಂದರೆ ಅದು ಬಿನ್‍ಬ್ಯಾಗ್. ಅದರಲ್ಲೂ ಮನೆಯಲ್ಲಿ ಎಷ್ಟೇ ಜಾಗ ಇದ್ದರೂ ಮಂಜು ಹಾಗೂ ಶುಭಾ ಮಾತ್ರ ಗಾರ್ಡನ್ ಎರಿಯಾಗೆ ಹೋಗಿ ಬಿನ್ ಬ್ಯಾಗ್‍ನನ್ನು ಹುಡುಕಿ ಅದರ ಮೇಲೆಯೇ ಕುಳಿತುಕೊಂಡು ಹರಟೆ ಹೊಡೆಯುತ್ತಾರೆ.

    ಸದ್ಯ ಬಿಗ್‍ಬಾಸ್ ಕರೆ ಮಾಡಿದಾಗ ಮಾತನಾಡಿದ ದಿವ್ಯಾ ಸುರೇಶ್‍ಗೆ ಈ ಮನೆಯಲ್ಲಿರುವ ಎರಡು ಬಿನ್‍ಬ್ಯಾಗ್ ಇದೆ. ಅದರ ಮೇಲೆ ಹೆಚ್ಚಾಗಿ ಯಾರು ಕುಳಿತುಕೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಂಜು ಹಾಗೂ ಶುಭಾ ಪೂಂಜಾ ಎಂದು ದಿವ್ಯಾ ಸುರೇಶ್ ಉತ್ತರಿಸಿದ್ದಾರೆ. ಆಗ, ಬಿಗ್‍ಬಾಸ್ ನಾನು ನಿಮಗೆ ಒಂದು ಕೆಲಸ ಕೊಡುತ್ತೇನೆ. ನಾಳೆ ಸಂಜೆಯವರೆಗೂ ಮಂಜು ಹಾಗೂ ಶುಭಾ ಬಿನ್ ಬ್ಯಾಗ್ ಮೇಲೆ ಕುಳಿತುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ.

    ನಂತರ ಮಧ್ಯಾಹ್ನ ಮಂಜು ಹಾಗೂ ಶುಭಾ ಬಿನ್‍ಬ್ಯಾಗ್ ಮೇಲೆ ಕುಳಿತುಕೊಳ್ಳಲು ಗಾರ್ಡನ್ ಏರಿಯಾದತ್ತ ಹೋಗುತ್ತಿರುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ನಾನು ಶುಭಾ ಜೊತೆ ಮಾತನಾಡಬೇಕು, ನಾನು ಅವಳೊಂದಿಗೆ ಟೈಮ್ ಸ್ಪೆಂಡ್ ಮಾಡಿಲ್ಲ ಎಂದು ಅಡ್ಡಹಾಕಿದ್ದಾರೆ. ಆದರೂ ಕೇಳದ ಮಂಜು ಶುಭಾರನ್ನು ದರದರ ಎಂದು ಎಳೆದುಕೊಂಡು ಹೋಗುತ್ತಿರುತ್ತಾರೆ. ಈ ಮಧ್ಯೆ ನೀನು ಕೂಡ ನಮ್ಮ ಜೊತೆ ಕುಳಿತುಕೊಂಡು ಮಾತನಾಡು ಬಾ ಎಂದು ದಿವ್ಯಾ ಸುರೇಶ್‍ರನ್ನು ಕೂಡ ಎಳೆದುಕೊಂಡು ಹೋಗುತ್ತಾರೆ.

    ಈ ವೇಳೆ ಬೇಡ ಬೇಡ ಎಂದು ಎಷ್ಟೇ ತಡೆದರು, ದಿವ್ಯಾ ಸುರೇಶ್‍ರನ್ನು ದೂರ ತಳ್ಳಿ ಶುಭಾ ಹಾಗೂ ಮಂಜು ಬಿನ್ ಬ್ಯಾಗ್ ಮೇಲೆ ಕುಳಿತೆ ಬಿಡುತ್ತಾರೆ. ಒಟ್ಟಾರೆ ಟಾಸ್ಕ್ ಕಂಪ್ಲೀಟ್ ಮಾಡಲು ಎಷ್ಟೇ ಒದ್ದಾಡಿ, ಪರದಾಡಿದರೂ ದಿವ್ಯಾ ಸುರೇಶ್ ಸೋತುಹೋಗಿದ್ದಾರೆ. ಒಟ್ಟಾರೆ ಈ ದೃಶ್ಯ ನೋಡಿದ ವೀಕ್ಷರಿಗೆ ಸಖತ್ ಮಜಾ ನೀಡಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ:ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

  • ಇಲಿ ಬಾಲ ಸುಟ್ಟಂತೆ ಶುಭಾ ವಿಲವಿಲನೆ ಒದ್ದಾಡುತ್ತಾಳೆ: ಮಂಜು

    ಇಲಿ ಬಾಲ ಸುಟ್ಟಂತೆ ಶುಭಾ ವಿಲವಿಲನೆ ಒದ್ದಾಡುತ್ತಾಳೆ: ಮಂಜು

    ಗಾರ್ಡನ್ ಏರಿಯಾದ ಸೋಫಾ ಮೇಲೆ ಶುಭಾ ಪುಂಜಾ ಹಾಗೂ ವೈಷ್ಣವಿ ಕುಳಿತುಕೊಂಡಿರುತ್ತಾರೆ. ಇದೇ ವೇಳೆ ಬಿನ್ ಬ್ಯಾಗ್ ಮೇಲೆ ಮಂಜು ಒಬ್ಬೊಂಟಿಯಾಗಿ ಕುಳಿತುಕೊಂಡಿರುತ್ತಾರೆ.

    ಆಗ ಮಂಜು ವೈಷ್ಣವಿಗೆ 10 ನಿಮಿಷ ಬಾ ಇಲ್ಲಿ ಎಂದು ಕರೆಯುತ್ತಾರೆ. ಈ ವೇಳೆ ಶುಭಾ, ಹೋಗಬೇಡ ಅವನು ಬೇಕು, ಬೇಕು ಅಂತ ಕರೆಯುತ್ತಿದ್ದಾನೆ. ನೀನು ಅಲ್ಲಿಗೆ ಹೋದರೆ ನಾನು ಅಲ್ಲಿಗೆ ಹೋಗ್ತೀನಿ ಅಂತ ಕರೆಯುತ್ತಿದ್ದಾನೆ. ನೀನು ಅಲ್ಲಿಗೆ ಹೋಗಬೇಡ ವೈಷ್ ಎಂದು ಹೇಳುತ್ತಾರೆ. ಆಗ ಮಂಜು, ಅದಕ್ಕಲ್ಲ ಏನೋ ಒಂದು ಚೂರು ಮಾತನಾಡಬೇಕು ಅದಕ್ಕೆ ಬಾ ಎಂದು ಕರೆದೆ. ತೊಂದರೆ ಇಲ್ಲ ನಿಮಗೆ ಇಷ್ಟ ಇಲ್ಲ ಅಂದರೆ ಬರಬೇಡಿ ಎಂದಾಗ ವೈಷ್ಣವಿ ಮಂಜು ಬಳಿ ಹೋಗುತ್ತಾರೆ.

    ನಂತರ ಮಂಜು ವೈಷ್ಣವಿಗೆ ಇನ್ನೂ 10 ನಿಮಿಷದಲ್ಲಿ ಶುಭಾ ಇಲ್ಲಿಗೆ ಬರುತ್ತಾಳೆ ನೋಡುತ್ತಿರು ಎನ್ನುತ್ತಾ, ದಿವ್ಯಾ ಉರುಡುಗರನ್ನು ಕರೆದು ಇಲ್ಲಿ ಕುಳಿತುಕೊಂಡು ನೋಡುತ್ತಿರು ಅವಳು ಇಲ್ಲಿಗೆ ಬರುತ್ತಾಳೆ. ಇಲಿ ಬಾಲ ಸುಟ್ಟಾಗ ಒದ್ದಾಡುತ್ತದೆ ಅಲ್ವಾ ಹಾಗೆ ಒದ್ದಾಡುತ್ತಾಳೆ ಎಂದು ಹೇಳುತ್ತಾರೆ. ಆಗ ಶುಭಾ ಮನಸ್ಸಿನಲ್ಲಿಯೇ ಬೈದುಕೊಂಡು ಮೇಲೆ ಎದ್ದೇಳುತ್ತಾರೆ.

    ಆಗ ಮಂಜು ವೈಷ್ಣವಿ ಜೊತೆ, ನೋಡುತ್ತಿರು ವಾಕಿಂಗ್ ಮಾಡುತ್ತೇನೆ ಎಂದು ಶುಭಾ ಬಿಲ್ಡಪ್ ನೀಡುತ್ತಾಳೆ ಎನ್ನುತ್ತಾರೆ. ಅದರಂತೆ ಶುಭಾ ವಾಕಿಂಗ್ ಮಾಡುವ ನೆಪದಲ್ಲಿ ಕೊನೆಗೆ ಮಂಜು ಬಳಿ ಬಂದು, ಸಾಧ್ಯವಿಲ್ಲ. ನನ್ನ ಕೈಯಲ್ಲಿ ಆಗುವುದಿಲ್ಲ. 10 ನಿಮಿಷ ಅಷ್ಟೇ ಎನ್ನುತ್ತಾರೆ. ಶುಭ ಹೊಡೆದ ಈ ಡೈಲಾಗ್ ಕೇಳಿ ವೈಷ್ಣವಿ ಹಾಗೂ ಮಂಜು ಎದ್ದುಬಿದ್ದು ನಗುತ್ತಾರೆ.

    ಸ್ವಾಭಿಮಾನಕ್ಕೆ ತಡೆದುಕೊಂಡು ಶುಭಾ ಕುಳಿತುಕೊಂಡಿರುತ್ತಾಳೆ ಅಷ್ಟೇ. ಆಮೇಲೆ ಜೀವ ತಡೆಯುವುದಿಲ್ಲ ಎಂದು ಮಂಜು ಮತ್ತೆ ರೇಗಿಸುತ್ತಾರೆ.

  • ನನ್ನ ಮದುವೆ ಹಾಳು ಮಾಡೋದಕ್ಕೆ ಶುಭಾನೇ ಸಾಕು: ಮಂಜು

    ನನ್ನ ಮದುವೆ ಹಾಳು ಮಾಡೋದಕ್ಕೆ ಶುಭಾನೇ ಸಾಕು: ಮಂಜು

    ಬಿಗ್‍ಬಾಸ್ ಮನೆಯಲ್ಲಿ ಮಂಜು ಮದುವೆ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಮದುವೆ ಬಗ್ಗೆ ಸಾಕಷ್ಟು ಕನಸು, ಆಸೆಗಳನ್ನು ಹೊಂದಿರುವ ಮಂಜು ಮದುವೆಯಾಗಲು ತಯಾರಾಗಿದ್ದರೆ. ಆದರೆ ನನ್ನ ಮದುವೆಯನ್ನು ಶುಭಾನೇ ಕೆಡಿಸಿಬಿಡುತ್ತಾರೆ ಎಂದು ಸುದೀಪ್ ಜೊತೆ ಮಂಜು ಹೇಳಿಕೊಂಡಿದ್ದಾರೆ.

    ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಮಂಜು ನಾನು ಹೆಣ್ಣು ನೋಡುವ ಶಾಸ್ತ್ರಕ್ಕೆ ಯಾರನ್ನು ಕರೆದುಕೊಂಡು ಹೋದರೂ ಶುಭಾ ಪೂಂಜಾರನ್ನು ಮಾತ್ರ ಕರೆದುಕೊಂಡು ಹೋಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಸುದೀಪ್ ಕಾರಣವೇನು ಎಂದಾಗ ನಾನು ಹೆಣ್ಣು ನೋಡವ ಶಾಸ್ತ್ರಕ್ಕೆ ಶುಭಾ ಕರೆದುಕೊಂಡು ಹೋದರೆ ಇವರೇ ಹಾಳು ಮಾಡಿಬಿಡುತ್ತಾರೆ.

    ಹುಡುಗಿ ಮುಂದೆ ಬೇಡ ಹುಡುಗ ಸರಿ ಇಲ್ಲ. ಡಬ್ಬ ನನ್ನ ಮಗ, ಚಂಪೂ, ಹಲ್ಲುಬ್ಬ, ತುರೆಮಣೆ, ನೀನೇನೋ ಒಳ್ಳೆ ಚಿಂಪಾಂಜಿ ತರ ಇದ್ಯಾ? ನೀನು ಯಾವ ಸೀಮೆ ಅದೋ ಅಂತಾರೆ. ಇಷ್ಟು ಹುಡುಗಿ ಮುಂದೆ ಹೇಳಿದರೆ ಸಾಕು ಹುಡುಗಿ ರಿಜೆಕ್ಟ್ ಮಾಡಿ ಬಿಡುತ್ತಾಳೆ. ಇದರ ಬದಲಿಗೆ ಹುಡುಗ ಚೆನ್ನಾಗಿದ್ದಾನೆ ಎಂದರೆ ಒಕೆ. ಆದರೆ ಇವನೊಬ್ಬ ದರಿದ್ರಾನನ್ನ ಮಗ, ಇವನು ಸ್ನಾನ ಮಾಡಲ್ಲ, ಹಲ್ಲುಜ್ಜಲ್ಲ, ಸೊಟ್ಟ ನನ್ನ ಮಗ ಅಂತ ಏನೇನೋ ಬೈತಾರೆ ಎಂದು ಮಂಜು ಆರೋಪಿಸುತ್ತಾರೆ.

    ಈ ವೇಳೆ ಸುದೀಪ್ ಹುಡುಗಿ ಕೂಡ ನಾನು ಹಲ್ಲು ಹುಜ್ಜುವುದಿಲ್ಲ ಎಂದರೆ ಹೇಗೆ ಇರುತ್ತದೆ ಒಮ್ಮೆ ನೆನಪಿಸಿಕೊಳ್ಳಿ. ಹಾಗೇ ಹೇಳಿದ ತಕ್ಷಣ ಅಲ್ಲಿಂದ ಎದ್ದು ಓಡಿ ಹೋಗುವವರೇ ಮೊದಲು ನೀವು ಮಂಜು ಅವರೇ ಎಂದು ಅಣುಕಿಸುತ್ತಾರೆ. ಇನ್ನೂ ಚಕ್ರವರ್ತಿಯವರು ಬರುತ್ತೀನಿ ಅಂದ್ರು ಅವರನ್ನು ಬೇಡ ಅಂದ್ರಿ ಯಾಕೆ ಎಂದು ಕೇಳುತ್ತಾರೆ.

    ಆಗ ಮಂಜು ಅವರಿಗೂ ನನಗೂ ಪ್ರೀತಿ ವಿಶ್ವಾಸ ಜಾಸ್ತಿ ಇದೆ. ಹಾಗಾಗಿ ಅವರನ್ನು ಡೈರೆಕ್ಟ್ ಮದುವೆಗೆ ಬನ್ನಿ ಎಂದು ಹೇಳಿದ್ದೇನೆ ಎನ್ನುತ್ತಾರೆ. ಈ ವೇಳೆ ಸುದೀಪ್ ಸೆರಿದಂತೆ ಮನೆಮಂದಿಯೆಲ್ಲಾ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇದನ್ನೂ ಓದಿ : ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್

  • ಹುಡುಗ್ರು ಸರಿಯಿಲ್ಲ, ಅವರ ಬುದ್ಧಿ ಸರಿಯಿಲ್ಲ – ಮಂಜು ಹೀಗಂದಿದ್ಯಾಕೆ..?

    ಹುಡುಗ್ರು ಸರಿಯಿಲ್ಲ, ಅವರ ಬುದ್ಧಿ ಸರಿಯಿಲ್ಲ – ಮಂಜು ಹೀಗಂದಿದ್ಯಾಕೆ..?

    ಬಿಗ್‍ಬಾಸ್ ಮನೆಯ ಮೋಸ್ಟ್ ಎಂಟರ್​ಟೈನರ್ ಅಂದರೆ ಮಂಜು. ದೊಡ್ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಎಲ್ಲರ ಜೊತೆ ಬೆರೆಯುತ್ತಿದ್ದ ಮಂಜು, ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಒಂದು ರೀತಿ ತಮಗೆ ಕಂಫರ್ಟ್ ಇರುವವರೊಂದಿಗೆ ಮಾತ್ರ ಹೆಚ್ಚಾಗಿ ಬೆರೆಯುತ್ತಿದ್ದಾರೆ.

    ಸದ್ಯ ಶುಭಾ ಪೂಂಜಾ ಮಂಜುಗೆ ಯಾವಾಗಲೂ ಹುಡುಗಿಯರ ಜೊತೆಯಲ್ಲಿಯೇ ಇರುತ್ತೀಯಲ್ಲ ಹೋಗಿ ಹುಡುಗರೊಟ್ಟಿಗೆ ಕೂಡ ಕುಳಿತುಕೊಂಡು ಮಾತನಾಡು ಎಂದು ಹೇಳುತ್ತಾರೆ. ಇದಕ್ಕೆ ಮಂಜು ಹುಡುಗರು ಸರಿಯಾಗಿಲ್ಲ. ಯಾಕೆ ಎಂದು ಕೇಳಿದಾಗ ಹುಡುಗರ ಬುದ್ಧಿ ಸರಿಯಾಗಿಲ್ಲ ಎನ್ನುತ್ತಾರೆ.

    ಇದೇ ವೇಳೆ ಶಮಂತ್ ಎಲ್ಲೆಲ್ಲೋ ಇದ್ವಿ ನಾವು, ಹೆಂಗಾದ್ವಿ ನೋಡಿ ನೀವು, ಬರಬರುತ್ತಾ ಜೀವನ ಯಾಕೋ ಕಷ್ಟ ಆಗುತ್ತಿದೆ. ಬಜರ್ ಆದಾಗ ಓಡಿ ಹೋಗ್ತೀವಿ. ಸಣ್ಣ ಮ್ಯಾಟರ್‌ಗೆ ಕಿತ್ತಾಡ್ತೀವಿ ಎಂದು ಹಾಡು ಹೇಳುತ್ತಿರುತ್ತಾರೆ. ಆಗ ಮಂಜು, ಶಮಂತ್‍ರನ್ನು ವೈಷ್ಣವಿ ಹಾಗೂ ಶುಭಾಗೆ ತೋರಿಸಿ ಅರ್ಥ ಆಯ್ತಾ ನಾನು ಯಾಕೆ ಸೇರುವುದಿಲ್ಲ. ಇವನು ಈ ತರ ಎಂದು ಹೇಳುತ್ತಾರೆ.

    ಬಳಿಕ ಚಕ್ರವರ್ತಿಯವರನ್ನು ತೋರಿಸಿ, ಅವರು ಅವರದ್ದೇ ಆದ ಲೋಕದಲ್ಲಿ ಮುಳುಗಿರುತ್ತಾರೆ. ಇನ್ನೂ ಪ್ರಶಾಂತ್ ಕೇಸು, ಪಾಸು, ಕೋರ್ಟ್, ಜೈಲು, ಪೈಲು ಎಂದು ಕೊಂಡಿರುತ್ತಾರೆ. ಇನ್ನೊಬ್ಬ ಅರವಿಂದ್ ರನ್ನಿಂಗ್ ಎಂದು ಓಡುವ ಸನ್ನೆ ಮಾಡಿ ತೋರಿಸುತ್ತಾರೆ.

    ಮಂಜು ಓಡುವುದನ್ನು ತೋರಿಸಿದ್ದನ್ನು ಕಂಡು ಶುಭಾ ಹಾಗೂ ವೈಷ್ಣವಿ ಜೋರಾಗಿ ನಗುತ್ತಾ, ಬಹಳ ಕ್ಯೂಟ್ ಆಗಿ ರನ್ನಿಂಗ್‍ನನ್ನು ತೋರಿಸಿದ್ರಿ, ಮತ್ತೊಮ್ಮೆ ತೋರಿಸಿ ಎಂದು ಕೇಳುತ್ತಾರೆ. ಇದನ್ನೂ ಓದಿ:ದೊಡ್ಮನೆ ಪ್ರಣಯ ಪಕ್ಷಿಗಳ ನಡುವೆ ಮುನಿಸು – ಡಿಯು ಜೊತೆ ಮಾತು ಬಿಟ್ಟ ಅರವಿಂದ್

  • ಬಿಗ್‍ಬಾಸ್ ಮನೆಯಲ್ಲಿ ಹುಟ್ಟಿಕೊಂಡ್ರು ಹೊಸ ಸಿಂಗರ್

    ಬಿಗ್‍ಬಾಸ್ ಮನೆಯಲ್ಲಿ ಹುಟ್ಟಿಕೊಂಡ್ರು ಹೊಸ ಸಿಂಗರ್

    ಬಿಗ್‍ಬಾಸ್ ಕಾರ್ಯಕ್ರಮದ ಪ್ರತಿ ಸೀಸನ್‍ನಲ್ಲಿಯೂ ಒಬ್ಬ ಗಾಯಕ ಅಥವಾ ಗಾಯಕಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ. ಸದ್ಯ ಬಿಗ್‍ಬಾಸ್ ಸೀಸನ್ -8 ರಲ್ಲಿ ದೊಡ್ಮನೆಗೆ ಗಾಯಕಿ ಗೀತಾ ಭಟ್ ಹಾಗೂ ಗಾಯಕ ವಿಶ್ವನಾಥ್ ಶಮಂತ್ ಆಗಿಮಿಸಿದ್ದರು. ಸದ್ಯ ಗೀತಾ ಭಟ್ ಮತ್ತು ಗಾಯಕ ವಿಶ್ವನಾಥ್ ಎಲಿಮೀನೆಟ್ ನಂತರ ಉಳಿದಿರುವುದು ಶಮಂತ್ ಮಾತ್ರ. ಆದ್ರೆ ಇವರೆಲ್ಲರ ಮಧ್ಯೆ ರೊಚ್ಚಿಗೆದ್ದು ವೈಷ್ಣವಿ ದೊಡ್ಮನೆಯಲ್ಲಿ ಹಾಡು ಹೇಳಲು ಆರಂಭಿಸಿದ್ದಾರೆ. ಅದರಲ್ಲೂ ಇವರ ಹಾಡು ಹೇಗಿದೆ ಅಂದ್ರೆ ಮನೆಮಂದಿಯೆಲ್ಲಾ ದಿಕ್ಕಾಪಾಲಾಗಿ ಓಡಿ ಹೋಗುತ್ತಾರೆ.

    ಹೌದು, ಇಷ್ಟು ದಿನ ಸೈಲೆಂಟ್ ಆಗಿದ್ದ ವೈಷ್ಣವಿ ಈಗ ಫುಲ್ ವೈಲೆಂಟ್ ಆಗಿದ್ದಾರೆ. ಬಿಗ್‍ಬಾಸ್ ಮನೆಯ ಹಲವು ಮಂದಿಗೆ ಹಾಡು ಹೇಳಲು ಬರುವುದಿಲ್ಲ ಅದರಲ್ಲಿ ವೈಷ್ಣವಿ ಕೂಡ ಒಬ್ಬರು. ಸದ್ಯ ವೈಷ್ಣವಿಗೆ ಹಾಡು ಹೇಳುವಂತೆ ಚಕ್ರವರ್ತಿಯವರು ಕೇಳುತ್ತಾರೆ. ಆಗ ವೈಷ್ಣವಿ ನನಗೆ ಬರುವುದಿಲ್ಲ ನೀವು ನಿದ್ದೆ ಮಾಡುತ್ತೀರಾ ಎನ್ನುತ್ತಾರೆ. ಪರವಾಗಿಲ್ಲ ನಾನು ನಿದ್ದೆ ಹೋಗುವುದಿಲ್ಲ ಹಾಡು ಹೇಳು ಎಂದಾಗ ‘ಒಂದೇ ಒಂದು ಸಾರಿ ಕಣ್ಣು ಮುಂದೆ ಬಾರೆ..’ ಎಂದು ಹೇಳುತ್ತಾರೆ. ಅದಕ್ಕೆ ಇಷ್ಟೇ ನಾ ಹಾಡು ಎಂದು ಚಕ್ರವರ್ತಿ ಕೇಳಿ ಮತ್ತೊಂದು ಹಾಡು ಹೇಳು ಎಂದು ಕೇಳಿದ್ದಾರೆ. ಆಗ ವೈಷ್ಣವಿ ಸುಮ್ಮನೆ ಹೀಗೆ ನಿನ್ನನೇ ಎಂದು ಮೂಗಿನಲ್ಲಿಯೇ ಹಾಡು ಹೇಳುತ್ತಾರೆ. ಈ ವೇಳೆ ಅರವಿಂದ್ ಹಾಡಿರಲಿ ಆ ಎಕ್ಸ್‍ಪ್ರೆಷನ್ ಕೊಡುತ್ತಿರಲ್ಲ ಯಪ್ಪಾ.. ಎಂದು ಅಣುಕಿಸುತ್ತಾರೆ.

    ಇತ್ತೀಚೆಗೆ ಶಮಂತ್ ಬರೆದಿದ್ದ ಮಳೆಯೇ ಸುರಿ.. ಮಳೆಯೇ ಸುರಿ ಹಾಡನ್ನು ವೈಷ್ಣವಿಯವರು ಹಾಡಿದ್ದರು. ಈ ಹಾಡನ್ನು ಕೇಳಿ ಶಾಕ್ ಆದ ಮನೆಮಂದಿಯೆಲ್ಲಾ ವೈಷ್ಣವಿ ಇಷ್ಟು ಕೆಟ್ಟ ಸಿಂಗರ್ ಎಂದು ಗೊತ್ತಿರಲಿಲ್ಲ, ನಾವೇ ಕೆಟ್ಟದಾಗಿ ಹಾಡುತ್ತೇವೆ ಎಂದರೆ ಇವಳು ನಮಗಿಂತ ಕೆಟ್ಟದಾಗಿ ಹಾಡುತ್ತಾಳೆ ಎಂದು ಹಾಸ್ಯ ಮಾಡಿದರೆ. ದಿವ್ಯಾ ಉರುಡುಗ ಅರವಿಂದ್ ಚೇರ್ ನಿಂದ ಎದ್ದು ಬಿದ್ದು ನಕ್ಕಿದ್ದರು. ಇದನ್ನೂ ಓದಿ: ನಾನು ಟೈಗರ್ ಸಾಕಿದ್ದೆ, ಅದರ ಜೊತೆ ಆಟ ಆಡ್ತಿದ್ದೆ: ಶುಭಾ ಪೂಂಜಾ

  • ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

    ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

    ವಾರ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಬಹಳ ಡಿಫರೆಂಟ್ ಟಾಸ್ಕ್‌ಗಳನ್ನು ನೀಡಿದ್ದಾರೆ. ಟಾಸ್ಕ್ ಆರಂಭಕ್ಕೂ ಮುನ್ನ ಮ್ಯೂಸಿಕ್ ವೊಂದನ್ನು ಪ್ಲೇ ಮಾಡಿದಾಗ ಎರಡು ತಂಡದ ಕ್ಯಾಪ್ಟನ್‍ಗಳು ಕನ್ಫೆಕ್ಷನ್ ರೂಮ್‍ಗೆ ಹೋಗಬೇಕಾಗುತ್ತದೆ.

    ಈ ಮಧ್ಯೆ ಮಂಜು ತಮ್ಮ ತಂಡದ ಸದಸ್ಯರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ಮ್ಯೂಸಿಕ್ ಪ್ಲೇ ಆಗುತ್ತದೆ. ಆಗ ದಿವ್ಯಾ ಸುರೇಶ್ ನಿಧಾನವಾಗಿ ಡ್ಯಾನ್ಸ್ ಮಾಡುತ್ತಾ ಬರುತ್ತಾರೆ. ಇದನ್ನು ಕಂಡ ಮಂಜು ದಿವ್ಯಾ ಸುರೇಶ್‍ಗೆ ಬೇಗ ಬಾ ಎಂದು ರೇಗುತ್ತಾರೆ. ಇದರಿಂದ ಬೇಸರಗೊಂಡ ದಿವ್ಯಾ ಸುರೇಶ್ ಪ್ರಿಯಾಂಕ ಬಳಿ, ನಾನು ನಡೆದುಕೊಂಡು ಬರಬೇಕಾದರೆ ಮ್ಯೂಸಿಕ್ ಪ್ಲೇ ಆಯಿತು. ಅದಕ್ಕೆ ನಾನು ಡ್ಯಾನ್ಸ್ ಮಾಡಿಕೊಂಡು ಬರುತ್ತಿದ್ದೆ. ಅದಕ್ಕೆ ಬೇಗ ಬಾ ಏನು ಮಾಡುತ್ತಿದ್ಯಾ ಎಂದು ರೇಗುತ್ತಾರೆ. ನನ್ನ ಮೇಲೆ ರೇಗುವ ಅವಶ್ಯಕತೆ ಏನಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾವು ಫಸ್ಟ್ ಇನ್ನಿಂಗ್ಸ್‌ನಲ್ಲಿ ಹೇಗಿದ್ವಿ ಹಾಗೇ ಇರಲು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಆಗುವುದಿಲ್ಲ ಎಂದು ಹೇಳಿದ್ದೆ ಅವನು, ಅವನು ಇರಲು ಆಗುವುದಿಲ್ಲ ಎಂದರೆ ನಾನು ಹಾಗೆಯೇ ಇರುವುದಕ್ಕೆ ಆಗುವುದಿಲ್ಲ. ನಾನು ಸುಮ್ಮನೆ ಒಬ್ಬಳೇ ಕುಳಿತುಕೊಳ್ಳಲು ಆಗುವುದಿಲ್ಲ, ನಾನು ಎಲ್ಲರ ಜೊತೆಯಲ್ಲಿ ಕೂಡ ಮಾತನಾಡಬೇಕಾಗುತ್ತದೆ, ಎಲ್ಲರ ಜೊತೆ ಬೆರೆಯಬೇಕಾಗುತ್ತದೆ. ಕೊಟ್ಟಿರುವ ಟಾಸ್ಕ್‌ಗಳನ್ನು ಮಾಡಬೇಕಾಗುತ್ತದೆ. ಸುದೀಪ್ ಸರ್ ಹೇಳಿದ್ರು, ನಾನು ಚೆನ್ನಾಗಿ ಆಟ ಆಡುತ್ತಿದ್ದೇನೆ ಅಂತ, ನಾನು ಕೂಡ ಅದನ್ನೇ ಮಾಡಬೇಕಾಗುತ್ತದೆ. ಸುಮ್ಮನೆ ನನ್ನ ಮೇಲೆ ರೇಗಾಡಿದ, ಅದರ ಅವಶ್ಯತೆ ಇರಲಿಲ್ಲ ಎಂದು ಹೇಳುತ್ತಾರೆ.

    ಅವನು ಶುಭಾ ಜೊತೆ ಬಹಳ ಕ್ಲೋಸ್ ಆಗಿದ್ದಾನೆ. ಅವನು ಕುಳಿತು ಹೋದ ಬಿನ್ ಬ್ಯಾಗ್ ಮೇಲೆ ಕುಳಿತುಕೊಳ್ಳಲು ನಾನು ಎಷ್ಟು ಯೋಚಿಸುತ್ತೇನೆ ಗೊತ್ತಾ. ನಾನು ನೀನು ಯಾಕೆ ಅಷ್ಟು ಕ್ಲೋಸ್ ಆಗಿದ್ಯಾ ಅಂತ ಒಂದು ಕಂಪ್ಲೇಟ್ ಕೂಡ ಮಾಡಿಲ್ಲ, ನಿನ್ನ ಲೈಫ್, ನೀನು ಏನು ಬೇಕಾದರೂ ಮಾಡಬಹುದು, ಹಾಗೆಯೇ ನನ್ನ ಲೈಫ್ ನಾನು ಏನು ಬೇಕಾದರೂ ಮಾಡಬಹುದು. ನಾನು ಏನು ಮಾಡಿಲ್ಲ ಆದರೂ ಎಲ್ಲರೆದುರು ಸಿಟ್ಟಿನಿಂದ ಬೈಯುವುದು ಎಷ್ಟು ಸರಿ ನಿನ್ನೆ ಕೂಡ ಹೀಗೆ ಮಾಡಿದ ಕಣ್ಣೀರಾಕಿದ್ದಾರೆ. ಇದನ್ನೂ ಓದಿ: ಶಮಂತ್ ಒಂದು ದಾರಿಯಲ್ಲಿ ನಡೆದು ಬಿಟ್ರೆ, ನಾನು ಚಾಲೆಂಜ್ ಮಾಡ್ತೇನೆ: ಚಕ್ರವರ್ತಿ

  • ಶುಭಾಗೆ ಆಟ ಮಂಜುಗೆ ಪರದಾಟ- ಬಿಗ್‍ಬಾಸ್ ಕೊಟ್ರು ಹೊಸ ಟ್ವಿಸ್ಟ್

    ಶುಭಾಗೆ ಆಟ ಮಂಜುಗೆ ಪರದಾಟ- ಬಿಗ್‍ಬಾಸ್ ಕೊಟ್ರು ಹೊಸ ಟ್ವಿಸ್ಟ್

    ಬಿಗ್‍ಬಾಸ್ ಪ್ರತಿವಾರ ಒಂದು ಆಟವನ್ನು ಕೊಟ್ಟು ಸ್ಪರ್ಧಿಗಳ ನಡುವೆ ನಡೆಯುವ ಸ್ಪರ್ಧೆಯನ್ನು ನೋಡುತ್ತಿರುತ್ತಾರೆ. ಪ್ರತಿ ಬಾರಿ ಮನೆಯಲ್ಲಿ ಗೇಮ್, ಜಗಳ ನೋಡಿ ಬೇಸರವಾದ ಬಿಗ್‍ಬಾಸ್ ವೀಕ್ಷಕರಿಗೆ ಇಂದು ನೀಡಿರುವ ಚಟುವಟಿಕೆ ಮಾತ್ರ ಸಖತ್ ಮಜಾವನ್ನು ಕೊಟ್ಟಿದೆ.

    ಬಿಗ್‍ಬಾಸ್‍ಮನೆಯಲ್ಲಿ ಕ್ಯೂಟ್ ಸ್ಪರ್ಧಿಯಾಗಿರುವ ಶುಭಾ, ಮಂಜುನನ್ನು ಹೆಚ್ಚಾಗಿ ಗೋಳಾಡಿಸುತ್ತಾ ಮಜಾ ತೆಗೆದುಕೊಳ್ಳುತ್ತಿರುತ್ತಾರೆ. ನಾವು ಈ ಹಿಂದೆ ಹಲವು ಸನ್ನಿವೇಶಗಳನ್ನು ನೋಡಿದ್ದೇವೆ. ಆದರೆ ಈ ಬಾರಿ ಮಂಜು ಮತ್ತು ಶುಭಾ ಅವರ ಕಿತಾಪತಿ ಮಾತ್ರ ಸಖತ್ ಕಾಮಿಡಿಯಾಗಿದೆ. ಇದನ್ನೂ ಓದಿ: ಮೂವರು ಅಡಿಕೆ ಕಳ್ಳರ ಬಂಧನ- 1,29,500 ರೂ. ಮೌಲ್ಯದ ಅಡಿಕೆ ವಶ

    ಬಿಗ್‍ಬಾಸ್ 2 ಗುಂಪುಗಳನ್ನು ಮಾಡಿದ್ದಾರೆ. ವಿಜಯಯಾತ್ರೆ, ನಿಂಗೈತೆ ಎಂದು 2 ತಂಡಗಳನ್ನು ಮಾಡಿದ್ದಾರೆ. ಶುಭಾ ವಿಜಯಯಾತ್ರೆ ತಂಡದ ಸದಸ್ಯರಾಗಿದ್ದಾರೆ. ಮಂಜು ನಿಂಗೈತೆ ತಂಡದ ಸದಸ್ಯರಾಗಿದ್ದಾರೆ. ಈ ವೇಳೆ ಬಿಗ್‍ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ವಿಜಯಯಾತ್ರೆ ತಂಡದ ಸದಸ್ಯ ಮನೆಯಲ್ಲಿರುವ ಬಾಗಿಲಿನ ಮೂಲಕವಾಗಿ ತೆರಳುವಾಗ ನಿಂಗೈತೆ ತಂಡದ ಸದಸ್ಯರು ಬಾಗಿಲನ್ನು ತೆರೆಯಬೇಕು ಎಂದು ಹೇಳಿದ್ದಾರೆ. ಇದನ್ನು ಲಾಭವಾಗಿ ಪಡೆದ ಶುಭಾ ಮಂಜುಗೆ ಇನ್ನಷ್ಟು ಕ್ಯೂಟ್ ಆಗಿ ಕಾಟ ಕೊಡಲು ಪ್ರಾರಂಭಿಸಿದ್ದಾರೆ. ಮಂಜು ನಾನು ಕ್ಯಾಪ್ಟನ್ ರೂಮ್ ಹೋಗಬೇಕು, ಬೆಡ್‍ರೂಮ್ ಹೋಗಬೇಕು ಎಂದು ಹೀಗೆ ಶುಭಾ ಮಂಜುಗೆ ತರತರವಾಗಿ ಕಾಟ ಕೊಟ್ಟು ತಮಾಷೆ ಮಾಡಿದ್ದಾರೆ. ಇದನ್ನು ಗಮನಿಸಿದ ಅರವಿಂದ್ ನಿನಗೆ ಮುಂದೆ ತೊಂದರೆಯಾಗಬಹುದು ಎಂದು ಶುಭಾಗೆ ಎಚ್ಚರಿಕೆಯನ್ನು ನೀಡಿದ್ದರು. ಶುಭಾ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮಂಜು ಕೈಯಲ್ಲಿ ಬಾಗಿಲು ತೆರೆಸುತ್ತಾ ತಮಾಷೆ ಮಾಡಿದ್ದಾರೆ. ಇದನ್ನೂ ಓದಿ:  ಜನಸಂಖ್ಯೆ ನಿಯಂತ್ರಣಕ್ಕೆ ಉತ್ತರಪ್ರದೇಶ ತಂದಿರುವ ಕ್ರಮ ಸ್ವಾಗತಿಸುತ್ತೇನೆ: ಈಶ್ವರಪ್ಪ

    ಬಿಗ್‍ಬಾಸ್ ಸ್ಪಲ್ಪ ಸಮಯದ ನಂತರ ಒಂದು ಸೂಚನೆಯನ್ನು ಕಳುಹಿಸುತ್ತಾರೆ. ವಿಜುಯಾತ್ರೆ ತಂಡದ ಸದಸ್ಯರು ಅಂಬೆಗಾಲಿನಲ್ಲಿ ಹೋಗಬೇಕು ನಡೆದಾಡುವಂತೆ ಇಲ್ಲ ಎಂದು ಸೂಚನೆ ನೀಡಿರುವುದನ್ನು ಮಂಜು ತಿಳಿಸುತ್ತಿದ್ದಂತೆ ಮನೆಮಂದಿ ಜೋರಾಗಿ ನಕ್ಕಿದ್ದಾರೆ. ಆಗ ಶುಭಾ ಅಂಬೆಗಾಲಿನಲ್ಲಿ ಬರುತ್ತಿರುವುದನ್ನು ನೋಡಿದ ಮಂಜು ಬಾ.. ಈಗ ನಿನಗೆ ಬಾಗಿಲು ತೆರೆಯುತ್ತೇನೆ. ನನ್ನ ಎದರು ಹಾಕಿಕೊಂಡವರು ತಲೆಬಗ್ಗಿಸಿ ಹೀಗೆ ಒಡಾಡಬೇಕು ಎಂದು ಹೇಳುತ್ತಾ ಮಂಜು ಶುಭಾಗೆ ಕೊಟ್ಟಿರುವ ಕಾಟವನ್ನು ನೆನೆಪಿಸಿಕೊಂಡು ತಮಾಷೆ ಮಾಡುತ್ತಿದ್ದಾರೆ. ಮಂಜು-ಶುಭಾ ಈ ಜುಗಲ್ ಬಂದಿ ಮಾತ್ರ ಸಖತ್ ಮಜಾವನ್ನು ಕೊಟ್ಟಿದೆ.