Tag: ಶುಭಂ ಕುಮಾರ್

  • ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ- ರಾಜ್ಯದ 18 ಮಂದಿ ಉತ್ತೀರ್ಣ

    ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ- ರಾಜ್ಯದ 18 ಮಂದಿ ಉತ್ತೀರ್ಣ

    – ಶುಭಂ ಕುಮಾರ್ ಟಾಪರ್
    – 77ನೇ ರ‍್ಯಾಂಕ್ ಪಡೆದು ಅಕ್ಷಯ್ ಸಿಂಹ ರಾಜ್ಯಕ್ಕೆ ಪ್ರಥಮ

    ನವದೆಹಲಿ: ಯುಪಿಎಸ್‍ಸಿ 2020ರ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 18 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ಒಟ್ಟು 836 ಮಂದಿ ಪಾಸ್ ಆಗಿದ್ದಾರೆ.

    ಶುಭಂ ಕುಮಾರ್ ಮೊದಲ ರ‍್ಯಾಂಕ್ ಪಡೆದಿದ್ದು, ಇವರು ಐಐಟಿ ಬಾಂಬೆಯಿಂದ ಬಿ.ಟೆಕ್ (ಸಿವಿಲ್ ಎಂಜಿನಿಯರಿಂಗ್) ಪದವಿ ಪಡೆದಿದ್ದಾರೆ. ಜಾಗೃತಿ ಅವಸ್ಥಿ 2ನೇ ರ‍್ಯಾಂಕ್ ಪಡೆದಿದ್ದು, ಮಹಿಳೆಯರಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಜಾಗೃತಿ ಅವಸ್ಥಿ ಅವರು ಎಲೆಕ್ಟ್ರಿಕ್ ಎಂಜಿನಿಯರ್ ಪದವಿ ಪಡೆದಿದ್ದಾರೆ. ಭೂಪಾಲ್‍ನ ಮನೀತ್ ಮೂಲದವರಾಗಿದ್ದಾರೆ. ಅಂಕಿತ್ ಜೈನ್ 3ನೇ ರ‍್ಯಾಂಕ್ ಗಳಿಸಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ

    ಒಟ್ಟು 836 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಐಎಎಸ್ ಹುದ್ದೆಗೆ 180, ಐಪಿಎಸ್ ಹುದ್ದೆಗೆ 200, ಐಎಫ್‍ಎಸ್ ಗೆ 36, ಕೇಂದ್ರೀಯ ಸೇವೆ ಗ್ರೂಪ್ ಎ ಹುದ್ದೆಗೆ 302 ಮತ್ತು ಗ್ರೂಪ್ ಬಿಗೆ 118 ಮಂದಿ ಆಯ್ಕೆಯಾಗಿದ್ದಾರೆ. ಟಾಪ್ 25 ಸ್ಥಾನಗಳಲ್ಲಿ 13 ಮಂದಿ ಪುರುಷರು ಮತ್ತು 12 ಮಹಿಳೆಯರು ಇದ್ದಾರೆ. ಇದನ್ನೂ ಓದಿ: ಅ. 1ರಿಂದ ಥಿಯೇಟರ್‌ಗಳು ಹೌಸ್‍ಫುಲ್- ಕಂಡೀಷನ್ಸ್ ಅಪ್ಲೈ

    ರಾಜ್ಯದ 18 ಮಂದಿ ಉತ್ತೀರ್ಣ
    ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕರ್ನಾಟಕದ 18 ಮಂದಿ ಉತ್ತೀರ್ಣರಾಗಿದ್ದಾರೆ. ಅಕ್ಷಯ್ ಸಿಂಹ 77ನೇ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕದ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಅಕ್ಷಯ್ ಸಿಂಹ ಮೂಲತಃ ಮಂಡ್ಯದವರು, ಹುಟ್ಟಿ ಬೆಳೆದಿದ್ದು ಬೆಂಗಳೂರು. ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆಯುವ ಮೂಲಕ ಅಕ್ಷಯ್ ಸಿಂಹ ಹೆಮ್ಮೆಗೆ ಪಾತ್ರರಾಗಿದ್ದಾರೆ.

    ಉಳಿದಂತೆ ಕನಕಪುರದ ಯತೀಶ್.ಆರ್ 115ನೇ ರ‍್ಯಾಂಕ್, ಮೈಸೂರಿನ ಪ್ರಿಯಾಂಕ.ಕೆ.ಎಂ. 121ನೇ ರ‍್ಯಾಂಕ್, ಮೈಸೂರಿನ ನಿಶ್ಚಯ್.ಆರ್ 130ನೇ ರ‍್ಯಾಂಕ್ ಪಡೆದಿದ್ದಾರೆ. ಸಿರಿವೆನ್ನಲ 204, ಬೆಂಗಳೂರಿನ ಅನಿರುಧ್ 252, ಸೂರಜ್ 255,  ನೇತ್ರ ಮೇಟಿ 326, ಮೇಘ ಜೈನ್ 354, ಪ್ರಜ್ವಲ್ 367, ಸಾಗರ್.ಎ.ವಾಡಿ 385, ನಾಗರಗೋಜೆ ಶುಭಂ 453, ಶಕೀರ್ ಅಹಮದ್ 583, ಪ್ರಮೋದ್ ಆರಾಧ್ಯ 601, ಸೌರಭ್.ಕೆ 725ನೇ ರ‍್ಯಾಂಕ್ ಪಡೆದಿದ್ದಾರೆ.