Tag: ಶುಗರ್ ಕುಕ್ಕೀಸ್

  • ಮೃದುವಾದ ಶುಗರ್ ಕುಕ್ಕೀಸ್ ಎಂದಾದ್ರೂ ಟ್ರೈ ಮಾಡಿದ್ದೀರಾ?

    ಮೃದುವಾದ ಶುಗರ್ ಕುಕ್ಕೀಸ್ ಎಂದಾದ್ರೂ ಟ್ರೈ ಮಾಡಿದ್ದೀರಾ?

    ನಾವು ಈ ಹಿಂದೆ ಮನೆಯಲ್ಲಿಯೇ ಸುಲಭವಾಗಿ ಚಾಕ್ಲೇಚ್ ಚಿಪ್ ಕುಕ್ಕೀಸ್, ಪೀನಟ್ ಬಟರ್ ಕುಕ್ಕೀಸ್ ಸೇರಿದಂತೆ ಇನ್ನಿತರ ಕುಕ್ಕೀಸ್ ರೆಸಿಪಿಗಳನ್ನು ಮಾಡುವುದು ಹೇಗೆಂದು ಹೇಳಿಕೊಟ್ಟಿದ್ದೇವೆ. ಇಂದು ನಾವು ಮೃದುವಾದ ಶುಗರ್ ಕುಕ್ಕೀಸ್ ಮಾಡೋದು ಹೇಗೆಂದು ಹೇಳಿಕೊಡುತ್ತಿದ್ದೇವೆ. ಸಂಜೆಯ ಸ್ನ್ಯಾಕ್ಸ್‌ಗೆ ಅಥವಾ ಬೋರ್ ಎನಿಸಿದಾಗ ಸವಿಯಲು ಈ ರೆಸಿಪಿ ಫರ್ಫೆಕ್ಟ್ ಆಗಿದೆ. ಶುಗರ್ ಕುಕ್ಕೀಸ್ ಮಾಡೋದು ಹೇಗೆಂದು ನೋಡಿಕೊಂಡು ಬರೋಣ.

    ಬೇಕಾಗುವ ಪದಾರ್ಥಗಳು:
    ಕೇಕ್ ಹಿಟ್ಟು – 2 ಕಪ್
    ಮೈದಾ ಹಿಟ್ಟು – ಅರ್ಧ ಕಪ್
    ಸಕ್ಕರೆ – 1 ಕಪ್
    ಇಡೀ ಮೊಟ್ಟೆ – 1
    ಮೊಟ್ಟೆಯ ಬಿಳಿ ಭಾಗ – 1
    ಬೆಣ್ಣೆ – ಕಾಲು ಕಪ್
    ಬೇಕಿಂಗ್ ಪೌಡರ್ – ಅರ್ಧ ಟೀಸ್ಪೂನ್
    ಟಾರ್ಟರ್ ಕ್ರೀಮ್ – ಕಾಲು ಟೀಸ್ಪೂನ್
    ವೆನಿಲ್ಲಾ ಸಾರ – 3 ಟೀಸ್ಪೂನ್
    ಮೃದುಗೊಳಿಸಿದ ಬೆಣ್ಣೆ – 1 ಕಪ್
    ಸಕ್ಕರೆ ಪುಡಿ – 4 ಕಪ್
    ಹೆವಿ ಕ್ರೀಮ್ – 5 ಟೀಸ್ಪೂನ್ ಇದನ್ನೂ ಓದಿ: 7 ಲೇಯರ್ ಚಿಕನ್ ಟಾಕೋ – ತರಕಾರಿ ಇದ್ರೂ ಮಕ್ಕಳು ಇಷ್ಟಪಟ್ಟು ಸವೀತಾರೆ

    ಮಾಡುವ ವಿಧಾನ:
    * ಮೊದಲಿಗೆ ಕೇಕ್ ಹಿಟ್ಟು, ಮೈದಾ, ಬೇಕಿಂಗ್ ಪೌಡರ್ ಹಾಗೂ ಟಾರ್ಟರ್ ಕ್ರೀಮ್ ಅನ್ನು ಒಂದು ಬೌಲ್‌ನಲ್ಲಿ ಮಿಶ್ರಣ ಮಾಡಿ.
    * ಇನ್ನೊಂದು ಬೌಲ್‌ನಲ್ಲಿ ಸಕ್ಕರೆ, ಬೆಣ್ಣೆ, ವೆನಿಲ್ಲಾ ಸಾರ, ಮೊಟ್ಟೆ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಎರಡೂ ಬೌಲ್‌ಗಳಲ್ಲಿರುವ ಮಿಶ್ರಣಗಳನ್ನು ಒಂದಕ್ಕೆ ಹಾಕಿ ಮಿಶ್ರಣ ಮಾಡಿ.
    * ಈಗ ಬೌಲ್ ಅನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ, ರಾತ್ರಿಯಿಡೀ ಫ್ರಿಜ್‌ನಲ್ಲಿ ಇಡಿ.
    * ಹಿಟ್ಟನ್ನು ಈಗ 4 ಇಂಚು ದಪ್ಪಕ್ಕೆ ರೋಲ್ ಮಾಡಿಕೊಳ್ಳಿ.
    * ಕುಕ್ಕೀಸ್ ಕಟರ್ ಬಳಸಿ ಹಿಟ್ಟಿಗೆ ಆಕಾರ ನೀಡಿ. ಬಳಿಕ ಓವನ್‌ನಲ್ಲಿ 10-15 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ.
    * ಈಗ ಅಲಂಕಾರ ಅಥವಾ ಫ್ರಾಸ್ಟಿಂಗ್ ಮಾಡಲು ಬೆಣ್ಣೆ ಮತ್ತು ಸಕ್ಕರೆ ಪುಡಿಯನ್ನು ಮಿಶ್ರಣ ಮಾಡಿ. ಹೆವಿ ಕ್ರೀಮ್ ಅನ್ನು ಸೇರಿಸಿ, ನಯವಾಗುವವರೆಗೆ ಬೀಟ್ ಮಾಡಿಕೊಳ್ಳಿ.
    * ಈಗ ಕುಕ್ಕೀಸ್‌ಗಳ ಮೇಲೆ ಕ್ರೀಮ್ ಹಚ್ಚಿ ಅಲಂಕರಿಸಿ.
    * ಇದೀಗ ಮೃದುವಾದ ಶುಗರ್ ಕುಕ್ಕೀಸ್ ತಯಾರಾಗಿದ್ದು, ಸವಿಯಲ ಸಿದ್ಧವಾಗಿದೆ. ಇದನ್ನು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಇದನ್ನೂ ಓದಿ: ಡೈರಿ ಫ್ರೀ – ಮೂರೇ ಪದಾರ್ಥ ಬಳಸಿ ಮಾಡಿ ಸಖತ್ ಟೇಸ್ಟಿ ಐಸ್‌ಕ್ರೀಮ್