Tag: ಶುಗರ್ ಕಾರ್ಖಾನೆ

  • ಮೈ ಶುಗರ್ ಫ್ಯಾಕ್ಟರಿಯಲ್ಲಿ ಸಾಕಷ್ಟು ಚಿತ್ರಗಳ ಶೂಟಿಂಗ್ ನಡೆದಿದೆ – ವಿರೋಧಿಗಳಿಗೆ ಸುಮಲತಾ ಕಿಡಿ

    ಮೈ ಶುಗರ್ ಫ್ಯಾಕ್ಟರಿಯಲ್ಲಿ ಸಾಕಷ್ಟು ಚಿತ್ರಗಳ ಶೂಟಿಂಗ್ ನಡೆದಿದೆ – ವಿರೋಧಿಗಳಿಗೆ ಸುಮಲತಾ ಕಿಡಿ

    ಮಂಡ್ಯ: ಮಂಡ್ಯದಲ್ಲಿ ಕೆಲವರು ಸಣ್ಣ ವಿಷಯಕ್ಕೆ ನನ್ನ ಹೆಸರು ತರುತ್ತಿದ್ದಾರೆ ಇದರಿಂದ ಜನರಿಗೆ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲು ಸಾಧ್ಯವಿಲ್ಲ, ವಿವೇಚನೆ ಇಲ್ಲದವರು ಹೀಗೆ ಮಾತನಾಡುತ್ತಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಕಿಡಿಕಾರಿದ್ದಾರೆ.

    ಮಂಡ್ಯದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಅವರ ಸಿನಿಮಾ ಮಂಡ್ಯದ ಮೈ ಶುಗರ್ ಕಾರ್ಖಾನೆಯಲ್ಲಿ ನಡೆಯುತ್ತಿರುವುದಕ್ಕೆ ಮಂಡ್ಯದಲ್ಲಿ ಒಂದಷ್ಟು ಜನ ನನ್ನ ಬಗ್ಗೆ ಕೆಲವರು ಕಮೆಂಟ್ ಮಾಡಿದ್ದಾರೆ. ಈ ಹಿಂದೆಯೂ ಸಹ ಮಂಡ್ಯ ಮೈ ಶುಗರ್ ಕಾರ್ಖಾನೆಯಲ್ಲಿ ಸಾಕಷ್ಟು ಚಿತ್ರಗಳು ಚಿತ್ರೀಕರಣವಾಗಿವೆ. ಇದು ಅಲ್ಲಿ ನಡೆಯುತ್ತಿರುವ ಮೊದಲ ಸಿನಿಮಾ ಅಲ್ಲ, ಹೀಗೆ ಇದ್ದರೂ ಕೆಲವರು ವಿವೇಚನೆ ಇಲ್ಲದೇ ಮಾತನಾಡುತ್ತಾರೆ. ಪ್ರತಿಯೊಂದಕ್ಕೂ ಅಡಚಣೆ ಮಾಡುತ್ತಾ ಇದ್ದರೆ ಒಳ್ಳೆಯ ಕೆಲಸ ಯಾವಾಗ ಮಾಡುತ್ತೀರಿ? ಎಲ್ಲಾ ನೆಗಿಟಿವ್ ಆಗಿ ಮಾತನಾಡಿ ವಿರೋಧ ಮಾಡಿಕೊಂಡು ಹೋದರೆ ಮಂಡ್ಯ ರೈತರಿಗೆ ವಿರೋಧಿಗಳಾಗುತ್ತೀರಿ ಎಂದು ಟಾಂಗ್ ನೀಡಿದರು.

    ಇನ್ನೂ ಅತೀ ಹೆಚ್ಚು ದಿಶಾ ಸಭೆ ನಡೆಸಿದ ಸಂಸದೆ ಎಂಬ ಹೆಗ್ಗಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಈ ಬಗ್ಗೆ ಸಂತಸವಾಗುತ್ತಿದೆ. ಕರ್ನಾಟಕದಲ್ಲಿ ನಂ1 ಇದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ಅಧಿಕಾರಿಗಳು ಈ ವಿಚಾರವನ್ನು ನನಗೆ ಹೇಳಿದರು. ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ. ನಾನು ಯಶಸ್ವಿಗೋಸ್ಕರ ಏನು ಮಾಡುತ್ತಿಲ್ಲ, ಜನರು ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಅಷ್ಟೇ. ಮುಂದೆಯೂ ಇದೇ ರೀತಿಯ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದರು.

  • ಕಾಂಗ್ರೆಸ್ ನಾಯಕ ರಾಜಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್

    ಕಾಂಗ್ರೆಸ್ ನಾಯಕ ರಾಜಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್

    ತುಮಕೂರು: ಸೆಪ್ಟೆಂಬರ್ 24 ರಂದು ಕೊರಿಯರ್ ನಲ್ಲಿ ನನಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿದೆ. ಅಕ್ಟೋಬರ್ 8 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಇಡಿ ಸಹಾಯಕ ನಿರ್ದೇಶಕರು ದೂರವಾಣಿ ಕರೆ ಮಾಡಿ 8 ರಂದು ದಸರಾ ಇರುವುದರಿಂದ ರಾತ್ರಿ 8ಕ್ಕೆ ಬರಲು ಹೇಳಿದರು. ನಂತರ ಇಮೇಲ್ ಮಾಡಿದ್ದು, 9 ರಂದು ಬರಲು ಸೂಚಿಸಿದ್ದಾರೆ. ಯಾವ ಕೇಸು, ಯಾವ ದಾಖಲೆ ಎನ್ನೋದು ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

    ನನ್ನ ಪ್ರಕಾರ ನಾವು ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್ ಕಂಪನಿಗೆ ಸಾಥ್ ಕೊಟ್ಟಿದ್ದೇವೆ. ಆ ಹಿನ್ನೆಲೆಯಲ್ಲಿ ಸಮನ್ಸ್ ನೀಡಿರಬಹುದು. ಅಪೆಕ್ಸ್ ಬ್ಯಾಂಕ್ ಆಡಿಯಲ್ಲಿ ಬರುವ ಕೆಲ ಬ್ಯಾಂಕ್‍ಗಳು ಸೇರಿಕೊಂಡು ಅವರಿಗೆ ಸುಮಾರು 300 ಕೋಟಿಯಷ್ಟು ಸಾಲ ನೀಡಿದ್ದೇವೆ. ಆದರಲ್ಲಿ ನಮ್ಮ ತುಮಕೂರು ಡಿಸಿಸಿ ಬ್ಯಾಂಕಿನಿಂದ ಹರ್ಷ ಶುಗರ್ಸ್ ಗೆ 25 ಕೋಟಿ ರೂ. ಸಾಲ ಕೊಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ನೋಟಿಸ್ ಬಂದಿರಬಹುದು. ಇದರ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮಧುಗಿರಿ ಜಿಲ್ಲೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದ ಜಿ.ಪರಮೇಶ್ವರ್ ಟಾಂಗ್ ಕೊಟ್ಟ ರಾಜಣ್ಣ, ಅವರು ಡಿಸಿಎಂ ಆಗಿದ್ದಾಗ ಯಾಕೆ ಮಧುಗಿರಿ ಜಿಲ್ಲೆ ಮಾಡಲಿಲ್ಲ. ಡಿಸಿಎಂ ಆಗಿ, ಜಿಲ್ಲಾ ಉಸ್ತುವಾರಿಯಾಗಿದ್ದರು. ಕಾಂಗ್ರೆಸ್‍ನಲ್ಲಿ ನಂಬರ್ ಒನ್ ಮುಖಂಡರಾಗಿದ್ದರು. ಎಲ್ಲಾ ಅಧಿಕಾರ ಇದ್ದಾಗ ಮಾಡದೇ ಇದ್ದವರು ಈಗ ಜಿಲ್ಲೆ ಮಾಡಿ ಎನ್ನಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿ ಕಿಡಿಕಾರಿದರು.

    ನಾನು ಚುನಾವಣಾ ಪ್ರಣಾಳಿಕೆಯಲ್ಲಿ ಮಧುಗಿರಿ ಜಿಲ್ಲೆ ಮಾಡುವ ಪ್ರಸ್ತಾಪ ಮಾಡಿದ್ದೆ. ಪಿಡಬ್ಲ್ಯುಡಿ ವಿಭಾಗ, ಆರ್‍ಟಿಓ ಎಲ್ಲ ಇದೆ. ಶೈಕ್ಷಣಿಕ ಜಿಲ್ಲೆ ಆಗಿದೆ. ಎಸ್‍ಪಿ ಮತ್ತು ಡಿಸಿ ಕಚೇರಿ ಹೊರತುಪಡಿಸಿದರೆ ಮಧುಗಿರಿಯಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳಿವೆ. ಆ ಮನುಷ್ಯನೇ ತೀರ್ಮಾನ ತೆಗೆದುಕೊಳ್ಳುವಾಗ ಮಾಡಲಿಲ್ಲ. ಈಗ ತಾನು ಏನೋ ಮಾಡೋಕೆ ಹೊರಟಿದ್ದೇನೆ ಎಂದು ತೋರಿಸಿಕೊಳ್ಳಲು ಪತ್ರ ಬರೆದಿದ್ದಾರೆ. ಮಧುಗಿರಿ ಜಿಲ್ಲೆ ಮಾಡಲು ನಾನೂ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೆನೆ. ಸೆಪ್ಟೆಂಬರ್ 9 ರಂದು ಭೇಟಿಯಾಗಿ ಮುಖ್ಯಮಂತಿ ಅವರನ್ನು ಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

  • ಮೈಶುಗರ್, ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆಗಳನ್ನು ಪುನರ್ ಆರಂಭಿಸಿ- ಸಿಎಂ ಬಿಎಸ್‍ವೈಗೆ ಎಸ್‍ಎಂಕೆ ಪತ್ರ

    ಮೈಶುಗರ್, ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆಗಳನ್ನು ಪುನರ್ ಆರಂಭಿಸಿ- ಸಿಎಂ ಬಿಎಸ್‍ವೈಗೆ ಎಸ್‍ಎಂಕೆ ಪತ್ರ

    ಬೆಂಗಳೂರು: ಮಂಡ್ಯ ಜಿಲ್ಲೆಯ ಮೈಶುಗರ್ ಮತ್ತು ಪಿಎಸ್‍ಎಸ್‍ಕೆ ಕಾರ್ಖಾನೆಗಳನ್ನು ಪುನರ್ ಆರಂಭಿಸುವಂತೆ ಮನವಿ ಮಾಡಿ ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯಲ್ಲಿ ವಾರ್ಷಿಕ 40 ರಿಂದ 50 ಟನ್ ಕಬ್ಬು ಬೆಳೆಯಲಾಗುತ್ತದೆ. ಮಂಡ್ಯದಲ್ಲಿ ಉತ್ಪಾದನೆಯಾಗುವ  ಸಂಪೂರ್ಣ ಕಬ್ಬನ್ನು ಅರೆಯುವ ಸಾಮರ್ಥ್ಯ ಈಗ ಇರುವ 3 ಕಾರ್ಖಾನೆಗಳಿಂದ ಆಗುತ್ತಿಲ್ಲ ಎಂದು ಪತ್ರದಲ್ಲಿ ಎಂಎಸ್‍ಕೆ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಸಿಎಂ ಮುಂದಿಟ್ಟಿದ್ದಾರೆ.

    ಪತ್ರದಲ್ಲಿ ಏನಿದೆ?
    ಮಂಡ್ಯ ಜಿಲ್ಲೆಯ ಮೈಶುಗರ್ ಮತ್ತು ಪಿಎಸ್‍ಎಸ್‍ಕೆ ಕಾರ್ಖಾನೆಗಳನ್ನು ಪುನರ್ ಆರಂಭಿಸಲು ಹಾಗೂ ಮಂಡ್ಯದಲ್ಲಿ ಏರಿಕೆಯಾಗಿರುವ ನೀರಿನ ದರದ ವಿರುದ್ಧ ವಿವಿಧ ಸಂಘಟನೆಗಳು ಅಮರಣಾಂತ ಉಪವಾಸ ಕೈಗೊಂಡಿರುವ ವಿಷಯ ತಿಳಿದು ನೋವುಂಟಾಗಿದೆ.

    ಜಿಲ್ಲೆಯಲ್ಲಿ ಕಬ್ಬು ಪ್ರಮುಖ ಬೆಳೆಯಾಗಿದ್ದು, ಪ್ರತಿವರ್ಷ ಸುಮಾರು 40 ರಿಂದ 50 ಲಕ್ಷ ಟನ್ ಕಬ್ಬನ್ನು ಬೆಳೆಯಲಾಗುತ್ತಿದೆ. ಪ್ರಸ್ತುತ ಕೇವಲ 3 ಖಾಸಗಿ ಕಾರ್ಖಾನೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಆ ಕಾರ್ಖಾನೆಗಳಿಗೆ ಮಂಡ್ಯದಲ್ಲಿ ಉತ್ಪಾದನೆಯಾಗುತ್ತಿರುವ ಎಲ್ಲಾ ಕಬ್ಬನ್ನು ಅರೆಯುವ ಸಾಮಥ್ರ್ಯ ಇಲ್ಲದಿರುವುದರಿಂದ ಹೆಚ್ಚು ಕಬ್ಬನ್ನು ಅರೆಯುವ ಸಾಮಥ್ರ್ಯವುಳ್ಳ ಮೈಶುಗರ್ ಮತ್ತು ಪಿಎಸ್‍ಎಸ್‍ಕೆ ಕಾರ್ಖಾನೆಗಳನ್ನು ಪುನರ್ ಆರಂಭಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಸ್ಥಗಿತಗೊಂಡಿರುವ ಕಾರ್ಖಾನೆಗಳನ್ನು ಪುನರ್ ಆರಂಭಿಸಿ ಸಂಕಷ್ಟದಲ್ಲಿ ಮತ್ತು ಆತ್ಮಹತ್ಯೆ ಯೋಚನೆಯಲ್ಲಿರುವ ರೈತರನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸುತ್ತೇನೆ ಎಂದು ಎಂಎಸ್ ಕೃಷ್ಣ ಅವರು ತಿಳಿಸಿದ್ದಾರೆ.