Tag: ಶುಗರ್

  • ಐಸಿಯುನಲ್ಲಿ ಸ್ಯಾಂಟ್ರೋ ರವಿಗೆ ಚಿಕಿತ್ಸೆ- ಸಂಜೆ ಡಿಸ್ಚಾರ್ಜ್?

    ಐಸಿಯುನಲ್ಲಿ ಸ್ಯಾಂಟ್ರೋ ರವಿಗೆ ಚಿಕಿತ್ಸೆ- ಸಂಜೆ ಡಿಸ್ಚಾರ್ಜ್?

    ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸ್ಯಾಂಟ್ರೋ ರವಿ (Santro Ravi) ಗೆ ಸದ್ಯ ಐಸಿಯು (ICU) ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ ಶುಗರ್ ಲೋ ಆಗೋದಕ್ಕೆ ಮಾತ್ರೆಯನ್ನ ತೆಗೆದುಕೊಳ್ತಾರೆ. ಆದರೆ ಸ್ಯಾಂಟ್ರೋ ರವಿ ಏಕಕಾಲಕ್ಕೆ 10 ಮಾತ್ರೆ ತೆಗದುಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಇಂದು ಸಂಜೆ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

    ಸ್ಯಾಂಟ್ರೋ ರವಿ ಹೆಚ್ಚು ಮಾತ್ರೆ ನುಂಗಿದ್ದಾನೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ವಿಕ್ಟೋರಿಯಾ (Victoria Hospital) ವೈದ್ಯಕೀಯ ಅಧಿಕ್ಷಕರಿಂದ ಅಧಿಕೃತ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಏನಿದು ಘಟನೆ..?: ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಟ್ರೋ ರವಿಯನ್ನು ಸಿಐಡಿ ಪೊಲೀಸರು ಗುರುವಾರ ಸಂಜೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಶುಗರ್ 400 ಕ್ಕೂ ಅಧಿಕವಾಗಿತ್ತು. ಈ ಹಿನ್ನೆಲೆ ವಿಕ್ಟೋರಿಯಾಗೆ ದಾಖಲಿಸಲಾಗಿತ್ತು.

    ಶುಗರ್, ಬಿಪಿ ಸೇರಿ ಹಲವು ಸಮಸ್ಯೆಯಿಂದ ಬಳಲುತ್ತಿರುವ ಸ್ಯಾಂಟ್ರೋ ರವಿ, ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ನಾ ಎಂಬ ಅನುಮಾನ ಮೂಡಿದೆ. ಸ್ಯಾಂಟ್ರೋ ರವಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆ ಬಳಿ ಭದ್ರತೆ ಹೆಚ್ಚಿಸಿದ್ದಾರೆ. ಭದ್ರತೆಗೆ ಕೆಎಸ್ ಆರ್ ಪಿ ತುಕಡಿ ಪೊಲೀಸರ ನಿಯೋಜನೆ ಮಾಡಲಾಗಿದೆ.

    ಸ್ಯಾಂಟ್ರೋ ರವಿಯನ್ನು ಜನವರಿ 30 ರವರೆಗೂ ಸಿಐಡಿ ಕಸ್ಟಡಿಗೆ ನ್ಯಾಯಾಲಯ ಅದೇಶ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಪಿ, ಶುಗರ್ ಮಾತ್ರೆಯಲ್ಲಿದೆ ಪ್ಲಾಸ್ಟಿಕ್ ಅಂಶ: ಮಹಿಳೆ ಆರೋಪ

    ಬಿಪಿ, ಶುಗರ್ ಮಾತ್ರೆಯಲ್ಲಿದೆ ಪ್ಲಾಸ್ಟಿಕ್ ಅಂಶ: ಮಹಿಳೆ ಆರೋಪ

    ಹಾಸನ: ಶುಗರ್ ಹಾಗೂ ಬಿಪಿ ಮಾತ್ರೆಯಲ್ಲೂ ಮನುಷ್ಯನಿಗೆ ಮಾರಕವಾಗುವ ಪ್ಲಾಸ್ಟಿಕ್ ಅಂಶ ಇದೆ ಎಂದು ಮಹಿಳಾ ರೋಗಿಯೊಬ್ಬರು ಆರೋಪ ಮಾಡುತ್ತಿದ್ದು, ಮಾತ್ರೆಗಳ ಕ್ವಾಲಿಟಿ ಬಗ್ಗೆ ಆತಂಕ ಮೂಡಿಸಿದೆ.

    ಶುಗರ್ ಕಾಯಿಲೆ ಹೊಂದಿರುವ ಸಕೀನ ಎಂಬ ಮಹಿಳೆಯೊಬ್ಬರು, ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಮೆಡಿಕಲ್ ಶಾಪ್ ಒಂದರಲ್ಲಿ ಮಾತ್ರೆ ಖರೀದಿ ಮಾಡಿದ್ದರು. ಆದರೆ ಆ ಮಾತ್ರೆ ನುಂಗಿದ ನಂತರ ಮಹಿಳೆ ಆರೋಗ್ಯದಲ್ಲಿ ಪದೇ ಪದೇ ವ್ಯತ್ಯಯ ಆಗುತ್ತಿತ್ತು.

    ಹೀಗಾಗಿ ಮಹಿಳೆ ಮಾತ್ರೆಯನ್ನು ನೀರಿನಲ್ಲಿ ನೆನೆಸಿ ಟೆಸ್ಟ್ ಮಾಡಿದ್ದಾರೆ. ಆದರೆ ಎಷ್ಟು ನೆನೆಸಿದರೂ ನೀರಿನಲ್ಲಿ ಮಾತ್ರೆ ಕರಗದೇ ಇದ್ದಿದ್ರಿಂದ ಕಂಗಾಲಾದ ಮಹಿಳಾ ರೋಗಿ ಮಾತ್ರೆಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಬೇಕು ಎಂದು ಮನವಿ ಮಾಡುತ್ತಿದ್ದು, ಒಂದು ವೇಳೆ ಮಾತ್ರೆಯಲ್ಲಿ ಮಾರಕ ಪ್ಲಾಸ್ಟಿಕ್ ಅಂಶ ಪತ್ತೆಯಾದರೆ ಅದನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

  • ಕುಮಾರಸ್ವಾಮಿಗಾಗಿ ಎದುರು ನೋಡುತ್ತಾ ಕಾಯುತ್ತಿದ್ದಾರೆ ಚಿಕ್ಕಮಗ್ಳೂರಿನ ಪದವೀಧರ!

    ಕುಮಾರಸ್ವಾಮಿಗಾಗಿ ಎದುರು ನೋಡುತ್ತಾ ಕಾಯುತ್ತಿದ್ದಾರೆ ಚಿಕ್ಕಮಗ್ಳೂರಿನ ಪದವೀಧರ!

    ಚಿಕ್ಕಮಗಳೂರು: ಕಳೆದ ನಾಲ್ಕೈದು ವರ್ಷದಿಂದ ಬಿಪಿ ಹಾಗೂ ಶುಗರ್‍ನಿಂದ ಬಳಲುತ್ತಿರೋ 24 ವರ್ಷದ ಪದವೀಧರ ಯುವಕನೊಬ್ಬ ನಾನು ಮೃತಪಡುವ ಮುನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ನೋಡಬೇಕೆಂದು ಹಂಬಲಿಸುತ್ತಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಹೋಬಳಿಯ ಹಿರೇಗರ್ಜೆ ಗ್ರಾಮದ ಜಗದೀಶ್ ಕಳೆದ ನಾಲ್ಕೈದು ವರ್ಷಗಳಿಂದ ಬಿಪಿ ಹಾಗೂ ಶುಗರ್‍ನಿಂದ ಬಳಲುತ್ತಿದ್ದಾರೆ. 80 ಕೆ.ಜಿ. ಇದ್ದ ಈ ಯುವಕ ಇಂದು ಇರೋದು 15-16 ಕೆ.ಜಿ. ಮಲಗಿದ್ದಲ್ಲೇ ಎಲ್ಲಾ. ಸದಾ ಇವರ ಸೇವೆಗೆ ಮನೆಯಲ್ಲಿ ಒಬ್ಬರು ಇರಲೇಬೇಕು.

    ಕೂಲಿ ಮಾಡುವ ಹೆತ್ತವರು ನಾಲ್ಕೈದು ಲಕ್ಷ ಖರ್ಚು ಮಾಡಿದ್ದರೂ ಮಗನನನ್ನ ಹುಷಾರು ಮಾಡಲು ಸರಿಯಾಗದೆ ಕೈಚೆಲ್ಲಿ ಕೂತಿದ್ದಾರೆ. ದಿನದಿಂದ ದಿನಕ್ಕೆ ಆರೋಗ್ಯದ ಸ್ಥಿತಿ ಹದಗೆಡ್ತಿರೋ ಜಗದೀಶ್‍ಗೆ ಸಾಯುವ ಮುನ್ನ ಕುಮಾರಸ್ವಾಮಿಯನ್ನ ನೋಡುವ ಹಂಬಲ ವ್ಯಕ್ತಪಡಿಸಿದ್ದಾರೆ.

    ನಾನು ಸಾಯುವ ಮುನ್ನ ಶಾಸಕ ವೈ.ಎಸ್.ವಿ ದತ್ತ ಹಾಗೂ ಕುಮಾರಸ್ವಾಮಿಯನ್ನ ನೋಡಬೇಕೆಂಬ ಆಸೆ ಹೊಂದಿದ್ದೇನೆ. ಆದ್ರೆ, ಶಾಸಕ ದತ್ತ ಅವರು ಬಂದು ನೋಡಿಕೊಂಡು ಹೋಗಿದ್ದಾರೆ. ಇದೀಗ ಕೊನೆ ಬಾರಿ ಕುಮಾರಸ್ವಾಮಿಯನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ.

  • ಬಾಬಾರ ಬಳಿಯಿಂದ ನಾಟಿ ಔಷಧಿ ಪಡೆದ ಚಿತ್ರದುರ್ಗದ ಪೇದೆ ಸಾವು

    ಬಾಬಾರ ಬಳಿಯಿಂದ ನಾಟಿ ಔಷಧಿ ಪಡೆದ ಚಿತ್ರದುರ್ಗದ ಪೇದೆ ಸಾವು

    ಚಿತ್ರದುರ್ಗ: ಮಧುಮೇಹಕ್ಕೆ ನಾಟಿ ಔಷಧ ಪಡೆದು ಕೋಮಾಗೆ ತೆರಳಿದ್ದ ಮುಖ್ಯಪೇದೆ ಮೃತಪಟ್ಟ ಘಟನೆ ನಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಡಿವೈಎಸ್.ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲಿಸ್ ಪೇದೆ ಕಲೀಮುಲ್ಲಾ (43) ಎಂಬವರೇ ಮೃತ ದುರ್ದೈವಿ. ಕಳೆದ ಮೂರು ದಿನಗಳ ಹಿಂದೆ ಶುಗರ್ ಹೆಚ್ಚಾಗಿರುವುದಕ್ಕೆ ನಾಟಿ ಔಷಧಿ ಸೇವಿಸಿದ್ದರು.

    ಮೂರು ದಿನಗಳ ಹಿಂದೆ ಪೇದೆ ಬಾಬಾರೊಬ್ಬರ ಬಳಿ ತೆರಳಿ ಶುಗರ್ ತೀವ್ರಗೊಂಡಿರುವುದಕ್ಕೆ ನಾಟಿ ಔಷಧದ ರೂಪದಲ್ಲಿ ವಿಷಪೂರಿತ ಕಾಡಿನ ಬಳ್ಳಿ ರಸವನ್ನು ಮುಖ್ಯಪೇದೆ ಸೇವಿಸಿದ್ದರು. ಆ ಬಳಿಕ ಅವರು ಪ್ರಜ್ಞೆ ಕಳೆದುಕೊಂಡು ಕೋಮಾಗೆ ತೆರಳಿದ್ದರು.

    ಅಂತೆಯೇ ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪೇದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ.