Tag: ಶುಕ್ರವಾರ

  • ಏನಿದು Unlucky Day – 13ನೇ ತಾರೀಖು, ಶುಕ್ರವಾರ ಒಟ್ಟಿಗೆ ಬಂದರೆ ಏನಾಗುತ್ತೆ?

    ಏನಿದು Unlucky Day – 13ನೇ ತಾರೀಖು, ಶುಕ್ರವಾರ ಒಟ್ಟಿಗೆ ಬಂದರೆ ಏನಾಗುತ್ತೆ?

    ಗತ್ತಿನಲ್ಲಿ ಅತ್ಯಂತ ದುರದೃಷ್ಟಕರ ದಿನವೆಂದರೆ ಅದು ಶುಕ್ರವಾರ ಹಾಗೂ 13ನೇ ತಾರೀಖು ಒಟ್ಟಿಗೆ ಬರುವುದು ಎಂದು ಹೇಳುತ್ತಾರೆ. ಇದನ್ನು ವಿಶ್ವದ Unlucky Day ಎಂದು ಹೇಳಲಾಗುತ್ತದೆ. ಆದರೆ ಈ ರೀತಿ ಇವರೆಡು ಒಟ್ಟಿಗೆ ಬರುವುದು ತುಂಬಾ ಅಪರೂಪ. ಒಂದು ವೇಳೆ ಒಟ್ಟಿಗೆ ಬಂದರೆ ಏನೋ ದುರಂತ ಸಂಭವಿಸಬಹುದು ಎಂಬ ನಂಬಿಕೆಯೂ ಇದೆ.

    ಇದನ್ನು ಬಾಯಿ ಮಾತಿನಿಂದ ಹೇಳಿಕೊಂಡು ಬರುತ್ತಿರುವುದಲ್ಲ. ಕೆಲವು ಧರ್ಮಗ್ರಂಥಗಳು ಕೂಡ ಇದನ್ನು ಪಾಲಿಸಿಕೊಂಡು ಬಂದಿವೆ. ಹೌದು, ಶತಮಾನಗಳಷ್ಟು ಹಳೆಯದಾದ ಕ್ರೈಸ್ತರ ಧರ್ಮ ಗ್ರಂಥ ಬೈಬಲ್‌ನಲ್ಲಿ ಇದು ಕಂಡುಬಂದಿದೆ.

    ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ 13ನೇ ತಾರೀಖಿನ ಶುಕ್ರವಾರವನ್ನ ದುರದೃಷ್ಟಕರ ದಿನವೆಂದು ನಂಬಲಾಗಿದೆ. ತಿಂಗಳ 13ನೇ ದಿನವು ಶುಕ್ರವಾರದಂದು ಬಂದರೆ ಆ ದಿನ ಏನೋ ದುರಂತ ಸಂಭವಿಸುತ್ತದೆ ಎಂದು ನಂಬಿಕೆಯೂ ಇದೆ. ಸಾಮಾನ್ಯವಾಗಿ ಈ ರೀತಿ ವರ್ಷದಲ್ಲಿ ಒಮ್ಮೆಯಾದರೂ ಸಂಭವಿಸುತ್ತದೆ. ಕೆಲವೊಮ್ಮೆ ಮೂರು ಬಾರಿಯೂ ಸಂಭವಿಸುತ್ತದೆ.

    ಆರಂಭವಾಗಿದ್ದು ಹೇಗೆ?
    ಯೇಸುನ ಕ್ರಿಸ್ತನ ಕಾಲದಲ್ಲಿ 13ನೇ ಅತಿಥಿಯಾಗಿದ್ದ ಜುದಾಸ್ ಶುಕ್ರವಾರದಂದು ಭೋಜನದ ವೇಳೆ ಯೇಸುವಿಗೆ ದ್ರೋಹ ಬಗೆದನು. ಇದರಿಂದಾಗಿ ಯೇಸುವನ್ನು ಶಿಲುಬೆಗೇರಿಸಲಾಯಿತು. ಇನ್ನೂ ಫ್ರಾನ್ಸ್‌ನ ರಾಜ ನಾಲ್ಕನೇ ಫಿಲಿಪ್ ಆದೇಶದ ಮೇರೆಗೆ 1307 ರಲ್ಲಿ ಅಕ್ಟೋಬರ್‌ 13 ಶುಕ್ರವಾರದಂದು ನೈಟ್ಸ್ ಟೆಂಪ್ಲರ್‌ ಬಂಧನವಾಯಿತು. ಅಂದಿನಿಂದ ಈ ದಿನವನ್ನು ದುರದುಷ್ಟಕರ ದಿನವೆಂದು ಹೇಳಲಾಗುತ್ತದೆ.

    ಅದಾದ ಬಳಿಕ 1980ರಲ್ಲಿ ಬಿಡುಗಡೆಯಾದ ‘Friday The 13’ ಎಂಬ ಚಿತ್ರದೊಂದಿಗೆ ‌ಈ ಮೂಢನಂಬಿಕೆ ಮತ್ತಷ್ಟು ಪ್ರಸಿದ್ಧಿ ಪಡೆಯಿತು. ವಿನಾಶ ಮತ್ತು ಭಯೋತ್ಪಾದನೆಯಂತಹದನ್ನು ಈ ಸಿನಿಮಾದ ಮೂಲಕ ತೋರಿಸಿ ಭಯಹುಟ್ಟಿಸಿತ್ತು. ಹೀಗಾಗಿ ಆಗದಿಂದಲೇ ಈ ದಿನವನ್ನು ದುರದೃಷ್ಟ ಎನ್ನುತ್ತಾ ಬಂದಿದ್ದಾರೆ. ಆದರೆ ಹೆಚ್ಚಿನ ಜನರಿಗೆ ಈ ದಿನದಂದು ನಿಜಕ್ಕೂ ಏನಾಗಿತ್ತು ಎನ್ನುವುದು ಗೊತ್ತಿಲ್ಲ. ಆದರೂ ಈ ದಿನವನ್ನು ದ್ವೇಷಿಸುವವರಿದ್ದಾರೆ. ಹೀಗಾಗಿ ಜಗತ್ತಿನಾದ್ಯಂತ ಹೆಚ್ಚಿನ ಜನರು ಈ ದಿನದಂದು ಭಯಭೀತರಾಗುತ್ತಾರೆ.

    13ನೇ ತಾರೀಖು ಹಾಗೂ ಶುಕ್ರವಾರ ಒಟ್ಟಿಗೆ ಬಂದಾಗ ಸಂಭವಿಸಿದ ದುರ್ಘಟನೆಗಳು?

    1989ರ ಜನವರಿ 13: ಈ ದಿನದಂದು ಗ್ರೇಟ್ ಬ್ರಿಟನ್‌ನಾದ್ಯಂತ ನೂರಾರು ಐಬಿಎಂ ಕಂಪ್ಯೂಟರ್‌ಗಳ ಮೇಲೆ ವೈರಸ್ ಅಟ್ಯಾಕ್‌ ಆಗಿತ್ತು. ಬಹಳಷ್ಟು ಫೈಲ್ಸ್‌ಗಳನ್ನು ಅಳಿಸಿಹಾಕಿತ್ತು. ಅಂದು ಭಾರೀ ಮಟ್ಟದಲ್ಲಿ ಸುದ್ದಿಯಾಗಿತ್ತು.

    1970ರ ನವೆಂಬರ್ 13: ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ದಕ್ಷಿಣ ಏಷ್ಯಾದ ಬೃಹತ್ ಚಂಡಮಾರುತವು ಸುಮಾರು 3,00,000 ಜನರನ್ನು ಬಲಿ ಪಡೆದುಕೊಂಡಿತು. ಪ್ರವಾಹದಿಂದಾಗಿ ಗಂಗಾ ನದಿ ಮುಖಜ ಭೂಮಿಯಲ್ಲಿ 1 ಮಿಲಿಯನ್ ಜನರು ಸಾವನ್ನಪ್ಪಿದರು.

    1996ರ ಸೆಪ್ಟೆಂಬರ್ 13: ರ‍್ಯಾಪರ್ ಟುಪಕ್ ಶಕೂರ್ ಲಾಸ್ ವೇಗಾಸ್‌ನಲ್ಲಿ BMWನಲ್ಲಿ ಹೊರಟಾಗ ಗುಂಡಿನ ದಾಳಿಯಿಂದಾಗಿ ಸಾವನ್ನಪ್ಪಿದ್ದರು.

    1997 ಜೂನ್ 13 : ದೆಹಲಿಯಲ್ಲಿ ಉಪಹಾರ್ ಸಿನಿಮಾ ದುರಂತ ಸಂಭವಿಸಿತ್ತು. ಈ ವೇಳೆ 59 ಜನ ಸಾವನ್ನಪ್ಪಿದರು.

    2012ರ ಜನವರಿ 13: ಕ್ರೂಸ್ ಹಡಗು ಕೋಸ್ಟಾ ಕಾನ್ಕಾರ್ಡಿಯಾ ಟಸ್ಕನಿಯ ಕರಾವಳಿಯಲ್ಲಿ ಮಗುಚಿದ ಪರಿಣಾಮ 32 ಜನರು ಸಾವನ್ನಪ್ಪಿದ್ದರು.

  • ಬೆಲೆ ಏರಿಕೆ ಖಂಡಿಸಿ ಭಾರತ ಬಂದ್‍ಗೆ ಕರೆ

    ಬೆಲೆ ಏರಿಕೆ ಖಂಡಿಸಿ ಭಾರತ ಬಂದ್‍ಗೆ ಕರೆ

    ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆ, ಸರಕು ಮತ್ತು ಸೇವಾ ತೆರಿಗೆ, ಇ-ಬಿಲ್ ಇತ್ಯಾದಿಗಳನ್ನು ವಿರೋಧಿಸಿ ಶುಕ್ರವಾರ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಭಾರತ್ ಬಂದ್‍ಗೆ ಕರೆ ನೀಡಿದೆ. ಭಾರತ ಬಂದ್‍ಗೆ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ(ಎಐಟಿಡಬ್ಲೂಎ) ಕೂಡ ಬೆಂಬಲ ನೀಡುತ್ತಿದ್ದು, ಫೆಬ್ರವರಿ 26ರಂದು ಚಕ್ಕಾ ಜಾಮ್ ನಡೆಸಲಿದ್ದಾರೆ.

    ಹೇಗಿರಲಿದೆ ಬಂದ್?:
    * ಸುಮಾರು 40,000ಕ್ಕೂ ಹೆಚ್ಚು ವ್ಯಾಪಾರಿಗಳ ಸಂಘ ಬಂದ್‍ನಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆ ದೇಶಾದ್ಯಂತ ಎಲ್ಲಾ ವಾಣಿಜ್ಯ ಮಾರುಕಟ್ಟೆಗಳು ಮುಚ್ಚಲಾಗುತ್ತದೆ.
    * ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿರುವುದರಿಂದ ಬೆಳಗ್ಗೆ 6ರಿಂದ ರಾತ್ರಿ 8ರವರೆಗೂ ಸಾರಿಗೆ ಸಂಸ್ಥೆಗಳ ಸಂಘ(ಎಐಟಿಡಬ್ಲೂಎ) ಹಾಗೂ ಎಲ್ಲಾ ಸಾರಿಗೆ ಸಂಸ್ಥೆಗಳಿಗೆ ಸಂಚಾರ ಸ್ಥಗಿತಗೊಳಿಸುವುದಾಗಿ ಸೂಚಿಸಲಾಗಿದೆ.
    * ಬುಕಿಂಗ್ ಹಾಗೂ ಬಿಲ್ ಆಧಾರಿತ ಸರಕುಗಳ ಸಾಗಣೆಗೆ ತಡೆ.
    * ರಾಷ್ಟ್ರವ್ಯಾಪ್ತಿ 1,500 ಸ್ಥಳಗಳಲ್ಲಿ ಧರಣಿ ನಡೆಸಲಾಗುತ್ತದೆ.
    * 40 ಲಕ್ಷ ರಸ್ತೆಗಳು ಶುಕ್ರವಾರ ಬಂದ್
    * ಆಲ್ ಇಂಡಿಯಾ ಮೋಟರ್ ಟ್ರಾನ್ಸ್‍ಪೋರ್ಟ್ ಕಾಂಗ್ರೆಸ್(ಎಐಎಂಟಿಸಿ) ಮತ್ತು ಭೈಚರಾ ಆಲ್ ಇಂಡಿಯಾ ಟ್ರಕ್ ಆಪರೇಟರ್ ವೆಲ್‍ಫೆರ್ ಅಸೋಸಿಯೆಟ್(ಬಿಎಐಟಿಓಡಬ್ಲೂಎ) ಬಂದ್‍ನಲ್ಲಿ ಭಾಗವಹಿಸುತ್ತಿಲ್ಲ.

    ಜಿಎಸ್‍ಟಿ ವ್ಯವಸ್ಥೆಯಲ್ಲಿನ ತೆರಿಗೆಗಳನ್ನು ಕಡಿತಗೊಳಿಸಲು ಮತ್ತು ಅನೇಕ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಲಾಗುತ್ತದೆ. ಇ-ವೇ ಬಿಲ್ ಕಾನೂನುಗಳನ್ನು ರದ್ದುಗೊಳಿಸುವಂತೆ ಮತ್ತು ಇಂಧನ ಬೆಲೆಯನ್ನು ಖಂಡಿಸಿ ಸಾರಿಗೆ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಜಿಎಸ್‍ಟಿ ಕಾನೂನಿಂದ 100 ಕಿ.ಮೀನಿಂದ 200ಕಿ.ಮೀ ವರೆಗೂ ಅಂತರವನ್ನು ಹೆಚ್ಚಿಸಿರುವ ಇ-ಬಿಲ್‍ನನ್ನು ಕಡಿತಗೊಳಿಸುವಂತೆ ಪ್ರತಿಭಟನೆ ನಡೆಸಲಾಗುತ್ತದೆ.

  • ಬೀದರ್ ಜಿಲ್ಲೆಯ ಗ್ರಾಮದಲ್ಲಿ ಶುಕ್ರವಾರ ನಡೆಯಲ್ಲ ಯಾವುದೇ ಶುಭಕಾರ್ಯ

    ಬೀದರ್ ಜಿಲ್ಲೆಯ ಗ್ರಾಮದಲ್ಲಿ ಶುಕ್ರವಾರ ನಡೆಯಲ್ಲ ಯಾವುದೇ ಶುಭಕಾರ್ಯ

    ಬೀದರ್: ಶುಕ್ರವಾರ ಅಂದ್ರೆ ಶುಭ ದಿನ ಅಂತ ಎಲ್ಲರೂ ಭಾವಿಸ್ತಾರೆ. ಅದಕ್ಕೆ ಸಿನಿಮಾಗಳು ತೆರೆಗೆ ಅಪ್ಪಳಿಸಿದ್ರೆ, ಹಲವೆಡೆ ದೇವಿ ಪೂಜೆ ನಡೆಸ್ತಾರೆ. ಮುಸ್ಲಿಮರು ನಮಾಜ್ ಮಾಡಿ ಪ್ರಾರ್ಥಿಸುತ್ತಾರೆ. ಆದ್ರೆ ಬೀದರ್ ಜಿಲ್ಲೆಯ ಫತ್ತೇಪೂರ್ ಗ್ರಾಮದಲ್ಲಿ ಶುಕ್ರವಾರ ಯಾವುದೇ ಶುಭಕಾರ್ಯಗಳು ನಡೆಯಲ್ಲ.

    ಫತ್ತೆಪೂರ್ ಗ್ರಾಮದ ಜನರಿಗೆ ‘ಶುಕ್ರವಾರ’ ಅಂದ್ರೆ ಕರಾಳ ದಿನ. 100 ವರ್ಷದಿಂದ ಇಲ್ಲಿ ಶುಭಕಾರ್ಯ ನಡೆದಿಲ್ಲ ಎಂಬುವುದು ಗ್ರಾಮಸ್ಥರ ಮಾತು. ಇದೆಲ್ಲ ಮೂಢನಂಬಿಕೆ ಅಂತ ಲಕ್ಷ್ಮಿ ಎಂಬವರಿಗೆ ವರ್ಷದ ಹಿಂದೆ ಶುಕ್ರವಾರ ಮದುವೆ ಮಾಡಲಾಯ್ತು. ಮದುವೆ ಮಾಡಿದ 15 ದಿನಗಳಲ್ಲಿ ಲಕ್ಷ್ಮಿ ಸಾವನ್ನಪ್ಪಿದ್ದರು. 3 ವರ್ಷಗಳ ಹಿಂದೆ ಅಣ್ಣರೈ ಎಂಬವರು ಮಗವಿನ ತೊಟ್ಟಿಲು ಕಾರ್ಯಕ್ರಮ ಮಾಡಿದ್ದರಿಂದ ಒಂದು ವಾರದಲ್ಲಿ ಅಣ್ಣರೈ ಸಾವನ್ನಪ್ಪಿದ್ದಾರೆ ಎಂದು ಗ್ರಾಮದ ಮುಖಂಡರು ಹೇಳುತ್ತಾರೆ.

    ಬಹುಮನಿ ಸಾಮ್ರಾಜ್ಯದ ಕಾಲದಲ್ಲಿ ಮಹಮ್ಮದ್ ಗವಾನನ ಗುರುಗಳಾಗಿದ್ದ ಫಕುರಲ್ ಗಿಲಾನಿ ಕಾರಣಾಂತರದಿಂದ ಮೃತಪಟ್ಟಿದ್ದರು. ಗ್ರಾಮದಲ್ಲೇ ನನ್ನ ಅಂತ್ಯ ಸಂಸ್ಕಾರ ಆಗಬೇಕು ಅಂಥ ಫಕುರಲ್ ಗಿಲಾನಿ ಆಸೆ ಪಟ್ಟಿದ್ದರು. ಆದರೆ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಬಂದ್ರೆ ಸಾಕು, ಊರ ಜನರನ್ನ ಗಿಲಾನಿ ಶಾಪವಾಗಿ ಕಾಡ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಯಾವುದೊ ಕಾರಣಕ್ಕೆ ಜನರು ಸಾವನ್ನಪ್ಪಿದ್ರೆ ಅದನ್ನ ಶುಕ್ರವಾರಕ್ಕೆ ತಳಕು ಹಾಕಿ ಆತಂಕದಿಂದಿರೋದು ವಿಚಿತ್ರ. ಗ್ರಾಮಸ್ಥರಿಗೆ ವಿಚಾರವಾದಿಗಳು, ಬುದ್ಧಿವಂತರು ಬುದ್ಧಿ ಹೇಳಿ ಮೂಢನಂಬಿಕೆಯನ್ನ ದೂರವಾಗಿಸಬೇಕಿದೆ.

  • ನಮಾಜ್ ವೇಳೆ ರೋಡ್ ಬಂದ್ ಖಂಡಿಸಿ ಬಿಜೆಪಿಯಿಂದ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ

    ನಮಾಜ್ ವೇಳೆ ರೋಡ್ ಬಂದ್ ಖಂಡಿಸಿ ಬಿಜೆಪಿಯಿಂದ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ

    ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪ್ರತೀ ಶುಕ್ರವಾರ ಮುಸ್ಲಿಮರು ಪ್ರಾರ್ಥನೆ (ನಮಾಜ್) ಸಲ್ಲಿಸುವ ವೇಳೆ ರೋಡ್ ಬಂದ್ ಆಗುತ್ತಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹನುಮಾನ್ ಚಾಲಿಸಾ ಪಠಿಸಿ ಪ್ರತಿಭಟನೆ ಮಾಡಿದ್ದಾರೆ.

    ಪ್ರತಿ ಶುಕ್ರವಾರದ ನಮಾಜ್ ಸಮಯದಲ್ಲಿ ಮಸೀದಿ ಮುಂಭಾಗದ ರಸ್ತೆ ಸಂಚಾರ ನಿಷೇಧಿಸಲಾಗುತ್ತಿದೆ. ಇದರಿಂದ ವಾಹನ ಚಲಿಸುವವರಿಗೆ ತೊಂದರೆಯಾಗುತ್ತದೆ ಎಂದು ಹೇಳಿ ಬಿಜೆಪಿ ಯುವ ಮೋರ್ಚಾದವರು ಹೌರ ನಗರದ ಜಿ.ಟಿ ರಸ್ತೆಯಲ್ಲಿ ಕುಳಿತು ಹನುಮಾನ್ ಚಾಲಿಸಾ ಪಠಣ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ.

    ರಸ್ತೆ ಸಂಚಾರ ಬಂದ್ ಮಾಡುವುದರಿಂದ ನಮಗೆ ತುಂಬ ತೊಂದರೆಯಾಗುತ್ತಿದೆ. ಶುಕ್ರವಾರ ನಮಗೆ ಸರಿಯಾದ ಸಮಯದಲ್ಲಿ ಕಚೇರಿಗೆ ತಲುಪಲು ಆಗುತ್ತಿಲ್ಲ ಎಂದು ಮಂಗಳವಾರ ಸಂಜೆ ರಸ್ತೆಗಿಳಿದ ನೂರಾರು ಬಿಜೆಪಿ ಕಾರ್ಯಕರ್ತರು ರಸ್ತೆ ಅಡ್ಡಗಟ್ಟಿ ಮುಂದಿನ ಶುಕ್ರವಾರದ ತನಕ ನಾವು ಹೀಗೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹೌರ ಜಿಲ್ಲಾ ಯುವ ಮೋರ್ಚಾದ ಕಾರ್ಯಕರ್ತ ಒ.ಪಿ ಸಿಂಗ್ ಅವರು, ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ಗ್ರ್ಯಾಂಡ್ ಟ್ರಾಂಕ್ ರಸ್ತೆ ಮತ್ತು ಇತರ ಮುಖ್ಯ ರಸ್ತೆಗಳಲ್ಲಿ ಶುಕ್ರವಾರ ಸಂಚಾರ ನಿಷೇಧಿಸಲಾಗಿದೆ. ಇದರಿಂದ ಸರಿಯಾದ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ಹೋಗಲು ಆಗದೇ ಮೃತಪಡುತ್ತಿದ್ದಾರೆ. ಉದ್ಯೋಗಸ್ಥರು ಶುಕ್ರವಾರ ಸರಿಯಾದ ಸಮಯಕ್ಕೆ ಕಚೇರಿಗೆ ಹೋಗಲು ಆಗುತ್ತಿಲ್ಲ. ನಮಾಜ್ ವೇಳೆ ರಸ್ತೆಗಳ ನಿಷೇಧವನ್ನು ಎಲ್ಲಿಯವರೆಗೆ ಮುಂದುವರಿಸುತ್ತಾರೋ ಅಲ್ಲಿಯವರೆಗೆ ನಾವೂ ಹನುಮಾನ್ ಮಂದಿರಗಳ ಮುಂದೆ ಎಲ್ಲಾ ರಸ್ತೆಗಳನ್ನು ತಡೆದು ಹನುಮಾನ್ ಚಾಲಿಸಾವನ್ನು ಪಠಣ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಶುಕ್ರವಾರ ಕೇತುಗ್ರಸ್ಥ ಚಂದ್ರಗ್ರಹಣ – ಭಕ್ತರಿಗೆ ದೇಗುಲಗಳಿಂದಲೇ ನೋಟಿಸ್

    ಶುಕ್ರವಾರ ಕೇತುಗ್ರಸ್ಥ ಚಂದ್ರಗ್ರಹಣ – ಭಕ್ತರಿಗೆ ದೇಗುಲಗಳಿಂದಲೇ ನೋಟಿಸ್

    ಬೆಂಗಳೂರು: 21ನೇ ಶತಮಾನದ ಅತಿ ದೊಡ್ಡ ಕೇತುಗ್ರಸ್ಥ ಚಂದ್ರಗ್ರಹಣ ಇದೇ ಶುಕ್ರವಾರ ಸಂಭವಿಸಲಿದೆ.

    ಗ್ರಹಣ ಅಂದರೆ ಜನರಲ್ಲಿ ಅದೇನೋ ಒಂಥರಾ ಭಯ. ಜನರಲ್ಲಿದ್ದ ಈ ಭಯ ಹೋಗಲಾಡಿಸುವುದಕ್ಕೆ ಬೆಂಗಳೂರಿನ ಪ್ರಮುಖ ದೇವಸ್ಥಾನಗಳಾದ ಕಾಡು ಮಲ್ಲೇಶ್ವರ, ಲಕ್ಷ್ಮೀ ನರಸಿಂಹಸ್ವಾಮಿ, ಗಂಗಮ್ಮ ದೇವಸ್ಥಾನಗಳಲ್ಲಿ ಎಚ್ಚರಿಕೆ ನೋಟಿಸ್ ಅಂಟಿಸಲಾಗಿದೆ. ಇದನ್ನೂ ಓದಿ: ಜುಲೈ 27ರ ಚಂದ್ರಗ್ರಹಣ – ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ?

    ದೇವಸ್ಥಾನಗಳು ಗ್ರಹಣ ಶಾಂತಿ ಹೋಮದಲ್ಲಿ ಪಾಲ್ಗೊಳ್ಳಿ, ಗ್ರಹಣದ ಎಫೆಕ್ಟ್ ನಿಂದ ತಪ್ಪಿಸಿಕೊಳ್ಳಿ ಅನ್ನೋ ಸಂದೇಶ ರವಾನೆ ಮಾಡುತ್ತಿವೆ. ಯಾರ್ಯಾರಿಗೆ ಗ್ರಹಣದ ಎಫೆಕ್ಟ್ ಇದೆ. ಏನೇನು ಪರಿಹಾರ ಮಾರ್ಗಗಳಿವೆ ಅನ್ನೋದನ್ನೂ ನೋಟಿಸ್ ನಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೇ ಕೇತುಗ್ರಸ್ಥ ಚಂದ್ರಗ್ರಹಣದ ವೇಳೆ ಯಾವ ಶ್ಲೋಕ ಜಪಿಸಬೇಕು ಅಂತಲೂ ಮಾಹಿತಿ ನೀಡಿದ್ದಾರೆ.

    ಕೃತಿಕ, ರೋಹಿಣಿ, ಶ್ರವಣ, ಆಶ್ಲೇಷ ನಕ್ಷತ್ರದವರಿಗೆ ಹೆಚ್ಚು ಎಫೆಕ್ಟ್ ಇದೆ. ಹಾಗಾಗಿ ಪರಿಹಾರ ಹೋಮಕ್ಕಾಗಿ ಅಕ್ಕಿ, ಗೋಧಿ, ಬೆಲ್ಲ, 3 ತೆಂಗಿನಕಾಯಿ, 3 ನಿಂಬೆ ಹಣ್ಣು, ಎಲೆ ಅಡಿಕೆ, ಮಲ್ಲಿಗೆ ಹೂ, 11 ರೂಪಾಯಿ ನಾಣ್ಯ ತರಬೇಕು. ಉರುಳಿ ಮತ್ತು ಅಕ್ಕಿಯನ್ನ ದಾನ ಮಾಡಿದರೆ ಒಳ್ಳೆಯದು. ಜೊತೆಗೆ ಯಾವ ಶ್ಲೋಕ ಜಪಿಸಬೇಕು ಅಂತಲೂ ಮಾಹಿತಿ ನೀಡಲಾಗಿದೆ.