Tag: ಶೀಲ

  • ದ್ವಿಭಾಷೆಗಳಲ್ಲಿ ರೆಡಿ ಆಯಿತು ರಾಗಿಣಿ ದ್ವಿವೇದಿ ನಟನೆ ‘ಶೀಲ’ ಚಿತ್ರ

    ದ್ವಿಭಾಷೆಗಳಲ್ಲಿ ರೆಡಿ ಆಯಿತು ರಾಗಿಣಿ ದ್ವಿವೇದಿ ನಟನೆ ‘ಶೀಲ’ ಚಿತ್ರ

    ಟಿ ರಾಗಿಣಿ ದ್ವಿವೇದಿ ಪ್ರಮುಖಪಾತ್ರದಲ್ಲಿ ನಟಿಸಿರುವ ಶೀಲ (Sheela) ಚಿತ್ರ ರೆಡಿಯಾಗಿದೆ. ಕನ್ನಡ ಹಾಗೂ ಮಲೆಯಾಳಂನಲ್ಲಿ (Malayalam) ಸಿನಿಮಾ ನಿರ್ಮಾಣವಾಗಿದ್ದು, ಈ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ಮೇಕಿಂಗ್  ವಿಡಿಯೋ ಹಾಗೂ ಹಾಡೊಂದನ್ನು ಪ್ರದರ್ಶಿಸಲಾಯಿತು.

    ಶೀಲ ಮಹಿಳಾ ಪ್ರಧಾನ ಚಿತ್ರ ಎಂದು ಮಾತು ಆರಂಭಿಸಿದ ರಾಗಿಣಿ ದ್ವಿವೇದಿ (Ragini Dwivedi), ಪ್ರಸ್ತುತ ಹೆಣ್ಣುಮಕ್ಕಳು ದಿನನಿತ್ಯ ಸಮಾಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಹೆಣ್ಣು ಮನಸ್ಸು ಮಾಡಿದರೆ, ತನ್ನಗೆದುರಾಗುವ ಸಮಸ್ಯೆಯನ್ನು ತಾನೇ ಹೇಗೆ ಬಗೆಹರಿಸಿಕೊಳ್ಳಬಹುದು‌ ಎಂಬುದನ್ನು ಕೂಡ ಈ ಚಿತ್ರದಲ್ಲಿ  ತೋರಿಸಿದ್ದೇವೆ. ಹೆಣ್ಣು ಲಕ್ಷ್ಮೀ ಸ್ವರೂಪಳು ಹೌದು. ಕಾಳಿ ಸ್ವರೂಪಳು ಹೌದು. ನಿರ್ದೇಶಕ ಬಾಲು ನಾರಾಯಣನ್ (Balu Narayanan) ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:‘ಕೃಷ್ಣಂ ಪ್ರಣಯ ಸಖಿ’ಯಾಗಿ ಲವರ್‌ ಬಾಯ್‌ ಲುಕ್‌ನಲ್ಲಿ ಗೋಲ್ಡನ್‌ ಸ್ಟಾರ್‌ ಎಂಟ್ರಿ

    ಕೇರಳ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲೂ ಚಿತ್ರೀಕರಣವಾಗಿದೆ. ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ನಾನು ಮೂಲತಃ ಉದ್ಯಮಿ. ಕಳೆದ ಮೂವತ್ತೈದು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದೇವೆ‌. ಇದು ನನ್ನ ನಿರ್ಮಾಣದ ಮೊದಲ ಚಿತ್ರ. ಕಥೆ ಚೆನ್ನಾಗಿದೆ . ಜುಲೈ ತಿಂಗಳ  ಕೊನೆಯವಾರದಲ್ಲಿ ಬಿಡುಗಡೆ ಮಾಡುತ್ತೇವೆ. ನೋಡಿ. ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಡಿ.ಎಂ.ಪಿಳ್ಳೈ.

    ಬಾಲು ನಾರಾಯಣನ್ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರಾಗಿಣಿ ದ್ವಿವೇದಿ, ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ,  ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಮುಂತಾದವರಿದ್ದಾರೆ‌.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಗಿಣಿ ನಟನೆಯ ‘ಶೀಲ’ ಚಿತ್ರದ ಫಸ್ಟ್ ಲುಕ್ ರಿಲೀಸ್

    ರಾಗಿಣಿ ನಟನೆಯ ‘ಶೀಲ’ ಚಿತ್ರದ ಫಸ್ಟ್ ಲುಕ್ ರಿಲೀಸ್

    ನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi)  ‘ಶೀಲ’ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಕನ್ನಡ ಹಾಗೂ ಮಲೆಯಾಳಂ (Malayalam) ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷಾ ಚಿತ್ರಗಳಲ್ಲಿ ರಾಗಿಣಿ ಮಿಂಚುತ್ತಿದ್ದಾರೆ. ಅಲ್ಲದೇ, ತಮಿಳು ಸಿನಿಮಾವೊಂದರಲ್ಲೂ ಅವರು ನಟಿಸಿದ್ದಾರೆ.

    ಶೀಲ (Sheela) ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಮಹಿಳಾ ಪ್ರಧಾನ ಚಿತ್ರವಾಗಿದೆ. ನನ್ನ ಪಾತ್ರ ಚೆನ್ನಾಗಿದೆ. ಸಮಾಜದಲ್ಲಿ ಎದುರಾಗುವ ಸಾಕಷ್ಟು ಸವಾಲುಗಳನ್ನು ಹೆಣ್ಣುಮಗಳೊಬ್ಬಳು ಹೇಗೆ ನಿಭಾಯಿಸುತ್ತಾಳೆ ಎಂಬುದು ಕಥಾಸಾರಾಂಶ‌. ಈ ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಕೇರಳ ಹಾಗೂ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿದೆ. ಪ್ರಸ್ತುತ ಫಸ್ಟ್ ಲುಕ್ (First Look) ಬಿಡುಗಡೆಯಾಗಿದೆ. ಸದ್ಯದಲ್ಲೇ ಟ್ರೇಲರ್ ಬರಲಿದೆ ಎಂದು ರಾಗಿಣಿ ದ್ವಿವೇದಿ ತಿಳಿಸಿದ್ದಾರೆ. ಇದನ್ನೂ ಓದಿ:ಕರುಣೆಯ ಕಣ್ಣುಗಳಿಂದ ಜಗತ್ತನ್ನು ನೋಡಲು ಕಲಿಸಿದ ರಾಗಾಗೆ ರಮ್ಯಾ ವಿಶ್

    ಡಿ.ಎಂ.ಪಿಳ್ಳೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಬಾಲು ನಾರಾಯಣನ್ (Balu Narayan) ನಿರ್ದೇಶಿಸಿದ್ದಾರೆ.  ರಾಗಿಣಿ ದ್ವಿವೇದಿ, ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ,  ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಪತ್ನಿಯ ಶೀಲ ಶಂಕಿಸಿ ನಿತ್ಯ ಜಗಳ- ಬೇಸತ್ತ ಮಗನಿಂದ ಅಪ್ಪನ ಕೊಲೆ

    ಪತ್ನಿಯ ಶೀಲ ಶಂಕಿಸಿ ನಿತ್ಯ ಜಗಳ- ಬೇಸತ್ತ ಮಗನಿಂದ ಅಪ್ಪನ ಕೊಲೆ

    ಮಂಡ್ಯ: ಪತ್ನಿ ಶೀಲ ಶಂಕಿಸುತ್ತಿದ್ದ ಪತಿಯನ್ನು ಆತನ ಮಗನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಘಟನೆ ನಡೆದಿದ್ದು, 44 ವರ್ಷದ ದೇವರಾಜುನನ್ನು ಆತನ ಮಗ ಕೊಲೆ ಮಾಡಿದ್ದಾನೆ. ಕೂಲಿ ಮಾಡಿ ಬದುಕುತ್ತಿದ್ದ ಬಡ ಕುಟುಂಬದಲ್ಲಿ ಇದ್ದದ್ದು ಪತಿ, ಪತ್ನಿ ಹಾಗೂ ಒಬ್ಬನೇ ಮಗ. ಈ ನಡುವೆ ಮನೆಯ ಯಜಮಾನ ಎನಿಸಿಕೊಂಡ ಪತಿಗೆ ಪತ್ನಿ ನಡತೆ ಬಗ್ಗೆ ಅನುಮಾನ ಶುರುವಾಗಿತ್ತು. ಈ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳ, ರಂಪಾಟವಾಗುತ್ತಿತ್ತು. ಇದರಿಂದ ಬೇಸತ್ತ ಮಗ, ತಂದೆಯನ್ನೇ ಕೊಂದಿದ್ದಾನೆ.

    ದೇವರಾಜು 20 ವರ್ಷಗಳ ಹಿಂದೆ ಸಾವಿತ್ರಮ್ಮಳನ್ನು ವಿವಾಹವಾಗಿದ್ದ. ಈ ದಂಪತಿಗೆ ಅಪ್ಪು ಎಂಬ 19 ವರ್ಷದ ಮಗನೂ ಇದ್ದ. ಗ್ರಾಮದಲ್ಲಿ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ದಂಪತಿಗೆ, ಮಗ ಗೂಡ್ಸ್ ಆಟೋ ಓಡಿಸಿಕೊಂಡು ನೆರವಾಗಿದ್ದ. ಹೀಗಿರುವಾಗಲೇ ಇತ್ತೀಚೆಗೆ ಪತ್ನಿ ಸಾವಿತ್ರಮ್ಮಳ ನಡವಳಿಕೆ ಬಗ್ಗೆ ದೇವರಾಜುಗೆ ಅನುಮಾನ ಶುರುವಾಗಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳವೂ ನಡೆಯುತ್ತಿತ್ತು.

    ನಿತ್ಯ ಅಪ್ಪ, ಅಮ್ಮನ ಜಗಳ ನೋಡಿ ಮಗ ಬೇಸತ್ತಿದ್ದ. ಅಲ್ಲದೆ ಅಮ್ಮನ ಬಗ್ಗೆ ಅಪ್ಪ ಅನುಮಾನ ಪಡುವುದು ಹಾಗೂ ಆಕೆಯ ಮೇಲೆ ಹಲ್ಲೆ ನಡೆಸುವುದನ್ನು ಖಂಡಿಸುತ್ತಿದ್ದ. ನಿನ್ನೆಯೂ ಅಪ್ಪನ ಜಗಳ ಶುರುವಾಗಿ ವಿಕೋಪಕ್ಕೆ ಹೋಗಿತ್ತು. ಈ ವೇಳೆ ಮಗ ಕಬ್ಬಿಣದ ರಾಡ್ ಹಿಡಿದುಕೊಂಡು ಅಪ್ಪನ ಮೇಲೆ ಹಲ್ಲೆಗೆ ಮುಂದಾಗಿದ್ದ. ಪಕ್ಕದ ಮನೆಯವರು ಜಗಳ ಬಿಡಿಸಿ ಇಬ್ಬರನ್ನೂ ಸಮಾಧಾನ ಮಾಡಿದ್ದರು.

    ಇದಾದ ಕೆಲವೇ ಸಮಯದಲ್ಲಿ ಮತ್ತೆ ಜಗಳ ಶುರು ಮಾಡಿದ್ದ ದೇವರಾಜು, ಪತ್ನಿ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಸಾವಿತ್ರಮ್ಮ ತಲೆಗೆ ಪಟ್ಟಾಗಿತ್ತು. ಇದನ್ನು ನೋಡಿ ಕೋಪಗೊಂಡ ಮಗ ಅಪ್ಪು, ತಂದೆಯ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ. ತೀವ್ರ ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ದೇವರಾಜುನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೋಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪಾಂಡವಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಪ್ಪು ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಟ್ರೈಲರ್ ಮೂಲಕ ಹವಾ ಎಬ್ಬಿಸಿದ್ದ ಹೈಪರ್ ಬರ್ತಿದೆ!

    ಟ್ರೈಲರ್ ಮೂಲಕ ಹವಾ ಎಬ್ಬಿಸಿದ್ದ ಹೈಪರ್ ಬರ್ತಿದೆ!

    ಬೆಂಗಳೂರು: ಎಂ ಕಾರ್ತಿಕ್ ನಿರ್ಮಾಣದ ಹೈಪರ್ ಚಿತ್ರ ಸದ್ಯ ಪ್ರೇಕ್ಷಕರ ವಲಯದಲ್ಲೊಂದು ಸಂಚಲನ ಸೃಷ್ಟಿಸಿದೆ. ಜೋಗಿ ಪ್ರೇಮ್ ಇತ್ತೀಚೆಗೆ ಈ ಚಿತ್ರದ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡಿದ್ದರು. ಅದಾಗಿ ಕೆಲವೇ ದಿನ ಕಳೆಯುವಷ್ಟರಲ್ಲಿಯೇ ಮೂರು ಲಕ್ಷಕ್ಕೂ ಅಧಿಕ ಜನ ನೋಡಿ ಮೆಚ್ಚಿಕೊಳ್ಳುವ ಮೂಲಕ ಹೈಪರ್ ಚಿತ್ರದ ಬಗ್ಗೆ ಎಲ್ಲೆಡೆ ನಿರೀಕ್ಷೆ ಹುಟ್ಟಿಕೊಂಡಿತ್ತು.

    ಸದ್ಯ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಇದೇ ತಿಂಗಳ 29ಕ್ಕೆ ತೆರೆ ಕಾಣಲು ಸಜ್ಜಾಗಿ ನಿಂತಿರೋ ಈ ಚಿತ್ರ ಎಂ ಬಿಗ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿದೆ. ಈಗಾಗಲೇ ತಮಿಳಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿರುವ ಗಣೇಶ್ ವಿನಾಯಕ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಾಯಕ ನಟರಾದ ಅರ್ಜುನ್ ಆರ್ಯ ಅವರೇ ಕಥೆಯನ್ನೂ ಬರೆದಿರೋದು ವಿಶೇಷ.

    ಇದೊಂದು ಕಾಲೇಜ್ ಲವ್ ಚಿತ್ರ. ಆದರೆ ಅದರಾಚೆಗಿನ ಊಹಿಸಲಸಾಧ್ಯವಾದ ತಿರುವು, ಸಾಹಸ, ಅಪ್ಪ ಮಗಳ ಸೆಂಟಿಮೆಂಟು ಸೇರಿದಂತೆ ಇಡೀ ಚಿತ್ರವನ್ನು ಸಮೃದ್ಧವಾಗಿ ರೂಪಿಸಿದ ಖುಷಿ ಚಿತ್ರತಂಡದ್ದು. ಕಥೆಗೆ ಪೂರಕವಾಗಿ ಈ ಚಿತ್ರದಲ್ಲಿ ಐದು ಚೆಂದದ ಹಾಡುಗಳಿವೆ. ಇಮ್ಮಾನ್ ಡಿ ಹಾಗೂ ಎಲ್ವಿನ್ ಆ ಐದೂ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಈ ಹಾಡುಗಳು ಮತ್ತು ಟ್ರೈಲರ್ ಗೆ ಗಣ್ಯರ ಕಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರವಿಶಂಕರ್ ಮತ್ತು ಚಿಕ್ಕಣ್ಣ ಮುಂತಾದ ನಟರೂ ಕೂಡಾ ಈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ಶಕ್ತಿವೇಲ್ ಅವರ ಛಾಯಾಗ್ರಹಣ, ರುಬಾನ್ ಸಂಕಲನ, ಥ್ರಿಲ್ಲರ್ ಮಂಜು, ಮಾಸ್ ಮಾದ, ವಿಕ್ರಂ, ಹೈಪರ್ ಸೂರಿ ಸಾಹಸ ನಿರ್ದೇಶನ, ಕಲೈ ನೃತ್ಯ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಎ.ಪಿ.ಅರ್ಜುನ್, ಬಹದ್ದೂರ್ ಚೇತನ್, ದಿಲ್‍ವಾಲ ಅನಿಲ್ ಹಾಗೂ ಗೌಸ್‍ಫಿರ್ ಬರೆದಿದ್ದಾರೆ. ಅರ್ಜುನ್ ಆರ್ಯ, ಶೀಲ, ರಂಗಾಯಣ ರಘು, ಶೋಭ್ ರಾಜ್, ಬುಲೆಟ್ ಪ್ರಕಾಶ್, ಅಚ್ಯುತ ಕುಮಾರ್, ಶ್ರೀನಿವಾಸಪ್ರಭು, ಬ್ಯಾಂಕ್ ಜನಾರ್ದನ್, ವೀಣಾಸುಂದರ್, ಲಕ್ಷ್ಮೀಸಿದ್ದಯ್ಯ, ಉಮೇಶ್ ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

    ಶೀಲ ಶಂಕಿಸಿ ಪತ್ನಿಯ ಮುಖಕ್ಕೆ ಆಸಿಡ್ ಎರಚಿದ ಪಾಪಿ ಪತಿ

    ಜೈಪುರ್: ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ಆಕೆಯ ಮೇಲೆ ಆಸಿಡ್ ಎರಚಿದ ಘಟನೆ ಶನಿವಾರ ಸಂಜೆ ರಾಜಸ್ಥಾನದ ಜೈಪುರ್ ಜಿಲ್ಲೆಯ ಮಾಲಾಪದದಲ್ಲಿ ನಡೆದಿದೆ.

    ಭಾಗಿರಥಿ ಮಹಾಲಿಕ್ (45) ಪತ್ನಿಗೆ ಆಸಿಡ್ ಹಾಕಿದ ಆರೋಪಿ ಪತಿ. ಆಸಿಡ್ ದಾಳಿಯಿಂದ 40 ವರ್ಷದ ಮಹಿಳೆಯ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಮಹಿಳೆ ಆಸಿಡ್ ದಾಳಿಯಿಂದ ಬಳಲುತ್ತಿದ್ದಾಗ ಅಕ್ಕಪಕ್ಕದ ಮನೆಯವರು ರಕ್ಷಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ನನ್ನ ತಂದೆ, ತಾಯಿಯ ಶೀಲದ ಮೇಲೆ ಯಾವಾಗಲೂ ಸಂಶಯಪಡುತ್ತಿದ್ದನು. ಮನೆಗೆ ಬಂದ ತಕ್ಷಣ ನನ್ನ ತಾಯಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದನು ಎಂದು 20 ವರ್ಷದ ಮಗಳೇ ತಂದೆಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಈ ಘಟನೆ ಶನಿವಾರ ನಡೆದಿದ್ದು, ಮನೆಗೆ ಬಂದ ತಕ್ಷಣ ಭಾಗಿರಥಿ ತನ್ನ ಹೆಂಡತಿಯ ಜೊತೆ ಜಗಳವಾಡಿ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಭಾನುವಾರ ಪೊಲೀಸರು ಭಾಗಿರಥಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಭಾಗಿರಥಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆತನ ಜಾಮೀನು ಅರ್ಜಿಯನ್ನು ಕೂಡ ತಿರಸ್ಕರಿಸಿದೆ ಎಂದು ಜೈಪುರ್ ನ ಉಪ-ವಿಭಾಗದ ಪೊಲೀಸ್ ಅಧಿಕಾರಿಯಾದ ಪ್ರಶಾಂತ್ ಕುಮಾರ್ ಮಾಲಾ ತಿಳಿಸಿದ್ದಾರೆ.