Tag: ಶೀತಲ್

  • ಕತ್ತು ಸೀಳಿ ಖ್ಯಾತ ಮಾಡೆಲ್‌ ಬರ್ಬರ ಹತ್ಯೆ –  ಕಾಲುವೆಯಲ್ಲಿ ಶವ ಪತ್ತೆ

    ಕತ್ತು ಸೀಳಿ ಖ್ಯಾತ ಮಾಡೆಲ್‌ ಬರ್ಬರ ಹತ್ಯೆ – ಕಾಲುವೆಯಲ್ಲಿ ಶವ ಪತ್ತೆ

    ಚಂಡೀಗಢ: ಸೋನಿಪತ್‌ ಕಾಲುವೆಯಲ್ಲಿ (Sonipat Canal) ಕತ್ತು ಸೀಳಿದ ಸ್ಥಿತಿಯಲ್ಲಿ ಹರ್ಯಾಣ (Haryana) ಮೂಲದ ಮಾಡೆಲ್‌ನ ಶವ ಪತ್ತೆಯಾಗಿದೆ.

    ಹರಿಯಾಣವಿ ಸಂಗೀತ ಉದ್ಯಮದಲ್ಲಿ (Haryanvi Music) ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದ ಶೀತಲ್‌ (Sheetal) ಶವ ಪತ್ತೆಯಾಗಿದ್ದು ಕೊಲೆಗೆ ಕಾರಣ ತಿಳಿದು ಬಂದಿಲ್ಲ.

    ಶೀತಲ್ ತನ್ನ ಸಹೋದರಿ ನೇಹಾ ಜೊತೆ ಪಾಣಿಪತ್‌ನಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 14 ರಂದು ಮಾಡೆಲ್ ಶೂಟಿಂಗ್‌ಗಾಗಿ ಅಹರ್ ಗ್ರಾಮಕ್ಕೆ ತೆರಳಿದ್ದರು. ಮರಳಿ ಮನೆಗೆ ಬಾರದೇ ಇದ್ದಾಗ ಸಹೋದರೆ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.ಇದನ್ನೂ ಓದಿ: ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್‌ ಮಾಡ್ಕೊಂಡು ಬ್ಲ್ಯಾಕ್‌ಮೇಲ್‌ – ಪ್ರತಿಷ್ಠಿತ ದೇವಸ್ಥಾನದ ಅರ್ಚಕ ಅರೆಸ್ಟ್‌

    ತನಿಖೆಗೆ ಇಳಿದ ಪೊಲೀಸರಿಗೆ ಖಾಂಡಾ ಗ್ರಾಮದ ಬಳಿಯ ಕಾಲುವೆಯಲ್ಲಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಪ್ರಕರಣವು ಪ್ರಾದೇಶಿಕ ಮನರಂಜನಾ ಉದ್ಯಮದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

  • ನಿರ್ಮಾಪಕನ ಜೊತೆ ಸರಸಕ್ಕೆ ಸೈ ಎಂದು ಸಂಕಟ ಪಡ್ತಿದ್ದಾರಂತೆ ನಟಿ ಶೀತಲ್

    ನಿರ್ಮಾಪಕನ ಜೊತೆ ಸರಸಕ್ಕೆ ಸೈ ಎಂದು ಸಂಕಟ ಪಡ್ತಿದ್ದಾರಂತೆ ನಟಿ ಶೀತಲ್

    ನಿರ್ಮಾಪಕರೊಬ್ಬರ ಮೇಲೆ ನಟಿ ಶೀತಲ್ (Sheetal) ಗಂಭೀರ ಆರೋಪ ಮಾಡಿದ್ದಾರೆ. ನಿರ್ಮಾಪಕನ ಜೊತೆ ಮಂಚ ಹಂಚಿಕೊಂಡಿದ್ದರ ಪರಿಣಾಮ, ಇಂದು ತಮಗೆ ಕಣ್ಣೀರಿಡುವಂತಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಆ ನಿರ್ಮಾಪಕನ ವಿರುದ್ಧ ಪೊಲೀಸರಿಗೆ ದೂರು ಕೂಡ ಅವರು ನೀಡಿದ್ದಾರೆ.

    ಒಡಿಶಾ ಚಿತ್ರೋದ್ಯಮದಲ್ಲಿ ನಟಿ ಶೀತಲ್ ಅವರಿಗೆ ತಮ್ಮದೇ ಆದ ಹೆಸರಿದೆ. ದಯಾನಿಧಿ ಎಂಟರ್ ಟೇನ್ಮೆಂಟ್ ಮಾಲೀಕ ಹಾಗೂ ನಿರ್ಮಾಪಕ ದಯಾನಿಧಿ ದಹಿಮಾ (Dayanidhi Dahima) ಅವರೊಂದಿಗೆ ನಟಿ ಶೀತಲ್ ಸಂಬಂಧದಲ್ಲಿ ಇದ್ದಳಂತೆ. ದಯಾನಿಧಿ ಬ್ಯಾನರ್ ನಲ್ಲಿ ಮೂಡಿ ಬಂದ ಹಲವು ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ಇದನ್ನೂ ಓದಿ:‘ಸಲಾರ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ : ಬಸ್ರೂರಿನಲ್ಲಿ ಬೀಡುಬಿಟ್ಟ ಪ್ರಶಾಂತ್ ನೀಲ್

    ದಯಾನಿಧಿ ಜೊತೆ ಸರಸ ಸಲ್ಲಾಪದ ಕ್ಷಣಗಳನ್ನು ನಟಿಯ ಅರಿವಿಗೆ ಬಾರದಂತೆ ಸೆರೆ ಹಿಡಿಯಲಾಗಿದೆಯಂತೆ. ಆ ವಿಡಿಯೋ (video) ಮತ್ತು ಫೋಟೋಗಳನ್ನು (private photo) ಇಟ್ಟುಕೊಂಡು ದಯಾನಿಧಿ ತಮಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ನಟಿ ಆರೋಪಿಸಿದ್ದಾಳೆ. ತನಗೆ ಮಾತ್ರವಲ್ಲ ತನ್ನ ತಾಯಿ ತಮ್ಮ ತಮ್ಮನಿಗೂ ತೊಂದರೆ ಕೊಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

     

    ಈವರೆಗೂ ತಾನು ಪಡೆದಿರುವ ಸಂಭಾವನೆಯನ್ನು ದಯಾನಿಧಿ ವಾಪಸ್ಸು ಕೇಳುತ್ತಿದ್ದಾನೆ ಎನ್ನುವುದು ಶೀತಲ್ ಆರೋಪ. ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ತನ್ನೊಂದಿಗೆ ದಯಾನಿಧಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮಗಿಂತ 33 ವರ್ಷ ಕಿರಿಯವಳ ಜೊತೆ ಪ್ರೀತಿಯಲ್ಲಿ ಬಿದ್ದ ನಟ ಪೃಥ್ವಿರಾಜ್

    ತಮಗಿಂತ 33 ವರ್ಷ ಕಿರಿಯವಳ ಜೊತೆ ಪ್ರೀತಿಯಲ್ಲಿ ಬಿದ್ದ ನಟ ಪೃಥ್ವಿರಾಜ್

    ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ಮತ್ತೆ ನಿಜವಾಗಿದೆ. ಕಾಲಿವುಡ್‌ನಲ್ಲಿ(Kollywood) ಈ ಹೊಸ ಜೋಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.  56  ವರ್ಷದ ಹಿರಿಯ ನಟ ಪೃಥ್ವಿರಾಜ್(Prithviraj) ತಮಗಿಂತ 33 ವರ್ಷ ಕಿರಿಯಯವಳ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

     

    View this post on Instagram

     

    A post shared by Babloo Prithiveeraj (@prithiveeraj)

    ಕನ್ನಡ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪೃಥ್ವಿರಾಜ್ ತನ್ನ ಜಿಮ್ ಟ್ರೈನರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. 24 ವರ್ಷದ ಜಿಮ್ ಟ್ರೈನರ್ ಶೀತಲ್ ಜೊತೆ ಪ್ರೀತಿಯಲ್ಲಿರುವ ವಿಚಾರವನ್ನು ಸ್ವತಃ ಪೃಥ್ವಿರಾಜ್ ಅವರೇ ಬಹಿರಂಗ ಪಡಿಸಿದ್ದಾರೆ. ಇಬ್ಬರು ಅನೇಕ ಸಮಯದಿಂದ ಒಟ್ಟಿಗೆ ಸುತ್ತಾಡುತ್ತಿದ್ದಾರೆ.

     

    View this post on Instagram

     

    A post shared by Babloo Prithiveeraj (@prithiveeraj)

    ಜಿಮ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಇಬ್ಬರು ಬಳಿಕ ಉತ್ತಮ ಸ್ನೇಹಿತರಾಗಿದ್ದರು. ನಂತರ ಅದೇ ಸ್ನೇಹ ಪ್ರೀತಿಗೆ ತಿರುಗಿದೆ. ಸದ್ಯದಲ್ಲೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಬೀನಾ ಅವರನ್ನು ಪೃಥ್ವಿರಾಜ್ 1994ರಲ್ಲಿ ಮದುವೆ ಆಗಿದ್ದರು. ಆರು ವರ್ಷಗಳ ಹಿಂದೆ ಇಬ್ಬರೂ ಬೇರೆ ಆಗಿದ್ದಾರೆ. ಇದನ್ನೂ ಓದಿ:ಬಹುಭಾಷಾ ಹಿರಿಯ ನಟಿ ವಿನಯ ಪ್ರಸಾದ್ ಮನೆ ದೋಚಿದ ಖದೀಮರು

    ಒಬ್ಬಂಟಿಯಾಗಿ ಬದುಕುತ್ತಿದ್ದ ಪೃಥ್ವಿರಾಜ್ ತನ್ನನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಗಾಗಿ ಕಾಯುತ್ತಿದ್ದರು ಜಿಮ್ ಟ್ರೈನರ್ ಶೀತಲ್ ಹತ್ತಿರವಾಗಿದ್ದಾರೆ. ವಯಸ್ಸಿನ ಅಂತರಕ್ಕೆ ಮನ್ನಣೆ ಕೊಡದೇ ಮದುವೆಗೆ ಶೀತಲ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 33 ವರ್ಷಗಳ ವಯಸ್ಸಿನ ಅಂತರವಿರುವ ಈ ಜೋಡಿ, ಗಾಸಿಪ್ ಪ್ರಿಯರ ಹಾಟ್ ಟಾಪಿಕ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಡು ಮಗುವಿಗೆ ತಂದೆಯಾದ ರಾಬಿನ್ ಉತ್ತಪ್ಪ

    ಗಂಡು ಮಗುವಿಗೆ ತಂದೆಯಾದ ರಾಬಿನ್ ಉತ್ತಪ್ಪ

    ನವದೆಹಲಿ: ಕ್ರಿಕೆಟರ್ ರಾಬಿನ್ ಉತ್ತಪ್ಪ ಹಾಗೂ ಶೀತಲ್ ದಂಪತಿಗೆ ಗಂಡು ಮಗು ಜನಿಸಿದೆ. ಈ ವಿಷಯವನ್ನ ಉತ್ತಪ್ಪ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಮಗು ಹಾಗೂ ಪತ್ನಿ ಜೊತೆಗಿನ ಫೋಟೋ ಅಪ್ಲೋಡ್ ಮಾಡಿದ್ದಾರೆ.

    ನಮ್ಮ ಮಗು ನೈಲಿ ನೋಲನ್ ಉತ್ತಪ್ಪ ಆಗಮಿಸಿದ್ದಾನೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ಅಂತ ಉತ್ತಪ್ಪ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ತನ್ನ ಬಹುಕಾಲದ ಪ್ರೇಯಸಿಯಾಗಿದ್ದ ಮಾಜಿ ಟೆನ್ನಿಸ್ ಆಟಗಾರ್ತಿ ಶೀತಲ್ ಅವರನ್ನ ಉತ್ತಪ್ಪ ಕಳೆದ ವರ್ಷ ಮಾರ್ಚ್ ನಲ್ಲಿ ಮದುವೆಯಾಗಿದ್ದರು.

    ಉತ್ತಪ್ಪ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ. ಕಳೆದ 15 ವರ್ಷಗಳಿಂದ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರವಾಗಿ ಆಟವಾಡಿದ್ದ ಉತ್ತಪ್ಪ, ಪ್ರಸ್ತುತ ಸೀಜನ್‍ನಲ್ಲಿ ಸೌರಾಷ್ಟ್ರದ ಪರವಾಗಿ ಆಟವಾಡಲು ಆಯ್ಕೆ ಮಾಡಿಕೊಂಡಿದ್ದಾರೆ.