Tag: ಶಿಶು ಸಾವು

  • ಹೆರಿಗೆ ಮಾಡಲು ತಡ ಮಾಡಿದಕ್ಕೆ ಶಿಶು ಸಾವು – ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ

    ಹೆರಿಗೆ ಮಾಡಲು ತಡ ಮಾಡಿದಕ್ಕೆ ಶಿಶು ಸಾವು – ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ

    ರಾಯಚೂರು: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ನವಜಾತ ಶಿಶು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ವೈದ್ಯರ ವಿರುದ್ಧ ಕುಟುಂಬಸ್ಥರು ಆರೋಪಿಸಿದ್ದಾರೆ.

    ರಾಯಚೂರು (Raichuru) ತಾಲೂಕಿನ ಮರ್ಚೇಡ್ ಗ್ರಾಮದ ಪಾರ್ವತಮ್ಮ ಹಾಗೂ ಚಂದ್ರಶೇಖರ್ ದಂಪತಿಯ ಮಗು ಸಾವನ್ನಪ್ಪಿದೆ.ಇದನ್ನೂ ಓದಿ: ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದ ಮೋದಿ – ಅಮೆರಿಕ ಭೇಟಿ ಬಗ್ಗೆ ಹೇಳಿದ್ದೇನು?

    ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯನ್ನು ವೈದ್ಯರು ತಪಾಸಣೆ ಮಾಡಿ ನಾರ್ಮಲ್ ಡೆಲಿವರಿ ಆಗುತ್ತದೆ ಎಂದು ತಿಳಿಸಿ 2 ದಿನ ಕಾಯಿಸಿದ್ದರು. ಗರ್ಭಿಣಿ ನೋವಿನಿಂದ ಬಳಲುತ್ತಿದ್ದರೂ ಕೂಡ ಹೆರಿಗೆ ಮಾಡಲು ವಿಳಂಬ ಮಾಡಿದ್ದರು.

    ಇದರಿಂದ ಗರ್ಭಿಣಿಯ ಕುಟುಂಬಸ್ಥರು ಸಿಸೇರಿಯನ್ ಮಾಡುವಂತೆ ವೈದ್ಯರಿಗೆ ತಿಳಿಸಿದ್ದಾರೆ. ಆದರೂ ಕೂಡ ವಿಳಂಬ ಮಾಡಿ ನಾರ್ಮಲ್ ಡೆಲಿವರಿ ಮಾಡಿದ್ದಾರೆ. ಈ ವೇಳೆ ಹೆರಿಗೆ ಮಾಡುವಾಗ ಮಗು ಸಾವನ್ನಪ್ಪಿದೆ. ಇದರಿಂದ ಹೆರಿಗೆ ಮಾಡಲು ತಡ ಮಾಡಿದ್ದಕ್ಕೆ ಮಗು ಸಾವನ್ನಪ್ಪಿದೆ ಎಂದು ಬಾಣಂತಿಯ ಪತಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಡಿಎಚ್‌ಓ ಡಾ.ಸುರೇಂದ್ರಬಾಬು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ತಿಳಿದು ಸಮಗ್ರವಾಗಿ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಕೇಂದ್ರ ಸಚಿವ ಪಿಯೂಷ್ ಗೋಯಲ್‌ಗೆ ಕಾಮನ್ ಸೆನ್ಸ್ ಇಲ್ಲ: ರಾಮಲಿಂಗಾ ರೆಡ್ಡಿ ಆಕ್ರೋಶ

  • ಲಂಚ ಕೊಡೋಕೆ ಹಣ ಇರ್ಲಿಲ್ಲ – ಅಮ್ಮನ ಹೊಟ್ಟೆಯಲ್ಲೇ ಮಗು ಸತ್ತೋಯ್ತು..!

    ಲಂಚ ಕೊಡೋಕೆ ಹಣ ಇರ್ಲಿಲ್ಲ – ಅಮ್ಮನ ಹೊಟ್ಟೆಯಲ್ಲೇ ಮಗು ಸತ್ತೋಯ್ತು..!

    ಭೋಪಾಲ್: ಆಸ್ಪತ್ರೆ ಸಿಬ್ಬಂದಿಗೆ ಲಂಚ ಕೊಡಲು ವಿಫಲರಾದ ಪರಿಣಾಮ ಮಹಿಳೆಯೊಬ್ಬರು ಮೃತ ಶಿಶುವಿಗೆ ರಸ್ತೆಯಲ್ಲೇ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ಭಿಂಡ್‌ನ ಜಿಲ್ಲಾಸ್ಪತ್ರೆ ಬಳಿ ನಡೆದಿದೆ. ಈ ಕುರಿತು ತನಿಖೆ ನಡೆಸಲು ಜಿಲ್ಲಾಡಳಿತ ತನಿಖಾ ಸಮಿತಿಯನ್ನು ರಚಿಸಿದೆ.

    ಭಿಂಡ್‌ನ ರಾಜುಪುರ ಗ್ರಾಮದ ನಿವಾಸಿ ಆರು ತಿಂಗಳ ಗರ್ಭಿಣಿ ಕಲ್ಲೋ ಅವರು ತಡರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ತಕ್ಷಣ ಪತಿ ಹಾಗೂ ಪತ್ತೆ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ 5,000 ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಮ್ಮ ಹಣವಿಲ್ಲ ಎಂದು ಹೇಳಿದಾಗ, ಬೇರೆ ಕಡೆ ಅಲ್ಟ್ರಾಸೌಂಡ್‌ ಮಾಡಿಸುವಂತೆ ಕುಟುಂಬದವರಿಗೆ ಸಿಬ್ಬಂದಿ ತಿಳಿಸಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ಕೂಡಲೇ ಮಗು ಜನಿಸಿತ್ತು. ಆದರೆ ಶಿಶು ಮೃತಪಟ್ಟಿತ್ತು. ಇದನ್ನೂ ಓದಿ: ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಲಭ್ಯ

    ನಾವು ಭಿಂಡ್‌ ಜಿಲ್ಲಾಸ್ಪತ್ರೆಗೆ ಬಂದಾಗ, ಕರ್ತವ್ಯದಲ್ಲಿದ್ದ ಶುಶ್ರೂಷಾಧಿಕಾರಿಗಳು ನನ್ನ ಸೊಸೆಗೆ ವೈದ್ಯಕೀಯ ಚಿಕಿತ್ಸೆ ಪ್ರಾರಂಭಿಸುವ ಮೊದಲು ನಮ್ಮಿಂದ 5,000 ಲಂಚ ಕೇಳಿದರು. ನಾವು ಬಡವರು, ಹಣ ಇಲ್ಲ ಎಂದು ಹೇಳಿದಾಗ, ಸಿಬ್ಬಂದಿ ನಮ್ಮೆಲ್ಲರನ್ನು ಆಸ್ಪತ್ರೆಯಿಂದ ಹೊರಹಾಕಿದರು. ಆಸ್ಪತ್ರೆಯ ಹೊರಗೆ ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಿಸುವಂತೆ ಹೇಳಿದ್ದರು ಎಂದು ಮಹಿಳೆ ಅತ್ತೆ ಮಿಥಿಲೇಶ್‌ ಮಿರ್ಧಾ ಆರೋಪಿಸಿದ್ದಾರೆ.

    ಮಗುವಿಗೆ ಹೊದಿಸಲು ಸ್ವಚ್ಛವಾದ ಬಟ್ಟೆಯೂ ಇಲ್ಲದ ಕಾರಣ, ಮಗುವಿನ ತಂದೆಯ ಟವೆಲ್‌ ಅನ್ನೇ ಬಳಸಲಾಯಿತು ಎಂದು ಮಿರ್ಧಾ ತಿಳಿಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಬಿಡುಗಡೆ ಮಾಡಿದ ಚೀನಾ

    ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಭ್ರೂಣವು ಗರ್ಭಾಶಯದೊಳಗೆ ಸಾವನ್ನಪ್ಪಿದೆ. ರೋಗಿಯ ಸಂಬಂಧಿಕರಿಗೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ರೋಗಿಯ ಸಂಬಂಧಿಕರು ತೃಪ್ತರಾಗದೇ ಆಸ್ಪತ್ರೆಯಿಂದ ಹೊರಟಿದ್ದರು. ಯಾರೂ ಅವರನ್ನು ಆಸ್ಪತ್ರೆಯಿಂದ ಹೊರದೂಡಿಲ್ಲ ಎಂದು ಆಸ್ಪತ್ರೆಯ ಸಿವಿಲ್‌ ಸರ್ಜನ್‌ ಡಾ.ಅನಿಲ್‌ ಗೋಯಲ್‌ ತಿಳಿಸಿದ್ದಾರೆ.

  • ಸಚಿವ ಶರಣ ಪ್ರಕಾಶ್ ಪಾಟೀಲ್ ತವರಲ್ಲೇ ತಾಯಿ, ಮಕ್ಕಳ ಮರಣ ಮೃದಂಗ-ಸಾವಿನ ಪಟ್ಟಿ ಕೊಟ್ಟ ಆರೋಗ್ಯ ಇಲಾಖೆ

    ಸಚಿವ ಶರಣ ಪ್ರಕಾಶ್ ಪಾಟೀಲ್ ತವರಲ್ಲೇ ತಾಯಿ, ಮಕ್ಕಳ ಮರಣ ಮೃದಂಗ-ಸಾವಿನ ಪಟ್ಟಿ ಕೊಟ್ಟ ಆರೋಗ್ಯ ಇಲಾಖೆ

    ಕಲಬುರಗಿ: ವೈದ್ಯಕೀಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತವರಿನಲ್ಲಿಯೇ ಅತೀ ಹೆಚ್ಚು ನವಜಾತ ಶಿಶು ಮತ್ತು ತಾಯಿಯ ಮರಣ ಮುಂದುವರೆದಿದೆ.

    ಪ್ರಸಕ್ತ ವರ್ಷ ಕಲಬುರಗಿ ಜಿಲ್ಲೆಯಲ್ಲಿಯೇ 287 ನವಜಾತ ಶಿಶುಗಳು ಮರಣ ಹೊಂದಿವೆ. 20 ಮಹಿಳೆಯರು ಹೆರಿಗೆ ಸಮಯದಲ್ಲಿಯೇ ಮೃತಪಟ್ಟಿದ್ದಾರೆ. ಖುದ್ದು ಆರೋಗ್ಯ ಇಲಾಖೆಯೇ ಈ ಅಂಕಿ ಅಂಶ ನೀಡಿದ್ದು ಜನರಲ್ಲಿ ತೀವ್ರ ಬೇಸರ ತರಿಸಿದೆ.

    ಕಲಬುರಗಿ ಜಿಲ್ಲೆಯ ಮರಣಮೃದಂಗ ಇತಿಹಾಸ ತೆಗೆದ್ರೆ ವರ್ಷವಾರು ಮೃತಪಟ್ಟ ಶಿಶುಗಳ ವಿವರ ಇಂತಿದೆ:
    > 2012-13ರಲ್ಲಿ 847 ಶಿಶುಗಳ ಮರಣ
    > 2013-14ರಲ್ಲಿ 815 ಶಿಶುಗಳ ಮರಣ
    > 2014-15ರಲ್ಲಿ 59 ಶಿಶುಗಳು ಸಾವು
    > 2016-17 287 ಕಂದಮ್ಮಗಳು ಬಲಿ

    ಗರ್ಭಿಣಿಯರ ಸಾವು:
    > 2012-13ರಲ್ಲಿ 57 ತಾಯಂದಿರ ಮರಣ
    > 2013-14ರಲ್ಲಿ 37 ತಾಯಂದಿರ ಮರಣ
    > 2014-15ರಲ್ಲಿ 47 ತಾಯಂದಿರ ಸಾವು

    2012-13ರಲ್ಲಿ  847 ನವಜಾತ ಶಿಶುಗಳು ಸಾವನಪ್ಪಿವೆ. 2013-14ರಲ್ಲಿ 815 ನವಜಾತ ಮಕ್ಕಳು ಜೀವಬಿಟ್ಟಿವೆ. 2014-15ರಲ್ಲಿ 59 ಮಕ್ಕಳು ಅಸುನೀಗಿವೆ. 2017ನೇ ಏಪ್ರಿಲ್‍ನಿಂದ ಜುಲೈ ಅಂತ್ಯದವರೆಗೆ 287 ಶಿಶುಗಳು ಸಾವನಪ್ಪಿರುವದು ಅಘಾತಕಾರಿ. ಇನ್ನು 2012-13ರಲ್ಲಿ 57 ತಾಯಿಂದಿರು ಮರಣವನ್ನಪ್ಪಿದ್ರೆ, 2013-14ರಲ್ಲಿ 37, 2015 ಮಾರ್ಚ್ ಅಂತ್ಯದವರೆಗೆ 47 ತಾಯಂದಿರು ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಕೇಳಿದ್ರೆ ಹೆರಿಗೆ ಸಮಯದಲ್ಲಿನ ಸಾವು ತಡೆಯಲು ಇಲಾಖೆ ಸಿದ್ಧವಿದೆ. ಆದ್ರೆ ಬಹುತೇಕ ಹೆರಿಗೆ ಪ್ರಕರಣಗಳಲ್ಲಿ ಸಕಾಲದಲ್ಲಿ ಚಿಕಿತ್ಸೆಗೆ ಬರ್ತಿಲ್ಲ ಅಂತಾರೆ.