Tag: ಶಿವ

  • Shivaratri Speical – ಶಿವರಾತ್ರಿ ದಿನ ಕೇದಗೆ ಹೂ ಬಳಸಲ್ಲ ಯಾಕೆ? – ಏನಿದು ಪುರಾಣ ಕಥೆ?

    Shivaratri Speical – ಶಿವರಾತ್ರಿ ದಿನ ಕೇದಗೆ ಹೂ ಬಳಸಲ್ಲ ಯಾಕೆ? – ಏನಿದು ಪುರಾಣ ಕಥೆ?

    ಶಿವರಾತ್ರಿ (Shivratri) ದಿನ ಹೂವುಗಳಿಗೆ ಬಹಳ ಬೇಡಿಕೆ ಇರುತ್ತದೆ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಹೂವಿನಿಂದ (Flowers) ಶಿವನನ್ನು (Shiva) ಅಲಂಕರಿಸಲಾಗುತ್ತದೆ. ಆದರೆ ಹೂವಿನ ಅಲಂಕಾರ ಸೇವೆಯಲ್ಲಿ ಕೇದಗೆ ಹೂವಿಗೆ (Kedige Flower) ಅವಕಾಶವಿಲ್ಲ

    ಹೌದು. ಶಿವರಾತ್ರಿ ದಿನ ಕೇದಗೆ ಹೂವಿನ ಬಳಕೆಗೆ ನಿಷೇಧವಿದೆ. ನಿಷೇಧ ಯಾಕೆಂದರೆ ಅದಕ್ಕೂ ಒಂದು ಪುರಾಣ ಕಥೆಯಿದೆ.

    ಕಥೆ ಏನು?
    ಒಂದು ದಿನ ಕ್ಷೀರಸಾಗರದಲ್ಲಿ ಲಕ್ಷ್ಮಿಯಿಂದ ವಿಷ್ಣು (Vishnu) ಕಾಲನ್ನು ಒತ್ತಿಸಿಕೊಳ್ಳುತ್ತಿದ್ದ. ಈ ಸಮಯದಲ್ಲಿ ಬ್ರಹ್ಮ (Brahma) ಆಕಸ್ಮಿಕವಾಗಿ ಅಲ್ಲಿಗೆ ಆಗಮಿಸಿದ. ಸೃಷ್ಟಿಕರ್ತನಾದ ನಾನು ಬಂದರೂ ಸ್ವಾಗತ, ಗೌರವ ನೀಡದ್ದಕ್ಕೆ ಬ್ರಹ್ಮನಿಗೆ ಸಿಟ್ಟು ಬಂದು ಆಕ್ಷೇಪಿಸಿದ. ಇದಕ್ಕೆ ವಿಷ್ಣು ನನ್ನ ಹೊಕ್ಕುಳದಿಂದಲೇ ಹುಟ್ಟಿದ ನಿನಗೆ ಯಾಕೆ ನಾನು ಗೌರವ ಕೊಡಬೇಕು ಎಂದು ಮರು ಪ್ರಶ್ನೆಹಾಕಿದ.

    ಆರಂಭದಲ್ಲಿ ತೆಗಳಿಕೆಯಿಂದ ಆರಂಭವಾದ ಮಾತು ನಂತರ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ವಿಚಾರಕ್ಕೆ ತಿರುಗಿತು. ಸೃಷ್ಟಿ ಮತ್ತು ಸ್ಥಿತಿಯ ಜವಾಬ್ದಾರಿ ಹೊತ್ತ ಇಬ್ಬರು ನಿರಂತರವಾಗಿ ವಾದ ಮಾಡುತ್ತಿದ್ದರೆ ವ್ಯವಸ್ಥೆ ಅಸ್ತವ್ಯಸ್ತವಾಗಬಹುದು ಎಂಬದುನ್ನು ಅರಿತ ದೇವತೆಗಳು ಇಬ್ಬರನ್ನೂ ಸಮಾಧಾನ ಮಾಡಲು ಮುಂದಾಗುತ್ತಾರೆ.  ಇದನ್ನೂ ಓದಿ: Shivaratri Speical: ಶಿವಭಕ್ತಿಗೆ ಒಲಿದ ಆಸ್ಟ್ರೇಲಿಯಾ – ಮುಕ್ತಿ ಗುಹೇಶ್ವರ ದೇವಾಲಯದಲ್ಲಿ ಹಲವು ವಿಶೇಷ!

    ದೇವತೆಗಳ ಸಮಾಧಾನಕ್ಕೆ ಇಬ್ಬರು ಬಗ್ಗದೇ ವಾಗ್ವಾದ ಮುಂದುವರಿಸುತ್ತಲೇ ಇದ್ದರು. ಕೊನೆಗೆ ಇವರಿಬ್ಬರ ಮಧ್ಯೆ ನಡೆಯುತ್ತಿರುವ ವಾದವನ್ನು ನಿಲ್ಲಿಸುವ ಏಕೈಕ ಶಕ್ತಿ ಇರುವುದು ಶಿವನಿಗೆ ಮಾತ್ರ ಎಂದು ಭಾವಿಸಿ ದೇವತೆಗಳು ಲಯ ಕರ್ತೃನ ಮುಂದೆ ಹೋಗಿ ಮೊರೆ ಇಡುತ್ತಾರೆ.

    ದೇವತೆಗಳ ಪ್ರಾರ್ಥನೆಯನ್ನು ಒಪ್ಪಿಕೊಂಡರೂ ಇಬ್ಬರ ಜಗಳ ನಿಲ್ಲಿಸುವುದು ಹೇಗೆ ಎಂದು ಶಿವ ಆಲೋಚಿಸತೊಡಗಿದ. ಕೊನೆಗೆ ವಿಷ್ಣು ಮತ್ತು ಬ್ರಹ್ಮನ ಮಧ್ಯೆ ಕಣ್ಣುಕೋರೈಸುವ ಜ್ಯೋತಿಸ್ತಂಭವಾಗಿ ನಿಂತುಬಿಟ್ಟ. ನಂತರ ಇಬ್ಬರನ್ನು ಉದ್ದೇಶಿಸಿ, ನೀವಿಬ್ಬರೂ ವಾದ ಮಾಡುತ್ತಲೇ ಇದ್ದರೆ ಯಾರು ಶ್ರೇಷ್ಠ ಎನ್ನುವುದು ತಿಳಿಯಲು ಸಾಧ್ಯವಿಲ್ಲ. ಮೂರನೇ ವ್ಯಕ್ತಿ ಮಾತ್ರ ತೀರ್ಪು ನೀಡಲು ಸಾಧ್ಯ. ಹೀಗಾಗಿ ನಿಮಗೆ ನಾನೊಂದು ಪರೀಕ್ಷೆ ಕೊಡುತ್ತೇನೆ. ಈ ಪರೀಕ್ಷೆಯಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರು ಶ್ರೇಷ್ಠ ಎಂದು ಹೇಳುತ್ತಾನೆ. ಈ ಪರೀಕ್ಷೆಯನ್ನು ಸ್ವೀಕರಿಸುವುದಾಗಿ ಇಬ್ಬರು ಒಪ್ಪಿಕೊಳ್ಳುತ್ತಾರೆ. ಇದನ್ನೂ ಓದಿ: ಮಹಾಶಿವರಾತ್ರಿಯಲ್ಲಿ ಜಾಗರಣೆಗಿರುವ ಮಹತ್ವವೇನು?

    ಈಗಲೇ ನೀವಿಬ್ಬರೂ ಈ ಕಂಬದ ತುದಿಗಳು ಎಲ್ಲಿದೆ ಎಂದು ಪತ್ತೆ ಹಚ್ಚಿಕೊಂಡು ಬನ್ನಿ. ಯಾರು ಮೊದಲು ಪತ್ತೆ ಮಾಡುತ್ತಾರೋ ಅವರೇ ಶ್ರೇಷ್ಠರು ಎಂದು ಶಿವ ಹೇಳುತ್ತಾನೆ. ಕೂಡಲೇ ಬ್ರಹ್ಮ ಹಂಸರೂಪವನ್ನು ಧರಿಸಿ ಕಂಬದ ಮೇಲ್ತುದಿಯನ್ನು ಹುಡುಕಲು ಹೊರಟರೆ ವಿಷ್ಣು ಹಂದಿಯ ರೂಪ ಧರಿಸಿ ಕೆಳಭಾಗವನ್ನು ತಲುಪಲು ಹೋಗುತ್ತಾನೆ. ಬಹಳ ದೂರದವರೆಗೂ ಹೋದರೂ ತುದಿ ಸಿಗದ ಕಾರಣ ವಿಷ್ಣು ಮರಳಿ ಬರುತ್ತಾನೆ.

    ಬ್ರಹ್ಮ ಮೇಲಕ್ಕೆ ಹೋಗುತ್ತಿದ್ದಂತೆ ಗಾಳಿಯಲ್ಲಿ ಹಾರಿಕೊಂಡು ಒಂದು ಕೇದಗೆ ಹೂ ಬರುತ್ತಿರುತ್ತದೆ. ಈ ವೇಳೆ, ನೀನು ಎಲ್ಲಿಂದ ಬಂದೆ ಎಂದು ಬ್ರಹ್ಮ ಕೇಳಿದಾಗ ನಾನು ಶಿವನ ತುತ್ತ ತುದಿಯಿಂದ ಜಾರಿ ಬೀಳುತ್ತಿದ್ದೇನೆ ಎಂದು ಹೇಳಿತು. ಬ್ರಹ್ಮನಿಗೆ ಸಂತೋಷವಾಗಿ ಕೇದಗೆ ಹೂವನ್ನು ಹಿಡಿದುಕೊಂಡು ಶಿವನಿದ್ದಲ್ಲಿಗೆ ಮರಳಿದ. ಗೆಲುವಿನ ಹುಮ್ಮಸ್ಸಿನಲ್ಲಿ ಬ್ರಹ್ಮ, ನಾನು ಮೇಲ್ತುದಿಯನ್ನು ನೋಡಿದ್ದೇನೆ. ಇದಕ್ಕೆ ಈ ಕೇದಗೆ ಹೂವೇ ಸಾಕ್ಷಿ ಎಂದ.

    ಸುಳ್ಳು ಹೇಳಿದ್ದನ್ನು ಕಂಡು ಸಿಟ್ಟಾದ ಶಿವ, ಇನ್ನು ಮುಂದೆ ನಿನ್ನನ್ನು ಯಾರೂ ಪೂಜೆಸಬಾರದು ಎಂದು ಬ್ರಹ್ಮನಿಗೆ ಶಾಪ ನೀಡಿದ. ಜೊತೆಗೆ ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಯಾರದೇ ಪೂಜೆಯಲ್ಲೂ ನಿನ್ನನ್ನು ಸೇರಿಸಬಾರದು ಎಂಬುದಾಗಿ ಶಪಿಸಿದ. ತನ್ನ ತಪ್ಪಿನ ಅರಿವಾದಂತೆ ಕೇದಗೆ ಅಂಗಲಾಚಿ ಬೇಡಿದ್ದರಿಂದ ಶಿವ, ನನ್ನ ಪೂಜೆಗೆ ನೀನು ಅರ್ಹನಲ್ಲ. ಆದರೆ ನನ್ನ ಆಭರಣ ಸರ್ಪರಾಜ ವಾಸುಕಿಯ ಪೂಜೆ ಅಂದರೆ ನಾಗನ ಪೂಜೆ ನೀನು ಅರ್ಹ ಎಂದು ಹೇಳಿ ಶಾಪದ ತೀವ್ರತೆಯನ್ನು ತಗ್ಗಿಸಿದ.

    ಈ ಕಥೆಯಂತೆ ದೇಶದೆಲ್ಲೆಡೆ ತ್ರಿಮೂರ್ತಿಗಳ ಪೈಕಿ ಶಿವ ಮತ್ತು ವಿಷ್ಣುವಿಗೆ ದೇವಸ್ಥಾನವಿದೆ ಬ್ರಹ್ಮನಿಗೆ ಇಲ್ಲ. ಇದರೊಂದಿಗೆ ನಾಗರ ಪಂಚಮಿಯಂದು ಕೇದಗೆ ಬಹಳ ಮುಖ್ಯ. ಬಹಳಷ್ಟು ಕಡೆ ಪ್ರಸಾದ ರೂಪದಲ್ಲಿ ಕೇದಗೆಯನ್ನೇ ನೀಡಲಾಗುತ್ತದೆ.

     

  • ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಭಗವಂತ ಶಿವನ ಚಿತ್ರ ಬಳಸಿ ಅಪಮಾನ – ಕಾಂಗ್ರೆಸ್‌ನಿಂದ ದೂರು

    ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಭಗವಂತ ಶಿವನ ಚಿತ್ರ ಬಳಸಿ ಅಪಮಾನ – ಕಾಂಗ್ರೆಸ್‌ನಿಂದ ದೂರು

    ಪಣಜಿ: ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಭಗವಂತ ಶಿವನ (Lord Shiva) ಚಿತ್ರಗಳನ್ನು ಪ್ರದರ್ಶಿಸಿ ದೇವರಿಗೆ ಅಪಮಾನಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸನ್‌ಬರ್ನ್ ಇಡಿಎಂ ಉತ್ಸವದ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ (Congress) ಮತ್ತು ಆಮ್ ಆದ್ಮಿ ಪಕ್ಷ (AAP) ಒತ್ತಾಯಿಸಿದೆ.

    ಸನ್‌ಬರ್ನ್ ಸಂಘಟಕರ ವಿರುದ್ಧ ಕಾಂಗ್ರೆಸ್ ಮುಖಂಡ ವಿಜಯ್ ಭಿಕೆ, ಮಾಪುಸಾದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಎಎಪಿ ಗೋವಾ ಮುಖ್ಯಸ್ಥ ಅಮಿತ್ ಪಾಲೇಕರ್ ಅವರು, ಸನಾತನ ಧರ್ಮವನ್ನು ಅಪಮಾನಿಸಿದವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜ.14 ರಿಂದ ದೇಶದ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ: ಮೋದಿ ಕರೆ

    ಇದೇ ಡಿ.28 ರಂದು ಉತ್ತರ ಗೋವಾದ ವಗಾಟರ್‌ನಲ್ಲಿ ಸನ್‌ಬರ್ನ್‌ ಇಡಿಎಂನಿಂದ ಎಲೆಕ್ಟ್ರಾನಿಕ್‌ ನೃತ್ಯ ಸಂಗೀತ ಉತ್ಸವ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಭಗವಾನ್ ಶಂಕರನ ಚಿತ್ರವನ್ನು ಬಳಸಿರುವುದನ್ನು ನಾವು ನೋಡಿದ್ದೇವೆ. ಜನರು ಕುಡಿದು ನೃತ್ಯ ಮಾಡುವಾಗ ಎಲ್ಇಡಿ ಪರದೆಯ ಮೇಲೆ ದೇವ ಶಿವನ ಚಿತ್ರಗಳು ಪ್ರದರ್ಶನಗೊಂಡಿವೆ ಎಂದು ಪಾಲೇಕರ್‌ ಆರೋಪಿಸಿದ್ದಾರೆ.

    ನಮ್ಮ ಸನಾತನ ಧರ್ಮದ ಪಾವಿತ್ರ್ಯತೆಗೆ ಧಕ್ಕೆಯಾಗಿರುವುದರಿಂದ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಎಎಪಿ ನಾಯಕ ತಿಳಿಸಿದ್ದಾರೆ. ಮದ್ಯ ಕುಡಿದು, ನೃತ್ಯ ಮಾಡುವಂತಹ ಕಾರ್ಯಕ್ರಮಗಳಲ್ಲಿ ನಮ್ಮ ದೇವರನ್ನು ಬಳಸುವುದು ಸರಿಯಲ್ಲ. ಸನ್‌ಬರ್ನ್ ಉತ್ಸವದ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸ್ ಮಹಾನಿರ್ದೇಶಕರನ್ನು ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು

    ಮಾಪುಸಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಕಾಂಗ್ರೆಸ್ ನಾಯಕ ವಿಜಯ್ ಭಿಕೆ, ಈ ಉತ್ಸವದಲ್ಲಿ ಮದ್ಯಪಾನ, ನಿಷೇಧಿತ ಪದಾರ್ಥಗಳ ಸೇವನೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ದೇವ ಶಿವನ ಚಿತ್ರಗಳನ್ನು ಬಳಿಸಿ, ಸಂಘಟಕರು ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಕಾಂಗ್ರೆಸ್‌ನಿಂದ ದೂರು ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ – ಗೋವಾದಿಂದ ಮಂಗಳೂರಿಗೆ ದರವೆಷ್ಟು?

  • ‘ಶಿವ’ನಾಗಿ ಪ್ರಭಾಸ್: ಕಣ್ಣಪ್ಪನ ಸಿನಿಮಾಗೆ ಹೊಸ ಮೆರುಗು

    ‘ಶಿವ’ನಾಗಿ ಪ್ರಭಾಸ್: ಕಣ್ಣಪ್ಪನ ಸಿನಿಮಾಗೆ ಹೊಸ ಮೆರುಗು

    ಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್ ಶಿವನ (Shiva) ಪಾತ್ರವನ್ನು ನಿರ್ವಹಿಸಲಿದ್ದಾರೆ. ಶಿವನಾಗಿ ಪ್ರಭಾಸ್ (Prabhas) ಹೇಗೆ ಕಾಣುತ್ತಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಹಾಗಾಗಿಯೇ ಅಭಿಮಾನಿಗಳು ತಾವೇ ‘ಎಐ’ ತಂತ್ರಜ್ಞಾನದಲ್ಲಿ ಶಿವನ ಅವತಾರ ಫೋಟೋ ರೆಡಿ ಮಾಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಸದ್ಯ ವೈರಲ್ ಆಗಿವೆ.

    ನ್ಯೂಜಿಲೆಂಡ್‌ನಲ್ಲಿ ಶೂಟಿಂಗ್

    ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ (Kannappa) ಚಿತ್ರಕ್ಕೆ ನ್ಯೂಜಿಲೆಂಡ್ (New Zealand) ನಲ್ಲಿ ಚಿತ್ರೀಕರಣ (Shooting) ಪ್ರಾರಂಭವಾಗಿದೆ. ಈ ಚಿತ್ರವು ವಿಷ್ಣು ಮಂಚು (Vishnu Manchu) ಅವರ ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ಇಂಥದ್ದೊಂದು ಪೌರಾಣಿಕ ಚಿತ್ರದ ಭಾಗವಾಗಬೇಕು ಎಂಬುದು ಅವರ ಏಳು ವರ್ಷಗಳ ಕನಸಾಗಿತ್ತು. ಅದು ಶಿವ-ಪಾರ್ವತಿಯರ ಆಶೀರ್ವಾದದಿಂದ ಕೊನೆಗೂ ನನಸಾಗಿದೆ ಎಂದು ವಿಷ್ಣು ಹೇಳಿಕೊಂಡಿದ್ದಾರೆ.

    ಇಂಥದ್ದೊಂದು ಬೃಹತ್‍ ಭಕ್ತಿಪ್ರಧಾನ ಚಿತ್ರದ ಕನಸನ್ನು ವಿಷ್ಣು ಅವರಲ್ಲಿ ಮೊದಲಿಗೆ ಬಿತ್ತಿದ್ದು ಖ್ಯಾತ ನಟ ಮತ್ತು ನಿರ್ದೇಶಕ ತನಿಕೆಲ್ಲ ಭರಣಿ. ಏಳು ವರ್ಷಗಳ ಹಿಂದೆ, ಭರಣಿ ಅವರು ವಿಷ್ಣುಗೆ ‘ಕಣ್ಣಪ್ಪ’ ಚಿತ್ರದ ಕಥೆ ಹೇಳಿದರಂತೆ. ಅಲ್ಲಿಂದ ಪ್ರಾರಂಭವಾದ ಪ್ರಯಾಣ, ಈಗ ಸಿನಿಮಾ ಪ್ರಾರಂಭವಾಗುವವರೆಗೂ ಬಂದು ನಿಂತಿದೆ. ಈ ಪ್ರಯಾಣದಲ್ಲಿ ಕಥೆಗೆ ಸೂಕ್ತ ಸಲಹೆ, ಸೂಚನೆ ಕೊಟ್ಟು ಪ್ರೋತ್ಸಾಹಿಸಿದ ಪರಚೂರಿ ಗೋಪಾಲಕೃಷ್ಣ, ವಿಜಯೇಂದ್ರ ಪ್ರಸಾದ್‍, ತೋಟಪಲ್ಲಿ ಸಾಯಿನಾಥ್‍, ತೋಟ ಪ್ರಸಾದ್‍ ಮತ್ತು ನಿರ್ದೇಶಕರಾದ ನಾಗೇಶ್ವರ ರೆಡ್ಡಿ ಹಾಗೂ ಈಶ್ವರ ರೆಡ್ಡಿ ಮುಂತಾದವರನ್ನು ವಿಷ್ಣು ಮರೆಯುವುದಿಲ್ಲ. ಅವರೆಲ್ಲರ ಸಲಹೆ-ಸೂಚನೆಗಳಿಲ್ಲದಿದ್ದರೆ ಚಿತ್ರದ ಕಥೆ ಇಷ್ಟೊಂದು ಅದ್ಭುತವಾಗಿ ಮೂಡಿಬರುವುದಕ್ಕೆ ಸಾಧ್ಯವಿರಲಿಲ್ಲ ಎಂದು ನಂಬಿದ್ದಾರೆ. ಇದನ್ನೂ ಓದಿ:ನಟ ರಣಬೀರ್ ಕಪೂರ್ ಗೆ ‘ಇಡಿ’ ಶಾಕ್: ವಿಚಾರಣೆಗಾಗಿ ನೋಟಿಸ್

    ಕಳೆದ ಎಂಟು ತಿಂಗಳುಗಳು ಮರೆಯಲಾರದ ಅನುಭವ ಎನ್ನುವ ವಿಷ್ಣು, ಕಣ್ಣಪ್ಪ ಚಿತ್ರತಂಡದವರಿಗೆ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಒಂದು ಮರೆಯಲಾರದ ಅನುಭವ. ನಮ್ಮ ತಂಡದವರು ರಜೆ ಇಲ್ಲದೆ ಕೆಲಸ ಮಾಡಿದ್ದಾರೆ. ಹಬ್ಬಗಳನ್ನು ಮರೆತು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ದಿನಕ್ಕೆ ಐದು ಗಂಟೆಯಷ್ಟೇ ನಿದ್ದೆ ಮಾಡಿದ್ದಾರೆ. ಎಷ್ಟೇ ಒತ್ತಡಗಳಿದ್ದರೂ, ನಮ್ಮ ನಿರ್ಧಾರ ಮತ್ತು ನಂಬಿಕೆ ಅಚಲವಾಗಿತ್ತು. ಎಲ್ಲರ ಶ್ರಮದಿಂದಾಗಿ ಕಣ್ಣಪ್ಪ ಚಿತ್ರವು ಚಿತ್ರೀಕರಣ ಹಂತದವರೆಗೂ ಬಂದಿದೆ. 600ಕ್ಕೂ ಹೆಚ್ಚು ಜನರ ತಂಡ ನ್ಯೂಜಿಲೆಂಡ್‌ನಲ್ಲಿ ಬೀಡುಬಿಟ್ಟು, ನಮ್ಮ ಕನಸನ್ನು ನನಸಾಗಿಸುವುದಕ್ಕೆ ದುಡಿಯುತ್ತಿದೆ. ನಮ್ಮ ತಂದೆ ಮೋಹನ್‍ ಬಾಬು ಅವರ ಸಹಕಾರ, ಪ್ರೋತ್ಸಾಹವು ನಮ್ಮ ತಂಡಕ್ಕೆ ದೊಡ್ಡ ಸ್ಫೂರ್ತಿಯಾಗಿದೆ ಎನ್ನುತ್ತಾರೆ.

     

    ಕಣ್ಣಪ್ಪ ಚಿತ್ರದಲ್ಲಿ ಈ ದೇಶದ ಪ್ರತಿಭಾವಂತ ನಟರ ದಂಡೇ ಇದೆಯಂತೆ. ಚಿತ್ರದಲ್ಲಿ ಯಾರು ಯಾರು ನಟಿಸುತ್ತಿದ್ದಾರೆ ಎಂಬ ವಿಷಯವನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಿಳಿಸಲಾಗುತ್ತದಂತೆ. ಅದರ ಮಧ್ಯೆಯೂ ಸೋಷಿಯಲ್‍ ಮೀಡಿಯಾದಲ್ಲಿ ಚಿತ್ರದ ಕುರಿತು ಸುಳ್ಳುಸುದ್ದಿಗಳು ಹರಡುತ್ತಿರುವುದರಿಂದ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ವಿಷ್ಣು ಮನವಿ ಮಾಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಕ್ಷಯ್ ಕುಮಾರ್ ಸಿನಿಮಾ ವಿರುದ್ಧ ಸಿಡಿದೆದ್ದ ಉಜ್ಜಯಿನಿ ಅರ್ಚಕರು

    ಅಕ್ಷಯ್ ಕುಮಾರ್ ಸಿನಿಮಾ ವಿರುದ್ಧ ಸಿಡಿದೆದ್ದ ಉಜ್ಜಯಿನಿ ಅರ್ಚಕರು

    ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ‘ಓ ಮೈ ಗಾಡ್’ ಸಿನಿಮಾಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಿದೆ. ಈವರೆಗೂ ಸೆನ್ಸಾರ್ ಮಂಡಳಿಯಿಂದ ನಾನಾ ರೀತಿಯ ತೊಂದರೆಗಳನ್ನು ಅನುಭವಿಸಿದ್ದ ಚಿತ್ರತಂಡ, ಇದೀಗ ಉಜ್ಜಯಿನಿಯ ಮಹಾಕಾಳೇಶ್ವರ (Ujjain Mahakaleshwar) ದೇವಾಲಯದ ಅರ್ಚಕರ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ವಯಸ್ಕರ ಚಿತ್ರದ ಪ್ರಮಾಣ ಪತ್ರ ನೀಡಿರುವುದರಿಂದ ಅರ್ಚಕರು ಸಿಡಿದೆದ್ದಿದ್ದಾರೆ.

    ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಶಿವನ (Shiva) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಶಿವತಾಂಡವ ನೃತ್ಯ ಕೂಡ ಮಾಡುತ್ತಾರಂತೆ. ಆ ದೃಶ್ಯಗಳನ್ನು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಆ ದೃಶ್ಯಗಳನ್ನು ಚಿತ್ರದಿಂದ ಕೈ ಬಿಡಬೇಕು ಎಂದು ಅರ್ಚಕರು (Priests) ಆಗ್ರಹ ಮಾಡಿದ್ದಾರೆ. ಒಂದು ವೇಳೆ ದೃಶ್ಯಗಳನ್ನು ಡಿಲೀಟ್ ಮಾಡದೇ ಇದ್ದರೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಓ ಮೈ ಗಾಡ್ ವಯಸ್ಕರ ಸಿನಿಮಾ

    ಬಾಲಿವುಡ್ (Bollywood) ಹೆಸರಾಂತ ನಟ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಡ್ 2’ (Oh My God 2)  ಸಿನಿಮಾ ವಿವಾದಿತ ಅಂಶಗಳು ಇರುವ ಕಾರಣದಿಂದಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ (ಸಿ.ಬಿ.ಎಫ್.ಸಿ) ಸೆನ್ಸಾರ್ ಪತ್ರವನ್ನು (Censor) ಕೊಡಲು ನಿರಾಕರಿಸಿತ್ತು (Denial). ಜೊತೆಗೆ ಈ ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಡಲಾಗಿತ್ತು. ಪರಿಶೀಲನಾ ಸಮಿತಿಯು ಕೊನೆಗೂ ಚಿತ್ರಕ್ಕೆ ಪ್ರಮಾಣ ಪತ್ರ ದಯಪಾಲಿಸಿದೆ.

    ಸಿಬಿಎಫ್ಸಿ ಸಿನಿಮಾದ ಒಟ್ಟು 20 ಕಡೆ ದೃಶ್ಯಗಳನ್ನು ಕತ್ತರಿಸಲು ತಿಳಿಸಲಾಗಿತ್ತು. ಕೆಲವು ಕಡೆ ಮಾತುಗಳನ್ನು ಮ್ಯೂಟ್ ಮಾಡಲು ಹೇಳಲಾಗಿತ್ತು. ಇಷ್ಟೆಲ್ಲ ಮಾಡಿದರೂ ಚಿತ್ರಕ್ಕೆ ವಯಸ್ಕರು ನೋಡಬಹುದಾದ ಸಿನಿಮಾ ಎಂದು ‘ಎ’ ಸರ್ಟಿಫಿಕೇಟ್ ನೀಡಲಾಗಿತ್ತು. ಇದೀಗ ಒಂದಷ್ಟು ಬದಲಾವಣೆಯನ್ನು ಮಾಡಿಕೊಳ್ಳಲು ಹೇಳುವ ಮೂಲಕ ಪರಿಶೀಲನಾ ಸಮಿತಿಯೂ ‘ಎ’ ಪ್ರಮಾಣ ಪತ್ರ ನೀಡಿದೆ. ಹಾಗಾಗಿ 18 ವರ್ಷ ತುಂಬಿದವರು ಮಾತ್ರ ಈ ಸಿನಿಮಾ ನೋಡಬಹುದಾಗಿದೆ.

     

    ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸೆನ್ಸಾರ್ ಪತ್ರವನ್ನು ನೀಡಲು ನಿರಾಕರಿಸಿತ್ತು. ಲೈಂಗಿಕ ಶಿಕ್ಷಣದ ಕುರಿತಾಗಿ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಇಂತಹ ವಿಷಯವನ್ನು ಶಿವನ ಮೂಲಕ ಹೇಳಲು ಹೊರಟಿರುವುದು ಸೆನ್ಸಾರ್ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಓ ಮೈ ಗಾಡ್: ಅಕ್ಷಯ್ ಕುಮಾರ್ ಶಿವನಾಗೋದು ಬೇಡ ಅಂದಿತಾ ಸೆನ್ಸಾರ್ ಮಂಡಳಿ?

    ಓ ಮೈ ಗಾಡ್: ಅಕ್ಷಯ್ ಕುಮಾರ್ ಶಿವನಾಗೋದು ಬೇಡ ಅಂದಿತಾ ಸೆನ್ಸಾರ್ ಮಂಡಳಿ?

    ಮೈ ಗಾಡ್ 2 ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಶಿವನಾಗಿ (Shiva) ನಟಿಸಿದ್ದಾರೆ. ಈ ಪಾತ್ರವೇ ಚಿತ್ರಕ್ಕೆ ಮುಳುವಾಗಿದೆ ಎಂದು ಬಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿಯು ಈ ಪಾತ್ರವನ್ನೇ ಸಿನಿಮಾದಿಂದ ಕೈ ಬಿಡುವಂತೆ ಸೂಚಿಸಿದೆಯಂತೆ. ಶಿವನ ಬದಲು ಶಿವ ದೂತನನ್ನಾಗಿ ಮಾಡಿ ಎಂದು ಸಲಹೆ ನೀಡಿದೆಯಂತೆ. ಅಲ್ಲದೇ, ಅಕ್ಷಯ್ ಕುಮಾರ್ ಮೈ ಬಣ್ಣವನ್ನು ನೀಲಿ ಮಾಡಿದ್ದರಿಂದ ಥೇಟ್ ಶಿವನ ಅವತಾರವೆಂಬಂತೆ ಕಾಣುವುದರಿಂದ ಆ ಬಣ್ಣವನ್ನೂ ಬದಲಿಸಲು ಹೇಳಿದೆಯಂತೆ. ಹಾಗಾಗಿ ಚಿತ್ರತಂಡಕ್ಕೆ ಈ ಎಲ್ಲ ಅಂಶಗಳು ತಲೆನೋವಾಗಿವೆ.

    ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಡ್ 2’ (Oh My God 2)  ಸಿನಿಮಾಗೆ ಈವರೆಗೂ ಸೆನ್ಸಾರ್ ಮಂಡಳಿಯು ಪ್ರಮಾಣ ಪತ್ರ ನೀಡಿರಲಿಲ್ಲ. ವಿವಾದಿತ ಅಂಶಗಳು ಇರುವ ಕಾರಣದಿಂದಾಗಿ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ (ಸಿ.ಬಿ.ಎಫ್.ಸಿ) ಸೆನ್ಸಾರ್ ಪತ್ರವನ್ನು (Censor) ಕೊಡಲು ನಿರಾಕರಿಸಿತ್ತು (Denial). ಜೊತೆಗೆ ಈ ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಡಲಾಗಿತ್ತು. ಇದೀಗ ಪ್ರಮಾಣ ಪತ್ರ ಸಿಕ್ಕಿದೆ.

    ಸಿನಿಮಾದ ಒಟ್ಟು 20 ಕಡೆ ದೃಶ್ಯಗಳನ್ನು ಕತ್ತರಿಸಲು ತಿಳಿಸಲಾಗಿದೆ. ಕೆಲವು ಕಡೆ ಮಾತುಗಳನ್ನು ಮ್ಯೂಟ್ ಮಾಡಲು ಹೇಳಲಾಗಿದೆಯಂತೆ. ಇಷ್ಟೆಲ್ಲ ಮಾಡಿದರೂ ಚಿತ್ರಕ್ಕೆ ವಯಸ್ಕರು ನೋಡಬಹುದಾದ ಸಿನಿಮಾ ಎಂದು ‘ಎ’ ಸರ್ಟಿಫಿಕೇಟ್ ನೀಡಲಾಗಿದೆ. ಈ ಕಾರಣದಿಂದಾಗಿ ಚಿತ್ರತಂಡ ತಲೆಬಿಸಿ ಮಾಡಿಕೊಂಡಿದೆ.

    ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸೆನ್ಸಾರ್ ಪತ್ರವನ್ನು ನೀಡಲು ನಿರಾಕರಿಸಲಾಗಿದೆಯಂತೆ. ಲೈಂಗಿಕ ಶಿಕ್ಷಣದ ಕುರಿತಾಗಿ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಇಂತಹ ವಿಷಯವನ್ನು ಶಿವನ ಮೂಲಕ ಹೇಳಲು ಹೊರಟಿರುವುದು ಸೆನ್ಸಾರ್ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

    ಹತ್ತು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಓ ಮೈ ಗಾಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಕೃಷ್ಣನಾಗಿ (Krishna) ಕಾಣಿಸಿಕೊಂಡಿದ್ದರು. ಈ ಬಾರಿ ಅವರು ಶಿವನ (Shiva) ಅವತಾರವೆತ್ತಿದ್ದಾರೆ. ಈ ಹಿಂದೆ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಅದನ್ನು ಅಕ್ಷಯ್ ಅಭಿಮಾನಿಗಳು ಅಪಾರವಾಗಿ ಮೆಚ್ಚಿದ್ದರು.

    ಹೇಳಿ ಕೇಳಿ ಇದೊಂದು ಕಾಮಿಡಿ ಸಿನಿಮಾ. ಶಿವನ ರೂಪದಲ್ಲಿ ಬಂದಿರುವ ಅಕ್ಷಯ್, ಯಾವೆಲ್ಲ ಲೀಲೆಗಳನ್ನು ಪರದೆಯ ಮೇಲೆ ಆಡುತ್ತಾರೋ ಕಾದು ನೋಡಬೇಕು. ಟೀಸರ್ ನಲ್ಲಿಯೂ ಹಲವು ಕಾಮಿಡಿ ಅಂಶಗಳು ಇದ್ದು, ಇಡೀ ಸಿನಿಮಾ ಹಾಸ್ಯದ ರಸದೌತಣವನ್ನು ನೀಡುವುದು ಪಕ್ಕಾ ಅನ್ನುವಂತಿದೆ ರಿಲೀಸ್ ಆದ ಟೀಸರ್.

    ಟೀಸರ್ ನೋಡಿ ಕೆಲವರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದರೆ ಬೈಕಾಟ್ ಮಾಡುವುದಾಗಿಯೂ ಕೆಲವರು ಕಾಮೆಂಟ್ ಮಾಡಿದ್ದರು. ಅಂದಹಾಗೆ ಅಕ್ಷಯ್ ಕುಮಾರ್ ಜೊತೆ ಈ ಸಿನಿಮಾದಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂದು ಕೃಷ್ಣ, ಇಂದು ಶಿವ : ಓ ಮೈ ಗಾಡ್ ಅಂದ ಅಕ್ಷಯ್ ಕುಮಾರ್

    ಅಂದು ಕೃಷ್ಣ, ಇಂದು ಶಿವ : ಓ ಮೈ ಗಾಡ್ ಅಂದ ಅಕ್ಷಯ್ ಕುಮಾರ್

    ಕ್ಷಯ್ ಕುಮಾರ್ ನಟನೆಯ ‘ಓ ಮೈ ಗಾಡ್ 2’ (Oh My God 2) ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ. ಸಿನಿಮಾದಲ್ಲಿನ ಅಕ್ಷಯ್ (Akshay Kumar) ಅವತಾರಕ್ಕೆ ಅಭಿಮಾನಿಗಳು ಜೈ ಹೋ ಎಂದಿದ್ದಾರೆ. 2012ರಲ್ಲಿ ಈ ಸಿನಿಮಾದ ಮೊದಲ ಭಾಗ ಬಿಡುಗಡೆಯಾಗಿತ್ತು. ಇದೀಗ ಪಾರ್ಟ್ 2 ಸಿದ್ಧವಾಗಿದ್ದು ಅಕ್ಷಯ್ ಪಾತ್ರ ಕೂಡ ಬದಲಾಗಿದೆ.

    ಹತ್ತು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಓ ಮೈ ಗಾಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಕೃಷ್ಣನಾಗಿ (Krishna) ಕಾಣಿಸಿಕೊಂಡಿದ್ದರು. ಈ ಬಾರಿ ಅವರು ಶಿವನ (Shiva) ಅವತಾರವೆತ್ತಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಅದನ್ನು ಅಕ್ಷಯ್ ಅಭಿಮಾನಿಗಳು ಅಪಾರವಾಗಿ ಮೆಚ್ಚಿದ್ದರು. ಇವತ್ತಿನ ಟೀಸರ್ ಅನ್ನು ಅಷ್ಟೇ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ಅಮೆರಿಕಾದಲ್ಲಿ ಅವಳಿ ಮಕ್ಕಳಿಗೆ ಕೇಶ ಮುಂಡನ ಮಾಡಿಸಿದ ಪ್ರೀತಿ ಜಿಂಟಾ

    ಹೇಳಿ ಕೇಳಿ ಇದೊಂದು ಕಾಮಿಡಿ ಸಿನಿಮಾ. ಶಿವನ ರೂಪದಲ್ಲಿ ಬಂದಿರುವ ಅಕ್ಷಯ್, ಯಾವೆಲ್ಲ ಲೀಲೆಗಳನ್ನು ಪರದೆಯ ಮೇಲೆ ಆಡುತ್ತಾರೋ ಕಾದು ನೋಡಬೇಕು. ಟೀಸರ್ ನಲ್ಲಿಯೂ ಹಲವು ಕಾಮಿಡಿ ಅಂಶಗಳು ಇದ್ದು, ಇಡೀ ಸಿನಿಮಾ ಹಾಸ್ಯದ ರಸದೌತಣವನ್ನು ನೀಡುವುದು ಪಕ್ಕಾ ಅನ್ನುವಂತಿದೆ ರಿಲೀಸ್ ಆದ ಟೀಸರ್.

     

    ಟೀಸರ್ ನೋಡಿ ಕೆಲವರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗದಂತೆ ಎಚ್ಚವಹಿಸಿ ಎಂದು ಸಲಹೆ ನೀಡಿದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದರೆ ಬೈಕಾಟ್ ಮಾಡುವುದಾಗಿಯೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಅಕ್ಷಯ್ ಕುಮಾರ್ ಜೊತೆ ಈ ಸಿನಿಮಾದಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ಭರವಸೆ ಮೂಡಿಸುವ ಲವ್ ಯೂ ಅಭಿ

    ಹೊಸ ಭರವಸೆ ಮೂಡಿಸುವ ಲವ್ ಯೂ ಅಭಿ

    ನ್ನಡದಲ್ಲಿ ವೆಬ್ ಸಿರೀಸ್ (Web Series) ತೀರಾ ಕಡಿಮೆ. ಅದರಲ್ಲೂ ಗುಣಮಟ್ಟದಲ್ಲಿ ತಯಾರಾದ ಕಥೆಗಳು ಇನ್ನೂ ಕಡಿಮೆ. ಈ ಎಲ್ಲ ಕೊರತೆಯನ್ನು ನೀಗಿಸುತ್ತದೆ ವಿಕ್ರಮ್ ರವಿಚಂದ್ರನ್ (Vikram Ravichandran) ಹಾಗೂ ಅದಿತಿ ಪ್ರಭುದೇವ (Aditi Prabhudev) ಕಾಂಬಿನೇಷನ್ ನ ‘ಲವ್ ಯೂ ಅಭಿ’ (Love U AbhiAbhi)ವೆಬ್ ಸಿರೀಸ್. ಗುಣಮಟ್ಟದಲ್ಲಿ ಉತ್ಕೃಷ್ಟತೆ ಮತ್ತು ತಾಂತ್ರಿಕತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಅದ್ಭುತವಾಗಿ ಏಳು ಕಂತುಗಳನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಾಳಿ.

    ಈಗಾಗಲೇ ಮದುವೆಯಾಗಿ ಒಂದು ಮಗುವನ್ನೂ ಹೆತ್ತಿರುವ ಅಭಿ, ತನ್ನದೇ ಆದ ಕನಸುಗಳನ್ನು ಕಟ್ಟಿಕೊಂಡಿರುವ ಶಿವ, ಈ ಜೋಡಿಯ ಜೀವನದಲ್ಲಿ ನಡೆಯುವ ಘಟನೆಗಳೇ ಲವ್ ಯೂ ಅಭಿ ಕಥೆಯ ಜೀವಾಳ. ಶಿವ ಮತ್ತು ಅಭಿ ಪಾತ್ರವನ್ನು ಇಬ್ಬರೂ ನಟರು ಸಮರ್ಥವಾಗಿ ನಿಭಾಯಿಸಿದ್ದಾರೆ.  ಏಳು ಕಂತುಗಳು ಕುತೂಹಲವನ್ನು ಉಳಿಸಿಕೊಂಡು ಕಂತಿನಿಂದ ಕಂತಿಗೆ ಕೊಂಡಿಯಾಗಿ ನೋಡುಗನನ್ನು ಹಿಡಿದಿಡುತ್ತವೆ.

    ಮನರಂಜನಾ ಲೋಕದಲ್ಲೀಗ ಹೊಸ ಆವೇಗ ಸೃಷ್ಟಿಸಿರುವ ಜಿಯೋ ಸಿನಿಮಾ ಕನ್ನಡದಲ್ಲಿ ವೆಬ್ ಸಿರೀಸ್ ಆರಂಭಿಸಿದೆ. ಅದರ ಮೊದಲ ಭಾಗವಾಗಿ ಲವ್ ಯೂ ಅಭಿ ಎಂಬ ಸಿರೀಸ್ ಶುರು ಮಾಡಿದೆ.  ಅಚ್ಚರಿಯ ಸಂಗತಿ ಅಂದರೆ, ಇಲ್ಲಿರುವ ಏಳು ಎಪಿಸೋಡ್ ಗಳನ್ನು ಅದು ಉಚಿತವಾಗಿ ನೋಡುಗನಿಗೆ ನೀಡಿದೆ. ಈ ಮೂಲಕ ಹೊಸ ಕ್ರಾಂತಿಯನ್ನೇ ಶುರು ಮಾಡಿದೆ. ಇದನ್ನೂ ಓದಿ:ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ

    ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್ರಾಗಜ್‌ ಹೀಗೆ ಅನುಭವಿ ಕಲಾವಿದರ ದಂಡೂ ಇದೆ. ‘ಲವ್‌ ಯು ಅಭಿ’ಗೆ ಅರುಣ್ ಬ್ರಹ್ಮ  ಕ್ಯಾಮೆರಾ ಚಳಕವಿದ್ದು, ಪ್ರದಿಪ್‌ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್‌ ದಿನಕರ್‍ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್‌ ಗೌಡ ಮತ್ತು ಜಿ.ವಿ. ಸತೀಶ್‌ ಕುಮಾರ್ ಜಂಟಿಯಾಗಿ ಮಾತು ಪೋಣಿಸಿದ್ದಾರೆ.

    ಪಾತ್ರಗಳ ಆಯ್ಕೆ, ಕಥೆಯನ್ನು ತಗೆದುಕೊಂಡು ಹೋಗಿರುವ ರೀತಿ. ಪ್ರತಿ ಪಾತ್ರಗಳ ಜೀವಂತಿಕೆ. ತಾಂತ್ರಿಕ ಶ್ರೀಮಂತಿಕೆ ಮತ್ತು ಪ್ರತಿ ದೃಶ್ಯವನ್ನು ಕಟ್ಟಿಕೊಟ್ಟ ರೀತಿಯ ಕಾರಣದಿಂದಾಗಿ ಲವ್ ಯೂ ಅಭಿ ಗಮನ ಸೆಳೆಯುತ್ತದೆ. ಮತ್ತಷ್ಟು ಗುಣಮಟ್ಟದ ವೆಬ್ ಸಿರೀಸ್ ಗೆ ಈ ಕಂತುಗಳು ಮುನ್ನುಡಿ ಬರೆಯುತ್ತವೆ.

  • ಭಾರೀ ಮೊತ್ತಕ್ಕೆ ಸೇಲ್ ಆದ ಸೂರ್ಯ ನಟನೆಯ ‘ಕಂಗುವ’ ಸಿನಿಮಾ

    ಭಾರೀ ಮೊತ್ತಕ್ಕೆ ಸೇಲ್ ಆದ ಸೂರ್ಯ ನಟನೆಯ ‘ಕಂಗುವ’ ಸಿನಿಮಾ

    ಮಿಳಿನ ಖ್ಯಾತ ನಟ ಸೂರ್ಯ (Surya) ನಟನೆಯ ‘ಕಂಗುವ’ (Kanguva) ಸಿನಿಮಾದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಆಗಲೇ ಭರ್ಜರಿ ವ್ಯಾಪಾರ ಆರಂಭಿಸಿದೆ. ಮೊನ್ನೆಯಷ್ಟೇ ಚಿತ್ರದ ಶೀರ್ಷಿಕೆಯನ್ನು ರಿಲೀಸ್ ಮಾಡಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು ಚಿತ್ರತಂಡ. ಇದೀಗ  ಭಾರೀ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

    ಮೂಲಗಳ ಪ್ರಕಾರ ಅಮೆಜಾನ್ ಪ್ರೈಮ್ ಸಂಸ್ಥೆಯು ಕಂಗುವ ಸಿನಿಮಾದ ಓಟಿಟಿ (OTT) ಹಕ್ಕನ್ನು ಬರೋಬ್ಬರಿ 80 ಕೋಟಿಗೆ ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ.  ಈ ಮಾಹಿತಿಯನ್ನು ಚಿತ್ರತಂಡವೇ ಬಹಿರಂಗ ಪಡಿಸಿದೆ ಎಂದು ಕೆಲ ಮಾಧ್ಯಮಗಳ ವರದಿ ಮಾಡಿವೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ರೈ

    ಸ್ಟುಡಿಯೋ ಗ್ರೀನ್ನಡಿ ಕೆ.ಇ. ಜ್ನಾನ ವೇಲ್ ರಾಜ ನಿರ್ಮಿಸಿ, ಶಿವ (Shiva) ನಿರ್ದೇಶಿಸುತ್ತಿರುವ ಈ ಚಿತ್ರವು ಪ್ರಾರಂಭವಾದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ದಿಶಾ ಪಠಾಣಿ (Disha Pathani) ಅಭಿನಯಿಸುತ್ತಿದ್ದು, ಯೋಗಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ‘ಕಂಗುವ’ ಚಿತ್ರವು 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದ್ದು, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.

    ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀಪ್ರಸಾದ್ ಅವರ ಸಂಗೀತವಿರುವ ಈ ಚಿತ್ರವು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, ವಿ ಎಫ್ ಎಕ್ಸ್ ಗೆ ಸಾಕಷ್ಟು ಹಣ ಖರ್ಚಾಗಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗಿದ್ದು, ಚಿತ್ರವು 2024ರಲ್ಲಿ ಬಿಡುಗಡೆಯಾಗಲಿದೆ.  ಈಗಾಗಲೇ ಗೋವಾ, ಚೆನ್ನೈ ಮುಂತಾದ ಕಡೆ ಚಿತ್ರಕ್ಕೆ ಶೇ. 50ರಷ್ಟು ಚಿತ್ರೀಕರಣ ಮುಗಿದಿದ್ದು, ಬಾಕಿ ಇರುವ ಚಿತ್ರೀಕರಣವನ್ನು ಬೇಗ ಮುಗಿಸಿ, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.

  • ಸೂರ್ಯ ಅಭಿನಯದ ‘ಕಂಗುವ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ

    ಸೂರ್ಯ ಅಭಿನಯದ ‘ಕಂಗುವ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ

    ಮಿಳಿನ (Tamil) ಬಹುನಿರೀಕ್ಷಿತ ಚಿತ್ರಗಳ ಪೈಕಿ ಸೂರ್ಯ (Surya) ಅಭಿನಯದ ‘ಸೂರ್ಯ 42’ ಚಿತ್ರವೂ ಒಂದು . ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಘೋಷಣೆಯಾದ ಈ ಚಿತ್ರವು 3ಡಿಯಲ್ಲಿ ಮೂಡಿಬರುತ್ತಿದ್ದು, 10 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಇದೀಗ ‘ಕಂಗುವ’ (Kanguva) ಎಂದು ನಾಮಕರಣ ಮಾಡಲಾಗಿದ್ದು ಮೋಷನ್ ಪೋಸ್ಟರ್ (Motion Poster) ಸಹ ಇತ್ತೀಚೆಗೆ ಬಿಡುಗಡೆಯಾಗಿದೆ.

    ಸ್ಟುಡಿಯೋ ಗ್ರೀನ್ನಡಿ ಕೆ.ಇ. ಜ್ನಾನ ವೇಲ್ ರಾಜ ನಿರ್ಮಿಸಿ, ಶಿವ (Shiva) ನಿರ್ದೇಶಿಸುತ್ತಿರುವ ಈ ಚಿತ್ರವು ಪ್ರಾರಂಭವಾದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ದಿಶಾ ಪಠಾಣಿ ಅಭಿನಯಿಸುತ್ತಿದ್ದು, ಯೋಗಿ ಬಾಬು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ‘ಕಂಗುವ’ ಚಿತ್ರವು 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದ್ದು, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.

    ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀಪ್ರಸಾದ್ ಅವರ ಸಂಗೀತವಿರುವ ಈ ಚಿತ್ರವು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, ವಿ ಎಫ್ ಎಕ್ಸ್ ಗೆ ಸಾಕಷ್ಟು ಹಣ ಖರ್ಚಾಗಲಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗಿದ್ದು, ಚಿತ್ರವು 2024ರಲ್ಲಿ ಬಿಡುಗಡೆಯಾಗಲಿದೆ.

    ಈಗಾಗಲೇ ಗೋವಾ, ಚೆನ್ನೈ ಮುಂತಾದ ಕಡೆ ಚಿತ್ರಕ್ಕೆ ಶೇ. 50ರಷ್ಟು ಚಿತ್ರೀಕರಣ ಮುಗಿದಿದ್ದು, ಬಾಕಿ ಇರುವ ಚಿತ್ರೀಕರಣವನ್ನು ಬೇಗ ಮುಗಿಸಿ, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ.

  • ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರಕ್ಕೆ ರಾಗಿಣಿ ದ್ವಿವೇದಿ ಸಾಥ್

    ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರಕ್ಕೆ ರಾಗಿಣಿ ದ್ವಿವೇದಿ ಸಾಥ್

    ಕೆ.ಬಾಬು ರೆಡ್ಡಿ ಹಾಗೂ ಜಿ.ಸತೀಶ್ ಕುಮಾರ್ ನಿರ್ಮಿಸಿರುವ, ಶಿವಂ (Shivam) ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರ ‘ಲಿಲ್ಲಿ’ (Lily). ಇತ್ತೀಚೆಗೆ ಈ ಚಿತ್ರದ ಹಾಡು, ಟ್ರೇಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ನಟಿ ರಾಗಿಣಿ ದ್ವಿವೇದಿ (Ragini Dwivedi), ಡಾ.ಮೌಲಾ ಶರೀಫ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ತೆಲುಗು ಚಿತ್ರನಟ ಶಿವಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಹಾಡು ಬಿಡುಗಡೆ‌ ಮಾಡಿದ ನಟಿ ರಾಗಿಣಿ, ಎಲ್ಲದಕ್ಕಿಂತ ಮುಖ್ಯ ಮಾನವೀಯತೆ ಎಂಬ ಉತ್ತಮ ಕಥಾಹಂದರ ಹೊಂದಿರುವ ಈ ಮಕ್ಕಳ ಚಿತ್ರ ದೊಡ್ಡಮಟ್ಟದ ಯಶಸ್ಸು ಕಾಣಲಿ ಎಂದು ಹಾರೈಸಿದರು. ಉಮೇಶ್ ಬಣಕಾರ, ಮೌಲಾ ಶರೀಫ್ ಹಾಗೂ ನಟ ಶಿವಕೃಷ್ಣ ಸಹ ಚಿತ್ರತಂಡಕ್ಕೆ ಶುಭ ಕೋರಿದರು. ಇದನ್ನೂ ಓದಿ:`ಸಾಮಿ ಸಾಮಿ’ ಹಾಡಿಗೆ ಸ್ಟೆಪ್ ಹಾಕಿ ಎಂದ ಅಭಿಮಾನಿಗೆ ನೋ ಎಂದ ರಶ್ಮಿಕಾ ಮಂದಣ್ಣ

    ನಾನು ಕನ್ನಡದಲ್ಲೂ ಕೆಲವು ಚಿತ್ರಗಳಿಗೆ ಕೆಲಸ ಮಾಡಿದ್ದೀನಿ. ಆದರೆ ಇದು ನಿರ್ದೇಶಕನಾಗಿ ಮೊದಲ ಚಿತ್ರ. ಮಾನವೀಯತೆಯ ಮೌಲ್ಯವನ್ನು ಸಾರುವ ಚಿತ್ರವಿದು. ಯಾವುದೇ ಒಂದು ವಿಷಯವನ್ನು ಮಕ್ಕಳ ಮೂಲಕ ಹೇಳಿದಾಗ ಬೇಗ ತಲುಪುತ್ತದೆ. ಈ ಹಿಂದೆ ಮಣಿರತ್ನಂ ಸರ್ ಅವರ ‘ಅಂಜಲಿ’ ಚಿತ್ರ ಎಲ್ಲರ ಮನ ಗೆದ್ದಿತ್ತು. ಈಗ ನಮ್ಮ ‘ಲಿಲ್ಲಿ’ ಚಿತ್ರ ಸಹ ಮಕ್ಕಳ ಜೊತೆಗೆ ಹಿರಿಯರಿಗೂ ಇಷ್ಟವಾಗುತ್ತದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಮ್ಮ ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ. ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಶಿವಂ.

    ಮಕ್ಕಳ ಚಿತ್ರ ಅಂತ ಯಾವುದಕ್ಕೂ ಕೊರತೆ ಬಾರದ ಹಾಗೆ ಈ ಸಿನಿಮಾ ನಿರ್ಮಾಣವಾಗಬೇಕು. ಉತ್ತಮ ಕಥೆಯಿರುವ ಈ ಚಿತ್ರ ಎಲ್ಲಾ ಭಾಷೆಯ ಜನರಿಗೂ ತಲುಪಬೇಕು ಎಂದು ನಾನು ನಿರ್ದೇಶಕರಿಗೆ ಹೇಳಿದ್ದೆ. ಅಂದುಕೊಂಡದಕ್ಕಿಂತ ಚಿತ್ರ ಚೆನ್ನಾಗಿ ಬಂದಿದೆ ಎನ್ನುತ್ತಾರೆ ನಿರ್ಮಾಪಕ ಬಾಬು ರೆಡ್ಡಿ. ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವ ಬೇಬಿ ನೇಹಾ, ಮಾಸ್ಟರ್ ವೇದಂತ್ ವರ್ಮ , ಬೇಬಿ ಪ್ರಣೀತಾ ರೆಡ್ಡಿ ಹಾಗೂ ರಾಜ್ ವೀರ್ ಅವರು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.