Tag: ಶಿವ ನಿರ್ವಾಣ

  • ಸಮಂತಾಗೆ ‘ನನ್ನ ರೋಜಾ ನೀನೇ’ ಎಂದ ವಿಜಯ್ ದೇವರಕೊಂಡ

    ಸಮಂತಾಗೆ ‘ನನ್ನ ರೋಜಾ ನೀನೇ’ ಎಂದ ವಿಜಯ್ ದೇವರಕೊಂಡ

    ಟಾಲಿವುಡ್ ಚಿತ್ರರಂಗದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ವಿಜಯ್ ಜನುಮದಿನದ ಸ್ಪೆಷಲ್ ಆಗಿ ಖುಷಿ ಸಿನಿಮಾದ ಮೊದಲ ಹಾಡು (Song) ರಿಲೀಸ್ ಮಾಡಲಾಗಿದೆ. ‘ನನ್ನ ರೋಜಾ ನೀನೇ’ (Nanna Roja Neene) ಎಂಬ ಮೆಲೋಡಿ ಟ್ರ್ಯಾಕ್ ಬಿಡುಗಡೆಯಾಗಿದ್ದು, ಕೇಳುಗರನ್ನು ಇಂಪ್ರೆಸ್ ಮಾಡುತ್ತಿದೆ.

    ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಹೇಶಾಮ್ ಅಬ್ದುಲ್ ವಹಾಬ್ ಧ್ವನಿಯಾಗುವುದರ ಜೊತೆಗೆ ಟ್ಯೂನ್ ಹಾಕಿದ್ದಾರೆ. ಲವರ್ ಬಾಯ್ ಆಗಿ ವಿಜಯ್ ದೇವರಕೊಂಡ (Vijay Devarakonda) ಕಾಣಿಸಿಕೊಂಡಿದ್ದು, ಸಮಂತಾ (Samantha) ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾಶ್ಮೀರ ಭಾಗದಲ್ಲಿ ಇಡೀ ಸಾಂಗ್ ಅನ್ನು ಚಿತ್ರೀಕರಿಸಲಾಗಿದೆ. ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ನಿಷೇಧ : ಪ್ರತಿಭಟನೆಗೆ ಇಳಿದ ಬಿಜೆಪಿ

    ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಖುಷಿ ಸಿನಿಮಾ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಮಜಿಲಿ ಹಿಟ್ ನಿರ್ದೇಶಕ ಶಿವ ನಿರ್ವಣ (Shiva Nirvana) ನಿರ್ದೇಶಿಸುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

    ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.

  • ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

    ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

    ಲೈಗರ್ ಸಿನಿಮಾ ಸೋಲಿನ ನಂತರ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಸಂಭ್ರಮಿಸುವುದಕ್ಕೆ ಕಾರಣವೇ ಇರಲಿಲ್ಲ. ಲೈಗರ್ ಆ ಪ್ರಮಾಣದಲ್ಲಿ ನಟನನ್ನೂ ಸೇರಿದಂತೆ ಅಭಿಮಾನಿಗಳನ್ನೂ ನಿದ್ದೆಗೆಡಿಸಿತ್ತು. ಇದೀಗ ಆ ನಿದ್ದೆಯಿಂದ ಎದ್ದು ಬಂದು ಸಂತೋಷ ಪಡುವುದಕ್ಕೆ ಕಾರಣ ಸಿಕ್ಕಿದೆ. ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ (Birthday) ಹಾಡೊಂದನ್ನು (Song) ರಿಲೀಸ್ ಮಾಡಲು ಖುಷಿ ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ.

    ವಿಜಯ್ ಹುಟ್ಟು ಹಬ್ಬಕ್ಕೆ ಖುಷಿ ಸಿನಿಮಾದ ಹಾಡೊಂದು ಬಿಡುಗಡೆ ಆಗುತ್ತಿದ್ದು, ಇಂದು ಖುಷಿ ಚಿತ್ರದ ಗೀತೆಯನ್ನು ವಿಜಯ್ ಅಭಿಮಾನಿಗಳು ನೋಡಬಹುದಾಗಿದೆ. ಸಮಂತಾ (Samantha) ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಷನ್ ನ ಸಿನಿಮಾ ಇದಾಗಿದ್ದು, ಹಲವು ಹಂತದ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ. ಸಮಂತಾ ಅನಾರೋಗ್ಯದ ಕಾರಣದಿಂದಾಗಿ ಶೂಟಿಂಗ್ ತಡವಾಗಿತ್ತು. ಇದೀಗ ಬಹುತೇಕ ಚಿತ್ರೀಕರಣ ಮುಗಿದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಸಹನಾ ಶೆಟ್ಟಿ

    `ಮಹಾನಟಿ’ ಚಿತ್ರದದ ನಂತರ ಸಮಂತಾ ಮತ್ತು ವಿಜಯ್  ಇಬ್ಬರೂ ಜೊತೆಯಾಗಿ ನಟಿಸಿದ್ದರಿಂದ ಸಹಜವಾಗಿಯೇ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದೀಗ ಈ ಜೋಡಿ ʻಖುಷಿ’ (Kushi) ಎಂಬ ಚೆಂದದ ಲವ್‌ಸ್ಟೋರಿ ಹೇಳಲು ಹೊರಟಿದೆ. ಈಗಾಗಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಅದಕ್ಕೂ ಅತ್ಯುತ್ತಮ ಪ್ರತಿಕ್ರಿಯೆ ಬಂದಿತ್ತು.

    ಶಿವ ನಿರ್ವಾಣ (Shiva Nirvana) ನಿರ್ದೇಶನದ ಖುಷಿ ಸಿನಿಮಾದಲ್ಲಿ ಸಮಂತಾ- ವಿಜಯ್ ದಂಪತಿಗಳಾಗಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಸೆಪ್ಟೆಂಬರ್ 1ರಂದು Kushi ಸಿನಿಮಾ ತೆರೆ ಕಾಣುತ್ತಿದೆ. ರಿಲೀಸ್ ಬಗ್ಗೆ ಚಿತ್ರತಂಡ ಅಧಿಕೃತ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಬಹುಭಾಷೆಗಳಲ್ಲಿ ಬ್ಯುಸಿಯಿರುವ ಸಮಂತಾ- ವಿಜಯ್ ಜೋಡಿ ಈ ಬಾರಿ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.