Tag: ಶಿವಾರಂ ಹೆಬ್ಬಾರ್‌

  • ಸಾಲು ಸಾಲು ಉಚ್ಛಾಟನೆ, ತಾಂತ್ರಿಕವಾಗಿ ಬಿಜೆಪಿ ಬಲಾಬಲ ಕುಸಿತ

    ಸಾಲು ಸಾಲು ಉಚ್ಛಾಟನೆ, ತಾಂತ್ರಿಕವಾಗಿ ಬಿಜೆಪಿ ಬಲಾಬಲ ಕುಸಿತ

    ಬೆಂಗಳೂರು: ಸಾಲು ಸಾಲು ಉಚ್ಛಾಟನೆಯಿಂದಾಗಿ ವಿಧಾನಸಭೆಯಲ್ಲಿ ತಾಂತ್ರಿಕವಾಗಿ ಬಿಜೆಪಿ (BJP) ಬಲಾಬಲ ಕುಸಿತವಾಗಿದೆ.

    2023ರ ವಿಧಾನಸಭೆ ಚುನಾವಣೆಯಲ್ಲಿ (Karnataka Election) ಬಿಜೆಪಿ 66 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಲೋಕಸಭೆ ಚುನಾವಣೆಯಲ್ಲಿ ಹಾವೇರಿಯಿಂದ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪರ್ಧಿಸಿ ಜಯಗಳಿಸಿದ್ದರಿಂದ ಶಿಗ್ಗಾಂವಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.

    ಉಪಚುನಾವಣೆಯಲ್ಲಿ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿಗೆ ಸೋಲಾಗಿದ್ದರಿಂದ ಬಿಜೆಪಿ 65 ಶಾಸಕರನ್ನು ಹೊಂದಿತ್ತು. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಉಚ್ಚಾಟನೆ ಬಳಿಕ‌ ಬಿಜೆಪಿ ಬಲ‌ 64ಕ್ಕೆ ಕುಸಿದಿತ್ತು. ಈಗ ಶಿವರಾಂ ಹೆಬ್ಬಾರ್ (Shivaram Hebbar), ಎಸ್.ಟಿ.ಸೋಮಶೇಖರ್ (ST Somashekar) ಉಚ್ಚಾಟನೆಯ ಬಳಿಕ ಬಿಜೆಪಿ ಬಲ 62ಕ್ಕೆ ಕುಸಿತವಾಗಿದೆ. ಇದನ್ನೂ ಓದಿ: ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

     

    ರಾಜ್ಯ ಬಿಜೆಪಿಯಲ್ಲಿ ಅಶಿಸ್ತು, ಗುಂಪುಗಾರಿಕೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹಿನ್ನೆಡೆ ಆಗಿದ್ದಕ್ಕೆ ಹೈಕಮಾಂಡ್ ಗರಂ ಆಗಿತ್ತು. ಅಶಿಸ್ತು‌ ತೋರಿದವರ ವಿರುದ್ಧ ಕ್ರಮ ಮೂಲಕ ಸಂಘಟನೆ, ಪಕ್ಷ ಬಲವರ್ಧನೆಗೆ ತಾಕೀತು ಮಾಡಿದೆ. ಸೋಮಶೇಖರ್, ಹೆಬ್ಬಾರ್ ಉಚ್ಛಾಟನೆ ಮೂಲಕವೇ ರಾಜ್ಯ ಬಿಜೆಪಿಗೆ ಇನ್ಮುಂದೆ ಪಕ್ಷವೇ ಮುಖ್ಯ, ಶಿಸ್ತೇ ಮುಖ್ಯ ಎಂದು ಹೈಕಮಾಂಡ್ ಖಡಕ್ ಸಂದೇಶ ರವಾನಿಸಿದೆ. ಇದನ್ನೂ ಓದಿ: ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ರೆಡ್ಡಿ ಶಿಫ್ಟ್‌

    ಇನ್ ಮುಂದೆ ಪಕ್ಷ ವಿರೋಧಿ ಚಟುವಟಿಕೆ ಸಹಿಸುವುದಿಲ್ಲ. ಹೊಂದಾಣಿಕೆ ರಾಜಕಾರಣ ಮಾಡುವಂತಿಲ್ಲ. ಬಿಜೆಪಿಯಲ್ಲಿ ಪಕ್ಷ ಸಂಘಟನೆ, ಶಿಸ್ತು ಪಾಲನೆ ಮಾಡುವರಿಗೆ ಅಷ್ಟೇ ಉಳಿಗಾಲ ಎಂಬ ಸಂದೇಶವನ್ನು ಹೈಕಮಾಂಡ್‌ ನಾಯಕರಿಗೆ ಕಳುಹಿಸಿದೆ.

     

  • ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

    ಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ

    ಬೆಂಗಳೂರು: ಬಿಜೆಪಿಯ (BJP)  ಬೆಂಗಳೂರಿನ ಯಶವಂತಪುರದ ಶಾಸಕ ಎಸ್‌ಟಿ ಸೋಮಶೇಖರ್‌ (ST Somashekar)  ಮತ್ತು ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್‌ (Shivaram Hebbar) ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

    ಪದೇ ಪದೇ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಮಾರ್ಚ್‌ ಕೊನೆಯಲ್ಲಿ ಇಬ್ಬರಿಗೂ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಶೋಕಾಸ್‌ ನೋಟಿಸ್‌ಗೆ ಸರಿಯಾದ ಉತ್ತರ ನೀಡದ ಕಾರಣ ಇಬ್ಬರನ್ನೂ ಬಿಜೆಪಿ ಉಚ್ಚಾಟನೆ ಮಾಡಿದೆ.

    ಇಬ್ಬರು ನಾಯಕರು ಬಹಿರಂಗವಾಗಿ ಕಾಂಗ್ರೆಸ್‌ ಸಭೆಯಲ್ಲಿ ಭಾಗಿಯಾಗುತ್ತಿದ್ದರು. ಅಷ್ಟೇ ಅಲ್ಲದೇ ಪಕ್ಷದ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಇಬ್ಬರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಂಡಿದೆ.  ಇದನ್ನೂ ಓದಿ: ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ರೆಡ್ಡಿ ಶಿಫ್ಟ್‌

     
    ಉಚ್ಚಾಟನೆಗೆ ಕಾರಣ ಏನು?
    ಪದೇ ಪದೇ ಡಿಕೆಶಿ ನಿವಾಸದ ಕದ ತಟ್ಟುತ್ತಿದ್ದ ಇಬ್ಬರು ಶಾಸಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಾರ್ವಜನಿಕ ಸಭೆಗಳಲ್ಲಿ ಹೊಗಳುತ್ತಿದ್ದರು. ಗ್ಯಾರಂಟಿ, ಸರ್ಕಾರದ ಯೋಜನೆಗಳಿಗೆ ಶಹಬ್ಬಾಸ್‌ಗಿರಿ ನೀಡುತ್ತಿದ್ದರು.

    ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸದೇ ಡೋಂಟ್ ಕೇರ್ ಎನ್ನುತ್ತಿದ್ದರು. ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ, ಸಂಘಟನಾ ಸಭೆಗಳಿಂದ ದೂರ ಉಳಿದಿದ್ದರು. ಬಿಜೆಪಿಯೊಳಗಿನ ಭಿನ್ನಮತದ ಬಗ್ಗೆ ಬಹಿರಂಗ ವ್ಯಂಗ್ಯ, ಒಂದು ಗುಂಪಿನ ಬಗ್ಗೆ ನಿರಂತರ ವಾಗ್ದಾಳಿ ನಡೆಸುತ್ತಿದ್ದರು.