Tag: ಶಿವಾನಿ

  • ಐದು ಭಾಷೆಗಳಲ್ಲಿ 666 ವೆಬ್ ಸಿರೀಸ್: ಮೋಷನ್ ಟೀಸರ್ ರಿಲೀಸ್

    ಐದು ಭಾಷೆಗಳಲ್ಲಿ 666 ವೆಬ್ ಸಿರೀಸ್: ಮೋಷನ್ ಟೀಸರ್ ರಿಲೀಸ್

    ನ್ನಡದಲ್ಲಿ ವೆಬ್ ಸಿರೀಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಭಾನ್ವಿತ ಕಲಾವಿದರ ತಂಡಗಳು ಉತ್ತಮ ಕಟೆಂಟ್ ಗಳುಳ್ಳ ವೆಬ್ ಸಿರೀಸ್ ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ ಯುವತಂಡವನ್ನು ಹೊಂದಿರುವ 666 ವೆಬ್ ಸಿರೀಸ್. ಕಿರುಚಿತ್ರ ನಿರ್ದೇಶಿಸಿ ಗಮನ ಸೆಳೆದಿದ್ದ ರಂಗಸ್ವಾಮಿ (Rangaswamy) ಮೊದಲ ಬಾರಿ ವೆಬ್ ಸಿರೀಸ್ ನಿರ್ದೇಶಿಸಿ ನಿರ್ಮಾಣ ಮಾಡಿದ್ದು ಇಂದು ಚಿತ್ರದ ಮೋಷನ್ ಟೀಸರ್ ಬಿಡುಗಡೆಯಾಗಿದೆ.

    ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಸಿನಿಮಾ ನಿರ್ದೇಶನದ ಮೇಲೆ ಅಪಾರ ಪ್ಯಾಶನ್ ಇಟ್ಟುಕೊಂಡಿದ್ದು, 275, ಡೋಂಟ್ ವಿಸ್ಪರ್, ನಿಹಾರಿಕ, ಸೇರಿದಂತೆ ಹಲವು ಕಿರುಚಿತ್ರಗಳನ್ನು ಕೆಲಸ ನಿರ್ವಹಿಸುತ್ತಲೇ ನಿರ್ದೇಶಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಕಿರುಚಿತ್ರ ನಿರ್ದೇಶಿಸಿದ್ದ ಅನುಭಗಳನ್ನೆಲ್ಲ ಇಟ್ಟುಕೊಂಡು ಮೊದಲ ಬಾರಿ ಏಳು ಕಂತುಗಳುಳ್ಳ ವೆಬ್ ಸಿರೀಸ್ ನಿರ್ದೇಶಿಸಿ ನಿರ್ಮಾಣವನ್ನು ಮಾಡಿದ್ದಾರೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಟಿ ಕೀರ್ತಿ ಸುರೇಶ್

    ಕೋಡೆಕ್ಸ್ ಗಿಗಾಸ್ ಆಧರಿಸಿ 666 ವೆಬ್ ಸಿರೀಸ್ ಕಥೆ ಹೆಣೆಯಲಾಗಿದ್ದು, ಕಥೆ ಚಿತ್ರಕಥೆಯನ್ನು ರಂಗಸ್ವಾಮಿಯವರೇ ಹೆಣೆದಿದ್ದಾರೆ. ಹಾರಾರ್ ಥ್ರಿಲ್ಲರ್ ಜಾನರ್ ಒಳಗೊಂಡ 666 ವೆಬ್ ಸಿರೀಸ್ ಏಳು ಕಂತುಗಳನ್ನು ಒಳಗೊಂಡಿದ್ದು, ಐದು ಭಾಷೆಯಲ್ಲಿ ನಿರ್ಮಾಣವಾಗಿದೆ. ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿಯಿದೆ. ಮೋಷನ್ ಟೀಸರ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಸಿನಿಮಾ ತಂಡ ಡಿಸೆಂಬರ್ ನಲ್ಲಿ 666 ವೆಬ್ ಸಿರೀಸ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ದರ್ಶಿನಿ ಒಡೆಯರ್ (Darshini Wodeyar), ಶಿವಾನಿ (Shivani), ಗಣೇಶ್ ನಾಯಕ್, ಕೀರ್ತಿ, ಮಂಜುನಾಥ್, ವಿವೇಕ್ ವೀಣಾ ಈ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಸಿನಿಮಾರಂಗ ಬ್ಯಾನರ್ ನಡಿ ನಿರ್ದೇಶಕ ರಂಗಸ್ವಾಮಿ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದು, ಸಚಿನ್ ಬಸ್ರೂರು ಸಂಗೀತ ನಿರ್ದೇಶನ, ಅರುಣ್ ಭಾಗವತ್ ಕ್ಯಾಮೆರ ನಿರ್ದೇಶನ ಹಾಗೂ ಸಂಕಲನವಿದೆ.

    Live Tv
    [brid partner=56869869 player=32851 video=960834 autoplay=true]

  • ಶಿವಾನಿ ಆತ್ಮಹತ್ಯೆ ಪ್ರಕರಣ – ಕಾಲೇಜ್‍ನಲ್ಲಿ ಕೊಟ್ಟ ಕಿರುಕುಳವೇ ಕಾರಣ: ಪೋಷಕರ ಆರೋಪ

    ಶಿವಾನಿ ಆತ್ಮಹತ್ಯೆ ಪ್ರಕರಣ – ಕಾಲೇಜ್‍ನಲ್ಲಿ ಕೊಟ್ಟ ಕಿರುಕುಳವೇ ಕಾರಣ: ಪೋಷಕರ ಆರೋಪ

    ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜ್‍ನ ಹಾಸ್ಟೆಲ್‍ನಲ್ಲಿ ಕೊನೆಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಶಿವಾನಿ ಆತ್ಮಹತ್ಯೆ ಪ್ರಕರಣಕ್ಕೆ ಕಾಲೇಜ್‍ನಲ್ಲಿ ಕೊಟ್ಟ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

    ನಿನ್ನೆ ಶಿವಾನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಶಿವಾನಿ ಆತ್ಮಹತ್ಯೆ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ. ಶಿವಾನಿ ಆತ್ಮಹತ್ಯೆಗೆ ಕಾಲೇಜ್‍ನಲ್ಲಿ ಕೊಟ್ಟ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಮಗಳ ಸಾವಿಗೆ ನ್ಯಾಯಬೇಕು. ಪ್ರಕರಣವನ್ನು ಸಿಐಡಿಗೆ ಕೊಡಬೇಕೆಂದು ಆಗ್ರಹಿಸಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಮಾಜಿ ಪ್ರೇಯಸಿಯ ರುಂಡ ಕಡಿದು, ಪೊಲೀಸ್ ಠಾಣೆಗೆ ತಂದ ಪಾಗಲ್ ಪ್ರೇಮಿ

    ಶಿವಾನಿ ನಿನ್ನೆ ಪರೀಕ್ಷೆಗೆ ಹಾಜರಾಗದೆ ಹಾಸ್ಟೆಲ್‍ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಧ್ಯಾಹ್ನ ಹಾಸ್ಟೆಲ್ ವಾರ್ಡನ್ ಹೋಗಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ವಾರ್ಡನ್ ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ ಕಾಲೇಜ್ ಪ್ರಿನ್ಸಿಪಾಲ್ ಕೂಡ ಕೆಂಗೇರಿ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಸಿಬ್ಬಂದಿಗೆ ಮೆಣಸಿನ ಪುಡಿ ಎರಚಿ ಬೆಲೆ ಬಾಳುವ ನೆಕ್ಲೇಸ್ ಕದ್ದ ಖತರ್ನಾಕ್ ಅಪ್ಪ-ಮಗಳು

    Live Tv
    [brid partner=56869869 player=32851 video=960834 autoplay=true]

  • ಧರ್ಮಸ್ಥಳದ ಮುದ್ದು ಆನೆಮರಿಗೆ ಶಿವಾನಿ ಹೆಸರಿಟ್ಟ ಧರ್ಮಾಧಿಕಾರಿ ಮೊಮ್ಮಗಳು

    ಧರ್ಮಸ್ಥಳದ ಮುದ್ದು ಆನೆಮರಿಗೆ ಶಿವಾನಿ ಹೆಸರಿಟ್ಟ ಧರ್ಮಾಧಿಕಾರಿ ಮೊಮ್ಮಗಳು

    ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹುಟ್ಟಿದ ಆನೆ ಮರಿಗೆ ಇಂದು ನಾಮಕರಣ ಮಾಡಲಾಯಿತು. ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮೊಮ್ಮಗಳು ಮಾನ್ಯ, ಶಿವಾನಿ ಹೆಸರು ಘೋಷಿಸುವ ಮೂಲಕ ನಾಮಕರಣ ಮಾಡಿದರು.

    ಶ್ರೀಕ್ಷೇತ್ರದ ಆನೆ ಲಕ್ಷ್ಮೀ ಕಳೆದ ಜುಲೈ1 ರಂದು ಹೆಣ್ಣು ಮರಿಗೆ ಜನ್ಮ ನೀಡಿತ್ತು. ಹೀಗಾಗಿ ಮರಿಯ ನಾಮಕರಣ ಇಂದು ತುಲಾ ಲಗ್ನ ಮುಹೂರ್ತದಲ್ಲಿ ನಡೆಯಿತು. ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ವಿಧಿ ನೆರವೇರಿಸಿದರು. ಇದೇ ವೇಳೆ ಆನೆಯ ಮಾವುತ ಕೃಷ್ಣ ಅವರಿಗೆ ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಸನ್ಮಾನ ಮಾಡಿದರು.

    ನಾಮಕರಣ ಸಮಾರಂಭದಲ್ಲಿ ಹೇಮಾವತಿ ವಿ ಹೆಗ್ಗಡೆ, ಡಿ ಹರ್ಷೇಂದ್ರ  ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ, ಸೋನಿಯಾ ವರ್ಮಾ, ಅಮಿತ್, ಶ್ರದ್ಧಾ ಅಮಿತ್, ವೀರು ವಿ ಶೆಟ್ಟಿ, ದೇವಳದ ಶ್ರೀ ದೇವಳದ ಪಾರುಪತ್ಯಗಾರ ಪಿ ಲಕ್ಷ್ಮೀನಾರಾಯಣ ರಾವ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.