Tag: ಶಿವಾನಂದ್ ಪಾಟೀಲ್

  • ಸಚಿವ ಶಿವಾನಂದ್ ಪಾಟೀಲ್ ಕೂಡಲೇ ರೈತರ ಕ್ಷಮೆ ಕೇಳಬೇಕು: ಹೆಚ್‍ಡಿಕೆ

    ಸಚಿವ ಶಿವಾನಂದ್ ಪಾಟೀಲ್ ಕೂಡಲೇ ರೈತರ ಕ್ಷಮೆ ಕೇಳಬೇಕು: ಹೆಚ್‍ಡಿಕೆ

    ಬೆಂಗಳೂರು: ರೈತರ ಬಗ್ಗೆ ಸಚಿವ ಶಿವಾನಂದ್ ಪಾಟೀಲ್ (Shivanand Patil) ಉಡಾಫೆ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೂಡಲೇ ಸಚಿವರು ಕ್ಷಮೆ ಕೇಳಿ, ಹೇಳಿಕೆ ವಾಪಸ್ ಪಡೆಯಬೇಕು ಅಂತ ಆಗ್ರಹಿಸಿದ್ದಾರೆ.

    ಸಚಿವ ಶಿವಾನಂದ್ ಪಾಟೀಲ್ ಅವರು ರೈತರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಅನ್ನದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಮಾಡುವುದು ಖಂಡಿತಾ ಸರಿಯಲ್ಲ. ಸಚಿವರು ಇಂತಹ ವಿಷಯಗಳ ಬಗ್ಗೆ ಬಹಳ ಎಚ್ಚರಿಕೆ, ಸೂಕ್ಷ್ಮತೆ, ಸಂಯಮದಿಂದ ಮಾತನಾಡಬೇಕು ಅಂತ ಕಿಡಿಕಾರಿದರು.

    ನಾನು ಕೃಷಿಸಾಲ ಮನ್ನಾ ಮಾಡುವ ಮುನ್ನ ರಾಜ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯಾಕಾಂಡ ನೆನಪು ಮಾಡಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ. ರೈತ ಕೇಳುತ್ತಿರುವುದು ತನ್ನ ಹಕ್ಕನ್ನಷ್ಟೇ ಭಿಕ್ಷೆಯನ್ನಲ್ಲ. ಸಚಿವರು ಬೇಷರತ್ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನಗೆ ಮದ ಏರಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಶಿವಾನಂದ್ ಪಾಟೀಲ್

  • ನನಗೆ ಮದ ಏರಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಶಿವಾನಂದ್ ಪಾಟೀಲ್

    ನನಗೆ ಮದ ಏರಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಶಿವಾನಂದ್ ಪಾಟೀಲ್

    ವಿಜಯಪುರ: ನನಗೆ ಮದ ಏರಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ರೈತರು ಬರಗಾಲ ಬರಲಿ ಎಂದು ಆಶಿಸುತ್ತಾರೆ ಎಂಬ ತಮ್ಮ ಹೇಳಿಕೆ ಕುರಿತು ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ (Shivanand Patil) ಸ್ಪಷ್ಟನೆ ನೀಡಿದ್ದಾರೆ.

    ಈ ಸಂಬಂಧ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆ (Loksabha Election) ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಹೇಳುವ ಮೂಲಕ ಸಚಿವರು ಪರೋಕ್ಷವಾಗಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡರು. ನಾನು ರೈತರ ವಿರೋಧಿ ಅಲ್ಲ, ರೈತರ ವಿರೋಧವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಮೂರು ವರ್ಷಕ್ಕೊಮೆ ರೈತರ ಬೆಳೆಗಳಿಗೆ ಬೆಲೆ ಬರುತ್ತದೆ. ಉಳಿದ ಎರಡು ಬೆಲೆ ಇಲ್ಲದೆ ಕಂಗಾಲಾಗಿರುತ್ತಾರೆ. ಹಾಗಾಗಿ ರೈತರು ಸಾಲಮನ್ನಾ ಆಗಲಿ ಎಂದು ಆಶಯ ವ್ಯಕ್ತಪಡಿಸುತ್ತಾರೆ ಎಂದಿದ್ದೇನೆ ಅಂದರು.

    ಇತ್ತೀಚೆಗೆ ಕೇಂದ್ರದ ಯೋಜನೆಗಳು ರೈತರಿಗೆ (Farmers) ಮುಳುವಾಗಿವೆ. ನನಗೆ ಮದ ಏರಿದೆ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ ಇದೆಲ್ಲ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು. ಅಲ್ಲದೆ ಬಿಜೆಪಿ ನಾಯಕರಿಗೆ ರೈತರ ಮೇಲೆ ಕರುಣೆ ಇದ್ದರೆ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಾಯಿಸಲಿ. ವಿರೋಧ ಪಕ್ಷದ ನಾಯಕರು ರೈತರ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಗಮನಕ್ಕೆ ತರಲಿ ಎಂದು ಇದೇ ವೇಳೆ ಶಿವಾನಂದ್ ಪಾಟೀಲ್ ಒತ್ತಾಯಿಸಿದರು. ಇದನ್ನೂ ಓದಿ: ಸಾಲಮನ್ನಾ ಆಸೆಗಾಗಿ ರೈತರು ಬರಗಾಲಕ್ಕೆ ಕಾಯುತ್ತಾರೆ- ಶಿವಾನಂದ್ ಪಾಟೀಲ್ ವಿವಾದಾತ್ಮಕ ಹೇಳಿಕೆ

    ಸಚಿವರು ಹೇಳಿದ್ದೇನು..?: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿರುವ ಸಚಿವರು, ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಹೇಳಿದ್ದಾರೆ. ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟ ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜನೂ ಕೊಟ್ಟರು, ಗೊಬ್ಬರನೂ ಕೊಟ್ಟರು. ಇನ್ನೂ ರೈತರಿಗೆ ಏನಪ್ಪಾ ಅಂದ್ರೆ ಒಂದು ಆಸೆ ಇರುತ್ತೆ, ಮಗನ್ ಮ್ಯಾಲ ಮ್ಯಾಲ ಬರಗಾಲ ಬೀಳಲಿ ಅಂತ ಹೇಳಿ. ಯಾಕಂದ್ರೆ ಸಾಲ ಮನ್ನಾ ಆಗುತ್ತೆ ಅಂತಾ. ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದರು.

    ಸಚಿವರ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ರೈತರ ಬಗ್ಗೆ ಈ ರೀತಿಯಾಗಿ ಹೇಳಿಕೆ ಕೊಟ್ಟಿರುವುದನ್ನು ಖಂಡಿಸುವುದಾಗಿ ಬಿಜೆಪಿ ನಾಯಕರು ವಾಗ್ದಾಳಿಗಳನ್ನು ನಡೆಸಿದ್ದಾರೆ.

  • ಸಾಲಮನ್ನಾ ಆಸೆಗಾಗಿ ರೈತರು ಬರಗಾಲಕ್ಕೆ ಕಾಯುತ್ತಾರೆ- ಶಿವಾನಂದ್ ಪಾಟೀಲ್ ವಿವಾದಾತ್ಮಕ ಹೇಳಿಕೆ

    ಸಾಲಮನ್ನಾ ಆಸೆಗಾಗಿ ರೈತರು ಬರಗಾಲಕ್ಕೆ ಕಾಯುತ್ತಾರೆ- ಶಿವಾನಂದ್ ಪಾಟೀಲ್ ವಿವಾದಾತ್ಮಕ ಹೇಳಿಕೆ

    ಚಿಕ್ಕೋಡಿ (ಬೆಳಗಾವಿ): ಇತ್ತೀಚೆಗಷ್ಟೆ ರೈತರಿಗೆ (Farmers) ಪರಿಹಾರ ನೀಡಿದ ಬಳಿಕ ರೈತರ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ (Shivanand Patil) ಮತ್ತೊಮ್ಮೆ ರೈತರ ಬಗ್ಗೆ ಲಘುವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿರುವ ಸಚಿವರು, ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಪರಿಹಾರ ಕೊಡೋಕೆ ಶುರು ಮಾಡಿದ್ಮೇಲೆ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ: ಶಿವಾನಂದ ಪಾಟೀಲ್

    ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟ ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜನೂ ಕೊಟ್ಟರು, ಗೊಬ್ಬರನೂ ಕೊಟ್ಟರು. ಇನ್ನೂ ರೈತರಿಗೆ ಏನಪ್ಪಾ ಅಂದ್ರೆ ಒಂದು ಆಸೆ ಇರುತ್ತೆ, ಮಗನ್ ಮ್ಯಾಲ ಮ್ಯಾಲ ಬರಗಾಲ ಬೀಳಲಿ ಅಂತ ಹೇಳಿ. ಯಾಕಂದ್ರೆ ಸಾಲ ಮನ್ನಾ ಗುತ್ತೆ ಅಂತಾ. ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದಾರೆ.

    ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಆದ್ರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯ. ಸರ್ಕಾರ ಸದಾ ನರೆವಿಗೆ ಬರಲು ಸಾಧ್ಯವಿಲ್ಲ ಎಂದು ಸಚಿವರು ಮಾತನಾಡಿದ್ದಾರೆ.

  • ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ನಿಧನ

    ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ನಿಧನ

    ವಿಜಯಪುರ: ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಶಿವಾನಂದ್ ಪಾಟೀಲ್ ಸೋಮಜಾಳ (Shivanand Patil Somajal) ನಿಧನರಾಗಿದ್ದಾರೆ.

    ಹೃದಯಾಘಾತದಿಂದ ಶಿವಾನಂದ್ ಪಾಟೀಲ್ ಸೋಮಜಾಳ (54) ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ. ನಾಗಠಾಣ ಮತಕ್ಷೇತ್ರ (Nagthan Assembly Constituency) ದಲ್ಲಿ ನಡೆದ ಪಕ್ಷದ ಪಂಚರತ್ನ ಕಾರ್ಯಕ್ರಮದಲ್ಲಿ ಹೆಚ್‍ಡಿಕೆಯೊಂದಿಗೆ ಶಿವಾನಂದ್ ಭಾಗಿಯಾಗಿದ್ದರು. ನಂತರ ಸಂಜೆ ಸಿಂದಗಿ ಪಟ್ಟಣಕ್ಕೆ ತೆರಳಿದ್ದರು. ರಾತ್ರಿ 9 ರ ವೇಳೆ ಅಸ್ವಸ್ಥಗೊಂಡ ಶಿವಾನಂದ್ ಪಾಟೀಲ್ ಸೋಮಜಾಳ, ಸಿಂದಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

    ತೀವ್ರ ಹೃದಯಾಘಾತದಿಂದ ಶಿವಾನಂದ್ ಕೊನೆಯುಸಿರೆಳೆದರು. ಶಿವಾನಂದ್ 16 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾ ಗಿದ್ದರು. ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸೋಮಜಾಳ ಗ್ರಾಮದ ಮೂಲದವರಾಗಿರುವ ಇವರು, ಪತ್ನಿ ವಿಶಾಲಾಕ್ಷಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ಇದನ್ನೂ ಓದಿ: ಹಂತಕರಿಂದ ಹತ್ಯೆಗೀಡಾದ ಜಲೀಲ್ ಕುಟುಂಬಕ್ಕೆ 1 ಲಕ್ಷ ರೂ. ಚೆಕ್ ವಿತರಿಸಿದ ಪ್ರಿಯಾಂಕ್ ಖರ್ಗೆ

    ಹೆಚ್‍ಡಿಕೆ ಕಂಬನಿ: ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ್ ಪಾಟೀಲ್ ಸೋಮಜಾಳ ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ್ದಾರೆ. ಈ ಹಿನ್ನೆಲೆ ಟ್ವೀಟ್ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸಂತಾಪ ಸೂಚಿಸಿದ್ದಾರೆ. ಶಿವಾನಂದ್ ಸೋಮಜಾಳ ಅಕಾಲಿಕ ಮರಣ ನನಗೆ ಆಘಾತ ತಂದಿದೆ.

    ಜನವರಿ 18 ರಂದು ಪೂರ್ತಿ ದಿನ ಸಿಂದಗಿ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಬೀಳ್ಕೊಟ್ಟಿದ್ದರು. ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಅವರು, ಸಮಾಜ ಸೇವೆಯ ಅದಮ್ಯ ಹಂಬಲ ಹೊಂದಿದ್ದರು. ಪರಿಚಯವಾದ ಅಲ್ಪಕಾಲದಲ್ಲೆ ಆತ್ಮೀಯರಾಗಿದ್ದರು ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೋವಿಂದ್ ಕಾರಜೋಳ, ಎಂ.ಬಿ ಪಾಟೀಲ್, ಶಿವಾನಂದ್ ಪಾಟೀಲ್‍ಗೆ ಚಿನ್ನದ ಕಿರೀಟ

    ಗೋವಿಂದ್ ಕಾರಜೋಳ, ಎಂ.ಬಿ ಪಾಟೀಲ್, ಶಿವಾನಂದ್ ಪಾಟೀಲ್‍ಗೆ ಚಿನ್ನದ ಕಿರೀಟ

    – 210 ಗ್ರಾಂನ 3 ಚಿನ್ನದ ಕಿರೀಟ ಗಿಫ್ಟ್ ನೀಡಿದ ಗ್ರಾಮಸ್ಥರು

    ವಿಜಯಪುರ: ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಮಾಜಿ ಸಚಿವ ಎಂಬಿ ಪಾಟೀಲ್ ಹಾಗೂ ಶಿವಾನಂದ್ ಪಾಟೀಲ್ ಗೆ ವಿಜಯಪುರದ ಕಾರಜೋಳ ಗ್ರಾಮಸ್ಥರು ಚಿನ್ನದ ಕಿರೀಟಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕಾರಜೋಳದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದ ವೇಳೆ ಈ ಮೂವರಿಗೆ 210 ಗ್ರಾಂ ನ ಮೂರು ಚಿನ್ನದ ಕಿರೀಟಗಳನ್ನು ಗ್ರಾಮಸ್ಥರು ಗಿಫ್ಟ್ ಮಾಡಿದ್ದಾರೆ. ಆದರೆ ಮೂವರು ನಾಯಕರು ಕೂಡ ಚಿನ್ನದ ಕಿರೀಟ ಗಿಫ್ಟ್ ಪಡೆಯಲು ನಿರಾಕರಿಸಿದ್ದಾರೆ.

    ಒತ್ತಾಯ ಪೂರ್ವಕವಾಗಿ ಗ್ರಾಮಸ್ಥರು ನಾಯಕರಿಗೆ ಕಿರೀಟ ತೊಡಿಸಿದ್ದಾರೆ. ಕಿರೀಟ ಹಾಕಿದ್ದಕ್ಕೆ ಬೇಸರಗೊಂಡು ಶಿವಾನಂದ ಪಾಟೀಲ್ ಸಮಾರಂಭದಿಂದಲೇ ಹೊರನಡೆದ ಪ್ರಸಂಗವೂ ನಡೆದಿದೆ. ವಿಜಯಪುರದ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರವಾಹ, ಕೋವಿಡ್ ಸಂಕಷ್ಟದ ಮಧ್ಯೆಯೂ ಗ್ರಾಮಸ್ಥರು ಚಿನ್ನದ ಕಿರೀಟ ನೀಡಿದ ಕಾರಣಕ್ಕೆ ಶಿವನಾಂದ ಪಾಟೀಲ್ ಬೇಸರಗೊಂಡು ಹೊರನಡೆದಿದ್ದಾರೆ ಎನ್ನಲಾಗಿದೆ.

  • ಸಚಿವರ ಆಸ್ಪತ್ರೆ ಭೇಟಿ, ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ ಆರೋಗ್ಯ ಸಚಿವರು

    ಸಚಿವರ ಆಸ್ಪತ್ರೆ ಭೇಟಿ, ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ ಆರೋಗ್ಯ ಸಚಿವರು

    ಕಲಬುರಗಿ: ಜಿಲ್ಲಾಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರಗೆ ಆರೋಗ್ಯ ಸಚಿವ ಶಿವಾನಂದ್ ಪಾಟೀಲ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ವೇಳೆ ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯಗಳು ಹಾಗೂ ಪ್ರತಿ ವಾರ್ಡ್ ನಲ್ಲಿಯೂ ಸ್ವಚ್ಛತೆ ಜೊತೆಗೆ ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ತರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಸ್ಪತ್ರೆಯ ಸರ್ಜನ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಶಿವಾನಂದ್ ಪಾಟೀಲ್ ಸೂಚನೆ ನೀಡಿದರು.

    ಇದೇ ವೇಳೆ ಮಾತನಾಡಿದ ಅವರು, ಕಲಬುರಗಿ ಜಿಲ್ಲಾಸ್ಪತ್ರೆ ಅಲ್ಲದೇ ರಾಜ್ಯ ಸೇರಿದಂತೆ ದೇಶಾದ್ಯಂತ ರೇಬಿಸ್ ಔಷಧ ಕೊರತೆಯಿದೆ. ರೇಬಿಸ್ ಔಷಧ ಕೊರತೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ವಿವರಣೆ ಕೇಳಿದೆ. ಅಲ್ಲದೇ ಅಗತ್ಯಕ್ಕೆ ತಕ್ಕಂತೆ ರೇಬಿಸ್ ಔಷಧ ಪೂರೈಕೆ ಮಾಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದ್ದಾರೆ.