Tag: ಶಿವಾಜಿನಗರ

  • ಬೆಂಗಳೂರಿನ ಚರಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ- ಸರ್ಕಾರಿ ರಜೆ ಅಂತಾ ಮಧ್ಯಾಹ್ನ ನಂತರ ಓಪಿಡಿ ಕ್ಲೋಸ್

    ಬೆಂಗಳೂರಿನ ಚರಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ- ಸರ್ಕಾರಿ ರಜೆ ಅಂತಾ ಮಧ್ಯಾಹ್ನ ನಂತರ ಓಪಿಡಿ ಕ್ಲೋಸ್

    – ರೋಗಿಗಳು ಬಂದರೆ ಚಿಕಿತ್ಸೆ ಕಷ್ಟ

    ಬೆಂಗಳೂರು: ಇಲ್ಲಿನ ಶಿವಾಜಿನಗರದಲ್ಲಿರುವ (Shivajinagara) ಚಕರ ಸರ್ಕಾರಿ ಆಸ್ಪತ್ರೆಯಲ್ಲಿ (Charaka Super Speciality Hospital) ವೈದ್ಯರ ಕೊರತೆ ಇದ್ದು, ಸರ್ಕಾರಿ ರಜೆ ಎಂದು ಮಧ್ಯಾಹ್ನದ ನಂತರ ಓಪಿಡಿ ಬಂದ್ ಮಾಡಲಾಗುತ್ತಿದೆ. ಇದರಿಂದ ರೋಗಿಗಳು ಬಂದರೆ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ.

    ಶಿವಾಜಿನಗರದಲ್ಲಿ ಹೊಸದಾಗಿ ಚರಕ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಸುಸಜ್ಜಿತವಾಗಿ ಸುಂದರವಾಗಿ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಇದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಅದರಲ್ಲೂ ಸರ್ಕಾರಿ ರಜೆ ಬಂದಾಗ ಓಪಿಡಿ (ಹೊರ ರೋಗಿಗಳ ವಿಭಾಗ) ಕ್ಲೋಸ್ ಮಾಡುತ್ತಾರೆ. ಗುರುವಾರ ಗಾಂಧಿ ಜಯಂತಿ ಹಿನ್ನೆಲೆ ಕಾರ್ಯಕ್ರಮ ಇದ್ದ ಕಾರಣ ಮಧ್ಯಾಹ್ನದ ವೇಳೆ ವೈದ್ಯರೇ ಇರಲಿಲ್ಲ. ಓಪಿಡಿ ಕೊಠಡಿಯಲ್ಲಿ ವೈದ್ಯರಿಲ್ಲ. ರೋಗಿಗಳು ಬಂದರೆ ಚಿಕಿತ್ಸೆಯು ಸಿಗುತ್ತಿಲ್ಲ. ಇದನ್ನೂ ಓದಿ:  ಅಗತ್ಯ ಪೌಷ್ಟಿಕ ಆಹಾರ ವಿತರಣೆಗೆ ಮಿಲೆಟ್ಸ್ ಖರೀದಿ ಹೆಚ್ಚಳ – ಪ್ರಹ್ಲಾದ್ ಜೋಶಿ

    ಇಲ್ಲಿ ಸೆಕ್ಯೂರಿಟಿ, ವೈದ್ಯಕೀಯ ಸಿಬ್ಬಂದಿ ಇದ್ದಾರೆ ಅಷ್ಟೇ. ಆದರೆ ಡಾಕ್ಟರ್ ಇಲ್ಲ. ಈ ಆಸ್ಪತ್ರೆಯಲ್ಲಿ ಉಚಿತವಾಗಿ ಹೃದಯ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ನ್ಯೂರೋ ಸರ್ಜರಿ, ನೆಫ್ರೋ ನ್ಯೂರಾಲಜಿ ಸೇರಿದಂತೆ ಹಲವು ಚಿಕಿತ್ಸೆ ಲಭ್ಯವಿದೆ. ರೋಗಿಗಳಿಗೆ ಅನುಕೂಲ ಆಗುತ್ತದೆ. ಆದರೆ ರಜೆ ದಿನಗಳಲ್ಲಿ ಓಪಿಡಿ ಇರುವುದಿಲ್ಲ. ದಿನದ 24 ಗಂಟೆ ಓಪಿಡಿ ಇಲ್ಲದಿರುವುದಕ್ಕೆ ಕಾರಣ ವೈದ್ಯರ ಕೊರತೆ ಎಂದು ಹೇಳಲಾಗುತ್ತಿದೆ. ಸುಸಜ್ಜಿತವಾಗಿ ಆಸ್ಪತ್ರೆ ಇದೆ. ಆದರೆ ವೈದ್ಯಕೀಯ ಸಿಬ್ಬಂದಿ ಇಲ್ಲ. ಇದನ್ನೂ ಓದಿ: ಭವಾನಿ ರೇವಣ್ಣಗೆ ಬಿಗ್‌ ರಿಲೀಫ್‌ – ಜಾಮೀನು ಅರ್ಜಿ ವಜಾ ಮಾಡಲು ನಿರಾಕರಿಸಿದ ಸುಪ್ರೀಂ

    ವೈದ್ಯಕೀಯ ಶಿಕ್ಷಣ ಇಲಾಖೆ, ಸಚಿವರು ಕೂಡಲೇ ಶಿವಾಜಿನಗರದಲ್ಲಿ ಇರುವ ಚರಕ ಆಸ್ಪತ್ರೆಗೆ ವೈದ್ಯರ ನೇಮಕ ಮಾಡಿ ಓಪಿಡಿ ಬಂದ್ ಮಾಡದಂತೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯಾದಗಿರಿ | ಮಳೆಯ ಅವಾಂತರಕ್ಕೆ ಶೆಡ್ ಗೋಡೆ ಕುಸಿದು ವೃದ್ಧೆ ಸಾವು

  • ಮುಂಬೈನಲ್ಲಿ ಭಾರೀ ಮಳೆಗೆ ನಾಲ್ವರು ಸಾವು; ಶಾಲಾ-ಕಾಲೇಜುಗಳಿಗೆ ರಜೆ

    ಮುಂಬೈನಲ್ಲಿ ಭಾರೀ ಮಳೆಗೆ ನಾಲ್ವರು ಸಾವು; ಶಾಲಾ-ಕಾಲೇಜುಗಳಿಗೆ ರಜೆ

    ಪುಣೆ: ಮುಂಬೈನಲ್ಲಿ (Mumbai) ಭಾರೀ ಮಳೆ ಪರಿಣಾಮ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಬುಧವಾರ ಸಂಜೆ ಹೊತ್ತಿನಲ್ಲಿ ಮಳೆ ಶುರುವಾಯಿತು. 5 ಗಂಟೆಗಳ ಅವಧಿಯಲ್ಲಿ ಮುಂಬೈ ಮಹಾನಗರ ಪ್ರದೇಶದ ಕೆಲವು ಭಾಗಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆ ಸುರಿದಿದೆ.

    ಗುರುವಾರ ಬೆಳಗ್ಗೆ 8:30 ರವರೆಗೆ ರೆಡ್ ಅಲರ್ಟ್ ಇರುವ ಹಿನ್ನೆಲೆಯಲ್ಲಿ ಮುಂಬೈ ಮತ್ತು ಥಾಣೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಯಾಣಿಕರು ರಸ್ತೆಗಳಲ್ಲಿ, ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡರು. ಭಾರೀ ಮಳೆಗೆ ಬಲಿಯಾದವರಲ್ಲಿ 45 ವರ್ಷದ ಮಹಿಳೆಯೊಬ್ಬರು ಅಂಧೇರಿ ಪೂರ್ವದ ನುಲ್ಲಾದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಲ್ಯಾಣ್‌ನ ವರಪ್ ಗ್ರಾಮದಲ್ಲಿ ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಖೋಪೋಲಿಯ (Khopoli) ಜೆನಿತ್ ಜಲಪಾತದ (Zenith Waterfall) ಬಳಿ ಮತ್ತೋರ್ವ ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕ್ಯಾಂಟರ್‌ಗೆ ಕಾರು ಡಿಕ್ಕಿ; ನಾಲ್ವರು ಸ್ಥಳದಲ್ಲೇ ಸಾವು

    ಇಂದು ಕೂಡ ಮೋಡ ಕವಿದ ವಾತಾವರಣವಿದ್ದು, ಭಾರೀ ಮಳೆ ಸುರಿಯುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ (Meteorological Department) ತಿಳಿಸಿದೆ. ಇದನ್ನೂ ಓದಿ: ಮುಡಾ ಹಗರಣ ಸಂಕಷ್ಟ; ಹೈಕಮಾಂಡ್‌ಗೆ ವರದಿ ನೀಡಿದ ಸಿಎಂ ಸಿದ್ದರಾಮಯ್ಯ

    ಪುಣೆಯ (Pune) ಶಿವಾಜಿನಗರದಲ್ಲಿ ಮಂಗಳವಾರ ಸಂಜೆ 5:30ರವರೆಗೂ 19.2 ಮಿಮಿ. ಮಳೆ ದಾಖಲಾಗಿತ್ತು. ಇದರಿಂದಾಗಿ ಭಾರತೀಯ ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿ, ಮುಂದಿನ 24 ಗಂಟೆಗಳಲ್ಲಿ ತ್ರೀವ ಮಳೆಯಾಗುವ ಸಾಧ್ಯತೆಯಿದೆ ಎಂದು ಮೂನ್ಸೂಚನೆ ನೀಡಿತ್ತು. ಬಳಿಕ ಮಳೆಯ ತೀವ್ರತೆಯಿಂದಾಗಿ ಸೆ.25 ರಂದು ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಮಳೆಯ ತೀವ್ರತೆ ಹೆಚ್ಚಾಗಿದ್ದರಿಂದಾಗಿ ಪುಣೆ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಥೈಲ್ಯಾಂಡ್‌ ಗ್ರೀನ್‌ ಸಿಗ್ನಲ್‌ – ಸಲಿಂಗ ವಿವಾಹ ಮಸೂದೆಗೆ ಸಹಿ ಹಾಕಿದ ರಾಜ

  • ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡಬೇಡಿ, ಓಲೈಕೆ ರಾಜಕಾರಣ ಬೇಕಿಲ್ಲ: ಯತ್ನಾಳ್

    ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡಬೇಡಿ, ಓಲೈಕೆ ರಾಜಕಾರಣ ಬೇಕಿಲ್ಲ: ಯತ್ನಾಳ್

    ಬೆಂಗಳೂರು: ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ (Shivaji Nagar Metro Station) ಸೇಂಟ್ ಮೇರಿ (Saint Mary) ಹೆಸರಿಡುವಂತೆ ಮನವಿ ಸಲ್ಲಿಕೆಗೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರೋಧ ವ್ಯಕ್ತಪಡಿಸಿದ್ದಾರೆ. ‘ಪಬ್ಲಿಕ್ ಟಿವಿ’ (PUBLiC TV) ಮಾಡಿದ್ದ ವರದಿಯನ್ನು ಲಿಂಕ್ ಮಾಡಿ ಎಕ್ಸ್ (X)ಖಾತೆಯಲ್ಲಿ ವಿರೋಧಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ ಅವರು, ಒಂದು ಸಂಸ್ಕೃತಿಯನ್ನು ಹೇಗೆ ನಾಶ ಮಾಡಬಹುದು ಎಂಬುದಕ್ಕೆ ಇದೆ ಉದಾಹರಣೆಯಾಗಿದೆ. ಹಿಂದೂಗಳ ಆರಾಧ್ಯದೈವ, ಔರಂಗಜೇಬನ ಹುಟ್ಟಡಗಿಸಿದ ಗಂಡುಗಲಿ, ಮಹಾಪರಾಕ್ರಮಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯವನ್ನು ಕಳೆದಂತ ಶಿವಾಜಿನಗರದ ಮೆಟ್ರೋಗೆ ಸಂತ ಮೇರಿ ಹೆಸರನ್ನು ಇಡಬೇಕಂತೆ.ಇದನ್ನೂ ಓದಿ: ರಾಹುಲ್‌ ಗಾಂಧಿ ಪಪ್ಪು ಅಲ್ಲ, ದೂರದೃಷ್ಟಿ ಹೊಂದಿರುವ ವ್ಯಕ್ತಿ: ಸ್ಯಾಮ್‌ ಪಿತ್ರೋಡಾ

    ಇತಿಹಾಸವನ್ನು ಅರಿಯದ ಮೂಢರಷ್ಟೇ ಈ ರೀತಿ ಸಲಹೆ ಕೊಡಬಲ್ಲರು. 150 ವರ್ಷಗಳ ಇತಿಹಾಸವಿರುವ ಏಕಾಂಬರೇಶ್ವರ ಸ್ವಾಮಿಯ ದೇವಸ್ಥಾನ, ಮುತ್ಯಾಲಮ್ಮ ದೇವಸ್ಥಾನ, ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಅಂಗಾಲ ಪರಮೇಶ್ವರಿ ಅಮ್ಮನವರ ದೇವಸ್ಥಾನಗಳು ಶಿವಾಜಿನಗರದಲ್ಲಿದೆ.

    ಓಲೈಕೆ ರಾಜಕಾರಣಕ್ಕೆ, ಹೆಚ್ಚು ವೋಟು ಬೀಳುತ್ತಿರುವ ಸಮುದಾಯವನ್ನು ಸಂತುಷ್ಟಗೊಳಿಸಲು ಈ ರೀತಿ ವ್ಯರ್ಥ ಪ್ರಯತ್ನಗಳು ಬೇಕಾಗಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ, ಧರ್ಮದ ಹೆಸರನ್ನು ಉಳಿಸಿದವರನ್ನೆಲ್ಲ ಬಿಟ್ಟು, ರಾಜಕೀಯ ಕಾರಣಕ್ಕಾಗಿ ಮೇರಿಯಮ್ಮನ ಹೆಸರು ನಾಮಕರಣ ಮಾಡುವ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಹೊಸ ರಿಯಾಲಿಟಿ ಶೋಗೆ ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಹೋಸ್ಟ್‌

    ಏನಿದರ ಹಿನ್ನೆಲೆ?
    ನಿನ್ನೆಯಷ್ಟೇ (ಸೆ.08) ರಂದು ಶಿವಾಜಿನಗರದ ಸಂತ ಮೇರಿ ಜಯಂತ್ಯುತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು. ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿಸ್ ಮೆಟ್ರೋ ಸ್ಟೇಷನ್ ಎಂದು ನಾಮಕರಣ ಮಾಡಬೇಕು. ಇದರಿಂದ ಪುಣ್ಯಕ್ಷೇತ್ರ ಮೇರಿ ಚರ್ಚೆಗೆ ಹೆಚ್ಚು ಜನರು ಬರಲು ಅನುಕೂಲ ಆಗುತ್ತದೆ ಎಂದು ಅಲ್ಲಿನ ಫಾದರ್ ಸಿಎಂಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಶಾಸಕ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದಾರೆ.

  • ಕ್ರಿಶ್ಚಿಯನ್ ಧರ್ಮದ ಉನ್ನತೀಕರಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ – 5 ಕೋಟಿ ಅನುದಾನ ಘೋಷಿಸಿದ ಸಿಎಂ

    ಕ್ರಿಶ್ಚಿಯನ್ ಧರ್ಮದ ಉನ್ನತೀಕರಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ – 5 ಕೋಟಿ ಅನುದಾನ ಘೋಷಿಸಿದ ಸಿಎಂ

    – ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ʻಸೇಂಟ್‌ ಮೇರಿಸ್ʼ ಹೆಸರಿಡುವಂತೆ ಮನವಿ

    ಬೆಂಗಳೂರು: ಇಲ್ಲಿನ ಶಿವಾಜಿನಗರದ (Shivaji Nagar) ಸಂತ ಮೇರಿ ಜಯಂತ್ಯುತ್ಸವ ಅಂಗವಾಗಿ ನಡೆದ ಅಮ್ಮ ಮರಿಯಮ್ಮನ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂದರು. ಸಿಎಂ ಜೊತೆಗೆ ಸಿದ್ದರಾಮಯ್ಯ (Siddaramaiah), ಶಾಸಕ ರಿಜ್ವಾನ್ ಹರ್ಷದ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸಹ ಪಾಲ್ಗೊಂಡಿದ್ದರು.

    ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ, ಪೀಟರ್ ಮಾಚಡೋ ಕ್ರಿಶ್ಚಿಯನ್ ಧರ್ಮದ (Christianity) ಉನ್ನತೀಕರಣದ ಪ್ರಯತ್ನಕ್ಕೆ ಸರ್ಕಾರ ಎಲ್ಲಾ ಸಹಕಾರ ನೀಡಲಿದೆ. ಕಳೆದ ವರ್ಷ 5 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಮುಂದಿನ ವರ್ಷ 5 ಕೋಟಿ ಅನುದಾನ ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?

    ಈ ದೇಶದಲ್ಲಿ ನಮ್ಮ ಕರ್ತವ್ಯ ನಿರ್ವಹಿಸುವುದು ಅಂದ್ರೇ ಮನುಷ್ಯರಾಗಿ ಬಾಳುವುದು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಪಾದ್ರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಈ ಬೆಸಿಲಿಕಾ ಚರ್ಚ್‌ಗೆ ಎಲ್ಲಾ ಧರ್ಮ, ಜಾತಿಯವರೂ ಬರ್ತಾರೆ. ಪುರಾತನ ಚರ್ಚ್ ಆದರೂ ಭಾವೈಕ್ಯತೆಯ ಕೇಂದ್ರ ಅಂದ್ರೆ ಅತಿಶಯೋಕ್ತಿ ಅಲ್ಲ. ನಾವೆಲ್ಲರೂ ದೇಶದಲ್ಲಿ ಮನುಷ್ಯರಾಗಿ ಬಾಳುವುದೇ ಕರ್ತವ್ಯ. ಕ್ರಿಶ್ಚಿಯನ್ ಪಾದ್ರಿಗಳು ದೇಶದ ಉದ್ದಗಲಕ್ಕೂ ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಮಾದರಿ ಕೆಲಸ ಮಾಡುತ್ತಾ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಕಳೆದ ಬಾರಿ ಕಾರ್ಯಕ್ರಮಕ್ಕೆ ಬಂದಾಗ 10 ಕೋಟಿ ರೂ. ಕೊಡುತ್ತೇನೆ ಎಂದು ಭರವಸೆ ನೀಡಿದ್ದೆ. ಅದರಂತೆ 5 ಕೋಟಿ ರೂ. ನೀಡಿದ್ದೇನೆ. ಮುಂದಿನ ವರ್ಷ ಬಜೆಟ್‌ನಲ್ಲಿ 5 ಕೋಟಿ ರೂ. ಕೊಡುತ್ತೇನೆ ಎಂದು ನುಡಿದಿದ್ದಾರೆ.

    ಪ್ರತಿವರ್ಷದಂತೆ ಈ ವರ್ಷವೂ ತಾಯಿ ಮೇರಿ ಜಯಂತ್ಯುತ್ಸವ ಚರ್ಚ್‌ನಲ್ಲಿ ಆಚರಣೆಯಾಗುತ್ತಿದೆ. ಎಲ್ಲಾ ಭಕ್ತವೃಂದಕ್ಕೆ ಜಯಂತ್ಯುತ್ಸವದ ಶುಭಾಶಯಗಳು. ತಾಯಿ ಮೇರಿಯವರ ಆರ್ಶೀವಾದವನ್ನು ಪ್ರತಿವರ್ಷ ಪಡೆಯುತ್ತಿದ್ದೇನೆ. ʻಸರ್ವ ಜನಾಂಗದ ಶಾಂತಿಯ ತೋಟʼ ಎಂಬ ಕುವೆಂಪು ಅವರ ಮಾತಿನಂತೆ 7 ಕೋಟಿ ಜನರು ಪ್ರೀತಿ ವಿಶ್ವಾಸದಿಂದ ಬದುಕಬೇಕು. ಕೆಲವು ಕಪಟಿಗಳು ಸಮಾಜದಲ್ಲಿ ದ್ವೇಷ ಬಿತ್ತುತ್ತಾರೆ. ಬೇರೆ ಬೇರೆ ಜಾತಿ, ಜನಾಂಗದವರು ಒಂದೇ ತಾಯಿಯ ಮಕ್ಕಳಂತೆ ಬದುಕುವ ಹಾಗೆ ಮಾಡಬೇಕಾಗಿದ್ದು ಸರ್ಕಾರದ ಕರ್ತವ್ಯ. ಸಂವಿಧಾನದಲ್ಲೂ ಪರಸ್ಪರ ಪ್ರೀತಿ, ಸಹಬಾಳ್ವೆ ಇರಬೇಕು ಅಂತಾ ಹೇಳಲಾಗಿದೆ. ಸಹಿಷ್ಣುತೆ ಇರಬೇಕು, ಜಾತಿ,ಧರ್ಮ ಮೀರಿ ನಾವೆಲ್ಲಾ ಮನುಷ್ಯರಾಗಿ ಬಾಳಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: Paralympics 2024 | ಐತಿಹಾಸಿಕ 29 ಪದಕಗಳ ಸಾಧನೆ – 18ನೇ ಸ್ಥಾನ ಪಡೆದ ಭಾರತ

    ಅಜಾನ್ ಕೂಗುತ್ತಿದ್ದಂತೆ ಭಾಷಣ ನಿಲ್ಲಿಸಿದ ಸಿಎಂ:
    ಈ ವೇಳೆ ಮಸೀದಿಯಲ್ಲಿ ಅಜಾನ್ ಕೂಗುತ್ತಿದ್ದಂತೆ ಸಿಎಂ ಭಾಷಣ ನಿಲ್ಲಿಸಿದರು. ಅಜಾನ್ ಮುಗಿಯುವವರೆಗೂ ಮೌನವಹಿಸಿದ್ದರು.

    ಸಿಎಂ ಮುಂದೆ ಚರ್ಚ್‌ ಫಾದರ್‌ ಬೇಡಿಕೆ:
    ಸಿಎಂ ಭಾಷಣ ಮುಗಿಸಿದ ವೇಳೆ ಶಿವಾಜಿನಗರದ ಚರ್ಚ್‌ ಫಾದರ್‌ ಸಿಂಗೆ ಹಲವು ಬೇಡಿಕೆಗಳನ್ನಿಟ್ಟರು.
    * ಶಿವಾಜಿ ನಗರ ಚರ್ಚ್ ಮುಂಭಾಗ ಅಂಡರ್ ಪಾರ್ಕಿಂಗ್ ವ್ಯವಸ್ಥೆ ಆಗಬೇಕು
    * ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್‌ ಮೇರಿಸ್ ಮೆಟ್ರೋ ಸ್ಟೇಷನ್ ಎಂದು ನಾಮಕರಣ ಮಾಡಬೇಕು. ಇದರಿಂದ ಪುಣ್ಯಕ್ಷೇತ್ರ ಮೇರಿ ಚರ್ಚ್‌ಗೆ ಹೆಚ್ಚು ಜನರು ಬರಲು ಅನುಕೂಲ ಆಗುತ್ತೆ.

  • ಶಿವಾಜಿನಗರಕ್ಕೂ ಕಾಲಿಟ್ಟ ಧ್ವಜ ಗಲಾಟೆ- ಹಸಿರು ಬಾವುಟ ತೆಗೆದು ಹಾಕಲಾಯ್ತು ರಾಷ್ಟ್ರಧ್ವಜ

    ಶಿವಾಜಿನಗರಕ್ಕೂ ಕಾಲಿಟ್ಟ ಧ್ವಜ ಗಲಾಟೆ- ಹಸಿರು ಬಾವುಟ ತೆಗೆದು ಹಾಕಲಾಯ್ತು ರಾಷ್ಟ್ರಧ್ವಜ

    ಬೆಂಗಳೂರು: ಹನುಮಧ್ವಜ (Hanuma Flag) ಬಳಿಕ ಇದೀಗ ಹಸಿರು ಬಾವುಟ ತೆರವು ವಿವಾದವಾಗಿದೆ. ಮಂಡ್ಯದ ಕೆರಗೋಡು (Keragodu Mandya) ಬಳಿಕ ಬೆಂಗಳೂರಿನ ಶಿವಾಜಿನಗರಕ್ಕೂ ಧ್ವಜ ಗಲಾಟೆ ಕಾಲಿಟ್ಟಿದೆ.

    ಶಿವಾಜಿನಗರದ (Shivajinagar) ಚಾಂದಿನಿ ಚೌಕ್‍ನ ಬಳಿಯಲ್ಲಿ ಬಿಬಿಎಂಪಿ ಅಳವಡಿಕೆ ಮಾಡಿರುವ ವಿದ್ಯುತ್ ಕಂಬದಲ್ಲಿ ಹಸಿರು ಧ್ವಜವನ್ನು ಹಾರಿಸಲಾಗಿತ್ತು. ಇದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುವ ಕೆಲಸ ಶುರು ಮಾಡಿದ್ರು. ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದ ಜನರು ಪ್ರಶ್ನೆ ಮಾಡ್ತಾ ಇದ್ರು. ಈ ಬಗ್ಗೆ ಯತ್ನಾಳ್ ಟ್ವೀಟ್ ಮಾಡಿದ್ರು.

    ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತಕ್ಷಣವೇ ದೌಡಾಯಿಸಿದ್ರು. ಬಳಿಕ ಸ್ಥಳೀಯರನ್ನು ಬಳಸಿಕೊಂಡು ಹಸಿರು ಧ್ವಜ ತೆರವು ಮಾಡೋ ಕೆಲಸ ಮಾಡಿದರು. ನಂತರ ಅದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅಷ್ಟೇ ಅಲ್ಲದೇ ಚಾಂದಿನಿ ಚೌಕ್ ನ ಸರ್ಕಲ್ ಗೆ ಪೂರ ತ್ರಿವರ್ಣ ಧ್ವಜ ಹಾರಿಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿವಹಿಸಿದ್ದಾರೆ.

    ಈ ಬಗ್ಗೆ ಸ್ಥಳೀಯ ಅಕ್ಮಲ್ ಎಂಬವರು ಪ್ರತಿಕ್ರಿಯೆ ನೀಡಿದ್ದು, ಕಳೆದ 30 ವರ್ಷಗಳಿಂದ ದರ್ಗಾದ ಬಾವುಟ ಹಾಕಲಾಗಿತ್ತು. ಪೊಲೀಸರು ಬಾವುಟ ಹಾಕಿರುವ ಬಗ್ಗೆ ಮಾಹಿತಿ ಕೇಳಿದ್ರು. ಬಳಿಕ ನೀವೇ ಬಾವುಟವನ್ನ ತೆರವುಗೊಳಿಸುವಂತೆ ಸೂಚಿಸಿದ್ರು. ಪೊಲೀಸರ ಸೂಚನೆಯಂತೆ ಹಸಿರು ಬಾವುಟ ತೆರವುಗೊಳಿಸಿ ರಾಷ್ಟ್ರೀಯ ಬಾವುಟವನ್ನ ಹಾಕಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆಂಜನೇಯನ ತಂಟೆಗೆ ಬರ್ಬೇಡಿ, ಹುಷಾರ್- ಸಿಎಂಗೆ ಆರ್ ಅಶೋಕ್ ಎಚ್ಚರಿಕೆ

    ಘಟನೆ ಬಗ್ಗೆ ಸರ್ಕಾರದ ವಿರುದ್ಧ ಎಂಎಲ್‍ಸಿ ರವಿಕುಮಾರ್ ಕಿಡಿಕಾರಿದ್ದು, ಹನುಮ ಧ್ವಜ ತೆಗೆಸಿದ್ರಿ. ಇದಕ್ಕೆ ಹೇಗೆ ಅನುಮತಿ ಕೊಟ್ಟಿರಿ. ಇದು ಮುಲ್ಲಾ, ಮೌಲ್ವಿ ಸರ್ಕಾರ ಎಂದು ಟೀಕಿಸಿದ್ರು. ನಮ್ಮ ರಾಜ್ಯದ ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಹನುಮಧ್ವಜ ಇಳಿಸಿರೋದನ್ನ ಬಿಜೆಪಿ ಖಂಡಿಸಲಿದೆ. ಹಿಂದೂ ದೇವಸ್ಥಾನಗಳ ಹಣ ಬೇಕು, ಹಿಂದೂ ಎಂಎಲ್‍ಎ ಬೇಕು, ಹಿಂದೂ ಎಂಪಿ ಬೇಕು. ಆದರೆ ಹಿಂದೂ ದೇವರ ಧ್ವಜ ಹಾರಿಸೋದು ಬೇಡ ಅಂತಾರೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 12 ಪ್ರಶ್ನೆ ಕೇಳ್ತಿದ್ದೀವಿ ಎಂದರು.

  • ಶಿವಾಜಿನಗರದಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗೆ ಚಾಕು ಇರಿತ – ಕೈಗೆ ಬಿತ್ತು 26 ಹೊಲಿಗೆ

    ಶಿವಾಜಿನಗರದಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗೆ ಚಾಕು ಇರಿತ – ಕೈಗೆ ಬಿತ್ತು 26 ಹೊಲಿಗೆ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಾನೂನು ಸುವ್ಯವಸ್ಥೆ ನಿಜಕ್ಕೂ ಹದಗೆಟ್ಟಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ನಗರದಲ್ಲಿ ಆರೋಪಿಯೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿಗೇ ಚಾಕು ಇರಿದ ಘಟನೆಯಿಂದ ಈ ಪ್ರಶ್ನೆ ಈಗ ಎದ್ದಿದೆ.

    ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದವನನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿಗೆ ಚಾಕು ಇರಿತವಾಗಿರುವ ಘಟನೆ ಶಿವಾಜಿನಗರದಲ್ಲಿ (Shivajinagar) ನಡೆದಿದೆ. ಸದಾಶಿವನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾಗೆ ಚಾಕು ಇರಿತವಾಗಿದ್ದು, ಆರೋಪಿಯ ಕೃತ್ಯದಿಂದ ಅವರ ಕೈಗೆ ಬರೋಬ್ಬರಿ 26 ಹೊಲಿಗೆ ಬಿದ್ದಿದೆ.

    ಹಸನ್ ಖಾನ್ ಎಂಬ ಆರೋಪಿಯಿಂದ ಚಾಕು ಇರಿತವಾಗಿದೆ. ಸಿಸಿಬಿ ಒಸಿಡಬ್ಲ್ಯು ಅಧಿಕಾರಿಗಳು ಹಸನ್ ಖಾನ್‌ನನ್ನು ಬಂಧಿಸುವ ಪ್ರಯತ್ನದಲ್ಲಿದ್ದರು. ಹಸನ್ ಖಾನ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆ ಸಿಸಿಬಿ ಪೊಲೀಸರು  ಶಿವಾಜಿ ನಗರದ ಆರೋಪಿಯ ಮನೆಗೆ ಬಂದಿದ್ದರು. ಅದೇ ಏರಿಯಾದಲ್ಲಿ ವಾಸವಾಗಿದ್ದ ಸದಾಶಿವನಗರ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾ ಖಾನ್ ಕೂಡಾ ಸಿಸಿಬಿ ಅಧಿಕಾರಿಗಳಿಗೆ ಸಹಾಯ ಮಾಡಲು ಹಾಗೂ ಆರೋಪಿಯನ್ನು ಹಿಡಿಯಲು ಹೋಗಿದ್ದರು. ಇದನ್ನೂ ಓದಿ: ಕೌಟುಂಬಿಕ ಕಲಹ – ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ

    ಹೆಚ್‌ಕೆಪಿ ದರ್ಗಾದ ಸರ್ಕಲ್‌ನ ಗೂಡ್ಸ್ ಆಟೋಸ್ಟ್ಯಾಂಡ್ ಬಳಿ ನಿಂತಿದ್ದ ಹಸನ್ ಖಾನ್‌ನನ್ನು ಹಿಡಿಯಲು ಹೋದಾಗ ಸೈಯದ್ ಸಮೀವುಲ್ಲಾಗೆ ಚಾಕುವಿನಿಂದ ಇರಿದಿದ್ದಾನೆ. ಸಾರ್ವಜನಿಕರ ಎದುರೇ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಸಮೀವುಲ್ಲಾ ಸ್ಥಳೀಯರ ನೆರವಿನಿಂದ ಬಚಾವ್ ಆಗಿದ್ದಾರೆ.

    ಇಂತಹ ಘಟನೆಗಳಿಂದ ನಗರದಲ್ಲಿ ಪೊಲೀಸರು ಎನ್ನುವ ಭಯವೇ ಇಲ್ಲ ಎಂಬಂತಾಗಿದೆ. ಪೊಲೀಸರಿಗೇ ಹೀಗಾದರೆ, ಜನಸಾಮಾನ್ಯರ ಪರಿಸ್ಥಿತಿ ಇನ್ನು ಹೇಗೆ ಎನ್ನುತ್ತಿದ್ದಾರೆ ಜನ. ಸದ್ಯ ಶಿವಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಡಿವೈಡರ್‌ನಲ್ಲಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ – ನಾಲ್ವರು ಸ್ಥಳದಲ್ಲೇ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಾಯುಕ್ತ ಟ್ರ್ಯಾಪ್ ಕೇಸ್‌ನಲ್ಲಿ ಹೆಸರು – ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್ ಅಮಾನತು

    ಲೋಕಾಯುಕ್ತ ಟ್ರ್ಯಾಪ್ ಕೇಸ್‌ನಲ್ಲಿ ಹೆಸರು – ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್ ಅಮಾನತು

    ಬೆಂಗಳೂರು: ಕರ್ತವ್ಯ ಲೋಪ, ಭ್ರಷ್ಟಾಚಾರ (Corruption) ಆರೋಪದಡಿ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ರನ್ನ (Police Inspector) ಅಮಾನತು (Suspend) ಮಾಡಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.

    ಸುಮಾ ಅಮಾನತಾದ ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್. ಇವರು ಶಿವಾಜಿನಗರ (Shivajinagara) ಮಹಿಳಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶಿವಾಜಿನಗರ ಠಾಣೆ ಪಿಎಸ್‌ಐ ಸವಿತಾ ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದು, ಲಂಚದ ಹಣವಾದ 5 ಸಾವಿರ ರೂ. ಪಡೆಯುತ್ತಿದ್ದಾಗ ಸಬ್ ಇನ್ಸ್ಪೆಕ್ಟರ್ ಸೇರಿ ನಾಲ್ವರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತದ (Lokayukta) ಕೈಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಅರ್ಕೆಸ್ಟ್ರಾ ಹಾಡು ಬದಲಿಸುವ ವಿಚಾರಕ್ಕೆ ಗಲಾಟೆ – ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ

    ಲೋಕಾಯುಕ್ತ ಟ್ರ್ಯಾಪ್‌  ಕೇಸ್‌ನಲ್ಲಿ ಇನ್‌ಸ್ಪೆಕ್ಟರ್ ಸುಮಾ ಹೆಸರು ಕೇಳಿ ಬಂದಿತ್ತು. ಸುಮಾ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದು, ಲಂಚ, ಕರ್ತವ್ಯ ಲೋಪ, ದುವರ್ತನೆ, ಎಲ್ಲಾ ಆರೋಪಗಳ ಹಿನ್ನೆಲೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರು-ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ಸ್ಥಳದಲ್ಲೇ ನಾಲ್ವರು ಸಾವು

  • ಬೆಂಗಳೂರಿನಲ್ಲಿ ಭಾರೀ ಮಳೆ – ಎಲ್ಲೆಲ್ಲಿ ಏನಾಗಿದೆ? ಅತಿ ಹೆಚ್ಚು ಮಳೆ ಎಲ್ಲಿಯಾಗಿದೆ?

    ಬೆಂಗಳೂರಿನಲ್ಲಿ ಭಾರೀ ಮಳೆ – ಎಲ್ಲೆಲ್ಲಿ ಏನಾಗಿದೆ? ಅತಿ ಹೆಚ್ಚು ಮಳೆ ಎಲ್ಲಿಯಾಗಿದೆ?

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆಯ(Rain) ಅಬ್ಬರ ಮತ್ತಷ್ಟು ಜಾಸ್ತಿಯಾಗಿದ್ದು, ಬುಧವಾರ ರಾತ್ರಿ 8 ವಲಯದ 51 ವಾರ್ಡ್‍ಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

    ಮೆಜೆಸ್ಟಿಕ್‍ನಲ್ಲಿ ತಡೆಗೋಡೆ ಕುಸಿದು 7 ಕಾರುಗಳು ಜಖಂಗೊಂಡಿದೆ. ಶಿವಾನಂದ ಅಂಡರ್ ಪಾಸ್‍ನಲ್ಲಿ ಡಾಂಬಾರ್‌ ಕಿತ್ತು ಹೋಗಿದೆ. ಹಲವೆಡೆ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ.

    ಶಿವಾಜಿನಗರದಲ್ಲಿ(Shivaji Nagar) ಮಳೆಗೆ ಕೊಚ್ಚಿ ಹೋಗ್ತಿದ್ದ ಬೈಕ್ ರಕ್ಷಿಸಲು ಸವಾರರು ಹರಸಾಹಸ ಪಟ್ಟಿದ್ದಾರೆ. ವಿಧಾನಸೌಧ ರಸ್ತೆಯಲ್ಲಿ ಮಂಡಿಯುದ್ಧ ನಿಂತ ನೀರು ನಿಂತಿತ್ತು. ಶಾಂತಿನಗರದ ಮುಖ್ಯರಸ್ತೆಯ ನಡು ನೀರಿನಲ್ಲಿ ಬಿಎಂಡಬ್ಲ್ಯೂ ಕಾರುಗಳು ಕೆಟ್ಟು ನಿಂತಿತ್ತು. ಇದನ್ನೂ ಓದಿ: ವಾಹನ ಸವಾರರೇ ಎಚ್ಚರ – ಸೀಟ್ ಬೆಲ್ಟ್ ಧರಿಸದಿದ್ರೆ ಇನ್ಮುಂದೆ ದುಪ್ಪಟ್ಟು ದಂಡ

    ಬಾಪೂಜಿ ಲೇಔಟ್‍ನ ಮೂರನೇ ಮುಖ್ಯ ರಸ್ತೆಯ ಮೇಲೆ ಮರ ಬಿದ್ದಿದೆ. ವಿದ್ಯುತ್ ಲೈನ್ ಮತ್ತು ಕೇಬಲ್‍ಗಳ ಮೇಲೆ ಮರ ಬಿದ್ದ ಕಾರಣ ಈ ಭಾಗದಲ್ಲಿ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಸಿಲ್ಕ್ ಬೋರ್ಡ್‍ನಲ್ಲಿ ಭಾರೀ ಮಳೆಗೆ ರಸ್ತೆಯಲ್ಲೇ ನೀರು ನಿಂತಿದ್ದರಿಂದ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌ ಸೃಷ್ಟಿಯಾಗಿತ್ತು.

    ಅತಿಹೆಚ್ಚು ಮಳೆಯಾಗಿರುವ ವಾರ್ಡ್‍ಗಳು
    ವಿದ್ಯಾಪೀಠ – 61.5 ಮಿ.ಮೀ
    ಬಸವನಗುಡಿ – 61.5 ಮಿ.ಮೀ
    ಹಗಡೂರು – 48 ಮಿ.ಮೀ
    ಚೌಡೇಶ್ವರಿ ವಾರ್ಡ್ ಯಲಹಂಕ – 47.5 ಮಿ.ಮೀ
    ಬಿಳೆಕಲ್ಲಹಳ್ಳಿ – 42 ಮಿ.ಮೀ
    ಹೊರಮಾವು – 42 ಮಿ.ಮೀ
    ನಾಯಂಡನಹಳ್ಳಿ – 41 ಮಿ.ಮೀ
    ಜ್ಞಾನಭಾರತಿ- 41 ಮಿ.ಮೀ
    ಸಾರಕ್ಕಿ – 40 ಮಿ.ಮೀ
    ಕೋಣನಕುಂಟೆ – 38 ಮಿ.ಮೀ.

    Live Tv
    [brid partner=56869869 player=32851 video=960834 autoplay=true]

  • ನೆಹರು ಸ್ಕೂಲ್ ಓಪನ್‍ಗೆ ಮಧ್ಯಂತರ ಆದೇಶ- ಪೋಷಕರಿಗೆ ಹೈಕೋರ್ಟ್ ರಿಲೀಫ್

    ನೆಹರು ಸ್ಕೂಲ್ ಓಪನ್‍ಗೆ ಮಧ್ಯಂತರ ಆದೇಶ- ಪೋಷಕರಿಗೆ ಹೈಕೋರ್ಟ್ ರಿಲೀಫ್

    ಬೆಂಗಳೂರು: ಐಎಂಎ (IMA) ನಡೆಸುತ್ತಿದ್ದ ಸ್ಕೂಲ್‍ಗೆ ಇಂದು ಅಧಿಕೃತವಾಗಿ ಬೀಗ ಬಿದ್ದಿದೆ. ಸ್ಕೂಲ್ ಆಸ್ತಿ ಮುಟ್ಟುಗೋಲು ಪ್ರಶ್ನಿಸಿ ಪೋಷಕರು ಹೈಕೋರ್ಟ್ (HighCourt) ಮೊರೆ ಹೋಗಿದ್ದಾರೆ. ಶಾಲೆ ಸೀಝ್ ಮಾಡುವಾಗ ಆವರಣದಲ್ಲಿ ಪೋಷಕರ ಕಣ್ಣೀರ ಕೋಡಿಯೇ ಹರಿದಿದ್ದು, ಸ್ಕೂಲ್ ಕ್ಲೋಸ್ ಮಾಡದಂತೆ ಗಲಾಟೆ ಮಾಡಿದ್ದಾರೆ.

    ಬೆಂಗಳೂರಿನ ಶಿವಾಜಿನಗರದ ನೆಹರು ಸ್ಕೂಲ್‍ (Nehru School) ನಲ್ಲಿ, ದಯವಿಟ್ಟು ನಿಮಗೆ ಕೈಮುಗಿಯುತ್ತೇವೆ ಶಾಲೆಗೆ ಬೀಗ ಹಾಕಬೇಡಿ. ನಮ್ಮ ಮಕ್ಕಳನ್ನು ಬೀದಿಗೆ ತರಬೇಡಿ.. ಆರು ತಿಂಗಳು ಕಾಲಾವಕಾಶ ಕೊಡಿ. ಹೀಗೆ ಕಣ್ಣೀರು ಹಾಕಿಕೊಂಡು ಶಾಲಾ ಆವರಣದಲ್ಲಿ ಪೋಷಕರು (Parents) ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಇನ್ನೊಂದಡೆ ಇದ್ಯಾವುದನ್ನು ಕೇಳದೇ ಕಂದಾಯ ಅಧಿಕಾರಿಗಳು ಶಾಲೆ ಸೀಝ್ ಮಾಡಿ ಬೀಗ ಜಡಿದರು.

    ಐಎಂಎ ನಡೆಸುತ್ತಿದ್ದ ಸ್ಕೂಲ್ ಅನ್ನು ಇಂದು ಅಧಿಕೃತವಾಗಿ ಮುಟ್ಟುಗೋಲು ಹಾಕಿಕೊಂಡು ಬೀಗ ಹಾಕಲಾಯ್ತು. ಆದ್ರೆ ಪೋಷಕರು ಇದರ ವಿರುದ್ಧ ನಮ್ಗೆ ಮಾಹಿತಿ ನೀಡದೇ ಬೀಗ ಹಾಕೋದು ಸರಿಯಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಶಾಲೆಯ ಮುಂಭಾಗ ಬ್ಯಾರಿಕೇಡ್ ಅಳವಡಿಕೆ ಬಿಗಿಭದ್ರತೆ ನೀಡಲಾಯ್ತು. ಇದನ್ನೂ ಓದಿ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿ, ಸರ್ವ ಸ್ಪರ್ಶಿಯಾಗಿದೆ: ಪ್ರಿಯಾಂಕ್ ಖರ್ಗೆ

    ಈ ಬೆಳವಣಿಗೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಪೋಷಕರಿಗೆ ಹೈಕೋರ್ಟ್‌ (HighCourt) ತೀರ್ಪು ಕೊಂಚ ರಿಲೀಫ್ ಕೊಟ್ಟದೆ. ನೆಹರೂ ಸ್ಕೂಲ್‍ನ್ನು ಮುಂದಿನ ವಿಚಾರಣೆಯವರೆಗೆ ತೆರೆಯುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಕೊಟ್ಟಿದ್ದು ಆಕ್ಟೋಬರ್ 12 ಕ್ಕೆ ಸದ್ಯ ವಿಚಾರಣೆ ಮುಂದೂಡಿದೆ.

    ಅಕ್ಟೋಬರ್ 12ವರೆಗೆ ಸದ್ಯ ಸ್ಕೂಲ್‍ನಲ್ಲಿ ಎಂದಿನಂತೆ ತರಗತಿ ನಡೆಯುವಂತೆ ಹೈಕೋರ್ಟ್ ಆದೇಶ ಪೋಷಕರಲ್ಲಿ ಸಂಭ್ರಮ ತಂದಿದೆ. ಆದರೆ ಮುಂದಿನ ದಿನದಲ್ಲಿ ಏನಾಗಲಿದೆ ಎನ್ನುವ ಆತಂಕವೂ ಇದೆ.

    Live Tv
    [brid partner=56869869 player=32851 video=960834 autoplay=true]

  • ಗಾಂಜಾ ಮತ್ತಿನಲ್ಲಿ ಶಿವಾಜಿನಗರ ಸರ್ಕಲ್ ಬಳಿ ಪುಂಡರ ಮಾರಾಮಾರಿ

    ಗಾಂಜಾ ಮತ್ತಿನಲ್ಲಿ ಶಿವಾಜಿನಗರ ಸರ್ಕಲ್ ಬಳಿ ಪುಂಡರ ಮಾರಾಮಾರಿ

    – ಡಿಜೆ ಹಳ್ಳಿ ಪ್ರಕರಣ ಮಾಸುವ ಮುನ್ನವೇ ಮತ್ತೆ ಪುಂಡರ ಉಪಟಳ

    ಬೆಂಗಳೂರು: ಡಿಜೆ ಹಳ್ಳಿ ಪ್ರಕರಣ ಮಾಸುವ ಮುನ್ನವೇ ಶಿವಾಜಿನಗರದಲ್ಲಿ ಪುಂಡರ ಉಪಟಳ ಹೆಚ್ಚಾಗಿದ್ದು, ಗಾಂಜಾ ಮತ್ತಿನಲ್ಲಿ ಪುಂಡರಿಬ್ಬರು ಬಡಿದಾಡಿಕೊಂಡಿದ್ದಾರೆ.

    ಶಿವಾಜಿನಗರ ಸರ್ಕಲ್‍ನಲ್ಲಿ ಗಲಾಟೆ ನಡೆದಿದ್ದು, ನಡು ಬೀದಿಯಲ್ಲೇ ಪುಂಡರಿಬ್ಬರು ಕಿತ್ತಾಡಿಕೊಂಡಿದ್ದನ್ನು ಕಂಡು ಸ್ಥಳೀಯರು ಭಯಗೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಡುಬೀದಿಯಲ್ಲಿ ಪುಂಡರು ಬಡಿದಾಡಿಕೊಂಡಿದ್ದು, ಆಟೋ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ.

    ಗಾಂಜಾ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಮಾರ್ಕೆಟ್‍ನಲ್ಲಿ ಅಷ್ಟು ಜನರಿದ್ದರೂ ಯಾವುದನ್ನೂ ಲೆಕ್ಕಿಸದೆ ಪುಂಡರು ಮಾರಾಮಾರಿ ನಡೆಸಿದ್ದಾರೆ. ಘಟನೆಯಿಂದಾಗಿ ಮಾರುಕಟ್ಟೆಯಲ್ಲಿನ ಜನ ಆತಂಕಗೊಂಡು ಚದುರಿದ್ದಾರೆ.