ಬಾಗಲಕೋಟೆ: ಹಿಂದೂ ಜಾಗರಣ ವೇದಿಕೆಯ (Hindu Jagarana Vedike) ಪ್ರಾಂತ ಕಾರ್ಯಕಾರಿ ಸದಸ್ಯ ಶ್ರೀಕಾಂತ್ ಶೆಟ್ಟಿ (Shrikanth Shetty) ಅವರಿಗೆ ಮೂರು ತಿಂಗಳು ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಮುಧೋಳದಲ್ಲಿರುವ ಶಿವಾಜಿ ನಗರದಲ್ಲಿ ಇಂದು ಹಿಂದೂ ಹೃದಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ (Shivaji) ಕಂಚಿನ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ಕಾರ್ಯಕ್ರಮ ಮುಖ್ಯ ಭಾಷಣಕಾರರಾಗಿ ಶ್ರೀಕಾಂತ ಶೆಟ್ಟಿ ಅವರನ್ನು ಆಹ್ವಾನಿಸಲಾಗಿತ್ತು.
ಭಾಷಣ ಮೂಲಕ ಕೋಮು ಸಾಮರಸ್ಯ ಕದಡುವ ಸಾಧ್ಯತೆ ಇರುವ ಕಾರಣ ನೀಡಿ ಜಿಲ್ಲಾಡಳಿತ ಶ್ರೀಕಾಂತ ಶೆಟ್ಟಿ ಅವರಿಗೆ 3 ತಿಂಗಳು ಬಾಗಲಕೋಟೆ (Bagalkote) ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶ ಪ್ರಕಟಿಸಿದೆ.
ಆದೇಶದಲ್ಲಿ ಏನಿದೆ?
ಮುಧೋಳ ಶಹರವು ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಮತೀಯವಾಗಿ ಸಣ್ಣ ಘಟನೆಗಳು ಸಂಭವಿಸಿದ್ದಲ್ಲಿ ರಾಜ್ಯ ಮತ್ತು ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಚಾರ ಪಡೆದು ವಿವಿಧ ಅನ್ಯ ಧರ್ಮಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ಭೇಟಿ ನೀಡಿ ಭಾಷಣವನ್ನು ಮಾಡುವುದರಿಂದ ಸಾಮರಸ್ಯದ ಜೀವನಕ್ಕೆ ಅಡೆತಡೆ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಭವ ಇರುತ್ತದೆ. ಇದನ್ನೂ ಓದಿ: RSS ಮುಖಂಡನ ಮನೆ ಮೇಲೆ ಮಧ್ಯರಾತ್ರಿ ದಾಳಿ – ಕಾರಣ ಕೇಳಿ ದ.ಕ.ಎಸ್‌ಪಿಗೆ ಹೈಕೋರ್ಟ್ ನೋಟಿಸ್
ಸೆಪ್ಟೆಂಬರ್ 09, 2015 ರಂದು ಗಣೇಶ ವಿಸರ್ಜನೆ ಕಾರ್ಯಕ್ರಮದ ಕಾಲಕ್ಕೆ ಜರುಗಿದ ಕೋಮು ಗಲಭೆಗೆ ಸಂಬಂಧಿಸಿದಂತೆ ಒಟ್ಟು 28 ಪ್ರಕರಣಗಳು ಮುಧೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಒಟ್ಟು 9.46 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ಸುಟ್ಟು ಹಾನಿಯಾಗಿತ್ತು. ಮುಧೋಳ ನಗರದಲ್ಲಿ ಇಲ್ಲಿಯವರೆಗೆ ಇದ್ದ ದ್ವೇಷಮಯ ವಾತಾವರಣವು ಸ್ವಲ್ಪ ತಿಳಿಯಾಗುತ್ತಿದ್ದು, ಉಭಯ ಕೋಮಿನ ಜನರು ಹಿಂದಿನ ಕಹಿ ಘಟನೆಗಳನ್ನು ಮರೆತು ಸಾಮರಸ್ಯದತ್ತ ವಾಲುತ್ತಿದ್ದಾರೆ.
ಶ್ರೀಕಾಂತ ಶೆಟ್ಟಿ ಇವರು ಈ ಮೊದಲು ಯಾವುದೇ ಕಾರ್ಯಕ್ರಮಕ್ಕೆ ಹೋದಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತಾ ಕೋಮು ಸಾಮರಸ್ಯವನ್ನು ಹದಗೆಡಿಸುತ್ತಾ ಬಂದಿದ್ದು ಅವರ ಮೇಲೆ ದ್ವೇಷ ಭಾಷಣ ಮತ್ತು ಅನ್ಯಧರ್ಮಿಯರ ವಿರುದ್ದ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಶ್ರೀಕಾಂತ್ ಶೆಟ್ಟಿ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನವದೆಹಲಿ: ಮೊಘಲ್ ದೊರೆ ಅಫ್ಜಲ್ ಖಾನ್ ಕೊಲ್ಲಲು ಛತ್ರಪತಿ ಶಿವಾಜಿ ಮಹಾರಾಜ (Shivaji Maharaj) ಬಳಸಿದ್ದ ‘ವಾಘ್ ನಖ್’ (ಹುಲಿ ಉಗುರು ಮಾದರಿ ಅಸ್ತ್ರ) ಲಂಡನ್‌ನಿಂದ ಭಾರತಕ್ಕೆ ವಾಪಸ್ ಆಗುತ್ತಿದೆ.
ಮೂರು ವರ್ಷಗಳ ಅವಧಿಗೆ ಜು.19 ರಂದು ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಭಾರತಕ್ಕೆ ಅಸ್ತ್ರವನ್ನು ತರಲಾಗುತ್ತಿದೆ ಎಂದು ಮಹಾರಾಷ್ಟ್ರ ಸಂಸ್ಕೃತಿ ಸಚಿವ ಸುಧೀರ್ ಮುಂಗಂಟಿವಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಜುಲೈ 20ರಂದು NEET-UG ಫಲಿತಾಂಶ ಪ್ರಕಟಿಸಿ – ಎನ್‌ಟಿಎಗೆ ಸುಪ್ರೀಂ ಆದೇಶ
ಅದೇ ದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಸತಾರಾದ ಶಿವಾಜಿ ಮ್ಯೂಸಿಯಂನಲ್ಲಿ ಈ ಅಸ್ತ್ರವನ್ನು ಇರಿಸಲಾಗುವುದು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಸಚಿವರಾದ ಸುಧೀರ್ ಮುಂಗಂಟಿವಾರ್ ಮತ್ತು ಉದಯ್ ಸಾಮಂತ್, ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ‘ವಾಘ್ ನಖ್’ (Wagh Nakh) ಅನ್ನು ಮೂರು ವರ್ಷಗಳ ಅವಧಿಗೆ ಭಾರತಕ್ಕೆ ಮರಳಿ ತರಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದನ್ನೂ ಓದಿ: ತಿರುಪತಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ – ವೆಂಕಟರಮಣನಿಗೆ ವಿಶೇಷ ಪೂಜೆ
ಛತ್ರಪತಿ ಶಿವಾಜಿ ಮಹಾರಾಜರು ಬುದ್ಧಿವಂತಿಕೆಯಿಂದ ಅಫ್ಜಲ್ ಖಾನ್‌ನನ್ನು ವಾಘ್ ನಖ್‌ನೊಂದಿಗೆ ಕೊಂದರು. ಶಿವಾಜಿ ಪಟ್ಟಾಭಿಷಿಕ್ತರಾಗಿ ಇಲ್ಲಿಗೆ 350 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿವೆ. ಮಹಾರಾಷ್ಟ್ರದಲ್ಲಿ ವಾಘ್ ನಖ್ ಅನ್ನು ಮ್ಯೂಸಿಯಂನಲ್ಲಿ ಜನರ ವೀಕ್ಷಣೆಗೆ ಇಡಲಾಗುವು ಎಂದು ಸಚಿವರು ತಿಳಿಸಿದ್ದಾರೆ.
ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ (Social Media) ಛತ್ರಪತಿ ಶಿವಾಜಿ ಮಹಾರಾಜರಿಗೆ (Chhatrapati Shivaji Maharaj) ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಧಾರವಾಡ (Dharawada) ಜಿಲ್ಲೆಯ ಕಲಘಟಗಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಲಂಡನ್: 1659 ರಲ್ಲಿ ಬಿಜಾಪುರ (ಇಂದಿನ ವಿಜಯಪುರ) ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್‌ನನ್ನು ಸೋಲಿಸಲು ಛತ್ರಪತಿ ಶಿವಾಜಿ ಮಹಾರಾಜರು (Chhatrapati Shivaji Maharaj) ಬಳಸಿದ್ದ ಐತಿಹಾಸಿಕ `ವ್ಯಾಘ್ರ ನಖ’ (Wagh Nakh) ಮುಂದಿನ ನವೆಂಬರ್ ತಿಂಗಳಲ್ಲಿ ಲಂಡನ್‌ನಿಂದ ಭಾರತಕ್ಕೆ (ಮಹಾರಾಷ್ಟ್ರಕ್ಕೆ) ಮರಳಲಿದೆ.
ಪ್ರಸಕ್ತ ವರ್ಷದಲ್ಲೇ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಶಿವಾಜಿ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯದಿಂದ (Victoria And Albert Museum) ವ್ಯಾಘ್ರ ನಖವನ್ನು ಮರಳಿ ತರಲಾಗುತ್ತಿದೆ. ಮಹಾರಾಷ್ಟ್ರಕ್ಕೆ ವ್ಯಾಘ್ರ ನಖವನ್ನು ತಂದ ಬಳಿಕ ಅದನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದಲ್ಲಿ (Shivaji Maharaj Museum) ಇರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಮಂಗಳವಾರ ಲಂಡನ್‌ಗೆ ಭೇಟಿ ನೀಡಲಿದ್ದು, ಆಯುಧವನ್ನು ಹಿಂದಿರುಗಿಸುವ ಕುರಿತು ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ವ್ಯಾಘ್ರ ನಖವನ್ನು ನವೆಂಬರ್‌ನಲ್ಲಿ ತರುತ್ತಿದ್ದೇವೆ. ಅದಕ್ಕಾಗಿ MOUಗೆ ಸಹಿ ಹಾಕುತ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳು ಬಗೆದ ದಿನದಂದೇ ಅದನ್ನು ತರುವುದು ನಮ್ಮ ಪ್ರಯತ್ನ ಎಂದೂ ಸಚಿವರು ಹೇಳಿದ್ದಾರೆ.
ಅಫ್ಜಲ್ ಖಾನ್‌ನನ್ನು ಕೊಂದ ರೋಚಕ ಇತಿಹಾಸ ಗೊತ್ತಾ?
ಹೌದು. 1659ರಲ್ಲಿ ಪ್ರತಾಪಗಡದಲ್ಲಿ ನಡೆದ ಕದನದಲ್ಲಿ ಮರಾಠರ ಗೆಲುವು ಮರಾಠ ಸಾಮ್ರಾಜ್ಯ ಸ್ಥಾಪಿಸುವ ಶಿವಾಜಿಯ ಸಾಧನೆಗೆ ಮಹತ್ವದ ತಿರುವು ಪಡೆದುಕೊಂಡಿತ್ತು. ಅಂದು ಸೈನಿಕರ ಸಂಖ್ಯೆ ಮೀರಿದ್ದ ಹೊರತಾಗಿಯೂ ಮರಾಠರು ಅಫ್ಜಲ್ ಖಾನ್ ನೇತೃತ್ವದ ಆದಿಲ್ಶಾಹಿ ಪಡೆಗಳು ಮಣ್ಣುಮುಕ್ಕುವಂತೆ ಮಾಡಿದ್ದರು. ಉತ್ತಮ ತಂತ್ರಗಾರಿಕೆ, ಸಮರ್ಥ ನಾಯಕತ್ವ, ಚಾಣಾಕ್ಷತನದಿಂದ ಆ ಯುದ್ಧದಲ್ಲಿ ಮರಾಠರು ಗೆಲುವಿನ ಕೇಕೆ ಹಾಕಿದರು. ಇಂದಿನ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರತಾಪಗಢ ಕೋಟೆಯ ತಪ್ಪಲಿನಲ್ಲಿ ಛತ್ರಪತಿ ಶಿವಾಜಿ ಅಫ್ಜಲ್ ಖಾನ್‌ನನ್ನು ಕೊಂದಿದ್ದರು.
ಅಂದು ಸಭೆ ನಡೆಯುತ್ತಿದ್ದ ವೇಳೆ ಅಫ್ಜಲ್ ಖಾನ್ ಶಿವಾಜಿ ಮಹಾರಾಜರ ಬೆನ್ನಿಗೆ ಚೂರಿ ಹಾಕಿದ್ದನು. ಆಗ ಶಿವಾಜಿ ಮಹಾರಾಜರು, ಅಫ್ಜಲ್ ಖಾನ್ ಕೊಲ್ಲಲು ವಾಘ್ರನಖವನ್ನು ಬಳಸಿದರು. ಆದ್ರೆ ಇಂದಿಗೂ ಮಹಾರಾಷ್ಟ್ರದಲ್ಲಿ ಈ ವ್ಯಾಘ್ರ ನಖದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಬಾಗಲಕೋಟೆ: ಸುಮಾರು ನಾಲ್ಕು ದಿನಗಳಿಂದ ಬಾಗಲಕೋಟೆ (Bagalkot) ನಗರದಲ್ಲಿ ಶಿವಾಜಿ ಮೂರ್ತಿ (Shivaji Statue) ಗಲಾಟೆ ಜೋರಾಗಿದೆ. ಆ.13 ರಂದು ಬೆಳ್ಳಂಬೆಳಿಗ್ಗೆ ಬಾಗಲಕೋಟೆ ನಗರದ ಹೊರವಲಯದ ಕಾಂಚನಾ ಪಾರ್ಕ್ ಬಳಿ ಜಾಗದಲ್ಲಿ ಸುಮಾರು 18 ಅಡಿ ಎತ್ತರದ ಶಿವಾಜಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.
ಈ ವಿಷಯ ಎಲ್ಲೆಡೆ ಹಬ್ಬುತ್ತಿದ್ದಂತೆ ಜಿಲ್ಲೆಯ ಜನರಿಗೆ ಅಚ್ಚರಿ ಹಾಗೂ ಕುತೂಹಲ ಹೆಚ್ಚಾಗಿತ್ತು. ಶಿವಾಜಿ ಮೂರ್ತಿಯನ್ನು ರಾತ್ರೋ ರಾತ್ರಿ ಹಿಂದೂ ಅಭಿಮಾನಿಗಳು ಕೂರಿಸಿ ಹೋಗಿದ್ದಾರೆಂದು ನುಣುಚಿಕೊಂಡ ಬಿಜೆಪಿ (BJP) ಮುಖಂಡರ ಒಂದು ಗುಂಪು ಶಿವಾಜಿಮೂರ್ತಿ ಪ್ರತಿಷ್ಠಾಪಿಸಿದ್ದು ಸ್ವಾಗತಾರ್ಹ ಎಂದು ಸಮರ್ಥನೆ ಮಾಡಿಕೊಂಡಿತ್ತು.
ಬಿಜೆಪಿಯ ಇನ್ನೊಂದು ಗುಂಪಿಗೆ ಈ ವಿಚಾರದಿಂದ ಬೇಸರವೂ ಆಗಿತ್ತು. ಮೂರ್ತಿ ಪ್ರತಿಷ್ಠಾಪನೆ ಖುಷಿಯ ವಿಚಾರ ಆದರೆ ರಾತ್ರೋ ರಾತ್ರೋ ಕಳ್ಳತನದಿಂದ ಶಿವಾಜಿಮೂರ್ತಿಯನ್ನು ಪ್ರತಿಷ್ಠಾಪಿಸುವ ಅವಶ್ಯಕತೆ ಏನಿತ್ತು? ಹಿಂದೂ ಹೃದಯ ಸಾಮ್ರಾಟ ಎಂದು ಕರೆಯಲ್ಪಡುವ ಶಿವಾಜಿ ಪ್ರತಿಮೆಯನ್ನು ಅದ್ಧೂರಿಯಾಗಿ ಮೆರವಣಿಗೆ ಮೂಲಕ ತಂದು ಕೂರಿಸಬಹುದಿತ್ತು ಎಂದು ಬೇಸರವನ್ನೂ ಹೊರಹಾಕಿತ್ತು.
ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿಚಾರ ಇಷ್ಟಕ್ಕೆ ನಿಲ್ಲಲಿಲ್ಲ. ಶಿವಾಜಿ ಪ್ರತಿಮೆ ಇರಿಸಿದ ಜಾಗ ಸದ್ಯ ಬಾಗಲಕೋಟೆ ನಗರಸಭೆಯ ಆಧೀನದಲ್ಲಿದೆ. ಯಾವುದೇ ಅನುಮತಿ ಇಲ್ಲದೇ ಆ ಜಾಗದಲ್ಲಿ ಮೂರ್ತಿ ಕೂರಿಸಲಾಗಿದೆ ಎಂಬ ವದಂತಿ ಹಬ್ಬಿತ್ತು. ಅಲ್ಲದೇ ಪ್ರತಿಷ್ಠಾಪಿಸಿದ ಮೂರ್ತಿಯನ್ನು ನಗರಸಭೆ ಸಿಬ್ಬಂದಿ ತೆರವು ಗೊಳಿಸುತ್ತಾರೆಂಬ ಸುದ್ದಿ ಜೋರಾಗಿ ಹರಿದಾಡತೊಡಗಿತ್ತು. ಇದರಿಂದ ಕೆರಳಿದ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು (Hindu Activists) ಆಗಸ್ಟ್ 14 ರಂದು ಬೆಳಗ್ಗೆ ನಗರಸಭೆಗೆ ತೆರಳಿ ಪ್ರತಿಭಟನೆ ಮಾಡಿದರು. ಇದನ್ನೂ ಓದಿ: ಬೆಂಬಲಿಗರೇ ಬರುತ್ತೇವೆ ಎಂದ ಮೇಲೆ ಸೋಮಶೇಖರ್ ಕಾಂಗ್ರೆಸ್‌ನಲ್ಲಿರಲು ಸಾಧ್ಯವೇ : ಕೈ ಶಾಸಕ ಶ್ರೀನಿವಾಸ್
ಆಯುಕ್ತರ ಜೊತೆ ವಾಗ್ವಾದ ಮಾಡಿ ಯಾವುದೇ ಕಾರಣಕ್ಕೂ ಮೂರ್ತಿಯನ್ನು ತೆರವುಗೊಳಿಸಬೇಡಿ ಎಂಬ ಎಚ್ಚರಿಕೆ ನೀಡಿದರು. ಆದರೆ ಬಾಗಲಕೋಟೆ ಜಿಲ್ಲಾಧಿಕಾರಿ ಎಂ ಜಾನಕಿ ಶಿವಾಜಿ ಮೂರ್ತಿ ತೆರವಿಗೆ ಆದೇಶ ನೀಡಿದ್ದಲ್ಲದೇ, ನಗರದಲ್ಲಿ ಸೆಕ್ಷನ್ 144 ಕಲಂ ಜಾರಿಮಾಡಿ ನಿಷೇಧಾಜ್ಞೆ ಜಾರಿ ಮಾಡಿದರು. ಆದೇಶದ ಅನ್ವಯ ಸಂಜೆ ಎಲ್ಲ ಅಂಗಡಿ ಮುಂಗಟ್ಟು ಬಂದ್ ಮಾಡಿಸಿದ ಪೊಲೀಸ್ ಸಿಬ್ಬಂದಿ ಮೂರ್ತಿ ಇರುವ ಕಾಂಚನಾ ಪಾರ್ಕ್ ರಸ್ತೆಯನ್ನು ಬಂದ್ ಮಾಡಿ ಸರಿಯಾಗಿ ರಾತ್ರಿ 10 ಗಂಟೆಗೆ ನಗರಸಭಾ ಸಿಬ್ಬಂದಿ ಪೊಲೀಸ್ ಭದ್ರತೆಯಲ್ಲಿ ಮೂರ್ತಿಯನ್ನ ತೆರವು ಗೊಳಿಸಿದರು.
ಮೂರ್ತಿ ತೆರವು ಕಾರ್ಯಾಚರಣೆ ವಿರೋಧಿಸಿ ಸ್ಥಳದಲ್ಲಿ ಪ್ರತಿಭಟನೆ ನಡಸಿದ್ದ 15 ಬಿಜೆಪಿ ಮುಖಂಡರನ್ನು ಹಾಗೂ ಕೆಲ ಹಿಂದೂ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು. ಇದರಿಂದ ಕೆರಳಿರುವ ಬಿಜೆಪಿಗರು ಗುರುವಾರ ಬಾಗಲಕೋಟೆಯ ಶಿವಾನಂದ್ ಜಿನ್ ನಲ್ಲಿ ಸಭೆ ಸೇರಿ, ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ಒಮ್ಮತದಿಂದ ಶುಕ್ರವಾರ ಬಾಗಲಕೋಟೆ ನಗರವನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ತೆರವುಗೊಳಿಸಿದ ಮೂರ್ತಿಯನ್ನು ಅದೇ ಜಾಗೆಯಲ್ಲಿ ಮರು ಪ್ರತಿಷ್ಠಾಪಿಸಬೇಕು. ಇಲ್ಲದೇ ಇದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಮೂರ್ತಿ ಮರು ಪ್ರತಿಷ್ಠಾಪಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮನವಿಯನ್ನೂ ಮಾಡಿದ್ದಾರೆ. ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಮಾಜಿ ಸಚಿವ ಗೋವಿಂದ ಕಾರಜೋಳ (Govind Karjol) ನೇತೃತ್ವದಲ್ಲಿ ಬಾಗಲಕೋಟೆ ಶಿವಾನಂದ್ ಜಿನ್‌ನಲ್ಲಿ ಸಭೆ ಸೇರಲಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮುಂದಿನ ಹೋರಾಟದ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ.
ಸದ್ಯ ನಾಲ್ಕು ದಿನಗಳಿಂದ ಶಿವಾಜಿ ಮೂರ್ತಿ ವಿಚಾರವಾಗಿ ಬಾಗಲಕೋಟೆಯಲ್ಲಿ ಬಿಗುವಿನ ವಾತವರಣ ನಿರ್ಮಾವಾಗಿದೆ. ಬಿಜೆಪಿಗರ ನಡೆ ಗಮನಿಸಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ನಿನ್ನೆಯಷ್ಟೇ ಶಾರುಖ್ ಖಾನ್ (Shah Rukh Khan) ನಟನೆಯ ಜವಾನ್ (Jawan) ಸಿನಿಮಾದ ಪ್ರಿವ್ಯೂ ರಿಲೀಸ್ ಆಗಿದೆ. ಈ ಪ್ರವ್ಯೂ ದಾಖಲೆಯ ರೀತಿಯಲ್ಲಿ ಜನರಿಗೆ ತಲುಪಿದೆ. ಅದರಲ್ಲೂ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ. ಈ ಎಲ್ಲದರ ನಡುವೆಯೂ ಈ ಸಿನಿಮಾದ ಕೆಲವ ದೃಶ್ಯಗಳನ್ನು ಬೇರೆ ಬೇರೆ ಸಿನಿಮಾಗಳಿಗೆ ಹೋಲಿಕೆ ಮಾಡಲಾಗುತ್ತಿದೆ. ಅದರಲ್ಲೂ ದಕ್ಷಿಣದ ಸಿನಿಮಾಗಳಿಗೆ ಹೋಲಿಕೆ ಮಾಡಿ ಟ್ರೋಲ್ ಕೂಡ ಮಾಡಲಾಗುತ್ತಿದೆ.
ವಿಕ್ರಮ್ ನಟನೆಯ ಅಪರಿಚಿತ್, ಪ್ರಭಾಸ್ ನಟನೆಯ ಬಾಹುಬಲಿ 2 (Baahubali 2), ರಜನಿಕಾಂತ್ ನಟನೆಯ ಶಿವಾಜಿ (Shivaji) ಸಿನಿಮಾಗಳ ಜೊತೆಗೆ ಹಾಲಿವುಡ್ ನ ಡಾರ್ಕ್ ಮ್ಯಾನ್ ಚಿತ್ರಕ್ಕೂ ಹೋಲಿಕೆ ಮಾಡಲಾಗುತ್ತಿದೆ. ನಿನ್ನೆಯಷ್ಟೇ ರಿಲೀಸ್ ಆದ ಜವಾನ್ ಸಿನಿಮಾದ ಪ್ರಿವ್ಯೂನಲ್ಲಿ ಮಗುವನ್ನು ಎತ್ತಿಕೊಳ್ಳುವ ದೃಶ್ಯವಿದೆ. ಅದನ್ನು ಬಾಹುಬಲಿ ಚಿತ್ರಕ್ಕೆ ಹೋಲಿಸಿದರೆ, ಶಾರುಖ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ದೃಶ್ಯವನ್ನು ಬಾಲಿವುಡ್ ನ ಡಾರ್ಕ್ ಮ್ಯಾನ್ ಹಾಗೂ ಮುಖಕ್ಕೆ ಶಾರುಖ್ ಮಾಸ್ಕ್ ಹಾಕಿಕೊಂಡಿರುವ ದೃಶ್ಯವನ್ನು ಅಪರಿಚಿತ್ (Aparichith) ದೃಶ್ಯಕ್ಕೆ ಹಾಗೂ ತಲೆಯಲ್ಲಿ ಕೂದಲು ಇಲ್ಲದ ಶಾರುಖ್ ನನ್ನು ಶಿವಾಜಿ ಚಿತ್ರಕ್ಕೆ ಹೋಲಿಸಿದ್ದಾರೆ.
ಆದರೆ, ಇದ್ಯಾವುದೂ ಹೋಲಿಕೆ ಅಲ್ಲ ಎಂದು ಶಾರುಖ್ ಅಭಿಮಾನಿಗಳು ವಾದಿಸುತ್ತಿದ್ದಾರೆ. ಶಾರುಖ್ ಯಾವಾಗಲೂ ಸ್ವಂತದ್ದನ್ನು ಮಾಡುವವರು, ಅವರಿಗೆ ಕಾಪಿ (Copy) ಮಾಡುವ ಗುಣವಿಲ್ಲ. ಹೋಲಿಕೆ ಅದು ನಿಮಗೆ ಕಂಡಿರಬಹುದು ಎಂದು ಟ್ರೋಲ್ ಮಾಡುವವರಿಗೆ ಶಾರುಖ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಪೂರ್ತಿ ಸಿನಿಮಾವನ್ನು ವೀಕ್ಷಿಸಿ ಆಮೇಲೆ ಕಾಮೆಂಟ್ ಮಾಡಿ ಎಂದಿದ್ದಾರೆ.
ಹೇಗಿದೆ ಜವಾನ್ ಪ್ರಿವ್ಯೂ?
ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ‘ಜವಾನ್’ನ ಪ್ರಿವ್ಯೂ ಇಂದು ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಸಮಾಜದಲ್ಲಾಗುತ್ತಿರುವ ತಪ್ಪುಗಳನ್ನು ತಿದ್ದುವ ಒಬ್ಬ ಜವಾಬ್ದಾರಿಯುತ ಮತ್ತು ಪ್ರಾಮಾಣಿಕ ವ್ಯಕ್ತಿಯ ಕಥೆಯಾಗಿದೆ. ‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಆರಂಭದಿಂದಲೂ ಬಹಳ ಕುತೂಹಲವಿತ್ತು. ಇಂದು ಬಿಡುಗಡೆಯಾದ ಟೀಸರ್, ಆ ನಿರೀಕ್ಷೆ ಮತ್ತು ಕುತೂಹಲಗಳನ್ನು ಇನ್ನೊಂದು ಹಂತಕ್ಕೆ ತಲುಪಿಸಿದೆ. ದೊಡ್ಡ ಬಜೆಟ್ ನಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಚಿತ್ರವು ಆಕ್ಷನ್ ಮತ್ತು ಎಮೋಷನ್ ಗಳನ್ನು ಹದವಾಗಿ ಹಿಡಿದಿಟ್ಟಿದೆ. ಚಿತ್ರದ ಕೆಲವು ಅದ್ಭುತ ಕ್ಷಣಗಳನ್ನು ಹಿಡಿದಿಡುವುದರ ಜೊತೆಗೆ, ‘ಜವಾನ್ ಪ್ರಪಂಚವನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.
‘ಕಿಂಗ್ ಖಾನ್’ ಅವರ ಧ್ವನಿಯಲ್ಲಿ ಪ್ರಾರಂಭವಾಗುವ ಈ ಪ್ರಿವ್ಯೂ, ನಂತರ ಚಿತ್ರ ಏನಿರಬಹುದು ಎಂದು ಪರಿಚಯಿಸಿಕೊಡುತ್ತದೆ. ಈ ಪ್ರಿವ್ಯೂನ ಒಂದು ವಿಶೇಷತೆಯೆಂದರೆ, ಇದುವರೆಗೂ ನೀವು ನೋಡದೆ ಇರುವ ಶಾರುಖ್ ಅವರನ್ನು ಇಲ್ಲಿ ಹಲವು ಅವತಾರಗಳಲ್ಲಿ ನೋಡಬಹುದು. ಶಾರುಖ್ ಖಾನ್ ಅಲ್ಲದೆ, ಚಿತ್ರದಲ್ಲಿ ನಟಿಸಿರುವ ಹಲವು ಪ್ರತಿಭಾವಂತರ ತುಣುಕುಗಳು ಸಹ ಈ ಪ್ರಿವ್ಯೂನಲ್ಲಿ ಪರಿಚಯಿಸಲಾಗಿದೆ. ರೋಮಾಂಚನಗೊಳಿಸುವ ಆಕ್ಷನ್ ದೃಶ್ಯಗಳು, ಅದ್ದೂರಿ ಹಾಡುಗಳು, ‘ಬೇಕರಾರ್ ಕರಕೇ ಹಮೇ’ ಹಾಡಿಗೆ ಶಾರುಖ್ ಖಾನ್ ಅಭಿನಯ … ಇವೆಲ್ಲವೂ ಈ ಪ್ರಿವ್ಯೂ ಚಿತ್ರದ ಹೈಲೈಟ್ ಗಳಾಗಿದ್ದು, ಚಿತ್ರ ಬಿಡುಗಡೆಗೆ ಕಾಯುವಂತಾಗಿದೆ.
ದಕ್ಷಿಣ ಭಾರತದ ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರಾದ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಅನಿರುದ್ಧ್ ರವಿಚಂದರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ. ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಈ ಪ್ರಿವ್ಯೂನ ಇನ್ನೊಂದು ಹೈಲೈಟ್. ಈ ಪ್ರಿವ್ಯೂನಲ್ಲಿ ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಅದು ಗ್ರಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿರುವ ರಾಜಕುಮಾರಿ ಅವರು ಹಾಡಿರುವ ‘ದಿ ಕಿಂಗ್ ಖಾನ್ ರಾಪ್’ ಎಂಬ ಹಾಡು.
‘ಜವಾನ್’, ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರವಾಗಿದ್ದು, ಅತ್ಯಂತ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ಶಾರುಖ್ ಜೊತೆಗೆ ಭಾರತೀಯ ಚಿತ್ರರಂಗದ ಜನಪ್ರಿಯ ಹಾಗೂ ವಿವಿಧ ಭಾಷೆಯ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ನಯನತಾರಾ, ವಿಜಯ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಗಿರಿಜಾ ಓಕ್, ಸಂಗೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ದೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಿಯಾ ನಟಿಸಿರುವ ಈ ಚಿತ್ರವು ಎಲ್ಲ ಭಾಷೆಗಳ ಜನರಿಗೂ ತಲುಪವಂತೆ ಚಿತ್ರಿಸಲಾಗಿದೆ.
ಇದಕ್ಕೂ ಮುನ್ನ ಪೋಸ್ಟರ್ ಮತ್ತು ಸಣ್ಣ ಟೀಸರ್ ಮೂಲಕ ಜನರ ಗಮನ ಸೆಳೆದ ಟೀಸರ್, ಈಗ ಪ್ರಿವ್ಯೂ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ನಡಿ ಗೌರಿ ಖಾನ್ ನಿರ್ಮಾಣ ಮಾಡಿದರೆ, ಗೌರವ್ ವರ್ಮ ಸಹ-ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ‘ಜವಾನ್’ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಹಿರಿಯ ನಟ ಅಶೋಕ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಆತ್ಮೀಯ ಸ್ನೇಹಿತರು. ರಜನಿ ಬಗ್ಗೆ ಯಾರಾದರೂ ವಸ್ತುನಿಷ್ಠವಾಗಿ ಬರೆಯಬಲ್ಲರು ಅಂದರೆ, ಅದು ಅಶೋಕ್ ಅವರಿಗೆ ಮಾತ್ರ ಸಾಧ್ಯವಾಗುವಂಥದ್ದು. ರಜನಿ ಅವರ ಕಷ್ಟದ ದಿನಗಳಿಂದ ಸೂಪರ್ ಸ್ಟಾರ್ ಆಗಿ ಬೆಳೆದ ಪರಿಯನ್ನು ಕಣ್ಣಾರೆ ಕಂಡವರು. ಕಂಡುಂಡು ಮೆರೆದವರು. ಹಾಗಾಗಿ ಗೆಳೆಯನ ಜೊತೆಗಿನ ಅಪರೂಪದ ಭಾವನೆಗಳನ್ನು ಈ ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ ಅಶೋಕ್.
ಇದು ಕೇವಲ ಭಾವನೆಗಳ ಗುಚ್ಛವಲ್ಲವಂತೆ. ಸಾಕಷ್ಟು ಘಟನೆಗಳಿಗೆ ಸಾಕ್ಷಿಯಾಗಿಯೂ ಇರಲಿದೆಯಂತೆ. ಅಲ್ಲದೇ, ಅನೇಕ ಊಹಾಪೋಹಗಳಿಗೆ ಈ ಪುಸ್ತಕ ಉತ್ತರವಾಗಿ ನಿಲ್ಲಬಲ್ಲದು. ಗೊತ್ತಿರದ ರಜನಿಯನ್ನು ಗೆಳೆಯ ಅನ್ನುವ ಆಪ್ತತೆಯ ಮೂಲಕ ಅಶೋಕ್ ಅವರು ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ‘ಗೆಳೆಯ ಶಿವಾಜಿ’ ರಜನಿಕಾಂತ್ ಜೀವನದ ದಿ ಬೆಸ್ಟ್ ಪುಸ್ತಕವೂ ಆಗಿದೆ. ಗಿರಿಜಾ ಲೋಕೇಶ್ ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದರೆ, ಬೆಂಗಳೂರಿನ ಬೀ ಕಲ್ಚರ್ ಪ್ರಕಾಶನ ಈ ಪುಸ್ತಕವನ್ನು ಹೊರ ತಂದಿದೆ. ಇದನ್ನೂ ಓದಿ: `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್
ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಡಿಸೆಂಬರ್ 12ರ ಸಂಜೆ 5.30ಕ್ಕೆ ಈ ಪುಸ್ತಕ ಬಿಡುಗಡೆ ಆಗುತ್ತಿದ್ದು, ಅಗ್ರಹಾರ ಕೃಷ್ಣಮೂರ್ತಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ನಟ ನೀನಾಸಂ ಸತೀಶ್ ಈ ಪುಸ್ತಕವನ್ನು ಬಿಡುಗಡೆ ಮಾಡಿದರೆ, ನಿರ್ದೇಶಕಿ ಸುಮನಾ ಕಿತ್ತೂರ್ ಕೃತಿಯನ್ನು ಪರಿಚಯಿಸುತ್ತಾರೆ. ಸಿ.ಎಸ್.ದ್ವಾರಕನಾಥ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್, ಇದೀಗ ಮತ್ತೊಂದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಮರಾಠಿ ಸಿನಿಮಾ ರಂಗಕ್ಕೆ ಹಾರಿದ್ದು, ಅಲ್ಲಿ ಛತ್ರಿಪತಿ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವಾಜಿ ಮಹಾರಾಜ್ ಪಾತ್ರವನ್ನು ಅವರು ನಿರ್ವಹಿಸಲಿದ್ದು, ಇದು ಶಿವಾಜಿ ಜೀವನವನ್ನು ಆಧರಿಸಿದ ಸಿನಿಮಾವಾಗಿದೆ. ಈ ಚಿತ್ರಕ್ಕೆ ‘ವೇಡಾತ್ ಮರಾಠೆ ವೀರ್ ದೌಡಲೆ ಸಾತ್’ ಎಂದು ಹೆಸರು ಇಡಲಾಗಿದ್ದು, ಈ ಸಿನಿಮಾದ ಫಸ್ಟ್ ಲುಕ್ ನಿನ್ನೆ ಬಿಡುಗಡೆಯಾಗಿದೆ.
ಇತ್ತೀಚೆಗಷ್ಟೇ ರಿಲೀಸ್ ಆದ, ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಡಲಿಲ್ಲ. ಈ ಹಿಂದಿನ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ಗೆಲ್ಲುವಲ್ಲಿ ವಿಫಲವಾದವು. ಈ ಕಾರಣದಿಂದಾಗಿಯೇ ಅವರು ಮರಾಠಿ ಸಿನಿಮಾ ರಂಗದತ್ತ ಹೊರಳಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಪ್ರಯತ್ನದಲ್ಲೇ ಅವರು ಮರಾಠ ಸಾಮ್ರಾಜ್ಯದ ದೊರೆ ಆಗಿದ್ದ ಛತ್ರಪತಿ ಶಿವಾಜಿ ಅವರ ಜೀವನವನ್ನು ಆಧರಿಸಿದ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಇದನ್ನೂ ಓದಿ: ಸ್ಯಾಂಡಲ್‌ವುಡ್ ನಟ ಮನದೀಪ್ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ಈ ಸಿನಿಮಾವನ್ನು ಮಹೇಶ್ ಮಂಜರೇಕರ್ ನಿರ್ದೇಶನ ಮಾಡುತ್ತಿದ್ದು, ವಸೀಮ್ ಖುರೇಷಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತಿಚೆಗಷ್ಟೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮತ್ತೊಂದು ವಿಶೇಷ ಅಂದರೆ, ಇದೇ ಕಾರ್ಯಕ್ರಮದಲ್ಲಿ ಎಂ.ಎನ್.ಸಿ ಮುಖ್ಯಸ್ಥ ರಾಜ್ ಠಾಕ್ರೆ ಕೂಡ ಭಾಗಿಯಾಗಿ, ಏಕನಾಥ್ ಶಿಂಧೆಗೆ ಮುಖಾಮುಖಿ ಆಗಿದ್ದಾರೆ.
ಸಿನಿಮಾ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್, ‘ಇಂತಹ ದೊಡ್ಡ ಪಾತ್ರ ನನಗೆ ಸಿಕ್ಕಿದ್ದು ಖುಷಿಯಾಗಿದೆ. ಇದು ನನ್ನ ಕನಸಿನ ಪಾತ್ರ ಕೂಡ ಆಗಿತ್ತು. ಇದೇ ಮೊದಲ ಬಾರಿಗೆ ನಿರ್ದೇಶಕ ಮಹೇಶ್ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ತೆರೆಯ ಮೇಲೆ ನನ್ನನ್ನು ನಾನು ನೋಡಲು ಉತ್ಸುಕನಾಗಿದ್ದೇನೆ; ಎಂದು ಅವರು ಹೇಳಿದ್ದಾರೆ. ನಿರ್ದೇಶಕರು ಈ ಚಿತ್ರಕ್ಕಾಗಿ ಸತತ ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್, ಇದೀಗ ಮತ್ತೊಂದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಮರಾಠಿ ಸಿನಿಮಾ ರಂಗಕ್ಕೆ ಹಾರಿದ್ದು, ಅಲ್ಲಿ ಛತ್ರಿಪತಿ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಶಿವಾಜಿ ಮಹಾರಾಜ್ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ. ಶಿವಾಜಿ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕೆ ‘ವೇಡಾತ್ ಮರಾಠೆ ವೀರ್ ದೌಡಲೆ ಸಾತ್’ ಎಂದು ಹೆಸರು ಇಡಲಾಗಿದೆ.
ಇತ್ತೀಚೆಗಷ್ಟೇ ರಿಲೀಸ್ ಆದ, ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಡಲಿಲ್ಲ. ಈ ಹಿಂದಿನ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ಗೆಲ್ಲುವಲ್ಲಿ ವಿಫಲವಾದವು. ಈ ಕಾರಣದಿಂದಾಗಿಯೇ ಅವರು ಮರಾಠಿ ಸಿನಿಮಾ ರಂಗದತ್ತ ಹೊರಳಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಪ್ರಯತ್ನದಲ್ಲೇ ಅವರು ಮರಾಠ ಸಾಮ್ರಾಜ್ಯದ ದೊರೆ ಆಗಿದ್ದ ಛತ್ರಪತಿ ಶಿವಾಜಿ ಅವರ ಜೀವನವನ್ನು ಆಧರಿಸಿದ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು
ಈ ಸಿನಿಮಾವನ್ನು ಮಹೇಶ್ ಮಂಜರೇಕರ್ ನಿರ್ದೇಶನ ಮಾಡುತ್ತಿದ್ದು, ವಸೀಮ್ ಖುರೇಷಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತಿಚೆಗಷ್ಟೇ ಸಿನಿಮಾದ ಮುಹೂರ್ತ ಕೂಡ ಆಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮತ್ತೊಂದು ವಿಶೇಷ ಅಂದರೆ, ಇದೇ ಕಾರ್ಯಕ್ರಮದಲ್ಲಿ ಎಂ.ಎನ್.ಸಿ ಮುಖ್ಯಸ್ಥ ರಾಜ್ ಠಾಕ್ರೆ ಕೂಡ ಭಾಗಿಯಾಗಿ, ಏಕನಾಥ್ ಶಿಂಧೆಗೆ ಮುಖಾಮುಖಿ ಆಗಿದ್ದಾರೆ.
ಸಿನಿಮಾ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್, ‘ಇಂತಹ ದೊಡ್ಡ ಪಾತ್ರ ನನಗೆ ಸಿಕ್ಕಿದ್ದು ಖುಷಿಯಾಗಿದೆ. ಇದು ನನ್ನ ಕನಸಿನ ಪಾತ್ರ ಕೂಡ ಆಗಿತ್ತು. ಇದೇ ಮೊದಲ ಬಾರಿಗೆ ನಿರ್ದೇಶಕ ಮಹೇಶ್ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ತೆರೆಯ ಮೇಲೆ ನನ್ನನ್ನು ನಾನು ನೋಡಲು ಉತ್ಸುಕನಾಗಿದ್ದೇನೆ; ಎಂದು ಅವರು ಹೇಳಿದ್ದಾರೆ. ನಿರ್ದೇಶಕರು ಈ ಚಿತ್ರಕ್ಕಾಗಿ ಸತತ ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಹಿಂದೂ ಧರ್ಮವನ್ನು ಯಾರಿಂದಲೂ ಟಚ್ ಮಾಡಲು ಸಾಧ್ಯವಾಗಿಲ್ಲ. ಅಂದು ಹಿಂದೂ ಧರ್ಮ ಇತ್ತು, ಇಂದು ಸಹ ಹಾಗೇ ಇದೆ. ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ ಸ್ಥಾಪನೆ ಮಾಡಿದ್ದಾರೆ. ಬಿಜೆಪಿಯವರು ಈಗ ಏನ್ ಹೊಸ ಹಿಂದೂ ರಾಷ್ಟ್ರ ಮಾಡಲು ಹೊರಟ್ಟಿದ್ದಾರೆ ಎಂದು ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಮೇಲೆ ಮೊಘಲರು, ಬ್ರಿಟಿಷರು ದಾಳಿ ಮಾಡಿದ್ದಾರೆ. ಆದರೂ ಹಿಂದೂ ಧರ್ಮವನ್ನು ಯಾರಿಂದಲೂ ಟಚ್ ಮಾಡಲು ಸಾಧ್ಯವಾಗಿಲ್ಲ. ಹಿಂದೂ ಧರ್ಮದ ಮೇಲೆ ಯಾರಿಂದಲೂ ಆಕ್ರಮಣ ಮಾಡಲು ಆಗಲ್ಲ ಎಂದು ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪುಸ್ತಕದಿಂದ ತೆಗೆದರೂ ಭಾರತೀಯರ ಹೃದಯದಲ್ಲಿ ಟಿಪ್ಪು ಸದಾ ನೆಲೆಸಿರುತ್ತಾರೆ: ಹೆಚ್.ವಿಶ್ವನಾಥ್
ಬಿಜೆಪಿ ಕೇವಲ ವೋಟ್ ಬ್ಯಾಂಕ್‍ಗಾಗಿ ಧರ್ಮ, ಜಾತಿ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ. ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ ಸ್ಥಾಪನೆ ಮಾಡಿದ್ದಾರೆ. ಈಗ ಏನ್ ಹೊಸ ಹಿಂದು ರಾಷ್ಟ್ರ ಮಾಡಲು ಹೊರಟ್ಟಿದ್ದಾರೆ. ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರವನ್ನು ನಾವು ಒಪ್ಪಲ್ಲ. ಹಿಂದೂ ಧರ್ಮದ ಬಗ್ಗೆ ಆರ್‌ಎಸ್‌ಎಸ್ ಮೊದಲು ತಿಳಿದುಕೊಳ್ಳಬೇಕು. ಹಿಂದೂ ಧರ್ಮದಲ್ಲಿ ಬ್ರಾಹ್ಮಣ, ದಲಿತ, ಮುಸ್ಲಿಮರು ಎಲ್ಲರೂ ಇದ್ದಾರೆ. ಹಿಂದೂ ಧರ್ಮದ ಸಂಸ್ಕೃತಿ ಬಹಳ ದೊಡ್ಡದಿದೆ. ಅದನ್ನು ತಿಳಿದುಕೊಳ್ಳುವ ಕೆಲಸ ಮಾಡಬೇಕು ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಅಮಿತಾಭ್, ಅಕ್ಷಯ್ ಪ್ರತಿಕೃತಿ ದಹಿಸಿ ಬೆಲೆ ಏರಿಕೆಗೆ ಕಾಂಗ್ರೆಸ್ ಪ್ರತಿಭಟನೆ