Tag: ಶಿವಶಂಕರ್ ರೆಡ್ಡಿ

  • ಗೌರಿಬಿದನೂರು ಕ್ಷೇತ್ರಕ್ಕೆ ಕೈ ಹಾಕಿದ್ರೆ ಕೈ ಕತ್ತರಿಸ್ತೇನೆ- ಶಿವಶಂಕರ ರೆಡ್ಡಿ

    ಗೌರಿಬಿದನೂರು ಕ್ಷೇತ್ರಕ್ಕೆ ಕೈ ಹಾಕಿದ್ರೆ ಕೈ ಕತ್ತರಿಸ್ತೇನೆ- ಶಿವಶಂಕರ ರೆಡ್ಡಿ

    ಚಿಕ್ಕಬಳ್ಳಾಪುರ: ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ ಕೈ ಹಾಕಿದರೆ ಕೈ ಕತ್ತರಿಸುತ್ತೇನೆ ಎಂದು ಅನರ್ಹ ಶಾಸಕ ಸುಧಾಕರ್ ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿ ವಾರ್ನಿಂಗ್ ನೀಡಿದ್ದಾರೆ.

    ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಗಂಗಸಂದ್ರ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಶಿವಶಂಕರ ರೆಡ್ಡಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ತಂಟೆಗೆ ಬಂದರೆ ಕೈ ಕತ್ತರಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಚಿಕ್ಕಬಳ್ಳಾಪುರದ ಸುಧಾಕರ್ ಅವರು ಮಂಚೇನಹಳ್ಳಿ ತಾಲೂಕು ಮಾಡುವುದಾಗಿ ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ತೊಂಡೆಬಾವಿ ಹೋಬಳಿಯನ್ನ ಮಂಚೇನಹಳ್ಳಿಗೆ ಸೇರಿಸೋಕೆ ಪ್ರಯತ್ನ ಮಾಡಿದ್ದಾರೆ. ಅದಲ್ಲದೆ ಕೆಲ ಗ್ರಾಮಗಳನ್ನ ನಮ್ಮವರೇ ಕುಮ್ಮಕ್ಕು ನೀಡಿ ಮಂಚೇನಹಳ್ಳಿಗೆ ಸೇರಿಸೋಕೆ ಸುಧಾಕರ್ ಜೊತೆ ಕೈ ಜೋಡಿಸಿದ್ದಾರೆ. ಆದರೆ ಇದನ್ನು ನಾನು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

  • ಗಾಂಧೀಜಿಯನ್ನು ಹತ್ಯೆಗೈದವರು ಈಗ ಭಗವದ್ಗೀತೆ ಬೋಧಿಸುತ್ತಿದ್ದಾರೆ – ಶಿವಶಂಕರ್ ರೆಡ್ಡಿ ಕಿಡಿ

    ಗಾಂಧೀಜಿಯನ್ನು ಹತ್ಯೆಗೈದವರು ಈಗ ಭಗವದ್ಗೀತೆ ಬೋಧಿಸುತ್ತಿದ್ದಾರೆ – ಶಿವಶಂಕರ್ ರೆಡ್ಡಿ ಕಿಡಿ

    ಚಿಕ್ಕಬಳ್ಳಾಪುರ: ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದವರು ಭಗವದ್ಗೀತೆಯನ್ನು ಬೋಧಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ ಹೇಳಿದ್ದಾರೆ.

    ನಗರದ ಹೊರವಲಯದ ಹಾರೋಬಂಡೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಕೊಂದಂತಹ ಕೋಮುವಾದಿ ಶಕ್ತಿಗಳು ಗಾಂಧೀಜಿಯವರ 150ನೇ ಜಯಂತಿ ಆಚರಿಸುತ್ತಿವೆ. ಮಹಾತ್ಮ ಗಾಂಧೀಜಿ ಬಗ್ಗೆ ಅವರಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕೇವಲ ತೋರಿಕೆಗಾಗಿ ಗಾಂಧಿ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಗಾಂಧಿ ಕೊಂದ ಹಂತಕನಿಗೆ ವಿಗ್ರಹ ಸ್ಥಾಪಿಸಿ ದೇವಾಲಯ ಕಟ್ಟುವುದು ವಿಪರ್ಯಾಸದ ಸಂಗತಿ. ಬಿಜೆಪಿಯವರಿಂದ ದೇಶ ಪ್ರೇಮ ಕಲಿಯುವ ಅಗತ್ಯವಿಲ್ಲ ಎಂದು ಹರಿಹಾಯ್ದರು.

    ದೇಶದಲ್ಲಿ ಗಾಂಧೀಜಿ ನೆನಪಿಸಿಕೊಳ್ಳದೆ ಏನೂ ಮಾಡಲಾಗುವುದಿಲ್ಲ. ಆದರೆ ಬ್ರಾಂಡಿಂಗ್ ಹಾಗೂ ಪ್ರಚಾರಕ್ಕಾಗಿ ಗಾಂಧಿ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗಾಂಧೀಜಿಯ ತತ್ವಾದರ್ಶಗಳನ್ನು ಗಾಳಿಗೆ ತೂರಿದ್ದಾರೆ. ಈಗ ಗಾಂಧೀಜಿ ಬಗ್ಗೆ ಮಾತನಾಡುತ್ತಿದ್ದಾರೆ. ಗಾಂಧೀಜಿಯವರ ನೇತೃತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವವಾಗಿದೆ. ಅವರ ತತ್ವಗಳನ್ನು ಕೊಂದವರು ಬಿಜೆಪಿಯವರು ನಾವು ಈಗಲೂ ತತ್ವಪಾಲನೆ ಮಾಡುತ್ತಿದ್ದೇವೆ ಎಂದು ಗಾಂಧಿ ತತ್ವದೆಡೆಗೆ ನಮ್ಮ ನಡಿಗೆ ಎಂಬ ಬಿಜೆಪಿ ಪಾದಯಾತ್ರೆ ಕುರಿತು ಶಿವಶಂಕರರೆಡ್ಡಿ ಲೇವಡಿ ಮಾಡಿದರು.

    ವಿಪಕ್ಷ ನಾಯಕರಾಗಲು ಸಿದ್ದರಾಮಯ್ಯನವರೇ ಸಮರ್ಥರು. ಈ ಕುರಿತು ಬಹಳಷ್ಟು ಶಾಸಕರು ವಿಧಾನ ಪರಿಷತ್ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಚ್.ಕೆ.ಪಾಟೀಲ್ ಅವರಿಗೂ ಜವಾಬ್ದಾರಿಯುತ ಸ್ಥಾನಮಾನ ಕೊಡುತ್ತಾರೆ. ವಿಧಾನಸಭೆ ಹೊರಗೆ ಹಾಗೂ ಒಳಗೆ ಸಮರ್ಥವಾಗಿ ನಿಭಾಯಿಸುವ ಸಾಮಥ್ರ್ಯ ಸಿದ್ದರಾಮಯ್ಯನವರಿಗಿದೆ. ಜನರಲ್ಲೂ ಸಹ ಸಿದ್ದರಾಮಯ್ಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಸಿಎಂ ಆಗಿದ್ದಾಗ ಓಳ್ಳೆಯ ಕೆಲಸ ಮಾಡಿದ ಕಾರಣ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ ಎಂದರು.

    ಎಚ್.ಕೆ.ಪಾಟೀಲ್ ಸಮರ್ಥರಲ್ಲ ಎಂಬ ಅರ್ಥ ಬೇಡ. ಪರಮೇಶ್ವರ್ ರವರಿಗೂ ಸಾಮಥ್ರ್ಯ ಇಲ್ಲ ಅಂತ ಅಲ್ಲ. ಸಾಮೂಹಿಕ ನಾಯಕತ್ವದಡಿಯಲ್ಲಿ ಎಲ್ಲರ ಜೊತೆಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು. ಪಕ್ಷಕ್ಕೆ ಎಲ್ಲ ನಾಯಕರೂ ಮುಖ್ಯ ಎಂದು ಶಿವಶಂಕರ್ ರೆಡ್ಡಿ ಅಭಿಪ್ರಾಯಪಟ್ಟರು.

  • ಎಲ್ಲರೂ ರಾಜೀನಾಮೆಗೆ ಸಿದ್ಧ- ಸಚಿವ ಶಿವಶಂಕರ್ ರೆಡ್ಡಿ

    ಎಲ್ಲರೂ ರಾಜೀನಾಮೆಗೆ ಸಿದ್ಧ- ಸಚಿವ ಶಿವಶಂಕರ್ ರೆಡ್ಡಿ

    ಚಿಕ್ಕಬಳ್ಳಾಪುರ: ಪಕ್ಷದಲ್ಲಿ ಯಾರು ಅಸಮಾಧಾನವಾಗಿದ್ದಾರೆ ಅವರಿಗೆ ಇನ್ನೊಂದು ಹಂತದಲ್ಲಿ ಮಂತ್ರಿ ಸ್ಥಾನ ಕೊಡುವ ನಿರ್ಧಾರವನ್ನು ಹೈಕಮಾಂಡ್ ಮಾಡಿದೆ. ನಾವೆಲ್ಲರೂ ರಾಜೀನಾಮೆ ನೀಡಲು ಒಪ್ಪಿಗೆ ನೀಡಿದ್ದು, ಸಿದ್ಧರಾಗಿದ್ದೇವೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ರಾಜೀನಾಮೆ ಕೊಡುವ ಮುನ್ಸೂಚನೆ ನೀಡಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಿದ್ದಾರೆ. ಎಲ್ಲರಿಗೂ ಅವಕಾಶ ಮಾಡಿಕೊಡಬೇಕು ಎಂದು ಈಗಾಗಲೇ ತೀರ್ಮಾನವನ್ನೂ ಮಾಡಲಾಗಿದ್ದು, ಅವಧಿ ನಿಗದಿಪಡಿಸಲಾಗಿದೆ. ಅವಧಿ ಮುಗಿದ ಬಳಿಕ ಪರ್ಯಾಯವಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಪಕ್ಷದ ಮಟ್ಟದಲ್ಲಿ ತೀರ್ಮಾನ ಆಗಿದೆ ಎಂದರು.

    ಮೈತ್ರಿ ಪಾಲನೆಯಲ್ಲಿ ಕೆಲವೊಂದು ತೊಂದರೆಗಳು ಆಗಿವೆ. ಆದರೆ ಬಿಜೆಪಿಯೆಂಬ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ದೃಷ್ಟಿಯಿಂದ ಇಂದು ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಕೆಲವು ತೊಂದರೆಗಳಾಗಿವೆ. ಅವುಗಳನ್ನು ಸಹಿಸಿಕೊಂಡು ಮುಂದೆ ನಡೆಯಬೇಕಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಶಾಸಕ ಬಿಸಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪಾಟೀಲ್ ಸಚಿವರಾಗಬೇಕಿತ್ತು. ಆ ಭಾಗದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಹತಾಶ ಮನೋಭಾವದಿಂದ ಹೇಳಿದ್ದಾರೆ ಅಂದ್ರು.

  • ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ: ಶಿವಶಂಕರ ರೆಡ್ಡಿ

    ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ: ಶಿವಶಂಕರ ರೆಡ್ಡಿ

    ಚಿಕ್ಕಬಳ್ಳಾಪುರ: ಭಾರತ ಜಾತ್ಯಾತೀತವಾದ ದೇಶವಾಗಿದ್ದು, ಎಲ್ಲಾ ಜನಾಂಗದವರು, ಧರ್ಮೀಯರು ಸಮಾನತೆಯಿಂದ ಬದುಕುವಂತಹ ಸಂವಿಧಾನವನ್ನ ನಾವು ಒಪ್ಪಿಕೊಂಡಿದ್ದೇವೆ. ಆದರೂ ಕೂಡ ದೇಶದಲ್ಲಿ ಅಲ್ಪಸಂಖ್ಯಾತರು ಭಯದಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಶಾದಿ ಮಹಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಜಾತಿ, ಧರ್ಮದ ವಿರುದ್ಧ ಕೆಲ ಮತೀಯ ಶಕ್ತಿಗಳು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿವೆ. ಹೀಗಾಗಿ ಜಾತ್ಯಾತೀತ ತತ್ವಗಳಿಗೆ ತಿಲಾಂಜಲಿ ಇಡುವಂತಹ ಪ್ರಯತ್ನಗಳು ನಡೆಯುತ್ತಿವೆ. ಇದರಿಂದಾಗಿ ಈ ದೇಶದಲ್ಲಿ ಅಲ್ಪ ಸಂಖ್ಯಾತರು ಭಯದಿಂದ ಬದುಕುವಂತಾಗಿದೆ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡರು.

    ಈ ಮತೀಯ ಶಕ್ತಿಗಳಿಂದ ದೇಶವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ತಮ್ಮದು ಜಾತ್ಯಾತೀತ ದೇಶವಾಗಿರುವುದರಿಂದ ಇಲ್ಲಿ ಎಲ್ಲಾ ವರ್ಗದ ಜನರು ಇದ್ದಾರೆ. ಆದರಿಂದ ನಾವೆಲ್ಲರೂ ಸೇರಿ ಜಾತ್ಯಾತೀತ ಸಂವಿಧಾನವನ್ನು ಉಳಿಸುವಂತಹ ಕೆಲಸ ಮಾಡಬೇಕಿದೆ ಎಂದು ಅಲ್ಪಸಂಖ್ಯಾತರಲ್ಲಿ ಶಿವಶಂಕರ್ ರೆಡ್ಡಿ ಮನವಿ ಮಾಡಿಕೊಂಡರು.

    ಇದೇ ವೇಳೆ ಇಂದು ಬೆಂಗಳೂರಿನಲ್ಲಿ ಏರ್ ಶೋ ತಾಲೀಮು ವೇಳೆ ಯುದ್ಧವಿಮಾನಗಳ ಅಪಘಾತ ದುರಾದೃಷ್ಟಕರ ಎಂದು ಬೇಸರ ವ್ಯಕ್ತ ಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಕ್ಕಳ ದಸರಾ ಕಾರ್ಯಕ್ರಮದ ಉದ್ಘಾಟನಾ ವೇದಿಕೆಯಿಂದಲೇ ಹೊರನಡೆದ ಸಚಿವರು!

    ಮಕ್ಕಳ ದಸರಾ ಕಾರ್ಯಕ್ರಮದ ಉದ್ಘಾಟನಾ ವೇದಿಕೆಯಿಂದಲೇ ಹೊರನಡೆದ ಸಚಿವರು!

    ಮೈಸೂರು: ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಕೈ ಮಂತ್ರಿಗಳ ಹೆಸರನ್ನು ಪ್ರಸ್ತಾಪ ಮಾಡದಕ್ಕೆ ಸಮ್ಮಿಶ್ರ ಸರ್ಕಾರದ ಮೂವರು ಮಂತ್ರಿಗಳು ವೇದಿಕೆಯಿಂದಲೇ ಹೊರಡನಡೆದ ಪ್ರಸಂಗ ಇಂದು ನಡೆಯಿತು.

    ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಸಚಿವರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ ಹಾಗೂ ಶಿವಶಂಕರ್ ರೆಡ್ಡಿ ಭಾಗವಹಿಸಿದ್ದರು. ಈ ವೇಳೆ ಅಧಿಕಾರಿಗಳು ಸಚಿವ ಶಿವಶಂಕರ್ ಅವರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಇದರಿಂದ ಸಿಡಿಮಿಡಿಕೊಂಡ ಸಾ.ರಾ.ಮಹೇಶ್ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಅಷ್ಟೇ ಅಲ್ಲದೇ ಉದ್ಘಾಟನೆ ನೆರವೇರುತ್ತಿದ್ದಂತೆ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ.

    ಉದ್ಘಾಟನೆ ನೆರವೇರಿಸಿ, ನೀವೇ ಈ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಸಾರಾ ಮಹೇಶ್, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ತಕ್ಷಣವೇ ಕಾರ್ಯಕ್ರಮದಿಂದ ಮೂವರು ಸಚಿವರು ಹೊರ ನಡೆದು. ಸಚಿವರ ದಿಢೀರ್ ನಿರ್ಧಾರದಿಂದ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಭಾರೀ ಗೊಂದಲ ಉಂಟಾಯಿತು. ಕ್ಷಣಾರ್ಧದಲ್ಲಿಯೇ ಉದ್ಘಾಟನೆ ಕಾರ್ಯಕ್ರಮ ಮುಕ್ತಾಯಗೊಂಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಬೆಂಬಲಿಸಿ, ವಾಪಸ್ ಪಡೆದ ಶ್ರೀರಾಮುಲು

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣ ಬೆಂಬಲಿಸಿ, ವಾಪಸ್ ಪಡೆದ ಶ್ರೀರಾಮುಲು

    ಬೆಂಗಳೂರು: ಜೆಡಿಎಸ್ ಸೋತಿರುವ ಕ್ಷೇತ್ರಗಳ ಮೇಲೆ ಸೇಡನ್ನು ಬಜೆಟ್ ಮೂಲಕ ಸಿಎಂ ಎಚ್.ಡಿಕುಮಾರಸ್ವಾಮಿ ಅವರು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗಾಗಿ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟವನ್ನು ಬೆಂಬಲಿಸುತ್ತೇನೆ ಎಂದು ಬಿಜೆಪಿಯ ಶಾಸಕ ಬಿ.ಶ್ರೀರಾಮುಲು ಅವರು ಹೇಳಿಕೆ ನೀಡಿದ್ದಾರೆ.

    ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಶಾಸಕರು, ಕುಮಾರಸ್ವಾಮಿ ಅವರು ಬಿಜೆಪಿ ಗೆಲುವು ಸಾಧಿಸಿರುವ ವಿಧಾನಸಭೆ ಕ್ಷೇತ್ರಗಳಿಗೆ ಸಮರ್ಪಕ ಯೋಜನೆ ಮತ್ತು ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ. ಹೀಗಾಗಿಯೇ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸುತ್ತಿರುವೆ ಎಂದರು.

    ಬಜೆಟ್ ಕೇವಲ ಅಣ್ಣ-ತಮ್ಮಂದಿರು ಪ್ರತಿನಿಧಿಸುವ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಅನುಕೂಲ ಆಗುವಾಗುವಂತಿದೆ ಎಂದು ಶ್ರೀರಾಮುಲು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರು ರಾಮುಲು ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ತಾರತಮ್ಯವಿದ್ದರೆ ಅದನ್ನು ಸರಿಪಡಿಸಬೇಕು. ಆದರೆ ರಾಜ್ಯ ಒಡೆಯುವ ಮಾತುಗಳನ್ನು ಆಡಬೇಡಿ. ಸಮಗ್ರ ಕರ್ನಾಟಕದ ಬಗ್ಗೆ ಮಾತ್ರ ಮಾತನಾಡಿ ಎಂದು ಗುಡುಗಿದರು.

    ರಾಜ್ಯ ವಿಭಜನೆಯ ಸಂದೇಶ ಇಲ್ಲಿಂದ ಹೊರ ಹೋಗುವುದು ಬೇಡ. ನಾವೆಲ್ಲ ಒಂದು ಎನ್ನುವ ಸಂದೇಶವಿರಲಿ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು. ನಂತರ ಮಧ್ಯಪ್ರವೇಶ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಮಗೂ ಸಮಗ್ರ ಕರ್ನಾಟಕ ಬೇಕು. ಆದರೆ ಉತ್ತರ ಕರ್ನಾಟಕದ ಕುರಿತಾಗಿ ಈ ಭಾಗದ ಜನ ನಾಯಕರ ಧೋರಣೆ ಬದಲಾಗಬೇಕು. ನಮ್ಮ ಭಾಗದ ಜನರು ಮಹಾರಾಷ್ಟ್ರಕ್ಕೆ ಗುಳೆ ಹೋಗಲಿ ಎಂಬ ಭಾವನೆ ಹೋಗಬೇಕು ಎಂದು ಹೇಳಿದರು.

    ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ನಾವೆಲ್ಲ ಒಂದೇ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಶ್ರೀರಾಮುಲು ಅವರು ಹಾಗೇ ಮಾತನಾಡಿದ್ದಾರೆ ಎಂದರು. ನಂತರ ರಾಜ್ಯ ವಿಭಜನೆಯ ಮಾತನ್ನು ಕಡತದಿಂದ ತೆಗೆಯುವಂತೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಮನವಿ ಮಾಡಿಕೊಂಡರು. ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಪರಿಸ್ಥಿತಿಯನ್ನು ಸುಧಾರಿಸುತ್ತಿದ್ದಂತೆ, ಶ್ರೀರಾಮುಲು ತಮಗೂ ರಾಜ್ಯ ವಿಭಜನೆ ಬೇಕಿಲ್ಲ ಎಂದು ಒಪ್ಪಿಕೊಂಡರು.

  • ಅಕ್ಕಿ ಕಡಿತ ಮಾಡಿದ್ಯಾಕೆ, ನನಗೆ ಈಗ 2 ಕೆ.ಜಿ. ಅಕ್ಕಿ ಬೇಕು: ಕಾರ್ಯಕ್ರಮದಲ್ಲೇ ಸಚಿವರಿಗೆ ವ್ಯಕ್ತಿಯಿಂದ ಬೇಡಿಕೆ

    ಅಕ್ಕಿ ಕಡಿತ ಮಾಡಿದ್ಯಾಕೆ, ನನಗೆ ಈಗ 2 ಕೆ.ಜಿ. ಅಕ್ಕಿ ಬೇಕು: ಕಾರ್ಯಕ್ರಮದಲ್ಲೇ ಸಚಿವರಿಗೆ ವ್ಯಕ್ತಿಯಿಂದ ಬೇಡಿಕೆ

    ಚಿಕ್ಕಬಳ್ಳಾಪುರ: ಅನ್ನಭಾಗ್ಯ ಪಡಿತರದಲ್ಲಿ ಎರಡು 2 ಕೆ.ಜಿ. ಅಕ್ಕಿಯನ್ನು ಕಡಿತ ಮಾಡಿದ್ದು ಯಾಕೆ? ನನಗೆ 2 ಕೆಜಿ ಅಕ್ಕಿ ಬೇಕು ಕೊಡಿ ಎಂದು ಖಾಲಿ ಚೀಲ ಹಿಡಿದು ಸರ್ಕಾರಿ ಕಾರ್ಯಕ್ರಮಕ್ಕೆ ಬಂದ ವ್ಯಕ್ತಿಯೊಬ್ಬರು ಕೃಷಿ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ.

    ಗೌರಿಬಿದನೂರು ತಾಲೂಕಿನ ಕಾಚಮಾಚೇನಹಳ್ಳಿ ಗ್ರಾಮದ ಬೊಮ್ಮಲಿಂಗೇಶ್ವರ ದೇವಾಲಯದ ಆವರಣದಲ್ಲಿ 2018-19 ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಉದ್ಘಾಟಿಸಿದರು. ಈ ವೇಳೆ ಕಾರ್ಯಕ್ರಮದ ಬಳಿ ಬಂದ ಸ್ಥಳೀಯ ವ್ಯಕ್ತಿಯೊರ್ವ ಏಕೆ ಎರಡು ಕೆ.ಜಿ. ಅಕ್ಕಿ ಕಡಿತ ಮಾಡಿದ್ದೀರಿ ಹೇಳಿ ಅಂತ ಪ್ರಶ್ನೆ ಮಾಡಿದ್ರು. ಅಷ್ಟೇ ಅಲ್ಲದೇ ನನಗೆ 2 ಕೆ.ಜಿ ಅಕ್ಕಿ ಕೊಡಲೇ ಬೇಕು ಅಂತಾ ಖಾಲಿ ಚೀಲ ತಂದು ಪ್ರದರ್ಶನ ಮಾಡಿದರು.

    ಕಾಯಕ್ರಮದ ಧ್ವನಿವರ್ಧಕದ ಧ್ವನಿಯಿಂದ ವ್ಯಕ್ತಿಯ ಮಾತು ಸಚಿವರ ಕಿವಿಗೆ ಬೀಳಲಿಲ್ಲ. ಅಷ್ಟರಲ್ಲಿಯೇ ಅಲ್ಲೇ ಇದ್ದ ಸ್ಥಳೀಯರು ವ್ಯಕ್ತಿಯನ್ನು ಸಮಾಧಾನ ಪಡಿಸಲು ಯತ್ನಿಸಿದರು. ಕೊನೆಗೆ ಯಾರ ಮಾತನ್ನು ಕೇಳದ ಸ್ಥಿತಿಯಲ್ಲಿದ್ದ ಅವರನ್ನು ಪೊಲೀಸರು ಕಾರ್ಯಕ್ರಮದಿಂದ ಹೊರಗೆ ಕರೆದುಕೊಂಡರು.

    https://youtu.be/IdCjm6_9ABA

  • ಇದು ಫೈನಲ್ ಬಜೆಟಲ್ಲ, ಸಪ್ಲಿಮೆಂಟರಿಯಲ್ಲಿ ಉ.ಕ.ಕ್ಕೆ ನ್ಯಾಯ ಒದಗಿಸೋಣ- ಸಚಿವ ಶಿವಶಂಕರ್ ರೆಡ್ಡಿ

    ಇದು ಫೈನಲ್ ಬಜೆಟಲ್ಲ, ಸಪ್ಲಿಮೆಂಟರಿಯಲ್ಲಿ ಉ.ಕ.ಕ್ಕೆ ನ್ಯಾಯ ಒದಗಿಸೋಣ- ಸಚಿವ ಶಿವಶಂಕರ್ ರೆಡ್ಡಿ

    ಬೆಳಗಾವಿ: ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ಹಾಗೆನಾದ್ರೂ ಆಗಿದ್ದರೆ ಎಲ್ಲರೂ ಸೇರಿಕೊಂಡು ಚಿಂತನೆ ನಡೆಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡೋಣ ಅಂತ ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಬಜೆಟ್ ಬಗ್ಗೆ ಮಾತನಾಡಿದ ಅವರು, ಇದು ಪೈನಲ್ ಬಜೆಟ್ ಅಲ್ಲಾ ಮತ್ತೆ ಸಪ್ಲಿಮೆಂಟರಿ ಬಜೆಟ್ ನಲ್ಲಿ ನ್ಯಾಯ ಒದಗಿಸೋಣ ಅಂದ್ರು. ಇದೇ ವೇಳೆ ಬಜೆಟ್ ಕುರಿತು ಮಾಜಿ ಸಚಿವ ಎಚ್.ಕೆ ಪಾಟೀಲ್ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, ಎಚ್.ಕೆ ಪಾಟೀಲ್ ಅವರು ಯಾವ ಆಧಾರದ ಮೇಲೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದಿದ್ದಾರೆ ಗೊತ್ತಿಲ್ಲ. ಅವರು ದೊಡ್ಡವರು ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಅಂದ್ರು.

    ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ವಿರೋಧ ಪಕ್ಷದವರು ದೊಡ್ಡದಾಗಿ ಹೇಳಿ ಅದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. 34 ಸಾವಿರ ಕೋಟಿ ರೂ. ರೈತರ ಸಾಲಾ ಮನ್ನಾ ಮಾಡಿದ್ದೇವೆ. ಅದು ಹಾಸನ ಮೈಸೂರು ರೈತರಿಗಷ್ಟೇ ಇಲ್ಲ. ಇಡೀ ರಾಜ್ಯದ ರೈತರಿಗೆ ಅನುಕೂಲವಾಗಿದೆ. ಉತ್ತರ ಕರ್ನಾಟಕ ವಿಭಜನೆ ಮಾಡಲು ಬಿಡುವುದಿಲ್ಲ. ನಮ್ಮದು ಅಖಂಡ ಕರ್ನಾಟಕ. ಯಾರೋ ಒಬ್ಬರು ಆ ರೀತಿ ಕೂಗೆತ್ತಿದರು ಜನರು ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು ಅಂತ ಹೇಳಿದ್ರು.

    ಬಜೆಟ್ ನಿಂದ ಕೆಲವರಿಗೆ ಅಸಮಾಧಾನ ಇರುತ್ತೆ. ಅವರ ಹೇಳಿಕೆಗಳಿಂದ ಸರ್ಕಾರಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ಬಜೆಟ್ ನಿಂದ ನಮ್ಮ ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸುಭದ್ರವಾಗಿ ಐದು ವರ್ಷ ನಮ್ಮ ಸರ್ಕಾರ ನಡೆಯುತ್ತೆ. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಹೀಗಾಗಿ ಆ ಭಾಗಕ್ಕೆ ಕಡಿಮೆ ಅನುದಾನ ಸಿಕ್ಕಿರಬಹುದು ಅಂತ ತಿಳಿಸಿದ್ರು.