Tag: ಶಿವಶಂಕರರೆಡ್ಡಿ

  • ನನ್ನ ಸುದ್ದಿಗೆ ಬಂದ್ರೆ ಕೈ-ಕಾಲು ಮುರಿತೀನಿ, ತಲೆ ತೆಗೆಯೋಕೆ ರೆಡಿ: ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಚ್ಚರಿಕೆ

    ನನ್ನ ಸುದ್ದಿಗೆ ಬಂದ್ರೆ ಕೈ-ಕಾಲು ಮುರಿತೀನಿ, ತಲೆ ತೆಗೆಯೋಕೆ ರೆಡಿ: ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಚ್ಚರಿಕೆ

    ಚಿಕ್ಕಬಳ್ಳಾಪುರ: ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ ನನ್ನ ವಿಚಾರಕ್ಕೆ ಬಂದ್ರೆ ನಾನು ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    ಇತ್ತೀಚೆಗೆ ಗೌರಿಬಿದನೂರು ಕ್ಷೇತ್ರದ ಹಾಲಿ ಶಾಸಕ ಶಿವಶಂಕರರೆಡ್ಡಿ ಜೊತೆ ರವಿನಾರಾಯಣರೆಡ್ಡಿ ಹೊಂದಾಣಿಕೆ ರಾಜಕಾರಣ ಮಾಡ್ತಾರೆ ಎಂದು ಕೆಎಚ್‍ಪಿ ಬಣದ ಮುಖಂಡರು ಆರೋಪಿಸಿದ್ದರು. ಈ ಹಿನ್ನೆಲೆ ಇಂದು ರವಿನಾರಾಯಣರೆಡ್ಡಿ ಗೌರಿಬಿದನೂರು ನಗರದ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ, ನನ್ನ ಸುದ್ದಿಗೆ ಬಂದ್ರೆ ಕೈ ಕಾಲು ಮುರಿತೀನಿ. ತಲೆ ತೆಗೆಯೋಕೂ ರೆಡಿ. ನಾನು ಜೈಲಿಗೆ ಹೋಗೋಕು ಸಿದ್ಧ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಯಾರನ್ನೂ ನಂಬಲ್ಲ, ಭದ್ರತಾ ಅಧಿಕಾರಿಯೇ ನನ್ನನ್ನು ಶೂಟ್ ಮಾಡ್ಬೋದು: ಅಬ್ದುಲ್ಲಾ ಆಝಂ ಖಾನ್

    ನಾನು ಮೊದಲಿನ ರವಿಣ್ಣನೇ. ನಾನು ಏನ್ ಹೇಳ್ತಿನೋ, ಅದು ನಾನು ಮಾಡೇ ಮಾಡ್ತೀನಿ ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಶಿವಶಂಕರರೆಡ್ಡಿ ನನ್ನ ಶತ್ರು. ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳೋ ಅವಶ್ಯಕತೆ ನನಗಿಲ್ಲ. ರಾಜಕೀಯ ಇಲ್ಲ ಅಂದ್ರೂ ಪರವಾಗಿಲ್ಲ. ಅವನ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಶಿವಶಂಕರರೆಡ್ಡಿ ಜೊತೆ ಹೊಂದಾಣಿಕೆ ಅಂತ ಹೇಳಿ ನನ್ನ ವ್ಯಕ್ತಿತ್ವ ವಧೆ ಮಾಡಬೇಡಿ. ಒಂದು ವೇಳೆ ಇದೇ ಮುಂದುವರೆದರೆ ನಾನು ಕೈ ಕಾಲು ತಲೆ ತೆಗೆಯೋಕೂ ರೆಡಿ ಎಂದಿದ್ದಾರೆ. ಶಿವಶಂಕರರೆಡ್ಡಿ ಹಾಗೂ ರವಿನಾರಾಯಣರೆಡ್ಡಿ ಸಂಬಂಧಿಗಳಾದ್ರೂ ಮೊದಲಿಂದಲೂ ರಾಜಕೀಯ ವಿರೋಧಿಗಳಾಗಿದ್ದಾರೆ. ಇದನ್ನೂ ಓದಿ: ಅಣ್ಣಂದಿರ ಕೈ ಮೇಲೆ ಪಾದವಿಟ್ಟು ಮದುವೆ ಮಂಟಪಕ್ಕೆ ನಡೆದುಕೊಂಡು ಬಂದ ವಧು!

  • ತಿಹಾರ್ ಜೈಲಿಗೆ ಹೋಗೋದು ಸುಧಾಕರ್, ನಾನಲ್ಲ: ಶಿವಶಂಕರರೆಡ್ಡಿ

    ತಿಹಾರ್ ಜೈಲಿಗೆ ಹೋಗೋದು ಸುಧಾಕರ್, ನಾನಲ್ಲ: ಶಿವಶಂಕರರೆಡ್ಡಿ

    ಚಿಕ್ಕಬಳ್ಳಾಪುರ: ಅಕ್ರಮ ಆಸ್ತಿ ಸಂಪಾದನೆ, ಭ್ರಷ್ಟಾಚಾರ ನಡೆಸಿರುವ ಅನರ್ಹ ಶಾಸಕ ಸುಧಾಕರ್ ಇಂದಲ್ಲ ನಾಳೆ ತಿಹಾರ್ ಜೈಲು ಸೇರುತ್ತಾರೆ ಎಂದು ಮಾಜಿ ಕೃಷಿ ಸಚಿವ ಶಿವಶಂಕರರೆಡ್ಡಿ ವಾಗ್ದಾಳಿ ನಡೆಸಿದರು.

    ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ಉಪಚುನಾವಣಾ ಪ್ರಚಾರ ನಡೆಸಿದ ಶಿವಶಂಕರರೆಡ್ಡಿ, ನಾನು ಕೃಷಿ ಮಂತ್ರಿಯಾಗಿದ್ದಾಗ ಕೃಷಿ ಇಲಾಖೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಅವ್ಯವಾಹಾರ ನಡೆದಿದ್ದರೆ ತನಿಖೆ ನಡೆಸಿ ಸಾಬೀತು ಮಾಡಲಿ ಎಂದು ಸುಧಾಕರ್ ಆರೋಪಕ್ಕೆ ತಿರುಗೇಟು ನೀಡಿದರು. ಜಲ್ಲಿ ಕ್ರಷರ್ ಮಾಲೀಕರಿಂದ ಮಾಮೂಲಿ ವಸೂಲಿ ಮಾಡಿ ಅನರ್ಹ ಶಾಸಕ ಸುಧಾಕರ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಹೊರತು ನಾನಲ್ಲ ಎಂದರು.

    ಸುಧಾಕರ್ ನಡೆಸಿರುವ ಅಕ್ರಮಗಳ ಬಗ್ಗೆ ಬಹಿರಂಗವಾಗಿ ನಾನು ಚರ್ಚೆಗೆ ಸಿದ್ದ. ಸುಧಾಕರ್ ಸ್ವಗ್ರಾಮ ಪೇರೇಸಂದ್ರದಲ್ಲಿ ಈ ಬಗ್ಗೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ನಾನು ವೇದಿಕೆ ರೆಡಿ ಮಾಡಿಕೊಳ್ಳುತ್ತೇನೆ. ಅವರು ವೇದಿಕೆ ರೆಡಿ ಮಾಡಿಕೊಂಡು ಬಹಿರಂಗ ಚರ್ಚೆಗೆ ಬರಲಿ ಎಂದು ಸುಧಾಕರ್ ಗೆ ಸವಾಲು ಹಾಕಿದರು. ಅಲ್ಲದೆ ಮನೆ ಮಗನಂತೆ ನಂಬಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಸುಧಾಕರ್ ಮೋಸ ಮಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಸಿದ್ದರಾಮಯ್ಯಗೆ ಪಂಗನಾಮ ಹಾಕಿದರು. ಈಗ ಬಂದು ಜನರ ಮಧ್ಯೆ ನಾಟಕ ಮಾಡುತ್ತಿದ್ದಾರೆ. ಸುಧಾಕರ್ ಗೆ ಎರಡು ನಾಲಿಗೆ ಇದ್ದು ಅಲ್ಲೊಂದು ಇಲ್ಲೊಂದು ಮಾತನಾಡ್ತಾರೆ ಎಂದರು.

    17 ಮಂದಿ ಅನರ್ಹ ಶಾಸಕರು ಕೆಳಗೂ ಇಲ್ಲ ಮೇಲೂ ಇಲ್ಲ ಎನ್ನುವ ಹಾಗೆ ಅಂತರ್ ಪಿಶಾಚಿಗಳಾಗಿದ್ದಾರೆ. ಅನರ್ಹ ಶಾಸಕ ಸುಧಾಕರ್ ರಾಜಕಾರಣಿ ಅಲ್ಲ. ಉದ್ಯಮಿಯಾಗಿ ಜನರ ವೋಟ್ ತೆಗೆದುಕೊಂಡು ದುಡ್ಡು ಮಾಡುವುದಕ್ಕೆ ಬಂದಿದ್ದಾರೆ. ಅಕ್ರಮವಾಗಿ ದುಡ್ಡು ಹೊಡೆದು ಕುಕ್ಕರ್, ಮಿಕ್ಸಿ, ಸೀರೆ ಕೊಟ್ಟು ನಿಮಗೆ ಟೋಪಿ ಹಾಕುವುದಕ್ಕೆ ಬರುತ್ತಿದ್ದಾರೆ. ಟೋಪಿ ಹಾಕಿಸಿಕೊಳ್ಳಬೇಡಿ ಯಾಮಾರಬೇಡಿ. ಇಂತಹ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ ಸುಧಾಕರ್ ಗೆ ಬುದ್ದಿ ಕಲಿಸಿ ಎಂದು ವಾಗ್ದಾಳಿ ನಡೆಸಿದರು.

    ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರ ಇರುವುದಿಲ್ಲ. ಮೂರೇ ತಿಂಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ದಯನೀಯ ಸ್ಥಿತಿ ಬಂದಿದ್ದು, ಮುಂದೆ ಜನಾಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಭವಿಷ್ಯ ನುಡಿದರು. ಅಲ್ಲದೆ ನೆರೆ ಪರಿಹಾರ ಕೊಡದ ಸರ್ಕಾರದ ನಡೆ ರಾಜ್ಯದ ಜನರಿಗೆ ಬೇಸರ ತಂದಿದೆ. ನೆರೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಇದುವರೆಗೂ ಬಿಡಿಗಾಸು ಹಣ ಕೊಟ್ಟಿಲ್ಲ. ಜನರಿಗೆ ಹೇಗೆ ಮುಖ ತೋರಿಸೋದು ಎಂದು ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸ್ವತಃ ಬಿಜೆಪಿ ಮಂತ್ರಿಗಳೆ ಮಾತನಾಡಿಕೊಂಡಿದ್ದಾರೆ. ಹೀಗಾಗಿ ನೆರೆ ಸಂತ್ರಸ್ತರಿಗೆ ಒಂದು ರೂ. ಪರಿಹಾರ ಕೊಡುವುದಕ್ಕು ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

  • ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆಹಿಡುಕ: ಶಿವಶಂಕರರೆಡ್ಡಿ ವಾಗ್ದಾಳಿ

    ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆಹಿಡುಕ: ಶಿವಶಂಕರರೆಡ್ಡಿ ವಾಗ್ದಾಳಿ

    ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ. ಕೆ. ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆ ಹಿಡುಕ ಎಂದು ಗೌರಿಬಿದನೂರು ಶಾಸಕ ಮಾಜಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

    ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಶಿವಶಂಕರರೆಡ್ಡಿ, ಅನರ್ಹ ಶಾಸಕ ಸುಧಾಕರ್ ವಿರುದ್ಧ ಹರಿಹಾಯ್ದರು. ರಾಜಕೀಯ ಕ್ಷೇತ್ರದಲ್ಲಿ ಯಾರನ್ನೇ ಕೇಳಿ ಸುಧಾಕರ್ ಬಗ್ಗೆ ಬ್ರೋಕರ್ ಎಂದು ಕರೆಯುತ್ತಾರೆ. ಸುಧಾಕರ್ ಓರ್ವ ಬ್ರೋಕರ್, ಹೈಟೆಕ್ ತಲೆಹಿಡುಕ. ಈಗಲೂ ಅದೇ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬಳಿಕ ಮಾತನಾಡಿದ ಅವರು, 10 ವರ್ಷಗಳ ಹಿಂದೆ ರಾಜಕಾರಣಕ್ಕೆ ಬಂದ ಸುಧಾಕರ್ ಹಣ ಲೂಟಿ ಹೊಡೆಯುತ್ತಿದ್ದಾರೆ. ಪೇರೇಸಂದ್ರ ಸ್ವಗ್ರಾಮದಲ್ಲಿ ಸುಧಾಕರ್ ಕಟ್ಟಿರುವ ಶಾಲೆ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಮಾಡಿರುವ ಬೇನಾಮಿ ಆಸ್ತಿಯೇ ಇದಕ್ಕೆ ಸಾಕ್ಷಿ. ಬೆಂಗಳೂರಿನ ಸದಾಶಿವನಗರದಲ್ಲಿ ಸ್ವತಃ ಸಿದ್ದರಾಮಯ್ಯನವರಿಗೆ ಮನೆ ಕಟ್ಟಲು ಆಗಲಿಲ್ಲ. ಆದರೆ ಸುಧಾಕರ್ 50 ಕೋಟಿ ರೂ.ಯಲ್ಲಿ ಮನೆ ಕಟ್ಟಿದ್ದಾರೆ. ಸುಧಾಕರ್ ಏನು ಬೇಸಾಯ ಮಾಡಿದ್ರಾ, ಇಲ್ಲ ಅವರಪ್ಪ ಉಳುಮೆ ಮಾಡ್ತಿದ್ರಾ ಎಂದು ಪ್ರಶ್ನಿಸಿದ್ದಾರೆ.

    ಕ್ಷೇತ್ರದಲ್ಲಿನ ಜಲ್ಲಿ ಕ್ರಷರ್ ಮಾಲೀಕರಿಂದ ತಲಾ ಒಂದು ಕ್ರಷರ್ ಗೆ ಪ್ರತಿ ತಿಂಗಳು 2 ಲಕ್ಷ ರೂ. ವಸೂಲಿ ಮಾಡುತ್ತಿದ್ದಾರೆ. ತಿಂಗಳಿಗೆ 2 ಕೋಟಿ ಅಷ್ಟು ಹಣ ವಸೂಲಿ ಮಾಡುತ್ತಿದ್ದು, ಭೂಪರಿವರ್ತನೆಗೆ ಎಕರೆಗೆ 8 ಲಕ್ಷ ರೂ. ವರೆಗೂ ಹಣ ಪಡೆದುಕೊಳ್ಳುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಅಲ್ಲದೆ ಈಗಿನ ರಾಜಕಾರಣದಲ್ಲಿ ಪಕ್ಷಗಳನ್ನು ಬದಲಾಯಿಸೋದು ಸಾಮಾನ್ಯ. ಆದರೆ ಪಕ್ಷಗಳಿಗೆ ನಿಷ್ಠೆಯಿಂದ ಇರಬೇಕಾಗುತ್ತೆ. ಪಕ್ಷ ಸಂಕಷ್ಟದಲ್ಲಿ ಇದ್ದಾಗ ಪಕ್ಷಕ್ಕೆ ಕೈ ಕೊಟ್ಟು ದ್ರೋಹ ಬಗೆದ ಸುಧಾಕರ್ ಗೆ ಉಪಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟಾಂಗ್ ನೀಡಿದರು.

  • ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸಂಚು ರೂಪಿಸಿದೆ: ಶಿವಶಂಕರ ರೆಡ್ಡಿ

    ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸಂಚು ರೂಪಿಸಿದೆ: ಶಿವಶಂಕರ ರೆಡ್ಡಿ

    ಚಿಕ್ಕಬಳ್ಳಾಪುರ: ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಮಾಜಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಟೀಕೆ ಮಾಡಿದ್ದಾರೆ. ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಕಿಡಿಕಾರಿದ್ದಾರೆ.

    ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ನೀತಿ ತಾಳುತ್ತಿದೆ. ದೇಶದಲ್ಲಿ ಯುದ್ಧದ ಭೀತಿ ಸೃಷ್ಟಿ ಮಾಡಿ, ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ಯತ್ನ ನಡೆಸಿದೆ. ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಸಲುವಾಗಿ ಈ ಸಂಚು ರೂಪಿಸಿದೆ. ಕೇಂದ್ರ ಸರ್ಕಾರದ ಈ ನಡೆ ಬಹಳ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

    ಕೇಂದ್ರದ ನಿರ್ಧಾರದಿಂದ ಪ್ರತ್ಯೇಕವಾದಿಗಳ ಕೂಗು ಮತ್ತಷ್ಟು ಜೋರಾಗಲಿದೆ. ಉಗ್ರವಾದಿ ಸಂಘಟನೆಗಳ ಕೃತ್ಯಗಳು ಜಾಸ್ತಿ ಆಗಬಹುದು. ವಿಶೇಷ ಸ್ಥಾನಮಾನ ಇದ್ದ ಕಾರಣ ದೇಶದಲ್ಲಿ ರಕ್ಷಣೆ ಇತ್ತು. ಈಗ ವಿಶೇಷ ಸ್ಥಾನಮಾನ ತೆಗೆದಿರುವುದರಿಂದ ಉಳಿದವರು ಕೂಡ ಉಗ್ರರ ಜೊತೆ ಸೇರಿ ಪಾಕಿಸ್ತಾನಕ್ಕೆ ನಾವು ಸೇರಬೇಕೆಂಬ ಕೂಗು ಜೋರಾಗಲಿದೆ. ಇದು ದೇಶ ವಿರೋಧಿ ನೀತಿ ಎಂದು ಶಿವಶಂಕರ ರೆಡ್ಡಿ ಬಣ್ಣಿಸಿದರು.

    ಕೇಂದ್ರ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಜಮ್ಮು-ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಡಲಿದೆ. ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡಿದ್ದರೂ ಕೇಂದ್ರದ ಅಧೀನದಲ್ಲಿ ಬರಲಿದೆ. ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಲಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದುಗೊಳಿಸಲಾಗಿದೆ.

    ರಾಜ್ಯಸಭೆಯಲ್ಲಿ ಕೇಂದ್ರಗೃಹ ಸಚಿವ ಅಮಿತ್ ಶಾ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಲಾಗುವುದು ಎಂದು ಹೇಳುತ್ತಿದ್ದಂತೆಯೇ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿ ಗಲಾಟೆ ಆರಂಭಿಸಿದರು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದುಗೊಳಿಸಿದ ಆದೇಶಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.

  • ಕಲ್ಯಾಣಿ ಸ್ವಚ್ಛಗೊಳಿಸಲು ಕೈಜೋಡಿಸಿದ ಕೃಷಿ ಸಚಿವ – 40ಕ್ಕೂ ಹೆಚ್ಚು ಪುರಾತನ ಕಲ್ಯಾಣಿ ಕ್ಲೀನ್

    ಕಲ್ಯಾಣಿ ಸ್ವಚ್ಛಗೊಳಿಸಲು ಕೈಜೋಡಿಸಿದ ಕೃಷಿ ಸಚಿವ – 40ಕ್ಕೂ ಹೆಚ್ಚು ಪುರಾತನ ಕಲ್ಯಾಣಿ ಕ್ಲೀನ್

    ಚಿಕ್ಕಬಳ್ಳಾಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ಕೆ ಕೃಷಿ ಸಚಿವ ಶಿವಶಂಕರರೆಡ್ಡಿ ಕೈಜೋಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಳಿ ಪಾಳುಬಿದ್ದು ಗಿಡಗಂಟೆ, ಕಲ್ಲು, ಮುಳ್ಳುಗಳಿಂದ ಕೂಡಿದ್ದ ಕಲ್ಯಾಣಿಯನ್ನ ಸ್ವಚ್ಛಗೊಳಿಸಲಾಯಿತು. ಈ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದ ಸಚಿವ ಶಿವಶಂಕರರೆಡ್ಡಿ, ತಾವೇ ಸ್ವತಃ ಎಲ್ಲರ ಜೊತೆಗೂಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು. ಇದನ್ನೂ ಓದಿ:ಸಸಿ ನೆಟ್ಟು ರಂಜಾನ್ ಆಚರಿಸಿದ ರಾಯಚೂರಿನ ಜನತೆ

    ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಂಪ್ರದಾಯಿಕವಾಗಿ ನಿರ್ಮಾಣಗೊಂಡ ಪುರಾತನ ಕಾಲದ ಹಲವು ಕಲ್ಯಾಣಿಗಳು ನಿರ್ಲಕ್ಷ್ಯದಿಂದ ಪಾಳುಬಿದ್ದಿದೆ. ಹಿಂದೆ ಈ ಕಲ್ಯಾಣಿಗಳನ್ನು ಜನರಿಗೆ ನೀರು ಪೂರೈಸಲು ನಿರ್ಮಿಸಲಾಗಿತ್ತು. ದುಸ್ಥಿತಿಯಲ್ಲಿರುವ ಕಲ್ಯಾಣಿಗಳನ್ನು ಜಿಲ್ಲಾಡಳಿತ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಗಮನಿಸಿ ಅದನ್ನು ಸ್ವಚ್ಛಗೊಳಿಸಿ ಮತ್ತೆ ಕಲ್ಯಾಣಿಗಳಿಗೆ ಪುನರ್ಜೀವ  ನೀಡಲು ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ:ವಿಶ್ವಪರಿಸರ ದಿನ- ಸಾವಿರ ಸಸಿಗಳನ್ನು ನೆಟ್ಟು ಶತಾಯುಷಿಯ ಸ್ಮರಣೆ

    ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ ಆಯೋಜಿಸಲಾಗಿದೆ. ಈಗಾಗಲೇ 40 ಕ್ಕೂ ಹೆಚ್ಚು ಪುರಾತನ ಕಲ್ಯಾಣಿಗಳ ಸ್ವಚ್ಛತೆ ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಸಚಿವರು ಅಭಿನಂದನೆ ತಿಳಿಸಿದ್ದಾರೆ. ಹಾಗೆಯೇ ಈ ಕಾರ್ಯಕ್ಕೆ ಸಾರ್ವಜನಿಕರು ಕೂಡ ಬೆಂಬಲ ನೀಡಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದಾರೆ.

  • ಬೋರ್‌ವೆಲ್‌ ನೀರಿನಿಂದ ತುಂಬಿಸಿದ್ದ ಕೃಷಿಹೊಂಡಕ್ಕೆ ಸಚಿವ ಶಿವಶಂಕರರೆಡ್ಡಿಯಿಂದ ಬಾಗಿನ!

    ಬೋರ್‌ವೆಲ್‌ ನೀರಿನಿಂದ ತುಂಬಿಸಿದ್ದ ಕೃಷಿಹೊಂಡಕ್ಕೆ ಸಚಿವ ಶಿವಶಂಕರರೆಡ್ಡಿಯಿಂದ ಬಾಗಿನ!

    ದಾವಣಗೆರೆ: ಸಚಿವರನ್ನು ಮೆಚ್ಚಿಸಲು ಕೃಷಿ ಅಧಿಕಾರಿಗಳು ಕೃಷಿ ಹೊಂಡಕ್ಕೆ ಬೋರ್‌ವೆಲ್‌ ನೀರು ತುಂಬಿಸಿ ಸಚಿವರನ್ನು ಮೆಚ್ಚಿಸಿದ ಘಟನೆ ಜಿಲ್ಲೆಯ ಈಚಘಟ್ಟ ಗ್ರಾಮದಲ್ಲಿ ನಡೆದಿದೆ.

    ಈಚಗಟ್ಟ ಗ್ರಾಮದಲ್ಲಿ ಕೃಷಿ ಸಚಿವ ಶಿವಶಂಕರರೆಡ್ಡಿ ರೈತರ ಜೊತೆ ಸಂವಾದವನ್ನು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೂ ಮುಂಚಿತವಾಗಿ ಗ್ರಾಮದ ಮಲ್ಲಿಕಾರ್ಜುನ್ ಎಂಬವರ ಜಮೀನಿನ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನೆರವೇರಿಸಿದರು. ಆದರೆ ಮಳೆಯೇ ಇಲ್ಲದ ಜಿಲ್ಲೆಯಲ್ಲಿ ಕೃಷಿ ಹೊಂಡಕ್ಕೆ ಬೋರ್‌ವೆಲ್‌ ನೀರನ್ನು ತುಂಬಿಸಿ ಸಚಿವರಿಂದ ಮೆಚ್ಚುಗೆ ಪಡಿಯಲು ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

     

    ಮಳೆ ನೀರಿನ ಮೂಲಕ ಕೃಷಿ ಹೊಂಡ ತುಂಬಿಸುವ ಯೋಜನೆಗೆ ಇದಾಗಿದೆ. ಆದರೆ ಈ ಯೋಜನೆಗೆ ಅಧಿಕಾರಿಗಳೇ ಎಳ್ಳುನೀರು ಬಿಟ್ಟಿದ್ದಾರೆ. ಇದರ ಮಾಹಿತಿ ಅರಿಯದ ಕೃಷಿ ಸಚಿವರು ತುಂಬಿದ್ದ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸಿ ಸಂವಾದ ಕಾರ್ಯಕ್ರಮಕ್ಕೆ ತೆರಳಿದರು. ಅಲ್ಲದೇ ಕೃಷಿ ಸಚಿವರು ಬರುತ್ತಾರೆಂದು ಕೃಷಿ ಹೊಂಡಕ್ಕೆ ಅಧಿಕಾರಿಗಳು ತಂತಿ ಬೇಲಿಯನ್ನು ಸಹ ನಿರ್ಮಿಸಿದ್ದರು.

    ನಂತರ ರೈತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಲಾನುಭವಿಗಳಿಗೆ ಕೃಷಿ ಭಾಗ್ಯ ಪರಿಕರ ವಿತರಿಸಿ, ಮಾತನಾಡಿದ ಕೃಷಿ ಸಚಿವರು, ಆತ್ಮಹತ್ಯೆ ಮಾಡಿಕೊಂಡು ಸತ್ತವರೆಲ್ಲಾ ಸಾಲಭಾದೆಯಿಂದ ಸಾವನ್ನಪ್ಪಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರು ತಮ್ಮ ಕೌಟುಂಬಿಕ ತೊಂದರೆ ಹಾಗೂ ಬೇರೆ ಬೇರೆ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇಂತಹ ಆತ್ಮಹತ್ಯೆ ವಿಚಾರಗಳನ್ನು ಮಾಧ್ಯಮಗಳು ವೈಭವಿಕರಿಸುವುದು ಸರಿಯಲ್ಲ. ನಮ್ಮ ಸರ್ಕಾರ ರೈತರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವೇದಿಕೆಯಲ್ಲಿ ಒಂದಾದ ಶಾಸಕ ಸುಧಾಕರ್ – ಸಚಿವ ಶಿವಶಂಕರರೆಡ್ಡಿ

    ವೇದಿಕೆಯಲ್ಲಿ ಒಂದಾದ ಶಾಸಕ ಸುಧಾಕರ್ – ಸಚಿವ ಶಿವಶಂಕರರೆಡ್ಡಿ

    ಚಿಕ್ಕಬಳ್ಳಾಪುರ: ರಾಜಕೀಯವಾಗಿ ಪರಸ್ಪರ ಕಡು ವೈರಿಗಳಾಗಿರುವ ಕೃಷಿ ಸಚಿವ ಶಿವಶಂಕರರೆಡ್ಡಿ ಹಾಗೂ ಶಾಸಕ ಸುಧಾಕರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕೇಂಪೇಗೌಡ ಜಯಂತಿ ಆಚರಣೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಹಾಗೂ ಕೃಷಿ ಸಚಿವರಾಗಿರುವ ಎನ್.ಎಚ್. ಶಿವಶಂಕರರೆಡ್ಡಿ, ಭಾಗವಹಿಸಿದ್ದರು. ವೇದಿಕೆಗೆ ಮೊದಲ ಆಗಮಿಸಿ ಆಸನದಲ್ಲಿದ್ದ ಶಾಸಕ ಸುಧಾಕರ್, ಸಚಿವ ಶಿವಶಂಕರರೆಡ್ಡಿ ವೇದಿಕೆಗೆ ಆಗಮಿಸುತ್ತಿದ್ದಂತೆ ಎದ್ದು ನಿಂತು ಹಸ್ತಲಾಘವ ಮಾಡಿಕೊಳ್ಳುವ ಮೂಲಕ ಬರ ಮಾಡಿಕೊಂಡರು.

    ಇನ್ನೂ ವಿಶೇಷ ಅಂದರೆ ಶಾಸಕ ಸುಧಾಕರ್ ಇಂದು ತಮ್ಮ 45 ನೇ ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಂಜುನಾಥ್ ನೀಡಿದ ಸುಳಿವಿನ ಮೇರೆಗೆ ಸುಧಾಕರ್ ಗೆ ಶಿವಶಂಕರರೆಡ್ಡಿ ಸರಳವಾಗಿ ಹುಟ್ಟು ಹಬ್ಬದ ಶುಭಾಶಯ ಕೂಡ ಕೋರಿದ್ದಾರೆ. ಇದೆಲ್ಲದರ ನಡುವೆ ಮೊದಲು ಭಾಷಣ ಆರಂಭಿಸಿದ ಸಚಿವ ಶಿವಶಂಕರರೆಡ್ಡಿ, ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಆಧಿಕಾರಿಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ಭಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಅಭಿವೃದ್ಧಿ ಪರ ಕೆಲಸ ಮಾಡೋಣ ಅಂತ ಶಾಸಕ ಸುಧಾಕರ್ ಗೆ ಪರೋಕ್ಷವಾಗಿ ಕಿವಿಮಾತು ಹೇಳಿದರು.

    ಇನ್ನೂ ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕ ಸುಧಾಕರ್ ಕೂಡ, ಭಾಷಣದ ವೇಳೆ ಸಚಿವರಾಗಿ ಆಯ್ಕೆಯಾದ ಶಿವಶಂಕರರೆಡ್ಡಿಯವರಿಗೆ ಅಭಿನಂದನೆಗಳನ್ನ ಸಲ್ಲಸಿದ್ದಲ್ಲದೇ, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಸಚಿವರಿಗೆ ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದರು.

    ಈ ಹಿಂದೆ ಶಾಸಕ ಸುಧಾಕರ್ ರಾಜಕೀಯವಾಗಿ ಸಚಿವ ಶಿವಶಂಕರರೆಡ್ಡಿ ಜೊತೆ ವೇದಿಕೆ ಹಂಚಿಕೊಳ್ಳಲ್ಲ ಅಂತ ಬಹಿರಂಗವಾಗಿಯೇ ಹೇಳಿದ್ದರು. ಅಸಲಿಗೆ ಶಾಸಕ ಸುಧಾಕರ್ ಹಾಗೂ ಸಚಿವ ಶಿವಶಂಕರರೆಡ್ಡಿ ನಡುವಿನ ಶೀತಲ ಸಮರ ಹಾಗೂ ಮುಸುಕಿನ ಗುದ್ದಾಟ ಕೇವಲ ಮೇಲ್ನೋಟಕ್ಕೆ ತಣಿಸಿದ್ದು, ಹೇಳಿದ ಮಾತುಗಳಂತೆ ಮುಂದಿನ ದಿನಗಳಲ್ಲಿ ಹಾಗೆಯೇ ನಡೆದುಕೊಳ್ಳುತ್ತಾರಾ ಕಾದು ನೋಡಬೇಕಿದೆ.

  • ಪಿಯುಸಿ ಮಾಡಿ ಎಂಎ, ಡಿಗ್ರಿ ಸರ್ಟಿಫಿಕೇಟ್ ಕೇಳಿದ್ರೆ ಆಗುತ್ತಾ?- ಶಾಸಕ ಸುಧಾಕರ್ ಗೆ ಶಿವಶಂಕರ ರೆಡ್ಡಿ ಟಾಂಗ್

    ಪಿಯುಸಿ ಮಾಡಿ ಎಂಎ, ಡಿಗ್ರಿ ಸರ್ಟಿಫಿಕೇಟ್ ಕೇಳಿದ್ರೆ ಆಗುತ್ತಾ?- ಶಾಸಕ ಸುಧಾಕರ್ ಗೆ ಶಿವಶಂಕರ ರೆಡ್ಡಿ ಟಾಂಗ್

    ಚಿಕ್ಕಬಳ್ಳಾಪುರ: ಸಚಿವ ಸ್ಥಾನದ ಆಕಾಂಕ್ಷಿಯಾಗಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅತೃಪ್ತಗೊಂಡಿರೋ ಶಾಸಕ ಡಾ.ಕೆ ಸುಧಾಕರ್ ಗೆ ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದವನು. ಯಾರು ಪಕ್ಷ ವಿರೋಧಿ ಅಂತ ಎಲ್ಲರಿಗೂ ಗೊತ್ತು ಎಂದು ಸುಧಾಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.

    ಪಿಯುಸಿ ಮಾಡಿ ಎಂಎ ಡಿಗ್ರಿ ಸರ್ಟೀಫೀಕೇಟ್ ಬೇಕಂದ್ರೆ ಸಿಗುತ್ತಾ? ಅದಕ್ಕಾಗಿ ಓದಬೇಕಾಗುತ್ತೆ, ಅಡ್ಡದಾರಿ ರಾಜಕಾರಣ ಬಹಳ ದಿನ ಉಳಿಯಲ್ಲ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಅವರು ಎಲ್ಲಿದ್ರು? ಎಲ್ಲಿಂದ ಬಂದವರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಅಂತ ಹೇಳಿದ್ರು.

    ರಾಜಕಾರಣದಲ್ಲಿ ಆಸೆ ಇರಬೇಕು ದುರಾಸೆ ಇರಬಾರದು. ಎಲ್ಲಾ ಅಧಿಕಾರ ಬೇಗ ಸಿಗಬೇಕು ಅನ್ನೋ ಆತುರ ಇರಬಾರದು. ತಾಳ್ಮೆ ಇರಬೇಕು. ಹಣಬಲದಿಂದ ರಾಜಕಾರಣ ಮಾಡಿದ್ರೇ ಏನೇನು ಗತಿ ಆಗಿದೆ ಎನ್ನುವ ಇತಿಹಾಸ ಎಲ್ಲಾ ಪಕ್ಷದಲ್ಲೂ ಆಯಾ ಕಾಲಕಾಲಕ್ಕೆ ತಕ್ಕಂತೆ ರಾಜ್ಯದಲ್ಲಿದೆ. ಡೋಂಗಿ ರಾಜಕಾರಣ ಬಹಳ ದಿನ ಉಳಿಯಲು ಸಾಧ್ಯವಿಲ್ಲ. ನಾನು 5 ಬಾರಿ ಶಾಸಕನಾಗಿದ್ದೇನೆ ಅರ್ಹತೆಯಿದೆ. ಹಾಗಾಗಿ ನನಗೆ ಸಚಿವ ಸ್ಥಾನ ನೀಡಿದ್ದಾರೆ. ಇವರಿಂದ ನಾನು ಪಾಠ ಕಲಿಯಬೇಕಿಲ್ಲ ಅಂತ ಸುಧಾಕರ್ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು.

    ಅಂದ ಹಾಗೆ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದ ಶಾಸಕ ಸುಧಾಕರ್ ಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅತೃಪ್ತಗೊಂಡು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದರು.