Tag: ಶಿವಲಿಂಗ

  • ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷಾ ವರದಿ ಸಲ್ಲಿಕೆ – ಶಿವಲಿಂಗ ಮಾತ್ರವಲ್ಲ, ತಾವರೆ ಹೂವು, ತ್ರಿಶೂಲ, ಢಮರುಗ ಚಿತ್ರಗಳು ಪತ್ತೆ

    ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷಾ ವರದಿ ಸಲ್ಲಿಕೆ – ಶಿವಲಿಂಗ ಮಾತ್ರವಲ್ಲ, ತಾವರೆ ಹೂವು, ತ್ರಿಶೂಲ, ಢಮರುಗ ಚಿತ್ರಗಳು ಪತ್ತೆ

    ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ನ್ಯಾಯಾಲಯ ನೇಮಿಸಿದ ಆಯೋಗ ಇಂದು ತನ್ನ ವರದಿಯನ್ನು ವಾರಣಾಸಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿಯನ್ನು ಆಯೋಗವು ಮುಚ್ಚಿದ ಕವರ್‌ನಲ್ಲಿ ಸಲ್ಲಿಸಿದ್ದು ಸರ್ವೇ ವೇಳೆ ಮಾಡಿದ ವೀಡಿಯೊಗಳು ಮತ್ತು ಛಾಯಾಚಿತ್ರಗಳಿರುವ ಚಿಪ್ ಅನ್ನು ಸಹ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ.

    ಸಹಾಯಕ ನ್ಯಾಯಾಲಯದ ಆಯುಕ್ತ ಅಜಯ್ ಪ್ರತಾಪ್ ಸಿಂಗ್ ಈ ವರದಿಯನ್ನು ಸಲ್ಲಿಕೆ ಮಾಡಿದ್ದು, ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿಯು 10-15 ಪುಟಗಳಿಂದ ಕೂಡಿದ್ದು, ದಾಖಲೆಗಳ ಸಹಿತ ಕೋರ್ಟ್‍ಗೆ ಸಲ್ಲಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ

    ವರದಿಯಲ್ಲಿ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ, ಇದಲ್ಲದೆ ಮಸೀದಿಗೆ ಗೋಡೆಗಳ ಮೇಲೆ ತಾವರೆ ಹೂವು, ತ್ರಿಶೂಲ, ಢಮರುಗ, ನಾಗಸರ್ಪ ಸೇರಿದಂತೆ ಹಲವು ಹಿಂದೂ ಸಂಸ್ಕೃತಿ ಹೊಂದಿರುವ ಚಿತ್ರಗಳಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.

    ವಾರಣಾಸಿಯ ಕೋರ್ಟ್ ಈ ಹಿಂದೆ ಮೂರು ದಿನಗಳ ಕಾಲ ಮಸೀದಿಯಲ್ಲಿ ವೀಡಿಯೋಗ್ರಫಿ ಸಹಿತ ಸರ್ವೆ ನಡೆಸಲು ಅನುಮತಿ ನೀಡಿತ್ತು. ಅನುಮತಿ ಹಿನ್ನಲೆ ಸ್ಥಳೀಯ ಜಿಲ್ಲಾಡಳಿತ ಅರ್ಜಿದಾರರ ಸಮ್ಮುಖದಲ್ಲಿ ಸರ್ವೇ ನಡೆಸಿ ಇಂದು ತನ್ನ ವರದಿಯನ್ನು ಸಲ್ಲಿಸಿದೆ. ಈಗ ಸಲ್ಲಿಕೆಯಾಗಿರುವ ವರದಿ ಆಧರಿಸಿ ಮುಂದಿನ ಹಂತದ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಮದುವೆ ಮೆರವಣಿಗೆಯಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ಕಲ್ಲು ತೂರಾಟ

  • ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರೆತಿರುವುದು ಶಿವಲಿಂಗವಲ್ಲ, ಕಾರಂಜಿ: ಎಸ್‍ಡಿಪಿಐ ಆರೋಪ

    ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರೆತಿರುವುದು ಶಿವಲಿಂಗವಲ್ಲ, ಕಾರಂಜಿ: ಎಸ್‍ಡಿಪಿಐ ಆರೋಪ

    ಬೆಳಗಾವಿ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರೆತಿರುವುದು ಶಿವಲಿಂಗವಲ್ಲ, ಕಾರಂಜಿ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರದ ಡಿಸಿ ಕಚೇರಿಯಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎಸ್‍ಡಿಪಿಐ ಕಾರ್ಯಕರ್ತರು, ವಾರಾಣಸಿಯ ಜ್ಞಾನವಾಪಿ ಮಸೀದಿ ಐತಿಹಾಸಿಕ ಮಸೀದಿಗಳಲ್ಲಿ ಒಂದಾಗಿದೆ. ಜ್ಞಾನವಾಪಿ ಮಸೀದಿ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದ್ದು ಮಸೀದಿಯಲ್ಲಿ ದೊರೆತಿರುವುದು ಶಿವಲಿಂಗವಲ್ಲ. ಅದೊಂದು ಕಾರಂಜಿ. ಅದೇ ಕಾರಂಜಿಯನ್ನೇ ಶಿವಲಿಂಗ ಎಂದು ಬಿಂಬಿಸುವ ಹುನ್ನಾರವನ್ನು ಬಿಜೆಪಿ ಮತ್ತು ಸಂಘ ಪರಿವಾರದವರು ಮಾಡುತ್ತಿದ್ದಾರೆ ಎಂದು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಾಹಿತಿ ಲೀಕ್ – ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅಧಿಕಾರಿ ವಜಾ

    ಇದಲ್ಲದೇ ಸರ್ಕಾರಿ ಅಧಿಕಾರಿಗಳಿಂದ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ರವಾನೆ ಮಾಡಲಾಗುತ್ತಿದೆ. 1991ರ ಆರಾಧನಾ ಕಾಯ್ದೆ ಪ್ರಕಾರ ಧಾರ್ಮಿಕ ಸ್ಥಳಗಳನ್ನು ಯಥಾಸ್ಥಿತಿಗೆ ಬಿಡಬೇಕು. ದೇಗುಲ, ಮಸೀದಿ, ಚರ್ಚ್‍ಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಆದ್ರೆ, ಕೋಮುವಾದಿ ಸಂಘಟನೆಗಳಿಂದ ದೇಶದಲ್ಲಿ ಸಾಮರಸ್ಯ ಕದಡುವ ಕೃತ್ಯ ನಡೆದಿದೆ. ಮುಸ್ಲಿಂ ಸಮುದಾಯದ ಪವಿತ್ರ ಸ್ಥಳಗಳನ್ನು ಧ್ವಂಸಗೊಳಿಸುವ ಹುನ್ನಾರ ನಡೆದಿದ್ದು ನಮಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸುವುದಾಗಿ ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗಮನಿಸಿ, ಮುಂದಿನ 5 ದಿನಗಳ ಕಾಲ ಬೆಂಗ್ಳೂರಲ್ಲಿ ಭಾರೀ ಮಳೆ

  • ಜ್ಞಾನವಾಪಿ ಮಾಹಿತಿ ಲೀಕ್ – ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅಧಿಕಾರಿ ವಜಾ

    ಜ್ಞಾನವಾಪಿ ಮಾಹಿತಿ ಲೀಕ್ – ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅಧಿಕಾರಿ ವಜಾ

    ಲಕ್ನೋ: ಉತ್ತರಪ್ರದೇಶದ ವಾರಣಾಸಿ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವರದಿ ನ್ಯಾಯಾಲಯಕ್ಕೆ ಸಲ್ಲುವ ಮೊದಲೇ ಸೋರಿಕೆಯಾಗಿರುವ ಕುರಿತಂತೆ ವಾರಣಾಸಿ ನ್ಯಾಯಾಲಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಉನ್ನತ ಅಧಿಕಾರಿ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಿದೆ.

    ನ್ಯಾಯಾಲಯ ಜ್ಞಾನವಾಪಿ ಮಸೀದಿಯ ವರದಿ ಸಲ್ಲಿಸಲು 2 ದಿನಗಳ ಕಾಲಾವಕಾಶ ನೀಡಿದೆ. ವರದಿ ಸಲ್ಲಿಕೆಗೂ ಮುನ್ನವೇ ಮಾಧ್ಯಮಗಳಿಗೆ ಚಿತ್ರೀಕರಣದ ಸಂಗತಿಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಅಡ್ವೋಕೇಟ್ ಕಮಿಷನರ್ ಅಜಯ್ ಮಿಶ್ರಾ ಅವರನ್ನು ನ್ಯಾಯಾಲಯ ವಜಾಗೊಳಿಸಿದೆ. ಇದನ್ನೂ ಓದಿ: ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಿ: ಸುಪ್ರೀಂ ಕೋರ್ಟ್‌

    ಈ ಹಿಂದೆ ನ್ಯಾಯಾಲಯ ಮೇ 17ರ ಒಳಗಾಗಿ ಸಮೀಕ್ಷಾ ವರದಿಗಳನ್ನು ನೀಡಬೇಕೆಂದು ಆದೇಶ ನೀಡಿತ್ತು. ಇದೀಗ ವರದಿ ಸಲ್ಲಿಸಲು ಆಯೋಗಕ್ಕೆ ನ್ಯಾಯಾಲಯ ಇನ್ನೆರಡು ದಿನಗಳ ಕಾಲಾವಕಾಶವನ್ನೂ ನೀಡಿದೆ. ವರದಿ ಸೋರಿಕೆಯಲ್ಲಿ ಪಾತ್ರವಹಿಸಿದ್ದ ಅಜಯ್ ಮಿಶ್ರಾ ಅವರನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ಸಹಾಯಕ ವಕೀಲ ಕಮಿಷನರ್ ಅಜಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ


    ಅಜಯ್ ಮಿಶ್ರಾ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದಾಗಿ ವರದಿಯಾಗಿದೆ. ಈ ಹಿಂದೆ ಮಿಶ್ರಾ ಅವರನ್ನು ಅಡ್ವೋಕೇಟ್ ಕಮಿಷನರ್ ಸ್ಥಾನದಿಂದ ಕೈಬಿಡಬೇಕೆಂದು ಮಸೀದಿ ಆಡಳಿತ ಮಂಡಳಿಯ ವಕೀಲರು ಕೋರಿದ್ದರು. ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಇದಲ್ಲದೇ ಮಿಶ್ರಾ ಅವರಿಗೆ ನೆರವಾಗಲು ಹೆಚ್ಚುವರಿ ಕಮಿಷನರ್ ಹಾಗೂ ಸಹಾಯಕ ಕಮಿಷನರ್‌ಗಳನ್ನು ಕೋರ್ಟ್ ನೇಮಕ ಮಾಡಿತ್ತು.

  • ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಿ: ಸುಪ್ರೀಂ ಕೋರ್ಟ್‌

    ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಿ: ಸುಪ್ರೀಂ ಕೋರ್ಟ್‌

    ನವದೆಹಲಿ: ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್‌ ವಾರಣಾಸಿ ಜಿಲ್ಲಾಡಳಿತಕ್ಕೆ ಸೂಚಿಸಿದೆ.

    ಜ್ಞಾನವ್ಯಾಪಿ ಮಸೀದಿಯಲ್ಲಿ ಸರ್ವೆ ನಡೆಸಲು ತಡೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ ನ್ಯಾ. ಚಂದ್ರಚೂಡ್‌ ಮತ್ತು ನ್ಯಾ. ಪಿ.ಎಸ್‌ ನರಸಿಂಹ ಅವರಿದ್ದ ಪೀಠದಲ್ಲಿ ನಡೆಯಿತು.

    ವಿಚಾರಣೆ ಸಂದರ್ಭದಲ್ಲಿ ಶಿವಲಿಂಗ ನಿಜವಾಗಿ ಎಲ್ಲಿ ಪತ್ತೆಯಾಗಿದೆ ಎಂದು ಕೋರ್ಟ್‌ ಪ್ರಶ್ನಿಸಿತು. ಇದನ್ನೂ ಓದಿ: ಶ್ರೀಲಂಕನ್ ಏರ್‌ಲೈನ್ಸ್ ಮಾರಾಟಕ್ಕೆ ಮುಂದಾದ ಸರ್ಕಾರ

    GYANVAPI MOSQUE

    ಈ ಪ್ರಶ್ನೆಗೆ ಉತ್ತರ ನೀಡಿದ ಉತ್ತರಪ್ರದೇಶ ಸರ್ಕಾರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ನಾವು ನೋಡಿಲ್ಲ ಎಂದು ಉತ್ತರಿಸಿದರು. ವರದಿಯನ್ನು ನೋಡಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

    ವಿಚಾರಣೆ ನಡೆಸಿದ ಕೋರ್ಟ್‌, ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಬೇಕು. ನಮಾಜ್‌ ಮಾಡಲು ಆಗಮಿಸುವ ಮುಸ್ಲಿಮರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್‌ ವಾರಣಾಸಿ ಜಿಲ್ಲಾಡಳಿತಕ್ಕೆ ಸೂಚಿಸಿತು.  ಕೋರ್ಟ್‌ ವಿಚಾರಣೆಯನ್ನು ಮೇ 19ಕ್ಕೆ ಮುಂದೂಡಿದೆ.

    ಸೋಮವಾರ ಏನಾಗಿತ್ತು?
    ವಾರಣಾಸಿ ಕೋರ್ಟ್ ಸೂಚನೆ ಮೇರೆಗೆ ಕೋರ್ಟ್ ಕಮೀಷನರ್ ನೇತೃತ್ವದಲ್ಲಿ ಮೂರು ದಿನ ನಡೆದ ಜ್ಞಾನವ್ಯಾಪಿ ಮಸೀದಿ ವಿಡಿಯೋ ಸರ್ವೇ ಸೋಮವಾರಕ್ಕೆ ಮುಕ್ತಾಯವಾಗಿತ್ತು. ಮಸೀದಿಯ ಕೊಳದಲ್ಲಿ 12 ಅಡಿ ಎತ್ತರದ ಶಿವಲಿಂಗ ಪತ್ತೆಯಾಗಿತ್ತು. ಇದು ತಿಳಿಯುತ್ತಲೇ ಶಿವಲಿಂಗಕ್ಕೆ ರಕ್ಷಣೆ ಕಲ್ಪಿಸಬೇಕೆಂದು ಕೋರಿ ವಕೀಲರೊಬ್ಬರು ಕಾಶಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿದ್ದರು.

    ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಶಿವಲಿಂಗ ಪತ್ತೆಯಾದ ಪ್ರದೇಶವನ್ನು ಈ ಕೂಡಲೇ ಸೀಲ್ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೇ, ಶಿವಲಿಂಗ ಪತ್ತೆಯಾದ ಪ್ರದೇಶಕ್ಕೆ ಯಾರು ಹೋಗದಂತೆ ನಿಷೇಧ ವಿಧಿಸುವಂತೆಯೂ ಆದೇಶ ನೀಡಿದೆ. ಅಗತ್ಯ ಭದ್ರತೆ ಒದಗಿಸುವಂತೆಯೂ ಸೂಚನೆ ನೀಡಿತ್ತು.

    ಆದೇಶದ ಬೆನ್ನಲ್ಲೇ 30*30 ಅಳತೆಯ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಆ ಪ್ರದೇಶದ ಮೂರು ದ್ವಾರಗಳನ್ನು ಬಂದ್ ಮಾಡಲಾಗಿದೆ. ಈ ಕೊಳದ ನೀರನ್ನು ಮುಸ್ಲಿಮರು ಪ್ರಾರ್ಥನೆಗೆ ಬಂದ ಸಂದರ್ಭದಲ್ಲಿ ಕೈಕಾಲು ತೊಳೆಯಲು ಬಳಸ್ತಿದ್ದರು. ಪ್ರಾರ್ಥನೆಗೆ ಬರುವವರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.

  • ಜ್ಞಾನವಾಪಿ ಮಸೀದಿ ವಿವಾದ – ಇಂದು ಸುಪ್ರೀಂ ಕೋರ್ಟ್ ವಿಚಾರಣೆ

    ಜ್ಞಾನವಾಪಿ ಮಸೀದಿ ವಿವಾದ – ಇಂದು ಸುಪ್ರೀಂ ಕೋರ್ಟ್ ವಿಚಾರಣೆ

    ಲಕ್ನೋ: ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ (ಆಡಳಿತ ಮಂಡಳಿ) ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

    ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ನೀಡಿದ ಲಿಖಿತ ಆದೇಶದಂತೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಜ್ಞಾನವ್ಯಾಪಿ ಮಸೀದಿಯ ಆಡಳಿತ ಮಂಡಳಿಯ ಅರ್ಜಿಯನ್ನು ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    GYANVAPI MOSQUE (1)

    ಹಲವು ಮಹತ್ವದ ಬೆಳವಣಿಗೆಯ ನಡುವೆ ವಾರಣಾಸಿ ನ್ಯಾಯಾಲಯವು ಅರ್ಜಿ ವಿಚಾರಣೆ ನಡೆಸಿದೆ. ಈಗಾಗಲೇ ಸಮೀಕ್ಷಾ ತಂಡವು ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗಿರುವ ಸ್ಥಳವನ್ನು ಬಂದ್ ಮಾಡುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಸೂಚಿಸಿದೆ.

    ಕಳೆದ ವಾರ, ಮುಸ್ಲಿಂ ಮುಖಂಡ ಮನವಿಯಂತೆ ಸಮೀಕ್ಷೆ ವಿರುದ್ಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ರವಾನಿಸಲು ಸುಪ್ರೀಂ ನಿರಾಕರಿಸಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಪರಿಗಣಿಸಲು ಒಪ್ಪಿಕೊಂಡಿತು. ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಅರ್ಜಿಯನ್ನು ಪಟ್ಟಿ ಮಾಡಲು ಸೂಚಿಸಿತ್ತು. ಇದನ್ನೂ ಓದಿ: ಅಲ್ಪಸಂಖ್ಯಾತರ ಮೀಸಲಾತಿ ನಿಲ್ಲಿಸುತ್ತೇವೆ – ತೆಲಂಗಾಣ ಸರ್ಕಾರದ ವಿರುದ್ಧ ಶಾ ಗುಡುಗು

    Gyanvapi Masjid 1

    ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಹುಝೆಫಾ ಅಹ್ಮದಿ, ವಾರಣಾಸಿ ಆಸ್ತಿ ವಿಚಾರವಾಗಿ ಸಮೀಕ್ಷೆಗೆ ಸಂಬಂಧಿಸಿದಂತೆ ನಾವು ಅರ್ಜಿ ಸಲ್ಲಿಸಿದ್ದೇವೆ. ಇದು (ಜ್ಞಾನವಾಪಿ) ಅನಾದಿ ಕಾಲದಿಂದಲೂ ಮಸೀದಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಯಲಿದೆ.

  • ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಲಕ್ನೋ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ಕಾರ್ಯದ ವೇಳೆ ಶಿವಲಿಂಗ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಮಸೀದಿಯ ಬಾವಿಯೊಳಗೆ ಪತ್ತೆಯಾದ ಶಿವಲಿಂಗ 12 ಅಡಿ, 8 ಇಂಚು ವ್ಯಾಸ ಹೊಂದಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಜೈನ್ ತಿಳಿಸಿದ್ದಾರೆ.

    ಇತ್ತೀಚೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಬಗ್ಗೆ ದೇಶದ ಜನರ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಸರ್ವೇ ಕಾರ್ಯ ಪ್ರಾರಂಭವಾಗಿತ್ತು. ಈ ವರೆಗೆ ಮಸೀದಿಯಲ್ಲಿ ಶೇ.65 ರಷ್ಟು ಸರ್ವೇ ಕಾರ್ಯ ಮುಗಿದಿದೆ. ಮಂಗಳವಾರ ನ್ಯಾಯಾಲಯಕ್ಕೆ ಸರ್ವೇ ರಿಪೋರ್ಟ್ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮೀಸಲಾತಿ ನಿಲ್ಲಿಸುತ್ತೇವೆ – ತೆಲಂಗಾಣ ಸರ್ಕಾರದ ವಿರುದ್ಧ ಶಾ ಗುಡುಗು

    ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ವರದಿಗಳು ತಿಳಿಸಿದ್ದು, ಮಸೀದಿಯ ವೀಡಿಯೋ ಚಿತ್ರೀಕರಣ ಸಂಪೂರ್ಣಗೊಂಡಿದೆ. ಮಸೀದಿಯಲ್ಲಿ ಇದ್ದ ನಂದಿಯ ಎದುರಿನ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ವಿಷ್ಣು ಜೈನ್ ತಿಳಿಸಿದ್ದಾರೆ. ಇದನ್ನೂ ಓದಿ: 18ನೇ ಶತಮಾನದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂಗೆ ಸಂತನ ಪಟ್ಟ!

    ಜನರು ಆ ಸ್ಥಳದ ಬಳಿ ಹೋಗದಂತೆ ತಡೆಯಲು ಆ ಜಾಗವನ್ನು ಸೀಲ್ ಮಾಡಿ ಎಂದು ವಾರಣಾಸಿ ಕೋರ್ಟ್‌ ಆದೇಶಿಸಿದ ಹಿನ್ನೆಲೆಯಲ್ಲಿ ಪೊಲೀಸರು ಜಾಗದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

    ಏನಿದು ಪ್ರಕರಣ?
    ಜ್ಞಾನವಾಪಿ ಮಸೀದಿ ಹೊರ ಗೋಡೆಗೆ ತಾಗಿಕೊಂಡೇ ಇರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪೂಜೆ ನರೆವೇರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ಮೂಲದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು 2021ರ ಏಪ್ರಿಲ್ 21ರಂದು ವಾರಣಾಸಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಲ್ಲಿ ಇರುವ ದೇವತಾ ವಿಗ್ರಹಗಳಿಗೆ ಯಾವುದೇ ಹಾನಿ ಉಂಟುಮಾಡದಂತೆ ಸೂಚಿಸಬೇಕು ಎಂದು ಕೋರಿದ್ದರು.

    ಈ ವಿಚಾರವಾಗಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈದ್ ಹಬ್ಬದ ನಂತರ ಮತ್ತು ಮೇ 10 ರೊಳಗೆ ಕಾಶಿ ವಿಶ್ವನಾಥ ಮಂದಿರ- ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವೀಡಿಯೋ ಚಿತ್ರೀಕರಣ ನಡೆಸುವಂತೆ ಏಪ್ರಿಲ್ 26ರಂದು ಆದೇಶಿಸಿತ್ತು. ವೀಡಿಯೋ ಚಿತ್ರೀಕರಣದ ವೇಳೆ ಅಡ್ವೋಕೇಟ್ ಕಮಿಷನರ್, ಎರಡೂ ಕಡೆಯ ಕಕ್ಷೀದಾರರು ಮತ್ತು ಒಬ್ಬ ಸಹಾಯಕ ಮಾತ್ರ ಇರಬಹುದು ಎಂದು ತಿಳಿಸಲಾಗಿತ್ತು. ಇದರಂತೆ ಮೇ 6 ಮತು 7 ರಂದು ವೀಡಿಯೋ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ವೀಡಿಯೋ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸಲು ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ಅವಕಾಶ ನೀಡಿರಲಿಲ್ಲ. ವೀಡಿಯೋ ಶೂಟಿಂಗ್‌ ವೇಳೆ ಹೈಡ್ರಾಮಾ ನಡೆದಿತ್ತು. ಬಳಿಕ ಕೋರ್ಟ್ ಮೇ 17ರ ಒಳಗಡೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.

  • ಶಿವಲಿಂಗ ವಿಚಾರವಾಗಿ ಆಳಂದದಲ್ಲಿ ಘರ್ಷಣೆ – ಲಾಠಿಚಾರ್ಜ್, ಬಿಗಿ ಬಂದೋಬಸ್ತ್

    ಶಿವಲಿಂಗ ವಿಚಾರವಾಗಿ ಆಳಂದದಲ್ಲಿ ಘರ್ಷಣೆ – ಲಾಠಿಚಾರ್ಜ್, ಬಿಗಿ ಬಂದೋಬಸ್ತ್

    ಕಲಬುರಗಿ: ಆಳಂದದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಶುದ್ಧೀಕರಣ ವಿಚಾರದ ಗಲಾಟೆ ವಿಕೋಪಕ್ಕೆ ಹೋಗಿದ್ದು ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ.

    ಶಿವಲಿಂಗದ ಶುದ್ಧೀಕರಣಕ್ಕೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿದ್ದು, ಆಂದೋಲಾದ ಶ್ರೀಸಿದ್ದಲಿಂಗ ಸ್ವಾಮೀಜಿ ಕಲಬುರಗಿಯಿಂದ ಆಳಂದ ಚಲೋಗೆ ಕರೆ ಕೊಟ್ಟಿದ್ದರು. ಆದರೆ ಆಳಂದ ಚಲೋಗೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಇದನ್ನೂ ಓದಿ: ಕಲಬುರಗಿಗೆ ಬರುವಾಗ ಚೈತ್ರಾ ವಶಕ್ಕೆ – ಯಾದಗಿರಿ ಗಡಿ ದಾಟಿಸಿ ಬಿಟ್ಟ ಪೊಲೀಸರು

    ಶಿವರಾತ್ರಿ ಹಬ್ಬದಂದೇ ಮುಸ್ಲಿಮರ ಸಂದಲ್ ಮತ್ತು ಶಬ್‍ಏ ಬರಾತ್ ಇರುಗವುದರಿಂದ ಶಾಂತಿ ಭಂಗವಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತದಿಂದ ಆಳಂದ ಚಲೋಗೆ ಅನುಮತಿ ಸಿಕ್ಕಿರಲಿಲ್ಲ. ಪ್ರಮೋದ್ ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರ ಕಲಬುರಗಿ ಜಿಲ್ಲೆಗೆ ಕಾಲಿಡುವಂತಿಲ್ಲ ಅಂತಾ ಜಿಲ್ಲಾಡಳಿತ ಆದೇಶಿಸಿತ್ತು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಇಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ದರ್ಗಾ ಪ್ರವೇಶಿಸಬಾರದು ಎಂದು ಯುವಕರ ಗುಂಪೊಂದು ನಿಷೇಧಾಜ್ಞೆ ನಡುವೆ ತಲ್ವಾರ್, ದೊಣ್ಣೆ ಪ್ರದರ್ಶಿಸಿತ್ತು. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡಿರಲಿಲ್ಲ. ತೀವ್ರ ಗದ್ದಲ, ಗಲಾಟೆ ನಡೆಸಿದ್ದಕ್ಕೆ ಪೊಲೀಸರು ಲಾಠಿಚಾರ್ಜ್ ನಡೆಸಿ ನಿಯಂತ್ರಿಸಿದ್ದಾರೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

  • ಕಲಬುರಗಿ ನಗರದ ವಿವಿಧ ದೇವಸ್ಥಾನಗಳ ಸುತ್ತಮುತ್ತ 144 ಸೆಕ್ಷನ್ ಜಾರಿ

    ಕಲಬುರಗಿ ನಗರದ ವಿವಿಧ ದೇವಸ್ಥಾನಗಳ ಸುತ್ತಮುತ್ತ 144 ಸೆಕ್ಷನ್ ಜಾರಿ

    ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಶುದ್ಧೀಕರಣ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳ ಸುತ್ತಮುತ್ತ 144 ನಿಷೇಧಾಜ್ಞೆ ಜಾರಿ ಮಾಡಿ ಎಂದು ನಗರ ಪೊಲೀಸ್ ಆಯುಕ್ತ ವೈ.ಎಸ್ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

    ನಗರದ ಶ್ರೀ ರಾಮ ಮಂದಿರ, ಶ್ರೀ ಶರಣಬಸವೇಶ್ವರ ದೇವಸ್ಥಾನ ಮತ್ತು ಶ್ರೀ ವಿಶ್ವರಾಧ್ಯ ದೇವಸ್ಥಾನಗಳ ಸುತ್ತಲೂ ನಿಷೇಧಾಜ್ಞೆ ವಿಧಿಸಲಾಗಿದೆ. ನಗರದ ವಿವಿಧ ದೇವಸ್ಥಾನಗಳಿಂದ ಶಿವಲಿಂಗ ಶುದ್ಧೀಕರಣದ ಕಾರ್ಯಕ್ಕೆ ಅನೇಕ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತೆರಳುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಇದನ್ನೂ ಓದಿ: ಪ್ರಮೋದ್ ಮುತಾಲಿಕ್, ಚೈತ್ರಾ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿದ ಡಿಸಿ

    ಇನ್ನೂ ಇದಕ್ಕೂ ಮುನ್ನ ಆಳಂದ ಪಟ್ಟಣದ ದರ್ಗಾದಲ್ಲಿನ ಶಿವಲಿಂಗ ಶುದ್ದೀಕರಣ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಬೆಳಗ್ಗೆಯಿಂದ ರಾತ್ರಿವರೆಗೆ ಮಧ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪ್ರಭಾರಿ ಡಿಸಿ ಡಾ. ದಿಲಿಸ್ ಸಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಗೆ ಬರುವಾಗ ಚೈತ್ರಾ ವಶಕ್ಕೆ – ಯಾದಗಿರಿ ಗಡಿ ದಾಟಿಸಿ ಬಿಟ್ಟ ಪೊಲೀಸರು

  • ಐತಿಹಾಸಿಕ ಕೌತುಕಕ್ಕೆ ಸಾಕ್ಷಿಯಾದ ಗವಿ ಗಂಗಾಧರೇಶ್ವರ ದೇಗುಲ – ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ

    ಐತಿಹಾಸಿಕ ಕೌತುಕಕ್ಕೆ ಸಾಕ್ಷಿಯಾದ ಗವಿ ಗಂಗಾಧರೇಶ್ವರ ದೇಗುಲ – ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ

    ಬೆಂಗಳೂರು: ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಇಂದು ಸಂಜೆ 5:17ರ ಸಮಯದಲ್ಲಿ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯನ ರಶ್ಮಿ ಗವಿ ಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸುವ ಮೂಲಕ ಕಿರಣಾಭಿಷೇಕ ಮಾಡಿತು.

    ಉತ್ತರಾಯಣ ಆರಂಭಗೊಳ್ಳುವ ಶುಭ ಘಳಿಗೆಯಲ್ಲಿ ಭಾಸ್ಕರ ತನ್ನ ಪಥ ಬದಲಿಸಿದ ಹಿನ್ನೆಲೆಯಲ್ಲಿ ಸೂರ್ಯ ರಶ್ಮಿ ಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸಿತು. ಈ ಐತಿಹಾಸಿಕ ನೆರಳು-ಬೆಳಕಿನಾಟಕ್ಕೆ ಬೆಂಗಳೂರಿನ ಗುಟ್ಟಳ್ಳಿಯ ಗವಿಗಂಗಾಧರ ದೇವಾಲಯ ಸಾಕ್ಷಿಯಾಯಿತು. ಸೂರ್ಯನ ಕಿರಣ ಶಿವಲಿಂಗವನ್ನು ಸ್ಪರ್ಶಿಸುತ್ತಿದ್ದಂತೆ ಲಿಂಗಕ್ಕೆ ಹಾಲಿನ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಮಂತ್ರಾಲಯದಲ್ಲಿ ಸಂಕ್ರಾಂತಿ ಸಂಭ್ರಮ – ನಾಡಿನ ಜನತೆಗೆ ಶುಭ ಕೋರಿದ ಸುಭುದೇಂದ್ರ ತೀರ್ಥರು

    ಈ ಮಹಾ ಕೌತುಕವನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ದೇಗುಲದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿರುತ್ತಿದ್ದರು. ಆದರೆ ಕೋವಿಡ್‌ ಕಾರಣದಿಂದಾಗಿ ಈ ಬಾರಿ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಭಕ್ತರು ಮನೆಯಲ್ಲೇ ಇದ್ದು ಟಿವಿ ಮೂಲಕ ಕೌತುಕವನ್ನು ಕಣ್ತುಂಬಿಕೊಂಡಿದ್ದಾರೆ.

    ಕಳೆದ ವರ್ಷ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತಾದರೂ, ಸೂರ್ಯ ಮೋಡದ ಮರೆಯಲ್ಲಿ ಹಾದು ಹೋಗಿದ್ದ. ಹೀಗಾಗಿ ಕೌತುಕ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರಿಗೆ ನಿರಾಶೆಯಾಗಿತ್ತು. ಆದರೆ ಈ ಬಾರಿ ಕೋವಿಡ್‌ ಕಾರಣಕ್ಕೆ ದೇಗುಲ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಿಲ್ಲ. ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ- ವೇತನ 11 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ

  • ಬ್ಯಾಂಕ್ ಲಾಕರ್‌ನಲ್ಲಿ 500 ಕೋಟಿ ಮೌಲ್ಯದ ಶಿವಲಿಂಗ ಪತ್ತೆ!

    ಬ್ಯಾಂಕ್ ಲಾಕರ್‌ನಲ್ಲಿ 500 ಕೋಟಿ ಮೌಲ್ಯದ ಶಿವಲಿಂಗ ಪತ್ತೆ!

    ಚೆನ್ನೈ: ವ್ಯಕ್ತಿಯೊಬ್ಬನ ಬ್ಯಾಂಕ್ ಲಾಕರ್‌ನಲ್ಲಿದ್ದ 500 ಕೋಟಿ ರೂ. ಮೌಲ್ಯದ ಶಿವಲಿಂಗವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಎಸ್. ಅರುಣ ಭಾಸ್ಕರ್‌ರನ್ನು ವಿಚಾರಣೆ ನಡೆಸಲಾಗುತ್ತಿದೆ. ಅರುಣ ಭಾಸ್ಕರ್ ತಂದೆ ಎನ್.ಎ.ಸಾಮಿಯ್ಯಪ್ಪನ್ ಹೆಸರಲ್ಲಿರುವ ಬ್ಯಾಂಕ್ ಲಾಕರ್‌ನಲ್ಲಿ ಪಚ್ಚೆ ಹಾಗೂ ಹರಳುಯುಕ್ತ ಶಿವಲಿಂಗ ದೊರೆತಿದೆ.

    POLICE JEEP

    ದೇಗುಲಗಳ ಹಳೆಯ ವಿಗ್ರಹಗಳನ್ನು ಕದ್ದು, ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ದೊರೆತ್ತಿತ್ತು. ಅದರ ಆಧಾರದ ಮೇಲೆ ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜಾರಾಮ್ ಮತ್ತು ಅಧಿಕಾರಿಗಳು ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಇದನ್ನೂ ಓದಿ:  8 ಲಕ್ಷಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ತಂದೆ ಅರೆಸ್ಟ್

    ಈ ಸಂದರ್ಭದಲ್ಲಿ ಅರುಣ ಭಾಸ್ಕರ್ ತಂದೆ ಎನ್.ಎ.ಸಾಮಿಯ್ಯಪ್ಪನ್ ಹೆಸರಿನಲ್ಲಿ ಬ್ಯಾಂಕ್ ಲಾಕರ್‌ನಲ್ಲಿ 500 ಕೋಟಿ ರೂ. ಮೌಲ್ಯದ ಶಿವಲಿಂಗ ಇರುವ ಮಾಹಿತಿ ದೊರೆತಿದೆ. ಶಿವಲಿಂಗಕ್ಕೆ ಯಾವುದೇ ಅಧಿಕೃತ ದಾಖಲೆ ಇಲ್ಲದ ಕಾರಣ ಲಿಂಗವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ

    ಶಿವಲಿಂಗವು 8 ಸೆ.ಮೀ. ಉದ್ದ, 500 ಗ್ರಾಂ ಭಾರವಿದೆ. ತಿರುವರೂರ್ ಜಿಲ್ಲೆಯ ತಿರುಕ್ಕುವಲೈ ಎಂಬಲ್ಲಿರುವ ಶಿವಲಿಂಗವೊಂದು ಕಳವಾಗಿತ್ತು. ಪತ್ತೆಯಾಗಿರುವ ಶಿವಲಿಂಗ ಆ ದೇಗುಲದ್ದೇ ಎಂದು ಪೊಲೀಸರು ಶಂಕಿಸಿದ್ದಾರೆ.