Tag: ಶಿವಲಿಂಗೇ ಗೌಡ

  • ಸಿದ್ದರಾಮಯ್ಯ ಜೋಶ್‍ನಲ್ಲಿ ನನಗೂ ಫ್ರೀ ನಿನಗೂ ಫ್ರೀ ಅಂತ ಹೇಳಿದ್ದಾರೆ: ಶಿವಲಿಂಗೇ ಗೌಡ

    ಸಿದ್ದರಾಮಯ್ಯ ಜೋಶ್‍ನಲ್ಲಿ ನನಗೂ ಫ್ರೀ ನಿನಗೂ ಫ್ರೀ ಅಂತ ಹೇಳಿದ್ದಾರೆ: ಶಿವಲಿಂಗೇ ಗೌಡ

    – ಆರ್ ಆಶೋಕ್ ಬಿಲ್ ಕಟ್ಟಲ್ಲ ಅಂದ್ರೆ ಬಿಡೋರು ಯಾರು

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜೋಶ್‍ನಲ್ಲಿ ನನಗೂ ಫ್ರೀ ನಿನಗೂ ಫ್ರೀ ಅಂತ ಹೇಳಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ (Shivalinge Gowda) ವ್ಯಂಗ್ಯವಾಡಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದೇವಪ್ಪ ನಿನಗೂ ಫ್ರೀ ಕರೆಂಟ್ ಎಂಬ ಸಿದ್ದರಾಮಯ್ಯರ ವೈರಲ್ ಭಾಷಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಆ ಮಾತನ್ನು ಎಚ್ ಸಿ ಮಹಾದೇವಪ್ಪಗೆ ಹೇಳಿಲ್ಲ. ಯಾವುದೋ ಮಾಹಾದೇವಪ್ಪ ಅಂದಿದ್ದು, ಅಂದ್ರೆ ಜನರಿಗೆ ಹೇಳಿದ್ದು ಎಂದರು.

    ನಾವು ಗ್ಯಾರಂಟಿ ಜಾರಿ ಮಾಡ್ತೇವೆ. ಕುಮಾರಸ್ವಾಮಿ (HD Kumaraswamy) ಅವರು ಸಾಲಮನ್ನಾ ಯೋಜನೆ ಜಾರಿ ತಂದ್ರು. ಅದು ಸರಿಯಾಗಿ ಜಾರಿ ಆಯ್ತಾ, ಸಾಲಮನ್ನಾ ಆಯ್ತಾ..?, ಇನ್ನೂ ಹಲವು ರೈತರಿಗೆ ಆ ಯೋಜನೆಯ ಸಾಲ ಮನ್ನಾ ಆಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಂತ್ಯೋದಯ, ಬಿಪಿಎಲ್ ಕಾರ್ಡ್ ಇರೋರಿಗೆ 10 ಕೆಜಿ ಅಕ್ಕಿ ಕೊಟ್ಟೇ ಕೊಡ್ತೀವಿ: ಕೆಹೆಚ್ ಮುನಿಯಪ್ಪ

    ಒಂದು ಹದಿನೈದು ದಿನ ಟೈಮ್ ಕೊಡಿ. ಮಾಡಲಿಲ್ಲ ಅಂದ್ರೆ ನಿಮ್ಮ ಜೊತೆ ನಾನು ಸೇರಿಕೊಳ್ಳುತ್ತೇನೆ. ಎಲ್ಲರಿಗೂ ಫ್ರೀ ಕೊಡಲು ಆಗಲ್ಲ. ಆರ್ ಆಶೋಕ್ ಬಿಲ್ ಕಟ್ಟಲ್ಲ ಅಂದ್ರೆ ಬಿಡೋರು ಯಾರು?. ಇವು ಬಿಪಿಎಲ್ ಕಾರ್ಡ್‍ದಾರರಿಗೆ ಕೊಡುವ ಯೋಜನೆಗಳು. ಐಎಎಸ್, ಐಪಿಎಸ್ ಅವರಿಗೆ ಅಲ್ಲ. ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಜಾರಿ ಮಾಡ್ತೇವೆ. ಐದು ವರ್ಷಗಳ ಒಳಗೆ ಜಾರಿ ಮಾಡ್ತಾರೆ. ನಾನು ಮಿನಿಸ್ಟರ್ ಆಗಬೇಕಿತ್ತು. ಎಲ್ಲ ಹಣೆ ಬರಹ ಎಂದರು.

  • ಮಾ. 5ರಂದು ಶಿವಲಿಂಗೇಗೌಡ ಕಾಂಗ್ರೆಸ್‍ಗೆ ಸೇರ್ಪಡೆ

    ಮಾ. 5ರಂದು ಶಿವಲಿಂಗೇಗೌಡ ಕಾಂಗ್ರೆಸ್‍ಗೆ ಸೇರ್ಪಡೆ

    ಹಾಸನ: ಜೆಡಿಎಸ್‍ (JDS) ನ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ದಳ ಪಕ್ಷದ ಮತ್ತೊಂದು ವಿಕೆಟ್ ಪತನವಾಗಿದೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ (K.M Shivalinge Gowda) ಕಾಂಗ್ರೆಸ್ ಸೇರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಕಳೆದ ಒಂದು ವರ್ಷದಿಂದ ಇದ್ದ ಗೊಂದಲಕ್ಕೆ ಇಂದು ತೆರೆ ಎಳೆದಿದ್ದಾರೆ.

    ಮಾರ್ಚ್ 5 ರಂದು ಅರಸೀಕೆರೆ ತಾಲೂಕಿನ ಗುತ್ತಿನಗೆರೆ ಗ್ರಾಮದಲ್ಲಿ ಆಯೋಜನೆಗೊಂಡಿರುವ ಸಂಗೊಳ್ಳಿರಾಯಣ್ಣ ಪ್ರತಿಮೆ ಉದ್ಘಾಟನೆಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಆಗಮಿಸಲಿದ್ದು, ಈ ವೇಳೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ (Congress) ಸೇರ್ಪಡೆಯಾಗಲಿದ್ದಾರೆ. ಕಳೆದ 1 ವರ್ಷದಿಂದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ರು. ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿರಲಿಲ್ಲ.

    ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬುದು ದಟ್ಟವಾಗಿ ಹಬ್ಬಿತ್ತು. ಈ ಬೆನ್ನಲ್ಲೆ ಫೆಬ್ರವರಿ 12ರಂದು ಅರಸೀಕೆರೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಹೆಚ್‍ಡಿಕೆ (HD Kumaraswamy), ಶಿವಲಿಂಗೇಗೌಡರ ವಿರುದ್ಧ ಹರಿಹಾಯ್ದಿದ್ದರು. ಬಾಣಾವರ ಅಶೋಕ್ ಎಂಬವರನ್ನು ಅಭ್ಯರ್ಥಿ ಎಂದು ಬಿಂಬಿಸಿದ್ದರು. ಅದೇ ದಿನ ರಾಯಚೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಶಿವಲಿಂಗೇಗೌಡ ಕಾಂಗ್ರೆಸ್‍ಗೆ ಬರುತ್ತಾರೆ ಎಂದಿದ್ದರು.

    ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಬಗ್ಗೆ ಪದೇ ಪದೇ ಸ್ಪಷ್ಟನೆ ನೀಡಿದ್ದ ಶಿವಲಿಂಗೇಗೌಡ, ಜೆಡಿಎಸ್ ನಾಯಕರೊಂದಿಗೆ ಭಿನ್ನಾಭಿಪ್ರಾಯ ಇರುವುದು ನಿಜ. ಆದರೆ ಅಂತಿಮವಾಗಿ ನಮ್ಮ ಕ್ಷೇತ್ರದ ಜನರು, ಬೆಂಬಲಿಗರು, ಅಭಿಮಾನಿಗಳ ಸಭೆ ಕರೆದು ತೀರ್ಮಾನ ಮಾಡುತ್ತೇನೆ. ಅವರು ಏನು ಹೇಳುತ್ತಾರೆ ಅದೇ ಅಂತಿಮ ಎಂದಿದ್ರು. ಇದನ್ನೂ ಓದಿ: ಡಿಕೆಶಿ ಭೇಟಿಯಾದ ಜೆಡಿಎಸ್‌ ಶಾಸಕ ಶಿವಲಿಂಗೇಗೌಡ – ಕಾಂಗ್ರೆಸ್‌ ಸೇರಲು ಸಿದ್ಧತೆ

    ಮಾರ್ಚ್ 5ರಂದು ಸೇರ್ಪಡೆ: ಈ ಹಿಂದೆ ಹೇಳಿದಂತೆ ಬುಧವಾರ ರಾತ್ರಿ ಶಿವಲಿಂಗೇಗೌಡರು ಅರಸೀಕೆರೆಯ ತಮ್ಮ ತೋಟದ ಮನೆಯಲ್ಲಿ ಸಾವಿರಾರು ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದು ಅಭಿಪ್ರಾಯ ಕೇಳಿದ್ರು. ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೆ ಕಾರ್ಯಕರ್ತರು ಸಹಮತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿದ ಶಾಸಕರು, ದಳಪತಿಗಳ ವಿರುದ್ಧ ಹರಿಹಾಯ್ದರು. ಇನ್ನು ಇದೇ 5 ರಂದು ಅರಸೀಕೆರೆ ತಾಲೂಕಿನ ಗುತ್ತಿನಗೆರೆ ಗ್ರಾಮಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಈ ವೇಳೆ ಶಿವಲಿಂಗೇಗೌಡ ಕಾಂಗ್ರೆಸ್ ಸೇರಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಮುಂದೆ ಕಾಂಗ್ರೆಸ್ ಸರ್ಕಾರ ಬಂದರೆ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡಿ ಎಂದು ಒತ್ತಾಯಿಸಲು ಕಾರ್ಯಕರ್ತರು ತೀರ್ಮಾನಿಸಿದ್ದಾರೆ.

    ಒಟ್ಟಿನಲ್ಲಿ ಒಂದು ವರ್ಷದಿಂದ ನಡೆಯುತ್ತಿದ್ದ ಅರಸೀಕೆರೆ ಶಾಸಕ ಕೆಎಂಶಿ ಜೆಡಿಎಸ್ ತೊರೆಯುವ ವಿಚಾರಕ್ಕೆ ಕಡೆಗೂ ತೆರೆ ಬಿದ್ದಿದ್ದು, ಈ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಜೆಡಿಎಸ್ ಮತ್ತೊಂದು ವಿಕೆಟ್ ಪತನವಾಗಿದೆ. 2023 ರ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಜೆಡಿಎಸ್‍ನ ಇಬ್ಬರು ಶಾಸಕರು ಪಕ್ಷ ತೊರೆಯುವ ಮೂಲಕ ದೊಡ್ಡ ಹೊಡೆತ ಕೊಟ್ಟಿದ್ದಾರೆ.

  • JDS ಶಾಸಕ ಶಿವಲಿಂಗೇಗೌಡರ ಕಾಂಗ್ರೆಸ್‌ ಸೇರ್ಪಡೆ ಮಾತಿನ ಆಡಿಯೋ ವೈರಲ್!

    JDS ಶಾಸಕ ಶಿವಲಿಂಗೇಗೌಡರ ಕಾಂಗ್ರೆಸ್‌ ಸೇರ್ಪಡೆ ಮಾತಿನ ಆಡಿಯೋ ವೈರಲ್!

    JDS ಶಾಸಕ ಶಿವಲಿಂಗೇಗೌಡರ ಕಾಂಗ್ರೆಸ್‌ ಸೇರ್ಪಡೆ ಮಾತಿನ ಆಡಿಯೋ ವೈರಲ್ ಆಗಿದ್ದು, ಶಿವಲಿಂಗೇಗೌಡರು ತೆನೆ ಇಳಿಸಿ ಕೈ ಹಿಡಿಯೋಕೆ ಸಿದ್ಧರಾದಂತಿದೆ. ಅಲ್ಲದೆ 50 ಸಾವಿರ ಮತಗಳ ಲೀಡ್‌ನಲ್ಲಿ ಗೆಲ್ಲುತ್ತೇನೆ ಎಂದು ಶಿವಲಿಂಗೇಗೌಡರು ಮಾತನಾಡಿದ್ದಾರೆ.

    Live TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್ ಬಿಟ್ಟು ತೆನೆ ಹೊತ್ತ ಎ.ಮಂಜು – ರೇವಣ್ಣ ವಿರುದ್ಧ ಎ.ಟಿ ರಾಮಸ್ವಾಮಿ ಬೇಸರದ ಮಾತು

    ಕಾಂಗ್ರೆಸ್ ಬಿಟ್ಟು ತೆನೆ ಹೊತ್ತ ಎ.ಮಂಜು – ರೇವಣ್ಣ ವಿರುದ್ಧ ಎ.ಟಿ ರಾಮಸ್ವಾಮಿ ಬೇಸರದ ಮಾತು

    ಹಾಸನ: ಜೆಡಿಎಸ್‍ (JDS) ನ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ಹಾಲಿ ಇಬ್ಬರು ಶಾಸಕರು ಜೆಡಿಎಸ್‍ಗೆ ಗುಡ್‍ಬೈ ಹೇಳುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಹಾಸನದಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆದಿದೆ.

    ಹಾಸನ ಜಿಲ್ಲೆ ಜೆಡಿಎಸ್‍ನಲ್ಲಿ ಅಚ್ಚರಿ ಬೆಳವಣಿಗೆ ನಡೆಯುತ್ತಿದೆ. ಹಾಸನ ಜಿಲ್ಲೆಯ ಅರಸೀಕೆರೆ, ಅರಕಲಗೂಡು ವಿಧಾನಸಭಾ ಕ್ಷೇತ್ರ (Arakalagudu vidhanasabha Constituency) ಗಳ ಹಾಲಿ ಶಾಸಕರುಗಳಾದ ಎ.ಟಿ.ರಾಮಸ್ವಾಮಿ (A.T Ramaswamy) ಹಾಗೂ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಮಧ್ಯೆ 2023ರ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ ಎ.ಮಂಜು (A Manju) ಅಂತ ಸ್ವತಃ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮತ್ತೊಂದೆಡೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಫೆ.14 ತಮ್ಮ ಹುಟ್ಟುಹಬ್ಬದ ದಿನದಂದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ 2 ವಿಕೆಟ್ ಪತನ- ಕಾಂಗ್ರೆಸ್ ಸೇರ್ತಾರಾ ಶಿವಲಿಂಗೇಗೌಡ, ಎಟಿಆರ್?

    ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಎ. ಮಂಜು ಕಣಕ್ಕಿಳಿಯಲಿದ್ದಾರೆ. ಅಲ್ಲದೇ ತಮ್ಮ ಮಗನನ್ನೂ ಜೆಡಿಎಸ್‍ಗೆ ಮಂಜು ಆಹ್ವಾನಿಸಿದ್ದಾರೆ. ಕಾಂಗ್ರೆಸ್ (Congress) ತೊರೆಯಲು ಪಕ್ಷದಲ್ಲಿನ ಕಡಗಣನೆ ಅಂತ ದೂರಿದ್ದಾರೆ. ಎ.ಮಂಜು ಜೆಡಿಎಸ್ ಸೇರ್ಪಡೆ ಬೆನ್ನಲ್ಲೇ ಅರಕಲಗೂಡು ಕ್ಷೇತ್ರದಲ್ಲಿ ಕೋಲಾಹಲ ಶುರುವಾಗಿದೆ. ಶಾಸಕ ಎ.ಟಿ.ರಾಮಸ್ವಾಮಿ ಎಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಯಿಯೇ ತನ್ನ ಮಗುವಿಗೆ ಹಾಲು ಕೊಡದೆ ವಿಷ ಕೊಟ್ಟರೆ ಮಗು ಹೇಗೆ ಬದುಕುತ್ತೆ..? ನನ್ನ ನಡೆ ಬಗ್ಗೆ. ಜನರ ತೀರ್ಮಾನಕ್ಕೆ ಬಿಟ್ಟಿದ್ದೀನಿ ಅಂತ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.

    ಜೆಡಿಎಸ್‍ನ ಭದ್ರಕೋಟೆಯಲ್ಲೇ ಹಾಲಿ ಶಾಸಕರು ಪಕ್ಷ ತೊರೆಯುತ್ತಿರುವುದು ಜೆಡಿಎಸ್ ನಾಯಕರಿಗೆ ದೊಡ್ಡ ತಲೆ ನೋವಾಗಿತ್ತು. ಆದರೆ ಅರಕಲಗೂಡು ಕ್ಷೇತ್ರಕ್ಕೆ ಎ.ಟಿ.ರಾಮಸ್ವಾಮಿ ತಂದಂತೆ, ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೂ ಅಚ್ಚರಿಯ ಅಭ್ಯರ್ಥಿ ಘೋಷಣೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಮ್ಮ ಬೆಂಬಲದಿಂದ ಗೆದ್ದ ಸದಸ್ಯರಿಗೆ ಆಣೆ ಪ್ರಮಾಣ ಮಾಡಿಸಿಕೊಂಡ್ರಾ ಶಿವಲಿಂಗೇಗೌಡ..?

    ತಮ್ಮ ಬೆಂಬಲದಿಂದ ಗೆದ್ದ ಸದಸ್ಯರಿಗೆ ಆಣೆ ಪ್ರಮಾಣ ಮಾಡಿಸಿಕೊಂಡ್ರಾ ಶಿವಲಿಂಗೇಗೌಡ..?

    ಹಾಸನ: ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ಸದಸ್ಯರನ್ನು ಜೇನುಕಲ್ ಬೆಟ್ಟದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಪ್ರಮಾಣ ಮಾಡಿಸುತ್ತಿದ್ದಾರೆ ಎಂಬ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಮ್ಮ ಬೆಂಬಲದಿಂದ ಗೆದ್ದ ಸದಸ್ಯರು, ಬೇರೆಯವರ ಬಳಿ ಹೋಗದಂತೆ ಆಣೆ ಪ್ರಮಾಣ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ದೇವಸ್ಥಾನ ಮುಂದೆ ಶಾಸಕ ಶಿವಲಿಂಗೇಗೌಡ ನಿಂತಿದ್ದು, ಅವರ ಬಳಿ ಬರುವ ಸದಸ್ಯರು ದೇವರಿಗೆ ಕರ್ಪೂರ ಹಚ್ಚಿ ನಿಮ್ಮನ್ನು ಬಿಟ್ಟು ಹೋಗಲ್ಲ ಎಂದು ಹೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚಿಗೆ ಅರಸೀಕೆರೆಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಪದೇ ಪದೇ ಶಿವಲಿಂಗೇಗೌಡ ಮತ್ತು ಸಂತೋಷ್ ನಡುವೆ ರಾಜಕೀಯವಾಗಿ ಕಿತ್ತಾಟ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಶಾಸಕರು ಆಣೆ ಪ್ರಮಾಣ ಮಾಡಿಸಿರಬಹುದೆಂಬ ಟೀಕೆ ವ್ಯಕ್ತವಾಗುತ್ತಿದೆ.

  • ಸಚಿವ ರೇವಣ್ಣಗೆ ಜೆಡಿಎಸ್ ಶಾಸಕ ಅವಾಜ್..!

    ಸಚಿವ ರೇವಣ್ಣಗೆ ಜೆಡಿಎಸ್ ಶಾಸಕ ಅವಾಜ್..!

    ಹಾಸನ: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಇಂದು ಅವಾಜ್ ಹಾಕಿದ್ದಾರೆ.

    ಹಾಸನ ಕೆಡಿಪಿ ಸಭೆಯಲ್ಲಿ ರೇವಣ್ಣ ಹಾಗೂ ಶಿವಲಿಂಗೇ ಗೌಡ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಡಿಯುವ ನೀರಿನ ಟ್ಯಾಂಕರ್ ಗೆ ಬಿಲ್ ಮಂಜೂರು ವಿಚಾರದಲ್ಲಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ.

    ಬಿಲ್ ಮಂಜೂರಿಗೂ ಮುನ್ನ ರೇವಣ್ಣ ಅವರು ಥರ್ಡ್ ಪಾರ್ಟಿ ವಿಚಾರಣೆ ಮಾಡಿ ಟ್ಯಾಂಕರ್ ಗಳಲ್ಲಿ ನೀರು ಕೊಟ್ಟು ಬಿಲ್ ಮಾಡಬೇಡಿ. ಬೋರ್ ವೆಲ್ ತೆಗೆಸಿ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಶಾಸಕರು, ಅಣ್ಣೋ.. ನನ್ನ ಮೇಲೆ ಅನುಮಾನ ಪಡುತ್ತಿದ್ದೀರಾ. ನಾನು 227 ಹಳ್ಳಿಗಳೀಗೆ ಟ್ಯಾಂಕರ್ ಗಳಲ್ಲಿ ನೀರು ಕೊಡಿಸಿದ್ದೀನಿ ಎಂದು ಯಾವನೋ ಹೇಳಿದ್ದು ಎಂದು ಏರು ಧ್ವನಿಯಲ್ಲೇ ಪ್ರಶ್ನಿಸಿದ್ದಾರೆ.

    ಅಲ್ಲದೆ ನಾನು ಒಂದು ರೂಪಾಯಿ ಹಣ ದುರುಪಯೋಗ ಮಾಡಿಲ್ಲ. ಅಧಿಕಾರಿಗಳೇನು ದನ ಕಾಯೋಕೆ ಹೋಗಿದ್ದೀರಾ. ಎಂದು ಮತ್ತೆ ಪ್ರಶ್ನಿಸಿದ ಶಾಸಕರು ಯಾರು ಹಣ ದುರುಪಯೋಗ ಮಾಡಿದ್ದಾರೆ ಅವರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಿ ಎಂದು ಅವಾಜ್ ಹಾಕಿದ್ದಾರೆ. ಶಿವಲಿಂಗೇಗೌಡ ಮಾತಿಗೆ ಸಚಿವ ರೇವಣ್ಣ ಅವರು ಒಂದು ಬಾರಿ ತಬ್ಬಿಬ್ಬಾಗಿದ್ದಾರೆ. ಬಳಿಕ ಆಯ್ತು ಶಿವಲಿಂಗಣ್ಣ ಪಾಪ ನಾಲ್ಕು ವರ್ಷದಿಂದ ಕಷ್ಟಪಟ್ಟಿದ್ದಾನೆ ಬಿಲ್ ಕೊಡಿ ಎಂದು ಅಧಿಕಾರಿಗಳಿಗೆ ರೇವಣ್ಣ ಅವರು ಸೂಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv