Tag: ಶಿವಲಿಂಗ

  • ಘಜ್ನಿಯಿಂದ ಧ್ವಂಸಗೊಂಡ ಜ್ಯೋತಿರ್ಲಿಂಗ ಮರುಸ್ಥಾಪನೆ – ಬೆಂಗಳೂರಿನಲ್ಲಿ ಅಪರೂಪದ ಶಿಲೆಯ ಶಿವಲಿಂಗ

    ಘಜ್ನಿಯಿಂದ ಧ್ವಂಸಗೊಂಡ ಜ್ಯೋತಿರ್ಲಿಂಗ ಮರುಸ್ಥಾಪನೆ – ಬೆಂಗಳೂರಿನಲ್ಲಿ ಅಪರೂಪದ ಶಿಲೆಯ ಶಿವಲಿಂಗ

    ಬೆಂಗಳೂರು: ಮಹಮ್ಮದ್ ಘಜ್ನಿಯಿಂದ  (Mohammad Ghazni) ಧ್ವಂಸಗೊಂಡ ಜ್ಯೋತಿರ್ಲಿಂಗ (Jyotirlinga) ಮರುಸ್ಥಾಪನೆ ಆಗಲಿದೆ. 1000 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಅಪರೂಪದ ಶಿಲೆಯ ಶಿವಲಿಂಗದ (Shivalinga) ಮರು ದರ್ಶನ ಆಗಿದೆ.

    ಘಜ್ನಿಯಿಂದ ಧ್ವಂಸವಾಗಿದ್ದ ಸೋಮನಾಥ ಶಿವಲಿಂಗದ (Somnath Jyotirlinga) ಒಂದು ಭಾಗ ಈಗ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿದೆ. ನೆಲಕ್ಕೆ ಸ್ಫರ್ಶಿಸದೇ ಗಾಳಿಯಲ್ಲಿ ತೇಲುವ ರೀತಿಯಲ್ಲಿದ್ದ ಅದ್ಭುತ ಮೊದಲ ಜ್ಯೋತಿರ್ಲಿಂಗ ದಾಳಿಯಲ್ಲಿ ಧ್ವಂಸ ಆಗಿತ್ತು. ಆದರೆ ದಾಳಿಯಲ್ಲಿ ಚೂರಾಗಿದ್ದ ಶಿವಲಿಂಗವನ್ನು ಅಗ್ನಿಹೋತ್ರಿ ಬ್ರಾಹ್ಮಣರು ರಕ್ಷಿಸಿದ್ರು. ಸದ್ಯ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ (Art of Living) ಶ್ರೀ ಶ್ರೀ ರವಿಶಂಕರ ಗುರೂಜಿಯ (Sri Sri Ravi Shankar) ಬಳಿ ಈ ಶಿವಲಿಂಗ ಇದೆ. ಇದನ್ನೂ ಓದಿ: ಘಜ್ನಿಯಿಂದ ಧ್ವಂಸ – ಈಗ ಮತ್ತೆ ಸೋಮನಾಥದಲ್ಲಿ ಪುನರ್ ಪ್ರತಿಷ್ಠೆಯಾಗಲಿದೆ ಜ್ಯೋತಿರ್ಲಿಂಗ!

    ಈಗ ಕಂಚಿ ಶಂಕರಾಚಾರ್ಯರ ಆಜ್ಞೆಯಂತೆ ಸೋಮನಾಥ ಜ್ಯೋತಿರ್ಲಿಂಗದ ಪುನರ್‌ ಪ್ರತಿಷ್ಟಾಪನೆಗೆ ರವಿಶಂಕರ್‌ ಗುರೂಜಿ ಸಂಕಲ್ಪ ತೊಟ್ಟಿದ್ದಾರೆ. ಮೈಸೂರು ಸೇರಿ ರಾಜ್ಯದೆಲ್ಲೆಡೆ ಈ ಮೂಲ ಶಿವಲಿಂಗದ ತುಣುಕುಗಳನ್ನು ಪ್ರದರ್ಶನಕ್ಕೆ ಇಡುತ್ತೇವೆ. ಸಾರ್ವಜನಿಕರಿಗೆ ದರ್ಶನ ಭಾಗ್ಯ ಕಲ್ಪಿಸುತ್ತೇವೆ. ರಾಮನಾಥದಿಂದ ಸೋಮನಾಥದವರೆಗೆ ಶಿವಲಿಂಗ ಕೊಂಡೊಯ್ಯಲು ತಯಾರಿ ನಡೆಸಿದ್ದೇವೆ ಎಂದು ಶ್ರೀ ಶ್ರೀ ರವಿಶಂಕರ್ ತಿಳಿಸಿದ್ದಾರೆ.

  • ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

    ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

    ಶ್ರೀನಗರ: ಭಾರೀ ಮಳೆಯಿಂದಾಗಿ ಇಂದು (ಶನಿವಾರ) ಗುಹಾ ದೇಗುಲಕ್ಕೆ ಎರಡೂ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು (Amarnath Yatra) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶುಕ್ರವಾರ ರಾತ್ರಿಯಿಂದ ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಭಾರೀ ಮಳೆ ಸುರಿದಿದೆ. ಹೀಗಾಗಿ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

    ಇದುವರೆಗೆ 1.50 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು 3,800 ಮೀಟರ್ ಎತ್ತರದ ಗುಹಾಂತರ ದೇಗುಲಕ್ಕೆ ಭೇಟಿ ನೀಡಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗದ ದರ್ಶನವನ್ನು ಪಡೆದಿದ್ದಾರೆ. ಸುಮಾರು 4.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಕಳೆದ ವರ್ಷ ಗುಹಾ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ಆಗಸ್ಟ್ 19 ರವರೆಗೆ ಯಾತ್ರೆ ಮುಂದುವರಿಯಲಿದೆ. ಯಾತ್ರೆಯ ಮೊದಲ ವಾರದಲ್ಲಿ ದಾಖಲೆಯ 1.51 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದರು. ಆದರೆ ಸದ್ಯ ಪವಿತ್ರ ಗುಹೆಯಲ್ಲಿನ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕರಗಿದ ಕಾರಣ ಈಗಷ್ಟೇ ಬಂದಿರುವ ಯಾತ್ರಿಕರು ನಿರಾಶೆಗೊಂಡಿದ್ದಾರೆ.

    ಕಳೆದ ಒಂದು ವಾರದಲ್ಲಿ ಅತಿ ಹೆಚ್ಚು ತಾಪಮಾನದಿಂದಾಗಿ ಶಿವಲಿಂಗ ಕರಗುವ ಪ್ರಕ್ರಿಯೆಯು ವೇಗಗೊಂಡಿದೆ. 2008 ರ ನಂತರ ಯಾತ್ರೆಯ ಮೊದಲ 10 ದಿನಗಳಲ್ಲಿ ಮಂಜುಗಡ್ಡೆಯ ಶಿವಲಿಂಗವು ಸಂಪೂರ್ಣವಾಗಿ ಕಣ್ಮರೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ನೆರವೇರಿಸಿದ ಹಿಂದೂಗಳು

    ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ನೆರವೇರಿಸಿದ ಹಿಂದೂಗಳು

    – ಮಧ್ಯಾಹ್ನದವರೆಗೆ ಇತ್ತು ನಮಾಜ್‍ಗೆ ಅವಕಾಶ

    ಕಲಬುರಗಿ: ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ (Ladle Mashak Dargah Aland) ಮುಸ್ಲಿಮರ ಪ್ರಾರ್ಥನೆಯ ಬಳಿಕ ಇದೀಗ ಶಿವಲಿಂಗ ಪೂಜೆಯನ್ನು ನೆರವೇರಿಸಲಾಗಿದೆ.

    ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ನಿಮಿತ್ತ ಪೂಜೆಗೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನಲೆ ಇಂದು ಸಂಜೆ ಆಂದೋಲಾ ಶ್ರೀಗಳ ನೇತೃತ್ವದಲ್ಲಿ 15 ಮಂದಿ ಹಿಂದೂಗಳು ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. ರುದ್ರಾಭಿಷೇಕ, ಗಣೇಶ ಪೂಜೆ, ಗಂಗಾ ಪೂಜೆ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಹೀಗೆ ಸುಮಾರು 1 ಗಂಟೆಗಳ ಕಾಲ ಶಿವಲಿಂಗಕ್ಕೆ ಪೂಜೆ ನೆರವೇರಿದೆ.

    ಪೂಜೆ ಬಳಿಕ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ಪ್ರತಿಕ್ರಿಯಿಸಿ, ನಾವು ಸತತ ಮೂರು ವರ್ಷದಿಂದ ಸಹ ರಾಘವ ಚೈತನ್ಯ ಪೂಜೆ ಮಾಡಿದ್ದೇವೆ. ದುರಂತ ಅಂದ್ರೆ ನಮ್ಮ ಧರ್ಮದ ಶಿವಲಿಂಗ ಪೂಜೆಗೆ ನ್ಯಾಯಾಲಯಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ನ್ಯಾಯಾಲಯಕ್ಕೆ ನಾನು ಅಭಿನದಂನೆ ಸಲ್ಲಿಸುತ್ತೇನೆ. ನಮ್ಮ ಹೋರಾಟ ಈಗ ನಿರಂತರ ಆಗಿರುತ್ತದೆ. ಕೆಲ ಜಿಹಾದಿ ಮನಸ್ಥಿತಿ ಇರುವ ಹಿನ್ನೆಲೆ ಇಷ್ಟು ಬಂದೋಬಸ್ತ್ ಮಾಡಬೇಕಾಗುತ್ತದೆ. ರಾಘವ ಚೈತನ್ಯರ ಇತಿಹಾಸ ತೆಗೆದು ನ್ಯಾಯಾಲಯದಲ್ಲಿ ಸಲ್ಲಿಸಿ ದೇವಾಲಯ ನಿರ್ಮಾಣ ಮಾಡಲು ಅನುಮತಿಗೆ ಹೋರಾಟ ನಡೆಸುತ್ತೇವೆ ಎಂದರು. ಇದನ್ನೂ ಓದಿ: Congress 1st Lok Sabha List: ಮತ್ತೆ ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗಿಳಿದ ರಾಗಾ!

    ಇತ್ತ ಮುಸ್ಲಿಮರಿಗೂ ಸಹ 12.30 ರಿಂದ 3.30ರವರೆಗೆ ಪ್ರಾರ್ಥನೆಗೆ ಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ಅಹಿತಕರ ಘಟನೆ ನಡೆಯದಂತೆ ದರ್ಗಾದ ಸುತ್ತಲೂ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ 12 ಮಂದಿ ಮುಸ್ಲಿಮರು ಲಾಡ್ಲೆ ಮಶಾಕ್ ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ವಾಪಸ್ ಆಗಿದ್ದಾರೆ. ಪ್ರಾರ್ಥನೆ ಬಳಿಕ ದರ್ಗಾ ಕಮಿಟಿಯ ಅಧ್ಯಕ್ಷ ಮೋಯಿಜ್ ಅನ್ಸರಿ, ಮೊಹಮದ್ ಅಫಜಲ್ ಅನ್ಸಾರಿ ಪ್ರತಿಕ್ರಿಯಿಸಿ, ನಮಗೆ ಹಾಗೂ ಹಿಂದೂಗಳಿಗೆ 15 ಜನರಂತೆ ಪ್ರಾರ್ಥನೆ ಹಾಗೂ ಪೂಜೆ ಕೋರ್ಟ್ ಆದೇಶ ನೀಡಿತ್ತು. ಅದರಂತೆ ನಾವು ಇಂದು 12 ಮಂದಿ ಪ್ರಾರ್ಥನೆ ಮಾಡಿ ವಾಪಸ್ ಬಂದಿದ್ದೇವೆ. ನಾವು ಆಳಂದನಲ್ಲಿ ಹಿಂದೂ-ಮುಸ್ಲಿಮರು ಎಲ್ಲರೂ ಅಣ್ಣ-ತಮ್ಮರ ಹಾಗೆ ಇದ್ದೇವೆ. ಆದರೆ ಕೆಲವರ ರಾಜಕೀಯದಿಂದ ಗಲಾಟೆ ಆಗಿ ಇವಾಗ ಪೊಲೀಸ್ ಭದ್ರತೆ ನೀಡಬೇಕಾಗಿದೆ ಎಂದರು.

    ನಾವು ಎಲ್ಲರು ಒಂದಾಗೆ ಇದ್ದೇವೆ. ಮತ್ತೆ ಒಟ್ಟಿಗೆ ಇರುತ್ತೇವೆ. ಆದರೆ ಇವಾಗ ಚುನಾವಣೆ ಬರ್ತಿದೆ, ಹಾಗಾಗಿ ಇಲ್ಲದೊಂದು ಸಮಸ್ಯೆ ಕ್ರಿಯೇಟ್ ಮಾಡ್ತಾರೆ. ಆದರೆ ಆಳಂದನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

  • Shivaratri Speical: ಶಿವಭಕ್ತಿಗೆ ಒಲಿದ ಆಸ್ಟ್ರೇಲಿಯಾ – ಮುಕ್ತಿ ಗುಹೇಶ್ವರ ದೇವಾಲಯದಲ್ಲಿ ಹಲವು ವಿಶೇಷ!

    Shivaratri Speical: ಶಿವಭಕ್ತಿಗೆ ಒಲಿದ ಆಸ್ಟ್ರೇಲಿಯಾ – ಮುಕ್ತಿ ಗುಹೇಶ್ವರ ದೇವಾಲಯದಲ್ಲಿ ಹಲವು ವಿಶೇಷ!

    ದೇವಸ್ಥಾನ: ಮುಕ್ತಿ ಗುಹೇಶ್ವರ ದೇವಾಲಯ (ಶಿವದೇವಾಲಯ)
    ಸ್ಥಳ: ಮಿಂಟೋ, ಆಸ್ಟ್ರೇಲಿಯಾ
    ಪ್ರವೇಶ: ಉಚಿತ
    ಪ್ರವೇಶ ಸಮಯ: ಬೆಳಗ್ಗೆ 10 ರಿಂದ 12 ಗಂಟೆ
    ಸಂಜೆ 5 ರಿಂದ 7 ಗಂಟೆ
    ವಾರಾಂತ್ಯ & ರಜಾದಿನಗಳಲ್ಲಿ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆ
    ಭೇಟಿಗೆ ಸೂಕ್ತ ಸಮಯ: ಫೆಬ್ರವರಿಯಿಂದ ಮಾರ್ಚ್ ಮಹಾ ಶಿವ ರಾತ್ರಿ ಅಥವಾ ಮಾರ್ಚ್ ನಿಂದ ಏಪ್ರಿಲ್ ಗಣೇಶ ಚತುರ್ಥಿಯ ಸಮಯ.

    `ಜಟೆಯಲ್ಲಿ ಕಟ್ಟಿದ ನದಿಯ, ತಲೆಯಲ್ಲಿ ಮುಡಿದ ಶಶಿಯ, ಕಣ್ಣೊಳಗೆ ಉರಿವಾ ಬೆಂಕಿಯಾ, ಬಚ್ಚಿಟ್ಟುಕೊಂಡು ನಗುವಾ ನಮ್ಮ ಶಿವನಾ ಕಂಡೆಯಾ, ಅಮ್ಮಮ್ಮ ಅವನಾ ಮಹಿಮೆಯನು ನೀನೂ ಬಲ್ಲೆಯಾ…’ 982ರಲ್ಲಿ ತೆರೆಕಂಡ ಚೆಲ್ಲಿದರಕ್ತ ಸಿನಿಮಾದ ಈ ಗೀತೆಯಲ್ಲಿ ಶಿವನ ಮಹಿಮೆಯನ್ನು ಹಾಡಿಹೊಗಳಿದ್ದಾರೆ. ಭಾರತದಲ್ಲಿ ಶಿವನಿಲ್ಲದ (Lord Shiva) ಊರೇ ಇಲ್ಲ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಿರ್ಮಾಣಗೊಂಡಿರುವ ದೇವಾಲಯಗಳು ಒಂದಕ್ಕಿಂದ ಒಂದು ಮೀರಿಸಿದಂತಿವೆ. ಭಾರತದಲ್ಲಿ ಮಾತ್ರವಲ್ಲದೇ ಪಾಕಿಸ್ತಾನನದ ಪಂಜಾಬ್, ಆಸ್ಟ್ರೇಲಿಯಾದ ಮಿಂಟೋ, ನೇಪಾಳದ ಕಠ್ಮಂಡು, ಶ್ರೀಲಂಕಾದಲ್ಲಿಯೂ, ಮಾರಿಶಸ್‌ಗಳಲ್ಲು ಶಿವನ ಅದ್ಧೂರಿ ದೇವಾಲಗಳು ನೆಲೆಯೂರಿದ್ದು, ಇಂದಿಗೂ ಅವರು ಶಿವನ ಭಕ್ತಿಯನ್ನು ಜನರಿಗೆ ಸಾರುತ್ತಿವೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ನಿರ್ಮಾಣಗೊಂಡಿರುವ ಮುಕ್ತಿ ಗುಹೇಶ್ವರ ದೇವಾಲಯ (Mukti Gupteshwar Mandir) ಜನಮನ ಸೆಳೆದಿದೆ.

    ಸಿಡ್ನಿಯ ಹೊರವಲಯದಲ್ಲಿರುವ ಮಿಂಟೋ ಎಂಬ ನಗರದಲ್ಲಿ (Minto City) 1999ರಲ್ಲಿ ಈ ದೇವಾಲಯದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಸುಮಾರು 15 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಗುಹಾದೇವಾಲಯ ನಿರ್ಮಾಣಗೊಂಡಿದೆ. ಹೆಸರೇ ಹೇಳುವಂತೆ ಈ ದೇವಾಲಯ ಗುಹೆಯಲ್ಲಿ ಇದೆ. ಈ ಅಪೂರ್ವ ದೇವಾಲಯದ ನೆಲದ ಮೇಲೆ ಇರುವುದು ಗಣೇಶನ ಒಂದು ಗುಡಿ ಮಾತ್ರ. ಉಳಿದವು ಮೆಟ್ಟಿಲುಗಳನ್ನು ಇಳಿದು ಭೂಗತ ಶಿವದೇವಾಲಯಕ್ಕೆ ಹೋಗಬೇಕಾಗುತ್ತದೆ.

    65,000 ಘನ ಮೀಟರ್‌ನಷ್ಟು ಮಣ್ಣನ್ನು ಕೊರೆದು, ನೆಲದಡಿಯಲ್ಲಿ ಗುಹೆಗಳನ್ನು ರೂಪಿಸಿ, ಅದರೊಳಗೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇಂದಿಗೂ ಜಗತ್ತಿನ ಏಕಮಾತ್ರ ಮಾನವ ನಿರ್ಮಿತ ಗುಹಾ ದೇವಾಲಯ ಎಂಬುದು ಇದರ ಖ್ಯಾತಿ. ಇದನ್ನೂ ಓದಿ: ಅಯೋಧ್ಯೆ ಮಾದರಿ ಮಹಾಶಿವರಾತ್ರಿಗೆ ಶಿವಶರಣರ ನಾಡು ಅಣಿ

    ನೇಪಾಳದ (Nepal) ರಾಜಮನೆತನದ ಬಳಿ ಒಂದು ಪ್ರಾಚೀನ ಶಿವಲಿಂಗವಿತ್ತು. ಈ ಶಿವಲಿಂಗವು ಭಾರತದ 12 ಜ್ಯೋತಿರ್ಲಿಂಗಗಳ ಜೊತೆಗೆ 13ನೇ ಮತ್ತು ಕೊನೆಯ ಜ್ಯೋತಿರ್ಲಿಂಗ ಎಂದು ಹೇಳಲಾಗಿದೆ. ಜ್ಯೋತಿರ್ಲಿಂಗದ ಜೊತೆಗೆ 7996 ಶ್ಲೋಕಗಳ 8 ಸಂಪುಟಗಳ ವಿಶೇಷ ಗ್ರಂಥವನ್ನೂ ಇಲ್ಲಿ ಇರಿಸಲಾಗಿದೆ. ಈ ಶಿವಲಿಂಗವನ್ನು ದಕ್ಷಿಣ ಗೋಳಾರ್ಧದಲ್ಲಿ ಹೆಬ್ಬಾವಿನ ಮುಖದ ಬಳಿ ಸ್ಥಾಪಿಸಬೇಕೆಂದು ಈ ಶ್ಲೋಕಗಳು ನಿಗದಿಸಿದ್ದವು. ಇದರಲ್ಲಿ ವಿವರಿಸಿದ ಲಕ್ಷಣಗಳ ಆಧಾರದಲ್ಲಿ ಆಸ್ಟ್ರೇಲಿಯಾದಲ್ಲಿ ಜಾಗ ಹುಡುಕಿ ಅದರಂತೆಯೇ ಲಿಂಗವನ್ನು ನಿರ್ಮಿಸಲಾಯಿತು.

    1999ರಲ್ಲಿ ನೇಪಾಳದ ಆಗಿನ ರಾಜ ಬೀರೇಂದ್ರ ಬೀರ್ ಬಿಕ್ರಮ್ ಶಾ ದೇವ್ (Birendra Bir Bikram Shah Dev) ಅವರು ಆಸ್ಟ್ರೇಲಿಯಾದ ಹಿಂದೂ ಭಕ್ತರಿಗೆ ಈ ಶಿವಲಿಂಗವನ್ನು ಕಾಣಿಕೆಯಾಗಿ ನೀಡಿದರು. ಅಲ್ಲಿ ಈ ಶಿವಲಿಂಗಕ್ಕಾಗಿ ಒಂದು ಬೃಹತ್ ಗುಹಾ ದೇವಾಲಯ ನಿರ್ಮಾಣದ ಯೋಜನೆ ತಯಾರಿಸಲಾಗಿತ್ತು. ಸುಮಾರು 15 ಸಾವಿರ ಚದರಡಿ ವ್ಯಾಪ್ತಿಯ ಈ ಗುಹಾದೇವಾಲಯದಲ್ಲಿ 13ನೇ ಜ್ಯೋತಿರ್ಲಿಂಗದ ಜೊತೆಗೆ ಉಳಿದ 12 ಜ್ಯೋತಿರ್ಲಿಂಗಗಳ ಪ್ರತಿಕೃತಿಗಳಿವೆ, ಕೃಷ್ಣಶಿಲೆಯಲ್ಲಿ ರಚಿಸಿದ 108 ಶಿವಲಿಂಗಗಳಿವೆ.

    ಗರ್ಭಗುಡಿಯಲ್ಲಿ ಶಿವಲಿಂಗದ ಸಮೀಪ 10 ಮೀಟರ್ ಆಳದ ಪೆಟಾರಿಯನ್ನು (ಮರದಲ್ಲಿ ತಯಾರಿಸಲಾದ ಪೆಟ್ಟಿ) ನೆಲದೊಳಗೆ ಹೂಳಲಾಗಿದೆ. ಇದರೊಳಗೆ ಆಸ್ಟ್ರೇಲಿಯಾದ ಭಕ್ತಸಮುದಾಯ 21 ಲಕ್ಷ ಬಾರಿ ಕೈಯಲ್ಲೇ ಬರೆದ `ಓಂ ನಮಃ ಶಿವಾಯ’ ಮಂತ್ರದ ಪುಟಗಳಿವೆ. ಇಂದಿಗೂ ಕೋಟ್ಯಂತರ ಹಿಂದೂ ಭಕ್ತರು ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ವಿದೇಶಿಗರೂ ಸಹ ಇಲ್ಲಿಗೆ ಭೇಟಿ ನೀಡಿ ಪೂಜೆ, ಹರಕೆ ತೀರಿಸುತ್ತಾರೆ ಎಂಬುದು ವಿಶೇಷ.

    ಶಿವದೇವಾಲಯದಲ್ಲಿ ಆಚರಿಸಲಾಗುವ ಹಬ್ಬಗಳು: ಆಸ್ಟ್ರೇಲಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಶಿವದೇವಾಲಯದಲ್ಲಿ ಮಹಾಶಿವರಾತ್ರಿ, ಗಣೇಶ ಚತುರ್ಥಿ, ರಾಮನವಮಿ, ಶ್ರಾವಣಮಾಸದಂದು ಅದ್ಧೂರಿ ಪೂಜಾ ಕೈಂಕರ್ಯಗಳು ನೆರವೇರುತ್ತವೆ.

  • ಕೃಷ್ಣಾ ನದಿಯಲ್ಲಿ ಸಿಕ್ಕ ಶಿವಲಿಂಗ, ವಿಷ್ಣುವಿನ ವಿಗ್ರಹಕ್ಕೆ ಅಂತಾರಾಜ್ಯ ಪೈಪೋಟಿ

    ಕೃಷ್ಣಾ ನದಿಯಲ್ಲಿ ಸಿಕ್ಕ ಶಿವಲಿಂಗ, ವಿಷ್ಣುವಿನ ವಿಗ್ರಹಕ್ಕೆ ಅಂತಾರಾಜ್ಯ ಪೈಪೋಟಿ

    ರಾಯಚೂರು: ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ (Krishna River) ದೊರೆತ ಪುರಾತನ ವಿಷ್ಣು ಮೂರ್ತಿಗಳು ಹಾಗೂ ಶಿವಲಿಂಗ ವಿಗ್ರಹಗಳು ಪುರಾತತ್ವ ಇಲಾಖೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹೀಗಾಗಿ ರಾಜ್ಯ ಹಾಗೂ ತೆಲಂಗಾಣದ (Telangana) ಅರ್ಚಕರು ಹಾಗೂ ಭಕ್ತರು ವಿಗ್ರಹಗಳು ನಮಗೆ ಸೇರಿದ್ದು ಅಂತ ಪೈಪೋಟಿ ನಡೆಸಿದ್ದಾರೆ.

    ಅಯೋಧ್ಯೆಯಲ್ಲಿ ಬಾಲರಾಮನ (Ayodhya Ram Mandir) ವಿನ್ಯಾಸ ಹೋಲುವ ದಶವತಾರಿ ವಿಷ್ಣುರೂಪದ ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನ ಮಾತ್ರ ದೇವಸುಗೂರಿನ ರಾಮಲಿಂಗೇಶ್ವರ ದೇವಾಲಯದಲ್ಲಿ ಇಡಲಾಗಿದೆ. ಉಳಿದ ಎರಡು ವಿಗ್ರಹಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಕೃಷ್ಣಾನದಿಯಲ್ಲೆ ಬಿಡಲಾಗಿದೆ. ನದಿಯಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು, ಜನ ಕಾಲುದಾರಿಯಲ್ಲಿ ಬಂದು ವಿಗ್ರಹಗಳ ದರ್ಶನ ಪಡೆಯುತ್ತಿದ್ದಾರೆ. ದಶವತಾರಿ ವಿಷ್ಣು ವಿಗ್ರಹಕ್ಕೆ ಮಾತ್ರ ಪೈಪೋಟಿಯಿದ್ದು ಶಿವಲಿಂಗ ಹಾಗೂ ಇನ್ನೊಂದು ವಿಷ್ಣು ವಿಗ್ರಹ ಪತ್ತೆಯಾದ ಜಾಗದಲ್ಲೇ ಉಳಿದಿವೆ.

    ಕೃಷ್ಣಾ ನದಿಯಲ್ಲಿ ದೊರೆತ ಮೂರ್ತಿಗಳು 11ನೇ ಶತಮಾನಕ್ಕೆ ಸೇರಿದ ಮೂರ್ತಿಗಳು ಎನ್ನಲಾಗಿದೆ. ಇದುವರೆಗೂ ಪುರಾತತ್ವ ಇಲಾಖೆ ವಿಗ್ರಹಗಳ ಸಂರಕ್ಷಣೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ನದಿಯಲ್ಲಿ ದೊರೆತ ಐತಿಹಾಸಿಕ ಮೂರ್ತಿಗಳನ್ನ ಸಂರಕ್ಷಿಸಬೇಕು ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನ ಕೃಷ್ಣಾ ನದಿಯಲ್ಲಿ ಶಿವಲಿಂಗ, ವೆಂಕಟೇಶ್ವರ ಮೂರ್ತಿಗಳು ಪತ್ತೆ

  • ಹರಕೆ ಈಡೇರಿಸುವಂತೆ ಶಿವಲಿಂಗದ ಮೇಲೆ ಕೋರಿಕೆ ಬರೆದ ವಿದ್ಯಾರ್ಥಿ!

    ಹರಕೆ ಈಡೇರಿಸುವಂತೆ ಶಿವಲಿಂಗದ ಮೇಲೆ ಕೋರಿಕೆ ಬರೆದ ವಿದ್ಯಾರ್ಥಿ!

    ಕಾರವಾರ: ದೇವರಲ್ಲಿ ಒಳಿತಿಗಾಗಿ ಹರಕೆ ಕಟ್ಟಿಕೊಳ್ಳುವುದು ಸಾಮಾನ್ಯ. ಆದರೆ ಉತ್ತರ ಕನ್ನಡದ (Uttara Kannada) ಶಿರಸಿಯಲ್ಲಿ ಪಿಯುಸಿ ವಿದ್ಯಾರ್ಥಿ (PUC Student) ತನಗೆ ಉತ್ತಮ ಅಂಕ ನೀಡಿ ರ‍್ಯಾಂಕ್‌ನಲ್ಲಿ ಉತ್ತೀರ್ಣ ಮಾಡಬೇಕು ಎಂದು ಕೋರಿಕೆ ಈಡೇರಿಕೆಗಾಗಿ ದೇವರ ಶಿರದಮೇಲೆಯೇ ಬರೆದು ಪೊಲೀಸರ ಅತಿಥಿಯಾಗಿದ್ದಾನೆ.

    ಫೆ.4 ರಂದು ಶಿರಸಿಯ ನರಬೈಲ್ ಗ್ರಾಮದ ಪ್ರಸಿದ್ದ ಸೋಮೇಶ್ವರ ದೇವಸ್ಥಾನದ ಶಿವಲಿಂಗದ (Shivalinga) ಮೇಲೆ ಇಂಗ್ಲಿಷ್‌ನಲ್ಲಿ ಜೆ.ಇ 2024,2026 ಎಂದು ಬರೆಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವಸ್ಥಾನದ ಮುಂಭಾಗದಲ್ಲಿ ಇದ್ದ ಸಿಸಿ ಕ್ಯಾಮರಾವನ್ನು ಪರಿಶಿಲಿಸಿದ್ದಾರೆ. ಇದನ್ನೂ ಓದಿ: ದೇಶವನ್ನು ಇನ್ನೆಷ್ಟು ಭಾಗವಾಗಿ ಒಡೆಯುತ್ತೀರಿ: ಡಿ.ಕೆ.ಸುರೇಶ್‌ ಹೇಳಿಕೆಗೆ ಮೋದಿ ಕಿಡಿ

    ತನಿಖೆಯ ವೇಳೆ ಕೆ.ಹೆಚ್. ಬಿ ಕಾಲೋನಿಯ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿ ಬರೆದಿರುವ ವಿಚಾರ ತಿಳಿಯಲ್ಪಟ್ಟಿತ್ತು. ವಿಚಾರಣೆ ನಡೆಸಿದಾಗ ಈತ ಪಿಯುಸಿ ಮೊದಲ ವರ್ಷದಲ್ಲಿ 98% ಅಂಕ ಪಡೆದು ಉತ್ತೀರ್ಣನಾಗಿದ್ದ. ದೇವರ ಮೇಲೆ ಅತೀವ ಭಕ್ತಿ ಹೊಂದಿದ್ದ ಈತ ಜೆ.ಇ ಪರೀಕ್ಷೆ ಕಟ್ಟಿದ್ದ. ಆದರೆ ಫಲಿತಾಂಶದಲ್ಲಿ ಹೆಚ್ಚು ಅಂಕ ಬಾರದ ಕಾರಣ ಹೀಗೆ ಬರೆದಿದ್ದೇನೆ ಎಂದು ಹೇಳಿದ್ದಾನೆ. ಆರೋಪಿ ಅಪ್ರಾಪ್ತ ಬಾಲಕನಾದ ಕಾರಣ ಬಾಲಸ್ನೇಹಿ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಲಾಗಿದೆ.

     

  • ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ

    ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ

    ಅಯೋಧ್ಯೆ: ರಾಮ ಮಂದಿರದಲ್ಲಿ (Ram Mandir) ರಾಮ ಪ್ರಾಣ ಪ್ರತಿಷ್ಠೆ ನಡೆಯುವ ಮೊದಲು ಅಯೋಧ್ಯೆಯ (Ayodhya) ಸರಯೂ ನದಿ ದಂಡೆಯಲ್ಲಿ 1008 ಶಿವಲಿಂಗಗಳನ್ನು ಸ್ಥಾಪಿಸುವ ಭವ್ಯವಾದ ರಾಮನಾಮ ಮಹಾ ಯಜ್ಞ (Ram Naam Maha Yagya) ಜನವರಿ 14 ರಿಂದ ಜನವರಿ 25 ರವರೆಗೆ ನಡೆಯಲಿದೆ.

    ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ನೇಪಾಳದಿಂದ 21,000 ಯತಿಗಳು ಆಗಮಿಸಲಿದ್ದಾರೆ. ಮಹಾಯಾಗವನ್ನು ನಡೆಸಿ, ಅದರಲ್ಲಿ ಶಿವಲಿಂಗಗಳನ್ನು (Shiva Linga) ಇರಿಸಲು ಈಗಾಗಲೇ 1008 ಯಜ್ಞ ಮಂಟಪವನ್ನು ನಿರ್ಮಿಸಲಾಗಿದೆ. ಈ ಪೈಕಿ ದೊಡ್ಡ ಯಾಗ ಶಾಲೆಯ ಛಾವಣಿ 11 ಪದರಗಳನ್ನು ಹೊಂದಿರುವುದು ವಿಶೇಷ.  ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದ ವಿಶೇಷ ಸುದ್ದಿಗಳನ್ನು ಓದಲು ಕ್ಲಿಕ್‌ ಮಾಡಿ: ರಾಮ ಮಂದಿರ

    ರಾಮಮಂದಿರದಿಂದ 2 ಕಿ.ಮೀ ದೂರದಲ್ಲಿರುವ ಸರಯೂ ನದಿಯ (Sarayu River) ಮರಳು ಘಾಟ್‌ನಲ್ಲಿರುವ 100 ಎಕರೆ ಪ್ರದೇಶದಲ್ಲಿ ಈ ಯಜ್ಞ ಮಂಟಪಗಳನ್ನು ಸ್ಥಾಪಿಸಲಾಗಿದೆ.

    ಅಯೋಧ್ಯೆ ಮೂಲದ ಈಗ ನೇಪಾಳದಲ್ಲಿ (Nepal) ನೆಲೆಸಿರುವ ಆತ್ಮಾನಂದ ದಾಸ್ ಮಹಾತ್ಯಾಗಿ(ನೇಪಾಳಿ ಬಾಬಾ) ಅವರು ಈ ಯಾಗವನ್ನು ಆಯೋಜಿಸಿದ್ದಾರೆ. ಪ್ರತಿ ವರ್ಷದ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನಾನು ಈ ಯಾಗವನ್ನು ಮಾಡುತ್ತೇನೆ. ಆದರೆ ಈ ವರ್ಷ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಯಜ್ಞ ಮಂಟಪಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ ಎಂದು ಹೇಳಿದರು.  ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 KM ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

    ಈ ಯಾಗದಲ್ಲಿ ಪ್ರತಿದಿನ 50 ಸಾವಿರ ಭಕ್ತರಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು, ದಿನಕ್ಕೆ ಸುಮಾರು 1 ಲಕ್ಷ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಮಹಾ ಯಾಗ ಮುಗಿದ ನಂತರ 1008 ಶಿವಲಿಂಗಗಳನ್ನು ಸರಯೂ ನದಿಯಲ್ಲಿ ವಿಸರ್ಜಿಸಲಾಗುತ್ತದೆ.

    ಜನವರಿ 17 ರಿಂದ 24,000 ರಾಮಾಯಣದ ಶ್ಲೋಕಗಳ ಪಠಿಸಲಾಗುತ್ತದೆ. ಪ್ರತಿದಿನ 1008 ಶಿವಲಿಂಗಗಳಿಗೆ ಅಭಿಷೇಕ ನಡೆಯಲಿದೆ. ಶಿವಲಿಂಗಗಳ ಕೆತ್ತನೆಗಾಗಿ ಮಧ್ಯಪ್ರದೇಶದ ನರ್ಮದಾ ನದಿಯಿಂದ ಕಲ್ಲುಗಳನ್ನು ತರಲಾಗಿದೆ ಎಂದು ನೇಪಾಳಿ ಬಾಬಾ ಹೇಳಿದರು.  ಇದನ್ನೂ ಓದಿ: ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?

  • ಕೊಡಗಿನ ಕುಂದಬೆಟ್ಟದ ತಪ್ಪಲಿನಲ್ಲಿ ಪಾಂಡವರ ಕಾಲದ ಶಿವಲಿಂಗ ಪತ್ತೆ

    ಕೊಡಗಿನ ಕುಂದಬೆಟ್ಟದ ತಪ್ಪಲಿನಲ್ಲಿ ಪಾಂಡವರ ಕಾಲದ ಶಿವಲಿಂಗ ಪತ್ತೆ

    ಮಡಿಕೇರಿ: ದಕ್ಷಿಣ ಕೊಡಗಿನ (Kodagu) ಕುಂದ ಗ್ರಾಮದ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಪಾಂಡವರ (Pandavas) ಕಾಲದ್ದು ಎನ್ನಲಾದ 4 ಅಡಿ ಎತ್ತರದ ಶಿವಲಿಂಗವೊಂದು (Shivalinga) ಪತ್ತೆಯಾಗಿದೆ.

    ಗ್ರಾಮದ ಕಿಲನ್ ಗಣಪತಿ ಹಾಗೂ ಸಹೋದರ ದರ್ಶನ್ ಅವರ ಕಾಫಿ ತೋಟದಲ್ಲಿ ಬೃಹತ್ ಮರದ ಬುಡದಲ್ಲಿ ಈ ಶಿವಲಿಂಗ ಪತ್ತೆಯಾಗಿದೆ. ಸುಮಾರು 800 ವರ್ಷ ಇತಿಹಾಸವುಳ್ಳ ಗುಮ್ಮಟ್ಟಿರ ಕುಟುಂಬದ ಜಾಗದಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದ್ದು, ಕುಟುಂಬಸ್ಥರು ಸಂತೋಷಗೊಂಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ನನ್ನನ್ನು ಆಹ್ವಾನಿಸಿಲ್ಲ: ಡಿ.ಕೆ ಶಿವಕುಮಾರ್

    ಗೋಳಿಮರದ ಅಡಿಯಲ್ಲಿ ಈ 4 ಅಡಿ ಎತ್ತರದ 3 ಅಡಿ ಅಗಲದ ಪುರಾತನ ಕಾಲದ ಬೃಹತ್ ಶಿವಲಿಂಗ ಪತ್ತೆಯಾಗಿರುವುದರಿಂದ ಇದು ಅಪಾರವಾದ ಶಕ್ತಿಯನ್ನು ಹೊಂದಿರುವುದಾಗಿ ಸ್ಥಳಕ್ಕಾಗಮಿಸಿದ ಹಿರಿಯ ಅರ್ಚಕರು ಹಾಗೂ ಗುಮ್ಮಟ್ಟಿರ ಕುಟುಂಬದ ಹಿರಿಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಶಿವಲಿಂಗದೊಂದಿಗೆ ತೀರ್ಥನಳ, ಆನೆಸ್ತಂಭ, ಕಲ್ಲಿನ ಇಟ್ಟಿಗೆಗಳು, ಸೋಮಸೂತ್ರ, ಪಾಣಿಪೀಠ ಸೇರಿದಂತೆ ಲಿಂಗದ ಕೆಳಗೆ ಹಾಸಿದ್ದ ಚಪ್ಪಡಿ ಕಲ್ಲುಗಳು ದೊರೆತಿವೆ. ಇತಿಹಾಸ ಪ್ರಸಿದ್ಧ ಕುಂದ ಬೆಟ್ಟದ ಈಶ್ವರ ದೇವಾಲಯದಿಂದ ಸ್ವಲ್ಪ ಅಂತರದಲ್ಲಿ ಈ ಶಿವಲಿಂಗ ಪತ್ತೆಯಾಗಿದೆ. ಪಾಂಡವರು ಈ ಭಾಗದಲ್ಲಿ ಸಂಚರಿಸುವ ವೇಳೆ ಶಿವನ ಪೂಜೆಗಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರು ಎಂದು ಕಾರ್ಕಳದ ಶಿಲ್ಪಿಗಳಾದ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

    ಮಣ್ಣಿನ ಅಡಿಯಲ್ಲಿ ಲಭಿಸಿರುವ ಶಿವಲಿಂಗದ 2 ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಆಗಿನ ಕಾಲದ ಬಿಳಿಕಲ್ಲಿನಿಂದ ಹಾಗೂ ಕಾಡು ಸವಕಲ್ಲಿನಿಂದ ಈ ಶಿವಲಿಂಗ ಮಾಡಲಾಗಿದೆ. ಶಿವಲಿಂಗ ಪತ್ತೆಯಾದ ಸ್ಥಳದಿಂದ ಅನತಿ ದೂರದ ಎತ್ತರದ ಕುಂದಬೆಟ್ಟದಲ್ಲಿ ಇಂದಿಗೂ ಶಿವನು ನೆಲೆಸಿರುವ, ಒಂದೇ ರಾತ್ರಿಯಲ್ಲಿ ಕಟ್ಟಿರುವ ಬಾಗಿಲು ಇಲ್ಲದಿರುವ ಕಲ್ಲಿನ ದೇವಸ್ಥಾನವು ಪ್ರಸಿದ್ಧಿಯನ್ನು ಪಡೆದಿದೆ.

    ಮಣ್ಣಿನಡಿಯಲ್ಲಿದ್ದ ಶಿವಲಿಂಗವನ್ನು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಕಲ್ಯಾಟಂಡ ಅಜ್ಜಪ್ಪನವರ ಮಾರ್ಗದರ್ಶನದಲ್ಲಿ ಶಿವಲಿಂಗ ಹೊರಗೆ ತೆಗೆಯಲಾಗಿದೆ. ಈ ವೇಳೆ ಶಿವಲಿಂಗವನ್ನು ಎಳೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಜ್ಜಪ್ಪನವರ ನುಡಿಯಂತೆ ಕರುವಿನ ಸಹಾಯದಿಂದ ಶಿವಲಿಂಗಕ್ಕೆ ಹಗ್ಗ ಕಟ್ಟಿ ಮೇಲೆ ಎತ್ತಲಾಗಿದೆ. ಇದರೊಂದಿಗೆ ಭೂಮಿ ಅಡಿಯಲ್ಲಿ ಸಿಕ್ಕಿರುವ ಹಲವು ವಸ್ತುಗಳನ್ನು ಜೋಡಿಸಿ ಸ್ಥಳದಲ್ಲಿ ಶೇಖರಿಸಿ ಇಡಲಾಗಿದೆ. ಇದನ್ನೂ ಓದಿ: 51 ಇಂಚು ಎತ್ತರ, 1.5 ಟನ್ ತೂಕ ಇರಲಿದೆ ಅಯೋಧ್ಯೆ ರಾಮನ ವಿಗ್ರಹ

  • G20 Summit: ಅಲಂಕಾರಕ್ಕೆ ಶಿವಲಿಂಗ ಆಕಾರದ ಕಾರಂಜಿ ಬಳಕೆ – ಆಪ್ ವಿರೋಧ

    G20 Summit: ಅಲಂಕಾರಕ್ಕೆ ಶಿವಲಿಂಗ ಆಕಾರದ ಕಾರಂಜಿ ಬಳಕೆ – ಆಪ್ ವಿರೋಧ

    ನವದೆಹಲಿ: ಸನಾತನ ಧರ್ಮದಂಗಲ್ ನಡುವೆ ಶಿವಲಿಂಗ (Shivaling) ಫೈಟ್ ಕೂಡಾ ಶುರುವಾಗಿದೆ. ದೆಹಲಿಯಲ್ಲಿ ಜಿ20 ಶೃಂಗಸಭೆ (G20 Summit) ಪ್ರಯುಕ್ತ ಅಲಂಕಾರದ ಭಾಗವಾಗಿ ಶಿವಲಿಂಗ ಆಕಾರದ ಕಾರಂಜಿಗಳನ್ನು (Fountain) ದೆಹಲಿಯ 21ಕ್ಕೂ ಹೆಚ್ಚು ಕಡೆ ಸ್ಥಾಪನೆ ಮಾಡಲಾಗಿದೆ. ಇದಕ್ಕೆ ದೆಹಲಿ ಆಡಳಿತ ಪಕ್ಷ ಆಮ್ ಆದ್ಮಿ ಪಾರ್ಟಿ (AAP) ತಕರಾರು ತೆಗೆದಿದೆ.

    ಶಿವಲಿಂಗವನ್ನು ಅಲಂಕಾರದ ವಸ್ತುವಾಗಿ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಆಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ವಿರುದ್ಧ ದೂರು ನೀಡಿದೆ. ಇದು ಶಿವಲಿಂಗಕ್ಕೆ ಮಾಡಿದ ಅವಮಾನ, ಈ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದೆ.

    ಆದರೆ ಈ ಆರೋಪಗಳನ್ನು ಬಿಜೆಪಿ (BJP) ತಳ್ಳಿಹಾಕಿದೆ. ಪ್ರತಿಯೊಂದು ವಿಚಾರವನ್ನು ರಾಜಕೀಯ ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿದೆ. ಇದನ್ನೂ ಓದಿ: ಇಂಡಿಯಾ ಹೆಸರಿನ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸುತ್ತಾ?

    ಶಿವಲಿಂಗದ ಬಳಿ ಕೈ ತೊಳೆದ ಸಚಿವ:
    ಈ ನಡುವೆ ದೇಗುಲವೊಂದರಲ್ಲಿ ಶಿವಲಿಂಗದ ಪಕ್ಕದಲ್ಲೇ ಉತ್ತರ ಪ್ರದೇಶದ ಸಚಿವ ಸತೀಶ್ ಶರ್ಮಾ ಕೈತೊಳೆಯತ್ತಿರುವ ವೀಡಿಯೋ ಹಂಚಿಕೊಂಡ ರಾಜ್ಯ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ದೇವಾಲಯವನ್ನು, ದೇವರ ಸನ್ನಿಧಾನವನ್ನು ಬಿಜೆಪಿಗರು ಬಚ್ಚಲು ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದೆ. ಇಂದು ಕೈತೊಳೆದವರು, ಮುಂದೆ ದೇವರ ಗುಡಿಯಲ್ಲಿ ಸ್ನಾನ ಮಾಡಿದರೂ ಅಚ್ಚರಿ ಇಲ್ಲ. ಇದು ಬಿಜೆಪಿಗರ ಅಸಲಿ ಧರ್ಮ ಎಂದು ಕಿಡಿಕಾರಿದೆ. ಇದನ್ನೂ ಓದಿ: ಧಾರ್ಮಿಕ ಮತಾಂತರಗಳನ್ನು ತಡೆಯಲು ಕೇಂದ್ರಕ್ಕೆ ನಿರ್ದೇಶನ ನೀಡಿ – ಪಿಐಎಲ್‌ ವಜಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆಯ ಆಸೆ ಈಡೇರಿಸಲಿಲ್ಲವೆಂದು ಶಿವಲಿಂಗವನ್ನೇ ಕದ್ದ ಯುವಕ!

    ಮದುವೆಯ ಆಸೆ ಈಡೇರಿಸಲಿಲ್ಲವೆಂದು ಶಿವಲಿಂಗವನ್ನೇ ಕದ್ದ ಯುವಕ!

    ಲಕ್ನೋ: ತನ್ನ ಮದುವೆಯ (Marriage) ಆಸೆ ಈಡೇರಿಸಲಿಲ್ಲವೆಂದು ರೊಚ್ಚಿಗೆದ್ದ 27 ವರ್ಷದ ಯುವಕನೊಬ್ಬ ಶಿವಲಿಂಗವನ್ನೇ (Shivalinga) ಕದ್ದು ಸಿಕ್ಕಿಬಿದ್ದ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ.

    ಭೈರೋ ಬಾಬಾ ದೇವಸ್ಥಾನದಿಂದ ಯುವಕ ಶಿವಲಿಂಗವನ್ನು ಕದ್ದೊಯ್ದಿದ್ದಾನೆ. ಇತ್ತ ಎಂದಿನಂತೆ ಭಕ್ತರು ದೇಗುಲಕ್ಕೆ ಭೇಟಿ ಕೊಟ್ಟಾಗ ಶಿವಲಿಂಗ ಇಲ್ಲದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಶಿವಲಿಂಗ ನಾಪತ್ತೆಯಾಗಿರುವ ಸಂಬಂಧ ಗ್ರಾಮದ ಅಧ್ಯಕ್ಷ ಪ್ರಕಾಶ್ ಈ ಸಂಬಂಧ ಎಫ್‍ಐಆರ್ ದಾಖಲಿಸಿದ್ದಾರೆ. ಅಂತೆಯೇ ದೂರು ಸ್ವೀಕರಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೆ ಭಾನುವಾರ ಕುಮ್ಹಿಯಾವಾಹಾದಿಂದ ಆರೋಪಿ ಚೋಟು ಎಂಬಾತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬುಮ್ರಾ, ಸಂಜನಾ ದಂಪತಿಗೆ ಗಂಡು ಮಗು- ಮಗನ ಹೆಸರು ರಿವೀಲ್ ಮಾಡಿದ ವೇಗಿ

    ಯುವಕ ಕದ್ದ ಶಿವಲಿಂಗವನ್ನು ಬಿದಿರಿನ ರಾಶಿಯ ಅಡಿಯಲ್ಲಿ ಬಚ್ಚಿಟ್ಟಿದ್ದನು ಎಂದು ಮಹೇವಾ ಘಾಟ್ ಪೊಲೀಸ್ ಠಾಣೆಯ ಅಧಿಕಾರಿ ರಜನಿಕಾಂತ್ ತಿಳಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಜೈಲಿಗಟ್ಟಲಾಗಿದೆ.

    ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಶಿವಲಿಂಗ ಕದಿಯಲು ಕಾರಣವೇನು ಎಂಬುದನ್ನು ರಿವೀಲ್ ಮಾಡಿದ್ದಾನೆ. ಪವಿತ್ರವಾದ ಶ್ರಾವಣ ಮಾಸದಲ್ಲಿ ತಾನು ಶ್ರದ್ಧೆಯಿಂದ ಪ್ರಾರ್ಥನೆ ಮತ್ತು ಉಪವಾಸ ಮಾಡುತ್ತಿದ್ದೆ. ಆದರೂ ಶಿವನು ನನ್ನ ಮದುವೆಯ ಆಸೆ ಈಡೇರಿಸಲಿಲ್ಲ. ಹೀಗಾಗಿ ನೊಂದು ಈ ಕೆಲಸ ಮಾಡಿದ್ದೆನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]