ಕಾರವಾರ: ಬಿಜೆಪಿಯಲ್ಲಿ ಜೈಕಾರ ಹಾಕೋನೇ ಬೇರೆ, ಜಿಲೇಬಿ ತಿನ್ನೋರೆ ಬೇರೆ, ಜೈಲಿಗೆ ಹೋಗೋನೇ ಬೇರೆ ಎಂದು ಬಿಜೆಪಿ ಬಂಡಾಯ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಹೇಳಿದ್ದಾರೆ.
ಕಾರವಾರದಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಹೈಕಮಾಂಡ್‌ನ ಶಿಸ್ತು ಸಮಿತಿಯಿಂದ ನೋಟಿಸ್ ಬಂದ ಕುರಿತು ಮಾತನಾಡಿದ ಅವರು, ನನಗೆ ನೋಟಿಸ್ ನಿನ್ನೆ ರಾತ್ರಿ ತಲುಪಿದೆ. ಅವರು ಏನು ಪ್ರಶ್ನೆ ಕೇಳಿದ್ದಾರೆ, ಅದಕ್ಕೆ ಸೂಕ್ತವಾದ ಉತ್ತರವನ್ನು ಅವರು ನಿಗದಿ ಮಾಡಿದ ಸಮಯದಲ್ಲೇ ಕಳುಹಿಸಬೇಕಾದ ಜಾಗದಲ್ಲಿ ಕಳುಹಿಸಿ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಯಾವುದೇ ಅಪರಾಧ ಮಾಡಿಲ್ಲ. ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅವರ ಪರವಾಗಿ ಮಾಡದೇ ಇರಬಹುದು. ಅದಕ್ಕೆ ಅದರದ್ದೇ ಆದ ಕಾರಣವಿದೆ. ನಾವು ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿಲ್ಲ. ನಾವು ಪಕ್ಷದ ವಿರುದ್ಧ ಹೇಳಿಕೆ ಕೊಟ್ಟಿಲ್ಲ. ನನಗೆ ಆದ ಅನ್ಯಾಯದ ಕುರಿತು ಪತ್ರದ ಮುಖೇನ ತಿಳಿಸಿದ್ದೇನೆ ಎಂದಿದ್ದಾರೆ.
ಅವೆಲ್ಲಾ ನೋವುಗಳೇ, ಇಂತಹ ಪರಿಸ್ಥಿತಿಗೆ ಕಾರಣವಾಗಿವೆ. ಯಾರು ಇದೆಕ್ಕೆಲ್ಲ ಪ್ರಚೋದನೆ ಕೊಟ್ಟರೋ, ಯಾರನ್ನು ಉಳಿಸಲು ಮಾತನಾಡಿದ ನಾಯಕರಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಪಕ್ಷದ ಅಧ್ಯಕ್ಷ, ಮಹಾ ನಾಯಕರನ್ನು ವಾಚಾನುಗೋಚರವಾಗಿ ಬೈದರೋ ಅವರ ವಿರುದ್ಧ ಕ್ರಮ ಆಗಿಲ್ಲ. ರೇಣುಕಾಚಾರ್ಯ ಯಾರನ್ನೋ ಗೌರವಿಸಬೇಕು,ಯಾರನ್ನೋ ಬದುಕಿಸಬೇಕು ಎಂದು ರಸ್ತೆ ಮೇಲೆ ಬಿದ್ದು ಹೊಯ್ದಾಡಿದ ಅವರ ಬಗ್ಗೆ ಯಾರೂ ಏನು ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೈಕಾರ ಹಾಕೋನೇ ಬೇರೆ, ಜಿಲೇಬಿ ತಿನ್ನೋರೆ ಬೇರೆ, ಜೈಲಿಗೆ ಹೋಗೋನೇ ಬೇರೆ. ಅವರು ಜಿಲೇಬಿ ತಿಂತಾನೆ ಇದ್ದಾರೆ. ಇವರೆಲ್ಲಾ ಜೈಲಿಗೆ ಹೋಗುತ್ತಲೇ ಇದ್ದಾರೆ ಎಂದು ತಿಳಿಸಿದ್ದಾರೆ.
ಕಾರವಾರ: ಬಿಜೆಪಿಯಲ್ಲಿ ಎಷ್ಟು ಬಣ ಆಗಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಬಣಗಳನ್ನು ಲೆಕ್ಕ ಮಾಡುತಿದ್ದೇನೆ. ಬಿಜೆಪಿ ವ್ಯವಸ್ಥೆಯಿಂದ ಬೇಸತ್ತು ನಾನು ದೂರ ಉಳಿದಿದ್ದೇನೆ ಎಂದು ಬಿಜೆಪಿ ರೆಬಲ್ ಶಾಸಕ, ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಶಿರಸಿಯಲ್ಲಿ ಮಾತನಾಡಿದ ಅವರು, ಯಾರ‍್ಯಾರ ನಿಲುವು ಸರಿ, ಯಾರ‍್ಯಾರ ನಿಲುವು ತಪ್ಪು ಎನ್ನುವುದು ಇನ್ನೂ ಸ್ವಲ್ಪ ದಿನದಲ್ಲಿ ಗೊತ್ತಾಗುತ್ತದೆ. ನಾನು ಮತ್ತು ಸೋಮಶೇಖರ್ ನಿರ್ಣಯ ತೆಗೆದುಕೊಂಡಾಗ ತಪ್ಪು ಎಂದು ವಿಜಯೇಂದ್ರ ಹಾಗೂ ಯತ್ನಾಳ್ ಸಹ ಹೇಳಿದ್ದರು. ಯಾರ‍್ಯಾರು ನಾವು ತಪ್ಪು ಎಂದು ಹೇಳಿದವರೆಲ್ಲ ಅವರೇ ತಪ್ಪು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಾವುದೇ ವಿವಾದಕ್ಕೆ ಬೀಳಬಾರದು ಎಂದು ನಾನು ಸುಮ್ಮನಿದ್ದೇನೆ. ಯಾವಾಗ ವಿವಾದದಲ್ಲಿ ಬೀಳಬೇಕು ಎನಿಸುತ್ತದೆಯೋ ಅಂದು ಬೀಳುತ್ತೇನೆ ಎಂದು ಅಧ್ಯಕ್ಷ ಸ್ಥಾನದ ಕುರಿತು ಬಿಜೆಪಿ ಪಕ್ಷದಲ್ಲಿನ ಬಣ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಗ್ಯಾರಂಟಿ ಯೋಜನೆಯಿಂದ ಶಾಸಕರ ಕ್ಷೇತ್ರಗಳಿಗೆ ಅನುದಾನ ದೊರೆಯದ ಕುರಿತು ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಮೇಲೆ ಪರಿಣಾಮವಾಗಿತ್ತು. ಇದೀಗ ಎಲ್ಲ ಸರಿಯಾಗುತ್ತಿದೆ. ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ಇದಕ್ಕಾಗಿ ಇಂತಹ ಯೋಜನೆ ಕೊಡುವುದು ಅನಿವಾರ್ಯ. ಗ್ಯಾರಂಟಿ ಟೀಕೆ ಮಾಡಿದ ಬಿಜೆಪಿ ಮುಂಬೈ, ದೆಹಲಿಯಲ್ಲಿ ಏನು ಮಾಡಿತು ಎಂದು ಪ್ರಶ್ನೆ ಮಾಡಿದ್ದಾರೆ.
ಕಾರವಾರ: ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಪುತ್ರ ವಿವೇಕ್ ಹೆಬ್ಬಾರ್ (Vivek Hebbar) ಗುರುವಾರ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲಿ ವಿವೇಕ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಅವರು ವಿವೇಕ್ ಹೆಬ್ಬಾರ್ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ನೂರಾರು ಬೆಂಬಲಿಗರ ಜೊತೆ ವಿವೇಕ್ ಹೆಬ್ಬಾರ್ ‘ಕೈ’ ಹಿಡಿದಿದ್ದಾರೆ. ಇದನ್ನೂ ಓದಿ: ಚುನಾವಣಾಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿದ್ದಾರೆ: ನಿಖಿಲ್ ಕುಮಾರಸ್ವಾಮಿ ಕಿಡಿ
ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ವಿವೇಕ್ ಹೆಬ್ಬಾರ್, ಕಾರ್ಯಕರ್ತರ ವಲಯದಲ್ಲಿ ಬಹಳ ದಿನದಿಂದ ವ್ಯತ್ಯಾಸಗಳು, ತಾರತಮ್ಯಗಳು ಇತ್ತು. ಹೀಗಾಗಿ ನಮ್ಮ ಕಾರ್ಯಕರ್ತರಲ್ಲಿ ಆಕ್ರೋಶ ಇತ್ತು. ಯಾರ ಹತ್ರ ಹೇಳಬೇಕು ಯಾರ ಹತ್ರ ಕೇಳಬೇಕು ಎಲ್ಲಾ ಕೇಳಿದ ನಂತರವೂ ನಮ್ಮ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ನಮ್ಮ ಬಳಿ ಆಗದ ಕಾರಣ ಅನಿವಾರ್ಯ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರ ಹಿತದೃಷ್ಟಿಯಿಂದ ಕಾಂಗ್ರೆಸ್‌ಗೆ ಸೇರುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಬಿಜೆಪಿ ಪಕ್ಷದಲ್ಲಿ ಸ್ಥಾನಮಾನ, ಬೇರೆ ರೀತಿಯಲ್ಲಿ ನೋಡುವುದು ಹಲವು ವಿಚಾರಗಳಿವೆ. ನಾವು ಮನೆ ಬಿಟ್ಟು ಹಳೆ ಮನೆಗೆ ಬಂದಾಗಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಸೇರ್ಪಡೆ ಕಾರ್ಯ ಇವತ್ತಿಗೆ ಮಾತ್ರ ಮುಗಿದಿಲ್ಲ. ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕರ್ತರು ಸೇರ್ಪಡೆಗೊಳ್ಳುತ್ತಾರೆ. ಬಿಜೆಪಿ ಕಾರ್ಯಕರ್ತರು ಸಹ ನಮ್ಮ ಜೊತೆ ಬರುತ್ತಿದ್ದಾರೆ. ಹೆಬ್ಬಾರ್ ಸ್ಪೋಕ್ಸ್ಪರ್ಸನ್, ನಾನಲ್ಲ. ನನ್ನ ನಿರ್ಣಯ ನಾನು ಹೇಳಿದ್ದೇನೆ. ಅವರು ಯಾವಾಗ ಕಾಂಗ್ರೆಸ್‌ಗೆ ಸೇರುತ್ತಾರೆ ಎಂದು ಅವರ ಬಳಿಯೇ ಕೇಳಬೇಕು ಎಂದರು. ಇದನ್ನೂ ಓದಿ: ಮೈಕ್ ಸೌಂಡ್ ಕಡಿಮೆ ಮಾಡಿ ಅಂದಿದ್ದಕ್ಕೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಹಲ್ಲೆ
ಬಿಜೆಪಿಯಿಂದ ದೂರ ಉಳಿದಿದ್ದ ಶಿವರಾಮ್ ಹೆಬ್ಬಾರ್ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡದೆ ಸೈಲೆಂಟ್ ಆಗಿದ್ದರು. ಅಲ್ಲದೇ ಆಗಾಗ ಸಿಎಂ ಸಿದ್ದರಾಮಯ್ಯ ಸೇರಿದಂತೆ ‘ಕೈ’ ನಾಯಕರನ್ನು ಶಿವರಾಮ್ ಹೆಬ್ಬಾರ್ ಹಾಡಿ ಹೊಗಳುತ್ತಿದ್ದರು. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡದೆ ಹೆಬ್ಬಾರ್ ತಟಸ್ಥರಾಗಿದ್ದಾರೆ. ಇಂದು ಯಲ್ಲಾಪುರ ಕ್ಷೇತ್ರದ ಪ್ರಮುಖ ಮುಖಂಡರ ಜೊತೆ ಹೆಬ್ಬಾರ್ ಪುತ್ರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ರು: ಸಚಿವ ಚಲುವರಾಯಸ್ವಾಮಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಪಾಲಿಗೆ ಯಲ್ಲಾಪುರ ಬಿಜೆಪಿ ಶಾಸಕ ಬಿಸಿ ತುಪ್ಪವಾಗಿದ್ದು, ಪಕ್ಷದ ಪ್ರಚಾರಕ್ಕೂ ಬಾರದೇ ಇತ್ತ ಪಕ್ಷವನ್ನೂ ಬಿಡದ ಹೆಬ್ಬಾರ್ (Shivaram Hebbar) ಸ್ವ-ಪಕ್ಷದ ವಿರುದ್ಧವೇ ತೊಡೆತಟ್ಟಿದ್ದಾರೆ.
ಅಧಿಕಾರಕ್ಕಾಗಿ ಅಂದಿನ ಕಾಂಗ್ರೆಸ್ (Congress) ಸರ್ಕಾರವನ್ನೇ ಬೀಳಿಸಿ ಬಂಡಾಯವೆದ್ದಿದ್ದ ಬಾಂಬೆ ಬಾಯ್ಸ್‍ಗಳಲ್ಲಿ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಒಬ್ಬರು. ಬಿಜೆಪಿ ಹೆಸರಿನಲ್ಲಿ ಗೆದ್ದ ಯಲ್ಲಾಪುರ ಶಾಸಕ ಮತ್ತೊಮ್ಮೆ ರೆಬೆಲ್ ಆಗಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ನಾಯಕರ ಜೊತೆ ಕಾಣಿಸ್ತಿಕೊಳ್ತಿದ್ದು, ತಮ್ಮ ಪುತ್ರನನ್ನು ಶೀಘ್ರದಲ್ಲೇ ಕಾಂಗ್ರೆಸ್ ಸೇರಿಸಲು ತೆರೆಮರೆಯಲ್ಲಿ ಕಸರತ್ತು ನಡೆಸ್ತಿದ್ದಾರೆ.
ಇನ್ನು ಬಿಜೆಪಿಯಲ್ಲೇ ಇದ್ದು ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿರುವ ಹೆಬ್ಬಾರ್ ನಡೆಗೆ ಪಕ್ಷದಲ್ಲಿ ಅಸಮಾಧಾನ ಹೆಚ್ಚಿಸಿದೆ. ಇದೇ ವಿಚಾರವಾಗಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಹೆಬ್ಬಾರ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 53 ನಾಮಪತ್ರ ವಾಪಸ್; ‘ಲೋಕ’ ಕಣದಲ್ಲಿ 247 ಅಭ್ಯರ್ಥಿಗಳು
ಹೆಬ್ಬಾರ್ ವಿರುದ್ಧ ಬಿಜೆಪಿ ಕ್ರಮಕೈಗೊಂಡಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಗೆ (BJP) ಹಿನ್ನಡೆಯಾಗುವ ಆತಂಕವಿದೆ. ಅವರಾಗಿಯೇ ಪಕ್ಷ ತೊರೆದರೆ ಬಿಜೆಪಿಗೆ ಲಾಭ ಹೆಚ್ಚು. ಹೀಗಾಗಿ ಬಿಜೆಪಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಜಿಲ್ಲೆಯಲ್ಲಿ ಬಿಜೆಪಿ ನಾಯಕರಲ್ಲೂ ಅಸಮಾಧಾನಗಳಿದ್ದು, ಒಂದು ವಾರದಲ್ಲೇ ಸರಿ ಮಾಡುತ್ತೇವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದ್ದಾರೆ.
ಸದ್ಯ ಹೆಬ್ಬಾರ್ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿದ್ದು, ತಾವು ಪಕ್ಷಕ್ಕೆ ಸೇರದೇ ತಮ್ಮ ಪುತ್ರ ವಿವೇಕ್ ಹೆಬ್ಬಾರ್‍ರನ್ನು ಕಾಂಗ್ರೆಸ್ ಗೆ ಸೇರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಹೆಬ್ಬಾರ್ ನಡೆ ಜಿಲ್ಲಾ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಕಾರವಾರ: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಮಗೆ ಹಣ ನೀಡಿದೆ ಎಂದಾದರೆ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ (BJP), ಕಾಂಗ್ರೆಸ್‍ನವರಿಗೆ (Congress) ಎಷ್ಟು ಹಣ ನೀಡಿದೆ ಎಂಬುದನ್ನು ಹೇಳಲಿ ಎಂದು ಸ್ವಪಕ್ಷದ ವಿರುದ್ಧವೇ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ವಾಗ್ದಾಳಿ ನಡೆಸಿದ್ದಾರೆ.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಈಶ್ವರಪ್ಪನವರ (K.S Eshwarappa) ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಬೇರೆ ರಾಜ್ಯದಲ್ಲಿ ಬಿಜೆಪಿ ಎಷ್ಟೆಷ್ಟು `ಇನ್ವೆಸ್ಟ್‌ಮೆಂಟ್’ ಮಾಡಿದೆ ಎಂಬುದನ್ನೂ ಹೇಳಬೇಕು. ಈಶ್ವರಪ್ಪನವರ ಮಾತನ್ನು ರಾಜ್ಯ ಬಿಜೆಪಿಯೇ ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ಏನೆಲ್ಲಾ ಮಾಡಿಕೊಂಡು ರಾಜೀನಾಮೆ ನೀಡುವ ಸ್ಥಿತಿ ಬಂತು ಎಂಬುದು ನಾಡಿನ ಜನಕ್ಕೆ ಹಾಗೂ ಸ್ವತಃ ಅವರಿಗೂ ತಿಳಿದಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ರಾಜೀನಾಮೆ ಕೊಟ್ಟರೆ ಮಾತ್ರ ಜನತೆಗೆ ಶಾಂತಿ, ನೆಮ್ಮದಿಯ ಭರವಸೆ: ಆರ್.ಅಶೋಕ್
ಬಿಜೆಪಿ ಸರ್ಕಾರ ಬರುವಾಗ ಈಶ್ವರಪ್ಪ ನಮಗೆ ಎಷ್ಟು ಕೋಟಿ ರೂ. ಕೊಟ್ಟಿದ್ದರು ಎಂಬುದನ್ನು ಹೇಳಬೇಕಾಗುತ್ತದೆ. ಅವರು ಗಾಜಿನ ಮನೆಯಲ್ಲಿ ಕುಳಿತುಕೊಂಡು ಇನ್ನೊಂದು ಗಾಜಿಗೆ ಕಲ್ಲು ಹೊಡೆಯುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕಾರವಾರ: ಬೆಳಗ್ಗೆ ಆರೋಗ್ಯ ಸರಿ ಇರಲಿಲ್ಲ, ಅನಾರೋಗ್ಯದ ಕಾರಣ ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಮತದಾನ ಮಾಡಲು ಆಗಲಿಲ್ಲ ಎಂದು ಯಲ್ಲಾಪುರದಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಸಭಾ ಚುನಾವಣೆಗೆ ಗೈರಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗ್ಗೆ ಆರೋಗ್ಯ ಸರಿ ಇರಲಿಲ್ಲ. ವೈದ್ಯರ ಸಲಹೆಯಂತೆ 6 ಗಂಟೆಗೆ ಬರಬೇಕಾಯ್ತು. ಅಸಮಾಧಾನವಿದ್ದಿದ್ದರೇ ಅಡ್ಡ ಮತದಾನ ಮಾಡುವ ಅವಕಾಶ ಇತ್ತು. ಹಾಗೆ ಮಾಡಲಿಲ್ಲ ಎಂದರು. ಇದನ್ನೂ ಓದಿ: ಸೋಲು ನಮಗೆ, ನಮ್ಮ ಕುಟುಂಬಕ್ಕೆ ಹೊಸದೇನು ಅಲ್ಲ: ಹೆಚ್‌ಡಿಕೆ
ನಾನು ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇದ್ದೇನೆ. ನಾನು ಯಾರಿಗೂ ಹೆದರಿ ಮತದಾನಕ್ಕೆ ಹೋಗಿಲ್ಲ. ನಾನು ಮತದಾನಕ್ಕೆ ಹೋಗಿ ಅಡ್ಡ ಮತದಾನ ಮಾಡಬಹುದಿತ್ತು,ಇಲ್ಲವೇ ಮತದಾನ ಮಾಡದೆಯೇ ಇರಬಹುದಿತ್ತು. ನಾನು ಯಾರಿಗೂ ವಾರ್ನಿಂಗ್ ಕೊಡಲು ಹೋಗಿಲ್ಲ. ನನಗೆ ನನ್ನದೇ ಆದ ಅಸಮಾಧಾನ ಇರುವುದು ನಿಜ. ಅದು ಜಿಲ್ಲಾಮಟ್ಟದಲ್ಲಿಮಾತ್ರ ಎಂದು ಹೆಬ್ಬಾರ್ ಹೇಳಿದರು.
ಕೇಂದ್ರ ಮತ್ತು ರಾಜ್ಯದ ಮುಖಂಡರ ಮೇಲೆ ಅಸಮಾಧಾನ ಇಲ್ಲ. ಸಮಸ್ಯೆ ಇರುವುದು ಜಿಲ್ಲಾ ಮಟ್ಟದ ನಾಯಕರಿಂದ ಮಾತ್ರ. ಯಾರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ಕೊಡಲಿದೆ ಎಂದು ತಿಳಿಸಿದರು.
ರಾಯಚೂರು: ಶಾಸಕ ಎಸ್.ಟಿ ಸೋಮಶೇಖರ್ (ST Somashekahr) ಹಾಗೂ ಹೆಬ್ಬಾರ್ ತಾಳಿ ಒಂದು ಕಡೆ ಕಟ್ಟಿಸಿಕೊಂಡು ಸಂಸಾರ ಇನ್ನೊಬ್ಬರ ಜೊತೆ ಮಾಡಬಾರದು ಅಂತ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಅವರನ್ನ ಚುನವಾಣೆಯಲ್ಲಿ ನಿಲ್ಲಿಸಿ, ಗೆಲ್ಲಿಸಿ ಮಂತ್ರಿ ಮಾಡಾಯ್ತು, ಈಗ ಮತ್ತೆ ಗೆದ್ದಾಯ್ತು. ಈಗ ಸಿದ್ದರಾಮಯ್ಯ, ಡಿಕೆಶಿ ಕಡೆ ಒಲವಾಗಿದೆ. ಬಿಜೆಪಿ (BJP) ಅಲ್ಲಿ ಇಉವ ಹಾಗಿದ್ರೆ ಇರಿ, ಇಲ್ಲಾ ಹೋಗಿ. ತಾಳಿ ಒಬ್ಬರತ್ರ ಕಟ್ಟಿಸಿಕೊಂಡು ಸಂಸಾರ ಮತ್ತೊಬ್ಬರ ಜೊತೆ ಮಾಡಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ. ಅವರಿಂದ ವೈಯಕ್ತಿಕವಾಗಿ ನೊಂದಿದ್ದೇನೆ ಅಂತ ಈಶ್ವರಪ್ಪ ಹೇಳಿದರು.
ಇದೇ ವೇಳೆ ಜ್ಞಾನವ್ಯಾಪಿಯ (Gyanavapi) ವೈಜ್ಞಾನಿಕ ಸಮೀಕ್ಷೆಗೆ ಮುಸಲ್ಮಾನ ಸಮುದಾಯ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಎರಡು ಕನಸು ಈಗ ಈಡೇರಿದೆ. ಅಯೋದ್ಯಯಲ್ಲಿ ರಾಮಮಂದಿರ, ಆರ್ಟಿಕಲ್ 370 ಕಿತ್ತು ಬೀಸಾಕಾಯ್ತು ಎಂದರು. ಇದನ್ನೂ ಓದಿ: ಅಶಿಸ್ತಿನ ವರ್ತನೆ, 49 ಸಂಸದರ ಅಮಾನತು – ಇಲ್ಲಿಯವರೆಗೆ 149 ಮಂದಿ ಸಸ್ಪೆಂಡ್
ಕಾಶಿ ವಿಶ್ವನಾಥನ ಸರ್ವೇಗೆ ರಿಪೋರ್ಟ್ ಬಂದಿತ್ತು. ಕಾಶಿ ವಿಶ್ವನಾಥ ದೇವಸ್ಥಾನ, ಮಥುರೈ ಶ್ರೀಕೃಷ್ಣನ ದೇವಸ್ಥಾನ ಒಡೆದು ಮಸೀದಿ ಕಟ್ಟಲಾಗಿದೆ ಎಂದಿದ್ದೆ. ಹೊಸ ಮಸೀದಿಗಳನ್ನ ಒಡೆಯಲ್ಲ, ಸ್ವಾತಂತ್ರ್ಯ ಬಂದ ಮೇಲೆ ಮುಸಲ್ಮಾನರು ಹೊಸ ಮಸೀದಿ ಕಟ್ಟಿಕೊಂಡು ನಮಾಜ್ ಮಾಡ್ತಿದ್ದಾರೆ ಅದಕ್ಕೆ ಗೌರವ ಕೊಡ್ತೇವೆ. ವಯಸ್ಸಿಗೆ ಬಂದ ಮಗು ಹೇಳುತ್ತೆ ಕೃಷ್ಣ ಹುಟ್ಟಿದ ಸ್ಥಳ ಯಾವುದು ಅಂದ್ರೆ ಮಥುರಾ ಅಂತ. ಕಾಶಿ ವಿಶ್ವನಾಥ ದೇವಸ್ಥಾನ ಹಿಂದೂಗಳದ್ದು ಅಂತಾರೆ. ರಾಮ ಹುಟ್ಟಿದ ಜಾಗ ಅಯೋಧ್ಯೆ ಅಂತಾರೆ. ಆದ್ರೆ ಕಾಂಗ್ರೆಸ್, ಸಿದ್ದರಾಮಯ್ಯಗೆ ಅರ್ಥ ಆಗಲ್ಲ. ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದಕ್ಕೆ ಸಾಕ್ಷಿ ಕೊಡಿ ಅಂತಾರೆ ಅಂತ ಈಶ್ವರಪ್ಪ ಅಸಮಾಧಾನ ಹೊರಹಾಕಿದರು.
ಕಾರವಾರ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಯಲ್ಲಾಪುರದ ಐದು ಜನ ಬಿಜೆಪಿ ಪದಾಧಿಕಾರಿಗಳನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಮರು ನೇಮಕ ಮಾಡಿರುವುದಕ್ಕೆ ಶಿವರಾಮ್ ಹೆಬ್ಬಾರ್ (Shivaram Hebbar) ಅವರ ಅಭಿಮಾನಿ ಬಳಗ ಅಸಮಾಧಾನ ಹೊರಹಾಕಿದೆ.
ಇಂದು ಯಲ್ಲಾಪುರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಬ್ಬಾರ್ ಅಭಿಮಾನಿ ಬಳಗದ ಪಟ್ಟಣಪಂಚಾಯತ್ ಸದಸ್ಯ ಸತೀಶ್ ಶಿವಾನಂದ್ ನಾಯ್ಕ್, ಅಸಮಾಧಾನ ಹೊರಹಾಕಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಚಟುವಟಿಕೆ ನಡೆಸಿ ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವರಾಮ್ ಹೆಬ್ಬಾರ್ ರವರು ಅತ್ಯಲ್ಪ ಮತಗಳಿಂದ ಗೆಲುವು ಕಾಣುವಂತಾಯ್ತು. ಹೀಗಾಗಿ ಇಂಥವರ ವಿರುದ್ಧ ಕ್ರಮಕ್ಕಾಗಿ ಶಾಸಕ ಶಿವರಾಮ್ ಹೆಬ್ಬಾರ್ ರವರು ಪಕ್ಷದ ವರಿಷ್ಟರಿಗೆ ದೂರು ನೀಡಿದ್ದರು. ಇದಲ್ಲದೇ ಶಿರಸಿ ಯ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ದೂರು ನೀಡಿದ್ದರು.
ಇದರ ಅನ್ವಯ ಶಿರಸಿ, ಯಲ್ಲಾಪುರದಲ್ಲಿ ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡ ಪಕ್ಷದ ಶಿಸ್ತುಪಾಲನಾ ಸಮಿತಿ ಯಲ್ಲಾಪುರ ಹಾಗೂ ಶಿರಸಿ ಭಾಗದಲ್ಲಿನ ಪಕ್ಷ ವಿರೋಧಿ ಕಾರ್ಯ ನಡೆಸಿದ ಪದಾಧಿಕಾರಿಗಳನ್ನು ಪಕ್ಷದ ಪದಾಧಿಕಾರಿ ಸ್ಥಾನ ದಿಂದ ವಿಮುಕ್ತಿಗೊಳಿಸಲಾಗಿತ್ತು. ಆದರೆ ಇದೀಗ ಯಲ್ಲಾಪುರದಲ್ಲಿ ಐದು ಜನರನ್ನು ಪುನಃ ಪದಾಧಿಕಾರಿ ಸ್ಥಾನಕ್ಕೆ ಅವರನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಇದ್ದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಯಲ್ಲಾಪುರದಲ್ಲಿ ಮರು ನೇಮಕ ಮಾಡಿದಂತೆ ಶಿರಸಿಯಲ್ಲಿ ಯಾಕೆ ಮಾಡಲಿಲ್ಲ? ಹೆಬ್ಬಾರ್ ಗೆ ಒಂದು ನ್ಯಾಯ, ಕಾಗೇರಿಯವರಿಗೆ ಒಂದು ನ್ಯಾಯ ಮಾಡಿದ್ದು ಎಷ್ಟು ಸರಿ ಎಂದು ಅವರು ಅಕ್ರೋಶ ಹೊರಹಾಕಿದರು. ಇದನ್ನೂ ಓದಿ: ಭಾರತ ಅಭಿವೃದ್ಧಿಯಾದರೆ ಕೆಲವರ ಆಟ ನಡೆಯಲ್ಲ: ಮೋಹನ್ ಭಾಗವತ್
ಶಾಸಕರು ನೀಡಿದ ಲಿಖಿತ ದೂರಿಗೆ ಪಕ್ಷ ಮಣ್ಣನೆ ನೀಡಿಲ್ಲ. ಪಕ್ಷವಿರೋಧಿಗಳನ್ನ ಪುನಃ ಸೇರ್ಪಡೆ ಮಾಡಿಕೊಂಡ ಪಕ್ಷದ ವರಿಷ್ಠರ ನಡೆ ಖಂಡನೀಯ. ಕೇವಲ ನಾಮಕಾವಸ್ತೆ ಕ್ರಮ ಜರುಗಿಸಿದಂತೆ ಪಕ್ಷದಲ್ಲಿದ್ದ ಪದವಿಗಳಿಂದ ವಿಮುಕ್ತಿಗೊಳಿಸಿ ತೇಪೆ ಹಚ್ಚುವ ಕೆಲಸವಾಗಿತ್ತು. ಆದರೆ ಇದೀಗ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸ ಹೊರಟ ಪಕ್ಷ ದ್ರೋಹಿಗಳಿಗೆ ಮತ್ತೆ ಅದೇ ಸ್ಥಾನಗಳಿಗೆ ಮರು ಸೇರ್ಪಡೆ ಮಾಡುತ್ತಿರುವ ಸುದ್ದಿ ನೋಡಿ ನಿಷ್ಠಾವಂತ ಹೆಬ್ಬಾರ್ ಅಭಿಮಾನಿಗಳಾದ ನಮ್ಮಂತಹ ಸಹಸ್ರಾರು ಮಂದಿಗೆ ಅತೀವ ಬೇಸರವಾಗಿದೆ. ನನ್ನನ್ನು ಸಹ ಹೆಸರಿಗೆ ಮಾತ್ರ ಶಕ್ತಿಕೇಂದ್ರದ ಅಧ್ಯಕ್ಷೆಯನ್ನಾಗಿಸಿ ಫೋನ್ ಕರೆ ಮಾಡುವ ಕೆಲಸಕ್ಕೆ ಮಾತ್ರ ಬಳಸಿಕೊಂಡು ನಿರ್ಲಕ್ಷಿಸಿದ ಧೋರಣೆ ಅತ್ಯಂತ ಖಂಡನೀಯ.
ಪಕ್ಷದ ವರಿಷ್ಠರ ಈ ನಡೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಮ್ಮೆಲ್ಲರ ಚುನಾವಣೆ ಸಂದರ್ಭದ ಶ್ರಮಕ್ಕೆ ಅವಮಾನಿಸಿದಂತಾಗಿದೆ. ಈ ಸಂಬಂಧ ಪಕ್ಷದ ಜಿಲ್ಲಾ ವರಿಷ್ಟರು ಮತ್ತು ರಾಜ್ಯದ ವರಿಷ್ಠರು ಪಕ್ಷದ ಶಾಸಕರ ಗಮನಕ್ಕೂ ತರದೆ ಪಕ್ಷದ್ರೋಹಿಗಳನ್ನು ಮತ್ತೆ ಪಕ್ಷದ ಪದವಿಗಳಿಗೆ ಮರು ಸೇರ್ಪಡೆ ಮಾಡಿರುವುದು ಶಾಸಕರಿಗೆ ಮಾಡಿದ ಅಪಮಾನವಾಗಿದ್ದು, ಇದನ್ನು ಹೆಬ್ಬಾರ್ ಅಭಿಮಾನಿ ಬಳಗ ಉಗ್ರವಾಗಿ ವಿರೋಧಿಸುತ್ತಿದೆ ಎಂದರು.
ತಕ್ಷಣ ಪಕ್ಷದ ನಾಯಕರು ಶಾಸಕರೊಂದಿಗೆ ಮಾತನಾಡಿ ಅವರ ಒಪ್ಪಿಗೆ ಪಡೆದು ಈ ಕ್ರಮದ ಬಗ್ಗೆ ನಿರ್ಧರಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಬರಲಿರುವ ಲೋಕ ಸಭಾ ಚುನಾವಣೆಯಲ್ಲಿ ಪಕ್ಷವೇ ಅಧಿಕೃತವಾಗಿ ಪಕ್ಷದ್ರೋಹಿಗಳಿಗೆ ಬಲ ತುಂಬಿ ಪಕ್ಷದಿಂದ ಸ್ಪರ್ಧಿಸುವ ಅಧಿಕೃತ ಅಭ್ಯರ್ಥಿ ವಿರುದ್ಧ ಪ್ರಚಾರಮಾಡಿ ಸೋಲಿಸುವಂತೆ ಪ್ರೇರಣೆ ನೀಡಿದಂತಾಗಲಿದೆ.
ಹಾಗೇನಾದರೂ ಆದಲ್ಲಿ ಪಕ್ಷ, ತತ್ವ, ಸಿದ್ಧಾಂತ, ಶಿಸ್ತು ಎಲ್ಲವೂ ತೋರ್ಪಡಿಕೆಯ ಭಾಷಣದ ಪದಗಳೆಂದು ಕಾರ್ಯಕರ್ತರಾದ ನಾವುಭಾವಿಸುವಂತಾಗಲಿದೆ ದಯವಿಟ್ಟು ಅದಕ್ಕೆ ಆಸ್ಪದ ನೀಡದೇ ಕ್ರಮಜರುಗಿಸಬೇಕಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಮಿತ್ ಅಂಗಡಿ, ಸದಸ್ಯರಾದ ಪ್ರಶಾಂತ್ ತಳವಾರ, ಅಬ್ದುಲ್ ಅಲಿ ನೂತನ ನಗರ, ಹಲೀಮ ಕಕ್ಕೇರಿ, ಗೀತಾ ದೇಶ ಭಂಡಾರಿ, ನಾಗರಾಜ್ ಅಂಕೋಲೆಕರ್ ಉಪಸ್ಥಿತರಿದ್ದರು.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆಯೇ ಇದೀಗ ಯಲ್ಲಾಪುರದಲ್ಲಿ ಈ ಹಿಂದೆ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ವೀಡಿಯೋ ವೈರಲ್ ಆಗುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೆಬ್ಬಾರ್ ಕಾಂಗ್ರೆಸ್ (Congress) ಸೇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಿಂದ ಶಾಸಕರೇ ಬೇಡ ಇರುವ ಸರ್ಕಾರವನ್ನು ಕೆಡವಿ ಹೋದವರು ಮತ್ತೆ ಕಾಂಗ್ರೆಸ್ ಗೆ ಬಂದ್ರೆ ಅವರನ್ನ ಪಕ್ಷ ಶಾಸಕರನ್ನಾಗಿ ಮಾಡುವುದಿಲ್ಲ ಎಂದಿದ್ದಾರೆ. ಲೋಕಸಭೆಗೆ ಸ್ಪರ್ಧಿಸಿದ್ರೆ ಎಂಪಿಯನ್ನಾಗಿ ಮಾಡುತ್ತೇವೆ ಎಂದು ಸಭೆಯಲ್ಲಿ ಆಡಿದ ಮಾತುಗಳು ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 7 ಜನರ ದುರ್ಮರಣ
ಯಲ್ಲಾಪುರದಲ್ಲಿ (Yallapur) ಇದೇ ತಿಂಗಳು 22 ರಂದು ಶಿವರಾಮ್ ಹೆಬ್ಬಾರ್ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಬೂತ್ ಮಟ್ಟದ ಕಾರ್ಯಕರ್ತರು, ಮುಖಂಡರ ಸಭೆ ನಡೆಸಿದ್ದ ವೇಳೆ ಈ ಮಾತುಗಳು ಕೇಳಿಬಂದಿದೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಮೂಲಗಳು ಹೇಳಿವೆ.
ಕಾರವಾರ: ಕಾಂಗ್ರೆಸ್‍ಗೆ ಯಲ್ಲಾಪುರದ ಬಿಜೆಪಿ (BJP) ಶಾಸಕ ಹಾಗೂ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ (Shivaram Hebbar) ಬರುವ ವಿಚಾರಕ್ಕೆ ಇದೀಗ ಜಿಲ್ಲಾ ಕಾಂಗ್ರೆಸ್‍ನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಶಿರಸಿಯ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ (Bhimanna Naik) ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಣ ಅಧಿಕಾರದ ಆಸೆಯಿಂದ ಕಾಂಗ್ರೆಸ್ (Congress) ಬಿಟ್ಟು ಓಡಿಹೋಗಿದ್ದಾರೆ. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ಅಧಿಕಾರ, ಹಣದ ಆಸೆಗೆ ಕಾಂಗ್ರೆಸ್‍ಗೆ ಬರುತ್ತಿದ್ದಾರೆ. ಇಲ್ಲಿಗೆ ಯಾಕೆ ಬರುತ್ತಾರೆ ಎಂಬುದನ್ನ ಜನರಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿ ಬರಲಿ ಎಂದರು. ಇದನ್ನೂ ಓದಿ: ಈಶ್ವರ್ ಖಂಡ್ರೆ ಕಾಲಿಗೆ ಶರಣು- ಕಾಂಗ್ರೆಸ್ ಸೇರ್ತಾರಾ ಬಿಜೆಪಿ ಶಾಸಕ ಸಲಗರ್?
ಬಂಡ ರಾಜಕಾರಣ ಮಾಡುವುದನ್ನು ಹೆಬ್ಬಾರ್ ಬಿಡಲಿ. ಇವರು ಅಧಿಕಾರ ಇದ್ದಾಗ ಏನು ಮಾಡಿದ್ದಾರೆ ಎಂದು ಹೇಳಲಿ. ನಾನು 13 ವರ್ಷ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಎಲ್ಲರ ಜೊತೆ ಸೇರಿ ಪಕ್ಷದ ಸಂಘಟನೆಗೆ ಕೆಲಸ ಮಾಡಿದ್ದೇನೆ. ಆಗ ಇವರ ಕೊಡುಗೆ ಏನಿತ್ತು ಅಧಿಕಾರಕ್ಕೆ ಬಂದ ನಂತರ ಕ್ಷೇತ್ರಕ್ಕೆ ಇವರ ಕೊಡುಗೆ ಏನಿತ್ತು ಎಂಬುದು ಗೊತ್ತಿದೆ ಎಂದು ಕಿಡಿಕಾರಿದರು.