Tag: ಶಿವರಾಮೇ ಗೌಡ

  • ರಂಗೇರಿದ ಚುನಾವಣಾ ಅಖಾಡ- ಡಿಕೆಶಿ ಭೇಟಿ ಬೆನ್ನಲ್ಲೇ ಶಿವರಾಮೇಗೌಡ ಶಕ್ತಿ ಪ್ರದರ್ಶನ

    ರಂಗೇರಿದ ಚುನಾವಣಾ ಅಖಾಡ- ಡಿಕೆಶಿ ಭೇಟಿ ಬೆನ್ನಲ್ಲೇ ಶಿವರಾಮೇಗೌಡ ಶಕ್ತಿ ಪ್ರದರ್ಶನ

    ಮಂಡ್ಯ: ಮಾಜಿ ಸಂಸದ ಶಿವರಾಮೇಗೌಡ (Shivarame Gowda) ಜೆಡಿಎಸ್ ನಿಂದ ಉಚ್ಛಾಟಣೆಗೊಂಡ ಬಳಿಕ ಪಕ್ಷೇತರವಾಗಿ ಚುನಾವಣೆ ನಿಲ್ಲೋದಕ್ಕೆ ತಯಾರಿ ಆಗುತ್ತಿದ್ದಾರೆ. ಈ ನಡುವೆ ಡಿಕೆಶಿ ಮನೆಯಲ್ಲಿ ಶಿವರಾಮೇಗೌಡ ಕಾಣಿಸಿಕೊಂಡಿರೋದು ಮಂಡ್ಯ (Mandya) ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ನಾಗಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ (Congress Ticket) ಅವರಿಗೆ ಎಂಬ ಚರ್ಚೆ ನಡೆಯುತ್ತಿದ್ದು, ಇಂದು ಬೃಹತ್ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.

    ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲೆಕ್ಷನ್ ಗೆ ನಾಲ್ಕು ತಿಂಗಳು ಬಾಕಿ ಇರುವಾಗಲೇ ನಾಗಮಂಗಲ ಕ್ಷೇತ್ರ (Nagamangala Constituency) ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಜೆಡಿಎಸ್ ನಿಂದ ಉಚ್ಛಾಟಣೆಗೊಂಡ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ಲಾನ್ ಮಾಡಿದ್ದ ಶಿವರಾಮೇಗೌಡ, ಸ್ವಾಭಿಮಾನದ ಹೆಸರೇಳಿಕೊಂಡು ಮತ ಭಿಕ್ಷೆ ಕೇಳುವ ಮೂಲಕ ಸುಮಲತಾ ಹಾದಿ ಹಿಡಿದಿದ್ರು. ಇದೀಗ ಅವರಿಗೆ ಕಾಂಗ್ರೆಸ್ ನಿಂದಲೇ ಆಫರ್ ಬಂದಿದೆ ಎನ್ನಲಾಗಿದ್ದು, ಇಂದು ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.

    ನಾಗಮಂಗಲದಲ್ಲಿ ಜೆಡಿಎಸ್ (JDS) ಮಣಿಸಲು ಶಿವರಾಮೇಗೌಡ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ ಒಂದಾಗಬೇಕು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ ಎನ್ನಲಾಗಿದೆ. ಶಿವರಾಮೇಗೌಡರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ನಾಗಮಂಗಲದಿಂದ ಟಿಕೆಟ್ ನೀಡಿ, ಚಲುವರಾಯಸ್ವಾಮಿಗೆ ಮಂಡ್ಯದಿಂದ ಕಣಕ್ಕೆ ಇಳಿಸಲು ಡಿಕೆಶಿ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೊನ್ನೆ ಶಿವರಾಮೇಗೌಡರನ್ನ ತಮ್ಮ ಮನೆಗೆ ಕರೆಸಿಕೊಂಡು ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವರಾಮೇಗೌಡ, ನಾನು ಡಿ.ಕೆ.ಶಿವಕುಮಾರ್ (DK Shivakumar) ಸಂಬಂಧಿಕರು. ನಾನು ಅವರು ಮನೆಗೆ ಯಾವಾಗ ಬೇಕಾದ್ರೂ ಹೋಗುತ್ತೇನೆ, ಅವರು ನಮ್ಮನೆಗೆ ಯಾವಾಗ ಬೇಕಾದ್ರೂ ಬರ್ತಾರೆ. ರಾಜಕೀಯವಾಗಿ ಚರ್ಚೆ ನಡೆದಿಲ್ಲ. ಒಂದೊಮ್ಮೆ ಟಿಕೆಟ್ ನೀಡಿದ್ರೆ ಜನರ ಅಭಿಪ್ರಾಯ ಸಂಗ್ರಹಿಸಿ ಸ್ಪರ್ಧೆ ಮಾಡ್ತೀನಿ ಅಂತ ಹೇಳಿದ್ದಾರೆ.

    ಭಾನುವಾರ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪದಲ್ಲಿ ಹೋಬಳಿ ಮಟ್ಟದ ಬೆಂಬಲಿಗರ ಸಭೆ ನಡೆಸಿದ್ರು. ಸ್ವಾಭಿಮಾನಿ ಪರ್ವ ಹೆಸರಿನಲ್ಲಿ ನಡೆದ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ತಾವು ಯಾವ ಪಕ್ಷದ ಅಭ್ಯರ್ಥಿಗಳಿಗೂ ಕಡಿಮೆ ಇಲ್ಲ, ತನಗೆ ವೈಯಕ್ತಿಕ ವರ್ಚಸ್ಸಿದೆ ಎಂಬುದನ್ನ ತೋರಿಸಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಟಿಕೆಟ್ ಸಿಗದಿದ್ರೂ ಸುಮಲತಾ ಮಾದರಿಯಲ್ಲೇ ಸ್ವಾಭಿಮಾನದ ಹೆಸರಿನಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡೋದು ಖಚಿತ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

    ಒಟ್ಟಾರೆ ನಾಗಮಂಗಲ ಕ್ಷೇತ್ರ ಈಗಾಗಲೇ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಜೆಡಿಎಸ್ ಸೋಲಿಸೇಕೆಂಬ ಪಣ ತೊಟ್ಟಿರುವ ಶಿವರಾಮೇಗೌಡ ಕಾಂಗ್ರೆಸ್ ಸೇರುತ್ತಾರಾ? ಅಥವಾ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹಾದಿಯಲ್ಲಿ ಸ್ವಾಭಿಮಾನದ ಹೆಸರಿನಲ್ಲೇ ಅಖಾಡಕ್ಕೆ ಇಳಿಯುತ್ತಾರಾ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವರಾಮೇಗೌಡ ಸರ್ಕಸ್‍ನಲ್ಲಿನ ಜೋಕರ್: ಮಧು ಮಾದೇಗೌಡ

    ಶಿವರಾಮೇಗೌಡ ಸರ್ಕಸ್‍ನಲ್ಲಿನ ಜೋಕರ್: ಮಧು ಮಾದೇಗೌಡ

    ಮೈಸೂರು: ಶಿವರಾಮೇಗೌಡ ಸರ್ಕಸ್‍ನಲ್ಲಿನ ಜೋಕರ್. ಅವನಿಗೆ ಬುದ್ಧಿ ಕಲಿಸಲು ನಮಗೆ ಗೊತ್ತಿದೆ ಎಂದು ದಿವಂಗತ ಮಾದೇಗೌಡ ಅವರ ಪುತ್ರ ಮಧು ಮಾದೇಗೌಡ ವಾಗ್ದಾಳಿ ನಡೆಸಿದ್ದಾರೆ.

    ಮಾದೇಗೌಡರಿಗೆ ಎಕ್ಕಡದಲ್ಲಿ ಹೊಡೆದಿದ್ದೆ ಎಂಬ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಡಿಯೋ ವಿಚಾರ ಸಂಬಂಧ ಮಧು ಪ್ರತಿಕ್ರಿಯಿಸಿದರು. ಮಂಡ್ಯ ಭಾಗದಲ್ಲಿ ಶಿವರಾಮೇಗೌಡನನ್ನು 420 ಶಿವರಾಮೇಗೌಡ ಅಂತಾ ಕರೆಯೋದು. ಶಿವರಾಮೇಗೌಡರಿಗೆ ಯಾವ ರೀತಿ ಬುದ್ಧಿ ಹೇಳಬೇಕೋ ಆ ರೀತಿಯೇ ನಾವು ಬುದ್ಧಿ ಹೇಳುತ್ತೇವೆ. ಅವರು ನಮ್ಮ ತಂದೆಯ ಕಾಲು ಹಿಡಿಯೋದನ್ನು ನಾನು ನೋಡಿದ್ದೇನೆ ಎಂದರು.

    ಶಿವರಾಮೇ ಗೌಡರಿಗೆ ಎದರುಗಡೆ ನಿಂತು ಮಾತಾಡುವ ಶಕ್ತಿಯೂ ಇರಲಿಲ್ಲ. 60 ಕೋಟಿ ಖರ್ಚು ಮಾಡಿದರೂ ಶಿವರಾಮೇಗೌಡ ಚುನಾವಣೆಯಲ್ಲಿ ಗೆಲ್ಲಲ್ಲ. 420 ಕೆಲಸ ಮಾಡುವ ಕಾರಣ ಜನ ಹೊಡೆಯುತ್ತಾರೆ ಎಂದು ಎಸ್ಕರ್ಟ್ ಹಾಕಿಕೊಂಡು ತಿರುಗಾಡುತ್ತಾನೆ. ಅವರಿಗೆ ಬುದ್ಧಿ ಕಲಿಸುವುದು ನಮಗೆ ಗೊತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು: ಸಿದ್ದರಾಮಯ್ಯ

    ಶಿವರಾಮೇ ಗೌಡ ಆಡಿಯೋದಲ್ಲೇನಿದೆ..?
    ನಾಗಮಂಗಲದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿರುವ ಶಿವರಾಮೇಗೌಡರು ಜೆಡಿಎಸ್ ಮಹಿಳಾ ಕಾರ್ಯಕರ್ತೆ ಜೊತೆ ಮಾತಾಡಿರುವ ಆಡಿಯೋ ಎಲ್ಲೇಡೆ ಹರಿದಾಡುತ್ತಿದೆ. ಮಂಡ್ಯ ಲೋಕಸಭಾ ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡಿದ್ದೇನೆ. ಎಂಎಲ್‍ಸಿ ಎಲೆಕ್ಷನ್‍ಗೆ 27 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ಎಂಎಲ್‍ಎ ಎಲೆಕ್ಷನ್‍ಗೆ 30 ಕೋಟಿ ರೂಪಾಯಿ ಖರ್ಚು ಮಾಡ್ತೇನೆ. ನನ್ನದು 8 ಸ್ಕೂಲ್ ಇದೆ, ತಿಂಗಳಿಗೆ 3 ಕೋಟಿ ಸಂಬಳ ಕೊಡ್ತೇನೆ. ನಾಗಮಂಗಲ ಎಲೆಕ್ಷನ್‍ಗೂ 10 ತಿಂಗಳ ಸಂಬಳದಷ್ಟೇ ಹಣ ಬೇಕು. ಎಂಎಲ್‍ಎ ಎಲೆಕ್ಷನ್‍ಗೆ ಅಷ್ಟೂ ದುಡ್ಡು ಖರ್ಚು ಮಾಡುತ್ತೇನೆ ಎಂದು ಮಾತನಾಡಿಕೊಂಡು ಬಳಿಕ ದಿವಂಗತ ಮಾದೇಗೌಡರ ಬಗ್ಗೆ ನಿಂದಿಸಿರುವುದು ಆಡಿಯೋದಲ್ಲಿದೆ. ಇದನ್ನೂ ಓದಿ: MLA ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡ್ತೀನಿ – ಶಿವರಾಮೇಗೌಡ ಆಡಿಯೋ ವೈರಲ್

  • ನಾಗಮಂಗಲ ಟಿಕೆಟ್ ನಂದೇ, ನೆಕ್ಸ್ಟ್ ಎಂಎಲ್‍ಎ ನಾನೇ: ಶಿವರಾಮೇಗೌಡ

    ನಾಗಮಂಗಲ ಟಿಕೆಟ್ ನಂದೇ, ನೆಕ್ಸ್ಟ್ ಎಂಎಲ್‍ಎ ನಾನೇ: ಶಿವರಾಮೇಗೌಡ

    ಮಂಡ್ಯ: ಸಕ್ಕರೆ ನಾಡಿನಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. 2023ರ ಚುನಾವಣೆಗೆ ನಾಗಮಂಗಲ ಕ್ಷೇತ್ರದ ಟಿಕೆಟ್‍ಗಾಗಿ ಸಮರ ಆರಂಭವಾಗಿದ್ದು, ಹಾಲಿ ಶಾಸಕ, ಮಾಜಿ ಸಂಸದರ ನಡುವೆ ಪೈಪೋಟಿ ಶುರುವಾಗಿದೆ. ನಾಗಮಂಗಲದಲ್ಲಿ ಎಲೆಕ್ಷನ್ ತಯಾರಿ ಆರಂಭಿಸಿರುವ ಶಿವರಾಮೇ ಗೌಡ, ಟಿಕೆಟ್ ನಂದೇ, ನೆಕ್ಸ್ಟ್ ಎಂಎಲ್‍ಎ ನಾನೇ ಎಂದು ಗುಡುಗಿದ್ದಾರೆ. ಈ ಮೂಲಕ ಶಾಸಕ ಸುರೇಶ್ ಗೌಡ ವಿರುದ್ಧ ಮಾಜಿ ಸಂಸದರು ತೊಡೆತಟ್ಟಿದ್ದಾರೆ.

    ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ, ಈ ಬಾರಿ ನಾಗಮಂಗಲದಲ್ಲಿ ನಂದೇ ಆಟ. ಟಿಕೆಟ್ ತೆಗೆದುಕೊಂಡು ನೋಡಿದ್ದೀನಿ, ತೆಗೆದುಕೊಳ್ಳದೆಯೂ ನೋಡಿದ್ದೀನಿ. ಚುನಾವಣೆ ಸಿದ್ದತೆ ಪ್ರಾರಂಭ ಮಾಡಿದ್ದೇವೆ. ನಾವು ಎಷ್ಟೇ ಹಳಬರು ಇದ್ದರೂ ಜನ ಸಂಪರ್ಕದಲ್ಲೆ ಇರಬೇಕು. ಜೆಡಿಎಸ್ ನಲ್ಲಿದ್ದೇನೆ, ಜೆಡಿಎಸ್ ಅಭ್ಯರ್ಥಿಯಾಗುತ್ತೇನೆ ಎಂದು ಶಿವರಾಮೇ ಗೌಡ ಹೇಳಿದ್ದಾರೆ.

    ಹಾಲಿ ಶಾಸಕ ಸುರೇಶ್ ಗೌಡರನ್ನ ಲೋಕಸಭೆಗೆ ಕಳಿಸೋಣ. ಅವರು ತುಂಬಾ ಚೆನ್ನಾಗಿ ಇಂಗ್ಲಿಷ್-ಹಿಂದಿ ಮಾತನಾಡುತ್ತಾರೆ. ಸುರೇಶ್ ಗೌಡರು ಒಪ್ಪದಿದ್ರೇ ಜನರೇನು ದಡ್ಡರಾ..?, ನಮ್ಮ ನಾಯಕರು ದಡ್ಡರಾ..? ಸುರೇಶ್ ಗೌಡರಿಗೆ ಟಿಕೆಟ್ ಎಂದು ಎಚ್‍ಡಿಡಿ, ಎಚ್‍ಡಿಕೆ ಮಾತುಕೊಟ್ಟಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಹಾಲಿ ಶಾಸಕ ಸುರೇಶ್‍ಗೌಡಗೆ ಶಿವರಾಮೇಗೌಡ ಟಕ್ಕರ್ ಕೊಟ್ಟಿದ್ದಾರೆ.

  • ತೊಂದರೆ ನೀಡಿ ಒತ್ತಡ ಹಾಕಿದ್ದರಿಂದ ನಿಷ್ಠಾವಂತ ಡಿಸಿ ವರ್ಗಾವಣೆ: ಸುಮಲತಾ ಅಂಬರೀಶ್

    ತೊಂದರೆ ನೀಡಿ ಒತ್ತಡ ಹಾಕಿದ್ದರಿಂದ ನಿಷ್ಠಾವಂತ ಡಿಸಿ ವರ್ಗಾವಣೆ: ಸುಮಲತಾ ಅಂಬರೀಶ್

    ಮಂಡ್ಯ: ನಿಷ್ಠಾವಂತ ಡಿಸಿಯಾಗಿದ್ದ ಮಂಜುಶ್ರೀ ಅವರಿಗೆ ತೊಂದರೆ ಕೊಟ್ಟು, ಒತ್ತಡ ಹಾಕಿ ಕೆಲಸ ಮಾಡಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ನಾನು ಹೇಳಿದ್ದನ್ನೆಲ್ಲಾ ಆರೋಪ ಎಂದು ಹೇಳುತ್ತಿದ್ದರು. ಇದೀಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ನನ್ನ ಮಾತಲ್ಲಿ ನಿಜ ಇದ್ದ ಕಾರಣ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ ಅವರನ್ನು ವರ್ಗಾ ಮಾಡಿದ್ದಾರೆ. ನನಗೆ ಸಿಆರ್‍ಪಿಎಫ್ ಭದ್ರತೆ ಬೇಕು ಎಂದು ಕೇಳಿದ್ದೇನೆ ಅಂದ್ರು.

    ಇದೇ ವೇಳೆ ಅಂಗವಿಕಲ ಹೆಣ್ಣು ಮಗಳು ಕಷ್ಟಪಟ್ಟು ಐಎಎಸ್ ಮಾಡಿ ನಿಷ್ಠಾವಂತಳಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಒಬ್ಬಳು ಹೆಣ್ಣು ಮಗಳ ಕಷ್ಟವನ್ನು ಅರ್ಥ ಮಾಡಿಕೊಳ್ಳದೇ ಅವರನ್ನು ಇಲ್ಲಿಂದ ಓಡಿಸಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಈ ಮಾತಲ್ಲಿ ಅರ್ಥವೇ ಇಲ್ಲ. ಯಾಕಂದ್ರೆ ಅಂಥವರಿಗೆ ಮೊದಲು ತೊಂದರೆ ಕೊಟ್ಟು, ಒತ್ತಡ ಹೇರಿದ್ದಾರೆ. ಹೀಗಾಗಿ ಸರ್ಕಾರದ ವಿಷಯದಲ್ಲಿ ಆ ಮಾತುಗಳನ್ನು ಆಡಲೇ ಬಾರದು ಅಂದ್ರು.

    ಸಿದ್ದರಾಮಯ್ಯಗೆ ಟಾಂಗ್:
    ಪಕ್ಷೇತರ ಅಭ್ಯರ್ಥಿ ಸುಮಲತಾರನ್ನು ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಟಾಂಗ್ ಕೊಟ್ಟ ಸುಮಲತಾ, ಕಾವೇರಿ ನೀರಿಗಾಗಿ ದೇವೇಗೌಡರು ಮಾತ್ರ ಹೋರಾಟ ಮಾಡಿಲ್ಲ. ನನ್ನ ಗಂಡ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಕಾವೇರಿ ನೀರಿಗಾಗಿ ರಾಜೀನಾಮೆ ಕೊಟ್ಟ ಏಕೈಕ ವ್ಯಕ್ತಿ ಅಂಬರೀಶ್ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಮಾಯಾಂಗನೆ ಹೇಳಿಕೆಗೆ ಪ್ರತಿಕ್ರಿಯೆ:
    ಇದೇ ವೇಳೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರನ್ನು ಮೀರಿಸುವ ಮಾಯಾಂಗನೆಯಾಗಿ ಹೋರಾಟ ಮಾಡುತ್ತಿದ್ದಾರೆ ಸಂಸದ ಶಿವರಾಮೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ಜೆಡಿಎಸ್ ನಲ್ಲಿ ಯಾರು ತಾನೆ ಒಳ್ಳೆಯ ಮಾತನ್ನಾಡುತ್ತಾರೆ. ಅವರ ಹೇಳಿಕೆಗೆ ನಾನು ಬೆಲೆ ಕೊಡಲ್ಲ. ಜನ ಕೂಡ ಅವರ ಮಾತಿಗೆ ಬೆಲೆ ಕೋಡೋದಿಕ್ಕೆ ಸಾಧ್ಯನೇ ಇಲ್ಲ. ಹೀಗಾಗಿ ಅವರ ಮಾತಿಗೆ ನಾನೇನು ತಲೆಕೆಡಿಸಿಕೋಳ್ಳೋದಕ್ಕೆ ಹೋಗಲ್ಲ ಎಂದರು.