Tag: ಶಿವರಾತ್ರಿ

  • ಶಿವನಿಗೆ ಬಿಲ್ವಪತ್ರೆಯಿಂದ ಯಾಕೆ ಪೂಜಿಸ್ತಾರೆ?

    ಶಿವನಿಗೆ ಬಿಲ್ವಪತ್ರೆಯಿಂದ ಯಾಕೆ ಪೂಜಿಸ್ತಾರೆ?

    ಬಿಲ್ವ ಪತ್ರೆ ಶಿವನಿಗೆ ಪ್ರಿಯವಾದದ್ದು. ಸಾಧಾರಣವಾಗಿ ಎಲ್ಲಾ ಶಿವ ಕ್ಷೇತ್ರದಲ್ಲಿ ಬಿಲ್ವ ವೃಕ್ಷವಿರುತ್ತದೆ. ಇದು ಮುಳ್ಳುಗಳಿರುವ ಸುವಾಸಿತ ವೃಕ್ಷ. ಇದರ ಎಲೆ ತ್ರಿದಳಗಳಿಂದ ಕೂಡಿರುತ್ತದೆ. ಇದು ಶಿವನ ಮೂರು ಕಣ್ಣುಗಳನ್ನು ಸೂಚಿಸುತ್ತದೆ.

    ತ್ರಿಕೋನಾಕೃತಿಯ ಎಲೆಗಳು ಅಥವಾ ಬಿಲ್ವ ವೃಕ್ಷದ 3 ಚಿಗುರೆಲೆಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಏಕೆಂದರೆ ಅವು ಶಿವನಿಗೆ ಬಹಳ ಪ್ರಿಯವಾಗಿವೆ. ಬಿಲ್ವ ಮರವನ್ನು ಶಿವನ ರೂಪವೆಂದು ಪರಿಗಣಿಸಲಾಗಿದೆ. ಬಿಲ್ವಪತ್ರೆಯನ್ನು ಅರ್ಪಿಸದೆ ಮಾಡುವ ಶಿವನ ಆರಾಧನೆಯು ಫಲವಿಲ್ಲವೆಂದೂ ಹೇಳಲಾಗುತ್ತದೆ.

    ಪಾರ್ವತಿಯ ಬೆವರ ಹನಿಯಲ್ಲಿ ಚಿಗುರಿದ ವೃಕ್ಷ
    ಮಂದರ ಪರ್ವತ ಏರಿದ ಪಾರ್ವತಿ ದೇವಿಗೆ ಆಯಾಸವಾಗಿತ್ತು. ಆಗ ಆಕೆ ಅಲ್ಲಿ ವಿಶ್ರಾಂತಿಗೆ ಕುಳಿತಿದ್ದಳು. ಆಗ ಆಕೆಯ ಬೆವರ ಹನಿ ಭೂಮಿಯ ಮೇಲೆ ಬಿತ್ತು. ಆ ಹನಿಯಿಂದ ಮೂಡಿದ ವೃಕ್ಷವೇ ಬಿಲ್ವ ವೃಕ್ಷ, ಹಾಗಾಗಿಯೇ ಶಿವನಿಗೆ ಅದರ ಮೇಲೆ ಪ್ರೀತಿ ಎಂಬ ಕತೆ ಇದೆ.

    ಸಮುದ್ರ ಮಂಥನದಲ್ಲಿ ಹುಟ್ಟಿದ ಬಿಲ್ವ ವೃಕ್ಷ
    ಮತ್ತೂಂದು ಕತೆಯಲ್ಲಿ ದೇವ-ದಾನವರು ಅಮೃತಕ್ಕಾಗಿ ಕ್ಷೀರ ಸಾಗರವನ್ನು ಮಂಥನ ಮಾಡುತ್ತಿದ್ದಾಗ, ಆ ಕ್ಷೀರ ಸಾಗರದಿಂದ ಸಾಕಷ್ಟು ಅನರ್ಘ್ಯ ರತ್ನಗಳು ಸೃಷ್ಟಿಯಾದವು. ಅವುಗಳ ಜೊತೆ ಮಹಾಲಕ್ಷ್ಮೀಯೂ ಬಂದಳು. ಆ ಮಹಾಲಕ್ಷ್ಮಿಯನ್ನು ಕಂಡು ದೈತ್ಯರು ಲಕ್ಷ್ಮಿಯ ಮೇಲೆ ಕಣ್ಣು ಹಾಕಿದರು, ಆಕೆಯನ್ನ ಶತಾಯ ಗತಾಯ ಪಡೆಯುವ ಪ್ರಯತ್ನ ಮಾಡಿದರು. ಆಗ ಬೆಚ್ಚಿ ಬಿದ್ದ ಮಹಾಲಕ್ಷ್ಮಿ ಬಿಲ್ವವೃಕ್ಷವಾಗಿ ನೆಲೆ ನಿಂತಳು. ಹಾಗಾಗಿ ಬಿಲ್ವ ವೃಕ್ಷ ಶ್ರೇಷ್ಠ ವೃಕ್ಷವಾಯ್ತು ಎನ್ನುವ ಕಥೆ ಇದೆ.

    ಬಿಲ್ವದ ಮಹತ್ವ
    ಬಿಲ್ವ ಪತ್ರೆಯಲ್ಲಿ ಮೂರು ದಳಗಳಿರುತ್ತವೆ. ಆ ಮೂರು ದಳಗಳು ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಸಂಕೇತ. ಅಷ್ಟೇ ಅಲ್ಲ, ಪ್ರಾತ: ಕಾಲ, ಮಧ್ಯಾಹ್ನ ಕಾಲ, ಸಂಧ್ಯಾ ಕಾಲಗಳ ಸಂಕೇತವಾಗಿದೆ.

    ಶಿವನಿಗೇಕೆ ಬಿಲ್ವ?
    ಬಿಲ್ವ ಪತ್ರೆಯಿಂದ ನಾವು ಶಿವನನ್ನು ಪೂಜಿಸುತ್ತೇವೆ. ಶಿವ ಎಂದರೆ ಮಂಗಳಕರ. ನಮಗೆ ಮಂಗಳವಾಗಬೇಕಾದರೆ ನಾವು ಸತ್ವ-ರಜಸ್ಸು-ತಮೋಗುಣಗಳನ್ನ ದಾಟಬೇಕು ಎಂಬ ಪಾಠವನ್ನು ಬಿಲ್ವ ಪತ್ರೆಯಿಂದ ಕಲಿಯುತ್ತೇವೆ. ಅವನ ಸಂಕಲ್ಪದ ಹೊರತಾಗಿ ಜಗತ್ತಿಲ್ಲ ಎಂಬ ಭಾವದಲ್ಲಿ ಬಿಲ್ವ ಪತ್ರೆಯನ್ನು ಸಮರ್ಪಿಸಿದರೆ ಖಂಡಿತಾ ಶಿವನ ಅನುಗ್ರಹವಾಗುತ್ತದೆ ಎಂಬ ನಂಬಿಕೆ ಇದೆ.

  • ಮಹಾ ಕುಂಭಮೇಳ ಅಂತ್ಯಕ್ಕೆ 4 ದಿನ ಬಾಕಿ – ಮಹಾಶಿವರಾತ್ರಿ ಹಿನ್ನೆಲೆ ಪುಣ್ಯಸ್ನಾನಕ್ಕೆ ಆಗಮಿಸುತ್ತಿರುವ ಭಕ್ತಕೋಟಿ

    ಮಹಾ ಕುಂಭಮೇಳ ಅಂತ್ಯಕ್ಕೆ 4 ದಿನ ಬಾಕಿ – ಮಹಾಶಿವರಾತ್ರಿ ಹಿನ್ನೆಲೆ ಪುಣ್ಯಸ್ನಾನಕ್ಕೆ ಆಗಮಿಸುತ್ತಿರುವ ಭಕ್ತಕೋಟಿ

    – ಈವರೆಗೂ 60 ಕೋಟಿ ಜನರಿಂದ ಅಮೃತಸ್ನಾನ

    ಪ್ರಯಾಗ್‌ರಾಜ್: ಮಹಾ ಕುಂಭಮೇಳ (Maha Kumbh Mela) ಕಡೆಯ ಹಂತದಲ್ಲಿ ತಲುಪುತ್ತಿರುವ ಹಿನ್ನೆಲೆ ಪ್ರಯಾಗ್‌ರಾಜ್‌ಗೆ (Prayagraj) ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರ ಒಂದೇ ದಿನ 70 ಲಕ್ಷಕ್ಕೂ ಅಧಿಕ ಜನರು ಪುಣ್ಯಸ್ನಾನ ಮಾಡಿದ್ದಾರೆ. ಈವರೆಗೂ 60 ಕೋಟಿಗೂ ಜನರು ಅಮೃತಸ್ನಾನ ಮಾಡಿದ್ದಾರೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.

    ಮೊರಾದಾಬಾದ್ ರೈಲು ನಿಲ್ದಾಣದಲ್ಲಿ ಪ್ರಯಾಗ್‌ರಾಜ್‌ಗೆ ಹೋಗುವ ರೈಲುಗಳಲ್ಲಿ ಸೀಟುಗಳಿಗಾಗಿ ಪೈಪೋಟಿ ನಡೆಯಿತು. ನೌಚಂಡಿ, ಲಿಂಕ್, ಸಂಗಮ್ ಎಕ್ಸ್‌ಪ್ರೆಸ್ ಸೇರಿದಂತೆ ಎಲ್ಲಾ ರೈಲುಗಳು ಜನದಟ್ಟಣೆಯಿಂದ ತುಂಬಿದ್ದವು. ವಿಶೇಷ ರೈಲುಗಳಲ್ಲಿಯೂ ಸಹ ಖಾಲಿ ಸೀಟುಗಳು ಇರಲಿಲ್ಲ. ಫೆ.26 ರ ವರೆಗೆ ಪ್ರಯಾಗ್‌ರಾಜ್‌ಗೆ ಹೆಚ್ಚಿನ ವಿಶೇಷ ರೈಲುಗಳನ್ನು ಇಲಾಖೆ ಓಡಿಸಬಹುದು. ಇದನ್ನೂ ಓದಿ: ಮೋದಿ ಜಿ ಭರವಸೆ ನಂಬಿ ಮಹಿಳೆಯರು ಮೋಸ ಹೋಗಿದ್ದಾರೆ – ದೆಹಲಿ ಸಿಎಂಗೆ ಅತಿಶಿ ಪತ್ರ

    ಮಹಾಕುಂಭದ ಸಮಯದಲ್ಲಿ ಅಪಾರ ಸಂಖ್ಯೆಯ ಭಕ್ತರು ರೈಲು ನಿಲ್ದಾಣಗಳು ಮತ್ತು ರಸ್ತೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಪ್ರಯಾಗ್‌ರಾಜ್ ವಿಮಾನ ನಿಲ್ದಾಣದ ಮೂಲಕವೂ ಪ್ರಯಾಣಿಸುತ್ತಿದ್ದಾರೆ. ಇಲ್ಲಿಯವರೆಗೆ, ಮಹಾ ಕುಂಭಮೇಳದಲ್ಲಿ 3.32 ಲಕ್ಷ ಪ್ರಯಾಣಿಕರು ವಿಮಾನ ಪ್ರಯಾಣದ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

    ಮಹಾಶಿವರಾತ್ರಿ ಉತ್ಸವವನ್ನು ಸುಗಮವಾಗಿ ನಡೆಸಲು ಪೊಲೀಸ್ ಆಡಳಿತ ಸಜ್ಜಾಗಿದೆ. ಹಬ್ಬದ ಸಮಯದಲ್ಲಿ ಜಿಲ್ಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಲಾಗಿದೆ. ಜಿಲ್ಲೆಗೆ ಪ್ರವೇಶಿಸುವ ಏಳು ಪ್ರಮುಖ ಮಾರ್ಗಗಳಲ್ಲಿ ಸಂಚಾರ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಏಳು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಈ ಮಾರ್ಗಗಳಲ್ಲಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್

    ಮಹಾ ಕುಂಭಮೇಳದ ಕೊನೆಯ ಸ್ನಾನ ಫೆ.26 ರಂದು ನಡೆಯಲಿದೆ ಈ ಹಿನ್ನೆಲೆ ನಗರದ ಹೆಚ್ಚಿನ ಹೋಟೆಲ್‌ಗಳು ಈಗಾಗಲೇ ಫೆ.27 ರವರೆಗೆ ಬುಕ್ ಆಗಿವೆ. ಅರೈಲ್‌ನಲ್ಲಿ ನಿರ್ಮಿಸಲಾದ ಟೆಂಟ್ ಸಿಟಿಯಲ್ಲೂ ಬಹುತೇಕ ಅದೇ ಪರಿಸ್ಥಿತಿ ಇದೆ. ಪ್ರತಿದಿನ ಸರಾಸರಿ ಒಂದು ಕೋಟಿಗೂ ಹೆಚ್ಚು ಭಕ್ತರು ಪ್ರಯಾಗರಾಜ್ ತಲುಪುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಯಾಗ್‌ರಾಜ್‌ನ ಜಾತ್ರೆ ಪ್ರದೇಶದಲ್ಲಿ ನಿರ್ಮಿಸಲಾದ ಹೋಟೆಲ್‌ಗಳು, ಹೋಂ ಸ್ಟೇಗಳು ಮತ್ತು ಐಷಾರಾಮಿ ಕಾಟೇಜ್‌ಗಳನ್ನು ಫೆ.26 ರವರೆಗೆ ಮುಂಗಡವಾಗಿ ಕಾಯ್ದಿರಿಸಲಾಗುತ್ತಿದೆ.

    ಅರೈಲ್ ಟೆಂಟ್ ಸಿಟಿಯಲ್ಲಿ 28 ರವರೆಗೆ ಬುಕಿಂಗ್‌ಗಳು ಪೂರ್ಣಗೊಂಡಿವೆ ಎಂದು ಐಆರ್‌ಸಿಟಿಸಿ ಪ್ರಾದೇಶಿಕ ವ್ಯವಸ್ಥಾಪಕ ಅಜಿತ್ ಸಿನ್ಹಾ ತಿಳಿಸಿದ್ದಾರೆ. ಪ್ರಯಾಗ್‌ರಾಜ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಕಲ್ಯಾಣ ಸಂಘದ ಅಧ್ಯಕ್ಷ ಹರ್ಜಿಂದರ್ ಸಿಂಗ್, ಮಹಾ ಕುಂಭಮೇಳಕ್ಕಾಗಿ ನಿರೀಕ್ಷೆಗಿಂತ ಹೆಚ್ಚಿನ ಯಾತ್ರಾರ್ಥಿಗಳು ಪ್ರಯಾಗ್‌ರಾಜ್ ತಲುಪಿದ್ದಾರೆ ಎಂದು ಹೇಳಿದ್ದಾರೆ. ಮಹಾಶಿವರಾತ್ರಿಯವರೆಗೆ ಹೆಚ್ಚಿನ ಹೋಟೆಲ್‌ಗಳು ಜನರಿಂದ ತುಂಬಿರುತ್ತವೆ. ಕೆಲವು ನಿರ್ಬಂಧಗಳಿಂದಾಗಿ ಜನರು ಹೋಟೆಲ್ ತಲುಪಲು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಅವರ ಉತ್ಸಾಹದಲ್ಲಿ ಯಾವುದೇ ಕೊರತೆಯಿಲ್ಲ ಎಂದು ಹೋಟೆಲ್ ಉದ್ಯಮಿ ಯೋಗೇಶ್ ಗೋಯಲ್ ಹೇಳಿದ್ದಾರೆ.

  • ಬೆಂಗಳೂರಿನ ಜೆಪಿ ಪಾರ್ಕ್‍ನಲ್ಲಿ ಮಹಾಶಿವರಾತ್ರಿ ಸಂಭ್ರಮ

    ಬೆಂಗಳೂರಿನ ಜೆಪಿ ಪಾರ್ಕ್‍ನಲ್ಲಿ ಮಹಾಶಿವರಾತ್ರಿ ಸಂಭ್ರಮ

    ಬೆಂಗಳೂರು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಪಿ ಪಾರ್ಕ್‍ನಲ್ಲಿ (Mahashivratri Celebration In JP Park Bengaluru) ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

    ಸ್ಟಾರ್ ನಟರು, ಕಾಮಿಡಿ ಕಿಲಾಡಿಯ ಕಲಾವಿದರು, ಗಾಯಕರು, ನೃತ್ಯಗಾರರಿಂದ ಇಡೀ ರಾತ್ರಿ ಕಾರ್ಯಕ್ರಮ ನಡೆಯುತ್ತಿದೆ. ರ್ಯಾಪರ್ ಚಂದನ್ ಶೆಟ್ಟಿ ಗಾಯನ ನೆರೆದಿದ್ದವರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಅದ್ಧೂರಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ, ಡಾ. ಮಂಜುನಾಥ್, ಶಾಸಕ ಮುನಿರತ್ನ, ಆರ್.ಅಶೋಕ್, ಅಶ್ವಥ್ ನಾರಾಯಣ್ ಹಾಗೂ ನಟ ದರ್ಶನ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದ್ರು.

    ಇತ್ತ ಬೆಂಗಳೂರಿನ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಸಲ್ಲಿಸಲಾಗ್ತಿದೆ. ಮಲ್ಲೇಶ್ವರದ ಕಾಡುಮಲ್ಲೆಶ್ವರ ದೇವಾಲಯದಲ್ಲಿ ಶಿವರಾತ್ರಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದ್ರು. ಇನ್ನು, ನಗರದ ಹಲವೆಡೆ ಶಿವರಾತ್ರಿ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಇದನ್ನೂ ಓದಿ: ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ನೆರವೇರಿಸಿದ ಹಿಂದೂಗಳು

    i

  • Shivaratri Speical – ಶಿವರಾತ್ರಿ ದಿನ ಕೇದಗೆ ಹೂ ಬಳಸಲ್ಲ ಯಾಕೆ? – ಏನಿದು ಪುರಾಣ ಕಥೆ?

    Shivaratri Speical – ಶಿವರಾತ್ರಿ ದಿನ ಕೇದಗೆ ಹೂ ಬಳಸಲ್ಲ ಯಾಕೆ? – ಏನಿದು ಪುರಾಣ ಕಥೆ?

    ಶಿವರಾತ್ರಿ (Shivratri) ದಿನ ಹೂವುಗಳಿಗೆ ಬಹಳ ಬೇಡಿಕೆ ಇರುತ್ತದೆ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಹೂವಿನಿಂದ (Flowers) ಶಿವನನ್ನು (Shiva) ಅಲಂಕರಿಸಲಾಗುತ್ತದೆ. ಆದರೆ ಹೂವಿನ ಅಲಂಕಾರ ಸೇವೆಯಲ್ಲಿ ಕೇದಗೆ ಹೂವಿಗೆ (Kedige Flower) ಅವಕಾಶವಿಲ್ಲ

    ಹೌದು. ಶಿವರಾತ್ರಿ ದಿನ ಕೇದಗೆ ಹೂವಿನ ಬಳಕೆಗೆ ನಿಷೇಧವಿದೆ. ನಿಷೇಧ ಯಾಕೆಂದರೆ ಅದಕ್ಕೂ ಒಂದು ಪುರಾಣ ಕಥೆಯಿದೆ.

    ಕಥೆ ಏನು?
    ಒಂದು ದಿನ ಕ್ಷೀರಸಾಗರದಲ್ಲಿ ಲಕ್ಷ್ಮಿಯಿಂದ ವಿಷ್ಣು (Vishnu) ಕಾಲನ್ನು ಒತ್ತಿಸಿಕೊಳ್ಳುತ್ತಿದ್ದ. ಈ ಸಮಯದಲ್ಲಿ ಬ್ರಹ್ಮ (Brahma) ಆಕಸ್ಮಿಕವಾಗಿ ಅಲ್ಲಿಗೆ ಆಗಮಿಸಿದ. ಸೃಷ್ಟಿಕರ್ತನಾದ ನಾನು ಬಂದರೂ ಸ್ವಾಗತ, ಗೌರವ ನೀಡದ್ದಕ್ಕೆ ಬ್ರಹ್ಮನಿಗೆ ಸಿಟ್ಟು ಬಂದು ಆಕ್ಷೇಪಿಸಿದ. ಇದಕ್ಕೆ ವಿಷ್ಣು ನನ್ನ ಹೊಕ್ಕುಳದಿಂದಲೇ ಹುಟ್ಟಿದ ನಿನಗೆ ಯಾಕೆ ನಾನು ಗೌರವ ಕೊಡಬೇಕು ಎಂದು ಮರು ಪ್ರಶ್ನೆಹಾಕಿದ.

    ಆರಂಭದಲ್ಲಿ ತೆಗಳಿಕೆಯಿಂದ ಆರಂಭವಾದ ಮಾತು ನಂತರ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ವಿಚಾರಕ್ಕೆ ತಿರುಗಿತು. ಸೃಷ್ಟಿ ಮತ್ತು ಸ್ಥಿತಿಯ ಜವಾಬ್ದಾರಿ ಹೊತ್ತ ಇಬ್ಬರು ನಿರಂತರವಾಗಿ ವಾದ ಮಾಡುತ್ತಿದ್ದರೆ ವ್ಯವಸ್ಥೆ ಅಸ್ತವ್ಯಸ್ತವಾಗಬಹುದು ಎಂಬದುನ್ನು ಅರಿತ ದೇವತೆಗಳು ಇಬ್ಬರನ್ನೂ ಸಮಾಧಾನ ಮಾಡಲು ಮುಂದಾಗುತ್ತಾರೆ.  ಇದನ್ನೂ ಓದಿ: Shivaratri Speical: ಶಿವಭಕ್ತಿಗೆ ಒಲಿದ ಆಸ್ಟ್ರೇಲಿಯಾ – ಮುಕ್ತಿ ಗುಹೇಶ್ವರ ದೇವಾಲಯದಲ್ಲಿ ಹಲವು ವಿಶೇಷ!

    ದೇವತೆಗಳ ಸಮಾಧಾನಕ್ಕೆ ಇಬ್ಬರು ಬಗ್ಗದೇ ವಾಗ್ವಾದ ಮುಂದುವರಿಸುತ್ತಲೇ ಇದ್ದರು. ಕೊನೆಗೆ ಇವರಿಬ್ಬರ ಮಧ್ಯೆ ನಡೆಯುತ್ತಿರುವ ವಾದವನ್ನು ನಿಲ್ಲಿಸುವ ಏಕೈಕ ಶಕ್ತಿ ಇರುವುದು ಶಿವನಿಗೆ ಮಾತ್ರ ಎಂದು ಭಾವಿಸಿ ದೇವತೆಗಳು ಲಯ ಕರ್ತೃನ ಮುಂದೆ ಹೋಗಿ ಮೊರೆ ಇಡುತ್ತಾರೆ.

    ದೇವತೆಗಳ ಪ್ರಾರ್ಥನೆಯನ್ನು ಒಪ್ಪಿಕೊಂಡರೂ ಇಬ್ಬರ ಜಗಳ ನಿಲ್ಲಿಸುವುದು ಹೇಗೆ ಎಂದು ಶಿವ ಆಲೋಚಿಸತೊಡಗಿದ. ಕೊನೆಗೆ ವಿಷ್ಣು ಮತ್ತು ಬ್ರಹ್ಮನ ಮಧ್ಯೆ ಕಣ್ಣುಕೋರೈಸುವ ಜ್ಯೋತಿಸ್ತಂಭವಾಗಿ ನಿಂತುಬಿಟ್ಟ. ನಂತರ ಇಬ್ಬರನ್ನು ಉದ್ದೇಶಿಸಿ, ನೀವಿಬ್ಬರೂ ವಾದ ಮಾಡುತ್ತಲೇ ಇದ್ದರೆ ಯಾರು ಶ್ರೇಷ್ಠ ಎನ್ನುವುದು ತಿಳಿಯಲು ಸಾಧ್ಯವಿಲ್ಲ. ಮೂರನೇ ವ್ಯಕ್ತಿ ಮಾತ್ರ ತೀರ್ಪು ನೀಡಲು ಸಾಧ್ಯ. ಹೀಗಾಗಿ ನಿಮಗೆ ನಾನೊಂದು ಪರೀಕ್ಷೆ ಕೊಡುತ್ತೇನೆ. ಈ ಪರೀಕ್ಷೆಯಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರು ಶ್ರೇಷ್ಠ ಎಂದು ಹೇಳುತ್ತಾನೆ. ಈ ಪರೀಕ್ಷೆಯನ್ನು ಸ್ವೀಕರಿಸುವುದಾಗಿ ಇಬ್ಬರು ಒಪ್ಪಿಕೊಳ್ಳುತ್ತಾರೆ. ಇದನ್ನೂ ಓದಿ: ಮಹಾಶಿವರಾತ್ರಿಯಲ್ಲಿ ಜಾಗರಣೆಗಿರುವ ಮಹತ್ವವೇನು?

    ಈಗಲೇ ನೀವಿಬ್ಬರೂ ಈ ಕಂಬದ ತುದಿಗಳು ಎಲ್ಲಿದೆ ಎಂದು ಪತ್ತೆ ಹಚ್ಚಿಕೊಂಡು ಬನ್ನಿ. ಯಾರು ಮೊದಲು ಪತ್ತೆ ಮಾಡುತ್ತಾರೋ ಅವರೇ ಶ್ರೇಷ್ಠರು ಎಂದು ಶಿವ ಹೇಳುತ್ತಾನೆ. ಕೂಡಲೇ ಬ್ರಹ್ಮ ಹಂಸರೂಪವನ್ನು ಧರಿಸಿ ಕಂಬದ ಮೇಲ್ತುದಿಯನ್ನು ಹುಡುಕಲು ಹೊರಟರೆ ವಿಷ್ಣು ಹಂದಿಯ ರೂಪ ಧರಿಸಿ ಕೆಳಭಾಗವನ್ನು ತಲುಪಲು ಹೋಗುತ್ತಾನೆ. ಬಹಳ ದೂರದವರೆಗೂ ಹೋದರೂ ತುದಿ ಸಿಗದ ಕಾರಣ ವಿಷ್ಣು ಮರಳಿ ಬರುತ್ತಾನೆ.

    ಬ್ರಹ್ಮ ಮೇಲಕ್ಕೆ ಹೋಗುತ್ತಿದ್ದಂತೆ ಗಾಳಿಯಲ್ಲಿ ಹಾರಿಕೊಂಡು ಒಂದು ಕೇದಗೆ ಹೂ ಬರುತ್ತಿರುತ್ತದೆ. ಈ ವೇಳೆ, ನೀನು ಎಲ್ಲಿಂದ ಬಂದೆ ಎಂದು ಬ್ರಹ್ಮ ಕೇಳಿದಾಗ ನಾನು ಶಿವನ ತುತ್ತ ತುದಿಯಿಂದ ಜಾರಿ ಬೀಳುತ್ತಿದ್ದೇನೆ ಎಂದು ಹೇಳಿತು. ಬ್ರಹ್ಮನಿಗೆ ಸಂತೋಷವಾಗಿ ಕೇದಗೆ ಹೂವನ್ನು ಹಿಡಿದುಕೊಂಡು ಶಿವನಿದ್ದಲ್ಲಿಗೆ ಮರಳಿದ. ಗೆಲುವಿನ ಹುಮ್ಮಸ್ಸಿನಲ್ಲಿ ಬ್ರಹ್ಮ, ನಾನು ಮೇಲ್ತುದಿಯನ್ನು ನೋಡಿದ್ದೇನೆ. ಇದಕ್ಕೆ ಈ ಕೇದಗೆ ಹೂವೇ ಸಾಕ್ಷಿ ಎಂದ.

    ಸುಳ್ಳು ಹೇಳಿದ್ದನ್ನು ಕಂಡು ಸಿಟ್ಟಾದ ಶಿವ, ಇನ್ನು ಮುಂದೆ ನಿನ್ನನ್ನು ಯಾರೂ ಪೂಜೆಸಬಾರದು ಎಂದು ಬ್ರಹ್ಮನಿಗೆ ಶಾಪ ನೀಡಿದ. ಜೊತೆಗೆ ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಯಾರದೇ ಪೂಜೆಯಲ್ಲೂ ನಿನ್ನನ್ನು ಸೇರಿಸಬಾರದು ಎಂಬುದಾಗಿ ಶಪಿಸಿದ. ತನ್ನ ತಪ್ಪಿನ ಅರಿವಾದಂತೆ ಕೇದಗೆ ಅಂಗಲಾಚಿ ಬೇಡಿದ್ದರಿಂದ ಶಿವ, ನನ್ನ ಪೂಜೆಗೆ ನೀನು ಅರ್ಹನಲ್ಲ. ಆದರೆ ನನ್ನ ಆಭರಣ ಸರ್ಪರಾಜ ವಾಸುಕಿಯ ಪೂಜೆ ಅಂದರೆ ನಾಗನ ಪೂಜೆ ನೀನು ಅರ್ಹ ಎಂದು ಹೇಳಿ ಶಾಪದ ತೀವ್ರತೆಯನ್ನು ತಗ್ಗಿಸಿದ.

    ಈ ಕಥೆಯಂತೆ ದೇಶದೆಲ್ಲೆಡೆ ತ್ರಿಮೂರ್ತಿಗಳ ಪೈಕಿ ಶಿವ ಮತ್ತು ವಿಷ್ಣುವಿಗೆ ದೇವಸ್ಥಾನವಿದೆ ಬ್ರಹ್ಮನಿಗೆ ಇಲ್ಲ. ಇದರೊಂದಿಗೆ ನಾಗರ ಪಂಚಮಿಯಂದು ಕೇದಗೆ ಬಹಳ ಮುಖ್ಯ. ಬಹಳಷ್ಟು ಕಡೆ ಪ್ರಸಾದ ರೂಪದಲ್ಲಿ ಕೇದಗೆಯನ್ನೇ ನೀಡಲಾಗುತ್ತದೆ.

     

  • ಶಿವರಾತ್ರಿ ಹಬ್ಬ ಸೇರಿ 3 ದಿನ ರಜೆ- ಊರಿಗೆ ಹೊರಟ ಜನ, ಭಾರೀ ಟ್ರಾಫಿಕ್‌

    ಶಿವರಾತ್ರಿ ಹಬ್ಬ ಸೇರಿ 3 ದಿನ ರಜೆ- ಊರಿಗೆ ಹೊರಟ ಜನ, ಭಾರೀ ಟ್ರಾಫಿಕ್‌

    ಬೆಂಗಳೂರು: ಶಿವರಾತ್ರಿ ಹಬ್ಬ (Maha Shivratri) ಸೇರಿ ಮೂರು ದಿನಗಳ ಕಾಲ ರಜೆಯ ಹಿನ್ನೆಲೆಯಲ್ಲಿ ಜನ ಊರಿಗೆ ಹೊರಟಿದ್ದಾರೆ. ಈಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

    ಶಿವರಾತ್ರಿ ಹಬ್ಬ ಹಾಗೂ ಎರಡನೇ ಶನಿವಾರ ಹಾಗೂ ಭಾನುವಾರ ರಜೆ ಹಿನ್ನೆಲೆಯಲ್ಲಿ ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರಿಗೆ ಹೊರಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಸುತ್ತ ಮುತ್ತ, ಮೈಸೂರು ಬ್ಯಾಂಕ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಉಪಾರಪೇಟೆಯಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನ ಪರದಾಡುತ್ತಿದ್ದಾರೆ.

    ಹಬ್ಬದ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಅಧಿಕಾರಿಗಳು ಈಗಾಗಲೇ ಹೆಚ್ಚುವರಿ ಬಸ್ ಗಳನ್ನು ಬಿಟ್ಟಿದ್ದಾರೆ. ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ರಾಜ್ಯ ಮತ್ತು ಹೊರರಾಜ್ಯದ ನಾನಾ ಪ್ರದೇಶಗಳಿಗೆ ಇಂದಿನಿಂದ 10 ರವರೆಗೆ ಹೆಚ್ಚುವರಿಯಾಗಿ 1,500 ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿದೆ. ಹಾಗೆಯೇ ಬೆಂಗಳೂರಿಗೆ ಬರುವವರಿಗಾಗಿ ಮಾರ್ಚ್‌ 10 ಮತ್ತು 11 ರಂದು ವಿಶೇಷ ಬಸ್‌ಗಳನ್ನು ಬಿಡಲಾಗುತ್ತಿದೆ.

    ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದರೆ 5% ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣ ಟಿಕೆಟ್‌ ಒಟ್ಟಿಗೆ ಕಾಯ್ದಿರಿಸಿದರೆ, 10% ರಷ್ಟು ರಿಯಾಯಿತಿ ಸಿಗಲಿದೆ ಎಂದು ಕೆಎಸ್‌ಆರ್‌ಟಿಸಿಯು ಪ್ರಕಟಣೆಯಲ್ಲಿ ತಿಳಿಸಿತ್ತು.

  • ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ – ರಥಯಾತ್ರೆಗೆ ಹೈಕೋರ್ಟ್ ಅಸ್ತು

    ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ – ರಥಯಾತ್ರೆಗೆ ಹೈಕೋರ್ಟ್ ಅಸ್ತು

    ಕಲಬುರಗಿ: ಮುಂಬರುವ ಮಹಾಶಿವರಾತ್ರಿ ಹಬ್ಬದ (Maha Shivaratri) ಅಂಗವಾಗಿ ಆಳಂದ ಪಟ್ಟಣದಲ್ಲಿ ನಡೆಯುವ ಶ್ರೀ ರಾಘವ ಚೈತನ್ಯ ರಥಯಾತ್ರೆಗೆ ಕಲಬುರಗಿ ಹೈಕೋರ್ಟ್ ಪೀಠ (Kalaburagi, Dharwad Benches of the High Court) ಷರತ್ತು ಬದ್ಧವಾದ ಅನುಮತಿ ನೀಡಿ ಆದೇಶ ಹೊರಡಿಸಿದೆ.

    ಜಿಲ್ಲೆಯ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾದಲ್ಲಿನ (Ladle Mashak Dargah) ಶಿವಲಿಂಗಕ್ಕೆ (Sivalinga) ಪ್ರತಿ ವರ್ಷ ಹಿಂದೂಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಈ ಬಾರಿ ಮಹಾಶಿವರಾತ್ರಿಯಂದು ರಥಯಾತ್ರೆಗೆ ಅನುಮತಿ ನೀಡುವಂತೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಕಾಬಡೆ ಹಾಗೂ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ಅರ್ಜಿ ಸಲ್ಲಿಸಿದ್ದರು. ಇದೀಗ ಕಲಬುರಗಿ ಹೈಕೋರ್ಟ್ ರಥಯಾತ್ರೆ ನಡೆಸಲು ಷರತ್ತು ಬದ್ಧ ಅನುಮತಿ ನೀಡಿದೆ. ಇದನ್ನೂ ಓದಿ: ಒತ್ತುವರಿ ತೆರವು – ಮದ್ಯದ ಉದ್ಯಮಿಯ 400 ಕೋಟಿ ರೂ. ಮೌಲ್ಯದ ಫಾರ್ಮ್‌ಹೌಸ್‌ ಧ್ವಂಸ

    ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾ ವಿವಾದದ ಹಿನ್ನೆಲೆಯಲ್ಲಿ, ಡಿಜೆ (ಧ್ವನಿವರ್ಧಕ), ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವಂತಿಲ್ಲ, ಅನ್ಯ ಸಮುದಾಯದ ವಿರುದ್ಧ ಘೋಷಣೆ ಕೂಗುವಂತಿಲ್ಲ, ವಿವಾದಿತ ಸ್ಥಳದ ಕಡೆಗೆ ರಥ ಕೊಂಡ್ಯೊಯುವಂತಿಲ್ಲ, ಸೂರ್ಯಾಸ್ತದ ನಂತರ ರಥಯಾತ್ರೆ ಮಾಡುವಂತಿಲ್ಲ ಎಂಬ ಐದು ಷರತ್ತುಗಳನ್ನು ವಿಧಿಸಿ ರಥಯಾತ್ರೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.

    ಕಳೆದ 2022ರ ಶಿವರಾತ್ರಿಯಂದು ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗದ ಪೂಜೆಯ ಸಂದರ್ಭದಲ್ಲಿ ದೊಡ್ಡ ಗಲಾಟೆಯಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದನ್ನೂ ಓದಿ: ಶೇಖ್ ಷಹಜಹಾನ್‍ನ 43 ಪ್ರಕರಣಗಳು ನಿಮ್ಮನ್ನು 10 ವರ್ಷ ಬ್ಯುಸಿಯಾಗಿಡಲಿದೆ: ವಕೀಲರಿಗೆ ಕೋರ್ಟ್ ಚಾಟಿ

  • ಶಿವರಾತ್ರಿ ಆಚರಣೆ ವೇಳೆ ಜಾತಿ ಕಲಹ – 14 ಜನರಿಗೆ ಗಾಯ

    ಶಿವರಾತ್ರಿ ಆಚರಣೆ ವೇಳೆ ಜಾತಿ ಕಲಹ – 14 ಜನರಿಗೆ ಗಾಯ

    ಭೂಪಾಲ್: ಶಿವರಾತ್ರಿ (Shivratri) ಹಬ್ಬದ ಆಚರಣೆ ವೇಳೆ ಪ್ರಾರ್ಥನೆ ಸಲ್ಲಿಸುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ 14 ಜನ ಗಾಯಗೊಂಡ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ.

    POLICE JEEP

    ಶಿವರಾತ್ರಿ ಹಿನ್ನೆಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಕೆಲವರು ಪ್ರಾರ್ಥನೆ ಸಲ್ಲಿಸಲು ಛಾಪ್ರಾ ಗ್ರಾಮದ ಶಿವ ದೇವಾಲಯಕ್ಕೆ (Temple) ತೆರಳಿದ್ದರು. ಆಗ ಮೇಲ್ವರ್ಗದ ಕೆಲವರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಜಗಳ ನಡೆದಿದೆ. ಇದನ್ನೂ ಓದಿ: ಸಿಟಿ ರವಿ ಆಪ್ತ ಹೆಚ್‌ಡಿ ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆ

    ಜಗಳದಲ್ಲಿ ಎರಡೂ ಕಡೆಯವರು ಪರಸ್ಪರ ಕಲ್ಲು ಎಸೆದುಕೊಂಡಿದ್ದಾರೆ. ಈ ಘಟನೆಯ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ವಿನೋದ್ ದೀಕ್ಷಿತ್ ತಿಳಿಸಿದ್ದಾರೆ.

    ಪ್ರೆಮ್‍ಲಾಲ್ ಎಂಬುವವರು ನೀಡಿರುವ ದೂರಿನಲ್ಲಿ ಗುರ್ಜರ್ ಸಮುದಾಯದ ಬಯ್ಯಾ ಲಾಲ್ ಪಟೇಲ್ ಬೆಂಬಲಿತ ಗುಂಪು ದಲಿತ ಬಾಲಕಿಯರು ದೇಗುಲ ಪ್ರವೇಶಿಸದಂತೆ ತಡೆದಿದ್ದಾರೆ ಎಂದು ತಿಳಿಸಿದ್ದಾರೆ.

    ಈ ದೂರಿನನ್ವಯ ಪೊಲೀಸರು 17 ಜನ ಶಂಕಿತ ಆರೋಪಿಗಳು ಹಾಗೂ 25 ಜನ ಅಪರಿಚಿತರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಕ್ಷಣೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಪ್ರತಿ ದೂರು ದಾಖಲಿಸಿರುವ ರವೀಂದ್ರ ರಾವ್ ಮರಾಠ ಎಂಬುವವರು, ಪ್ರೇಮ್‍ಲಾಲ್ ಮತ್ತು ಆತನ 33 ಬೆಂಬಲಿಗರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಿ ದೇಗುಲ ಪ್ರವೇಶವನ್ನು ಯಾರು ತಡೆಯಬಾರದು ಎಂದು ಎರಡು ವರ್ಗಗಳಿಗೂ ಮನವರಿಕೆ ಮಾಡಿದರು. ಕೆಲವು ದಿನಗಳಿಂದ ಗ್ರಾಮದಲ್ಲಿ ಅಂಬೇಡ್ಕರ್ (Ambedkar) ಪುತ್ಥಳಿ ನಿರ್ಮಿಸುವ ವಿಚಾರ ಹಾಗೂ ಕೆಲವರು ಪವಿತ್ರವೆಂದು ಭಾವಿಸುವ ಆಲದ ಮರ ಕಡಿಯುವ ವಿಚಾರದಲ್ಲಿ ಅಶಾಂತಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯ ಉಸ್ತುವಾರಿ ತೆಗೆದುಕೊಳ್ಳುವುದಿಲ್ಲ: ನಾರಾಯಣ ಗೌಡ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೊಲೀಸ್‌ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ

    ಪೊಲೀಸ್‌ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ

    ಕಲಬುರಗಿ: ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ (Ladle Mashak Dargah) ಮುಸ್ಲಿಮರು ನಿರ್ವಿಘ್ನವಾಗಿ ಉರುಸ್ (Urus) ಆಚರಿಸಿದರೆ ಹಿಂದೂಗಳು ಯಾವುದೇ ಅಡೆತಡೆ ಇಲ್ಲದೇ ಶ್ರೀರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ (Shivaratri Pooja) ಸಲ್ಲಿಸಿದ್ದಾರೆ.

    ವಕ್ಫ್ ಟ್ರಿಬ್ಯುನಲ್‌ ಕೋರ್ಟ್ ಮತ್ತು ಕಲಬುರಗಿ ಹೈಕೋರ್ಟ್ ಪೀಠ ಅನುಮತಿ ನೀಡಿದ ಹಿನ್ನಲೆಯಲ್ಲಿ ಬಿಗಿ ಭದ್ರತೆಯಲ್ಲಿ 15 ಜನರ ತಂಡ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ (Raghava Chaitanya Shivalinga) ಪೂಜೆ ಸಲ್ಲಿಸಿತು.

    ದರ್ಗಾಕ್ಕೆ ತೆರಳುವ ಮುನ್ನ ಆಳಂದ ಪಟ್ಟಣದ ಹೊರವಲಯದಲ್ಲಿ ಗಣಪತಿ ಪೂಜೆ, ಗಂಗಾ ಪೂಜೆ, ಮಹಾರುದ್ರಾಭಿಷೇಕ ಪೂಜೆ, ಸಹಸ್ರ ಬಿಲ್ವಾರ್ಚನೆ ಪೂಜೆ ಮತ್ತು ಮಹಾಮಂಗಳಾರತಿ ಪೂಜೆ ನೆರವೇರಿಸಲಾಯಿತು. ಶಿವರಾತ್ರಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಹಲವಾರು ಪೂಜಾ ಕೈಂಕರ್ಯಗಳಲ್ಲಿ ಕಡಗಂಚಿ ಶ್ರೀ, ಸಿದ್ದಲಿಂಗ ಶ್ರೀ ಸೇರಿದಂತೆ ಹಲವು ಬಿಜೆಪಿ ಶಾಸಕರು ಮತ್ತು ಮೂರು ಸಾವಿರಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.

    ಪೂಜೆ ಕೈಂಕರ್ಯಗಳು ಮುಗಿದ ಬಳಿಕ ಕಡಗಂಚಿ ಶ್ರೀಗಳು ಮತ್ತು ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ 15 ಜನ ಹಿಂದೂಗಳ ತಂಡ ಬಿಗಿ ಭದ್ರತೆಯಲ್ಲಿ ಲಾಡ್ಲೇ ಮಶಾಕ್ ದರ್ಗಾ ಪ್ರವೇಶ ಮಾಡಿದರು. ಪ್ರತಿಯೊಬ್ಬರ ವಿಳಾಸ ಪರಿಶೀಲಿಸಿ ದರ್ಗಾ ಪ್ರವೇಶಿಸಲು ಅನುಮತಿ ನೀಡಲಾಯಿತು. ಈ ವೇಳೆ ಒಳಗಡೆ ಮೊಬೈಲ್‌ ತೆಗೆದುಕೊಂಡು ಹೋಗಲು ಅನುಮತಿ ನೀಡಿರಲಿಲ್ಲ. ಇದನ್ನೂ ಓದಿ: ಯೋಗಿಯಿಂದಲೇ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಬಿಜೆಪಿ ಪ್ಲಾನ್‌

    ಮುಸ್ಲಿಮರಿಂದ ಪ್ರಾರ್ಥನೆ:
    ಹಿಂದೂಗಳ ಪೂಜೆಗೂ ಮುನ್ನ ವಕ್ಫ್ ಟ್ರಿಬ್ಯುನಲ್ ಕೋರ್ಟ್ ಮತ್ತು ಹೈಕೋರ್ಟ್ ಪೀಠದ ತೀರ್ಪಿನಂತೆ ಬೆಳಗ್ಗೆ 8 ಗಂಟೆಗೆ 15 ಜನ ಮುಸ್ಲಿಂ ಮುಖಂಡರು ಪೊಲೀಸ್ ಬಿಗಿ ಭದ್ರತೆಯಲ್ಲಿ ಲಾಡ್ಲೇ ಮಶಾಕ್ ದರ್ಗಾಕ್ಕೆ ಆಗಮಿಸಿದರು.

     

    ಕಳೆದ ವರ್ಷ ನಡೆದ ಕೋಮು ಗಲಭೆ ಮರುಕಳಿಸದಂತೆ ಈ ಬಾರಿ ಕಲಬುರಗಿ ಜಿಲ್ಲಾ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡ ಹಿನ್ನಲೆಯಲ್ಲಿ ಎರಡು ಧರ್ಮದ ಜನ ನಿರ್ವಿಘ್ನವಾಗಿ ಲಾಡ್ಲೇ ಮಶಾಕ್ ದರ್ಗಾದಲ್ಲಿ ಪೂಜೆ ಸಲ್ಲಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬುದ್ಧ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಸೈಲೆಂಟ್ ಸುನಿ – ರಾರಾಜಿಸುತ್ತಿವೆ ಕಟೌಟ್

    ಬುದ್ಧ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಸೈಲೆಂಟ್ ಸುನಿ – ರಾರಾಜಿಸುತ್ತಿವೆ ಕಟೌಟ್

    ಚಾಮರಾಜಪೇಟೆ: ರಾಜಕೀಯ ಪಕ್ಷ ಸೇರುವ ಸುದ್ದಿ ಹರಿದಾಡಿ ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿ `ಸೈಲೆಂಟ್’ ಆಗಿದ್ದ ಸುನೀಲ್ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಚಾಮರಾಜಪೇಟೆಯ ತುಂಬೆಲ್ಲ ಸೈಲೆಂಟ್ ಸುನೀಲ್ ಬ್ಯಾನರ್, ಕಟೌಟ್‍ಗಳು ರಾರಾಜಿಸುತ್ತಿದ್ದು, ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾನೆ.

    ಶಿವರಾತ್ರಿ (Shivaratri) ಹಬ್ಬದ ಪ್ರಯುಕ್ತ ಸೈಲೆಂಟ್ ಸುನೀಲ್ ಶುಭ ಕೋರಿರುವ ಕಟೌಟ್‍ಗಳು ರಾಜಾಜಿಸುತ್ತಿವೆ. ಸಮಾಜ ಸೇವಕರು ಎಂದು ಬರೆದುಕೊಂಡಿರುವ ಕಟೌಟ್‍ಗಳು ನಗರದೆಲ್ಲೆಡೆ ಗೋಚರಿಸುತ್ತಿವೆ. ಇದನ್ನೂ ಓದಿ: ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ: ರೇವಣ್ಣ ವಿರುದ್ಧ ಎ.ಟಿ.ರಾಮಸ್ವಾಮಿ ವಾಗ್ದಾಳಿ

    ಕಟೌಟ್‍ಗಳಲ್ಲಿ ಬುದ್ಧ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಅಬ್ದುಲ್ ಕಲಾಂ ಅವರ ಭಾವಚಿತ್ರಗಳೊಂದಿಗೆ ಸೈಲೆಂಟ್ ಸುನೀಲ್ ಭಾವಚಿತ್ರವಿರುವ ಪೋಸ್ಟರ್‍ಗಳನ್ನು ಅಳವಡಿಸಲಾಗಿದೆ. ಸೈಲೆಂಟ್ ಸುನೀಲ್ (Silent Sunil) ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯ ತಿಳಿಸಿರುವ ಪೋಸ್ಟರ್ ಇದಾಗಿದೆ.

    41 ವಯಸ್ಸಿನ ಸುನೀಲ್ ಮೇಲೆ ಕೊಲೆ, ದರೋಡೆ, ಅಪಹರಣ, ಭೂ ಮಾಫಿಯಾದಂತಹ ಪ್ರಕರಣಗಳಿವೆ. ಇತ್ತೀಚೆಗೆ ಬಿಜೆಪಿ (BJP) ನಾಯಕರೊಂದಿಗೆ ಕಾಣಿಸಿಕೊಂಡಿದ್ದ. ಇದು ವಿಪಕ್ಷಗಳಿಂದ ತೀವ್ರ ಟೀಕೆಗೆ ಕಾರಣವಾಗಿತ್ತು. ರೌಡಿಶೀಟರ್ ರಾಜಕೀಯ ಪ್ರವೇಶಕ್ಕೆ ಬಿಜೆಪಿ ಕಾರಣವಾಗಿದೆ ಎಂದು ಕಾಂಗ್ರೆಸ್, ಜೆಡಿಎಸ್ ಟೀಕೆ ವ್ಯಕ್ತಪಡಿಸಿದ್ದವು. ಇದನ್ನೂ ಓದಿ: ಸಿನಿಮಾ ಶಿವರಾತ್ರಿ : ಬೆಂಗಳೂರಿನಲ್ಲಿ ‘ರಾಜಕುಮಾರ’, ಹೈದರಾಬಾದ್ ನಲ್ಲಿ ‘ಕಾಂತಾರ’

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಲಬುರಗಿಯ ದರ್ಗಾ ಆವರಣದಲ್ಲಿ ಹಿಂದೂಗಳಿಂದ ಶಿವರಾತ್ರಿ, ಮುಸ್ಲಿಮರಿಂದ ಉರುಸ್ ಆಚರಣೆ

    ಕಲಬುರಗಿಯ ದರ್ಗಾ ಆವರಣದಲ್ಲಿ ಹಿಂದೂಗಳಿಂದ ಶಿವರಾತ್ರಿ, ಮುಸ್ಲಿಮರಿಂದ ಉರುಸ್ ಆಚರಣೆ

    – ಫೆಬ್ರವರಿ 18, 19ರಂದು ನಿಷೇಧಾಜ್ಞೆ ಜಾರಿ
    – ಅಹಿತಕರ ಘಟನೆ ತಡೆಗೆ ಸಿಟಿಟಿವಿ, ಡ್ರೋನ್ ಕಣ್ಗಾವಲು

    ಕಲಬುರಗಿ: ಇಲ್ಲಿನ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿ (Dargah) ಸ್ಥಾಪನೆಯಾಗಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರದಲ್ಲಿ ಹಿಂದೂಗಳಿಗೆ ಮತ್ತೊಂದು ಗೆಲುವು ಸಿಕ್ಕಿದೆ.

    ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರವಾಗಿ ವಕ್ಫ್ ಟ್ರಿಬುನಲ್ (Karnataka Wakf Tribunal) ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಗಾ ಸಮಿತಿಗೆ ಸೋಲಾಗಿದೆ. ಇದನ್ನೂ ಓದಿ: ಕರಾಚಿಯಲ್ಲಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿದ ಉಗ್ರರು – ಗುಂಡಿನ ದಾಳಿ

    ಶಿವರಾತ್ರಿ (MahaShivaratri) ದಿನದಂದೇ ದರ್ಗಾದಲ್ಲಿ ಉರುಸ್ ಕೂಡ ನಡೆಯಬೇಕಿತ್ತು. ಈ ಹಿನ್ನೆಲೆ ಬೆಳಗ್ಗೆ ಮುಸ್ಲಿಮರು, ಮಧ್ಯಾಹ್ನ 2 ಗಂಟೆ ನಂತರ ಹಿಂದೂಗಳು ಪೂಜೆ ನೆರವೇರಿಸುವಂತೆ ಕಳೆದ 4 ದಿನಗಳ ಹಿಂದೆ ಕಲಬುರಗಿ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶಿಸಿತ್ತು. ಆದರೆ ದರ್ಗಾ ಸಮಿತಿ ಇದನ್ನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದನ್ನೂ ಓದಿ: ಕಾಡ್ಗಿಚ್ಚಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಸಾವು

    KALABURAGI DARGA 3

    ನ್ಯಾಯಮೂರ್ತಿ ಜೆ.ಎಮ್ ಖಾಜಿ ನೇತೃತ್ವದ ಏಕಸದಸ್ಯ ಪೀಠವು ಟ್ರಿಬುನಲ್ ಕೋರ್ಟ್ ಆದೇಶ ಪಾಲಿಸುವಂತೆ ಆಳಂದ ಲಾಡ್ಲೇ ಮಶಾಕ್ ದರ್ಗಾ ಸಮಿತಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಿವಾದಿತ ದರ್ಗಾ ಆವರಣದಲ್ಲಿ ಮುಸ್ಲಿಮರು ಶನಿವಾರ (ಫೆ.18) ಬೆಳಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ಉರುಸ್ ಆಚರಿಸಲಿದ್ದಾರೆ. ನಂತರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಿಂದೂಗಳು ದರ್ಗಾ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.

    ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ನೇತೃತ್ವದಲ್ಲಿ ಶ್ರೀರಾಮಸೇನೆ (Sri Ram Sena) ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಸಕರಾದ ಬಸವರಾಜ್ ಮತ್ತಿಮೂಡ್, ರಾಜಕುಮಾರ ಪಾಟೀಲ್ ತೆಲ್ಕೂರ್, ಸುಭಾಷ್ ಗುತ್ತೆದಾರ್ ಸೇರಿ ಪೂಜೆ ಸಲ್ಲಿಸಲಿದ್ದಾರೆ.

    KALABURAGI DARGA 5

    ನಿಷೇಧಾಜ್ಷೆ ಜಾರಿ: ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿ ವರೆಗೆ ಆಳಂದ ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಒಬ್ಬರು ಎಸ್ಪಿ, 9 ಡಿವೈಎಸ್ಪಿ, 73 ಪಿಎಸ್‌ಐ, 26 ಸಿಪಿಐ, 90 ಎಎಸ್‌ಐ, 11 ಕೆಎಸ್‌ಆರ್‌ಪಿ ತುಕಡಿ, 4 ಕ್ವಿಕ್ ರೆಸ್ಪಾನ್ಸ್ ಟೀಂ, 5 ಡಿಎಆರ್ ತುಕಡಿ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅಲ್ಲದೇ ದರ್ಗಾ ಸುತ್ತ ಅತ್ಯಾಧುನಿಕ ಸಿಸಿ ಕ್ಯಾಮೆರಾ, 10 ಡ್ರೋನ್ ಕ್ಯಾಮೆರಾಗಳ ಮೂಲಕ ಚಲನವಲನ ವೀಕ್ಷಣೆ ಮಾಡಲಾಗುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k