ಲಿವರ್ ಮೋರ್‌ನ ಶಿವವಿಷ್ಣು ದೇವಾಲಯ ಅಮೆರಿಕದ ಬೃಹತ್ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ನಿರ್ಮಾಣ ಕಾರ್ಯ 1985ರಲ್ಲಿ ಆರಂಭವಾಗಿ 1992ರಲ್ಲಿ ಪೂರ್ಣಗೊಂಡಿತು.
ದೇವಾಲಯದ ವಾಸ್ತುನಿರ್ಮಾಣದಲ್ಲಿ ಉತ್ತರ ಮತ್ತು ದಕ್ಷಿಣ ಭಾರತೀಯ ವಾಸ್ತುಶೈಲಿಗಳು ಸುಂದರವಾಗಿ ಸೇರಿಕೊಂಡಿವೆ. ಗರ್ಭಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆಯಾಗಿದೆ. ದೇವಾಲಯದ ಅಂಗಣದ ಸುತ್ತ ಗಣೇಶ, ಲಕ್ಷ್ಮೀದೇವಿ, ದುರ್ಗೆ, ಅಯ್ಯಪ್ಪ ಸ್ವಾಮಿ ಗುಡಿಗಳಿವೆ. ಇಲ್ಲಿಗೆ ಹೆಚ್ಚಿನ ವಿಗ್ರಹಗಳನ್ನು 1985ರಲ್ಲಿ ತಮಿಳುನಾಡು ಸರ್ಕಾರ ಕಾಣಿಕೆಯ ರೂಪದಲ್ಲಿ ನೀಡಿತ್ತು. ಅಸಂಖ್ಯ ಭಕ್ತರನ್ನು ಆಕರ್ಷಿಸುವ ಈ ದೇವಾಲಯದಲ್ಲಿ ಎಲ್ಲ ಸಮುದಾಯಗಳ ಜನರಿಗೂ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಇದೆ. ಪ್ರತಿ ವರ್ಷವೂ ಇಲ್ಲಿ ಶಿವರಾತ್ರಿ ಹಬ್ಬದ ದಿನ ವಿಶೇಷ ಪೂಜಾ ಕೈಂಕರ್ಯ, ವಿವಿಧ ಅಭಿಷೇಕಗಳನ್ನು ನೆರವೇರಿಸಲಾಗುತ್ತದೆ.
ಅಮೆರಿಕದಲ್ಲಿ ಇನ್ನೂ ಹಲವು ಶಿವದೇವಾಲಯಗಳಿವೆ. ಡೆನ್ವರ್ (ಕೊಲರಾಡೋ)ನ ಶಿವ ದೇವಾಲಯ ಹದಿನೈದು ವರ್ಷಗಳಷ್ಟು ಹಳೆಯದು. ನಾರ್ತ್ ಕೆರೋಲಿನಾದ ಮೌಂಟ್ ಸೋಮ ಎಂಬ ಪರ್ವತದಲ್ಲಿ ಶ್ರೀಸೋಮೇಶ್ವರ ದೇವಾಲಯ ಇದೆ. ಇದನ್ನು ʻಪಶ್ಚಿಮದ ಕೈಲಾಸ’ ಎಂದು ಕರೆಯಲಾಗುತ್ತದೆ. ವಾಷಿಂಗ್ಟನ್ ಡಿಸಿ ಮತ್ತು ದಕ್ಷಿಣ ಫ್ಲೋರಿಡಾದಲ್ಲಿ ಶಿವ-ವಿಷ್ಣು ದೇವಾಲಯಗಳಿವೆ.
ಮಾರಿಷಸ್‌ನ ದಕ್ಷಿಣ ಭಾಗದಲ್ಲಿ ಬೆಟ್ಟಗಳ ನಡುವೆ ಸಮುದ್ರಮಟ್ಟದಿಂದ 1,800 ಅಡಿ ಎತ್ತರದಲ್ಲಿ ಒಂದು ವಿಶಾಲ ಸರೋವರ ಇದೆ. ಪ್ರಾಚೀನ ಕಾಲದಲ್ಲಿ ಉಲ್ಕಾಪಾತದಿಂದ ನಿರ್ಮಾಣವಾಗಿದ್ದ ಸರೋವರ ಇದು. ಇದಕ್ಕೆ ʻಗಂಗಾ ತಲಾವ್ʼ ಎಂದು ಹೆಸರು.
1897ರಲ್ಲಿ ಶ್ರೀ ಜಮ್ಮೂನ್ ಗಿರಿ ಎಂಬ ದಶನಾಮಿ ಗೋಸಾವಿ (ಸನ್ಯಾಸಿ) ಈ ಸರೋವರದ ಬಳಿ ಒಂದು ಶಿವ ದೇವಾಲಯ ನಿರ್ಮಿಸಿದ್ದರು. ಕೊಳದ ನಡುವೆ ಸುಂದರ ಶಿವವಿಗ್ರಹ ಸ್ಥಾಪನೆಯಾಗಿದೆ. ಮುಂದೆ ಈ ಕೆರೆಯ ಸುತ್ತ ಹನುಮಂತ, ಗಣೇಶ ಮತ್ತು ಗಂಗಾದೇವಿಯರ ದೇವಾಲಯಗಳು ಮತ್ತು ದೊಡ್ಡ ಗಾತ್ರದ ವಿಗ್ರಹಗಳು ಸ್ಥಾಪನೆಯಾದವು. ಇದನ್ನೂ ಓದಿ: ಶಿವನ ಕಣ್ಣೀರಿಂದಲೇ ಶಿವಾಲಯವಾದ ಕಥೆ – ಪಾಕಿಸ್ತಾನದ ಕಟಾಸ್ ರಾಜ್‌ಬಗ್ಗೆ ನಿಮಗೆಷ್ಟು ಗೊತ್ತು?
2008ರಲ್ಲಿ ಇದರ ಪಕ್ಕದ ಬೆಟ್ಟದ ಮೇಲೆ 108 ಅಡಿ ಎತ್ತರದ ಮಹಾದೇವನ ವಿಗ್ರಹ ಸ್ಥಾಪನೆಯಾಗಿತ್ತು. ಬರೋಡಾ (ಗುಜರಾತ್)ದ ಸೂರ್‌ಸಾಗರ್ ಎಂಬ ಸರೋವರದ ನಡುವೆ ಇರುವ ಕೆರೆಯ ಭವ್ಯ ಶಿವವಿಗ್ರಹದ ಮಾದರಿಯಲ್ಲಿ ಈ ಶಿವ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ತ್ರಿಶೂಲ ಹಿಡಿದು ನಿಂತಿರುವ ಮಹಾದೇವನ ಈ ವಿಗ್ರಹಕ್ಕೆ ಮಂಗಲ ಮಹಾದೇವ ಎಂದು ನಾಮಕರಣ ಮಾಡಲಾಗಿದೆ. ಮಾರಿಷಸ್‌ನಲ್ಲೇ ಇಷ್ಟೊಂದು ದೊಡ್ಡ ಪ್ರತಿಮೆ ಬೇರೊಂದಿಲ್ಲ.
ಗಂಗಾ ತಲಾವ್‌ನ ಶಿವದೇವಾಲಯವಿಂದು ಮಾರಿಷಸ್‌ನ ಹಿಂದೂಗಳ ಆದ್ಯ ತೀರ್ಥಕ್ಷೇತ್ರವಾಗಿದೆ. ಶಿವರಾತ್ರಿಯ ವೇಳೆ ಭಕ್ತರು ಇಲ್ಲಿನ ಶಿವಾಲಯಕ್ಕೆ ಬರಿಗಾಲಿನಲ್ಲಿ ನಡೆದುಕೊಂಡು ಬರುತ್ತಾರೆ. ಇದನ್ನೂ ಓದಿ: Maha Shivaratri| ನಾಗ ಸಾಧುಗಳು ಶಿವನನ್ನು ಪೂಜಿಸೋದು ಯಾಕೆ?
ಭಾರತದಲ್ಲಿ ಶಿವಾಲಯವಿಲ್ಲದ ಊರೇ ಇಲ್ಲ. ಹೆಚ್ಚಿನ ಶಿವಾಲಯಗಳು ನೂರಾರು ವರ್ಷಗಳಷ್ಟು ಪುರಾತನವಾಗಿವೆ, ಕೆಲ ಶಿವಾಲಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರೆ, ಇನ್ನೂ ಕೆಲ ಶಿವಾಲಯಗಳು ಊರ ಜನರ ಶ್ರೀರಕ್ಷೆಯ ನಂಬಿಕೆಯಾಗಿ ಉಳಿದಿವೆ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ, ಅಸ್ಸಾಂ, ಅರುಣಾಚಲ ಪ್ರದೇಶಗಳಿಂದ ಹಿಡಿದು ಗುಜರಾತ್ ತನಕ ಪ್ರತಿಯೊಂದು ಪ್ರಾಂತ್ಯದಲ್ಲೂ ಭವ್ಯ, ಐತಿಹಾಸಿಕ ಶಿವ ದೇವಾಲಯಗಳು ಒಂದನ್ನೊಂದು ಮೀರಿಸುವಂತಿವೆ.
ಕೇದಾರನಾಥ ಮಂದಿರ, ಭಾರತದ ಸುಪ್ರಸಿದ್ಧ ಮತ್ತು ಆದ್ಯ ಶಿವ ದೇವಾಲಯ (Shiva Temple). ಅಮರನಾಥ ಕ್ಷೇತ್ರ, ಸ್ವಯಂಭೂ ಹಿಮಲಿಂಗದ ಅದ್ಭುತ ದೇವಾಲಯ. ಕಾಶೀ ವಿಶ್ವನಾಥ ದೇವಾಲಯದಿಂದಾಗಿ ಈ ಕ್ಷೇತ್ರ ಅವಿಮುಕ್ತ ಸ್ಥಾನ ಎಂದು ಪ್ರಸಿದ್ಧ. ಮಹಾಕಾಲೇಶ್ವರ, ಬಾಬಾ ಭೂತನಾಥ ಮಂದಿರ, ತುಂಗನಾಥ ಮಹಾದೇವ, ಬಾಬಾ ಬೈದ್ಯನಾಥ ಮಂದಿರ, ಸೋಮನಾಥ ದೇವಾಲಯ, ಓಂಕಾರೇಶ್ವರ, ತಾರಕೇಶ್ವರ, ತ್ರ್ಯಂಬಕೇಶ್ವರ ಸನ್ನಿಧಾನ ಇವೆಲ್ಲ ಉತ್ತರ ಭಾರತದ ಸುಪ್ರಸಿದ್ಧ ಶಿವದೇವಾಲಯಗಳಾದರೆ, ದಕ್ಷಿಣ ಭಾರತದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ, ಚಿದಂಬರಂನ ನಟರಾಜ, ರಾಮೇಶ್ವರಂನ ರಾಮನಾಥಸ್ವಾಮಿ ದೇವಾಲಯ, ಕರ್ನಾಟಕದ ಕಡಲ ತೀರದ ಮುರುಡೇಶ್ವರ ದೇವಾಲಯ, ಕೇರಳದ ವಡಕ್ಕುನಾಥನ್ ದೇವಾಲಯ… ಹೀಗೆ ಜನಪ್ರಿಯ ಶಿವದೇವಾಲಯಗಳ ಯಾದಿ ಬಹುದೀರ್ಘವಾಗಿದೆ.
ಇವೆಲ್ಲ ಭಾರತದ ಶಿವದೇವಾಲಯಗಳು… ಶಿವದೇವಾಲಯಗಳ ವ್ಯಾಪ್ತಿ ಇಲ್ಲಿಗೇ ನಿಲ್ಲುವುದಿಲ್ಲ. ಸದಾಶಿವನ ಕೀರ್ತಿಪತಾಕೆ ಭಾರತದ ಹೊರಗೂ ವಿಜೃಂಭಿಸುತ್ತಿದೆ. ಪಾಕಿಸ್ತಾನ (Pakistan), ಶ್ರೀಲಂಕೆಯಿಂದ ಹಿಡಿದು, ಆಗೇಯ ಏಷ್ಯಾದ ದೇಶಗಳ ತನಕ ನೂರಾರು ಜಾಗಗಳಲ್ಲಿ ಪ್ರಾಚೀನ ಶಿವಾಲಯಗಳಿವೆ. ಇದೀಗ ಪಾಶ್ಚಾತ್ಯ ದೇಶಗಳಲ್ಲೂ ಭಾರತೀಯರು ತಾವು ಹೋದ ಕಡೆಗಳಲ್ಲೆಲ್ಲ ಮುಂದಿನ ಪೀಳಿಗೆಗಾಗಿ ಭವ್ಯ ಶಿವಾಲಯ ನಿರ್ಮಿಸುತ್ತಿದ್ದಾರೆ.
ವರ್ಷದಿಂದ ವರ್ಷಕ್ಕೆ ಶಿವರಾತ್ರಿಯ ಸಂಭ್ರಮವನ್ನು ಆಚರಿಸುತ್ತಿರುವ ಈ ಗಡಿಯಾಚೆಗಿನ ಶಿವಾಲಯದ ಬಗ್ಗೆ ಒಂದಿಷ್ಟು ತಿಳಿಯೋಣ….
ಪಾಕಿಸ್ತಾನದ ಕಟಾಸ್ ರಾಜ್ ದೇವಾಲಯ ಚಕ್ವಾಲ್:
ಕಟಾಸ್‌ರಾಜ್ ಶಿವ ದೇವಾಲಯ (Katas Raj Temple) ಇರುವುದು ಪಾಕಿಸ್ತಾನದ ಪಂಜಾಬ್ ರಾಜ್ಯದ ಚಟ್ಬಾಲ್ ಜಿಲ್ಲೆಯಲ್ಲಿ, ಇದು ರಾಮಾಯಣ, ಮಹಾಭಾರತಗಳಷ್ಟೇ ಹಳೆಯದು ಎಂದು ಹೇಳುತ್ತಾರೆ. ಪಾಂಡವರು ತಮ್ಮ ವನವಾಸದ ಹೆಚ್ಚಿನ ಭಾಗವನ್ನು ಇಲ್ಲಿ ಕಳೆದಿದ್ದರು ಎಂದು ಸ್ಥಳಪುರಾಣ ಹೇಳುತ್ತದೆ.
ಕಟಾಸ್‌ರಾಜ್ ಎಂಬುದು ಇಲ್ಲಿರುವ ಕೊಳದ ಹೆಸರು. ಈ ಕೊಳದಲ್ಲಿ ದೈವಿಕ ಶಕ್ತಿ ಇದೆ ಎಂದು ಜನರು ನಂಬುತ್ತಾರೆ. ಸ್ಥಳಪುರಾಣದ ಪ್ರಕಾರ ದಕ್ಷಯಜ್ಞದಲ್ಲಿ ಆತ್ಮಾಹುತಿ ಮಾಡಿಕೊಂಡಾಗ ಶಿವನ ಕಣ್ಣೀರಿನಿಂದ ಎರಡು ಕೊಳಗಳು ನಿರ್ಮಾಣವಾದವು. ಇವುಗಳಲ್ಲಿ ಒಂದು ಪುಷ್ಕರ, ಇನ್ನೊಂದು ಕೇತಾಕ್ಷ ಅರ್ಥಾತ್ ಕಣ್ಣೀರು. ಇದೇ ಶಬ್ದ ಜನರ ಬಾಯಿಯಲ್ಲಿ ʻಕಟಾಸ್ʼ ಎಂದು ಸ್ಥಳಪುರಾಣದಲ್ಲಿದೆ.
ಕಟಾಸ್‌ರಾಜ್ ಇರುವುದು ಭೂಮಟ್ಟದಿಂದ 2,000 ಅಡಿ ಎತ್ತರದ ಪ್ರದೇಶದಲ್ಲಿ. ಇದರ ಸುತ್ತಲೂ ಬಯಲುಭೂಮಿ ಇದೆ. ಕಟಾಸ್‌ರಾಜ್‌ನ ಸುತ್ತ ಏಳು ದೇವಾಲಯಗಳಿವೆ. ಇವುಗಳಿಗೆ ಸಾತ್‌ಘರ್ ಎಂದು ಹೆಸರಿದೆ. ಚೌಕಾಕಾರದ ವೇದಿಕೆಗಳ ಮೇಲೆ ನಿರ್ಮಾಣವಾಗಿರುವ ಸರಳ ವಾಸ್ತುರಚನೆಯ ಈ ದೇವಾಲಯಗಳು ಕಾಶ್ಮೀರದ ದೇವಾಲಯಗಳನ್ನು ಹೋಲುತ್ತವೆ. ಇವುಗಳಲ್ಲಿ ಸುಪ್ರಸಿದ್ಧವಾಗಿರುವುದು ಶಿವ ದೇವಾಲಯ. ಮಹಾಭಾರತ ಕಾಲದಲ್ಲಿ ಶ್ರೀಕೃಷ್ಣ ಸ್ವಯಂ ಇಲ್ಲಿನ ಶಿವ ದೇವಾಲಯ ನಿರ್ಮಿಸಿ, ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದ ಎನ್ನುತ್ತದೆ ಸ್ಥಳಪುರಾಣ. ಪಾಂಡವರು ವನವಾಸ ಕಳೆದಿದ್ದು ಇದೇ ಪರಿಸರದಲ್ಲಿ ಎಂದೂ ಸಹ ಹೇಳಲಾಗಿದೆ.
4ನೇ ಶತಮಾನದಲ್ಲಿ ಚೀನೀ ಯಾತ್ರಿ ಫಾಹಿಯಾನ್ ಇಲ್ಲಿಗೆ ಭೇಟಿ ನೀಡಿ, ಇಲ್ಲಿನ ದೇವಾಲಯಗಳ ಬಗ್ಗೆ ಬರೆದಿದ್ದ. ಗುರುನಾನಕ್ ಈ ದೇವಾಲಯಗಳಿಗೆ ಭೇಟಿ ನೀಡಿದ್ದರು, ಇಲ್ಲಿ ತಪಸ್ಸಿಗೆ ಕುಳಿತಿದ್ದರು ಎಂದು ಸಿಖ್ಖರು ನಂಬುತ್ತಾರೆ. ಸಿಕ್ಖ್ ಚಕ್ರವರ್ತಿ ರಣಜಿತ್ ಸಿಂಗ್ ಎರಡು ಬಾರಿ ಇಲ್ಲಿಗೆ ತೀರ್ಥಯಾತ್ರೆ ಮಾಡಿದ್ದ.
ಭಾರತ ವಿಭಜನೆಗೆ ಮೊದಲು ಈ ದೇವಾಲಯ ಉತ್ತರ ಭಾರತೀಯ ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗಿತ್ತು. ಈ ದೇವಾಲಯ ಹಲವು ಸಂಪ್ರದಾಯಗಳ ಜನರ ಪವಿತ್ರ ಕ್ಷೇತ್ರವಾಗಿತ್ತು. ಹಿಂದೂಗಳು 1947ರಲ್ಲಿ ಭಾರತಕ್ಕೆ ವಲಸೆ ಹೋದರೂ ಈ ದೇವಾಲಯದ ನಂಟು ಬಿಡಲಿಲ್ಲ. ಇಂದಿಗೂ ಎಲ್ಲ ಸಂಪ್ರದಾಯಗಳ ಜನರು ಇಲ್ಲಿ ತೀರ್ಥಯಾತ್ರೆಗೆ ಬರುತ್ತಾರೆ. ಇವರು ದೇವಾಲಯದ ಮುಂದಿನ ಕೊಳದಲ್ಲಿ ಸ್ನಾನಮಾಡಿ, ದೇವಾಲಯವನ್ನು ಪ್ರವೇಶಿಸುತ್ತಾರೆ.
ಕಟಾಸ್‌ರಾಜ್ ಕೊಳಕ್ಕೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಇದೆ. ವನವಾಸದ ವೇಳೆ ಯುಧಿಷ್ಠಿರನನ್ನು ಯಮಧರ್ಮರಾಯ ಯಕ್ಷನ ರೂಪದಲ್ಲಿ ಭೇಟಿಯಾಗಿ ಯಕ್ಷಪ್ರಶ್ನೆಗಳನ್ನು ಕೇಳಿದ್ದು ಇದೇ ಕೊಳದ ದಂಡೆಯ ಮೇಲೆ ಎಂದು ಸ್ಥಳಪುರಾಣ ಹೇಳುತ್ತದೆ.
1965ರ ಭಾರತ-ಪಾಕ್ ಯುದ್ಧದ ಬಳಿಕ ಇಲ್ಲಿಗೆ ಹಿಂದೂಗಳು ಬರಲು ಅನುಮತಿ ಇರಲಿಲ್ಲ. 1984ರ ತನಕವೂ ಇಲ್ಲಿಗೆ ಭೇಟಿ ನೀಡಲು ಭಾರತೀಯರಿಗೆ ಅನುಮತಿ ಸಿಗುತ್ತಿರಲಿಲ್ಲ. ಆದರೀಗ ಸ್ಥಳೀಯ ಮುಸ್ಲಿಮರು ದೇವಾಲಯಗಳ ಜಾಗದಲ್ಲಿ ನಿವಾಸ ಹೂಡಿದ್ದಾರೆ, ಕಟಾಸ್‌ರಾಜ್ ಕೊಳದ ನೀರನ್ನು ಕೊಳಚೆ ಹೊಂಡವಾಗಿ ಮಾಡಿದ್ದಾರೆ. ಕಟಾಸ್‌ರಾಜ್ ದೇವಾಲಯಗಳ ಪರಿಸರದಲ್ಲಿ ಹಲವಾರು ಬೋರ್‌ವೆಲ್‌ಗಳಿದ್ದು, ಇಲ್ಲಿನ ನೀರನ್ನು ಔದ್ಯೋಗಿಕ ಕಾರ್ಯಗಳಿಗೆ ಬಳಸುತ್ತಿರುವ ಕಾರಣ ದೇವಾಲಯದ ಮುಂದಿರುವ ಕೊಳದ ನೀರು ಬತ್ತುತ್ತಿದೆ ಎಂದು ಈಗಾಗಲೇ ಅನೇಕ ವರದಿಗಳು ತಿಳಿಸಿವೆ. ಆದರೂ ಪಾಕಿಸ್ತಾನದ ಹಿಂದೂಗಳ ಶ್ರದ್ಧಾಭಕ್ತಿ ಕಡಿಮೆಯಾಗಿಲ್ಲ. ಇಲ್ಲಿ ಶಿವರಾತ್ರಿ ಆಚರಿಸಲು ಗಣನೀಯ ಸಂಖ್ಯೆಯಲ್ಲಿ ಪಾಕಿಸ್ತಾನಿ ಹಿಂದೂಗಳು ಬರುತ್ತಾರೆ.
ಸ್ವಾತಂತ್ರ್ಯದ ಬಳಿಕ ಹಲವಾರು ದಶಕಗಳ ಕಾಲ ಈ ದೇವಾಲಯ ಸಂಕೀರ್ಣ ದುಃಸ್ಥಿತಿಯಲ್ಲಿತ್ತು. ಇವುಗಳನ್ನು ನವೀಕರಿಸಲು 2006ರಿಂದ ಪಾಕಿಸ್ತಾನ ಸರ್ಕಾರ ಪ್ರಯತ್ನಿಸುತ್ತಿದೆ. 2005ರಲ್ಲಿ ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ಇಲ್ಲಿಗೆ ಬಂದಿದ್ದರು.
ಕಟಾಸ್‌ರಾಜ್‌ನ ಸುತ್ತ ಮುತ್ತ ಶಿಲಾಯುಗದ ಸಲಕರಣೆಗಳು ಮತ್ತು ಆಯುಧಗಳು, ಮಣ್ಣಿನ ಮಡಕೆಗಳು ಹಾಗೂ ಬಳೆಗಳು ದೊರೆತಿವೆ. ಇದರ ಪಕ್ಕದ ಉಪ್ಪಿನ ಬೆಟ್ಟಗಳಲ್ಲಿ ಹಲವಾರು ಪ್ರಾಗೈತಿಹಾಸಿಕ ಪಳೆಯುಳಿಕೆಗಳಿವೆ ಎನ್ನುತ್ತಾರೆ. ಇವುಗಳಲ್ಲಿ ಮ್ಯಾಮೊತ್ ಮತ್ತು ಡೈನಾಸರ್‌ಗಳನ್ನು ಹೋಲುವ ಪ್ರಾಣಿಗಳ ಎಲುಬುಗಳು ಸಿಕ್ಕಿವೆ ಎಂದೂ ಹೇಳುತ್ತಾರೆ.
ಕಟಾಸ್‌ರಾಜ್ ದೇವಾಲಯ ಸಂಕುಲ ಇರುವುದು ಚಕ್ವಾಲ್ ಜಿಲ್ಲಾಕೇಂದ್ರದಿಂದ 40 ಕಿ.ಮೀ. ದೂರದಲ್ಲಿ. ಇಸ್ಲಾಮಾಬಾದ್-ಲಾಹೋರ್ ಮೋಟಾರ್‌ವೇಯಲ್ಲಿ ಸಾಗಿ, ಕಲ್ಲಾರ್-ಕಹಾರ್ ಜಂಕ್ಷನ್ ಬಳಿ ಹೊರಬಿದ್ದು, ಚೋವಾ ಸೈದನ್ ಶಾ ರಸ್ತೆಯಲ್ಲಿ 24 ಕಿ.ಮೀ. ಸಾಗಿದರೆ ಈ ದೇವಾಲಯ ಸಂಕೀರ್ಣ ಸಿಗುತ್ತದೆ.
ರಾಮನಗರ: ಶಿವರಾತ್ರಿ ಹಬ್ಬ ಬಂದ್ರೆ ಸಾಕು ಶಿವನ ಭಕ್ತರಿಗೆ ಹಬ್ಬವೋ ಹಬ್ಬ. ಜಾಗರಣೆ, ವ್ರತ, ಉಪವಾಸ, ಜಾತ್ರೆ ಅಂತೆಲ್ಲಾ ಬಿಜಿಯಾಗುತ್ತಾರೆ. ಅದೇ ರೀತಿ ಶಿವರಾತ್ರಿಯಲ್ಲಿ ಧರಿಸುವ ಇಷ್ಟಲಿಂಗಗಳು ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಅದರಲ್ಲೂ ವೀರಶೈವ ಸಮುದಾಯದವರಂತೂ ಈ ಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಧರಿಸುವ ಇಷ್ಟಲಿಂಗಗಳಿಗೆ ಸಾಕಷ್ಟು ಮಹತ್ವವನ್ನ ನೀಡುತ್ತಾರೆ.
ಅದರಲ್ಲೂ ಶಿವರಾತ್ರಿಯ ವೇಳೆ ವೀರಶೈವರು ದೇವಲಿಂಗಗಳಿಗೆ ಪೂಜೆ ಸಲ್ಲಿಸುವುದಲ್ಲದೇ ತಾವು ಧರಿಸುವ ಇಷ್ಟಲಿಂಗಗಳಿಗೂ ಸಹ ಶಿವರಾತ್ರಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಆದರೆ ಆಧುನಿಕ ಜಗತ್ತಿನಲ್ಲಿ ಈ ಇಷ್ಟಲಿಂಗಗಳ ತಯಾರಿಕೆ ಮಾಡುವುದು ಕಣ್ಮರೆಯಾಗುತ್ತಿದೆ. ಆದರೂ ಸಹ ಇಷ್ಟಲಿಂಗಗಳನ್ನು ತಯಾರು ಮಾಡುವ ಕುಟುಂಬವೊಂದು ಸುಮಾರು ದಶಕಗಳಿಂದ ನಿರಂತರವಾಗಿ ಲಿಂಗ ತಯಾರಿಕೆ ಕಾರ್ಯದಲ್ಲಿ ನಿರತವಾಗಿದೆ. ಅಲ್ಲದೇ ಜನರ ಇಚ್ಛೆಗೆ ತಕ್ಕಂತೆ ಲಿಂಗಗಳನ್ನು ತಯಾರು ಮಾಡಿಕೊಡುತ್ತಿದ್ದಾರೆ.
ಅಂದಹಾಗೇ ಈ ಇಷ್ಟಲಿಂಗ ತಯಾರಿಕೆಯನ್ನು ರಾಮನಗರ ಜಿಲ್ಲೆಯ ವಿಭೂತಿಕೆರೆ ಗ್ರಾಮದ ಸಿದ್ದಯ್ಯ ಅವರ ಕುಟುಂಬ ಮಾಡುತ್ತಿದೆ. ಮೂಲತಃ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದ ಸಿದ್ದಯ್ಯನವರ ಮಕ್ಕಳಾದ ಶಿವಾನಂದ ಮತ್ತು ಮಹಾದೇವ ಸ್ವಾಮಿ ಸೋದರರು ತಮ್ಮ ಪರಂಪರೆಯ ಇಷ್ಟಲಿಂಗಗಳ ತಯಾರಿಕೆಯನ್ನ ಮುಂದುವರಿಸಿದ್ದಾರೆ. ಸಿದ್ದಯ್ಯ ಅವರು ಚನ್ನಪಟ್ಟಣ ತಾಲೂಕಿನ ಬೇವೂರಿನ ಸಿದ್ದರಾಮಣ್ಣ ಎಂಬವರಿಂದ ಇಷ್ಟಲಿಂಗಗಳ ತಯಾರು ಮಾಡುವುದನ್ನು ಕಲಿತುಕೊಂಡರು. ಅದನ್ನು ಇದೀಗ ಅವರ ಮಕ್ಕಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಇಷ್ಟಲಿಂಗ, ಶಿವಲಿಂಗಗಳ ತಯಾರಿಕೆ ಅತ್ಯಂತ ಸೂಕ್ಷ್ಮ ಕೆಲಸವಾಗಿದ್ದು, ಜಾಗೃತೆಯಿಂದ ತಯಾರು ಮಾಡಬೇಕು. ಗೇರು ಬೀಜ, ಕರ್ಪೂರ, ತುಪ್ಪ, ರಾಳು, ಶಿಲಾರಸ, ಪಾದರಸ, ಶಾಂತರಸವನ್ನು ಉಪಯೋಗಿಸಿ ಲಿಂಗ ತಯಾರಿಸಲಾಗುತ್ತದೆ. ಇಷ್ಟಲಿಂಗಗಳನ್ನ ತಯಾರಿಸುವ ವೇಳೆ ಸಾಕಷ್ಟು ಶ್ರಮವನ್ನು ಹಾಕಿ ಭಯ ಭಕ್ತಿಯಿಂದ ತಯಾರು ಮಾಡಬೇಕಾಗಿದೆ. ಈ ಲಿಂಗಗಳನ್ನು ಧರಿಸುವುದರಿಂದ ಚರ್ಮವ್ಯಾಧಿ ಕೂಡ ಗುಣವಾಗುತ್ತೆ ಎನ್ನುವ ಪ್ರತೀತಿಯಿದೆ.
ಸಿದ್ದಯ್ಯ ಅವರ ಕುಟುಂಬದವರು ತಯಾರಿಸುವ ಇಷ್ಟಲಿಂಗಕ್ಕೆ ರಾಜ್ಯವಲ್ಲದೇ ಹೊರರಾಜ್ಯದಲ್ಲೂ ಸಹ ಸಾಕಷ್ಟು ಬೇಡಿಕೆಯಿದೆ. ಜೊತೆಗೆ ಯಡಿಯೂರು, ಸಕಲೇಶಪುರದ ಬೈಕೆರೆಯಲ್ಲೂ ಸಹ 6 ಅಡಿ ಎತ್ತರದ ಲಿಂಗಗಳನ್ನು ತಯಾರಿಸಿದ್ದಾರೆ. ಇಷ್ಟಲಿಂಗಗಳನ್ನು ಕೊಳ್ಳಲು ರಾಜ್ಯದ ಅನೇಕ ಜಿಲ್ಲೆಗಳಿಂದ ಜನ ಬಂದು ತಮಗಿಷ್ಟದಂತೆ ಇಷ್ಟಲಿಂಗಗಳನ್ನ ಮಾಡಿಸಿಕೊಂಡು ಹೋಗುತ್ತಾರೆ.
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಮೋಷನ್ ಪೋಸ್ಟರ್ ಸಖತ್ ಸದ್ದು ಮಾಡಿದ್ದು, ಈಗ ಚಿತ್ರ ತಂಡ ಟೀಸರ್ ರಿಲೀಸ್ ಮಾಡಲು ರೆಡಿಯಾಗಿದೆ.
ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನೀರಿಕ್ಷಿತ ಚಿತ್ರ ಕೋಟಿಗೊಬ್ಬ-3 ಚಿತ್ರದ ಟೀಸರ್ ಅನ್ನು ಫೆಬ್ರವರಿ 21 ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಶಿವರಾತ್ರಿ ಹಬ್ಬಕ್ಕೆ ಕಿಚ್ಚನ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ಕೊಡಲು ತಯಾರಾಗಿದೆ.
ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿರುವ ಕೋಟಿಗೊಬ್ಬ-3 ಚಿತ್ರವನ್ನು ಶಿವಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಕೋಟಿಗೊಬ್ಬ-2 ಚಿತ್ರ 2016 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈಗ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದ ಟೀಸರ್ ಅನ್ನು ಫೆಬ್ರವರಿ 21 ಶಿವರಾತ್ರಿ ಹಬ್ಬದ ದಿನ ಮಧ್ಯಾಹ್ನ 12 ಗಂಟೆ 1 ನಿಮಿಷಕ್ಕೆ ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.
ಜನವರಿ 14 ರಂದು ಚಿತ್ರತಂಡ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ಪೋಸ್ಟರ್ ನಲ್ಲಿ ಕಿಚ್ಚನ ಸ್ಟೈಲಿಶ್ ಲುಕ್ ನೋಡಿದ್ದ ಅಭಿಮಾನಿಗಳು ಫಿದಾ ಆಗಿದ್ದರು. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಮೊದಲ ಬಾರಿಗೆ ಕನ್ನಡದಲ್ಲಿ ಮಲಯಾಳಂ ನಟಿ ಮಡೋನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಮಡೋನಾ ಸೆಬಾಸ್ಟಿಯನ್ ಜೊತೆ ಶ್ರದ್ಧಾ ದಾಸ್ ಕೂಡ ಕೋಟಿಗೊಬ್ಬನಿಗೆ ನಾಯಕಿಯಾಗಿದ್ದಾರೆ. ಇವರನ್ನು ಬಿಟ್ಟರೆ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಇದೇ ಮೊದಲ ಬಾರಿಗೆ ಕೋಟಿಗೊಬ್ಬ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಫ್ತಾಬ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತ್ರ ಚಿತ್ರತಂಡ ಹೇಳಿಕೊಂಡಿದ್ದು, ಅವರ ಪಾತ್ರ ಏನು ಎಂಬ ಸುಳಿವುನ್ನು ಬಿಟ್ಟುಕೊಟ್ಟಿಲ್ಲ.
ಈ ಹಿಂದೆ ಮಾತನಾಡಿದ್ದ ಅಫ್ತಾಬ್, ಕೋಟಿಗೊಬ್ಬ-3 ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾವಾಗಿದೆ. ನಾನು ಮೊದಲ ಬಾರಿಗೆ ಸುದೀಪ್ ಜೊತೆ ನಟಿಸುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ನಮ್ಮಿಬ್ಬರಿಗೆ ಸುಮಾರು 8 ವರ್ಷಗಳ ಹಿಂದೆ ಸೆಲೆಬ್ರೆಟಿ ಟಿ-20 ಕ್ರಿಕೆಟ್ ಮ್ಯಾಚಿನಲ್ಲಿ ಪರಿಚಯವಾಗಿತ್ತು. ಅಂದಿನಿಂದ ನಾವಿಬ್ಬರೂ ಸ್ನೇಹಿತರಾಗಿದ್ದೇವೆ. ಸುದೀಪ್ ಅವರು ಯಾವಾಗಲೂ ಕನ್ನಡ ಸಿನಿಮಾದಲ್ಲಿ ಅಭಿನಯಿಸು ಎಂದು ಹೇಳುತ್ತಿದ್ದರು. ಆದರೆ ಇಷ್ಟುಬೇಗ ಅವಕಾಶ ಸಿಗುತ್ತದೆ ಎಂದುಕೊಂಡಿರಲಿಲ್ಲ. ಸಿನಿಮಾದಲ್ಲಿ ಈ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಹೀಗಾಗಿ ನೀನೇ ಅಭಿನಯಿಸಬೇಕು ಎಂದು ಒತ್ತಾಯಿಸಿದ್ದರು. ಆದ್ದರಿಂದ ಸುದೀಪ್ ಜೊತೆ ಅಭಿನಯಿಸಲು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದರು.