Tag: ಶಿವರಾಜ್ ಸಿಂಗ್ ಚೌಹಾಣ್

  • ಮೋದಿಯವರು ದೇವರ ಸ್ವರೂಪ: ಶಿವರಾಜ್ ಸಿಂಗ್ ಚೌಹಾಣ್

    ಮೋದಿಯವರು ದೇವರ ಸ್ವರೂಪ: ಶಿವರಾಜ್ ಸಿಂಗ್ ಚೌಹಾಣ್

    ಪಣಜಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇವರ ಸ್ವರೂಪ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಹಾಡಿ ಹೊಗಳಿದ್ದಾರೆ.

    ಗೋವಾದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಸಾಮಾನ್ಯ ಮನುಷ್ಯರಲ್ಲ ಅವರೊಬ್ಬ ಅದ್ಭುತ ವ್ಯಕ್ತಿಯಾಗಿದ್ದಾರೆ. ದೇವರ ಸ್ವರೂಪವಾಗಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

    ಗೋವಾದಲ್ಲಿ ಮೂರು ಪಕ್ಷಗಳಿವೆ. CAT(ಬೆಕ್ಕು)ನಂತೆ ಸಿ(C) ಎಂದರೆ ಕಾಂಗ್ರೆಸ್ ಎ(A) ಎಂದರೆ ಎಎಪಿ ಹಾಗೂ ಟಿ(T) ಎಂದರೆ ಟಿಎಂಸಿ ಎಂದು ಪಕ್ಷಗಳಿವೆ. ಬೆಕ್ಕು ನಾವು ಹೋಗುವ ದಾರಿಯಲ್ಲಿ ಅಡ್ಡವಾಗಿ ಹಾದು ಹೋದರೆ ನಾವು ಹೋಗಿದ್ದ ಕೆಲಸ ಹಾಳಾಗುವುದು ಖಚಿತ. ಹೀಗಾಗಿ ಈ ಮೂರು ಪಕ್ಷಗಳು ಬೆಕ್ಕಿನ ರೂಪ ಎಂದು ಹೇಳು ಹೇಳುವ ಮೂಲಕವಾಗಿ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ


    ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಹತಾಶೆಯನ್ನು ಕೊನೆಗೊಳಿಸಲು ಜನಿಸಿದ ಭಗವಾನ್ ರಾಮನಂತೆ ಎಂದು ಮೋದಿಯವರನ್ನು ದೇವರಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ.

  • ಮಧ್ಯಪ್ರದೇಶದಲ್ಲಿ ಎಣ್ಣೆ ದರ ಭಾರೀ ಇಳಿಕೆ – ಮನೆಯಲ್ಲೇ ಮಿನಿಬಾರ್‌ಗೆ ಅನುಮತಿ

    ಮಧ್ಯಪ್ರದೇಶದಲ್ಲಿ ಎಣ್ಣೆ ದರ ಭಾರೀ ಇಳಿಕೆ – ಮನೆಯಲ್ಲೇ ಮಿನಿಬಾರ್‌ಗೆ ಅನುಮತಿ

    ಭೋಪಾಲ್: ಬಿಜೆಪಿ ಸರ್ಕಾರ ಅಬಕಾರಿ ನೀತಿಯಲ್ಲಿ ಮಧ್ಯಪ್ರದೇಶ ಅಮೂಲಾಗ್ರ ಬದಲಾವಣೆ ತಂದಿದೆ.

    ಮಧ್ಯಪ್ರದೇಶದ ಎಣ್ಣೆ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮದ್ಯ ದರವನ್ನು ಶೇ.20ರಷ್ಟು ಇಳಿಸಿದೆ. ಅಲ್ಲದೇ, ಹೆಚ್ಚುವರಿ ಆದಾಯಗಳಿಸುವ ಉದ್ದೇಶದಿಂದ ಎಲ್ಲ ಏರ್‌ಪೋರ್ಟ್ ಮತ್ತು ಭೋಪಾಲ್, ಇಂದೋರ್, ಜಬಲ್ಪುರ್ ಹಾಗೂ ಗ್ವಾಲಿಯರ್‌ನ ಆಯ್ದ ಸೂಪರ್ ಮಾರ್ಕೆಟ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಇದನ್ನೂ ಓದಿ:  ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು

    1 ಕೋಟಿಗಿಂತ ಹೆಚ್ಚು ಆದಾಯ ಇರುವವರು ಹೋಂ ಬಾರ್ ಹೊಂದಲು ಅವಕಾಶ ನೀಡಿದೆ. ಇದಕ್ಕೆ ವಾರ್ಷಿಕ 50 ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ.

    ತೈಲದ ಮೇಲಿನ ತೆರಿಗೆ ಇಳಿಸೋದು ಬಿಟ್ಟು ಮದ್ಯದ ದರ ಇಳಿಸುವ ಮೂಲಕ ಬಡವರನ್ನು ಲೂಟಿ ಮಾಡಲು ಈ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದೆ.

  • ಸಿಎಂ ಶೀಘ್ರ ಚೇತರಿಕೆಗೆ ಮಧ್ಯಪ್ರದೇಶದ ಸಿಎಂ ಸೇರಿದಂತೆ ಗಣ್ಯರಿಂದ ಶುಭಹಾರೈಕೆ

    ಸಿಎಂ ಶೀಘ್ರ ಚೇತರಿಕೆಗೆ ಮಧ್ಯಪ್ರದೇಶದ ಸಿಎಂ ಸೇರಿದಂತೆ ಗಣ್ಯರಿಂದ ಶುಭಹಾರೈಕೆ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸಿಎಂ ಸೇರಿದಂತೆ ಹಲವಾರು ಗಣ್ಯರು ಶೀಘ್ರ ಚೇತರಿಕೆಗೆ ಶುಭ ಹಾರೈಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಶಿವರಾಜ್ ಸಿಂಗ್ ಚೌಹಾಣ್, ಬೊಮ್ಮಾಯಿ ಅವರೇ ಆದಷ್ಟು ಬೇಗ ಕೊರೊನಾದಿಂದ ಗುಣಮುಖರಾಗುವಂತೆ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗಲಿ, ಮತ್ತೆ ಎಂದಿನಂತೆ ತಮ್ಮ ಕರ್ತವ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

    ಇತ್ತ ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದಷ್ಟು ಬೇಗ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಎಂದಿನಂತೆ ತಮ್ಮ ಕಾರ್ಯ-ಕಲಾಪಗಳಲ್ಲಿ ತೊಡಗಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್‌

    ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ್ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೋವಿಡ್ ಸೋಂಕಿನಿಂದ ಶೀಘ್ರ ಗುಣಮುಖರಾಗುವಂತೆ ನನ್ನ ಶುಭ ಹಾರೈಕೆಗಳು ಎಂದು ಕೂ ನಲ್ಲಿ ತಿಳಿಸಿದ್ದಾರೆ.

    ಮುಖ್ಯಮಂತ್ರಿಗಳು ಶೀಘ್ರವಾಗಿ ಗುಣಮುಖವಾಗಲಿ ಹಾಗೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಎಂದಿನಂತೆ ತೊಡಗಿಸಿಕೊಳ್ಳುವಂತೆ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಾರೈಸಿದ್ದಾರೆ.

    ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅವರಿಗೆ ಕೋವಿಡ್ – 19 ಪಾಸಿಟಿವ್ ಎಂದು ತಿಳಿದು ನೋವಾಗಿದೆ. ಅವರು ಶೀಘ್ರವಾಗಿ ಗುಣಮುಖರಾಗಿ ಆದಷ್ಟು ಬೇಗ ಜನರ ಸೇವೆಗೆ ಮರಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಸಚಿವ ಶ್ರೀರಾಮುಲು ಹಾರೈಸಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್-19 ದೃಢಪಟ್ಟಿದೆ. ಈ ಮೂಲಕ ಸಿಎಂ ಎರಡನೇ ಬಾರಿ ಮಹಾಮಾರಿಯನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು, ಸೌಮ್ಯ ಲಕ್ಷಣಗಳು ಇದ್ದದ್ದರಿಂದ ಕೊರೊನಾ ಪರೀಕ್ಷೆ ಮಾಡಿಸಿದೆ. ವರದಿಯಲ್ಲಿ ಪಾಸಿಟಿವ್ ಬಂದಿದೆ. ನಾನು ಆರೋಗ್ಯವಾಗಿದ್ದೇನೆ. ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಸ್ವಯಂ ಐಸೊಲೇಟ್ ಆಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಮಧ್ಯಪ್ರದೇಶ ಸಿಎಂ ಭೇಟಿಯಾದ ಸಚಿನ್

    ಮಧ್ಯಪ್ರದೇಶ ಸಿಎಂ ಭೇಟಿಯಾದ ಸಚಿನ್

    ಭೋಪಾಲ್: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಮಂಗಳವಾರ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದರು.

    ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಂಸ್ಥೆಯ ಸಮಾಜಸೇವೆಗಳ ಬಗ್ಗೆ ಚರ್ಚಿಸಲು ಈ ಭೇಟಿ ನಡೆಯಿತು. ಇದನ್ನೂ ಓದಿ: ಯುವರತ್ನನಿಗೆ ಪದ್ಮಶ್ರೀ ನೀಡಲು ಶಿಫಾರಸ್ಸಿಗೆ ತೀರ್ಮಾನ’

    ಈ ಕುರಿತು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರೋ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶವು ಕ್ರಿಕೆಟ್ ದೇವರು ಸಚಿನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ಮಾಸ್ಟರ್ ಬ್ಲಾಸ್ಟರ್ ಅವರ ಜೊತೆ ಇಂದು ನಮ್ಮ ಮನೆಯಲ್ಲಿ ಅದ್ಭುತವಾದ ಸಭೆ ನಡೆಯಿತು. ನೀವು ನಮ್ಮವರಾಗಿಯೇ ನಮ್ಮ ಜೊತೆ ಇರುವುದಕ್ಕೆ ಖುಷಿಯಾಗುತ್ತಿದೆ. ನಿಮ್ಮ ಮುಂದಿನ ಎಲ್ಲ ಯೋಜನೆಗಳಿಗೂ ನಮ್ಮ ಕಡೆಯಿಂದ ಶುಭಹಾರೈಕೆ ಎಂದು ಟ್ವೀಟ್ ಮಾಡಿದ್ದಾರೆ.

    ಭೇಟಿ ಬಳಿಕ ಸಚಿನ್ ತೆಂಡೂಲ್ಕರ್ ಕೂಡ ಟ್ವೀಟ್ ಮಾಡಿದ್ದು, ಮೈದಾನದೊಳಗೆ ಹಾಗೂ ಹೊರಗೆ ಟೀಂ ಇಂಡಿಯಾಗೆ ಆಡುವುದು ಖುಷಿಯ ವಿಚಾರ. ಸೇವಾ ಕುಟೀರಕ್ಕೆ ಭೇಟಿ ಹಾಗೂ ಪರಿವಾರ ಸಂಸ್ಥೆ ಜೊತೆ ಸೇರಿ ನಿರ್ಮಿಸುತ್ತಿರುವ ವಸತಿ ಶಾಲೆಯ ಕಾಮಗಾರಿ ವೀಕ್ಷಣೆ ತೃಪ್ತಿ ತಂದಿದೆ. ನಮ್ಮ ಮಕ್ಕಳು ಈ ಜಗತ್ತನ್ನು ಉತ್ತಮಗೊಳಿಸಬೇಕು ಹಾಗೂ ಬೆಳಗಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ನಾವು ನೋಡಿಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಕುರಿಗಳು – ಕುರಿಗಾಹಿಗಳ ಕಣ್ಣೀರು

    ಕೋವಿಡ್ ಸಂಖ್ಯೆ ಇಳಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿನ್ ಮಧ್ಯಪ್ರದೇಶದ ಸೇವಾನಿಯಾ ಎಂಬ ಹಳ್ಳಿಯಲ್ಲಿ ಮಕ್ಕಳನ್ನು ಭೇಟಿಯಾದರು. ಸೇವಾ ಕುಟೀರ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಯೋಜನೆ ಅಡಿ ಮಕ್ಕಳಿಗೆ ಪೌಷ್ಠಿಕ ಆಹಾರ, ಪೂರಕ ಶಿಕ್ಷಣ ಹಾಗೂ ಕ್ರೀಡೆಗಳಲ್ಲಿ ಭಾಗಿಯಾಗಲು ಅವಕಾಶ ಸಿಗುತ್ತದೆ. ಸಚಿನ್ ತೆಂಡೂಲ್ಕರ್ ಅವರ ಪರಿವಾರ ಸಂಘಟನೆ ಬುಡಕಟ್ಟು ಮಕ್ಕಳಿಗಾಗಿ ಈ ಸೇವಾ ಕುಟೀರಗಳನ್ನು ನಡೆಸುತ್ತಿದೆ.

  • ಹಸು ಸಗಣಿ, ಗೋಮೂತ್ರ ಆರ್ಥಿಕತೆ ಬಲಪಡಿಸುತ್ತದೆ: ಶಿವರಾಜ್ ಸಿಂಗ್ ಚೌಹಾಣ್

    ಹಸು ಸಗಣಿ, ಗೋಮೂತ್ರ ಆರ್ಥಿಕತೆ ಬಲಪಡಿಸುತ್ತದೆ: ಶಿವರಾಜ್ ಸಿಂಗ್ ಚೌಹಾಣ್

    ಭೋಪಾಲ್: ಹಸು ಸಗಣಿ ಹಾಗೂ ಮೂತ್ರವು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ದೇಶವನ್ನು ಆರ್ಥಿಕವಾಗಿ ಸಮರ್ಥವಾಗಿಸುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

    ಭಾರತೀಯ ಪಶುವೈದ್ಯಕೀಯ ಸಂಘದಿಂದ ಆಯೋಜಿಸಲಾದ ಮಹಿಳಾ ಪಶುವೈದ್ಯರ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರವು ಗೋವುಗಳ ರಕ್ಷಣೆಗಾಗಿ ಗೋಶಾಲೆಗಳನ್ನು ಸ್ಥಾಪಿಸಿದೆ. ಆದರೆ ಅವುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಮಾಜದ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ನಾವು ಬಯಸಿದರೆ ನಮ್ಮ ಆರ್ಥಿಕತೆಯನ್ನು ಬಲಪಡಿಸಬಹುದು. ಗೋವುಗಳು, ಅವುಗಳ ಸಗಣಿ ಮತ್ತು ಮೂತ್ರದ ಮೂಲಕ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಬಹುದು. ಮರದ ಬಳಕೆಯನ್ನು ಕಡಿಮೆ ಮಾಡಲು ಮಧ್ಯಪ್ರದೇಶದ ಚಿತಾಗಾರದಲ್ಲಿ ಗೋಕಾಷ್ಟ (ಗೋವಿನ ಸಗಣಿಯಿಂದ ಮಾಡಿದ ತುಂಡು) ವನ್ನು ಬಳಸಲಾಗುತ್ತಿದೆ. ಸಣ್ಣ ರೈತರು ಮತ್ತು ಜಾನುವಾರು ಮಾಲೀಕರಿಗೆ ಹಸು ಸಾಕಣೆ ಹೇಗೆ ಲಾಭದಾಯಕ ವ್ಯವಹಾರವಾಗಬಲ್ಲದು ಎಂಬುದರ ಕುರಿತು ಪಶುವೈದ್ಯರು ಮತ್ತು ತಜ್ಞರು ಫಲಿತಾಂಶ ಆಧಾರಿತ ಕೆಲಸದಲ್ಲಿ ತೊಡಗಬೇಕು ಎಂದಿದ್ದಾರೆ. ಇದನ್ನೂ ಓದಿ:   ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ ರೂಪಾಲ ಮಾತನಾಡಿ, ಗುಜರಾತ್‍ನ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಹಸು ಸಾಕುವುದರಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಡೈರಿ ಉದ್ಯಮವು ಯಶಸ್ವಿಯಾಗಿದೆ. ಈ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಆಯ್ಕೆ ಮಾಡುವ ಮಹಿಳಾ ಪಶುವೈದ್ಯಕೀಯ ಪದವೀಧರರಿಗೆ ಕೇಂದ್ರ ಸರ್ಕಾರವು ಸಹಾಯ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

  • ಮಧ್ಯಪ್ರದೇಶದ ನಗರ ಪ್ರದೇಶಗಳಲ್ಲಿ ಲಾಕ್‍ಡೌನ್- ಸರ್ಕಾರಿ ಇಲಾಖೆಗಳಲ್ಲಿ ವಾರದ 5 ದಿನ ಮಾತ್ರ ಸೇವೆ

    ಮಧ್ಯಪ್ರದೇಶದ ನಗರ ಪ್ರದೇಶಗಳಲ್ಲಿ ಲಾಕ್‍ಡೌನ್- ಸರ್ಕಾರಿ ಇಲಾಖೆಗಳಲ್ಲಿ ವಾರದ 5 ದಿನ ಮಾತ್ರ ಸೇವೆ

    ಭೋಪಾಲ್: ಕೊರೊನಾ ಸೋಂಕು ಮಧ್ಯಪ್ರದೇಶದಲ್ಲಿ ಹೆಚ್ಚಳ ಕಾಣುತ್ತಿದ್ದಂತೆ, ರಾಜ್ಯ ಸರ್ಕಾರ ನಗರ ಪ್ರದೇಶಗಳಲ್ಲಿ ಲಾಕ್‍ಡೌನ್ ಮತ್ತು ನೈಟ್ ಕರ್ಫ್ಯೂ ಹೇರಲು ಮುಂದಾಗಿದೆ. ಇದರೊಂದಿಗೆ ಸರ್ಕಾರಿ ಇಲಾಖೆಗಳು ವಾರದ ಐದು ದಿನಗಳು ಮಾತ್ರ ಕಾರ್ಯನಿರ್ವಹಿಸುವಂತೆ ಸರ್ಕಾರ ಸೂಚನೆ ಹೊರಡಿಸಿದೆ.

    ಈಗಾಗಲೇ ಮಧ್ಯಪ್ರದೇಶದಲ್ಲಿ ನೈಟ್ ಕರ್ಫ್ಯೂ ಕುರಿತು ಘೋಷಣೆ ಮಾಡಿದ್ದ ಸರ್ಕಾರ, ಇದೀಗ ಇಂದಿನಿಂದ ಎಲ್ಲಾ ನಗರ ಪ್ರದೇಶಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಕರ್ಫ್ಯೂ ಜಾರಿ ಮಾಡಿದೆ. ಇದು ಸರ್ಕಾರದ ಮುಂದಿನ ಆದೇಶದ ವರೆಗೆ ಮುಂದುವರಿಯುವುದಾಗಿ ಸರ್ಕಾರ ತಿಳಿಸಿದೆ.

    ಮಧ್ಯಪ್ರದೇಶದಲ್ಲಿ ನೈಟ್ ಕರ್ಫ್ಯೂ ನೊಂದಿಂಗೆ ಸರ್ಕಾರಿ ಕಚೇರಿಗಳು ವಾರದ ಕೇವಲ ಐದು ದಿನ ಮಾತ್ರ ಕಾರ್ಯನಿರ್ವಹಿಸಲಿದೆ. ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ವರೆಗೆ ವಾರದ ಐದು ದಿನ ಮುಂದಿನ ಮೂರು ತಿಂಗಳುಗಳವರೆಗೆ ಈ ಕ್ರಮ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಕಚೇರಿಯಿಂದ ಆದೇಶ ಹೊರಬಿದ್ದಿದೆ.

    ಈ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ ಕಾಣುತ್ತಿರುವುದರಿಂದಾಗಿ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವನ್ನು ವಹಿಸಲಾಗುತ್ತಿದ್ದು, ಇಂದು ರಾತ್ರಿ 6 ಗಂಟೆಯಿಂದ ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ಇರಲಿದೆ. ಹಾಗೆ ರಾಜ್ಯದಲ್ಲಿ ಶನಿವಾರ ರಾತ್ರಿ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯ ವರೆಗೆ ಲಾಕ್‍ಡೌನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಮಧ್ಯಪ್ರದೇಶದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 4,043 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ.

  • ಮಧ್ಯ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ

    ಮಧ್ಯ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ

    ಭೋಪಾಲ್: ಮಧ್ಯಪ್ರದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ನಾಲ್ಕು ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿ ಮಾಡಿದೆ.

    ಈಗಾಗಲೇ ಛಿಂದ್ವಾರಾ ಮತ್ತು ರತ್ಲಾಮ್ ನಗರದ ಕೆಲವು ಭಾಗಗಳಲ್ಲಿ ಲಾಕ್‍ಡೌನ್ ವಿಧಿಸಿರುವ ಸರ್ಕಾರ, ಇದೀಗ ಬೆತುಲ್ ಮತ್ತು ಖಾರ್ಗೋನೆ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಲಾಕ್‍ಡೌನ್ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗುರುವಾರ ರಾತ್ರಿ 10 ಗಂಟೆಯಿಂದ ಛಿಂದ್ವಾರಾ ಮತ್ತು ರತ್ಮಾಮ್ ನಗರಗಳಲ್ಲಿ ಲಾಕ್‍ಡೌನ್ ಜಾರಿಯಾಗಿದ್ದು, ಇದು ಏಪ್ರಿಲ್ 5ರ ಬೆಳಗ್ಗೆ 6 ಗಂಟೆಯವರೆಗೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಬೆತುಲ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಮತ್ತು ಖಾರ್ಗೋನ್ ಜಿಲ್ಲೆಯಲ್ಲಿ ರಾತ್ರಿ 8 ಗಂಟೆಯಿಂದ ಲಾಕ್‍ಡೌನ್ ಜಾರಿಯಾಗಲಿದೆ.

    ಈ ಕುರಿತಂತೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕು ಜಿಲ್ಲೆಗಳನ್ನು ಲಾಕ್‍ಡೌನ್ ಗೊಳಿಸಿರುವುದರಿಂದ ತೀವ್ರ ನಿಗಾ ವಹಿಸಲು ಆ ಪ್ರದೇಶಗಳಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

  • ನಾಲೆಗೆ ಉರುಳಿದ 54 ಮಂದಿಯಿದ್ದ ಬಸ್- 35 ಮಂದಿ ದಾರುಣ ಸಾವು

    ನಾಲೆಗೆ ಉರುಳಿದ 54 ಮಂದಿಯಿದ್ದ ಬಸ್- 35 ಮಂದಿ ದಾರುಣ ಸಾವು

    ಭೋಪಾಲ್: ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಸ್ ಉರುಳಿದ ಪರಿಣಾಮ 35 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಟ್ನಾ ಹಳ್ಳಿಯಲ್ಲಿ ನಡೆದಿದೆ.

    ಬಸ್ಸಿನಲ್ಲಿ 54 ಮಂದಿ ಪ್ರಯಾಣ ಮಾಡುತ್ತಿದ್ದರು. ಬಸ್ ನಾಲೆಗೆ ಬಿದ್ದಿದ್ದರಿಂದ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ. 7 ಮಂದಿ ಈಜಿಕೊಂಡು ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ಸುಮಾರು 54 ಮಂದಿ ಪ್ರಯಾಣಿಸುತ್ತಿದ್ದ ಬಸ್ ಸಿಧಿಯಿಂದ ಸತ್ನಾಕ್ಕೆ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ನುರಿತ ಈಜುಗಾರರು ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಸಾವು-ನೋವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.

    ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಸುಮಾರು 1 ಲಕ್ಷಕ್ಕೂ ಹೆಚ್ಚು ಮನೆಗಳ ಫಲಾನುಭವಿಗಳಿಗಾಗಿ ಇಂದು ಗೃಹ ಪ್ರವೇಶ ಎಂಬ ಸರ್ಕಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುವವರಿದ್ದರು. ಆದರೆ ಬಸ್ ಅಪಘಾತ ನಡೆದ ಬೆನ್ನಲ್ಲೇ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮ ರದ್ದು ಮಾಡುವುದಾಗಿ ಘೋಷಿಸಿದ್ದಾರೆ.

    ಬಸ್ ಅಪಘಾತವಾಗಿರುವ ಬಗ್ಗೆ ವರದಿ ಕೇಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಬಗ್ಗೆ ಸಿಧಿ ಜಿಲ್ಲಾಧಿಕಾರಿಯಿಂದ ಮಾಹಿತಿ ಕೇಳಿದ್ದಾರೆ. ನಾಲೆಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ರಕ್ಷಣಾ ಕಾರ್ಯಾಚರಣೆಯೂ ಕಷ್ಟವಾಗುತ್ತಿದೆ. ಹಾಗಾಗಿ ಶಾಹದಲ್ ಜಿಲ್ಲೆಯಲ್ಲಿ ಸೋನೆ ನದಿಗೆ ಕಟ್ಟಲಾದ ಬಾಣ್‍ಸಾಗರ್ ಅಣೆಕಟ್ಟೆಯಿಂದ ನೀರು ಬಿಡುವುದನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿ ಟ್ವೀಟ್ ಮಾಡಿದ್ದಾರೆ.

  • ಮೇಲುಕೋಟೆಗೆ ಆಗಮಿಸಿ ಹರಕೆ ತೀರಿಸಿದ ಮಧ್ಯಪ್ರದೇಶ ಸಿಎಂ

    ಮೇಲುಕೋಟೆಗೆ ಆಗಮಿಸಿ ಹರಕೆ ತೀರಿಸಿದ ಮಧ್ಯಪ್ರದೇಶ ಸಿಎಂ

    ಮಂಡ್ಯ: ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಗೆ ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡಿದ್ದರು. ಕುಟುಂಬ ಸಮೇತರಾಗಿ ಆಗಮಿಸಿದ್ದ ಮುಖ್ಯಮಂತ್ರಿಗಳು, ಇಷ್ಟಾರ್ಥ ಸಿದ್ಧಿಸಿದ ಚೆಲುವನಾರಾಯಣಸ್ವಾಮಿ ಹಾಗೂ ಯೋಗನರಸಿಂಹಸ್ವಾಮಿಗೆ ತಮ್ಮ ಹರಕೆ ಪೂಜೆ ಸಲ್ಲಿಸಿದ್ದರು.

    ಚೌಹಾಣ್ ವಿರೋಧ ಪಕ್ಷದ ನಾಯಕರಾಗಿದ್ದಾಗ, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಹಾಗೂ ಯೋಗನರಸಿಂಹಸ್ವಾಮಿ ದರ್ಶನ ಮಾಡಿದರೆ ಮತ್ತೊಮ್ಮೆ ಮುಖ್ಯಮಂತ್ರಿ ಗಾಧಿಗೇರುತ್ತೀರಿ ಎಂದು ಆಂಧ್ರ ಪ್ರದೇಶದ ಖ್ಯಾತ ಶ್ರೀವೈಷ್ಣವ ಯತಿಗಳಾದ ತ್ರಿದಂಡಿ ಶ್ರೀಮನ್ನಾರಾಯಣ ಚಿನ್ನಜೀಯರ್ ಸ್ವಾಮೀಜಿ ಸಲಹೆ ನೀಡಿದ್ದರು. ಅದರಂತೆ ಕಳೆದ ವರ್ಷದ ನವೆಂಬರ್‍ನಲ್ಲಿ ಪತ್ನಿ ಜೊತೆ ಮೇಲುಕೋಟೆಗೆ ಭೇಟಿ ನೀಡಿದ್ದರು.

    ಬಳಿಕ ನಡೆದ ರಾಜಕೀಯ ಮೇಲಾಟದಲ್ಲಿ ಚೌಹಾಣ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದ್ದರು. ಈ ಹಿನ್ನೆಲೆಯಲ್ಲಿ ಜೂನ್ 26ರಂದು ಮೇಲುಕೋಟೆಗೆ ಬಂದು ಹರಕೆ ತೀರಿಸಿ, ಉಪ ಚುನಾವಣೆಯಲ್ಲಿ ಸ್ಪಷ್ಟ ಬಹುಮತಕ್ಕೆ ಅಗತ್ಯವಾದ ಸ್ಥಾನ ಗೆಲ್ಲಿಸುವಂತೆ ಮತ್ತೊಮ್ಮೆ ಹರಕೆ ಹೊತ್ತಿಕೊಂಡಿದ್ದರು. ಅದರಂತೆ ಇತ್ತೀಚೆಗೆ ನಡೆದ ಬೈ ಎಲೆಕ್ಷನ್‍ನಲ್ಲಿ 19 ಸೀಟುಗಳು ಬಿಜೆಪಿ ಪಾಲಾಗಿದ್ದು, ಚೌಹಾಣ್ ಸರ್ಕಾರ ಸುಭದ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ತಮ್ಮ ಕುಟುಂಬಸ್ಥರ ಜೊತೆ ಭೇಟಿ ನೀಡಿ ದೇವರ ದರ್ಶನ ಪಡೆದು ಕೃತಾರ್ಥರಾದರು.

    ಮಧ್ಯಾಹ್ನ 2.50ರ ಸುಮಾರಿಗೆ ಮೇಲುಕೋಟೆಗೆ ಆಗಮಿಸಿದ ಚೌಹಾಣ್‍ಗೆ ಮಂಡ್ಯ ಡಿಸಿ ಡಾ.ವೆಂಕಟೇಶ್ ನೇತೃತ್ವದಲ್ಲಿ ಜಿಲ್ಲಾಡಳಿತದಿಂದ ಹೂಗುಚ್ಚ ನೀಡಿ ಬರಮಾಡಿಕೊಳ್ಳಲಾಯಿತು. ಬಳಿಕ ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿದ ಚೌಹಾಣ್ ಮೊದಲು ಮೇಲುಕೋಟೆಯ ಜೀಯರ್ ಮಠಕ್ಕೆ ಭೇಟಿ ನೀಡಿ ಅಲ್ಲಿನ ಆತಿಥ್ಯ ಸ್ವೀಕರಿಸಿದರು. ನಂತರ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಹಾಗೂ ಬೆಟ್ಟದ ಮೇಲಿನ ಯೋಗನರಸಿಂಹಸ್ವಾಮಿ ದರ್ಶನ ಮಾಡಿದರು. ಈ ವೇಳೆ ದೇವರಿಗೆ ಬೆಳ್ಳಿ ರಥ ಮಾಡಿಸಿಕೊಡಿ ಎಂಬ ದೇವಾಲಯದ ಆಡಳಿತ ವರ್ಗದ ಮನವಿಗೆ ಸ್ಪಂದಿಸಿದ ಚೌಹಾಣ್ ಕೆಲದಿನಗಳಲ್ಲಿ ಬೆಳ್ಳಿರಥ ನೀಡುವುದಾಗಿ ಒಪ್ಪಿದರು.

    ದೇವರ ದರ್ಶನ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ದೇಶದ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ. ಕೊರೊನಾ ಮಹಾಮಾರಿ ತೊಲಗಿ ಜನರಲ್ಲಿ ಸಂತೋಷ ಬರಲಿ. ಭಗವಂತನ ಆಜ್ಞೆ ಇಲ್ಲದೆ ಏನು ಆಗಲ್ಲ. ಆ ದೇವರ ಕೃಪೆಯಿಂದಲೇ ಸಿಎಂ ಆಗಿದ್ದೇನೆ ಎಂದು ಹೇಳಿದರು.

  • ರೈತರ ಬ್ಯಾಂಕ್ ಖಾತೆಗೆ 4 ಸಾವಿರ ರೂ. ವರ್ಗಾವಣೆ: ಶಿವರಾಜ್ ಸಿಂಗ್ ಚೌಹಾಣ್

    ರೈತರ ಬ್ಯಾಂಕ್ ಖಾತೆಗೆ 4 ಸಾವಿರ ರೂ. ವರ್ಗಾವಣೆ: ಶಿವರಾಜ್ ಸಿಂಗ್ ಚೌಹಾಣ್

    ಭೋಪಾಲ್: ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯ ಸರ್ಕಾರದ ವತಿಯಿಂದ 4 ಸಾವಿರ ರೂ.ಗಳನ್ನು ನೇರ ರೈತರ ಖಾತೆಗೆ ಎರಡು ಕಂತುಗಳಲ್ಲಿ ವರ್ಗಾವಣೆ ಮಾಡುವುದಾಗಿ ಘೋಷಿಸಿದ್ದಾರೆ.

    ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ದಾಖಲಿಸಿಕೊಂಡಿರುವ ರೈತರಿಗೆ ಯೋಜನೆಯ ಲಾಭ ದೊರೆಯಲಿದೆ.

    ರೈತರ ಒಟ್ಟಾರೆ ಅಭಿವೃದ್ಧಿಗಾಗಿ ಕಿಸಾನ್ ಸಮ್ಮನ್ ನಿಧಿ, ಶೂನ್ಯ ಬಡ್ಡಿ ದರದಲ್ಲಿ ಸಾಲ ಮತ್ತು ಪ್ರಧಾನಿ ಬೆಳೆ ವಿಮೆ ಮುಂತಾದ ಯೋಜನೆಗಳೊಂದಿಗೆ ರೈತರ ಹಿತದೃಷ್ಟಿಯಿಂದ ನಡೆಸಬೇಕೆಂದು ನಾವು ನಿರ್ಧರಿಸಿದ್ದು, ಎಲ್ಲಾ ಯೋಜನೆಗಳನ್ನು ವಿಶೇಷ ಪ್ಯಾಕೇಜ್ ಆಗಿ ಅನುಷ್ಠಾನ ಮಾಡುತ್ತೇವೆ ಎಂದು ಸಿಎಂ ಚೌಹಾಣ್ ಹೇಳಿದ್ದಾರೆ.

    ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರೈತ ಕಲ್ಯಾಣ ಯೋಜನೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗುತ್ತಿದೆ. ಯೋಜನೆಯ ಅಡಿ ರೈತರಿಗೆ ವಾರ್ಷಿಕವಾಗಿ 4 ಸಾವಿರ ರೂ. ಪಾವತಿಸಲಾಗುವುದು. ರೈತರ ಕಲ್ಯಾಣ ನನ್ನ ಜೀವನದ ಗುರಿಯಾಗಿದೆ ಎಂದು ಚೌಹಾಣ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

    2022ರ ವೇಳೆಗೆ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಲು ತಮ್ಮ ಸರ್ಕಾರ ಸಹಾಯ ಮಾಡುತ್ತದೆ. ರೈತರು ಬೆಳೆದ ಆಹಾರ ಬೆಳೆಗಳ ಖರೀದಿಗೆ 27 ಸಾವಿರ ಕೋಟಿ ರೂ. ವ್ಯಯ ಮಾಡಲಿದ್ದೇವೆ ಎಂದು ಹೇಳಿದ್ದಾರೆ.