Tag: ಶಿವರಾಜ್ ಕುಮಾರ್ ಸೈಕಲ್ ಜಾಥ

  • ಪುನೀತ್ ಸ್ಮರಣಾರ್ಥ ಬೆಂಗಳೂರು ಸಂಚಾರಿ ಪೊಲೀಸರಿಂದ ಸೈಕಲ್ ಜಾಥಾ – ಶಿವಣ್ಣ ಚಾಲನೆ

    ಪುನೀತ್ ಸ್ಮರಣಾರ್ಥ ಬೆಂಗಳೂರು ಸಂಚಾರಿ ಪೊಲೀಸರಿಂದ ಸೈಕಲ್ ಜಾಥಾ – ಶಿವಣ್ಣ ಚಾಲನೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸವಿನೆನಪಿನಲ್ಲಿ ಕೆಎಸ್‌ಆರ್‌ಪಿ ಹಾಗೂ ಬೆಂಗಳೂರು ಸಂಚಾರಿ ಪೊಲೀಸರು ಸೈಕಲ್ ಜಾಥಾ ಆಯೋಜಿಸಿದ್ದಾರೆ.

    ಕಂಠೀರವ ಸ್ಟೇಡಿಯಂ ನಿಂದ 50 ಕಿಲೋಮೀಟರ್ ಸಾಗಲಿರುವ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಪುನೀತ್ ಸಹೋದರ ಸ್ಯಾಂಡಲ್‍ವುಡ್ ನಟ ಶಿವರಾಜ್‍ಕುಮಾರ್ ಚಾಲನೆ ನೀಡಿದ್ದಾರೆ. ಸೈಕಲ್ ಜಾಥಾದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗೂ ಕೆಎಸ್‌ಆರ್‌ಪಿ, ಬೆಂಗಳೂರು ಸಂಚಾರಿ ಪೊಲೀಸರು ಭಾಗಿಯಾಗಿದ್ದರು.

    ನಟ ಪುನೀತ್ ರಾಜ್‍ಕುಮಾರ್ ನೆನಪು ಹಾಗೂ ಕನ್ನಡಕ್ಕಾಗಿ ನಾವು, ಮಾತಾಡ್ ಮಾತಾಡ್ ಕನ್ನಡ ಎಂಬ ಘೋಷ ವಾಕ್ಯದಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ, ಬಳಿಕ ಸಂಚಾರಿ ಪೊಲೀಸರು ಕಂಠೀರವ ಸ್ಟೇಡಿಯಂನಿಂದ ಸೈಕಲ್ ಜಾಥಾ ಆರಂಭಿಸಿದ್ದು, ಚಾಲುಕ್ಯ ಸರ್ಕಲ್, ಮೇಖ್ರಿ ಸರ್ಕಲ್, ಹೆಬ್ಬಾಳ, ಬಿಇಎಲ್ ಸರ್ಕಲ್, ಗೋರಗುಂಟೆಪಾಳ್ಯ, ರಾಜ್ ಕುಮಾರ್ ಸಮಾಧಿ ಕಡೆಗೆ ಸಾಗಿ, ಪುನೀತ್ ಸಮಾಧಿ ಬಳಿ ಬ್ರೇಕ್ ಪಡೆದು ನಂತರ ನಾಗರಭಾವಿ, ದೇವೆಗೌಡ ಪೆಟ್ರೋಲ್ ಬಂಕ್, ಸಾರಕ್ಕಿ ಸರ್ಕಲ್, ಬಿಟಿಎಂ ಜಂಕ್ಷನ್, ಸಿಲ್ಕ್ ಬೋರ್ಡ್, ಆಡುಗೋಡಿ, ರಿಚ್ಮಂಡ್ ಸರ್ಕಲ್, ಮೇಯೋ ಹಾಲ್ ಕಡೆಯಿಂದ ಸಾಗಿ ಪೊಲೀಸ್ ಹಾಕಿ ಗ್ರೌಂಡ್ ನಲ್ಲಿ ಸೈಕಲ್ ಜಾಥ ಅಂತ್ಯವಾಗಲಿದೆ. ಇದನ್ನೂ ಓದಿ: ದೇಶದ ಮೊದಲ ಬಾಸ್ಕೆಟ್‌ಬಾಲ್‌ ಲೀಗ್‍ಗೆ ಅದ್ಧೂರಿ ಚಾಲನೆ

    ಒಟ್ಟಾರೆ ಕಂಠೀರವ ಸ್ಟೇಡಿಯಂನಿಂದ 50 ಕಿಲೋಮೀಟರ್ ಸೈಕಲ್ ಜಾಥ ನಡೆಸಿ ಕಂಠೀರವ ಸ್ಟುಡಿಯೋಗೆ ತೆರಳಿ ಪುನೀತ್ ರಾಜ್‍ಕುಮಾರ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ