Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]
Tag: ಶಿವರಾಜಕುಮಾರ್
-

‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಧನುಷ್-ಶಿವಣ್ಣ ಕಾಳಗ?
ತಮಿಳಿನ ಹೆಸರಾಂತ ನಟ ಧನುಷ್ ಮತ್ತು ಕನ್ನಡದ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಪೋಸ್ಟರ್ (Poster) ವೊಂದು ನಿನ್ನೆ ರಿಲೀಸ್ ಆಗಿದ್ದು, ವಿವಿಧ ಬಗೆಯ ಬಂದೂಕು ಹಿಡಿದುಕೊಂಡಿರುವ ಇಬ್ಬರು ಸ್ಟಾರ್ ನಟರು ತೆರೆಯ ಮೇಲೆ ಕಾಳಗ ಮಾಡಲಿದ್ದಾರೆ ಎನ್ನುವ ಕುತೂಹಲವನ್ನು ಉಂಟು ಮಾಡಿದೆ.
ಧನುಷ್ ಕೈಯಲ್ಲಿ ಒಂದು ಬಗೆಯ ಬಂದೂಕು ಇದ್ದರೆ, ಶಿವರಾಜ್ ಕುಮಾರ್ ಮತ್ತೊಂದು ಬಗೆಯ ಬಂದೂಕು ಹಿಡಿದಿದ್ದಾರೆ. ಇಬ್ಬರ ಲುಕ್ ಕೂಡ ಸಖತ್ ಕ್ಯಾಚಿ ಆಗಿದೆ. ಹೀಗಾಗಿ ತೆರೆಯ ಮೇಲೆ ಇಬ್ಬರೂ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಇರುವ ಕಾತರ.
ಶಿವರಾಜ್ ಕುಮಾರ್ (Shivraj Kumar) ಸದ್ಯ ಏಕಕಾಲಕ್ಕೆ ತಮಿಳಿನ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಸಿನಿಮಾದಲ್ಲಿ ರಜನಿಕಾಂತ್ ನಾಯಕನಾದರೆ ಮತ್ತೊಂದು ಸಿನಿಮಾದಲ್ಲಿ ರಜನಿ ಅಳಿಯ ಧನುಷ್ (Dhanush) ನಾಯಕ. ಈ ಎರಡೂ ಚಿತ್ರಗಳು ಬಹುತೇಕ ಶೂಟಿಂಗ್ ಮುಗಿಸಿವೆ.
ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ವಿಶೇಷ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪಾತ್ರ ಯಾವುದು, ಹಿನ್ನೆಲೆ ಏನು ಎನ್ನುವ ವಿಚಾರ ಈವರೆಗೂ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಸ್ವತಃ ಶಿವರಾಜ್ ಕುಮಾರ್ ಕೂಡ ಈತನಕ ಹೇಳಿಕೊಂಡಿಲ್ಲ. ಪಾತ್ರ ಮತ್ತು ಕಥೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಂಡು ಬರಲಾಗುತ್ತಿದೆ. ಇದನ್ನೂ ಓದಿ:ತಮಿಳು ‘ಜೈಲರ್’ ವಿರುದ್ದ ಮಲಯಾಳಂ ‘ಜೈಲರ್’ ರಿಲೀಸ್: ರಜನಿ ಸಿನಿಮಾಗೆ ಟಕ್ಕರ್
ಆದರೆ, ಆಕಸ್ಮಿಕ ಎನ್ನುವಂತೆ ಧನುಷ್ ಜೊತೆ ಮಾಡುತ್ತಿದ್ದ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾದ ಕೆಲವು ವಿಷಯಗಳು ಸೋರಿಕೆಯಾಗಿವೆ. ಅಂದರೆ, ಶಿವರಾಜ್ ಕುಮಾರ್ ಅವರಿಗೆ ಕೇಶವಿನ್ಯಾಸ ಮಾಡುತ್ತಿರುವ ರಾಜು ಎನ್ನುವವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾತ್ರ ಮತ್ತು ಸಿನಿಮಾದ ಕಥೆಯನ್ನೂ ಅವರು ಬಿಟ್ಟುಕೊಟ್ಟಿದ್ದಾರೆ.
ಕಾಡು ಜನರು ಮತ್ತು ಬ್ರಿಟಿಷ್ ರ ನಡುವಿನ ಹೋರಾಟದ ಕಥೆಯನ್ನು ಕ್ಯಾಪ್ಟನ್ ಮಿಲ್ಲರ್ ನಲ್ಲಿ ಹೇಳುತ್ತಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ಕಾಡು ಜನರ ಪಾತ್ರದಲ್ಲಿ ಶಿವಣ್ಣ ಮತ್ತು ಧನುಷ್ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಧನುಷ್ ಅಣ್ಣನ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /] -

‘ಕಬ್ಜ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ : ಬ್ರೇಕಿಂಗ್ ನ್ಯೂಸ್ ಕೊಟ್ಟ ಚಂದ್ರು
ಕನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ನಿರ್ದೇಶನದ ‘ಕಬ್ಜ’ (Kabzaa) ಸಿನಿಮಾದಲ್ಲಿ ಶಿವರಾಜಕುಮಾರ್ (Shivarajkumar)ನಟಿಸಿದ್ದಾರೆ ಎನ್ನುವ ವಿಚಾರ ಆಗಾಗ್ಗೆ ಸುದ್ದಿ ಆಗುತ್ತಲೇ ಇತ್ತು. ಚಂದ್ರು ಸಿನಿಮಾ ಎಂದರೆ ಅಲ್ಲಿ ಶಿವಣ್ಣ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಇಬ್ಬರೂ ಹತ್ತಿರದವರು. ಹಾಗಾಗಿ ಈ ಸಿನಿಮಾದಲ್ಲೂ ಶಿವರಾಜಕುಮಾರ್ ಇರುವುದು ಪಕ್ಕಾ ಎಂದು ಹೇಳಲಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ಶಿವಣ್ಣ ಕಬ್ಜ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಪೋಸ್ಟರ್ ಅನ್ನುವ ಚಂದ್ರು ಹಂಚಿಕೊಂಡಿದ್ದಾರೆ.

ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ ‘ಕಬ್ಜ’ ಸಿನಿಮಾ ಟೀಮ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಮಾರ್ಚ್ 4ರಂದು ಚಿತ್ರದ ಟ್ರೈಲರ್ (Trailer) ರಿಲೀಸ್ ಮಾಡುತ್ತಿದ್ದು, ಟ್ರೈಲರ್ ನೋಡುವುದಕ್ಕಾಗಿಯೇ ಹಲವು ತಿಂಗಳುಗಳಿಂದ ಅಭಿಮಾನಿಗಳು ಕಾದಿದ್ದಾರೆ. ಅಭಿಮಾನಿಗಳನ್ನು ಕಾಯಿಸಿ, ಕೊನೆಗೂ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕ ಆರ್.ಚಂದ್ರು. ಇದನ್ನೂ ಓದಿ: ಮಾರ್ಚ್ 4ಕ್ಕೆ ‘ಕಬ್ಜ’ ಸಿನಿಮಾ ಟ್ರೈಲರ್: ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮ

ಮೊನ್ನೆಯಷ್ಟೇ ರಿಲೀಸ್ ಆಗಿರುವ ಹಾಡು ಈಗಾಗಲೇ ಕೋಟ್ಯಾಂತರ ಕೇಳುಗರನ್ನು ತಲುಪಿದೆ. ರಿಲೀಸ್ ಆದ ಅಷ್ಟೂ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕರು. ಶನಿವಾರ (ಮಾ.4) ಸಂಜೆ 5 ಗಂಟೆ 2 ನಿಮಿಷಕ್ಕೆ ಟ್ರೈಲರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಏಕಕಾಲಕ್ಕೆ ಎಲ್ಲ ಭಾಷೆಯ ಟ್ರೈಲರ್ ಗಳು ರಿಲೀಸ್ ಆಗಲಿವೆ.

ನಿರ್ದೇಶಕ ಆರ್.ಚಂದ್ರು, ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Sudeep) ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಶ್ರೀಯಾ ಶರಣ್ (Shreya Sharan) ನಾಯಕಿಯಾಗಿದ್ದಾರೆ. ಭಾರೀ ಬಜೆಟ್, ಅದ್ಧೂರಿ ತಾರಾಗಣ ಹೊಂದಿರುವ ಚಿತ್ರ ಇದಾಗಿದೆ. ಅಲ್ಲದೇ, ಅಚ್ಚರಿ ಮೂಡಿಸುವಂತ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರಂತೆ. ಯಾರೆಲ್ಲ ನಟಿಸಿದ್ದಾರೆ ಎನ್ನುವ ವಿಷಯವನ್ನು ಸದ್ಯಕ್ಕೆ ಹೇಳುವುದಿಲ್ಲ ಎನ್ನುತ್ತಾರೆ ಚಂದ್ರು.

ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಜನೆ ನಿರ್ದೇಶಕರದ್ದು. ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಯನ್ನೂ ಅವರು ಮಾಡಿಕೊಂಡಿದ್ದಾರೆ. ದೊಡ್ಡಮಟ್ಟದಲ್ಲೇ ಸಿನಿಮಾ ರಿಲೀಸ್ ಆಗುತ್ತಿದ್ದು, ಕೇವಲ ಭಾರತದಲ್ಲಿ ಮಾತ್ರವಲ್ಲ ಹಲವು ದೇಶಗಳಲ್ಲೂ ಏಕಕಾಲಕ್ಕೆ ಕಬ್ಜ ಬಿಡುಗಡೆ ಆಗಲಿದೆ.
-

ವಿಧಾನಸಭಾ ಚುನಾವಣೆ ಪ್ರಚಾರ ಮಾಡ್ತೀರಾ: ಪ್ರಶ್ನೆಗೆ ಉತ್ತರಿಸಿದ ಶಿವಣ್ಣ
ಬೆಂಗಳೂರು: ಈ ಬಾರಿ ಕರ್ನಾಟಕ ವಿಧಾನಸಾಭಾ ಚುನಾವಣೆ ವೇಳೆ ಪ್ರಚಾರ ಮಾಡುವುದಿಲ್ಲ ಎಂದು ಸೆಂಚುರಿ ಸ್ಟಾರ್ ಶಿವಣ್ಣ ಹೇಳಿದ್ದಾರೆ.
ಡಾ. ರಾಜ್ ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೋಗೆ ಬಂದಿದ್ದ ಶಿವರಾಜ್ ಕುಮಾರ್, ತಂದೆ ಸ್ಮಾರಕಕ್ಕೆ ಪೂಜೆಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದರು.
ನಾನು ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ. ಅಷ್ಟೇ ಅಲ್ಲದೆ ನನ್ನ ಶ್ರೀಮತಿ ಪಕ್ಷದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ನನಗೆ ಶೂಟಿಂಗ್ ಇದ್ದು ಡೇಟ್ಸ್ ಇಲ್ಲದ ಕಾರಣ ನಾನು ಪ್ರಚಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪ-ಅಮ್ಮನ ಸ್ಮಾರಕ ಸೇರಿಸಿ ಎಲ್ಲೂ ಇಲ್ಲದ ಯೋಗ ಕೇಂದ್ರ ನಿರ್ಮಾಣ ಮಾಡ್ತೀವಿ: ರಾಘವೇಂದ್ರ ರಾಜ್‍ಕುಮಾರ್

ಇಂದು ವರನಟ ಡಾ. ರಾಜ್‍ಕುಮಾರ್ ಪುಣ್ಯಸ್ಮರಣೆ. 12 ನೇ ವರ್ಷ ಪುಣ್ಯಸ್ಮರಣೆಯನ್ನ ಸರಳವಾಗಿ ಆಚರಿಸಲು ಕುಟುಂಬವರ್ಗ ನಿರ್ಧರಿಸಿದ್ದು, ಶಿವರಾಜ್‍ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್‍ರಾಜ್‍ಕುಮಾರ್ ಸೇರಿದಂತೆ ಕುಟುಂಬವರ್ಗ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು.
ರಾಜ್ ಪುಣ್ಯಸ್ಮರಣೆಗೆ ನೀತಿಸಂಹಿತೆ ಎಫೆಕ್ಟ್ ತಟ್ಟಿದ್ದು, ಸರಳವಾಗಿ ಪುಣ್ಯಸ್ಮರಣೆ ಆಚರಿಸಲು ನಿರ್ಧಾರ ಮಾಡಿದ್ದರು. ಹಾಗಾಗಿ ಪ್ರತಿವರ್ಷ ಸುಮಾರು 3 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ಬಂದಿರುವುದರಿಂದ ರಾಜ್ ಕುಮಾರ್ ಪುಣ್ಯಸ್ಮರಣೆಯನ್ನ ಶಾಮಿಯಾನ, ಊಟದ ವ್ಯವಸ್ಥೆ ಇಲ್ಲದೆ ಮಾಡಲಾಗುತ್ತಿದೆ.





