Tag: ಶಿವಯೋಗಿ ಕಳಸದ್

  • ರಾಜ್ಯದ ಎಲ್ಲಾ ಸಾರಿಗೆ ನೌಕರರ ರಜೆ ರದ್ದು: ಶಿವಯೋಗಿ ಕಳಸದ್

    ರಾಜ್ಯದ ಎಲ್ಲಾ ಸಾರಿಗೆ ನೌಕರರ ರಜೆ ರದ್ದು: ಶಿವಯೋಗಿ ಕಳಸದ್

    ಬೆಂಗಳೂರು: ವಾರದ ರಜೆ ಹಾಗೂ ತುರ್ತು ರಜೆ ಹೊರತುಪಡಿಸಿ ರಾಜ್ಯದ ಎಲ್ಲಾ ಸಾರಿಗೆ ನೌಕರರ ರಜೆ ರದ್ದುಪಡಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.

    ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಎಲ್ಲಾ ನೌಕರರ ರಜೆ ರದ್ದುಪಡಿಸಲಾಗುತ್ತದೆ. ಅನಗತ್ಯ ರಜೆ ಹಾಕಿದರೆ ವೇತನ ಕಟ್ ಮಾಡಲಾಗುತ್ತದೆ. ನಾಳೆಯಿಂದ ಅನಗತ್ಯವಾಗಿ ರಜೆ ಹಾಕಿದರೆ ವೇತನ ನೀಡಲ್ಲ ಅಂತ ಸುತ್ತೋಲೆ ಹೊರಡಿಸಿದ್ದಾರೆ.

    ಸಹಜ ಸ್ಥಿತಿಗೆ ಬರುವರಿಗೆ ಈ ಸುತ್ತೋಲೆ ಅನ್ವಯವಾಗಲಿದ್ದು, ಅನಗತ್ಯವಾಗಿ ರಜೆ ಹಾಕಿದರೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ಕಳಸದ್ ನೀಡಿದ್ದಾರೆ.

    ಇತ್ತ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಸಾರಿಗೆ ನೌಕರರ 6ನೇ ವೇತನ ಆಯೋಗ ಶಿಫಾರಸು ಜಾರಿ ಮಾಡಲು ಆಗಲ್ಲ. ಶೇ.8 ವೇತನ ಹೆಚ್ಚಳ ಮಾಡುತ್ತೇವೆ. ಚುನಾವಣಾ ಆಯೋಗ ಅನುಮತಿ ಕೊಡಬೇಕು. ಆಯೋಗದ ಅನುಮತಿಯನ್ನು ಕೇಳಿದ್ದೇವೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಸಂಬಳ ಹೆಚ್ಚಳ ಮಾಡಲು ಆಗುತ್ತಿಲ್ಲ. ಪ್ರತಿಭಟನೆಗೆ ಹೋಗಬಾರದು, ಮನವಿ ಮಾಡಿದ್ದೇವೆ ಎಂದರು.

    ಪ್ರತಿಭಟನೆಗೆ ಹೋದರೆ ಸಾರಿಗೆ ಇಲಾಖೆ ಬೇರೆ ವ್ಯವಸ್ಥೆ ಮಾಡಲಿದೆ. ಸಾರಿಗೆ ಪ್ರತಿಭಟನೆಯನ್ನ ಕಠಿಣವಾಗಿ ಡೀಲ್ ಮಾಡುತ್ತೇವೆ. ಈ ಕುರಿತಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮಾತುಕತೆಗೆ ಹೋಗುವ ಪ್ರಶ್ನೆಯೇ ಇಲ್ಲ. ಬಸ್ಸಿಗೆ ಹಾನಿ ಮಾಡಿದ್ರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಸ್ಮಾ ಜಾರಿ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

    ಕೋವಿಡ್ ನಿಯಮದಂತೆ ರೂಲ್ಸ್ ಫಾಲೋ ಮಾಡಬೇಕು, ಇಲ್ಲ ವಿಪತ್ತು ನಿರ್ವಹಣಾ ಕಾಯ್ದೆಯಂತೆ ಕ್ರಮ ‘ನೋ ವರ್ಕ್ ನೋ ಪೇ’ ಜಾರಿ ಮಾಡುತ್ತೇವೆ. ಚುನಾವಣಾ ಆಯೋಗಕ್ಕೆ ನಿನ್ನೆಯೇ ಪತ್ರ ಬರೆದಿದ್ದೇವೆ. ಶೇ. 8 ಸಂಬಳ ಹೆಚ್ಚಳ ಮಾಡುತ್ತೇವೆ. ಆದರೆ ಅವರು ಅನುಮತಿ ಕೊಡಬೇಕು ಎಂದು ತಿಳಿಸಿದ್ದಾರೆ.