Tag: ಶಿವಮೊಗ್ಗ ಕೊಲೆ

  • ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?

    ಹರ್ಷ ಕೊಲೆ ಕೇಸ್ – 7 ಆರೋಪಿಗಳು ಯಾರು? ಯಾರ ಪಾತ್ರ ಏನು?

    ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಎಫ್‍ಐಆರ್ ದಾಖಲಾಗಿದ್ದು, 7 ಮಂದಿ ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳ ಸಂಪೂರ್ಣ ಬಯೋಡೇಟಾವನ್ನು ಅಧಿಕಾರಿಗಳು ತಿಳಿಸಿದ್ದಾರೆ.

    ಎ1 – ಕಾಸಿಫ್:
    32 ವರ್ಷದ ಕಾಸಿಫ್ ಶಿವಮೊಗ್ಗದ ಕ್ಲಾಕ್ರ್ಸ್ ಪೇಟೆ ನಿವಾಸಿ. ಕಾಸಿಫ್ ಗ್ಯಾಂಗ್ ಹಾಗೂ ಹರ್ಷನ ಗ್ಯಾಂಗ್‍ಗೆ 2020ರಲ್ಲಿ ಶಿವಮೊಗ್ಗ ಜೈಲಿನಲ್ಲಿ ಗಲಾಟೆಯಾಗಿತ್ತು. ಅಂದಿನಿಂದ ದ್ವೇಷ ಹೊಂದಿದ್ದ ಕಾಸಿಫ್ ಹುಡುಗರನ್ನು ರೆಡಿ ಮಾಡಿ ಅಟ್ಯಾಕ್ ಮಾಡಿಸಿದ್ದ. ಕೊಲೆ ನಡೆದಿದ್ದ ದಿನ ಈತ ಕೂಡ ಮಚ್ಚು ಬೀಸಿದ್ದ. ಈತನನ್ನು ಕ್ಲಾರ್ಕ್ ಪೇಟೆ ಮನೆಯಲ್ಲೇ ಅರೆಸ್ಟ್ ಮಾಡಲಾಗಿದೆ.

    ಎ2 – ನದೀಮ್:
    23 ವರ್ಷದ ನದೀಮ್ ಕೂಡ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ನದೀಮ್ ಮೇಲಿದ್ದು, ಕೊಲೆಯಾದ ದಿನ ಆರೋಪಿಗಳ ರಕ್ಷಣೆಗೆ ಸಹಾಯ ಮಾಡಿದ್ದ. ಈತನನ್ನು ಭಾನುವಾರ ಮಧ್ಯರಾತ್ರಿ ಕ್ಲಾರ್ಕ್ ಪೇಟೆಯ ಈತನ ಮನೆಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಇದನ್ನೂ ಓದಿ: 9 ಎಫ್‍ಐಆರ್, 7 ಮಂದಿ ಅರೆಸ್ಟ್‌ – ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ ನಿಷೇಧಾಜ್ಞೆ

    ಎ3 – ಆಸಿಫ್ ಖಾನ್:
    21 ವರ್ಷದ ಆಸಿಫ್ ಖಾನ್ ಕೊಲೆ ಮಾಡುವ ಉದ್ದೇಶದಿಂದ ಕಾಸಿಫ್‍ನ ಮಾತಿನಂತೆ ಹರ್ಷನ ಮೇಲೆ ಹಲ್ಲೆ ಮಾಡಿದ್ದ. ಹರ್ಷನ ಮೇಲೆ ಮಚ್ಚು ಬೀಸಿದ್ದವನಲ್ಲಿ ಅಸಿಫ್ ಖಾನ್ ಎರಡನೇಯವ.

    ಎ4 – ರಿಯಾನ್ ಶರೀಫ್ ಅಲಿಯಾಸ್ ಖಸಿ:
    22 ವರ್ಷದ ಈತ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆಗೂ ಮೊದಲು ಕಾಸಿಫ್‍ನ ಪ್ಲಾನಿಂಗ್ ಮೀಟಿಂಗ್‍ನಲ್ಲಿ ಭಾಗಿಯಾಗಿದ್ದ. ಅಲ್ಲದೆ ಹರ್ಷನ ಮೇಲೆ ಹಲ್ಲೆ ಮಾಡಿದ್ದ. ಈತನನ್ನ ಹಾಸನದಲ್ಲಿ ದಸ್ತಗಿರಿ ಮಾಡಲಾಗಿದೆ. ಇದನ್ನೂ ಓದಿ: ಮತಾಂಧ ಮುಸ್ಲಿಂ ಯುವಕರನ್ನು ಗಲ್ಲಿಗೇರಿಸಿ: ಟೆಂಗಳಿ

    ಎ5 – ನಿಹಾನ್ ಅಲಿಯಾಸ್ ಮುಜಾಹಿದ್:
    23 ವರ್ಷದ ಈತ ಕೂಡ ಹರ್ಷನ ಕೊಲೆ ಮಾಡಿದವರಲ್ಲಿ ಪ್ರಮುಖ. ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿಯಾಗಿದ್ದು, ಸ್ನೇಹಿತರ ಗ್ಯಾಂಗ್ ಜೊತೆ ಮೀಟಿಂಗ್ ಮಾಡುತ್ತಿದ್ದ. ಖಾಸಿಫ್‍ನ ಅಣತಿಯಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಚಿಕ್ಕಮಗಳೂರಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಎ6 – ಅಬ್ದುಲ್ ಅಪ್ನಾನ್:
    ಅಬ್ದುಲ್ ಅಪ್ನಾನ್ ವಯಸ್ಸು ಈಗಿನ್ನು 21. ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲವಾದರೂ ಇನ್ ಡೈರೆಕ್ಟ್ ಆಗಿ ಭಾಗಿಯಾಗಿದ್ದಾನೆ. ಹರ್ಷನ ಚಟುವಟಿಕೆಗಳು, ಹೋಗಿ ಬರುವ ದಾರಿ, ಒಬ್ಬಂಟಿಯಾಗಿದ್ದಾನೋ ಅಥವಾ ಇಲ್ಲವೋ ಹೀಗೆ ಪ್ರತಿಯೊಂದು ಮಾಹಿತಿಯನ್ನು ಖಾಸಿಫ್‍ಗೆ ಈತ ನೀಡುತ್ತಿದ್ದ. ಕೊಲೆ ಬಳಿಕ ಈತ ಆರೋಪಿಗಳ ರಕ್ಷಣೆಗೆ ಪ್ರಯತ್ನ ಪಟ್ಟಿದ್ದ. ಇದನ್ನೂ ಓದಿ: ಶಾಂತಿ ಭಂಗ ಮಾಡುವ ನಿಮ್ಮನ್ನು ಜನರು ಎಂದೆಂದಿಗೂ ಕ್ಷಮಿಸುವುದಿಲ್ಲ: ಕಾಂಗ್ರೆಸ್‌ ವಿರುದ್ಧ ಸಿಎಂ ಕಿಡಿ

    ಎ7 – ಜಿಲಾನ್:
    ಈತ ಕೊಲೆ ನಡೆದ ಬಳಿಕ ಆರೋಪಿಗಳನ್ನು ಕಾರ್‍ನಲ್ಲಿ ಕರೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ. ಸ್ವಿಫ್ಟ್ ಕಾರ್‍ನಲ್ಲಿ ಭದ್ರಾವತಿ ಕಡೆ ತೆರಳಿದ್ದು, ಅಲ್ಲಿ ಎಲ್ಲರನ್ನೂ ಡೈವರ್ಟ್ ಮಾಡುವ ಕೆಲಸ ಮಾಡಿದ್ದ.

  • ನಾವು ಗಾಂಧಿವಾದಿಗಳಲ್ಲ ಗೋಡ್ಸೆವಾದಿಗಳು, ಇನ್ಮುಂದೆ ಸುಮ್ಮನಿರಲ್ಲ: ರವಿ ಪೂಜೇರಿ

    ನಾವು ಗಾಂಧಿವಾದಿಗಳಲ್ಲ ಗೋಡ್ಸೆವಾದಿಗಳು, ಇನ್ಮುಂದೆ ಸುಮ್ಮನಿರಲ್ಲ: ರವಿ ಪೂಜೇರಿ

    ಬೆಳಗಾವಿ: ಶಿವಮೊಗ್ಗ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಖಂಡಿಸಿ ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಗೋಕಾಕ್‌ ತಾಲೂಕು ಅಧ್ಯಕ್ಷ ರವಿ ಪೂಜೇರಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

    ಗೋಕಾಕ್ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ಹರ್ಷ ಹತ್ಯೆಯ ಆರೋಪಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಮಾತನಾಡಿದ ಗೋಕಾಕ್ ತಾಲೂಕು ಅಧ್ಯಕ್ಷ ರವಿ ಪೂಜೇರಿ, ಕಾಂಗ್ರೆಸ್ ಸರ್ಕಾರದಲ್ಲೂ ಹಿಂದೂಗಳ ಹತ್ಯೆ, ಬಿಜೆಪಿ ಸರ್ಕಾರದಲ್ಲೂ ಹಿಂದೂಗಳ ಹತ್ಯೆಯಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

    ನಾವು ಹಿಂದೂಗಳು ಪರ ಅಷ್ಟೇ. ಯಾವ ಸರ್ಕಾರಕ್ಕೂ ಸಾಥ್ ನೀಡಲ್ಲ. ಈ ಪ್ರಕರಣವನ್ನು ಸರ್ಕಾರ ಕಡೆಗಣಿಸಬಾರದು. ಅವರೇನಾದರೂ ಬೇಲ್ ಮೇಲೆ ಆಚೆ ಬಂದರೆ, ಉತ್ತರ ನೀಡಲು ನಮಗೂ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಛತ್ರಪತಿ ಶಿವಾಜಿ ಮಹಾರಾಜ್, ಸಂಬಾಜಿ ಪಾಟೀಲ್, ಸಂಗೊಳ್ಳಿ ರಾಯಣ್ಣ ರಕ್ತದಲ್ಲಿ ಹುಟ್ಟಿದ್ದೇವೆ. ನಾವು ಗಾಂಧಿವಾದಿಗಳಲ್ಲ, ಗೋಡ್ಸೆವಾದಿಗಳು. ಇನ್ಮುಂದೆ ವಿಚಾರ ಮಾಡಿ ಹೆಜ್ಜೆ ಇಡಿ. ನಮಗೂ ಉತ್ತರ ಕೊಡಲು ಬರುತ್ತೆ. ಭಯಾನಕ ಉತ್ತರ ಕೊಡುತ್ತೇವೆ. ನೀವು ಸುಮ್ಮನಿದ್ದರೆ ನಾವು ಸುಮ್ಮನಿರುತ್ತೇವೆ. ಇದೆ ಕಡೆಯಾಗಬೇಕು. ನಮ್ಮ ಹರ್ಷ ಹತ್ಯೆ ಪ್ರಕರಣಕ್ಕೆ ಎಲ್ಲವೂ ಕೊನೆಯಾಗಬೇಕು. ಇನ್ಮುಂದೆ ಹಿಂದೂ ಕಾರ್ಯಕರ್ತರ ತಂಟೆಗೆ ಬಂದರೆ, ಇಡೀ ಕರ್ನಾಟಕದ ಹಿಂದೂಗಳು ಸೇರಿ 2002ರ ಗೋದ್ರಾ ಹತ್ಯಾಕಾಂಡ ರೀತಿ ಕರ್ನಾಟಕದಲ್ಲೂ ಆಗಬಹುದು ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ನೀಡಿ-ಸರ್ಕಾರಕ್ಕೆ ಶ್ರೀರಾಮ ಸೇನೆ ಒತ್ತಾಯ