Tag: ಶಿವಮೊಗ್ಗ. ಕೆ.ಎಸ್ ಈಶ್ವರಪ್ಪ

  • ನನಗೆ ಕಾಲು ನೋವಿರುವ ಕಾರಣ ಸದನದಲ್ಲಿ ಭಾಗವಹಿಸಿಲ್ಲ ಅಷ್ಟೇ: ಕೆ.ಎಸ್ ಈಶ್ವರಪ್ಪ

    ನನಗೆ ಕಾಲು ನೋವಿರುವ ಕಾರಣ ಸದನದಲ್ಲಿ ಭಾಗವಹಿಸಿಲ್ಲ ಅಷ್ಟೇ: ಕೆ.ಎಸ್ ಈಶ್ವರಪ್ಪ

    ಶಿವಮೊಗ್ಗ: ನನಗೆ ಕಾಲು ನೋವಿರುವ ಕಾರಣ ಭಾಗವಹಿಸಿಲ್ಲ ಅಷ್ಟೇ. ಇದರಲ್ಲಿ ಬೇರೆ ವಿಶೇಷ ಏನಿಲ್ಲ. ನೀವು ಹುಡುಕಿದ್ರೂ ಸಿಗಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K S Eshwarappa) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಸದನ (Session) ದಲ್ಲಿ ಭಾಗವಹಿಸಬೇಕು ಎಂಬ ಆಸೆ ಇದೆ. ಆದರೆ ವೈದ್ಯರು ರೆಸ್ಟ್ ಮಾಡಿ ಅಂದಿದ್ದಾರೆ ಎಂದರು.

    ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಮರ್ಥವಾಗಿ ಟೀಕೆ ಮಾಡ್ತಿದ್ದಾರೆ ಅನ್ನುವ ಅಂಶ ರಾಜ್ಯದ ಜನತೆಗೆ ಅನಿಸ್ತಿಲ್ಲ. ಗಂಟಲಿನಿಂದ ಜೋರಾಗಿ ವಾಗ್ದಾಳಿ ಮಾಡಿದ್ರೆ ಜನ ಒಪ್ಪುವುದಿಲ್ಲ. ನಾವು ಭ್ರಷ್ಟಾಚಾರ ಬಿಚ್ಚಿಡ್ತೀವಿ ಬಿಚ್ವಿಡ್ತೀವಿ ಅಂತಾ ಮೊದಲಿನಿಂದಲೂ ಹೇಳಿಕೊಂಡು ಬಂದರು. ಇವತ್ತಿನವರೆಗೂ ಭ್ರಷ್ಟಾಚಾರದ ಬಗ್ಗೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. 40% ಅಂತಾ ಕೆಂಪಣ್ಣ ಹೇಳಿದ್ರೂ, ಆದರೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ಒಬ್ಬನೇ ಒಬ್ಬ ಸಚಿವನ ವಿರುದ್ದ ದಾಖಲೆ ಬಿಡುಗಡೆ ಮಾಡಿದ್ರೆ ಉತ್ತರ ಕೊಡ್ತೀವಿ. ಕೆಂಪಣ್ಣ ಕಾಂಗ್ರೆಸ್ (Congress) ಏಜೆಂಟ್ ಅನ್ನುವ ಅನುಮಾನ ರಾಜ್ಯದ ಜನರದ್ದಾಗಿದೆ ಎಂದು ಹೇಳಿದರು.

    ಸಿದ್ದರಾಮಯ್ಯ ಅವರು ಬೋಟ್ (Boat) ನಲ್ಲಿ ತೇಲಿಕೊಂಡು ಹೋಗಿದ್ದನ್ನು ನೋಡಿದೆ. ಒಂದೂವರೆ ಅಡಿ ನೀರು ನನ್ನ ಮೊಮ್ಮಗ ಆ ನೀರಿನಲ್ಲಿ ನಡೆದುಕೊಂಡು ಹೋಗ್ತಾನೆ. ಇವರು ಒಂದೂವರೆ ಅಡಿ ನೀರಲ್ಲಿ ಬೋಟಲ್ಲಿ ನಿಂತುಕೊಂಡು ನಾನು ವಿಪಕ್ಷ ನಾಯಕನಾಗಿ ವೀಕ್ಷಣೆ ಮಾಡದೇ ಅಂತಾ ತೋರಿಸಲು ಮಾಡಿದ ನಾಟಕ. ಅಕ್ರಮ ಒತ್ತುವರಿಯನ್ನು ಬಿಜೆಪಿ (BJP) ತೆರವು ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: 2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ ಮಾಡುವ ಗುರಿ: ಶ್ರೀರಾಮುಲು ಘೋಷಣೆ

    ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಮಾಡಲಿಲ್ಲ. ನಲಪಾಡ್ (Nalapad) ಅವರ ಸಂಸ್ಥೆಯಿಂದಲೇ ಒತ್ತುವರಿ ಆಗಿದೆ ಅಂತಾ ಒಪ್ಪಿಕೊಂಡಿದ್ದಾರೆ. ಇಷ್ಟು ವರ್ಷ ಒತ್ತುವರಿ ಅವಕಾಶ ಮಾಡಿ ಕೊಟ್ಟಿದ್ದೆ ಕಾಂಗ್ರೆಸ್. ಯಾವುದೇ ಪಕ್ಷ ನೋಡದೇ ಒತ್ತುವರಿಯನ್ನು ಸರ್ಕಾರ ತೆರವು ಮಾಡುತ್ತಿದೆ. ಪ್ರಭಾವಿ ವ್ಯಕ್ತಿಗಳ ಬಿಟ್ಟು ಬಡವರ ಕಟ್ಟಡ ಒಡೆಯುತ್ತಿದ್ದಾರೆ ಎಂಬ ಬಣ್ಣ ಕಟ್ಟುತ್ತಿದ್ದಾರೆ ಎಂದು ಹೇಳಿದರು.

    ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಟೀಕೆ ಇದ್ದದ್ದೆ. ಒತ್ತುವರಿ ತೆರವು ಮಾಡಲು ಜನರೇ ಸಹಕಾರ ಕೊಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ನಾಗರೀಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್ – ಇಂದು 8 ʼಕೈʼ ಶಾಸಕರು ಬಿಜೆಪಿ ಸೇರ್ಪಡೆ

    Live Tv
    [brid partner=56869869 player=32851 video=960834 autoplay=true]

  • ನಾಲಿಗೆ ಕಟ್ ಮಾಡ್ತೀವಿ ಹುಷಾರ್ ಮಗನೇ ಬಾಲ ಬಿಚ್ಬೇಡ- ಈಶ್ವರಪ್ಪಗೆ ಬೆದರಿಕೆ ಪತ್ರ

    ನಾಲಿಗೆ ಕಟ್ ಮಾಡ್ತೀವಿ ಹುಷಾರ್ ಮಗನೇ ಬಾಲ ಬಿಚ್ಬೇಡ- ಈಶ್ವರಪ್ಪಗೆ ಬೆದರಿಕೆ ಪತ್ರ

    ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಬೆದರಿಕೆ ಪತ್ರವೊಂದು ಬಂದಿದೆ.

    ಅನಾಮಧೇಯ ವ್ಯಕ್ತಿಯಿಂದ ಈ ಬೆದರಿಕೆ ಪತ್ರ ಬಂದಿದ್ದು, ಮಾಜಿ ಸಚಿವರ ಶಿವಮೊಗ್ಗದ ನಿವಾಸಕ್ಕೆ ಪೋಸ್ಟ್ ಮೂಲಕ ಪತ್ರ ರವಾನೆಯಾಗಿದೆ. ಸದ್ಯ ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಈಶ್ವರಪ್ಪ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅವರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯಲ್ಲಿ ಟಿಕೆಟ್ ಫೈಟ್- ಹುಟ್ಟುಹಬ್ಬ ಆಚರಿಸಿಕೊಂಡು ಶಕ್ತಿ ಪ್ರದರ್ಶನ

    ಪತ್ರದಲ್ಲೇನಿದೆ..?: ಸ್ವಾತಂತ್ರ್ಯ ಸೇನಾನಿಯಾದ ನಮ್ಮ ಸಮಾಜದ ಟಿಪ್ಪು ಸುಲ್ತಾನ್ ಬಗ್ಗೆ ನಿನ್ನ ಬಾಯಿಂದ ”ಮುಸ್ಲಿಂ ಗೂಂಡಾ” ಅಂತಾ ಹೇಳಿದ್ದೀಯಲ್ಲ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜಿಗೆ ಕಟ್ಟಡ ಕಟ್ಟಲು ನಮ್ಮ ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಬೇಕು ನಿನಗೆ. ಆದರೆ ಮುಸ್ಲಿಮರು ಮಾತ್ರ ಬೇಡ ಮಗನೆ ನಾಚಿಕೆಯಾಗಬೇಕು. ನಾಲಿಗೆ ಕಟ್ ಮಾಡುತ್ತೇವೆ ಹುಷಾರ್ ಮಗನೆ ಬಾಲ ಬಿಚ್ಚಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • RSS ಟೀಕಿಸಿದರೆ ದೊಡ್ಡ ಮನುಷ್ಯರಾಗ್ತೇವೆ ಅನ್ನೋ ಭ್ರಮೆಯಲ್ಲಿದ್ದಾರೆ ಮಾಜಿ ಸಿಎಂಗಳು: ಈಶ್ವರಪ್ಪ

    RSS ಟೀಕಿಸಿದರೆ ದೊಡ್ಡ ಮನುಷ್ಯರಾಗ್ತೇವೆ ಅನ್ನೋ ಭ್ರಮೆಯಲ್ಲಿದ್ದಾರೆ ಮಾಜಿ ಸಿಎಂಗಳು: ಈಶ್ವರಪ್ಪ

    – RSS ಒಂದು ಕೂದಲನ್ನೂ ಅಲ್ಲಾಡಿಸಲು ಆಗಲ್ಲ

    ಶಿವಮೊಗ್ಗ: RSS ಟೀಕಿಸಿದರೆ ದೊಡ್ಡ ಮನುಷ್ಯರಾಗುತ್ತೇವೆ ಎಂಬ ಭ್ರಮೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ. RSS ಇಂದು ದೇಶದಲ್ಲಿ, ಪ್ರಪಂಚದಲ್ಲಿ ದೊಡ್ಡ ಸಂಘಟನೆ ಆಗಿ ಬೆಳೆದಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಅಲ್ಲ, ಯಾರಿಂದಲೂ RSS ನ ಒಂದು ಕೂದಲನ್ನು ಅಲ್ಲಾಡಿಸಲು ಆಗುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಡೀ ದೇಶದ ಹಳ್ಳಿಹಳ್ಳಿಯಲ್ಲಿ RSS ನ ಸ್ವಯಂ ಸೇವಕರು ಇದ್ದಾರೆ. ಈ ದೇಶವನ್ನು ರಕ್ಷಣೆ ಮಾಡುತ್ತಾರೆ. RSS ಸಂಘಟನೆ ಇಡೀ ದೇಶದಲ್ಲಿ, ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿಯನ್ನು ಬೆಳೆಸುತ್ತಿರುವ ಪ್ರಪಂಚದಲ್ಲಿಯೇ ದೊಡ್ಡ ಸಂಘಟನೆ ಎಂದರು.

    ಉಪ ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಕೇವಲ ಅನಿಸಿಕೊಳ್ಳಲು ಮಾತ್ರ ಇಲ್ಲ. ನಮ್ಮ ಪಕ್ಷ ಯಾವುದೇ ಪಕ್ಷದ ರಾಷ್ಟ್ರೀಯ ನಾಯಕರ ವಿರುದ್ಧ ಹಗುರವಾದ ಟೀಕೆ ಮಾಡಿಲ್ಲ. ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆಗೆ ಹೋಲಿಸಿದ್ದರು. ಅಲ್ಲದೆ ನಾವು ಇಂದಿರಾ ಗಾಂಧಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು ಎಂದರು. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ಈಗಿನ ಕಾಂಗ್ರೆಸ್ ಸ್ಥಿತಿ ಇಂದು ಏನಾಗಿದೆ, ವಿಶ್ವವೇ ಮೆಚ್ಚಿರುವ ನರೇಂದ್ರ ಮೋದಿ ಅವರ ಬಗ್ಗೆ ಹೆಬ್ಬೆಟ್ಟಿನ ಗಿರಾಕಿ ಅಂತಾ ಸೊಕ್ಕಿನ ಮಾತನ್ನು ಹೇಳುತ್ತಾರಲ್ಲಾ, ನಾವೆಲ್ಲಾ ಮಂಡಕ್ಕಿ ತಿನ್ನುತ್ತಾ ಕೂರಬೇಕಾ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು. ಕಾಂಗ್ರೆಸ್ ನವರ ಇಂತಹ ಮಾತಿನಿಂದ ದೇಶದ, ಪ್ರಪಂಚದ ಎಲ್ಲಾ ಜನರಿಗೆ ನೋವಾಗಿದೆ. ರಾಹುಲ್ ಗಾಂಧಿ ಬಗ್ಗೆ ಡ್ರಗ್ಸ್ ಪೆಡ್ಲರ್ ಅಂತಾ ಹೇಳುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ. ಹೆಬ್ಬೆಟ್ ಗಿರಾಕಿ ಅಂತಾ ಹೇಳಿದ ಸಿದ್ದರಾಮಯ್ಯನವರಿಗೆ ಹಾಗೂ ಕಾಂಗ್ರೆಸ್ ನಾಯಕರಿಗೆ ನಿಮ್ಹಾನ್ಸ್ ಗಿಂತ ಬೇರೆ ಆಸ್ಪತ್ರೆ ಹುಡುಕಿದ್ರೂ ಹುಚ್ಚು ವಾಸಿಯಾಗಲ್ಲ ಎಂದರು. ಇದನ್ನೂ ಓದಿ: ಕಟೀಲ್ ಆರೋಪಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಾಕ್ಷ್ಯ ನೀಡಿದ ಬಿಜೆಪಿ

    ನಮ್ಮ ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಇದೇ ರೀತಿ ಹಗುರವಾಗಿ ಮಾತನಾಡಿದರೆ ಇನ್ನೂ ಬೇರೆ ಬೇರೆ ಪದಗಳನ್ನು ಬಳಸಬೇಕಾಗುತ್ತದೆ. ನರೇಂದ್ರ ಮೋದಿ ಟೀಕಿಸಿದ ಸಿದ್ದರಾಮಯ್ಯ ಅವರು ದೇಶದ ಜನತೆ ಎದುರು ಕ್ಷಮೆ ಕೇಳಬೇಕು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ

  • ತೀರ್ಥಹಳ್ಳಿಯ ಹೆಗಲತ್ತಿ ಗ್ರಾಮದ ರೈತರಿಗೆ ಮರೀಚಿಕೆಯಾದ ಸರ್ಕಾರದ ಪರಿಹಾರ

    ತೀರ್ಥಹಳ್ಳಿಯ ಹೆಗಲತ್ತಿ ಗ್ರಾಮದ ರೈತರಿಗೆ ಮರೀಚಿಕೆಯಾದ ಸರ್ಕಾರದ ಪರಿಹಾರ

    – ನೆರೆ ಪೀಡಿತ ಪ್ರದೇಶಗಳಿಗೆ ಈಶ್ವರಪ್ಪ ಭೇಟಿ

    ಶಿವಮೊಗ್ಗ: ಕಳೆದ ಬಾರಿ ನೆರೆ ಬಂದ ಸಂದರ್ಭದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿಎಂ. ಬಿ.ಎಸ್ ಯಡಿಯೂರಪ್ಪ ಮಳೆಹಾನಿಗೆ ಒಳಗಾದ ಜನರಿಗೆ ಸಾಂತ್ವಾನ ಹೇಳಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವ ಭರವಸೆ ನೀಡಿದ್ರು. ಆದರೆ ಆ ಪ್ಯಾಕೇಜ್ ಹುಸಿಯಾಗಿತ್ತು. ಹಾನಿಯ ತೀವ್ರತೆ ಅರಿತು ನೀಡಿದ್ದ ಹೇಳಿಕೆ, ಕೇವಲ ಹೇಳಿಕೆಯಾಗಿಯೇ ಉಳಿದಿತ್ತು. ನೆರೆ ಬಂದು ಒಂದು ವರ್ಷವಾದರೂ ಪರಿಹಾರ ಸಿಗದೇ ಇದ್ದ ಗ್ರಾಮಕ್ಕೆ ಇದೀಗ ಪರಿಹಾರ ಸಿಗುವ ಭರವಸೆ ದೊರೆತಿದೆ. ಇದು ಕೂಡ ಭರವಸೆಯಾಗಿಯೇ ಉಳಿಯತ್ತಾ ಎಂಬ ಆತಂಕದಲ್ಲಿ ಇದೀಗ ಇಲ್ಲಿನ ಗ್ರಾಮಸ್ಥರಿದ್ದಾರೆ.

    ಕಳೆದ ವರ್ಷ ಇದೇ ದಿನದಂದು ರಾಜ್ಯದಲ್ಲಿ ಕಂಡು ಕೇಳರಿಯದ ಪ್ರವಾಹವೇ ಸೃಷ್ಟಿಯಾಗಿತ್ತು. ರೌದ್ರಾವತರಾದ ಮಳೆಗೆ ಅದೆಷ್ಟೋ ರೈತರ ಬದುಕೇ ಕೊಚ್ಚಿಕೊಂಡು ಹೋಗಿತ್ತು. ಆ ಗಾಯ ಮಾಸುವ ಮುನ್ನವೇ ಈ ಬಾರಿಯ ವರುಣಾಘಾತಕ್ಕೆ ಜನರು ನಲುಗಿ ಹೋಗಿದ್ದಾರೆ. ಕಳೆದ ಬಾರಿಯ ಪರಿಹಾರವೇ ಇದುವರೆಗೆ ಸಿಕ್ಕಿಲ್ಲ. ಈಗ ಮತ್ತೇ ಏನಾದರೂ ಅನಾಹುತ ನಡೆದರೆ ಎಂಬ ಆತಂಕದಲ್ಲಿ ಜನರಿದ್ದಾರೆ.

    ಹೌದು ಶಿವಮೊಗ್ಗ ಜಿಲ್ಲೆಯಲ್ಲೂ ಕಳೆದ ವರ್ಷ ಇದೇ ರೀತಿ ನೆರೆ ಪ್ರವಾಹ ಉಂಟಾಗಿ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಲ್ಲಿ ಗುಡ್ಡ ಕುಸಿದು, ಸುಮಾರು 40 ಎಕರೆಯಷ್ಟು ಭೂಮಿ ನಾಶವಾಗಿತ್ತು. ಅಡಿಕೆ ತೋಟ, ಭತ್ತದ ಗದ್ದೆಗಳು ಮಣ್ಣು ಪಾಲಾಗಿತ್ತು. ನೆರೆ ಹಾವಳಿಯಿಂದಾಗಿ ಇಲ್ಲಿನ ರೈತರು ಕಂಗಾಲಾಗಿದ್ರು. ಈ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದ ಸಿ.ಎಂ. ಯಡಿಯೂರಪ್ಪ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ, ಸಂತ್ರಸ್ತರ ಬವಣೆಯನ್ನು ಆಲಿಸಿದ್ರು. ಗುಡ್ಡ ಕುಸಿತ ಹಾಗೂ ಭಾರೀ ಮಳೆಯಿಂದಾಗಿ ರಾಸುಗಳು ಸಾವನಪ್ಪಿದ್ದವು. ರಾಸುಗಳ ಸಾವಿಗೆ ಸಾಂಕೇತಿಕವಾಗಿ 90 ಸಾವಿರ ರೂ. ಹಾಗೂ ಜಮೀನು ನಾಶವಾಗಿದ್ದಕ್ಕೆ ಎಕರೆಗೆ 15 ಸಾವಿರ ರೂಗಳ ಪರಿಹಾರದ ಚೆಕ್ ನ್ನು ವಿತರಿಸಿ, ಸಾಂತ್ವನ ಹೇಳಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲಾಗುವುದೆಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ರು.

    ಈ ಭರವಸೆ ಭರವಸೆಯಾಗಿಯೇ ಉಳಿದಿದ್ದು, ಇಂದಿನವರೆಗೂ ಪರಿಹಾರ ವಿತರಣೆಯಾಗಿಲ್ಲ ಎಂಬುದು ಈ ಭಾಗದ ಗ್ರಾಮಸ್ಥರ ಅಳಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ, ಮಳೆ ಕಡಿಮೆಯಾದ ನಂತರ ಜಮೀನು ಸರಿಪಡಿಸಿ, ಅಡಿಕೆ ಗಿಡ ಹಾಕಿಸಿಕೊಡುವ ಬಗ್ಗೆ ಸಂತ್ರಸ್ತರಿಗೆ ಭರವಸೆ ನೀಡಿದ್ರು. ಜೊತೆಗೆ ಎನ್.ಆರ್.ಇ.ಜಿ. ಯೋಜನೆಯಡಿಯಲ್ಲಿ, ತೋಟ ದುರಸ್ತಿ ಮತ್ತು ಶಿಲ್ಟ್ ತೆಗೆಯುವ ಕಾಮಗಾರಿ ನಡೆಸುವುದಲ್ಲದೇ, ಶೀಘ್ರವೇ ಉಳಿದ ಪರಿಹಾರದ ಹಣ ಬಿಡುಗಡೆ ಮಾಡುವುದಾಗಿ ಮತ್ತೆ ಭರವಸೆ ನೀಡಿದ್ರು.

    ಅಂದಹಾಗೆ ಕಳೆದ ಬಾರಿ ನೆರೆ ಸಂದರ್ಭದಲ್ಲಿ ಗುಡ್ಡ ಕುಸಿದು, ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ 1 ಎಕರೆಗೆ 15 ಸಾವಿರ ರೂ. ಪರಿಹಾರ ನೀಡಿರುವುದು ಬಿಟ್ಟರೆ, ಬೇರೆ ಯಾವುದೇ ಪರಿಹಾರ ಇದುವರೆಗೂ ದೊರೆತಿಲ್ಲ. ತೋಟ ಗದ್ದೆ ಹಾನಿಯಾಗಿ ಹೋಗಿದೆ. ಬದುಕುವುದಕ್ಕೆ ಆದಾಯದ ಮೂಲವೇ ಇಲ್ಲವಾಗಿದ್ದು, ಇಲ್ಲಿನ ರೈತರು ಶಾಶ್ವತ ಪರಿಹಾರ ಕೊಡಿಸಿ ಅಂಬ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬರ್ತಾರೆ, ವೀಕ್ಷಣೆ ಮಾಡ್ತಾರೆ ಪರಿಹಾರ ನೀಡ್ತೇವೆ ಅಂತಾ ಹೇಳಿ ಹೋಗ್ತಾರೆ. ಆದರೆ ಯಾರು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಷ್ಟಪಟ್ಟು ಬೆಳೆಸಿದ್ದ ತೋಟ ಇಲ್ಲವಾಗಿದೆ. ವರ್ಷಕ್ಕೆ 15 ಸಾವಿರ ರೂ. ಸಾಕಾ ಎಂದು ರೈತರು ಪ್ರಶ್ನಿಸುತ್ತಾರೆ. ಕಳೆದ ಬಾರಿ ಸ್ವತಃ ಮುಖ್ಯಮಂತ್ರಿಯವರೇ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿ ತೆರಳಿದ್ದರು ಕೂಡ ಇದುವರೆಗೂ ಯಾವುದೇ ಪ್ಯಾಕೇಜ್ ಘೋಷಣೆಯಾಗಿಲ್ಲ ಎಂಬ ಆತಂಕ ನಷ್ಟದಲ್ಲಿರುವ ರೈತರದ್ದು.

    ಒಟ್ಟಾರೆ ಒಂದು ವರ್ಷದ ಬಳಿಕ ಭೇಟಿ ನೀಡಿದ್ದ ಸಚಿವ ಕೆ.ಎಸ್ ಈಶ್ವರಪ್ಪನವರ ಸಮ್ಮುಖದಲ್ಲಿ ಈ ಭಾಗದ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ರೈತರಿಗೆ ಈಗಲಾದರೂ ಪರಿಹಾರ ಸಿಗುತ್ತಾ ಎಂಬ ಪ್ರಶ್ನೆ ಈಗ ಎದುರಾಗಿದೆ. ಹಣದ ಸಮೇತವಾಗಿ ಬಂದಿದ್ದೇವೆ ಎಂದು ಹೇಳುವ ಸಚಿವರು ಮತ್ತು ಜಿಲ್ಲಾಡಳಿತ ಎಷ್ಟು ದಿನದೊಳಗೆ ಇಲ್ಲಿನ ಸಂತ್ರಸ್ತರಿಗೆ ಪರಿಹಾರದ ಹಣ ಬಿಡುಗಡೆ ಮಾಡುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ.