ಜನವರಿ 24, ನಾಯಕ ಅಜಯ್ ರಾವ್ (Ajay Rao) ಅವರ ಹುಟ್ಟುಹಬ್ಬ (Birthday). ಈ ಸಂದರ್ಭದಲ್ಲಿ ಅವರು ನಾಯಕನಾಗಿ ನಟಿಸಲಿರುವ ನೂತನ ಚಿತ್ರದ ಘೋಷಣೆಯಾಗಿದೆ. ಹೆಚ್ ಪಿ ಆರ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಹರೀಶ್ ದೇವಿತಂದ್ರೆ ನಿರ್ಮಿಸುತ್ತಿರುವ ಈ ಚೊಚ್ಚಲ ಚಿತ್ರವನ್ನು ಮಳೆ ಚಿತ್ರದ ಖ್ಯಾತಿಯ ಶಿವತೇಜಸ್ (Shivtejas) ನಿರ್ದೇಶಿಸುತ್ತಿದ್ದಾರೆ.
ಈ ಹಿಂದೆ ನಾನು ನಿರ್ದೇಶಿಸಿದ ಧೈರ್ಯಂ ಚಿತ್ರದಲ್ಲಿ ಅಜಯ್ ರಾವ್ ನಾಯಕನಾಗಿ ನಟಿಸಿದ್ದರು ಹಾಗೂ ‘ದಿಲ್ ಪಸಂದ್’ ಚಿತ್ರದಲ್ಲಿ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಹೊಸ ಚಿತ್ರವೊಂದು ಸದ್ಯದಲ್ಲೇ ಆರಂಭವಾಗಲಿದೆ. ಚಿತ್ರದ ಶೀರ್ಷಿಕೆ ಹಾಗೂ ಇತರ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕ ಶಿವತೇಜಸ್ ತಿಳಿಸಿದ್ದಾರೆ.
ಅಜಯ್ ರಾವ್ ಹುಟ್ಟುಹಬ್ಬದ ದಿನದಂದು ಅವರ ಅಭಿಮಾನಿಗಳಿಗೆ ಕೊಟ್ಟ ವಿಶೇಷ ಗಿಫ್ಟ್ ಇದಾಗಿದ್ದು, ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಿದೆಯಂತೆ ಚಿತ್ರತಂಡ.
ಡಾರ್ಲಿಂಗ್ ಕೃಷ್ಣ (Darling Krishna) ಅವರು ನಾಯಕನಾಗಿ ನಟಿಸಿರುವ “ದಿಲ್ ಪಸಂದ್” (Dil Pasand) ಚಿತ್ರದ ಟೀಸರ್ (Teaser) ಇತ್ತೀಚೆಗೆ ಬಿಡುಗಡೆಯಾಯಿತು. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ. ಕಳೆದ ಹನ್ನೊಂದು ತಿಂಗಳ ಹಿಂದೆ ನಮ್ಮ ಚಿತ್ರ ಆರಂಭವಾಗಿತ್ತು. ಇದೇ ನವೆಂಬರ್ 11 ರಂದು ಚಿತ್ರ ತೆರೆಗೆ ಬರುತ್ತಿದೆ. ಕುಟುಂಬ ಸಮೇತ ನೋಡಬಹುದಾದ ನಮ್ಮ ಚಿತ್ರ “ದಿಲ್ ಪಸಂದ್” ನಷ್ಟೇ ಸಿಹಿಯಾಗಿದೆ . ನನ್ನ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಸುಮಂತ್ ಕ್ರಾಂತಿ ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಶಿವತೇಜಸ್.
ಐಶು ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ತುಂಬಾ ಎಮೋಷನ್ ಹುಡುಗಿ ನಾನು. ಲವ್ ಟ್ರ್ಯಾಕ್ ಇರುವ ಚಿತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಆದರೆ ಕಂಪ್ಲೀಟ್ ಲವ್ ಸ್ಟೋರಿಯಳ್ಳ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ನಾನು ನಟಿಸಿರುವ ಪೂರ್ಣ ಪ್ರೇಮಕಥೆಯುಳ್ಳ ಮೊದಲ ಚಿತ್ರ “ದಿಲ್ ಪಸಂದ್” ಎಂದು ನಿಶ್ವಿಕಾ ನಾಯ್ಡು ತಿಳಿಸಿದರು. ಈ ಚಿತ್ರದಲ್ಲಿ ಮುಗ್ದ ಹುಡುಗಿಯ ಪಾತ್ರ ನನ್ನದು. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ “ದಿಲ್ ಪಸಂದ್”. ಈ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ಖುಷಿಯಾಗಿದೆ ಎಂದರು ನಟಿ ಮೇಘಾ ಶೆಟ್ಟಿ. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ಕಾರಣಕ್ಕಾಗಿ ಟ್ರೋಲ್ ಆದ ಬಗ್ಗೆ ರಶ್ಮಿಕಾ ಮಾತು
ನಾನು ಕಥೆ ಕೇಳಬೇಕಾದರೆ ಸಾಕಷ್ಟು ಖುಷಿ ಪಟ್ಟಿದೆ. ಸಾಕಷ್ಟು ಎಂಜಾಯ್ ಮಾಡಿಕೊಂಡು ಡಬ್ಬಿಂಗ್ ಮಾಡಿದ್ದೇನೆ. ಉತ್ತಮ ಮನೋರಂಜನೆಯಿರುವ “ದಿಲ್ ಪಸಂದ್” ಎಲ್ಲರಿಗೂ ಪ್ರಿಯವಾಗಲಿದೆ. ಕಾಮಿಡಿ ಜೊತೆಗೆ ತಂದೆ-ಮಗನ ಭಾವನಾತ್ಮಕ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.
ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾ ಮಾಡಿಕೊಟ್ಟಿದ್ದಾರೆ. ಕೆಲವರು ಕಥೆ ಹೇಳುವುದೆ ಬೇರೆ. ಚಿತ್ರ ಮಾಡುವುದೇ ಬೇರೆ. ನಾನು ಇತ್ತೀಚೆಗೆ ಚಿತ್ರ ನೋಡಿದೆ. ಶಿವತೇಜಸ್ (Shivatejas) ಹೇಳಿದ ರೀತಿಯಲ್ಲೇ ಚಿತ್ರ ಮಾಡಿದ್ದಾರೆ. ನಮ್ಮ”ದಿಲ್ ಪಸಂದ್” ಚಿತ್ರ ಚೆನ್ನಾಗಿದೆ. ನವೆಂಬರ್ 11 ತೆರೆಗೆ ಬರುತ್ತಿದೆ. ನೋಡಿ ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ಮಾಪಕ ಸುಮಂತ್ ಕ್ರಾಂತಿ. (Sumanth Kranti) ಕಾರ್ಯಕಾರಿ ನಿರ್ಮಾಪಕ ರಂಗಸ್ವಾಮಿ ಹಾಗೂ ಸಹ ನಿರ್ದೇಶಕ, ಮಾರ್ಕೆಟಿಂಗ್ ಹೆಡ್ ಹರೀಶ್ ದೇವಿತ್ “ದಿಲ್ ಪಸಂದ್” ಕುರಿತು ಮಾತನಾಡಿದರು.
Live Tv
[brid partner=56869869 player=32851 video=960834 autoplay=true]
ಡಾರ್ಲಿಂಗ್ ಕೃಷ್ಣ (Darling Krishna) ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ ” ದಿಲ್ ಪಸಂದ್” (Dil Pasand) ಚಿತ್ರ ನವೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇತ್ತೀಚೆಗೆ ಘೋಷಣೆ ಮಾಡಿದೆ. ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ (Sumanth Kranti) ಅವರು ನಿರ್ಮಿಸಿರುವ ಈ ಚಿತ್ರವನ್ನು ಶಿವತೇಜಸ್ (Shivatejas) ನಿರ್ದೇಶಿಸಿದ್ದಾರೆ. ಪ್ರೇಮಕಥೆಯೊಂದಿಗೆ, ಕೌಟುಂಬಿಕ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದೆ.
ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದ್ದು, ಮಾಸಾಂತ್ಯಕ್ಕೆ ಟೀಸರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ನಾಲ್ಕು ಸುಮಧುರ ಹಾಡುಗಳಿಗೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್
ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು (Nishvika Naidu) ಅಭಿನಯಿಸಿದ್ದಾರೆ. ಮೇಘ ಶೆಟ್ಟಿ, ಸಾಧು ಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಅರುಣಾ ಬಾಲರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ದಿವಂಗತ ನಟ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಕಟ್ಟ ಕಡೆಯ ಚಿತ್ರ ‘ಶಿವಾರ್ಜುನ’ ರೀ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿರಂಜೀವಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಅಭಿಮಾನಿ ಬಳಗಕ್ಕೆ ಈ ಸುದ್ದಿ ಕೇಳಿ ಮನದುಂಬಿ ಬಂದಿದೆ. ಮತ್ತೊಮೆ ಚಿರಂಜೀವಿ ಸರ್ಜಾರನ್ನ ಬೆಳ್ಳಿ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
‘ಶಿವಾರ್ಜುನ’ ಚಿತ್ರ ಮಾರ್ಚ್ 12ರಂದು ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಮರು ದಿನವೇ ಸರ್ಕಾರ ಕೋವಿಡ್ 19 ಎಚ್ಚರಿಕೆಯ ಕ್ರಮವಾಗಿ ಚಿತ್ರಮಂದಿರವನ್ನು ಬಂದ್ ಮಾಡಿತ್ತು. ಇದೀಗ ಸುಮಾರು ಏಳು ತಿಂಗಳ ಬಳಿಕ ಚಿತ್ರಮಂದಿರ ತೆರೆಯಲು ಸರ್ಕಾರ ಅನುಮತಿ ನೀಡಿದ್ದು ಶಿವಾರ್ಜುನ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.
ಈ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ ಶಿವತೇಜಸ್ ಬಿಡುಗಡೆಯಾಗಿ ಎರಡು ದಿನವಷ್ಟೇ ಚಿತ್ರ ಪ್ರದರ್ಶನ ಕಂಡಿತ್ತು. ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಎಲ್ಲೆಡೆ ಕೇಳಿ ಬಂದಿತ್ತು ಆದ್ರಿಂದ ಚಿತ್ರವನ್ನು ಮರು ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ. ಅಕ್ಟೋಬರ್ 16ರಂದು ಶಿವಾರ್ಜುನ ಚಿತ್ರ ರಾಜ್ಯಾದ್ಯಂತ ಮತ್ತೊಮ್ಮೆ ಬಿಡುಗಡೆಯಾಗಲಿದೆ ಎಂದು ಶಿವತೇಜಸ್ ತಿಳಿಸಿದ್ದಾರೆ.
ನಾಯಕ ನಟ ಚಿರು ಅಗಲಿಕೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಶಿವತೇಜಸ್ ಚಿತ್ರದ ನಾಯಕ ನಟ ನಮ್ಮೊಂದಿಗಿಲ್ಲ ಅನ್ನೋದೇ ಬೇಸರದ ಸಂಗತಿ. ಅವ್ರ ಅಗಲಿಕೆ ನೋವಲ್ಲೇ ಅವ್ರ ಕೊನೆಯ ಸಿನಿಮಾವನ್ನು ರೀರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡು ದುಃಖದಲ್ಲಿರೋ ಚಿರು ಅಭಿಮಾನಿ ಬಳಗಕ್ಕೆ ಮತ್ತೊಮ್ಮೆ ಚಿರು ನಟನೆಯ ಕೊನೆಯ ಚಿತ್ರವನ್ನು ತೆರೆ ಮೇಲೆ ನೋಡೋ ಅವಕಾಶ ಇದ್ರಿಂದ ಮತ್ತೆ ಸಿಕ್ಕಾಂತಾಗಿದೆ. ‘ಶಿವಾರ್ಜುನ’ ಚಿತ್ರಕ್ಕೆ ಸುರಾಗ್ ಕೋಕಿಲ ಸಂಗೀತ, ವೇಣು ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಚಿರಂಜೀವಿ ಸರ್ಜಾ, ಅಮೃತ ಐಯ್ಯಂಗರ್, ರವಿಕಿಶನ್, ಸಾಧುಕೋಕಿಲ, ತಾರಾ, ಕಿಶೋರ್. ಚಿತ್ರದ ತಾರಾಂಗಣದಲ್ಲಿದ್ದಾರೆ.
ಚಿರು ಸರ್ಜಾ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಶಿವಾರ್ಜುನ ಇಂದು ತೆರೆಗಪ್ಪಳಿಸಿದೆ. ಕೊರೊನಾ ಭೀತಿಯ ನಡುವೆಯೂ ಚಿತ್ರಕ್ಕೆ ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಿರುವ ಯುವ ಸಾಮ್ರಾಟ್ ಚಿರು ಸರ್ಜಾ ಓನ್ಸ್ ಅಗೈನ್ ಶಿವಾರ್ಜುನ ಚಿತ್ರದ ಮೂಲಕ ಅಬ್ಬರಿಸಿದ್ದಾರೆ.
ಮಾಸ್ ಹಾಗೂ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಕಂಟೆಟ್‍ಗೆ ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾನೆ. ನಾಯಕ ಶಿವು ಆಯುರ್ವೇಧಿಕ್ ಡಾಕ್ಟರ್ ಸಾಧು ಕೋಕಿಲ ಬಳಿ ಕೆಲಸಕ್ಕೆ ಸೇರಿ ಕೊಳ್ಳುತ್ತಾನೆ. ಆದ್ರೆ ಈ ಶಿವ ಯಾರು, ಈತನ ಹಿನ್ನೆಲೆ ಏನು ಅನ್ನೋದನ್ನ ನಿರ್ದೇಶಕರು ಪ್ರೇಕ್ಷಕರಿಗೆ ಕ್ಲೂ ಕೊಡದೆ ಮೊದಲಾರ್ಧ ಕ್ಯೂರಿಯಾಸಿಟಿ ಮೂಡಿಸುತ್ತಾರೆ. ಅಸಲಿ ಕಥೆ ಸೆಕೆಡ್ ಹಾಫ್ ನಲ್ಲಿದ್ದು, ಶಿವ ಯಾರು, ಆತ ತನ್ನ ಶತ್ರುಗಳನ್ನು ಹೇಗೆ ಬಗ್ಗು ಬಡಿಯುತ್ತಾನೆ ಅನ್ನೋದನ್ನ ಮಾಸ್ ಆಗಿ ಚಿತ್ರಿಸಿದ್ದಾರೆ ನಿರ್ದೇಶಕರು.
ಎರಡು ಊರುಗಳ ನಡುವೆ ನಡೆಯುವ ಕಥೆಯೇ ಶಿವಾರ್ಜುನ. ರಾಮದುರ್ಗ ಹಾಗೂ ರಾಯದುರ್ಗ ಎರಡು ಊರುಗಳ ನಡುವೆ ಇಡೀ ಚಿತ್ರ ನಡೆಯುತ್ತೆ. ಪ್ರತಿ ವರ್ಷ ಈ ಎರಡು ಊರುಗಳ ನಡುವೆ ಸ್ಪರ್ಧೆ ನಡೆಯುತ್ತಿರುತ್ತೆ. ಸಡನ್ ಆಗಿ ಒಂದು ವರ್ಷ ಈ ಸ್ಪರ್ಧೆ ನಿಂತು ಹೋಗುತ್ತೆ. ಎರಡು ಊರುಗಳ ನಡುವೆ ಕಾದಾಟ ಶುರುವಾಗುತ್ತೆ. ಇದಕ್ಕೆ ಕಾರಣ ಏನು ಈ ಸ್ಪರ್ಧೆಗೂ, ಕಾದಾಟಕ್ಕೂ ನಾಯಕ ಶಿವುಗೂ ಏನು ಕಾರಣ, ಸಂಬಂಧ ಏನು ಅನ್ನೋದನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಚಿರು ಸರ್ಜಾ ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದ್ರೆ ಹೆಚ್ಚು ಇಷ್ಟವಾಗುತ್ತಾರೆ. ಡಾನ್ಸ್ ಹಾಗೂ ಫೈಟಿಂಗ್ ನಲ್ಲಿ ತೆರೆ ಮೇಲೆ ಚಿರು ನೋಡೋಕೆ ಸಖತ್ ಥ್ರಿಲ್ ನೀಡ್ತಾರೆ.
ಪಾಪ್ ಕಾರ್ನ್ ಮಂಕಿ ಟೈಗರ್, ಲವ್ ಮೊಕ್ಟೈಲ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ನಲ್ಲಿ ಗಮನ ಸೆಳೆದಿರುವ ಅಮೃತ ಐಯ್ಯಂಗಾರ್ ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಸಖತ್ ಇಷ್ಟವಾಗುತ್ತಾರೆ ಜೊತೆಗೆ ಭರವಸೆಯ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ತಾರಾ, ಕಿಶೋರ್ ಅಭಿನಯದ ಬಗ್ಗೆ ಮಾತನಾಡುವ ಹಾಗಿಲ್ಲ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ನಟಿ ತಾರಾ ಪುತ್ರ ಶ್ರೀಕೃಷ್ಣ ಬಾಲನಟನಾಗಿ ಪಾದಾರ್ಪಣೆ ಮಾಡಿದ್ದು, ಚಿತ್ರದಲ್ಲಿ ಶ್ರೀಕೃಷ್ಣನ ಮುದ್ದಾದ ನಟನೆ ನೋಡಲು ಖುಷಿಯಾಗುತ್ತೆ.
ಸೂರಗ್ ಕೋಕಿಲ ಮ್ಯೂಸಿಕ್ ಚಿತ್ರದ ಸಂದರ್ಭ, ಸನ್ನೀವೇಶಕ್ಕೆ ತಕ್ಕ ಹಾಗೆ ಮೂಡಿಬಂದಿದ್ದು ಸ್ಯಾಂಡಲ್‍ವುಡ್‍ಗೆ ಮತ್ತೊಬ್ಬ ಭರವಸೆಯ ಯುವ ಸಂಗೀತ ನಿರ್ದೇಶಕ ಸಿಕ್ಕಿದ್ರು ಅಂದ್ರೆ ತಪ್ಪಾಗೊಲ್ಲ. ಸಾಹಸ ದೃಶ್ಯಗಳು ಮಾಸ್ ಪ್ರಿಯರ ಮನ ಸೆಳೆಯುತ್ತೆ. ರೆಗ್ಯೂಲರ್ ಸಿನಿಮಾ ಕಥೆಯೇ ಚಿತ್ರದಲ್ಲಿದ್ರು ಕೂಡ ನಿರ್ದೇಶಕರು ನೀಡಿರುವ ಹೊಸ ಸ್ಪರ್ಶ ನೋಡುಗರಿಗೆ ಇಷ್ಟವಾಗುತ್ತೆ. ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಚಿತ್ರದಲ್ಲಿರೋದ್ರಿಂದ ಇಡೀ ಫ್ಯಾಮಿಲಿ ಕುಳಿತು ಎಂಜಾಯ್ ಮಾಡಬಹುದು.
‘ಸಿಂಗ’ ಮತ್ತು ‘ಖಾಕಿ’ಯಲ್ಲಿ ಅಬ್ಬರಿಸಿದ್ದ ಚಿರು ಇದೀಗ ‘ಶಿವಾರ್ಜುನ’ನಾಗಿ ಎಲ್ಲರನ್ನು ರಂಜಿಸಲು ಬರುತ್ತಿದ್ದಾರೆ. ನಾಳೆ ಅಂದರೆ ಮಾರ್ಚ್ 12ರಂದು ಎಲ್ಲಾ ಚಿತ್ರಮಂದಿರಗಳಲ್ಲೂ ‘ಶಿವಾರ್ಜುನ’ ಲಗ್ಗೆ ಇಡುತ್ತಿದ್ದಾನೆ.
ಸಿನಿಮಾ ಈಗಾಗಲೇ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿರುವುದು ಎಲ್ಲರಿಗೂ ಗೊತ್ತೆ ಇದೆ. ಟೈಟಲ್ ನಿಂದ ಹಿಡಿದು, ಹೊಸಬರ ಎಂಟ್ರಿವರೆಗೆ ವಿಶೇಷವಾಗಿದೆ. ಸಿನಿಮಾದಲ್ಲಿ ಶಿವ-ಅರ್ಜುನನಿಗೆ ಸಂಬಂಧಿಸಿದಂತ ಎರಡು ಕ್ಯಾರೆಕ್ಟರ್ ಇದೆ. ಹೀಗಾಗಿ ಆ ಎರಡು ಕ್ಯಾರೆಕ್ಟರ್ ಗೆ ಮ್ಯಾಚ್ ಆಗುವಂತ ಟೈಟಲ್ ಹುಡುಕುವಾಗ ಚಿತ್ರತಂಡಕ್ಕೆ ಹೊಳೆದಿದ್ದು ಇದೆ ‘ಶಿವಾರ್ಜುನ’ ಹೆಸರು. ಕಾಕತಾಳೀಯವೆಂಬಂತೆ ಈ ಸಿನಿಮಾದ ನಿರ್ಮಾಪಕರ ಹೆಸರು ಕೂಡ ಶಿವಾರ್ಜುನ ಆಗಿದೆ. ಜೊತೆಗೆ ಈ ಚಿತ್ರ ನಿರ್ದೇಶಕರ ಹೆಸರು ಕೂಡ ಶಿವತೇಜಸ್. ಹೀಗಾಗಿ ಕಥೆಗೆ ಟೈಟಲ್ ಅದ್ಭುತವಾಗಿ ಮ್ಯಾಚ್ ಆಗುತ್ತಿದ್ದರಿಂದ ‘ಶಿವಾರ್ಜುನ’ನನ್ನೇ ಫೈನಲ್ ಮಾಡಿದ್ದಾರೆ ಅಂತಾರೆ ನಿರ್ದೇಶಕರು.
ಇದೊಂದು ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಸಿನಿಮಾ. ಜನ ಸಿನಿಮಾಗೆ ಹೋಗೋದೆ ಮನರಂಜನೆಗಾಗಿ. ಆ ಎರಡು ಗಂಟೆಗಳ ಮನರಂಜನೆಯನ್ನ ‘ಶಿವಾರ್ಜುನ’ ಪಕ್ಕ ನೀಡಲಿದ್ದಾನೆ. ಕಾಮಿಡಿ, ಫ್ಯಾಮಿಲಿ, ಎಮೋಷನ್ ಹೀಗೆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿ ಅಡಕವಾಗಿದೆ. ಕಿಶೋರ್, ಸಾಧುಕೋಕಿಲಾ, ನಯನಾ, ಕುರಿ ಪ್ರತಾಪ್ ಸೇರಿದಂತೆ ಕಾಮಿಡಿ ಬಳಗವೇ ಸಿನಿಮಾದಲ್ಲಿರುವುದರಿಂದ ಮನರಂಜನೆ ಸಿಗುವುದರಲ್ಲಿ ಅನುಮಾನವೇ ಇಲ್ಲ.
ಇನ್ನು ಸಿನಿಮಾ ಇಷ್ಟು ಅದ್ಭುತವಾಗಿ ಮೂಡಿ ಬರಲು ಕಾರಣ ನಿರ್ಮಾಪಕ ಸಹಕಾರ ಅಂತಾರೆ ನಿರ್ದೇಶಕ ಶಿವತೇಜಸ್. ಸಿನಿಮಾಗೆ ಏನೆಲ್ಲಾ ಬೇಕು, ಕ್ಯಾರೆಕ್ಟರ್ ಗಳು, ಜಾಗ ಎಲ್ಲವನ್ನು ಕೇಳಿದ್ದಂತೆ ಒದಗಿಸಿಕೊಟ್ಟಿದ್ದಾರೆ. ಯಾವುದಕ್ಕೂ ಕಾಂಪ್ರೊಮೈಸ್ ಆಗುವ ಸಂಭವವೇ ಬಂದಿಲ್ಲ. ಒಬ್ಬ ಡೈರೆಕ್ಟರ್ ಏನ್ ನಿರೀಕ್ಷೆ ಮಾಡ್ತಾನೋ ಎಲ್ಲವನ್ನು ಒದಗಿಸಿದ್ದಾರೆ ಎಂಬ ಖುಷಿಯ ಮಾತುಗಳನ್ನಾಡಿದ್ದಾರೆ.
ಶಿವ ತೇಜಸ್ ಕಥೆ – ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಶಿವಾರ್ಜುನ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿದ್ದಾರೆ. ಅಮೃತಾ ಅಯ್ಯಂಗಾರ್ ಮತ್ತು ಅಕ್ಷತಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕವಿರಾಜ್, ಯೋಗರಾಜ್ ಭಟ್ ಮತ್ತು ವಿ ನಾಗೇಂದ್ರ ಪ್ರಸಾದರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಸುರಾಗ್, ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ. ಹೆಚ್.ಸಿ.ವೇಣು ಛಾಯಾಗ್ರಹಣ ಮತ್ತು ಕೆ.ಎಂ ಪ್ರಕಾಶ್ ಸಂಕಲನವಿದೆ. ನಾಳೆ ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರಲಿದೆ. ಇಡೀ ಫ್ಯಾಮಿಲಿ ಸಮೇತ ಕುಳಿತು ನೋಡುವಂತ ಕಂಟೆಂಟ್ ಸಿನಿಮಾದಲ್ಲಿದ್ದು, ವಾರಾಂತ್ಯಕ್ಕೆ ಒಂದೊಳ್ಳೆ ಸಿನಿಮಾ ನೋಡಿದ ಭಾವ ಮೂಡುವುದರಲ್ಲಿ ಸಂಶಯವಿಲ್ಲ.