Tag: ಶಿವಕುಮಾರ ಸ್ವಾಮೀಜಿಗಳು

  • ಹೊತ್ತಿ ಉರಿದ ಶಿವಕುಮಾರ ಶ್ರೀಗಳ ಹೆಸರಲ್ಲಿ ನಿರ್ಮಾಣವಾಗ್ತಿದ್ದ ಜೈವಿಕ ವನ

    ಹೊತ್ತಿ ಉರಿದ ಶಿವಕುಮಾರ ಶ್ರೀಗಳ ಹೆಸರಲ್ಲಿ ನಿರ್ಮಾಣವಾಗ್ತಿದ್ದ ಜೈವಿಕ ವನ

    ತುಮಕೂರು: ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಶ್ರೀಗಳ ಹೆಸರಿನಲ್ಲಿ ನಿರ್ಮಾಣವಾಗುತ್ತಿದ್ದ ಜೈವಿಕ ವನ ಹೊತ್ತಿ ಉರಿದಿದೆ.

    ತುಮಕೂರು ತಾಲೂಕು ಬಸ್ತಿ ಬೆಟ್ಟದ ಬಳಿ ಇರುವ ಗಿಡಮೂಲಿಕೆ ಬೆಳೆಯುತ್ತಿದ್ದ ಜೈವಿಕ ವನಕ್ಕೆ ಬೆಂಕಿ ಬಿದ್ದಿದೆ. ಈ ವನ ಸಿದ್ದಗಂಗಾ ಸಂಸ್ಥೆಗೆ ಸೇರಿದೆ.

    ಇಲ್ಲಿ ಹಲವು ರೋಗಗಳ ಮೇಲೆ ಪ್ರಭಾವ ಬೀರುವ ಗಿಡಮೂಲಿಕೆಗಳನ್ನ ಬೆಳೆಸಲಾಗುತ್ತಿತ್ತು. ಇದೀಗ ಈ ವನಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಗಟನೆಯಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶಗೊಂಡಿದೆ.

    ಈ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ನಡೆದಾಡುವ ದೇವರು ಬೇಗ ಗುಣಮುಖರಾಗಲಿ – ರಾಹುಲ್ ಪ್ರಾರ್ಥನೆ

    ನಡೆದಾಡುವ ದೇವರು ಬೇಗ ಗುಣಮುಖರಾಗಲಿ – ರಾಹುಲ್ ಪ್ರಾರ್ಥನೆ

    ನವದೆಹಲಿ: ನಡೆದಾಡುವ ದೇವರು, ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಅನಾರೋಗ್ಯದಿಂದ ಬಳಲುತ್ತಿರುವುದು ಅತೀವ ನೋವನ್ನುಂಟು ಮಾಡಿದೆ. ಶ್ರೀಗಳು ಬೇಗ ಗುಣಮುಖರಾಗಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ರಾಹುಲ್ ಗಾಂಧಿ ಅವರು ತಮ್ಮ ಫೇಸ್‍ಬುಕ್ ಖಾತೆಯ ಮೂಲಕ ಕನ್ನಡದಲ್ಲಿಯೇ ಶ್ರೀಗಳಿಗೆ ಆರೋಗ್ಯ ಹಾಗೂ ಆಯಸ್ಸು ನೀಡಲಿ ಎಂದು ದೇವರಿಗೆ ಬೇಡಿಕೊಂಡಿದ್ದಾರೆ. ಬಸವ ತತ್ವಗಳಿಗೆ ಜೀವ ತುಂಬಿದ ತ್ರಿವಿಧ (ಅನ್ನ/ಅಕ್ಷರ/ಜ್ಞಾನ) ದಾಸೋಹಿ, ಅಸಂಖ್ಯ ಭಕ್ತರ ಬದುಕಿನ ಬೆಳಕು ನಡೆದಾಡುವ ದೇವರು, ಶತಾಯುಷಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೆ ಎಂದು ತಿಳಿಸಿದ್ದಾರೆ.

    ತುಮಕೂರು ಸಮೀಪದ ಸಿದ್ದಗಂಗಾ ಮಠಕ್ಕೆ ಅನೇಕರು ಗಣ್ಯರು ಹಾಗೂ ಭಕ್ತರು ಭೇಟಿ ನೀಡಿ ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕು ಎನ್ನುವ ಕೂಡು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಶಾಸಕ ಬಿ.ಎಸ್.ಪಾಟೀಲ್ ಸೇರಿದಂತೆ ಅನೇಕ ನಾಯಕರು ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರಿಗೆ ಭಾರತ ರತ್ನ ನೀಡಿ ಗೌರವಿಸಿ: ಧ್ವನಿಗೂಡಿಸಿದ ಹಲವು ನಾಯಕರು

    ನಡೆದಾಡುವ ದೇವರಿಗೆ ಭಾರತ ರತ್ನ ನೀಡಿ ಗೌರವಿಸಿ: ಧ್ವನಿಗೂಡಿಸಿದ ಹಲವು ನಾಯಕರು

    ತುಮಕೂರು: ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎನ್ನುವ ಬೇಡಿಕೆಗೆ ಹಲವು ನಾಯಕರು ಧ್ವನಿಗೂಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪತ್ರವನ್ನು ಕಳುಹಿಸಿದ್ದೇನೆ ಎಂದು ತಿಳಿಸಿದರು.

    ಪೂಜ್ಯ ಶ್ರೀಗಳಿಗೆ ಆದಷ್ಟು ಬೇಗ ಭಾರತ ರತ್ನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಸ್ವಾಮೀಜಿಗಳಿಗೆ ಭಾರತ ರತ್ನ ನೀಡುವುದು ನಮ್ಮೆಲ್ಲರ ಭಾಗ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಇದನ್ನು ಓದಿ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಪತ್ರ- ಮಲ್ಲಿಕಾರ್ಜುನ ಖರ್ಗೆ

    ಯಾವಾಗಲೋ ಭಾರತ ರತ್ನ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಚರ್ಚೆ ನಡೆಸಿ, ಆದಷ್ಟು ಬೇಗ ಶ್ರೀಗಳಿಗೆ ಭಾರತ ರತ್ನ ಸಿಗುವಂತೆ ಶ್ರಮಿಸಬೇಕು. ಶ್ರೀಗಳಿಗೆ ಭಾರತ ರತ್ನ ನೀಡಿದರೆ, ಪುರಸ್ಕರಕ್ಕೆ ಮತ್ತಷ್ಟು ಗೌರವ ಬರುತ್ತದೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಆಗ್ರಹಿಸಿದರು.

    ಸಾರ್ವಜನಿಕರು ಕೂಡ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಕೂಡ ಶಿವಕುಮಾರ ಸ್ವಾಮೀಜಿ ಭಾರತ ರತ್ನ ಗೌರವ ಅಂತ ಆಗ್ರಹಿಸಿ ಅಭಿಯಾನ ಆರಂಭಿಸಿದೆ. ಇದನ್ನು ಓದಿ: ಪವಾಡ ಎಂಬಂತೆ 45 ನಿಮಿಷ ಸ್ವಂತವಾಗಿ ಉಸಿರಾಟ – ನಡೆದಾಡುವ ದೇವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ

    ಶ್ರೀಗಳ ಭಾವಚಿತ್ರ ಅನಾವರಣ: ನಡೆದಾಡುವ ದೇವರು, ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರವನ್ನು ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಬಿಡಿಸಿದ್ದು, ಅದನ್ನು ಕಿರಿಯ ಶ್ರೀಗಳು ಅನಾವರಣ ಮಾಡಿದರು.

    ಪ್ರಾರ್ಥನೆ ಮುಗಿಸಿದ ಬಳಿಕ ಭಾವಚಿತ್ರವನ್ನು ಅನಾವರಣ ಮಾಡಿದ ಕಿರಿಯ ಶ್ರೀಗಳು, ವಾಸ್ತವಕ್ಕೆ ಹತ್ತಿರ ಇರುವ ಶಿವಕುಮಾರ ಸ್ವಾಮೀಜಿಗಳ ಚಿತ್ರವನ್ನೇ ವಿದ್ಯಾರ್ಥಿ ಬಿಡಿಸಿದ್ದಾನೆ ಎಂದು ಕಿರಿಯ ಶ್ರೀಗಳು ಕೊಂಡಾಡಿದರು. ಈ ವೇಳೆ ಸಾವಿರಾರು ವಿದ್ಯಾರ್ಥಿಗಳು ಸಾಲಾಗಿ ಕುಳಿತು ಶ್ರೀಗಳಿಗೆ ಮತ್ತಷ್ಟು ಆರೋಗ್ಯ ಹಾಗೂ ಆಯಸ್ಸನ್ನು ಕರುಣಿಸಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv