Tag: ಶಿವಕುಮಾರ್

  • ನನ್ನ ಮನೆ ಮೇಲೆ ದಾಳಿ ನಡೆಸಿದ್ರೆ ಐಟಿ ಅಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ: ಎಂಬಿ ಪಾಟೀಲ್

    ನನ್ನ ಮನೆ ಮೇಲೆ ದಾಳಿ ನಡೆಸಿದ್ರೆ ಐಟಿ ಅಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ: ಎಂಬಿ ಪಾಟೀಲ್

    ಬೆಂಗಳೂರು: ನನ್ನ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದರೆ ಅವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ ಆಗಿದ್ದಕ್ಕೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸದ್ಯದಲ್ಲೇ ನನ್ನ ಮನೆ ಮೇಲೂ ದಾಳಿ ನಡೆಯುತ್ತದೆ ಎನ್ನುವ ಮಾಹಿತಿ ಬಿಜೆಪಿ ಮೂಲಗಳಿಂದ ಸಿಕ್ಕಿದೆ. ನನ್ನ ಪ್ರಭಾವ ಕಡಿಮೆ ಮಾಡಬೇಕು, ನನ್ನ ಹೆಸರನ್ನು ಕೆಡಿಸಲು ಈ ಹುನ್ನಾರ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

    ಐಟಿ ಅಧಿಕಾರಿಗಳು ಬಂದು ನನ್ನ ಮನೆ ಮೇಲೆ ದಾಳಿ ನಡೆಸಲಿ. ಕಪ್ಪು ಹಣ ಇದೆಯೋ ಇಲ್ಲವೋ ಎನ್ನುವುದು ಅವರಿಗೆ ತಿಳಿಯುತ್ತದೆ. ಅಧಿಕಾರಿಗಳು ಬಂದರೆ ಹೂಗುಚ್ಛ ನೀಡಿ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದರು.

    ನನಗೆ ಐಟಿ ಇಲಾಖೆ ದಾಳಿ ಬಗ್ಗೆ ಯಾವುದೇ ಆತಂಕ ಇಲ್ಲ. ಸ್ವತಂತ್ರವಾಗಿ ತನಿಖೆ ಮಾಡಲಿ. ಆದರೆ ಯಾರದ್ದೋ ಮಾತು ಕೇಳಿ ದಾಳಿ ಮಾಡುವಂತದ್ದಲ್ಲ. ನನ್ನ ಮೇಲೆ ಈ ವಾರ, ತಿಂಗಳು ಇಲ್ಲ ಚುನಾವಣೆಗೆ ಮೊದಲು ದಾಳಿ ಮಾಡಿಸಲು ಮೂರು ದಿನಗಳಿಂದ ಹುನ್ನಾರ ನಡೆಯುತ್ತಿದೆ. ಹೀಗಾಗಿ ನಾನು ನನ್ನ ಕಾರ್ಯಕ್ರಮಗಳನ್ನ ಬಿಟ್ಟು ಬಂದಿದ್ದೇನೆ. ಡಿ ಕೆ ಶಿವಕುಮಾರ್ ಮನೆ ಮೇಲೆ ನಡೆದಿರುವ ದಾಳಿ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

    ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಮನೆ ಮೇಲಿನ ದಾಳಿ ಕೇವಲ ನೆಪ ಮಾತ್ರ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು, ಕೈ ನಾಯಕರನ್ನು ದುರ್ಬಲಗೊಳಿಸಲು ಬಿಜೆಪಿ ಈ ಅಸ್ತ್ರ ಪ್ರಯೋಗಿಸಿದೆ. ಗೋವಿಂದರಾಜು ಡೈರಿ ಬಗ್ಗೆ ಶೀಘ್ರ ಇತ್ಯರ್ಥ ಆಗಬೇಕು. ಇನ್ಶಿಯಲ್ ಏನು? ಯಾರದ್ದು ಎನ್ನುವುದು ಬಗೆಹರಿಯಬೇಕು. ಚುನಾವಣೆ ತನಕ ಗೋವಿಂದರಾಜು ಡೈರಿ ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ಅವರು ಹೇಳಿದರು.

    ಇದನ್ನೂ ಓದಿ: ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಎಷ್ಟು ಕೋಟಿ ಹಣ ಸಿಕ್ಕಿದೆ ಗೊತ್ತಾ?

     

  • ಪರಪ್ಪನ ಅಗ್ರಹಾರದಲ್ಲಿ  ತಿಂಗಳಿಗೆ 20 ಲಕ್ಷ ರೂ. ಕಲೆಕ್ಷನ್ – ಇಡೀ ಜೈಲನ್ನು ಮೇಂಟೇನ್ ಮಾಡೋದು ಪ್ರತಿಭಾ ಹಂತಕ

    ಪರಪ್ಪನ ಅಗ್ರಹಾರದಲ್ಲಿ ತಿಂಗಳಿಗೆ 20 ಲಕ್ಷ ರೂ. ಕಲೆಕ್ಷನ್ – ಇಡೀ ಜೈಲನ್ನು ಮೇಂಟೇನ್ ಮಾಡೋದು ಪ್ರತಿಭಾ ಹಂತಕ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ ತಿಂಗಳಿಗೆ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಲಂಚದ ಹಣ ಸಂಗ್ರಹವಾಗುತ್ತೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

    ಜೈಲಿನ ಅಧಿಕಾರಿಗಳಿಗೆ ಈ ಹಣ ತಲುಪಿಸುವವರು ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಹಂತಕ ಶಿವಕುಮಾರ್. ಪ್ರತಿಭಾ ಹತ್ಯೆ ಕೇಸಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶಿವಕುಮಾರ್‍ಗೆ ಪರಪ್ಪನ ಅಗ್ರಹಾರ ಜೈಲಲ್ಲಿ ವಸೂಲಿ ಮಾಡುವುದೇ ಕಾಯಕ.

    ಶಿವಕುಮಾರ್ ಜೈಲಲ್ಲಿ ಊಟದ ವ್ಯವಸ್ಥೆ ಉಸ್ತುವಾರಿ ಹೊತ್ತಿದ್ದಾನೆ. ಜೈಲು ಅಧಿಕಾರಿಗಳಿಂದ ಹಂತಕ ಶಿವಕುಮಾರ್‍ಗೆ ಈ ಜವಾಬ್ದಾರಿ ನೀಡಲಾಗಿದೆ. ಯಾರನ್ನು ಎಲ್ಲಿ ನೇಮಿಸಬೇಕೆಂದು ನಿರ್ಧರಿಸುವವನೂ ಇವನೇ. ಒಬ್ಬ ಅತ್ಯಾಚಾರಿ ಅಪರಾಧಿಗೆ ಜೈಲಿನ ಸಂಪೂರ್ಣ ಹೊಣೆಯನ್ನ ನೀಡಲಾಗಿದೆ. ದಿನದ ಎಲ್ಲಾ ಲೆಕ್ಕಾಚಾರವನ್ನು ನೋಡಿಕೊಳ್ಳುವ ಶಿವಕುಮಾರ್ ರಾತ್ರಿ ಜೈಲಿನ ಅಧಿಕಾರಿಗಳಿಗೆ ಎಲ್ಲಾ ಮಾಹಿತಿ ನೀಡ್ತಾನೆ ಎನ್ನಲಾಗಿದೆ.

    2005ರಲ್ಲಿ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಅವರನ್ನ ಕ್ಯಾಬ್ ಡ್ರೈವರ್ ಆಗಿದ್ದ ಶ್ರೀಕಾಂತ್ ಮಧ್ಯರಾತ್ರಿ ಪಿಕ್‍ಅಪ್ ಮಾಡಿದ ನಂತರ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ನಂತರ ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

    ಈ ಮಧ್ಯೆ ಜೈಲಿನ ಅಕ್ರಮಗಳ ಬಗ್ಗೆ ಉಪನಿರೀಕ್ಷಕಿ ರೂಪ ಅರೋಪ ಮಾಡಿದ ಮೇಲೆ ಇದೇ ಪ್ರಥಮ ಬಾರಿಗೆ ಡಿಜಿ ಸತ್ಯನಾರಾಯಣ್ ಜೈಲಿಗೆ ಭೇಟಿ ನೀಡಿದ್ದಾರೆ. ಶುಕ್ರವಾರದಂದು ಡಿಜಿ ಸತ್ಯನಾರಾಯಣ್ ಎಐಜಿ ವೀರಭದ್ರಸ್ವಾಮಿಗೆ ಜೈಲಿನ ಸ್ಥಿತಿಗತಿಯ ಬಗ್ಗೆ ತಿಳಿಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಎಐಜಿ ವೀರಭದ್ರಸ್ವಾಮಿ ಬೆಳಿಗ್ಗೆ 11 ಗಂಟೆಗೆ ಬಂದು ಸಂಜೆ 4:30 ತನಕ ಜೈಲಿನ ಸಂಪೂರ್ಣ ವಿವರ ಪಡೆದಿದ್ದರು. ಇಂದು ಬೆಳ್ಳಂಬೆಳಗ್ಗೆ ಡಿಜಿ ಸತ್ಯನಾರಾಯಣ್ ಜೈಲಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವರ ಪಡೆದಿದ್ದಾರೆ.

    ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಈಗಾಗಲೇ ತನಿಖೆಗೆ ಆದೇಶಿಸಿದ್ದು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಆದರೆ ತನಿಖಾಧಿಕಾರಿಗಳು ಬರುವ ಮೊದಲೇ ಕಾರಗೃಹ ಡಿಜಿಪಿ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಶಶಿಕಲಾ, ತೆಲಗಿ ಅವರ ಸೆಲ್‍ಗಳನ್ನು ತಪಾಸಣೆ ನಡೆಸಿರಬಹುದು ಎಂಬ ಶಂಕೆ ಮುಡುತ್ತಿದೆ. ಸತ್ಯನಾರಾಯಣ್ ರಾವ್ ಹಳೇ ದಾಖಲೆಗಳ ಪರಿಶೀಲನೆ ನಡೆಸಿ ಕೆಳ ಹಂತದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಯೂ ಸಹ ಲಭ್ಯವಾಗಿದೆ.