Tag: ಶಿವಕುಮಾರ್

  • ಜಡ್ಜ್ ಏನ್ ಹೇಳ್ತಾರೆ ಅದನ್ನು ಕೇಳಬೇಕು, ಅವರು ಏನ್ ಕೊಟ್ಟರೂ ಪ್ರಸಾದನೇ: ಡಿ.ಕೆ ಶಿವಕುಮಾರ್

    ಜಡ್ಜ್ ಏನ್ ಹೇಳ್ತಾರೆ ಅದನ್ನು ಕೇಳಬೇಕು, ಅವರು ಏನ್ ಕೊಟ್ಟರೂ ಪ್ರಸಾದನೇ: ಡಿ.ಕೆ ಶಿವಕುಮಾರ್

    ನವದೆಹಲಿ : ಅಕ್ರಮ ಹಣ ವರ್ಗಾವಣೆ(Money Laundering Case) ಪ್ರಕರಣದಲ್ಲಿ ಆರೋಪಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್(DK Shivakumar) ಇಂದು ದೆಹಲಿ ರೋಸ್‌ ಅವೆನ್ಯೂ ಸಂಕೀರ್ಣದಲ್ಲಿರುವ ಇಡಿ(ED) ವಿಶೇಷ ನ್ಯಾಯಲಯದ ಮುಂದೆ ವಿಚಾರಣೆಗೆ ಹಾಜರಾದರು.

    ಇಡಿ ಅಧಿಕಾರಿಗಳು ಸೂಕ್ತ ದಾಖಲೆಗಳು ನೀಡದ ಕಾರಣ ಪ್ರತಿ ವಾದ ಮಂಡಿಸಲು ಇನ್ನಷ್ಟು ಸಮಯ ಬೇಕು ಎಂದು ಡಿ.ಕೆ ಶಿವಕುಮಾರ್ ಪರ ವಕೀಲರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಕೋರ್ಟ್ ಜನವರಿ 18ಕ್ಕೆ ವಿಚಾರಣೆ ಮುಂದೂಡಿತು.  ಇದನ್ನೂ ಓದಿ: ಸದ್ಯಕ್ಕೆ ಡಿಕೆ ಶಿವಕುಮಾರ್ ಬಂಧಿಸಲ್ಲ: ಇಡಿ


    ಇದೇ ವೇಳೆ ಡಿ.ಕೆ ಶಿವಕುಮಾರ್ ದುಬೈ(Dubai) ತೆರಳಲು ಅನುಮತಿ ಕೇಳಿದರು. ದುಬೈನಲ್ಲಿ ಡಿಸೆಂಬರ್ 1 ರಿಂದ 8 ವರೆಗೂ ಕಾರ್ಯಕ್ರಮವೊಂದು ನಡೆಯುತ್ತಿದ್ದು ಅದರಲ್ಲಿ ಭಾಗಿಯಾಗಬೇಕಿದೆ. ಈ ಕಾರ್ಯಕ್ರಮಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಿದ ಕೋರ್ಟ್ ನವೆಂಬರ್ 26 ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.

    ವಿಚಾರಣೆ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಕೋರ್ಟ್ ವಿಚಾರದಲ್ಲಿ ಏನು ಮಾತನಾಡಲು ಸಾಧ್ಯವಿಲ್ಲ ಜಡ್ಜ್ ಏನ್ ಹೇಳ್ತಾರೆ ಅದನ್ನು ಕೇಳಬೇಕು, ಅವರು ಏನ್ ಕೊಟ್ಟರೂ ಪ್ರಸಾದನೇ. ಹಿಂದೆಯೂ ವಿದೇಶಕ್ಕೆ ತೆರಳಲು ಅನುಮತಿ ಕೇಳಿದ್ದೆ. ಕಡೆಯ ಕ್ಷಣದಲ್ಲಿ ಅನುಮತಿ ನೀಡಿದ್ದರುಂದ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂಚಿತವಾಗಿ ಗಮನಕ್ಕೆ ತಂದಿದ್ದೇವೆ. ಕೋರ್ಟ್ ಏನು ಹೇಳಿಲಿದೆ ನೋಡಬೇಕು ಎಂದರು.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ರಾಜಕುಮಾರ್ ಹೆಸರಿನಲ್ಲಿ ಅಪ್ಪು ಅಮರ ಹೆಲ್ತ್ ಪ್ರೆವಿಲೈಜ್ ಕಾರ್ಡ್

    ಪುನೀತ್ ರಾಜಕುಮಾರ್ ಹೆಸರಿನಲ್ಲಿ ಅಪ್ಪು ಅಮರ ಹೆಲ್ತ್ ಪ್ರೆವಿಲೈಜ್ ಕಾರ್ಡ್

    ರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕಳೆದ ವರ್ಷ ನವಂಬರ್ ತಿಂಗಳಲ್ಲಿ ‘ಅಪ್ಪು ಅಮರ’  ಕಾರ್ಯಕ್ರಮದ ಮೂಲಕ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರಿಗೆ ಗೌರವ  ಸಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಕಾವೇರಿ ಆಸ್ಪತ್ರೆಯು, ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಕೇರ್ ಸಹಯೋಗದಲ್ಲಿ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ (KTVA) ಸದಸ್ಯರುಗಳಿಗೆ ‘ಅಪ್ಪು ಅಮರ ಹೆಲ್ತ್ ಪ್ರೆವಿಲೈಜ್ ಕಾರ್ಡ್” ವಿತರಿಸುವ ಭರವಸೆ ನೀಡಿತ್ತು. ಅದರಂತೆ ಇದೇ ನವೆಂಬರ್ 13ರಂದು ಭಾನುವಾರ ಸಂಜೆ ಐದು ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ‘ಅಪ್ಪು ಅಮರ ಹೆಲ್ತ್ ಪ್ರಿವೀಲೇಜ್ ಕಾರ್ಡ್” ವಿತರಿಸಲಿದೆ.

    ಈ ಕುರಿತು ಮಾತನಾಡಿದ ಕೆಟಿವಿಎ ಅಧ್ಯಕ್ಷ ಎಸ್.ವಿ. ಶಿವಕುಮಾರ್ (Shivakumar), ‘ಈ ಕಾರ್ಡ್ ಪಡೆದ ಸದಸ್ಯರುಗಳಲ್ಲಿ ಅವಶ್ಯಕತೆ ಇರುವ ಹಾಗೂ ಆರ್ಥಿಕವಾಗಿ ದುರ್ಬಲರಾದ  ಸದಸ್ಯರುಗಳಿಗೆ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲು ಕಾವೇರಿ ಆಸ್ಪತ್ರೆ ಮತ್ತು ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಕೇರ್ ನಿರ್ಧರಿಸಿದೆ. ಇದಲ್ಲದೆ ಈ ಹೆಲ್ತ್ ಕಾರ್ಡ್ ಅಡಿಯಲ್ಲಿ ಎಲ್ಲಾ ಸ್ಪೆಷಾಲಿಟಿ ಸವಲತ್ತುಗಳನ್ನು ಕಡಿಮೆ ದರದಲ್ಲಿ ಪಡೆದುಕೊಳ್ಳಬಹುದು. ಈ  ಸವಲತ್ತನ್ನು ಸುಮಾರು 5000 ಸದಸ್ಯರು ಮತ್ತು ಅವರ ಕುಟುಂಬದವರು ಪಡೆಯಲಿದ್ದಾರೆ’ ಎನ್ನುತ್ತಾರೆ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಭಾನುವಾರ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್  (Ashwini Puneeth) ಭಾಗಿಯಾಗಲಿದ್ದು, ಅವತ್ತು ಅವರೇ ಕಾರ್ಡ್ ಅನ್ನು ವಿತರಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮ‍ಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ. ಅಲ್ಲದೇ, ಗಣ್ಯರು ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಅನಿರುದ್ಧ ಇಲ್ಲದೇ ಶೂಟಿಂಗ್ ಮುಂದುವರೆಸಿದ ‘ಜೊತೆ ಜೊತೆಯಲಿ’ ಸೀರಿಯಲ್ ಡೈರೆಕ್ಟರ್

    ಅನಿರುದ್ಧ ಇಲ್ಲದೇ ಶೂಟಿಂಗ್ ಮುಂದುವರೆಸಿದ ‘ಜೊತೆ ಜೊತೆಯಲಿ’ ಸೀರಿಯಲ್ ಡೈರೆಕ್ಟರ್

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಟ್ಟು ಶೂಟಿಂಗ್ ಮುಂದುವರೆಸಿದ್ದಾರಂತೆ ನಿರ್ದೇಶಕರು. ಈ ಧಾರಾವಾಹಿಯ ಪ್ರಧಾನ ನಿರ್ದೇಶಕರು ಮತ್ತು ನಿರ್ಮಾಪಕರು ಆಗಿರುವ ಆರೂರು ಜಗದೀಶ್, ಇಂದು ಕೂಡ ಚಿತ್ರೀಕರಣವನ್ನು ಮುಂದುವರೆಸಿದ್ದಾರಂತೆ. ಈ ನಡುವೆ ಅನಿರುದ್ಧ ನಿರ್ವಹಿಸುತ್ತಿದ್ದ ಪಾತ್ರಕ್ಕಾಗಿ ಹೊಸ ಕಲಾವಿದರನ್ನೂ ಹುಡುಕುತ್ತಿದ್ದಾರಂತೆ.

    ಮಾಧ್ಯಮಗಳ ಜೊತೆ ಮಾತನಾಡಿರುವ ಆರೂರು ಜಗದೀಶ್, ‘ಜೊತೆ ಜೊತೆಯಲಿ ಧಾರಾವಾಹಿಗೆ ಕಥೆಯೇ ಹೀರೋ ಹಾಗೂ ಹಿರೋಯಿನ್. ಯಾರೇ ಇರಲಿ, ಇರದೇ ಇರಲಿ ಧಾರಾವಾಹಿ ನಡೆಯಲೇಬೇಕು. ಈ ಧಾರಾವಾಹಿ ನಂಬಿಕೊಂಡು ನನ್ನನ್ನೂ ಸೇರಿದಂತೆ ಹಲವರು ಇದ್ದಾರೆ. ಹಾಗಾಗಿ ಚಿತ್ರೀಕರಣ ಮುಂದುವರೆಸಲೇಬೇಕಿದೆ’ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಅನಿರುದ್ಧ ಅವರು ವಾಪಸ್ಸು ಬರದೇ ಇದ್ದರೂ, ಯಾರೇ ಬಂದರೂ ಶೂಟಿಂಗ್ ನಡೆಯಲಿದೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ನಿನ್ನೆ ನಡೆಯುತ್ತಿದ್ದ ಶೂಟಿಂಗ್ ನಲ್ಲಿ ಅನಿರುದ್ಧ ಅವರೇ ಬಿಟ್ಟು ಹೋಗಿರುವುದರಿಂದ, ಅವರನ್ನು ಧಾರಾವಾಹಿ ತಂಡ ಮತ್ತೆ ಕರೆಯುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ಆರೂರು ಜಗದೀಶ್ ಮತ್ತು ಅನಿರುದ್ಧ ಕೂಡಿಸಿಕೊಂಡು ವಾಹಿನಿಯು ಮಾತನಾಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಾಹಿನಿಯ ಮಧ್ಯಸ್ಥಿಕೆಯಲ್ಲಿ ಈ ಜೋಡಿ ಮತ್ತೆ ಒಂದಾಗಲಿದೆಯಾ ಅನ್ನುವ ಕುತೂಹಲ ಕೂಡ ಮೂಡಿದೆ. ಈಗಾಗಲೇ ಹಲವಾರು ಬಾರಿ ಇದೇ ರೀತಿಯಲ್ಲೇ ಮನಸ್ತಾಪ ಆಗಿರುವುದರಿಂದ ಧಾರಾವಾಹಿ ನಿರ್ಮಾಪಕರು ಇದಕ್ಕೆ ಒಪ್ಪುತ್ತಾರಾ ಎನ್ನುವ ಪ್ರಶ್ನೆಯೂ ಮೂಡಿದೆ.

    ಇಂದು ಸಂಧಾನ ನಡೆಯುವ ಸಾಧ್ಯತೆಯಿದ್ದು, ಧಾರಾವಾಹಿ ತಂಡದೊಂದಿಗೆ ಮಾತನಾಡುವುದಾಗಿ ಈಗಾಗಲೇ ಅನಿರುದ್ಧ ಹೇಳಿಕೊಂಡಿದ್ದಾರೆ. ಒಂದು ವೇಳೆ ಧಾರಾವಾಹಿಯಿಂದ ಕೈ ಬಿಟ್ಟರೆ, ಪತ್ರಿಕಾಗೋಷ್ಠಿ ಮಾಡುವುದಾಗಿಯೂ ತಿಳಿಸಿದ್ದಾರೆ. ಆದರೆ, ಈ ಕುರಿತು ಮಾತನಾಡಲು ನಿರ್ಮಾಪಕ ಕಂ ನಿರ್ದೇಶಕ ಆರೂರು ಜಗದೀಶ್ ನಿರಾಕರಿಸಿದ್ದಾರೆ. ಅನಿರುದ್ಧ ಅವರ ನಡೆ ನೋಡಿಕೊಂಡು ಪ್ರತಿಕ್ರಿಯೆ ನೀಡಲಿದ್ದೇನೆ ಎಂದೂ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜೊತೆ ಜೊತೆಯಲಿ ಟೀಮ್ ನನ್ನ ಹೊರ ಹಾಕಿದರೆ, ಪ್ರೆಸ್ ಮೀಟ್ ಮಾಡಿ ಉತ್ತರ ಕೊಡುವೆ : ನಟ ಅನಿರುದ್ಧ

    ಜೊತೆ ಜೊತೆಯಲಿ ಟೀಮ್ ನನ್ನ ಹೊರ ಹಾಕಿದರೆ, ಪ್ರೆಸ್ ಮೀಟ್ ಮಾಡಿ ಉತ್ತರ ಕೊಡುವೆ : ನಟ ಅನಿರುದ್ಧ

    ಟ ಅನಿರುದ್ಧ ಜನಪ್ರಿಯ ಧಾರಾವಾಹಿಯಿಂದ ಹೊರ ನಡೆದ ಸುದ್ದಿ ನಿನ್ನೆಯಿಂದಲೂ ಸಖತ್ ಸದ್ದು ಮಾಡುತ್ತಿದೆ. ಧಾರಾವಾಹಿಯಿಂದ ಅನಿರುದ್ಧ ಅವರೇ ಹೊರ ನಡೆದಿದ್ದಾರೆ ಎಂದು ಒಂದು ಕಡೆ ಸುದ್ದಿ ಆಗುತ್ತಿದ್ದರೆ, ಧಾರಾವಾಹಿ ತಂಡವೇ ಅವರನ್ನು ಹೊರ ಕಳುಹಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಎರಡೂ ಕಡೆ ಈ ಕುರಿತು ಸ್ಪಷ್ಟತೆ ಇಲ್ಲ. ಧಾರಾವಾಹಿ ತಂಡದ ಸದಸ್ಯರು ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಅನಿರುದ್ಧ ಈ ಬೆಳವಣಿಗೆ ಕುರಿತು ಮಾತನಾಡಿದ್ದಾರೆ.

    ಮನೆಯಲ್ಲೇ ಸಣ್ಣ ಪುಟ್ಟ ಮನಸ್ತಾಪಗಳು ಆಗುತ್ತವೆ. ಹಾಗೆಯೇ ಶೂಟಿಂಗ್ ಸೆಟ್ ನಲ್ಲೂ ಆಗಿವೆ ಎಂದು ಹೇಳುವ ಮೂಲಕ ಸದ್ಯ ಯಾವುದೂ ಸರಿಯಿಲ್ಲ ಎನ್ನುವುದನ್ನು ಪರೋಕ್ಷವಾಗಿಯೇ ಒಪ್ಪಿಕೊಂಡಿದ್ದಾರೆ. ಧಾರಾವಾಹಿಯಿಂದ ತಮ್ಮನ್ನು ಹೊರ ಹಾಕುತ್ತಿದ್ದಾರೆ ಎನ್ನುವ ವಿಷಯ ಗೊತ್ತಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ವಾಹಿನಿಯಾಗಲಿ ಅಥವಾ ಧಾರಾವಾಹಿ ತಂಡವಾಗಲಿ, ಈ ಕುರಿತು ಮಾತನಾಡಲು ತಮ್ಮನ್ನು ಸಂಪರ್ಕಿಸಿಲ್ಲ ಎಂದಿರುವ ಅವರು, ಈ ಸುದ್ದಿಯ ಕುರಿತಾಗಿ ಮಾತನಾಡಲು ಚಾನೆಲ್ ಗೆ ಹೋಗುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ಧಾರಾವಾಹಿಯಿಂದ ಹೊರ ನಡೆಯುವ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೇ ಇರುವ ಕಾರಣಕ್ಕಾಗಿ ತಂಡದೊಂದಿಗೆ ಮಾತನಾಡುವುದಾಗಿ ತಿಳಿಸಿರುವ ಅನಿರುದ್ಧ, ಒಂದು ವೇಳೆ ಆ ರೀತಿಯಲ್ಲಿ ಏನಾದರೂ ನಡೆದರೆ, ಪತ್ರಿಕಾಗೋಷ್ಠಿ ಮಾಡಿಯೇ ಎಲ್ಲ ವಿಷಯವನ್ನೂ ತಿಳಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಎಲ್ಲ ನಿರ್ಧಾರವೂ ಧಾರಾವಾಹಿ ತಂಡದ ಮೇಲೆಯೇ ನಿಂತಿದೆ ಎಂದು ಅನಿರುದ್ಧ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ ಔಟ್ : ಕೆಟಿವಿಎಗೆ ಕಂಪ್ಲೆಂಟ್ ಬಂದಿಲ್ಲ ಎಂದ ಅಧ್ಯಕ್ಷ ಶಿವಕುಮಾರ್

    ‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ ಔಟ್ : ಕೆಟಿವಿಎಗೆ ಕಂಪ್ಲೆಂಟ್ ಬಂದಿಲ್ಲ ಎಂದ ಅಧ್ಯಕ್ಷ ಶಿವಕುಮಾರ್

    ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರನ್ನು ಕೈ ಬಿಡಲಾಗಿದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಶೂಟಿಂಗ್ ಸ್ಪಾಟ್ ನಲ್ಲೇ ಅವರು ನಿರ್ಮಾಪಕ ಕಂ ನಿರ್ದೇಶಕರ ಜೊತೆ ಕಿರಿಕ್ ಮಾಡಿಕೊಂಡರು ಅನ್ನುವ ಕಾರಣಕ್ಕಾಗಿ ಈ ರೀತಿ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಹಲವು ಬಾರಿ ಇದೇ ರೀತಿ ಅನಿರುದ್ಧ ಅವರು ತಂಡದೊಂದಿಗೆ ನಡೆದುಕೊಂಡಿದ್ದಾರೆ ಅನ್ನುವ ಕಾರಣಕ್ಕಾಗಿಯೇ ಕಿರುತೆರೆಯಿಂದಲೇ ಅವರನ್ನು ಬ್ಯಾನ್ ಮಾಡಲಾಗುತ್ತಿದೆ ಎನ್ನುವ ಸುದ್ದಿಯೂ ಹರಡಿದೆ.

    ಈ ಪ್ರಕರಣದ ಕುರಿತಂತೆ ಈಗಾಗಲೇ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ಗೆ ಕಂಪ್ಲೆಂಟ್ ಕೂಡ ಮಾಡಿದ್ದು ಅನಿರುದ್ಧ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ ಎನ್ನುವ ಮಾತೂ ಕೇಳಿ ಬಂದಿತ್ತು. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ವಿಷಯದ ಕುರಿತು ಯಾವುದೇ ಮಾಹಿತಿ ಕೂಡ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ:ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?

    “ಒಂದು ಸೀರಿಯಲ್ ನಿಂದ ಕಲಾವಿದರು ಬದಲಾಗುವುದು ಕಾಮನ್. ಆದರೆ, ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಏನಾಗಿದೆ ಎನ್ನುವುದು ಗೊತ್ತಿಲ್ಲ. ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಗೂ ಯಾವುದೇ ದೂರು ಕೂಡ ಬಂದಿಲ್ಲ. ಹಾಗೇನಾದರೂ ಬಂದರೆ, ಕೂರಿಸಿ ಮಾತನಾಡುತ್ತೇವೆ. ಉದ್ಯಮದ ಉಳುವಿಗಾಗಿಯೇ ನಮ್ಮ ಸಂಘಟನೆ ಇರುವುದು. ವೈಯಕ್ತಿಕವಾಗಿ ಜೊತೆ ಜೊತೆಯಲಿ ಧಾರಾವಾಹಿಯ ನಿರ್ದೇಶಕರು, ನಿರ್ಮಾಪಕರು ಹಾಗೂ ನಟ ಅನಿರುದ್ಧ ಅವರು ಹಲವು ವರ್ಷಗಳಿಂದ ಪರಿಚಿತರು. ಹಾಗೆ ಆಗಿರಲಿಕ್ಕಿಲ್ಲ ಎಂದು ಭಾವಿಸುವೆ’ ಎಂದಿದ್ದಾರೆ ಎಸ್.ವಿ. ಶಿವಕುಮಾರ್.

    Live Tv
    [brid partner=56869869 player=32851 video=960834 autoplay=true]

  • ‘ಆಕಾಶವಾಣಿ ಮೈಸೂರು ಕೇಂದ್ರ’ ಇದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ

    ‘ಆಕಾಶವಾಣಿ ಮೈಸೂರು ಕೇಂದ್ರ’ ಇದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ

    ನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ, ವಿನೂತನ ಶೀರ್ಷಿಕೆ ಹೊಂದಿರುವ ಕನ್ನಡ ಸಿನಿಮಾವೊಂದು ಪ್ಯಾನ್ ಇಂಡಿಯಾ ಟೈಟಲ್ ಅಡಿ ಸಿದ್ಧಗೊಂಡಿದೆ.  ಬೆಳಗ್ಗೆ ಎದ್ದು ರೆಡಿಯೋ ಆನ್ ಮಾಡಿದ್ದರೆ ನಮಸ್ಕಾರ ಆಕಾಶವಾಣಿ   ಮೈಸೂರು ಕೇಂದ್ರ ಎಂಬ ಮಧುರವಾದ ಮಾತು ಕೇಳಿ ಬರುತ್ತದೆ. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿದೆ.

    ಜಬರ್ದಸ್ತ್ ಶೋ ಖ್ಯಾತಿಯ ಸತೀಶ್ ಬತ್ತುಲ ನಿರ್ದೇಶಿಸಿರುವ “ಆಕಾಶವಾಣಿ ಮೈಸೂರು ಕೇಂದ್ರ” ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿ, ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.  ಕಾರ್ತಿಕ್ ಕೊಡಕಂಡ್ಲ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಮಿಥುನಾ ಎಂಟರ್ ಟೈನ್ ಮೆಂಟ್ ಪ್ರೈ ಲಿ ಹಾಗೂ ಸೈನ್ಸ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ.  ಎಂ.ಎಂ.ಅರ್ಜುನ್ ಈ ಚಿತ್ರದ ನಿರ್ಮಾಪಕರು. ವಿಶ್ವನಾಥ್.ಎಂ, ಹರಿಕುಮಾರ್ ಜಿ, ಕಮಲ್ ಮೇಡಗೋಣಿ ಈ ಚಿತ್ರದ ಸಹ ನಿರ್ಮಾಪಕರು. ಇದನ್ನೂ ಓದಿ:ಬ್ರೇಕಪ್ ನಂತರ ಸ್ಟಾರ್ ನಟಿ ಸಹೋದರನ ಜೊತೆ ಇಲಿಯಾನಾ ಡೇಟಿಂಗ್

    “ಆಕಾಶವಾಣಿ ಮೈಸೂರು ಕೇಂದ್ರ” ಚಿತ್ರ ಲವ್ ಎಂಟರ್‌ ಟೈನರ್ ಹಾಗೂ ಥ್ರಿಲಿಂಗ್ ಕಥಾಹಂದರ ಹೊಂದಿರುವ ವಿಭಿನ್ನ ಚಿತ್ರ. ಈ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕ ಅರ್ಜುನ್ ಅವರ ಸಹಕಾರ ಅಪಾರ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ. ಈಗ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ್ದೇವೆ‌. ಸದ್ಯದಲ್ಲೇ ಬಿಡುಗಡೆ ದಿನಾಂಕ ತಿಳಿಸುತ್ತೇವೆ.‌ ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಸತೀಶ್ ಬತ್ತುಲ.

    ನಿರ್ದೇಶಕ ಸತೀಶ್ ಕಥೆ ಹೇಳಿದ ತಕ್ಷಣ ಇಷ್ಟವಾಯಿತು. ಅವರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾವನ್ನು ಮಾಡಿದ್ದಾರೆ. ನಿರ್ಮಾಪಕನಾಗಿ ನಾನು, ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಎಲ್ಲಾ ಭಾಷೆಯವರು ನೋಡಬಹುದಾದ ಕಥೆಯುಳ್ಳ(ಯೂನಿವರ್ಸಲ್ ಪಾಯಿಂಟ್ ವುಳ್ಳ) ಚಿತ್ರವಾಗಿರುವುದರಿಂದ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆ ಮಾಡುತ್ತಿದ್ದೇನೆ. ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ನಮ್ಮ ಚಿತ್ರದಲ್ಲಿ ಅದ್ಭುತವಾಗಿದೆ ಎನ್ನುತ್ತಾರೆ ಎಂ.ಎಂ.ಅರ್ಜುನ್. ಶಿವಕುಮಾರ್, ಹುಮಯ್ ಚಂದ್, ಅಕ್ಷತ ಶ್ರೀಧರ್ ಹಾಗೂ ಅರ್ಚನ ಈ ಚಿತ್ರಡ ನಾಯಕ ಹಾಗೂ ನಾಯಕಿಯರಾಗಿ ನಟಿಸಿದ್ದಾರೆ. ಆರಿಫ್ ಈ ಚಿತ್ರದ ಛಾಯಾಗ್ರಹಕರು.

    Live Tv
    [brid partner=56869869 player=32851 video=960834 autoplay=true]

  • ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ನಿಧನ

    ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ನಿಧನ

    ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನೆರ್ಲಗುಂಟೆ ಎನ್. ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ಅವರು ಅಕಾಲಿಕ ಸಾವಿಗೆ ತುತ್ತಾಗಿದ್ದಾರೆ. 32 ವರ್ಷದ ಶಿವಕುಮಾರ್ ಅವರು ನಿಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

    ಚಿತ್ರದುರ್ಗ, ದಾವಣಗೆರೆ ಹಾಗೂ ಬೆಂಗಳೂರು ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ; ಕೆನಡಾದಲ್ಲಿ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ: ಕನ್ನಡಿಗ ಸಂಸದ ಬೇಸರ

    ಮಾಜಿ ಶಾಸಕ ತಿಪ್ಪೇಸ್ವಾಮಿ ಅವರಿಗೆ ಶಿವಕುಮಾರ್ ಹಾಗೂ ಓರ್ವ ಸುಪುತ್ರಿ ಇದ್ದರು. ಇಪ್ಪತ್ತು ವರ್ಷಗಳ ಹಿಂದೆ ಮಗಳು ಸಹ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಇವರ ಬಲಗೈ ಆಗಿದ್ದಂತಹ ಪುತ್ರ ಶಿವಕುಮಾರ್ ತಂದೆಯ ರಾಜಕೀಯ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ಎಲ್ಲಾ ಚುನಾವಣೆಗಳಲ್ಲೂ ತಂದೆಯ ವಾರಿಸುದಾರರಾಗಿ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿ ಶಿವಣ್ಣ ಅಂತ ಖ್ಯಾತಿಯಾಗಿದ್ದರು.

    ಕಳೆದ ವಿಧಾನಸಭಾ ಚುನಾವಣೆ ವೇಳೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ. ಶ್ರೀರಾಮುಲು ಸ್ಪರ್ಧಿಸಿದ ಕಾರಣ ಎನ್. ತಿಪ್ಪೇಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಶ್ರೀರಾಮುಲು ವಿರುದ್ಧ ಅತ್ಯಧಿಕ ಮತಗಳಿಂದ ಸೋಲು ಅನುಭವಿಸಿದ್ದರು. ಆಗ ತಮ್ಮ ತಂದೆಯ ಪರ ತಮ್ಮ ಜೀವದ ಹಂಗು ತೊರೆದು ಚುನಾವಣೆ ಎದುರಿಸಿದ್ದರು.

    ಇತ್ತೀಚಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ತಮ್ಮ ತಂದೆಯವರಿಗೆ ಬೆನ್ನುಲುಬಾಗಿದ್ದ ಶಿವಕುಮಾರ್ ಅನುಪಸ್ಥಿತಿಯು ಮಾಜಿ ಶಾಸಕ ತಿಪ್ಪೇಸ್ವಾಮಿಯವರಿಗೆ ತುಂಬಲಾರದ ನಷ್ಟ ಎನಿಸಿದೆ.ಮೃತರ ಅಂತ್ಯ ಕ್ರಿಯೆ ನಾಳೆ ಅವರ ಸ್ವಗ್ರಾಮ ನೇರಲುಗುಂಟೆಯಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚ ಸುದೀಪ್ ಅವರ ಕೈರುಚಿ ತಿಂದು ಹೊಗಳಿದ ಡಾಲಿ ಧನಂಜಯ್

    ಕಿಚ್ಚ ಸುದೀಪ್ ಅವರ ಕೈರುಚಿ ತಿಂದು ಹೊಗಳಿದ ಡಾಲಿ ಧನಂಜಯ್

    ಕಿಚ್ಚ ಸುದೀಪ್ ಅವರು ಕಿಚನ್ ನಲ್ಲಿ ತಯಾರಾದ ಅಡುಗೆಯನ್ನು ಹೊಗಳದವರೇ ಇಲ್ಲ. ಅದರಲ್ಲೂ ಸ್ವತ ಸುದೀಪ್ ಅವರೇ ತಮ್ಮ ಕೈಯಾರ ಅಡುಗೆ ಮಾಡಿ ಬಡಿಸುತ್ತಾರೆ. ಆ ರುಚಿಯನ್ನು ಬಲ್ಲವರೇ ಬಲ್ಲರು. ಅವರ ಕಿಚನ್ ಕೂಡ ಹಾಗೆಯೇ ಇದೆ. ದೇಶ ವಿದೇಶಗಳ ಅಡುಗೆ ಪಾತ್ರೆಗಳನ್ನು ಅದು ಹೊಂದಿದೆ. ಹಾಗಾಗಿ ಕೇವಲ ದೇಶಿ ಆಹಾರ ಮಾತ್ರ ಅಲ್ಲಿ ಬೇಯುವುದಿಲ್ಲ. ವಿದೇಶ ಅಡುಗೆಗಳೂ ತಯಾರಾಗುತ್ತವೆ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

    ಹಾಗಂತ ಕಿಚ್ಚ ಸುದೀಪ್ ಅಡುಗೆ ಮಾಡುವುದನ್ನು ಯಾವತ್ತೂ ನಿಲ್ಲಿಸಿಲ್ಲ. ಯಾವುದೇ ದೇಶಕ್ಕೆ ಹೋಗಲಿ ಉಳಿದುಕೊಂಡ ಹೋಟೆಲ್ ನ ಕಿಚನ್ ಗೆ ಭೇಟಿ ಮಾಡದೇ ಬರುವುದಿಲ್ಲವಂತೆ. ಅಡುಗೆ ಕೋಣೆ ಹೊಕ್ಕು, ಅಲ್ಲಿ ತಯಾರಾದ ವಿಶೇಷ ಭಕ್ಷ್ಯಗಳನ್ನು ನೋಡಿ, ಅದನ್ನು ತಯಾರು ಮಾಡುವ ರೀತಿ ತಿಳಿದುಕೊಳ್ಳುತ್ತಾರಂತೆ. ಅದನ್ನು ಟ್ರೈ ಕೂಡ ಮಾಡುತ್ತಾರೆ. ಹಾಗಾಗಿ ವಿವಿಧ ಬಗೆಯ ಅಡುಗೆಗಳು ಅವರಿಗೆ ಬರುತ್ತವೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ನಿನ್ನೆಯಷ್ಟೇ ಡಾಲಿ ಧನಂಜಯ್ ಅವರು ಸುದೀಪ್ ಮನೆಗೆ ಹೋಗಿದ್ದಾರೆ. ಇವರ ಜತೆ ನಿರ್ದೇಶಕ ನಂದ ಕಿಶೋರ್, ಸಂಗೀತ ನಿರ್ದೇಶಕ ಕಂ ಗಾಯಕ ವಾಸುಕಿ ವೈಭವ್, ಕಲಾ ನಿರ್ದೇಶಕ ಶಿವಕುಮಾರ್ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಇದ್ದಾರೆ. ಇವರೆಲ್ಲರೂ ಕಿಚ್ಚ ಸುದೀಪ್ ಅವರೇ ಅಡುಗೆ ತಯಾರಿಸಿ ಹೊಟ್ಟೆ ತುಂಬಾ ಬಡಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಕಿಚ್ಚನ ಕೈ ರುಚಿ ಅನುಭವಿಸಿದ ಡಾಲಿ ಧನಂಜಯ್ ತಮ್ಮ ಟ್ವಿಟರ್ ಖಾತೆಯಲ್ಲಿ ಅದನ್ನು ಬರೆದುಕೊಂಡಿದ್ದಾರೆ. ಅಡುಗೆಯ ಬಗ್ಗೆ ಹಾಡಿ ಹೊಗಳಿದ್ದಾರೆ. ಅದಕ್ಕೆ ಸಂಗೀತ ನಿರ್ದೇಶಕ ವಾಸಕಿ ವೈಭವ್ ಕೂಡ ಅನುಮೋದಿಸಿದ್ದಾರೆ. ಈ ಟ್ವಿಟ್ ಗೆ ಅನೇಕರು ಮೆಚ್ಚಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

  • ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಶಿವರಾಜ್‌ ಕುಮಾರ್‌

    ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಶಿವರಾಜ್‌ ಕುಮಾರ್‌

    ಬೆಂಗಳೂರು: ಯಾರು ಏನೇ ಹೇಳಲಿ, ವೀಕೆಂಡ್ ಕರ್ಫ್ಯೂಯೇ ಇರಲಿ, ನಿಷೇಧಾಜ್ಞೆಯೇ ಜಾರಿಯಾಗಿರಲಿ, ಅರೆಸ್ಟೇ ಮಾಡಿಬಿಡಲಿ ನಾವು ಮಾತ್ರ ಮೇಕೆದಾಟು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಕಾಂಗ್ರೆಸ್ಸಿಗರು ಹಠಕ್ಕೆ ಬಿದ್ದಿದ್ದಾರೆ.

    ಪಾದಯಾತ್ರೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ನಾಯಕರು ಈಗಾಗಲೇ ಕನಕಪುರದಲ್ಲಿ ಬೀಡುಬಿಟ್ಟಿದ್ದು ಭಾನುವಾರ ಬೆಳಗ್ಗೆ 8:30ಕ್ಕೆ ಪಾದಯಾತ್ರೆಗೆ ಆರಂಭಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಕನ್ನಡ ಚಿತ್ರೋದ್ಯಮ ಈಗಾಗಲೇ ಬೆಂಬಲ ನೀಡಿದ್ದು ಈಗ ನಟ ಶಿವರಾಜ್‌ ಕುಮಾರ್‌ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ:  ಇಲ್ಲಿ ಮೇಕೆದಾಟು ಜಪ, ತಮಿಳುನಾಡಿನಲ್ಲಿ ಡಿಎಂಕೆ ಜತೆ ಕಾಂಗ್ರೆಸ್‌ ದೋಸ್ತಿ: ಹೆಚ್‌ಡಿಕೆ

    ಇಂದು ತಮ್ಮ ಇಷ್ಟ ದೈವ ಕಬ್ಬಾಳಮ್ಮ, ಜಾಮೀಯಾ ಮಸೀದಿಯಲ್ಲಿ ಡಿಕೆ ಶಿವಕುಮಾರ್ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಂಗಮದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಡಿಕೆಶಿ ಮನೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆದಿದೆ. ಭಾನುವಾರ ಏನೆಲ್ಲಾ ಮಾಡಬೇಕು? ಪೊಲೀಸರು ಬಂಧಿಸಲು ಬಂದರೆ ಹೇಗೆ? ಈ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಖ್ಯಾತ ಗಾಯಕ ವಿಶಾಲ್ ದದ್ಲಾನಿ ತಂದೆ ಕೊರೊನಾಗೆ ಬಲಿ

    ಈ ಮಧ್ಯೆ ಪಾದಯಾತ್ರೆ ಮಾಡುವಂತಿಲ್ಲ ಎಂದು ರಾಮನಗರ ಎಸ್‍ಪಿ ನೋಟಿಸ್‌ ಜಾರಿ ಮಾಡಿದ್ದಾರೆ. ಕೈ ನಾಯಕರ ಮನವೊಲಿಸಲು ಅರ್ಧ ಗಂಟೆ ಪ್ರಯತ್ನಿಸಿದ್ದಾರೆ. ಆದ್ರೆ ಇದಕ್ಕೆ ಕಾಂಗ್ರೆಸ್ ನಾಯಕರು ಜಗ್ಗಿಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ತುಮಕೂರು, ಕೊಪ್ಪಳದಿಂದ ನೂರಾರು ಕಾರ್ಯಕರ್ತರು ಬರುತ್ತಿದ್ದಾರೆ. ಇದನ್ನೂ ಓದಿ: ಅಮಲು ಪದಾರ್ಥ ಸೇವಿಸಿ ರಂಪಾಟ – ಉಡುಪಿ ಪೊಲೀಸರಿಗೆ ವಿದ್ಯಾರ್ಥಿಗಳಿಂದ ಅವಾಜ್

    ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಭಾರೀ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ. ಅತ್ತ ಪೊಲೀಸರ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ರಾಮನಗರ ಜಿಲ್ಲೆಯಾದ್ಯಂತ ಬಂದೋಬಸ್ತ್ ಕೈಗೊಂಡಿದ್ದು 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

  • ಸಿಎಂ ಸ್ಥಾನ ಯಾರಿಗೂ ಫಿಕ್ಸ್ ಅಲ್ಲ ಸೋತವರು ಸಿಎಂ ಆಗಿದ್ದಾರೆ : ಶಿವಕುಮಾರ್

    ಸಿಎಂ ಸ್ಥಾನ ಯಾರಿಗೂ ಫಿಕ್ಸ್ ಅಲ್ಲ ಸೋತವರು ಸಿಎಂ ಆಗಿದ್ದಾರೆ : ಶಿವಕುಮಾರ್

    ಬೆಂಗಳೂರು: ಚುನಾವಣೆಗೆ ಸ್ಪರ್ಧಿಸುವ 224 ಜನರಲ್ಲಿ ಗೆಲ್ಲುವವರ ಜತೆಗೆ, ಸೋತವರು ಕೂಡ ಮುಖ್ಯಮಂತ್ರಿಯಾಗಿದ್ದನ್ನು ರಾಜ್ಯ ರಾಜಕೀಯದ ಇತಿಹಾಸದಲ್ಲಿ ನೋಡಿದ್ದೇವೆ. ದೇವರಾಜ ಅರಸು ಅವರು ಚುನಾವಣೆಯಲ್ಲಿ ಗೆದ್ದಿರಲಿಲ್ಲ, ಆದರೂ ಮುಖ್ಯಮಂತ್ರಿ ಆಗಲಿಲ್ಲವೇ? ರಾಮಕೃಷ್ಣ ಹೆಗಡೆ ಅವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ, ಆದರೂ ಮುಖ್ಯಮಂತ್ರಿ ಆಗಲಿಲ್ಲವೇ? ನೀವು (ಮಾಧ್ಯಮದವರು) ಕೂಡ ಟ್ರೈ ಮಾಡಿ, ಒಂದು ಚಾನ್ಸ್ ನೋಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚಟಾಕಿ ಹಾರಿಸಿದ್ದಾರೆ.

    ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಪರಮೇಶ್ವರ ಎಂದು ಜೈಕಾರ ಹಾಕಿದ್ದರ ಬಗ್ಗೆ ಮಾಧ್ಯಮದವರು ಪ್ರಸ್ತಾಪಿಸಿದಾಗ ಶಿವಕುಮಾರ್ ಅವರು ಈ ರೀತಿ ಚಟಾಕಿ ಹಾರಿಸಿದರು.  ಇದನ್ನೂ ಓದಿ: ನನ್ನನ್ನು ಮುಂದಿನ ಸಿಎಂ ಎನ್ನಬೇಡಿ, ಆ ಪದವೇ ನನಗೆ ಡೇಂಜರ್ ಆಗುತ್ತೆ – ಪರಮೇಶ್ವರ್

    ಮೈಸೂರಿನ ಸುತ್ತೂರು ಶ್ರೀಗಳಿಗೆ ರಾಜಕೀಯ ಪಕ್ಷಗಳ ಬೇಧ-ಭಾವವಿಲ್ಲ. ಎಲ್ಲ ಪಕ್ಷಗಳ ನಾಯಕರಿಗೂ ಕಷ್ಟಕಾಲದಲ್ಲಿ ಧೈರ್ಯ ತುಂಬಿ, ಆಶೀರ್ವಾದ ಮಾಡುತ್ತಾರೆ. ಅವರ ಪೂರ್ವಾಶ್ರಮದ ಮಾತೃಶ್ರೀ ಅವರು ತೀರಿಕೊಂಡಾಗ ನಾವು ಹೋಗಲು ಸಾಧ್ಯವಾಗಲಿಲ್ಲ. ಆನಂತರ ನಾನು ಹೋಗಿ ಭೇಟಿ ಮಾಡಿದ್ದೇನೆ. ಅದೇ ರೀತಿ ಪರಮೇಶ್ವರ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ ಎಂದರು.

    ಕಾಂಗ್ರೆಸ್ ಪಕ್ಷದ ಹೈಕಮಾಂಡ್ ದುರ್ಬಲವಾಗಿದೆ. ಹೀಗಾಗಿ ಪಕ್ಷದಲ್ಲಿ ನಾಯಕತ್ವದ ವಿಚಾರವಾಗಿ ಚರ್ಚೆ ನಡೆಯುತ್ತಿದೆ ಎಂದು ಸಚಿವ ಅಶೋಕ್ ಅವರು ನೀಡಿರುವ ಹೇಳಿಕೆಯ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಉತ್ತರಿಸಿದ ಶಿವಕುಮಾರ್ ಅವರು, ಅಶೋಕಣ್ಣ ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ತೆಗೆದುಹಾಕಲಿ, ಆಮೇಲೆ ಬೇರೆಯವರ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು. ಈ ವೇಳೆ ಅವರ ಪಕ್ಷದಲ್ಲಿ ಆದ ರಾಮಾಯಣ ನೀವೇ (ಮಾಧ್ಯಮ ದವರು) ತೋರಿಸಿದ್ದೀರಲ್ಲಾ ಎಂದೂ ಹೇಳಿದರು.

    ಸಿಎಎ ಆಂದೋಲನ ಮತ್ತೆ ಆರಂಭವಾಗಬೇಕು ಎಂದು ಕೆಲವು ರಾಜಕೀಯ ಪಕ್ಷಗಳು ಹೇಳಿರುವ ಬಗ್ಗೆ ಪ್ರಸ್ತಾಪಿಸಿದಾಗ ಉತ್ತರಿಸಿದ ಅವರು, ಜನರ ಹಿತಾಸಕ್ತಿ, ಅವರ ಸಾರ್ವಭೌಮತ್ವ, ಪೌರತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಇವು ದೇಶದ ಪ್ರತಿ ಪ್ರಜೆಯ ಹಕ್ಕು. ಅವರ ರಕ್ಷಣೆಗೆ ನಾವು ಸದಾ ನಿಲ್ಲುತ್ತೇವೆ ಎಂದರು.