Tag: ಶಿವಕುಮಾರ್ ಉದಾಸಿ

  • ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಸಂಚು ನಡೆಸ್ತಿದೆ- ಸಂಸತ್‍ನಲ್ಲಿಯೂ ಕ್ಯಾತೆ ತೆಗೆದ ಎನ್‍ಸಿಪಿ ಸಂಸದೆ

    ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಸಂಚು ನಡೆಸ್ತಿದೆ- ಸಂಸತ್‍ನಲ್ಲಿಯೂ ಕ್ಯಾತೆ ತೆಗೆದ ಎನ್‍ಸಿಪಿ ಸಂಸದೆ

    ನವದೆಹಲಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ (Karnataka) ಸಂಚು ನಡೆಸ್ತಿದೆ. ಮಹಾರಾಷ್ಟ್ರದ (Maharashtra) ಸಮಗ್ರತೆಗೆ ಧಕ್ಕೆ ತರುವಂತಹ ಹೇಳಿಕೆಯನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡುತ್ತಿದ್ದಾರೆ ಎಂದು ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ (Supriya Sule) ಮೊದಲ ದಿನವೇ ಸಂಸತ್‍ನಲ್ಲಿ (Lokasabha) ಗುಡುಗಿದ್ದಾರೆ.

    ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಪದೇಪದೇ ಬಾಲ ಬಿಚ್ಚುತ್ತಿದೆ. ಹಿರೇಬಾಗೇವಾಡಿ ಘಟನೆ ಬಗ್ಗೆ ಕೇಂದ್ರಕ್ಕೆ ಫಡ್ನಾವೀಸ್ ದೂರು ಕೊಟ್ಟಿದ್ದಾರೆ. ಎಂಎನ್‍ಎಸ್ ಮತ್ತು ಶಿವಸೇನೆಯವರು ಪುಂಡಾಟ ಮೆರೆಯುತ್ತಿದ್ದಾರೆ. ಇನ್ನು, ದಾಳಿ ನಿಲ್ಲಿಸದಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಕರ್ನಾಟಕಕ್ಕೆ ಶರದ್ ಪವಾರ್ ವಾರ್ನಿಂಗ್ ನೀಡುತ್ತಿದ್ದಾರೆ. ಇದೀಗ ಮೊದಲ ದಿನದ ಸಂಸತ್‍ನಲ್ಲಿ ಸಂಸದೆ ಸುಪ್ರಿಯಾ ಸುಳೆಯವರೂ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.

    ಗಡಿಯಲ್ಲಿ ಮಹಾರಾಷ್ಟ್ರಿಗರ ಮೇಲೆ ಕರ್ನಾಟಕ ದಾಳಿ ನಡೆಸ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಗೃಹಮಂತ್ರಿ ಅಮಿತ್ ಶಾ ಮಧ್ಯಪ್ರವೇಶ ಮಾಡ್ಬೇಕು ಎಂದು ಆಗ್ರಹಿಸಿದ್ದಾರೆ. ಕೊಲೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್‌

    ಇದಕ್ಕೆ ಶಿವಕುಮಾರ್ ಉದಾಸಿ ತಿರುಗೇಟು ನೀಡಿದ್ದಾರೆ. ಗಡಿ ಕ್ಯಾತೆ ತೆಗೆದಿದ್ದೇ ಅವರು, ಸುಮ್ನೆ ಕನ್ನಡಿಗರ ಮೇಲೆ ಗೂಬೆ ಕೂರಿಸ್ತಿದ್ದಾರೆ ಎಂದಿದ್ದಾರೆ. ಆದರೆ, ಅದ್ಯಾಕೋ ಏನೋ ಬೊಮ್ಮಾಯಿ ಸರ್ಕಾರ ಮಾತ್ರ ಶಾಂತಿ ಮಂತ್ರ ಪಠಿಸುತ್ತಿದೆ. ಸಿಎಂ ಜೊತೆ ಚರ್ಚೆ ಬಳಿಕ ಮಾತಾಡಿದ ಸಚಿವ ಗೋವಿಂದ ಕಾರಜೋಳ ಅವರು ಕೂಡ, ಮಹಾರಾಷ್ಟ್ರದ ಪುಂಡರನ್ನು ತೆಗಳೋದಿಕ್ಕಿಂತಲೂ ಹೆಚ್ಚಾಗಿ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿದಂತೆ ಕಂಡುಬಂತು. ಸಿದ್ದರಾಮಯ್ಯ ಬಯಸಿದಂತೆ ರಾಜಕೀಯ ಮಾಡೋಕೆ ಬಿಜೆಪಿ ಸಿದ್ಧವಿಲ್ಲ. ಯಾವಾಗ ಸಭೆ ಕರೆಯಬೇಕು ಅಂತ ನಮಗೆ ಗೊತ್ತಿದೆ ಎಂದರು. ಇನ್ನು, ಸಿಟಿ ರವಿ ಎಂದಿನಂತೆ, ನಾವೆಲ್ಲಾ ಭಾರತೀಯರು ಎಂಬ ಭಾವನೆ ಇಟ್ಕೊಂಡು ಕೆಲಸ ಮಾಡ್ಬೇಕು ಅಂತಾ ಬೋಧಿಸಿದರು. ಪಾರಿವಾಳ ಹಿಡಿಯಲು ಹೋಗಿ ಕರೆಂಟ್‌ ಶಾಕ್‌ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಬಾಲಕ ಸಾವು

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲಿ ಆಗಲಿ, ಪ್ರಪಂಚವಾಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು: ಶಿವಕುಮಾರ್ ಉದಾಸಿ

    ದೇಶದಲ್ಲಿ ಆಗಲಿ, ಪ್ರಪಂಚವಾಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು: ಶಿವಕುಮಾರ್ ಉದಾಸಿ

    ಹಾವೇರಿ: ಭಾಷೆ ವಿಚಾರ ಬಂದಾಗ ಮಾತೃಭಾಷೆಯೇ ಮೊದಲು. ಯಾರೇ ಆಗಿರಲಿ, ದೇಶದಲ್ಲಿ ಆಗಲಿ, ಪ್ರಪಂಚದಲ್ಲೇ ಆಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು. ಸಣ್ಣ ಮಗುವಿದ್ದಾಗ ಭಾಷೆ ಕಲಿಸಿದರೆ ಬಹುಭಾಷೆ ಕಲಿಯುತ್ತವೆ. ಆಸಕ್ತಿ ಇದ್ದವರು ಬೇರೆ ಭಾಷೆಯನ್ನು ಕಲಿಯುತ್ತಾರೆ. ಭಾಷಾ ಕಲಿಕೆ ಆಸಕ್ತಿ ಮೇಲೆ ಹೋಗುತ್ತೆ. ಆದರೆ ಮಾತೃಭಾಷೆಯೆ ಶ್ರೇಷ್ಠ ಎಂದು ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.

    ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಬಳಿ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ನಂತರ ಮಾತನಾಡಿದ ಅವರು, ಇದು ಯಾಕೆ ಇಷ್ಟು ದೊಡ್ಡ ನ್ಯೂಸ್ ಆಗ್ತಿದೆ. ನನಗೆ ಗೊತ್ತಿಲ್ಲ. ಬಿಜೆಪಿಗೆ ಬಂದು ತಪ್ಪು ಮಾಡಿದೆ ಎಂಬ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ಬಗ್ಗೆ ಅವರನ್ನೆ ಕೇಳಬೇಕು. ನಾನು ಒಬ್ಬ ಲೋಕಸಭಾ ಸದಸ್ಯ ಅಷ್ಟೇ. ಪಕ್ಷದ ಬಗ್ಗೆ ಮಾತಾಡೋಕೆ ಅಧ್ಯಕ್ಷರಿದ್ದಾರೆ. ನಾನೊಬ್ಬ ಎಂಪಿಯಾಗಿ ನನ್ನ ಆವೃತ್ತಿಯಲ್ಲಿ ಬರುವ ಕೆಲಸ ಮಾಡುವವನು. ಈ ಬಗ್ಗೆ ಪಕ್ಷದವರು ಪ್ರೆಸ್‍ಮೀಟ್ ಮಾಡು ಎಂದರೆ ನಾನು ಮಾಡಬೇಕು ಎಂದರು. ಇದನ್ನೂ ಓದಿ:  ಏಪ್ರಿಲ್‍ನಲ್ಲಿ 7.83% ಕ್ಕೆ ಏರಿದೆ ಭಾರತದ ನಿರುದ್ಯೋಗ ದರ 

    ಪಿಎಸ್‍ಐ ನೇಮಕಾತಿಯಲ್ಲಿ ರದ್ದು ಮಾಡಿ, ಸರ್ಕಾರ ಮರುಪರೀಕ್ಷೆ ಮಾಡುವ ತೀರ್ಮಾನ ಕೈಗೊಂಡಿದೆ. ತನಿಖೆಯೂ ಅದರ ಜೊತೆಗೆ ನಡೆಯುತ್ತಿದೆ. ಈ ದ್ವಂದ್ವ ಇದ್ದೇ ಇರುತ್ತೆ. ತಪ್ಪು ಮಾಡಿದವರನ್ನು ಬಿಟ್ಟು ಉಳಿದವರಿಗೆ ಪರೀಕ್ಷೆ ಮಾಡಲಾಗ್ತಿದೆ. ತನಿಖೆಯಲ್ಲಿ ಇರೋ ಅಭ್ಯರ್ಥಿಗಳನ್ನು ಬಿಟ್ಟು ಉಳಿದವರಿಗೆ ಮರುಪರೀಕ್ಷೆ ನಡೆಯುತ್ತದೆ. ಸಾಮಾನ್ಯವಾಗಿ ನಾನೂ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದೆ ಅಂದರೆ ನನಗೂ ಹಾಗೆ ಅನಿಸುತ್ತಿತ್ತು. ಆದರೆ ಹೊಸ ಅಭ್ಯರ್ಥಿಗಳನ್ನೇನೂ ಸೇರ್ಪಡೆ ಮಾಡಲ್ಲ ಎಂದು ಈಗಾಗಲೇ ಸರ್ಕಾರ ಹೇಳಿದೆ. ಅಪ್ರಮಾಣಿಕರ್ಯಾರು ಅವರು ಹೊರಗಡೆ ಹೋಗಬೇಕಿದೆ ಎಂದರು.

  • ಪತ್ನಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ತೆರೆಮರೆಯ ಕಸರತ್ತು- ಬೆಂಗಳೂರಲ್ಲೇ ಬೀಡುಬಿಟ್ಟ ಶಿವಕುಮಾರ ಉದಾಸಿ

    ಪತ್ನಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ತೆರೆಮರೆಯ ಕಸರತ್ತು- ಬೆಂಗಳೂರಲ್ಲೇ ಬೀಡುಬಿಟ್ಟ ಶಿವಕುಮಾರ ಉದಾಸಿ

    ಹಾವೇರಿ: ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಮ್ಮದೆಯಾದ ಕಸರತ್ತು ನಡೆಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

    ಸಂಸದ ಶಿವಕುಮಾರ್ ಉದಾಸಿಯವರು ತಮ್ಮ ಪತ್ನಿ ರೇವತಿ ಉದಾಸಿಯವರಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದು, ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದಾರೆ. ಈ ಮೂಲಕ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರಿಗೆ ಕೋವಿಡ್ ಬಂದ ಮೇಲೆ ಏನೇನೋ ಮಾತಾಡ್ತಿದ್ದಾರೆ: ಸೋಮಶೇಖರ್

    ಸಂಸದ ಶಿವಕುಮಾರ ಉದಾಸಿ ಪತ್ನಿ ರೇವತಿ ಉದಾಸಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕೃಷ್ಣ ಈಳಗೇರ, ಮಾಜಿ ಶಾಸಕ ಶಿವರಾಜ ಸಜ್ಜನ ಸೇರಿದಂತೆ ಹಲವು ಆಕಾಂಕ್ಷಿಗಳು ತಮ್ಮದೆ ಪಯತ್ನ ನಡೆಸಿದ್ದಾರೆ. ಇವತ್ತು ಆಕಾಂಕ್ಷಿಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಸಭೆ ನಡೆಸಲಿದ್ದಾರೆ.

    ಸಂಜೆ ಐದು ಗಂಟೆಗೆ ಹಾನಗಲ್ ಪಟ್ಟಣದ ಉದಾಸಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಭೆಯಲ್ಲಿ ಆಕಾಂಕ್ಷಿಗಳ ಜೊತೆ ಮಾತುಕತೆ ಮತ್ತು ಆಕಾಂಕ್ಷಿಗಳಿಂದ ಮನವಿ ಸ್ವೀಕರಿಸಲಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕೋರ್ ಕಮಿಟಿ ಸಭೆ ನಂತರ ರಾಜ್ಯ ಘಟಕದಿಂದ ಅಭ್ಯರ್ಥಿ ಹೆಸರು ಅಂತಿಮಯಾಗಲಿದೆ. ಅದರೆ ಉಪಚುನಾವಣೆ ಘೋಷಣೆ ನಂತರ ಶಿವಕುಮಾರ ಉದಾಸಿ ಬೆಂಗಳೂರಿನಲ್ಲೇ ಬೀಡುಬಿಟ್ಟು ಪತ್ನಿ ರೇವತಿ ಉದಾಸಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ತೆರೆಮರೆಯ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

  • ಸಚಿವ ಸ್ಥಾನ ಯಾರಿಗೆ ಕೊಟ್ರೂ ನನಗೆ ಕೊಟ್ಟಷ್ಟೇ ಸಂತೋಷ: ಶಿವಕುಮಾರ್ ಉದಾಸಿ

    ಸಚಿವ ಸ್ಥಾನ ಯಾರಿಗೆ ಕೊಟ್ರೂ ನನಗೆ ಕೊಟ್ಟಷ್ಟೇ ಸಂತೋಷ: ಶಿವಕುಮಾರ್ ಉದಾಸಿ

    ಹಾವೇರಿ: ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ನೀಡುವುದು ಅದು ಪ್ರಧಾನ ಮಂತ್ರಿಗಳ ಪವರ್. ಸಚಿವ ಸ್ಥಾನ ಯಾರಿಗೆ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತದೆ ಎಂದು ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಯಾರಿಗೆ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತದೆ ಎಂದು ಹೇಳುವ ಮೂಲಕ ಶಿವಕುಮಾರ ಉದಾಸಿ ಕೈ ಮುಗಿದರು. ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಬಿ.ವೈ ವಿಜಯೇಂದ್ರ ಹೆಸರು ಕೇಳಿಬಂದಿರೋ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಮಾಹಿತಿ ಇಲ್ಲ ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಸಹಮತವಿದೆ: ಆರ್.ಅಶೋಕ್

    ನಮ್ಮ ಅಪ್ಪ ತೀರಿಕೊಂಡು ಇಪ್ಪತ್ತು ದಿವಸ ಆಗೈತಿ. ಹೀಗಾಗಿ ನಾನು ಉಪಚುನಾವಣೆ ಬಗ್ಗೆ ಆಲೋಚನೆ ಮಾಡಿಲ್ಲ. ನನ್ನ ಪಾಡಿಗೆ ನಾನು ಎಂಪಿ ಕೆಲಸ ಮಾಡ್ತಿದ್ದೇನೆ. ಸದ್ಯ ನಾನು ಎಂಪಿ ಕೆಲಸ ಮಾಡುತ್ತಿದ್ದೇನೆ ಎಂದು ಶಿವಕುಮಾರ್ ಉದಾಸಿ ಹೇಳಿದ್ದಾರೆ.

  • ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಉದಾಸಿ ದರ್ಪ

    ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಉದಾಸಿ ದರ್ಪ

    – ಸಮಸ್ಯೆ ಹೇಳಲು ಬಂದ ವ್ಯಕ್ತಿಯನ್ನ ತಳ್ಳಿದ ಎಂಪಿ

    ಹಾವೇರಿ: ಸಮಸ್ಯೆ ಹೇಳಲು ಬಂದಿದ್ದ ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ದರ್ಪ ತೋರಿದ್ದು, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಸದರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ನವೆಂಬರ್ 20ರಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಭೂಮಿ ಪೂಜೆಗೆ ಸಂಸದ ಶಿವಕುಮಾರ್ ಉದಾಸಿ ಆಗಮಿಸಿದ್ದರು. ಪೂಜೆ ಬಳಿಕ ಸಂಸದರ ಬಳಿ ಗ್ರಾಮದ ಶೇಖಪ್ಪ ಎಂಬವರು ತಮ್ಮ ಏರಿಯಾದ ಸಮಸ್ಯೆ ಹೇಳಲು ದೌಡಾಯಿಸಿದ್ದರು. ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಬಳಿ ಸಮಸ್ಯೆ ಹೇಳುತ್ತಿದ್ದಾಗ ಮಧ್ಯ ಪ್ರವೇಶಿಸಿ ಶಿವಕುಮಾರ್ ಉದಾಸಿ, ರಸ್ತೆ ಬಂದಾಗ ಬರ್ತಿಯಿಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಬಂದದ್ದು ಆಯ್ತು, ನೋಡ್ಕೊಂಡದ್ದು ಆಯ್ತು ಎಂದು ಶೇಖರಪ್ಪ ಪ್ರತ್ಯುತ್ತರ ನೀಡಿದರು.

    ಗ್ರಾಮಸ್ಥನ ತಿರುಗೇಟಿಗೆ ಕೋಪಗೊಂಡ ಸಂಸದರು ಆಯ್ತು ನೋಡ್ಕೋ ಹೋಗ್ ಎಂದು ಎಡಗೈಯಿಂದ ಗ್ರಾಮಸ್ಥನನ್ನ ನೂಕಿದರು. ಗ್ರಾಮಸ್ಥನನ್ನು ನೂಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.