Tag: ಶಿಲ್ಪಾಶೆಟ್ಟಿ

  • ಲೇಡಿ ಪೊಲೀಸ್ ಮೇಲೆ ಶಿಲ್ಪಾಶೆಟ್ಟಿ ಗರಂ

    ಲೇಡಿ ಪೊಲೀಸ್ ಮೇಲೆ ಶಿಲ್ಪಾಶೆಟ್ಟಿ ಗರಂ

    ಪ್ರತಿ ಗಣೇಶ ಹಬ್ಬಕ್ಕೂ ಮುಂಬೈನ ಲಾಲ್‌ಬಗೂಚ ರಾಜ ಗಣಪತಿ ಪೆಂಡಾಲ್‌ಗೆ (Lalbaugcha Raja Pandal) ಬಾಲಿವುಡ್ ತಾರೆಯರು ಭೇಟಿ ಕೊಡುವ ಪದ್ಧತಿ ಇದೆ. ಹೇಳಿ ಕೇಳಿ ಇದು ಸಾರ್ವಜನಿಕ ಗಣಪತಿ ಜನಸಂದಣಿ ಹೆಚ್ಚಾಗಿರುತ್ತೆ. ಭೇಟಿಕೊಡುವ ತಾರೆಯರಿಗೆ ಪೊಲೀಸ್ ಭದ್ರತೆಯೂ ಇರುತ್ತೆ. ಹೀಗಾಗಿ ಪ್ರತಿ ವರ್ಷದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಈ ಬಾರಿಯೂ ಸಾರ್ವಜನಿಕ ಗಣೇಶ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ತಮಗೆ ಭದ್ರತೆ ಕೊಡುತ್ತಿದ್ದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ ಮೇಲೆಯೇ ಬೇಸರಗೊಂಡಿದ್ದಾರೆ. ಅವರನ್ನು ಕೈಯಿಂದ ತಳ್ಳಿ ಸೆಲ್ಫಿ ಕೊಡಲು ನಿರಾಕರಿಸಿದ್ದಾರೆ. ಶಿಲ್ಪಾ ವರ್ತನೆಗೆ ಪರ ವಿರೋಧದ ಟೀಕೆ ಟಿಪ್ಪಣಿ ಜೋರಾಗಿದೆ.

    ಗಣಪತಿ ಪೆಂಡಾಲ್‌ಗೆ ಶಿಲ್ಪಾ ಶೆಟ್ಟಿ ಆಗಮಿಸಿದ್ದ ವೇಳೆ ಸುತ್ತ ಮುತ್ತ ಜನಸಂದಣಿ ಕಂಟ್ರೋಲ್ ಮಾಡಲು ಪೊಲೀಸರ ಭದ್ರತೆ ಇತ್ತು. ಅಲ್ಲೇ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಪಕ್ಕದಿಂದ ಓಡಿಬಂದು ಶಿಲ್ಪಾ ಶೆಟ್ಟಿಯ ಭುಜ ಹಿಡಿದು `ಮೇಡಮ್ ಒಂದು ಸೆಲ್ಫಿ’ ಎಂದು ಹೇಳುತ್ತಾ ಫೋಟೋ ಕ್ಲಿಕ್ ಮಾಡಲು ಮುಂದಾಗ್ತಾರೆ. ಈ ವೇಳೆ ಸೆಲ್ಫಿಯನ್ನು ನಿರಾಕರಿಸುವ ಶಿಲ್ಪಾ ಸಮವಸ್ತç ಧರಸಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್‌ನ್ನು ತಳ್ಳುತ್ತಾರೆ. ಹೀಗೆಲ್ಲಾ ಮಾಡಬೇಡಿ ಎಂದು ಕಟುವಾಗೇ ಹೇಳ್ತಾರೆ. ಇಷ್ಟು ಸಾಲದು ಎಂಬAತೆ ಶಿಲ್ಪಾ ಶೆಟ್ಟಿ ಬಾಡಿಗಾರ್ಡ್ ಕೂಡ ಕಾನ್ಸ್ಟೇಬಲ್‌ಗೆ `ಹಾಗೆಲ್ಲಾ ಮಾಡಬೇಡಿ’ ಎಂದಿದ್ದಾರೆ. ಈ ದೃಶ್ಯ ಬಹಳ ವೈರಲ್ ಆಗಿದೆ.  ಇದನ್ನೂ ಓದಿ: ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ

     

    View this post on Instagram

     

    A post shared by Bollywood News (@bolly_newssss)

    ಶಿಲ್ಪಾ ಶೆಟ್ಟಿ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಬಹಳವೇ ಚರ್ಚೆಯಾಗುತ್ತಿದೆ. ಶಿಲ್ಪಾರನ್ನು ಮುಟ್ಟಿ ಸೆಲ್ಫಿ ಕೊಡಿ ಎಂದು ಕೇಳಿದ್ದು ತಪ್ಪಿರಬಹುದು. ಆದರೆ ಅವರು ಹೆಣ್ಣು ಎಂಬ ಸಲುಗೆಯಿಂದ ಈ ರೀತಿ ಕೇಳಿರಬಹುದು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸೆಲ್ಫಿ ಕೊಡಲು ನಿರಾಕರಣ ಮಾಡಿದ್ದರೂ ನಡೆಯುತ್ತಿತ್ತು, ಬದಲಿಗೆ ಶಿಲ್ಪಾ ತಳ್ಳಿದ್ದು ಸರಿಯಲ್ಲ ಎಂದು ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕಿಚ್ಚನ ಮಾರ್ಕ್ ಟೈಟಲ್ ಟೀಸರ್‌ಗೆ ಫುಲ್ ಮಾರ್ಕ್ಸ್

  • OTTಗಾಗಿ ಬ್ಲೂಫಿಲ್ಮ್ ತೆಗೀತಿದ್ದ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ- ಚಾರ್ಜ್‌ಶೀಟ್‌ನಲ್ಲಿ ರಹಸ್ಯ ಬಯಲು

    OTTಗಾಗಿ ಬ್ಲೂಫಿಲ್ಮ್ ತೆಗೀತಿದ್ದ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ- ಚಾರ್ಜ್‌ಶೀಟ್‌ನಲ್ಲಿ ರಹಸ್ಯ ಬಯಲು

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ (Raj Kundra) ವಿರುದ್ಧ ಪೊಲೀಸರು (Police) ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ರಸಹ್ಯ ಮಾಹಿತಿ ಬಯಲಾಗಿದೆ.

    ಹೌದು. ರಾಜ್ ಕುಂದ್ರಾ ಮುಂಬೈನ ಪಂಚತಾರಾ ಹೋಟೆಲ್‌ಗಳಲ್ಲಿ (Panchatara Hotel) ನಟಿಯರನ್ನು ಬಳಸಿ ಬಯೋ ತಯಾರಿಸುತ್ತಿದ್ದರು ಎಂದು ಮಹಾರಾಷ್ಟ್ರದ ಸೈಬರ್ ಪೊಲೀಸರು (Cyber Police) ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಜ್ಞಾತ ಸಖಿ ಸಹವಾಸ, ಲಕ್ಷ ಲಕ್ಷ ಗೋತ – ಬಣ್ಣದ ಮಾತಿನಿಂದ 41 ಲಕ್ಷ ಪೀಕಿದ ಮಾಯಾಂಗನೆ!

    ನಟಿ ರೂಪದರ್ಶಿಯರಾದ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ (Poonam Pandey), ಚಿತ್ರ ನಿರ್ಮಾಪಕ ಮೀತಾ ಜುಂಜುನ್‌ವಾಲಾ ಹಾಗೂ ಕ್ಯಾಮೆರಾ ಮ್ಯಾನ್ ರಾಜು ದುಬೆ ಎಂಬವರು ಕುಂದ್ರಾ ಜೊತೆ ಸೇರಿಕೊಂಡು ಪಂಚತಾರಾ ಹೋಟೆಲ್‌ಗಳಲ್ಲಿ ಅಶ್ಲೀಲ ಸಿನಿಮಾಗಳನ್ನು (Cinema) ಚಿತ್ರಿಸುತ್ತಿದ್ದರು. ಇದನ್ನು ಹಣಕಾಸು ಲಾಭಕ್ಕೆ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳು ಬಿಡುಗಡೆ ಮಾಡುತ್ತಿದ್ದವು. ಪೊಲೀಸರು (Police) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಚಿನ್ನದ ವ್ಯಾಪಾರಿಗೆ ಪೊಲೀಸರಿಂದಲೇ ಧಮ್ಕಿ!

    `ಪ್ರೇಮ್ ಪಗ್ಲಾನಿ’ ಎಂಬ ಅಶ್ಲೀಲ ವೆಬ್‌ಸೀರಿಸ್ ತಯಾರಿಸಿ, ಒಟಿಟಿಗೆ ಅಪ್‌ಲೋಡ್ ಮಾಡಲಾಗಿತ್ತು. ಪೂನಂ ಪಾಂಡೆ `ದಿ ಪೂನಂ ಪಾಂಡೆ’ ಎಂಬ ಸ್ವಂತ ಆ್ಯಪ್ ಹೊಂದಿದ್ದರು. ತನ್ನ ವೀಡಿಯೋ ಸೆರೆಹಿಡಿದು ಕುಂದ್ರಾ ಸಹಾಯದಿಂದ ಅದನ್ನು ಬಿಡುಗಡೆ ಮಾಡುತ್ತಿದ್ದರು.

    2021ರ ಫೆಬ್ರವರಿಯಲ್ಲಿ ಮಧ್ ದ್ವೀಪದ ಬಂಗಲೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆ ಬಯಲಾಗಿತ್ತು. ಕುಂದ್ರಾ 100ಕ್ಕೂ ಹೆಚ್ಚು ಅಶ್ಲೀಲ ಸಿನಿಮಾಗಳನ್ನು ತಯಾರಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಬಳಿಕ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. 2 ತಿಂಗಳು ಜೈಲು ಬಳಿಕ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಶಿಲ್ಪಾ ಶೆಟ್ಟಿ ದಂಪತಿಯ ಫೋಟೋ ಕ್ಲಿಕ್ಕಿಸಿದ್ದಕ್ಕೆ ಬೌನ್ಸರ್‍ಗಳಿಂದ ಮನ ಬಂದಂತೆ ಹಲ್ಲೆ

    ಶಿಲ್ಪಾ ಶೆಟ್ಟಿ ದಂಪತಿಯ ಫೋಟೋ ಕ್ಲಿಕ್ಕಿಸಿದ್ದಕ್ಕೆ ಬೌನ್ಸರ್‍ಗಳಿಂದ ಮನ ಬಂದಂತೆ ಹಲ್ಲೆ

    ಮುಂಬೈ: ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ಫೋಟೋವನ್ನು ಕ್ಲಿಕ್ಕಿಸಿದ್ದಕ್ಕೆ ಮಾಧ್ಯಮಗಳ ಫೋಟೋಗ್ರಾಫರ್ ಗಳ ಮೇಲೆ ರೆಸ್ಟೋರೆಂಟ್ ಬೌನ್ಸರ್ ಗಳು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

    ರಾತ್ರಿ ಶಿಲ್ಪಾ ಶೆಟ್ಟಿ ದಂಪತಿ ಬಸ್ಟಿನ್ ರೆಸ್ಟೋರೆಂಟ್ ಡಿನ್ನರ್ ಮುಗಿಸಿ ಹೊರಗಡೆ ಹೋಗುತ್ತಿದ್ದರು. ಈ ವೇಳೆ ಅಲ್ಲಿದ್ದ ಛಾಯಾಗ್ರಾಹಕರು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದರು. ಫೋಟೋಗ್ರಾಫರ್ ಗಳನ್ನು ನೋಡಿ ಶಿಲ್ಪಾ ಶೆಟ್ಟಿ ಮತ್ತ ರಾಜ್ ಕುಂದ್ರಾ ನಗುತ್ತಲೇ ಪೋಸ್ ಕೊಟ್ಟಿದ್ದಾರೆ.

    ಈ ವೇಳೆ ಅಲ್ಲಿದ್ದ ಬೌನ್ಸರ್ ಗಳಿಗೆ ಏನಾಯ್ತೋ ಗೊತ್ತಿಲ್ಲ. ಏಕಾಏಕಿ ಫೋಟೋಗ್ರಾಫರ್ ಗಳ ಮೇಲೆ ಮನ ಬಂದಂತೆ ಹೊಡೆದಿದ್ದಾರೆ. ಮನಸೋ ಇಚ್ಛೆ ಥಳಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ರೆಸ್ಟೊರೆಂಟ್ ಬೌನ್ಸರ್‍ಗಳಿಂದ ಹಲ್ಲೆಗೊಳಗಾಗಿರುವ ಛಾಯಾಗ್ರಾಹಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ಬೌನ್ಸರ್ ಗಳನ್ನು ಬಂಧಿಸಿದ್ದಾರೆ.