Tag: ಶಿರೂರು ಶ್ರೀ

  • ಶಿರೂರು ಮಠಕ್ಕೆ 3 ದಿನ ಭಕ್ತರು ಹೋಗುವಂತಿಲ್ಲ

    ಶಿರೂರು ಮಠಕ್ಕೆ 3 ದಿನ ಭಕ್ತರು ಹೋಗುವಂತಿಲ್ಲ

    ಉಡುಪಿ: ಶಿರೂರು ಮಠವನ್ನು ಪೊಲೀಸರು ಜುಲೈ 19ರಿಂದ 21ರವರೆಗೆ ಅಂದರೆ ಇಂದಿನಿಂದ ಶನಿವಾರದವರಗೆ ಸುಪರ್ದಿಗೆ ಪಡೆದಿದ್ದು, ಸಾರ್ವಜನಿಕರಿಗೆ ಮಠ ಪ್ರವೇಶಕ್ಕೆ ನಿಷೇಧಿಸಲಾಗಿದೆ.

    ಶಿರೂರು ಶ್ರೀಗಳಿಗೆ ವಿಷ ಪ್ರಾಶನ ಮಾಡಿಸಲಾಗಿದೆ ಎಂಬುದರ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರು ಹಿರಿಯಡ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಾಕ್ಷ್ಯಾಧಾರ ಪರಿಶೋಲನೆ ಹಿನ್ನೆಲೆಯಲ್ಲಿ ಪೊಲೀಸರು ಇಂದಿನಿಂದ ಮೂರು ದಿನಗಳ ಮಠದ ಪರಿಶೀಲನೆ ನಡೆಸಲಿದ್ದಾರೆ. ತನಿಖೆಗೆ ತೊಂದರೆ ಆಗದಿರಲಿ ಎಂಬ ಸಾರ್ವಜನಿಕರಿಗೆ ಮಠದ ಪ್ರವೇಶವನ್ನು ನಿರ್ಭಂಧಿಸಲಾಗಿದೆ ಎಂದು ಎಸ್.ಪಿ. ಲಕ್ಷ್ಮಣ್ ನಿಂಬರ್ಗಿ ಮಾಹಿತಿ ನೀಡಿದ್ದಾರೆ.

    ಸಾವಿಗೆ ಬೇರೆ ಕಾರಣಗಳಿದೆಯಾ? ವಿಷಪ್ರಾಶನ ಆದಂತಹ ಕೆಲವು ಸಂಶಯಗಳನ್ನು ಕೆಎಂಸಿಯ ವೈದ್ಯರು ಹೇಳಿರುತ್ತಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು. ಇದೊಂದು ಅನುಮಾನಸ್ಪದವಾದ ಸಾವಾಗಿದ್ದು, ಹೀಗಾಗಿ ಈ ಸಾವಿಗೆ ನಿಖರ ಕಾರಣವೇನೆಂದು ನಮಗೆ ಪೊಲೀಸ್ ತನಮಿಖೆಯ ಮೂಲಕ ತಿಳೀದುಬರಬೇಕು ಅಂತ ದೂರಿನಲ್ಲಿ ಲಾತವ್ಯ ತಿಳಿಸಿದ್ದಾರೆ.

  • ಶಿರೂರು ಶ್ರೀಗಳ ಕೊನೆಯ ಮಾತು

    ಶಿರೂರು ಶ್ರೀಗಳ ಕೊನೆಯ ಮಾತು

    ಬೆಂಗಳೂರು: ಶಿರೂರು ಶ್ರೀಗಳು ಪತ್ರಕರ್ತರೊಂದಿಗೆ ಪಟ್ಟದ ದೇವರ ವಿಚಾರವಾಗಿ ಮಾತನಾಡಿರುವ ವಿಡಿಯೋವೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಶ್ರೀಗಳ ಕೊನೆಯ ಮಾತು:
    ನಾನು ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದರಿಂದ ಪಟ್ಟದ ದೇವರ ವಿಗ್ರಹಗಳನ್ನು ಕೃಷ್ಣ ಮಠಕ್ಕೆ ನೀಡಿದ್ದೆ. ಆದ್ರೆ ಈಗ ಕೃಷ್ಣ ಮಠ ನನ್ನ ವಿಗ್ರಹಗಳನ್ನು ಮರಳಿ ಕೊಡುತ್ತಿಲ್ಲ. ನನನಗೆ ನನ್ನ ವಿಗ್ರಹಗಳು ಬೇಕು. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ಸಹ ನಾನು ಸಿದ್ಧ. ನನ್ನ ವಿಗ್ರಹಗಳನ್ನು ಪಡೆಯೋದಕ್ಕಾಗಿ ಸಮಯ ಬಂದಾಗ ಕ್ರಿಮಿನಲ್ ಕೇಸ್ ಹಾಕುತ್ತೇನೆ ಅಂತ ಹೇಳಿದ್ದರು.

    ಕೃಷ್ಣ ನನ್ನ ಸ್ವತ್ತು ಅಲ್ಲ, ರಾಮ ನನ್ನ ಸ್ವತ್ತು ಅಲ್ಲ, ವಿಠಲ್ ನನ್ನ ಸ್ವತ್ತು. ನಾನು ನನ್ನ ವಿಗ್ರಹಗಳನ್ನು ಕೇಳಿದರು ಕೊಡುತ್ತಿಲ್ಲ. ಕೃಷ್ಣ ಮಠದೊಳಗೆ ಗನ್ ಮ್ಯಾನ್ ಗಳನ್ನು ನೇಮಿಸಿಕೊಳ್ಳಲಾಗಿದೆ. ಗನ್ ಮ್ಯಾನ್ ವ್ಯವಸ್ಥೆ ಬೇಕಾಗಿರೋದು ನನಗೆ ಆದರೆ ಕೃಷ್ಣ ಮಠದಲ್ಲಿ 50 ಜನ ಗನ್ ಮ್ಯಾನ್‍ಗಳನ್ನು ಇರಿಸಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಎಲ್ಲ ಸ್ವಾಮಿಗಳು ಒಟ್ಟಾಗಿ ಇದ್ದಾರೆ. ಎಲ್ಲ ಸ್ವಾಮಿಗಳು ಲೀಡರ್ ಹೇಳಿದರೆ ಮಾತ್ರ ವಿಗ್ರಹಗಳನ್ನು ಕೊಡುತ್ತೇವೆ ಅಂತಾ ಹೇಳುತ್ತಿದ್ದಾರೆ ಎಂದು ಪೇಜಾವರ ಶ್ರೀಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.

    https://www.youtube.com/watch?v=oIVAFQigp0M

  • ಮಠಾಧಿಪತಿ ಮೇಲೆ ಆರೋಪ ಮಾಡುವುದು ಸರಿಯಲ್ಲ – ಪೇಜಾವರ ಶ್ರೀ

    ಮಠಾಧಿಪತಿ ಮೇಲೆ ಆರೋಪ ಮಾಡುವುದು ಸರಿಯಲ್ಲ – ಪೇಜಾವರ ಶ್ರೀ

    ಹುಬ್ಬಳ್ಳಿ: ಕಳೆದ ಎರಡು ವರ್ಷಗಳಿಂದ ಶಿರೂರು ಶ್ರೀಗಳು ಆನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಹೆಚ್ಚಿನ ಸಮಯ ಕಳೆದಿದ್ದಾರೆ. ಆದರೆ ಅವರ ಸಾವಿನ ಕುರಿತು ಮಠಾಧಿಪತಿಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

    ಶಿರೂರು ಲಕ್ಷ್ಮೀವರತೀರ್ಥ ಶ್ರೀಗಳ ಅಗಲಿಕೆ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಗಳ ಅಗಲಿಕೆ ನೋವು ತಂದಿದೆ. ಆದರೆ ಸ್ವಾಮೀಜಿಗಳು ಯಾರನ್ನು ಕೊಲೆ ಮಾಡುವುದಿಲ್ಲಾ. ಅವರದು ಒಂದು ಸಹಜ ಸಾವು ಎಂದು ಪೇಜಾವರ ಶ್ರೀಗಳು ಹೇಳಿದರು.

    ಸಾವಿನ ಸಂಶಯದ ಕುರಿತ ಮಾಧ್ಯಮಗಳ ಪ್ರಶ್ನೆಗೆ, ವಿಷ ಪ್ರಾಶನ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದ ಪೇಜಾವರ ಶ್ರೀ ಗಳು, ಶಿರೂರು ಸ್ವಾಮೀಜಿಗಳಿಗೆ ವಿಷ ನೀಡುವ ಪ್ರಮೇಯವೇ ಇಲ್ಲ. ಸ್ವಾಮಿಗಳು ಯಾರನ್ನು ಕೊಲೆ ಮಾಡುವುದಿಲ್ಲ. ಅಲ್ಲದೆ ಅವರನ್ನು ಕೊಲೆ ಮಾಡಿ ಪಟ್ಟಕ್ಕೆ ಏರುವ ಉದ್ದೇಶ ಯಾರಿಗೂ ಇಲ್ಲ. ಕಾರಣ ಇಲ್ಲದೆ ಯಾರ ಮೇಲು ಸುಮ್ಮನೆ ಆರೋಪ ಮಾಡಬಾರದು. ಶ್ರೀಗಳ ಕೊಲೆ ಎಂಬುದು ಶುದ್ಧ ಸುಳ್ಳು. ಅವರದು ಒಂದು ಸಹಜ ಸಾವು. ಅವರ ಸಾವಿನ ಹಿಂದೆ ಸಂಶಯ ಮಾಡುವುದು ಸರಿಯಲ್ಲಾ. ಕಳೆದ ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದರು, ಕಳೆದ ಎರಡು ಮೂರ ವರ್ಷಗಳ ಹಿಂದಿನಿಂದ ಪೂಜೆ ಮಾಡುವುದನ್ನು ಸಹ ಬಿಟ್ಟಿದ್ದಾರೆ. ಹೀಗಾಗಿ ಅವರ ಸಾವಿನ ಹಿಂದೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲಾ ಎಂದರು.

    ಬುಧವಾರ ಬೆಳಗ್ಗೆ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದರು. ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗಿಗುತ್ತಲೇ ಇತ್ತು. ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶಿರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರದ ದಿನಗಳಲ್ಲಿ ಪದೇ ಪದೇ ಆಸ್ಪತ್ರೆಗಳಿಗೆ ಚೆಕಪ್ ಗೆ ತೆರಳುತ್ತಿದ್ದ ಶ್ರೀಗಳು ಒಮ್ಮೆ ಗುಣಮುಖರಾದ್ರೆ ಮತ್ತೊಮ್ಮೆ ಅನಾರೋಗ್ಯಕ್ಕೆ ಈಡಾಗುತ್ತಲೇ ಇದ್ದರು.

  • ಶಿರೂರು ಶ್ರಿಗಳ ದೇಹದಲ್ಲಿ ವಿಷಕಾರಕ ಅಂಶ ಪತ್ತೆ- ಸಮಗ್ರ ತನಿಖೆಗೆ ಕೇಮಾರು ಶ್ರೀ ಆಗ್ರಹ

    ಶಿರೂರು ಶ್ರಿಗಳ ದೇಹದಲ್ಲಿ ವಿಷಕಾರಕ ಅಂಶ ಪತ್ತೆ- ಸಮಗ್ರ ತನಿಖೆಗೆ ಕೇಮಾರು ಶ್ರೀ ಆಗ್ರಹ

    ಉಡುಪಿ: ಇಲ್ಲಿನ ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿಯವರ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕೇಮಾರು ಮಠಾಧೀಶ ಶ್ರೀಈಶ ವಿಠಲದಾಸ ಸ್ವಾಮೀಜಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವೇಳೆ ಫುಡ್ ಪಾಯಿಸನ್ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಮಠದಲ್ಲಿ ಎಲ್ಲರು ಊಟ ಮಾಡಿದ್ದಾರೆ. ಆದ್ರೆ ಸ್ವಾಮೀಜಿಯೊಬ್ಬರಿಗೆ ಮಾತ್ರ ಯಾಕೆ ಫುಡ್ ಪಾಯಿಸನ್ ಆಗ್ಬೇಕು ಅಂತ ಪ್ರಶ್ನಿಸಿದ್ರು. ಹಾಗೇ ಆಗೋದಾದ್ರೆ ಎಲ್ಲರೂ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಬೇಕಿತ್ತು. ಹೀಗಾಗಿ ಒಂದು ವೇಳೆ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ರು.

    ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಇದೆ ಅಂತ ಡಾಕ್ಟರ್ ಹೇಳಿದ್ದಾರೆ. ಆದ್ರೆ ಅದರ ಬಗ್ಗೆ ಸಮಗ್ರ ತನಿಖೆ ನಡೆಸಲಿ. ವೈದ್ಯರು ಬರೀ ಹೇಳಿದ್ರೆ ಸಾಲದು ಆ ಬಗ್ಗೆ ವರದಿ ಕೊಡಲಿ. ಅಲ್ಲದೇ ಪೊಲೀಸರು ಕೂಡ ಸಮಗ್ರ ತನಿಖೆ ನಡೆಸಬೇಕಿದೆ. ಹಾಗೆಯೇ ಸರ್ಕಾರ ಕೂಡಲೇ ಮಧ್ಯಪ್ರವೇಶಿಸದಿದ್ದರೆ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ ಅಂತ ಅವರು ಸರ್ಕಾರವನ್ನು ಆಗ್ರಹಿಸಿದರು.

    ಈಗಾಗಲೇ ಸಿಎಂ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದೇವೆ. ಆದ್ರೆ ಸಿಎಂ ಅವರು ಐಜಿಗೆ ಹೇಳಿ ಅದನ್ನು ಸರಿಮಾಡುತ್ತೇನೆ ಅಂದಿದ್ದಾರೆಂಬ ಮಾಹಿತಿ ಇದೆ. ಆದ್ರೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಅಂದ್ರು. ಆದ್ರೆ ಇಲ್ಲಿಯವರೆಗೂ ಯಾವುದು ಸರಿಯಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಿ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಲಿ. ಈ ಮೂಲಕ ಗೊಂದಲಗಳನ್ನು ಪರಿಹಾರ ಮಾಡಲಿ ಅಂತ ಆಗ್ರಹಿಸಿದ್ರು.

    ನಾಲ್ಕೈದು ದಿನದ ಹಿಂದೆಯಷ್ಟೇ ಸ್ವಾಮೀಜಿಗಳ ಜೊತೆ ಮಾತನಾಡಿದ್ದೇನೆ. ನನಗೆ ನನ್ನ ದೇವರು ಬೇಕು. ಹೀಗಾಗಿ ನಾನು ಕಾನೂನಾತ್ಮಕ ಹೋರಾಟ ಮಾಡುತ್ತೇನೆ. ಹೀಗಾಗಿ ಅವರು ಪಟ್ಟದ ದೇವರು ಸಿಕ್ಕಿಲ್ಲ ಅಂತ ಬಿಕ್ಕಿ ಬಿಕ್ಕಿ ಅಳುತ್ತಾ ಇದ್ದರು. ಆವಾಗ ನಾನು ಕಾನೂನಾತ್ಮಕ ರೀತಿಯಲ್ಲಿ ಹೋರಾಟ ಮಾಡುವ. ಅದರ ಬಗ್ಗೆ ನೀವು ಯಾವುದೇ ರೀತಿಯಲ್ಲಿ ಟೆನ್ಶನ್ ತೆಗೆದುಕೊಳ್ಳಬೇಡಿ ಅಂತ ಹೇಳಿದ್ದೆ. ಇದೇ ವೇಳೆ ನಾನು ಸಾಯುವುದಿಲ್ಲ. 71 ವರ್ಷ ಬದುಕುತ್ತೇನೆ. ನಂಗೇನೂ ತೊಂದ್ರೆ ಇಲ್ಲ ಅಂತಾನೂ ಹೇಳಿದ್ದರು. ಹೀಗಾಗಿ ಆರೋಗ್ಯದಲ್ಲಿದ್ದವರು ತಕ್ಷಣವೇ ಮೃತಪಟ್ಟಿರುವುದು ಭಕ್ತಾಧಿಗಳಿಗೆ ಗೊಂದಲು ಉಂಟಾಗಿದೆ ಅಂತ ಹೇಳಿದ್ರು.

    ನನ್ನ ಜೊತೆ ಮಾತಾಡಿದ ಮರುದಿನವೇ ವನಮಹೋತ್ಸವ ಆಚರಿಸಿಕೊಂಡು ಅತ್ಯಂತ ಲವಲವಿಕೆಯಿಂದಲೇ ಇದ್ದರು. ಒತ್ತಡದಲ್ಲಿದ್ದರು ಆದ್ರೆ ಸಾಯುವಂತಹ ಅನಾರೋಗ್ಯ ಏನೂ ಅವರಿಗೆ ಇರಲಿಲ್ಲ ಅಂದ್ರು. ಒಟ್ಟಿನಲ್ಲಿ ಬಡವರ ಪರ ಇದ್ದವರು, ಕಲಾಪೋಷಕರನ್ನು ಪೋಷಿಸಿದ ಒಬ್ಬೊಳ್ಳೆಯ ಸ್ವಾಮೀಜಿ, ಜಾತಿ ಮತದ ಎಲ್ಲೆಯನ್ನು ಮೀರಿ ಎಲ್ಲರನ್ನು ಪ್ರೀತಿಸುತ್ತಿದ್ದರು ಅಂದ್ರು.

  • ಶ್ರೀಗಳ ಆರೋಗ್ಯದ ಬಗ್ಗೆ ವಿಚಾರಿಸುವ ಕುರಿತು ಯೋಚಿಸುತ್ತಿರುವಾಗ್ಲೇ ಸುದ್ದಿ ಕೇಳಿ ಆಘಾತವಾಯ್ತು- ವೀರೇಂದ್ರ ಹೆಗ್ಗಡೆ

    ಶ್ರೀಗಳ ಆರೋಗ್ಯದ ಬಗ್ಗೆ ವಿಚಾರಿಸುವ ಕುರಿತು ಯೋಚಿಸುತ್ತಿರುವಾಗ್ಲೇ ಸುದ್ದಿ ಕೇಳಿ ಆಘಾತವಾಯ್ತು- ವೀರೇಂದ್ರ ಹೆಗ್ಗಡೆ

    ಮಂಗಳೂರು: ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಶಿರೂರು ಶ್ರೀಗಳ ಆರೋಗ್ಯ ಸರಿಯಿಲ್ಲವೆಂದು ತಿಳಿದುಪಟ್ಟೆ. ಹೀಗಾಗಿ ಸ್ವಾಮಿಯ ಪೂಜೆ ಸಲ್ಲಿಸಿದ ಬಳಿಕ ಅವರ ಆರೋಗ್ಯದ ಬಗ್ಗೆ ವಿಚಾರಿಸುವ ಕುರಿತು ಯೋಚಿಸುತ್ತಿರುವಾಗಲೇ ಶಿರೂರು ಶ್ರೀ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ ಅಂತ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದೀಗ ಶಿರೂರು ಶ್ರೀಗಳು ನಮ್ಮನ್ನು ಅಗಲಿ ಹೋಗಿದ್ದಾರೆ. ಅವರು ಅಷ್ಟಮಠದ ಸನ್ಯಾಸಿಯಾಗಿರದೇ, ಖ್ಯಾತ ಸಂಗೀತಗಾರ, ಈಜುಪಟು ಹಾಗೂ ವಿದ್ವಾಂಸರಾಗಿದ್ದರು. ಇಷ್ಟು ಮಾತ್ರವಲ್ಲದೇ ಒಳ್ಳೆಯ ಸ್ನೇಹ ಜೀವಿಯಾಗಿದ್ದರು. ನಮ್ಮೊಂದಿಗೆ ಆತ್ಮೀಯವಾಗಿ ಒಡನಾಟ ಇಟ್ಟುಕೊಂಡಿದ್ದರು ಅಂತ ಹೇಳಿದ್ರು.

    ಶ್ರೀಗಳು ಮಠದಲ್ಲಿನ ಮೂಲವಿಗ್ರಹಕ್ಕಾಗಿ ಕಾನೂನು ಹೋರಾಟವನ್ನು ಮಾಡುತ್ತಿದ್ದರು. ಅಲ್ಲದೇ ಅವರು ಅದರಿಂದಾಗಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೂ ಎಂದು ತಿಳಿದು ಬಂದಿದ್ದರಿಂದ ಕಳೆದ 2 ತಿಂಗಳ ಹಿಂದೆ ನಮ್ಮ ಆರೋಗ್ಯ ಕೇಂದ್ರದ ಪ್ರತಿನಿಧಿಯನ್ನು ಅವರಲ್ಲಿಗೆ ಕಳುಹಿಸಿಕೊಟ್ಟಿದ್ದೆ. ಆದರೆ ಅವರು ಅದನ್ನು ತಿರಸ್ಕರಿಸಿ, ಅಷ್ಟೇನು ತೊಂದರೆಯಿಲ್ಲ ಎಂದು ಹೇಳಿದ್ದರು.

    ಶ್ರೀಗಳು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿಬೇಕಿತ್ತು. ಮೂಲವಿಗ್ರಹದ ಕುರಿತು ನಡೆಯುತ್ತಿದ್ದರ ಬಗ್ಗೆ ಯಾವುದೇ ಮಾಹಿತಿ ನನ್ನ ಬಳಿ ಹಂಚಿಕೊಂಡಿರಲಿಲ್ಲ. ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಯಾಕೆ ಅವರು ಅಷ್ಟೊಂದು ದೃಢ ನಿರ್ಧಾರ ತೆಗೆದುಕೊಂಡರು ಎಂದು ಗೊತ್ತಾಗುತ್ತಿಲ್ಲ. ಅಲ್ಲದೇ ಅವರು ನೇರ-ನುಡಿಗೆ ಹೆಸರಾಗಿದ್ದರೂ, ಹೀಗಾಗಿಯೇ ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಹೆಗ್ಗಡೆಯವರು ತಿಳಿಸಿದ್ರು.

    55 ವರ್ಷದ ಶಿರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ಬುಧವಾರ ಬೆಳಗ್ಗೆ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ರಕ್ತವಾಂತಿ ಮಾಡಿದ್ದರಿಂದ ನಿನ್ನೆ ಸಂಜೆಯಿಂದಲೇ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಗದೇ ಆಸ್ಪತ್ರೆಯಲ್ಲಿಯೇ ವಿಧಿವಶರಾಗಿದ್ದಾರೆ.

  • ಪಟ್ಟದ ದೇವರನ್ನು ಕೊಡದಿದ್ದರೆ ಕ್ರಿಮಿನಲ್ ಕೇಸ್ ಹಾಕ್ತೀನಿ- ಶಿರೂರು ಶ್ರೀ

    ಪಟ್ಟದ ದೇವರನ್ನು ಕೊಡದಿದ್ದರೆ ಕ್ರಿಮಿನಲ್ ಕೇಸ್ ಹಾಕ್ತೀನಿ- ಶಿರೂರು ಶ್ರೀ

    ಉಡುಪಿ: ತನ್ನ ಮಠದ ಪಟ್ಟದ ದೇವರನ್ನು ವಾಪಸ್ ಕೊಡದೇ ಇದ್ದರೆ ಕ್ರಿಮಿನಲ್ ಕೇಸು ಹಾಕೋದಾಗಿ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಈ ಮೂಲಕ ಕಳೆದ ಕೆಲ ತಿಂಗಳಲ್ಲಿ ನಡೆಯುತ್ತಿರುವ ಅಷ್ಟಮಠಗಳ ನಡುವಿನ ಜಟಾಪಟಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಯಿದೆ.

    ನಂಬಿಕಸ್ತರೆಂದು ನೀಡಿದ ವಸ್ತುವನ್ನು ವಾಪಸ್ ನೀಡದೇ ಅವರ ಬಳಿಯೇ ಇಟ್ಟುಕೊಳ್ಳುವುದು ದರೋಡೆಗೆ ಸಮನಾದುದು ಎಂದಿರುವ ಶಿರೂರು ಸ್ವಾಮೀಜಿ ಪೇಜಾವರ ಸ್ವಾಮೀಜಿ ಸಹಿತ ತನ್ನನ್ನು ವಿರೋಧಿಸುತ್ತಿರುವ ಎಲ್ಲಾ ಅಷ್ಟಮಠಾಧೀಶರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

    ಶಿರೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿಷ್ಯ ಸ್ವೀಕಾರ ನನ್ನ ತೀರ್ಮಾನಕ್ಕೆ ಬಿಟ್ಟ ವಿಚಾರ. ಪಟ್ಟದ ದೇವರನ್ನು ವಾಪಸ್ ನೀಡದೇ ಇತರ ಮಠಾಧೀಶರು ದ್ರೋಹ ಮಾಡಿದ್ದಾರೆ ಎಂಬ ಅಭಿಪ್ರಾಯದಲ್ಲಿದ್ದಾರೆ. ತಾನು ದಿನಂಪ್ರತಿ ಪೂಜೆ ಮಾಡುವ ಪಟ್ಟದ ದೇವರನ್ನು ವಾಪಸ್ ಕೊಡಿ ಎಂದು ಹೇಳಿದ್ದಾರೆ.

    ಏನಿದು ಜಟಾಪಟಿ?
    ಅಷ್ಟಮಠಾಧೀಶರು ಪಾಲಿಸಬೇಕಾದ ನಿಯಮಗಳನ್ನು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪಾಲಿಸುತ್ತಿಲ್ಲ ಎಂಬ ಬಗ್ಗೆ ಕೆಲ ತಿಂಗಳ ಹಿಂದೆ ಆರೋಪ ಕೇಳಿಬಂದಿತ್ತು. ಇದೇ ಸಂದರ್ಭದಲ್ಲಿ ಶಿರೂರು ಸ್ವಾಮೀಜಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಸಂದರ್ಭ ದಿನನಿತ್ಯ ಪೂಜೆ ಮಾಡುವ ಪಟ್ಟದ ದೇವರನ್ನು ಕೃಷ್ಣಮಠದಲ್ಲಿ ಇರಿಸಿದ್ದರು. ಅಂದಿನಿಂದ ಅದಮಾರು ಸ್ವಾಮೀಜಿ ಪಟ್ಟದ ದೇವರಿಗೆ ಪೂಜೆ ನಡೆಸುತ್ತಿದ್ದಾರೆ. ಈಗ ಪಟ್ಟದ ದೇವರನ್ನು ವಾಪಸ್ ನೀಡಲು ಅಷ್ಟಮಠಾಧೀಶರು ನಿರಾಕರಿಸುತ್ತಿದ್ದಾರೆ. ಅಂದಿನಿಂದ ಈ ಜಟಾಪಟಿ ನಡೆಯುತ್ತಿದೆ. ಇದನ್ನೂ ಓದಿ: ಅಷ್ಟಮಠಗಳ ಶ್ರೀಗಳ ವಿರುದ್ಧ ಕೇವಿಯಟ್ ತಂದ ಶೀರೂರು ಶ್ರೀ

    ಶ್ರೀಗಳೇ ಮಠದ ಪಟ್ಟದ ದೇವರಿಗೆ ಪೂಜೆ ಮಾಡಬೇಕೆಂಬ ನಿಯಮವಿದೆ. ಒಂದು ವೇಳೆ ಈ ಅವಧಿಯಲ್ಲಿ ಶ್ರೀಗಳು ಅನಾರೋಗ್ಯಕ್ಕೆ ಒಳಗಾದರೆ ಅವರ ಶಿಷ್ಯ ಪೂಜೆ ಮಾಡಬೇಕಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶೀರೂರು ಸ್ವಾಮೀಜಿಯ ಶಿಷ್ಯ ಸ್ವೀಕಾರದ ಕುರಿತು ಚರ್ಚೆ ಆರಂಭವಾಗಿತ್ತು. ಇದೀಗ ಮತ್ತೆ ಚರ್ಚೆ ಆರಂಭವಾಗಿದೆ. ಶಿರೂರು ಸ್ವಾಮೀಜಿ ಕಡ್ಡಾಯವಾಗಿ ಶಿಷ್ಯ ಸ್ವೀಕಾರ ಮಾಡಬೇಕೆಂಬ ವಿಚಾರಕ್ಕೆ ಮತ್ತೆ ಜೀವ ಬಂದಿದೆ.

    ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶಿರೂರು ಸ್ವಾಮೀಜಿ ಮುಂದಾದಾಗ ಸಾಕಷ್ಟು ಗೊಂದಲ ಶುರುವಾಗಿತ್ತು. ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡ ವೇಳೆ ಬಹಿರಂಗಗೊಂಡ ವಿಡಿಯೋ ತುಣುಕು ಶಿರೂರು ಸ್ವಾಮೀಜಿಯ ವಿರುದ್ಧ ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಅವರ ಹೇಳಿಕೆಗಳು ಮಾಧ್ಯಮದಲ್ಲಿ ಪ್ರಕಟವಾದ ಕಾರಣ ಧಾರ್ಮಿಕವಾಗಿ ಬಹಳ ಚರ್ಚೆಗಳಾಗಿದೆ. ಈ ಕಾರಣಗಳಿಗೆ ಶಿರೂರು ಸ್ವಾಮಿಜಿ ವಿರುದ್ಧ ಇತರ ಮಠಾಧೀಶರು ತಿರುಗಿಬಿದ್ದಿದ್ದರು.

  • ಇಂದೂ ರಾಜ್ಯದಲ್ಲಿ ನಾಮಿನೇಷನ್ ಭರಾಟೆ – ಉಡುಪಿಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಶಿರೂರು ಶ್ರೀ

    ಇಂದೂ ರಾಜ್ಯದಲ್ಲಿ ನಾಮಿನೇಷನ್ ಭರಾಟೆ – ಉಡುಪಿಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಶಿರೂರು ಶ್ರೀ

    ಬಳ್ಳಾರಿ: ಮೊಳಕಾಲ್ಮೂರಿನಲ್ಲಿ ಸಂಸದ ಶ್ರೀರಾಮುಲು, ಬಳ್ಳಾರಿಯಲ್ಲಿ ಸೋಮಶೇಖರ ರೆಡ್ಡಿ, ಸಣ್ಣ ಫಕ್ಕೀರಪ್ಪ, ಉಡುಪಿಯಲ್ಲಿ ಪಕ್ಷೇತರರಾಗಿ ಶಿರೂಶ್ರೀಗಳು ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಲಿದ್ದಾರೆ.

    ಶ್ರೀರಾಮುಲು ನಾಮಪತ್ರ ಸಲ್ಲಿಕೆ ವೇಳೆ ಯಡಿಯೂರಪ್ಪ, ಎಂಪಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಜನಾರ್ದನರೆಡ್ಡಿ ಸೇರಿದಂತೆ ಹಲವು ಹಿರಿ ನಾಯಕರು ಉಪಸ್ಥಿತರಿರಲಿದ್ದಾರೆ.

    ಮೊಳಕಾಲ್ಮೂರಿನಲ್ಲಿ ಹೆಲಿಕಾಪ್ಟರ್ ಇಳಿಸಲು ಚುನಾವಣಾಧಿಕಾರಿಗಳು ಇನ್ನೂ ಅವಕಾಶ ನೀಡಿಲ್ಲ. ಇದು ಬಿಜೆಪಿ ನಾಯಕರಿಗೆ ತಲೆಬಿಸಿಯಾಗಿದೆ. ಶ್ರೀರಾಮುಲು ನಾಮಪತ್ರ ಸಲ್ಲಿಕೆಗೆ ಮುನ್ನ ಚಿತ್ರದುರ್ಗದ ಎಲ್ಲಾ ಮಠಗಳಿಗೆ ಭೇಟಿ ನೀಡಲಿದ್ದಾರೆ. ನಂತ್ರ ಸಾವಿರಾರು ಕಾರ್ಯಕರ್ತರ ಜೊತೆ ರೋಡ್ ಶೋ ಮೂಲಕ ಮೊಳಕಾಲ್ಮೂರಿಗೆ ತೆರಳಿ ನಾಮಿನೇಷನ್ ಫೈಲ್ ಮಾಡಲಿದ್ದಾರೆ. ಈ ಮೂಲಕ ಗಲಾಟೆ ಮಾಡಿಸಿದ್ದ ತಿಪ್ಪೇಸ್ವಾಮಿಗೆ ತಿರುಗೇಟು ನೀಡಲಿದ್ದಾರೆ.

    ಶ್ರೀರಾಮುಲು ಬಳ್ಳಾರಿ ನಿವಾಸದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಬೆಳಗ್ಗೆಯಿಂದಲೇ ನಡೆಯುತ್ತಿವೆ.