Tag: ಶಿರಾ ಉಪಚುನಾವಣೆ

  • ಕೊಟ್ಟ ಮಾತು ಉಳಿಸಿಕೊಂಡ ಸಿಎಂ – ಮದಲೂರು ಕೆರೆಗೆ ತಲುಪಿದ ಹೇಮಾವತಿ ನೀರು

    ಕೊಟ್ಟ ಮಾತು ಉಳಿಸಿಕೊಂಡ ಸಿಎಂ – ಮದಲೂರು ಕೆರೆಗೆ ತಲುಪಿದ ಹೇಮಾವತಿ ನೀರು

    ತುಮಕೂರು: ಇಂದು ಹೇಮಾವತಿ ನಾಲೆಯಿಂದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿದು ಬಂದಿದ್ದು, ಸಿಎಂ ಯಡಿಯೂರಪ್ಪ ಉಪಚುನಾವಣೆ ವೇಳೆ ಶಿರಾ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

    ಕಳೆದ ತಿಂಗಳು ನಡೆದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಮದಲೂರು ಕೆರೆಗೆ ನೀರನ್ನು ಹರಿಸುತ್ತೇವೆ ಎಂಬ ಪ್ರಮುಖ ಅಜೆಂಡಾವನ್ನು ಇಟ್ಟುಕೊಂಡಿತ್ತು. ಅದರಂತೆ ಇಂದು ಮದಲೂರು ಕೆರೆಗೆ ನೀರು ಬಂದು ತಲುಪಿದೆ. ನವೆಂಬರ್ 30ರಂದು ಕಳ್ಳಂಬೆಳ್ಳ ಕೆರೆಯಿಂದ ನೀರು ಬಿಡಲಾಗಿತ್ತು. ಸತತ 6 ದಿನಗಳ ಬಳಿಕ ಇಂದು ಸಂಜೆ 6 ಗಂಟೆ ಸುಮಾರಿಗೆ ಮದಲೂರು ಕೆರೆಗೆ ನೀರು ಹರಿದು ಬಂದಿದೆ.

    250 ಕ್ಯುಸೆಕ್ ನೀರು ಹರಿಯುತಿದ್ದು ಒಂದು ತಿಂಗಳ ಬಳಿಕ ಮದಲೂರು ಕೆರೆ ಭರ್ತಿಯಾಗಲಿದೆ. ಶಿರಾ ತಾಲೂಕಿನ 40 ಹಳ್ಳಿಗಳಿಗೆ ಕುಡಿಯುವ ನೀರು ಈ ಕೆರೆಯಿಂದ ಒದಗಿಸಲಾಗುತ್ತದೆ. ಉಪಚುನಾವಣೆಯ ಪ್ರಚಾರದ ವೇಳೆ ಸಿಎಂ ಯಡಿಯೂರಪ್ಪ ಕೆರೆಗೆ ನೀರು ಹರಿಸುವ ವಾಗ್ದಾನ ಮಾಡಿದ್ದರು. ಅದರಂತೆ ನೀರು ಹರಿಸಿದ್ದಾರೆ.

  • ಶಿರಾ ಉಪಚುನಾವಣೆ – ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ

    ಶಿರಾ ಉಪಚುನಾವಣೆ – ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ

    ತುಮಕೂರು: ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಶಿರಾದಲ್ಲೂ ಬಿಜೆಪಿ ಮುನ್ನಡೆಯಲ್ಲಿದೆ.

    ಒಟ್ಟು  7,043 ಮತಗಳ ಪೈಕಿ ಬಿಜೆಪಿ ರಾಜೇಶ್ ಗೌಡ 3,224, ಕಾಂಗ್ರೆಸ್ಸಿನ ಟಿ.ಬಿ.ಜಯಚಂದ್ರ 2,429, ಜೆಡಿಎಸ್ ಅಮ್ಮಾಜಮ್ಮಾ1,135 , ಸಿಪಿಎಂ 69, ನೋಟಾಗೆ 37 ಮತಗಳು ಬಿದ್ದಿದೆ.

    ಶಿರಾದಲ್ಲಿ 2,15,694 ಮತದಾರರು ಇದ್ದು 1,77,645 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 6,821 ಅಂಚೆ ಮತಗಳು ಚಲಾವಣೆ ಆಗಿತ್ತು.

  • ಕರ್ನಾಟಕದಲ್ಲಿ ಸ್ಟಾರ್ ಕ್ಯಾಂಪೇನ್‍ನಿಂದ ಚುನಾವಣೆ ಗೆಲ್ಲಲು ಆಗಲ್ಲ: ಎಚ್‍ಡಿಕೆ

    ಕರ್ನಾಟಕದಲ್ಲಿ ಸ್ಟಾರ್ ಕ್ಯಾಂಪೇನ್‍ನಿಂದ ಚುನಾವಣೆ ಗೆಲ್ಲಲು ಆಗಲ್ಲ: ಎಚ್‍ಡಿಕೆ

    – ಮಂಡ್ಯ ಚುನಾವಣೆಯೇ ಬೇರೆ, ಉಪಚುನಾವಣೆಯೇ ಬೇರೆ

    ತುಮಕೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳಲ್ಲಿ ಸ್ಟಾರ್ ಕ್ಯಾಂಪೇನ್ ಮಾಡುವುದು ಹೆಚ್ಚಾಗುತ್ತಿದೆ. ಆದರೆ ಸ್ಟಾರ್ ಕ್ಯಾಂಪೇನ್‍ನಿಂದ ಚುನಾವಣೆಯಲ್ಲಿ ಗೆಲುವು ಪಡೆಯಲು ಆಗೋದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಆರ್.ಆರ್ ನಗರ ಮತ್ತು ಶಿರಾ ಉಪಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಎಚ್‍ಡಿಕೆ, ಕರ್ನಾಟಕದಲ್ಲಿ ಸ್ಟಾರ್ ಕ್ಯಾಂಪೇನ್‍ಗಳ ಪ್ರಚಾರದಿಂದ ಚುನಾವಣೆ ಗೆಲ್ಲಲು ಆಗಲ್ಲ. ಮಂಡ್ಯ ಚುನಾವಣೆ ಬೇರೆ, ಈ ಉಪ ಚುನಾವಣೆಯೇ ಬೇರೆ. ಕೆಲವರು ಮಂಡ್ಯ ಲೋಕಸಭಾ ಚುನಾವಣೆಯನ್ನು ಆರ್.ಆರ್ ನಗರಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಲೋಕಸಭೆ ಅಭ್ಯರ್ಥಿ ಪರ ಕಾಂಗ್ರೆಸ್ ಬಿಜೆಪಿ, ರೈತ ಸಂಘ ಒಟ್ಟಾಗಿ ಕೆಲಸ ಮಾಡಿದ್ದರು. ಅಲ್ಲದೇ ಮಂಡ್ಯ ಪಕ್ಷೇತರ ಅಭ್ಯರ್ಥಿ ಪರ ಮಾಧ್ಯಮಗಳು ಕೂಡ ಅನುಕಂಪ ತೋರಿದ ಹಿನ್ನೆಲೆಯಲ್ಲಿ ಗೆಲುವು ಪಡೆದರು. ಸ್ಟಾರ್ ಕ್ಯಾಂಪೇನ್ ನಿಂದ ಯಾರು ಗೆದ್ದಿಲ್ಲ. ಸ್ಟಾರ್ ಗಳು ಜನರ ಬಳಿ ಮತ ಕೇಳುತ್ತಾರೆ, ಆ ಬಳಿಕ ಹೋಗುತ್ತಾರೆ. ಆ ಬಳಿಕ ಜನರ ಕಷ್ಟ ಸುಖ ಕೇಳಲು ಬರಲ್ಲ ಎಂದರು.

    ಶಿರಾಗೆ ನೀರು ಕೊಡುವ ವಿಚಾರವಾಗಿ ಸಿಎಂ ಭರವಸೆ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆಗ ನೀರು ಕೊಡದವರು ಈಗ ಕೊಡುತ್ತಾರಾ? ಬೇರೆ ಬೇರೆ ಜಿಲ್ಲೆಗಳಿಂದ ಕೇಸರಿ ಟವೆಲ್ ಹಾಕಿಕೊಡವರನ್ನು ಶಿರಾಗೆ ಕರೆತಂದಿದ್ದಾರೆ. ನೀರು ಕೊಟ್ಟು ಜನರ ವಿಶ್ವಾಸಗಳಿಸೋದಾದರೆ ಸಂಜೆ 7 ಗಂಟೆ ಬಳಿಕ ಕೆಸರಿ ಯುವಕರಿಂದ ಗಲ್ಲಿ ಗಲ್ಲಿ ಸುತ್ತಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

    ಸಮ್ಮಿಶ್ರ ಸರ್ಕಾರ ಬಂದು ಹೊಸ ಸರ್ಕಾರ ಬಂದಿದೆ. ಮುಗಿದ ಅಧ್ಯಾಯ ಮಾತನಾಡೋದು ಬೇಡ. ಜನತೆಯ ಪರಿಸ್ಥಿತಿ ಎಲ್ಲಿಗೆ ತಂದಿದ್ದಾರೆ ಎಂದು ಜನರೆ ಹೇಳುತ್ತಾರೆ. ಮೈತ್ರಿ ಸರ್ಕಾರ ಬೀಳಲು ಯಾರು ಕಾರಣ ಅಂತ ಚರ್ಚಿಸುವ ಸಮಯವಲ್ಲ. ಅಶೋಕ್ ಅವರಿಗೂ ಶಿರಾ ಕ್ಷೇತ್ರಕ್ಕೂ ಸಂಬಂಧವೇನು? ಶಿರಾದಲ್ಲಿ ಎಷ್ಟು ಹಳ್ಳಿ ಇದೆ, ಅವರ ಕಷ್ಟ ಏನು, ಪರಿಸ್ಥಿತಿ ಹೇಗಿದೆ ಅಂತಾ ಅವರಿಗೆ ತಿಳಿದಿದೆಯಾ? ಎಲ್ಲೋ ಬೆಂಗಳೂರಲ್ಲಿ ಕುಳಿತು ಶಿರಾದಲ್ಲಿ ಜನರು ಜೆಡಿಎಸ್ ಗೆಲ್ಲಲ್ಲ ಅಂತಾರೆ. ಆದರೆ ಆಸೆ ಆಮಿಷಗಳಿಗೆ ಶಿರಾ ಜನರು ಬಲಿಯಾಗಿಲ್ಲ. ಸಮ್ಮಿಶ್ರ ಸರ್ಕಾರ ತೆಗೆದು ಸರ್ಕಾರ ರಚನೆ ಮಾಡಿರುವವರಿಗೆ ಈಗಲಾದರೂ ಕೆಲಸ ಮಾಡಿ ಎಂದು ಜನರು ಬುದ್ಧಿ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಶಿರಾ ಉಪಕದನದಲ್ಲಿ ವೋಟಿಗಾಗಿ ನೋಟಿನ ಮಳೆ- ವೈರಲ್ ವೀಡಿಯೋ

    ಶಿರಾ ಉಪಕದನದಲ್ಲಿ ವೋಟಿಗಾಗಿ ನೋಟಿನ ಮಳೆ- ವೈರಲ್ ವೀಡಿಯೋ

    – ಹಣ ಹಂಚಿಸ್ತಿದ್ದಾರಾ ಬಿಜೆಪಿ ಶಾಸಕ ಪ್ರೀತಂಗೌಡ?

    ತುಮಕೂರು: ಜಿಲ್ಲೆಯ ಶಿರಾ ಉಪಚುನಾವಣೆ ಕಣ ರಣರಣ ಅಂತಿದೆ. ನಾಯಕರ ಟಾಕ್‍ಫೈಟ್ ಭರ್ಜರಿಯಾಗಿ ನಡೆಯುತ್ತಿದ್ದು, ಈ ನಡುವೆಯೇ ವೋಟಿಗಾಗಿ ನೋಟು ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಮತದಾರರನನ್ನು ಸೆಳೆಯಲು ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ತಮ್ಮ ಬೆಂಬಲಿಗರ ಮೂಲಕ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್, ಬಿಜೆಪಿ ಮಾಡಿದೆ. ಮಹಿಳೆಯರಿಗೆ ಹರಿಶಿಣ-ಕುಂಕುಮದ ಜೊತೆ ಹಣದ ಆಮಿಷ ನೀಡಲಾಗುತ್ತಿದೆ ಎಂಬ ಬಗ್ಗೆ ವಿಡಿಯೋ ಸಮೇತ ಆರೋಪ ಮಾಡಲಾಗಿದೆ. ಸದ್ಯ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಮಹಿಳೆಯರಿಗೆ ಹಣ ಹಂಚಿಕೆ ಮಾಡುತ್ತಿರುವ ಪ್ರೀತಂ ಗೌಡ ಅವರ ಬೆಂಬಲಿಗರು ಎನ್ನಲಾದ ವ್ಯಕ್ತಿಗಳು, ನಮ್ಮ ಎಂಎಲ್‍ಎ ಪ್ರೀತಂ ಗೌಡ ಹೇಳಿದ್ದಾರೆ ಹಣ ಕೊಡೋಕೆ. ಪ್ರತಿ ಚುನಾವಣೆಯಲ್ಲಿ ಬರೀ ಗಂಡಸರಿಗೆ ಕೈಗೆ ಹಣ ಕೊಟ್ಟು ಹೋಗುತ್ತಾರೆ. ತಾಯಂದಿರಿಗೆ ಏನೂ ಕೊಡಲ್ಲ ಮರೆತು ಹೋಗುತ್ತಾರೆ. ಇವತ್ತು 200 ರೂಪಾಯಿ ಕೊಡ್ತಿವಿ, ನಾಳೆ, ಆಚೆ ನಾಳಿದ್ದು ಕೊಡ್ತಿವಿ. ಚುನಾವಣೆ ಹಿಂದಿನ ದಿನನೂ ಕೊಡೋದನ್ನು ಕೊಡ್ತಿವಿ. ದುಡ್ಡು ತಗೊಂಡು ಬಿಜೆಪಿಗೆ ಮತ ಹಾಕಿ ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಇತ್ತ ಉಪ ಚುನಾವಣೆ ಹೊತ್ತಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮಠಗಳ ಮೊರೆ ಹೋಗಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ನಿನ್ನೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಭೇಟಿ ನೀಡಿದ್ದರು. ನಂತರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಕಾರಜೋಳ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಂಬೇಡ್ಕರ್‍ಗೆ ಕಾಂಗ್ರೆಸ್ ಮಹಾ ಮೋಸ ಮಾಡಿದೆ. ಕಾಂಗ್ರೆಸ್‍ನವರಿಗೆ ದಲಿತರ ಬಳಿ ಮತ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದರು. ಇನ್ನು ಆದಿ ಚುಂಚನಗಿರಿ ಮಠಕ್ಕೂ ಭೇಟಿ ಕೊಟ್ಟ ಅಭ್ಯರ್ಥಿ ರಾಜೇಶ್‍ಗೌಡ, ನಿರ್ಮಲಾನಂದ ಶ್ರೀಗಳ ನೇತೃತ್ವದಲ್ಲಿ 2 ಗಂಟೆಗಳಿಗೂ ಹೆಚ್ಚುಕಾಲ ಕಾಲಭೈರವೇಶ್ವರ ಆರಾಧನೆ ಮಾಡಿದ್ದಾರೆ. ರಾಜೇಶ್‍ಗೌಡಗೆ ಶುಭವಾಗಲಿ ಅಂತ ಶ್ರೀಗಳು ಆರ್ಶೀವಾದ ನೀಡಿದ್ದಾರೆ. ಪೂಜೆ ಬಳಿಕ ಮಾತನಾಡಿದ ರಾಜೇಶ್‍ಗೌಡ, ದಸರಾ ಹಿನ್ನೆಲೆ ಶ್ರೀಗಳ ಭೇಟಿಯಾಗಿದ್ದೇನೆ. ಶಿರಾ ಕ್ಷೇತ್ರದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಕೆಆರ್ ಪೇಟೆ ಉಪಚುನಾವಣೆಯಲ್ಲಿ ಗೆಲುವು ಪಡೆದ ರೀತಿಯಲ್ಲೇ ಶಿರಾದಲ್ಲೂ ಬಿಜೆಪಿ ಕಮಾಲ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

  • ವೈರಲ್ ಆಯ್ತು ಡಿಕೆಶಿ ಪ್ರಚಾರದ ವೇಳೆ ಹಿಡಿದ ಆರ್‌ಸಿಬಿ ಛತ್ರಿ ಫೋಟೋ

    ವೈರಲ್ ಆಯ್ತು ಡಿಕೆಶಿ ಪ್ರಚಾರದ ವೇಳೆ ಹಿಡಿದ ಆರ್‌ಸಿಬಿ ಛತ್ರಿ ಫೋಟೋ

    ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತುಂತುರು ಮಳೆಯಿಂದ ರಕ್ಷಣೆ ಪಡೆಯಲು ಹಿಡಿದಿದ್ದ ಆರ್‌ಸಿಬಿ ಛತ್ರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಶಿರಾ ಉಪ ಚುನಾವಣೆಯ ಪ್ರಚಾರದಲ್ಲಿ ಡಿಕೆ ಶಿವಕುಮಾರ್ ಅವರು ಬ್ಯುಸಿಯಾಗಿದ್ದು, ಈ ವೇಳೆ ಶಿರಾದ ದೊಡ್ಡ ಆಲದ ಮರ ಬಳಿ ಪ್ರಚಾರ ಕಾರ್ಯದಲ್ಲಿದ್ದ ಸಂದರ್ಭದಲ್ಲಿ ದಿಢೀರ್ ಎಂದು ತುಂತುರು ಮಳೆ ಆರಂಭವಾಗಿತ್ತು. ಮಳೆ ಆರಂಭವಾಗುತ್ತಿದಂತೆ ಪ್ರಚಾರ ವಾಹನದಲ್ಲಿದ್ದ ಕಾರ್ಯಕರ್ತರು ಸಮೀಪದಲ್ಲೇ ಇದ್ದ ಅಂಗಡಿಯಿಂದ ಛತ್ರಿಯನ್ನು ತಂದಿದ್ದರು. ತುಂತುರು ಮಳೆಯ ನಡುವೆಯೂ ಕಾಂಗ್ರೆಸ್ ಪಕ್ಷದ ನಾಯಕರು ಪ್ರಚಾರವನ್ನು ಮುಂದುವರಿಸಿದ್ದರು.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಛತ್ರಿ ಹಿಡಿದಿರುವ ಡಿಕೆ ಶಿವಕುಮಾರ್ ಅವರ ಫೋಟೋಗಳನ್ನು ಆರ್‌ಸಿಬಿ ಅಭಿಮಾಣಿಗಳು ವೈರಲ್ ಮಾಡಿದ್ದಾರೆ. ಈ ಫೋಟೋಗಳಿಗೆ ಕಾಮೆಂಟ್ ಮಾಡಿರುವ ಕೆಲವರು, ಡಿಕೆ ಶಿವಕುಮಾರ್ ಆರ್‍ಸಿಬಿ ಛತ್ರಿ ಹಿಡಿದ ಮೇಲೆ ಗೆಲುವಿನ ಲಕ್ಷ್ಮೀ ಆರ್‌ಸಿಬಿಗೆ ಒಲಿಯಿತು ಎಂದು ಬರೆದುಕೊಂಡಿದ್ದಾರೆ. ಮತ್ತೆ ಕೆಲವರು ಡಿಕೆ ಶಿವಕುಮಾರ್ ಅವರಿಗೂ ಗೊತ್ತಾಗಿದೆ ಈ ಸಲ ಕಪ್ ನಮ್ದೆ ಅಂತಾ ಎಂದು ಹೇಳಿದ್ದಾರೆ. ಇದನ್ನೂ ಓದಿ: 40 ವರ್ಷಗಳ ನಂತ್ರ ಕಾವೇರಿಯಲ್ಲಿ ಈಜಾಡಿದ ಡಿಕೆಶಿ

    ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ತಮ್ಮ ಮಗಳು ಹಾಗೂ ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯ ಕಾರ್ಯಕ್ರಮವನ್ನು ಸರಳವಾಗಿ ಮನೆಯಲ್ಲಿಯೇ ಮಾಡಿದ್ದರು. ಆ ಬಳಿಕ ಜೂನ್ 22 ರಂದು ಕಾವೇರಿ ನದಿ ಬಳಿ ತೆರಳಿದ್ದರು. ಬರೋಬ್ಬರಿ 40 ವರ್ಷಗಳ ಬಳಿಕ ಕಾವೇರಿ ನದಿಯಲ್ಲಿ ಈಜಾಡಿ ಸಮಯ ಕಳೆದ್ದರು. ಆ ವೇಳೆಯೂ ಆರ್‌ಸಿಬಿ ಛತ್ರಿಯನ್ನು ಹಿಡಿದು ನದಿ ದಡದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಫೋಟೋವನ್ನು ಹಂಚಿಕೊಂಡಿದ್ದರು.

    ಉಳಿದಂತೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 6.3 ಓವರ್ ಬಾಕಿ ಇರುವಂತೆ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ. 10 ಪಂದ್ಯವಾಡಿ 14 ಅಂಕಗಳೊಂದಿಗೆ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ರನ್ ರೇಟಿನಲ್ಲಿ ಆರ್‌ಸಿಬಿ ಸೂಪರ್ ಜಂಪ್

  • ನಾವು ಮುಂದೆ ರಾಜ್ಯಕ್ಕೆ ಅಭಿವೃದ್ದಿ ಸರ್ಕಾರ ಕೊಡುತ್ತೇವೆ: ಡಿಕೆಶಿ

    ನಾವು ಮುಂದೆ ರಾಜ್ಯಕ್ಕೆ ಅಭಿವೃದ್ದಿ ಸರ್ಕಾರ ಕೊಡುತ್ತೇವೆ: ಡಿಕೆಶಿ

    – ರಾಜ್ಯದಲ್ಲಿ ನಿಷ್ಕ್ರೀಯ ಸರ್ಕಾರವಿದೆ ಅಂದ್ರು ಸಿದ್ದು

    ತುಮಕೂರು: ಶಿರಾ ಉಪಚುನಾವಣೆ ಗರಿಗೆದರಿದ್ದು, ಅಭ್ಯರ್ಥಿಗಳ ಪರ ಮುಖಂಡರು ಮತಪ್ರಚಾರಕ್ಕೆ ಇಳಿದಿದ್ದಾರೆ. ಶಿರಾದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ನಾಮಪತ್ರ ಸಲ್ಲಿಸಿದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಶಿರಾ ಜನರ ಉತ್ಸಾಹ ಫಲಿತಾಂಶ ಏನಾಗುತ್ತದೆ ಎಂಬುದನ್ನು ತೋರಿಸುತ್ತದೆ. ಅನುಭವಿ ಟಿ.ಬಿ ಜಯಚಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಅವರು ಅಧಿಕಾರದಲ್ಲಿದ್ದಾಗ 2500 ಕೋಟಿ ಅನುದಾನ ತಂದು ಅಭಿವೃದ್ದಿ ಗುಡ್ಡೆಗಳನ್ನೇ ನಿರ್ಮಿಸಿದ್ದಾರೆ ಎಂದರು.

    ಈ ಚುನಾವಣೆಯನ್ನು ನಾವ್ಯಾರು ಬಯಸಿರಲಿಲ್ಲ. ಸತ್ಯನಾರಾಯಣ್ ಅವರ ಕೊನೆ ಚುನಾವಣೆ ಎಂದು ಅವರನ್ನು ಗೆಲ್ಲಿಸಿದ್ರು. ಇಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಸರ್ಕಾರದ ಆಡಳಿತ ಸರಿಯಿಲ್ಲ ಎನ್ನುವ ಸಂದೇಶ ನೀಡಬೇಕು. ನಮ್ಮ ಅಭ್ಯರ್ಥಿ ಟಿ.ಬಿ ಜಯಚಂದ್ರ ವಿದ್ಯಾವಂತ, ಬುದ್ಧಿವಂತರಿದ್ದಾರೆ. ನಾವು ಮುಂದೆ ರಾಜ್ಯಕ್ಕೆ ಅಭಿವೃದ್ದಿ ಸರ್ಕಾರ ಕೊಡುತ್ತೇವೆ. ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಶಿರಾ ಉಪಚುನಾವಣೆಯಲ್ಲಿ ಜನರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ನಿಷ್ಕ್ರೀಯ ಸರ್ಕಾರವಿದೆ. ಈ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸಬೇಕಿದೆ. ಬಿಜೆಪಿ ಸರ್ಕಾರ ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಯಚಂದ್ರ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ- ಸಮಿಶ್ರ ಸರ್ಕಾರ- ಬಿಜೆಪಿ ಸರ್ಕಾರವನ್ನು ಹೋಲಿಕೆ ಮಾಡುತ್ತಾರೆ ಎಂದರು.

    ಮತದಾರರು ಬುದ್ಧಿವಂತರಿದ್ದಾರೆ. ಜಯಚಂದ್ರರಿಗೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ. ಈ ಬಾರಿ ಅವರನ್ನು ಶಿರಾ ಜನ ಕೈ ಹಿಡಿಯುತ್ತಾರೆ. ಜಯಚಂದ್ರ 100ಕ್ಕೆ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಶಿರಾದಲ್ಲಿ ತ್ರಿಕೋನ ಸ್ಪರ್ಥೆಯಿದೆ ಜಯಚಂದ್ರ ಗೆಲ್ಲುತ್ತಾರೆ. ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುವು ಸಾಧಿಸಲಿದೆ. ಎರಡೂ ಉಪಚುನಾವಣೆ ಮುಂದಿನ ಚುನಾವಣೆಯ ದಿಕ್ಸೂಚಿ. ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಮಧ್ಯಾಹ್ನ ಟಿಕೆಟ್ ಘೋಷಣೆ – ಶಿರಾ ಜೆಡಿಎಸ್ ಅಭ್ಯರ್ಥಿಗೆ ಕೊರೊನಾ ಪಾಸಿಟಿವ್

    ಮಧ್ಯಾಹ್ನ ಟಿಕೆಟ್ ಘೋಷಣೆ – ಶಿರಾ ಜೆಡಿಎಸ್ ಅಭ್ಯರ್ಥಿಗೆ ಕೊರೊನಾ ಪಾಸಿಟಿವ್

    ತುಮಕೂರು: ಉಪಚುನಾವಣೆಯಲ್ಲಿ ಶಿರಾ ಜೆಡಿಎಸ್ ಅಭ್ಯರ್ಥಿಯಾಗಿರುವ ಅಮ್ಮಾಜಮ್ಮ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಇಂದು ಮಧ್ಯಾಹ್ನವೇ ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು, ದಿವಂಗತ ಶಾಸಕ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಪಕ್ಷದಿಂದ ಉಪಚುನಾವಣೆಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಆದರೆ ಅಮ್ಮಾಜಮ್ಮ ಅವರಿಗೆ ಇಂದೇ ಕೊರೊನಾ ಪಾಸಿಟಿವ್ ಬಂದಿದೆ. ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕತ್ಸೆ ಪಡೆಯುತ್ತಿದ್ದಾರೆ.

    ತಾಯಿಗೆ ಕೊರೊನಾ ಬಂದ ವಿಚಾರವಾಗಿ ಮಾತನಾಡಿರುವ ಅಮ್ಮಾಜಮ್ಮ ಪುತ್ರ ಸತ್ಯ ಪ್ರಕಾಶ್, ವಿಧಿ ನಮ್ಮ ಕುಟುಂಬದ ಜೊತೆ ಚೆಲ್ಲಾಟ ಆಡುತಿದೆ. ಎರಡು ತಿಂಗಳ ಹಿಂದೆ ತಂದೆ ತೀರಿಸಿಕೊಂಡರು. ಈಗ ತಾಯಿಗೆ ಕೊರೊನಾ ಬಂದಿದೆ. ಪಕ್ಷದಿಂದ ಟಿಕೆಟ್ ಘೋಷಣೆ ಮಾಡಿರೋದು ಸಂತಸ ತಂದಿದೆ. ನಮ್ಮ ತಾಯಿ ಕೊರೊನಾ ಗೆದ್ದು ಬಂದು ಚುನಾವಣೆನೂ ಗೆಲ್ಲುತ್ತಾರೆ. ಇನ್ನು ಐದು ದಿನದಲ್ಲಿ ಡಿಸ್ಚಾರ್ಜ್ ಆಗಿ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದ್ದಾರೆ.

    ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ನಿಧನದ ಹಿನ್ನೆಲೆ, ನವೆಂಬರ್ 3 ರಂದು ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಟಿ.ಬಿ ಜಯಚಂದ್ರ ಸ್ಪರ್ಧಿಸಲಿದ್ದಾರೆ. ಈಗ ಜೆಡಿಎಸ್ ಪಕ್ಷ ಕೂಡ ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಈ ಮೊದಲು ಸತ್ಯನಾರಾಯಣ ಅವರ ಮಗ ಸತ್ಯ ಪ್ರಕಾಶ್‍ಗೆ ಟಿಕೆಟ್ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಇಂದು ದೇವೇಗೌಡರು ಸತ್ಯನಾರಾಯಣ್ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.

  • ಶಿರಾ ಉಪಚುನಾವಣೆ- ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್

    ಶಿರಾ ಉಪಚುನಾವಣೆ- ಅಮ್ಮಾಜಮ್ಮಗೆ ಜೆಡಿಎಸ್ ಟಿಕೆಟ್

    ಬೆಂಗಳೂರು: ಶಿರಾ ಉಪಚುನಾವಣೆ ಕ್ಷೇತ್ರ ರಂಗೇರುತ್ತಿದ್ದು, ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಫೈನಲ್ ಮಾಡಿ ದಿವಂಗತ ಮಾಜಿ ಶಾಸಕ ಸತ್ಯನಾರಾಯಣ್ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ಘೋಷಿಸಿದೆ.

    ನವೆಂಬರ್ 3 ರಂದು ತುಮಕೂರಿನ ಶಿರಾ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಅವರು ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಜೆಡಿಎಸ್ ಶಾಸಕ ಬಿ ಸತ್ಯನಾರಾಯಣ ಅವರ ನಿಧನದಿಂದಾಗಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನ ಈಗಾಗಲೇ ಫೈನಲ್ ಮಾಡಿದೆ.

    ದಿವಂಗತ ಮಾಜಿ ಶಾಸಕ ಸತ್ಯನಾರಾಯಣ್ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಮೂಲಕ ಗೆಲುವಿನ ಲೆಕ್ಕಾಚಾರವನ್ನು ಮಾಡಿದೆ. ಈ ಮೊದಲು ಸತ್ಯನಾರಾಯಣ್ ಅವರ ಮಗ ಸತ್ಯ ಪ್ರಕಾಶ್‍ಗೆ ಟಿಕೆಟ್ ನೀಡುತ್ತಾರೆ ಎನ್ನಲಾಗಿತ್ತು.

    ಕಳೆದ ಚುನಾವಣೆಯಲ್ಲಿ ಗೆಲುವು ಪಡೆದಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ನಡೆದಿದ್ದರೇ, ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇತ್ತ ಶಿರಾ ಕ್ಷೇತ್ರದೊಂದಿಗೆ ಆರ್.ಆರ್ ನಗರ ಉಪಚುನಾವಣೆಯೂ ನ.3 ರಂದು ನಡೆಯಲಿದ್ದು, ಜೆಡಿಎಸ್ ಪಕ್ಷ ಇನ್ನಷ್ಟೇ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ.

  • ಮುಖ್ಯಮಂತ್ರಿಯಾಗಲು ಕೇಂದ್ರದಿಂದ ಮೋದಿಯವರೇ ಆಫರ್ ನೀಡಿದ್ರು: ಹೆಚ್‍ಡಿಕೆ

    ಮುಖ್ಯಮಂತ್ರಿಯಾಗಲು ಕೇಂದ್ರದಿಂದ ಮೋದಿಯವರೇ ಆಫರ್ ನೀಡಿದ್ರು: ಹೆಚ್‍ಡಿಕೆ

    – ಕಾಂಗ್ರೆಸ್ಸಿನವರ ಸಹವಾಸ ಮಾಡಿದ್ದಕ್ಕೆ ಜನ ನನ್ನ ಒಪ್ಪಿಕೊಂಡಿಲ್ಲ
    – ಶಿರಾ ಜನ್ರು ನನ್ಗೆ ವಿಷ ಕೊಡ್ತಿರೋ ಹಾಲು ಕೊಡ್ತಿರೋ

    ತಮಕೂರು: ಬಿಜೆಪಿಯವರೂ ನನ್ನನ್ನು ಮುಖ್ಯಮಂತ್ರಿ ಮಾಡಲೂ ಮುಂದಾಗಿದ್ದರು ಕೇಂದ್ರದಿಂದ ನರೇಂದ್ರ ಮೋದಿಯವರೇ ಆಫರ್ ಮಾಡಿದ್ದರು ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಹೇಳಿದ್ದಾರೆ.

    ಇಂದು ತುಮಕೂರಿನ ಶಿರಾದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡಿದ ಹೆಚ್‍ಡಿಕೆ, ಮೋದಿಯವರೇ ಮುಖ್ಯಮಂತ್ರಿಯಾಗಲು ನನಗೆ ಆಫರ್ ನೀಡಿ. ಐದು ವರ್ಷ ನಿನ್ನನ್ನು ಯಾರೂ ಟಚ್ ಮಾಡಲ್ಲ ಅಂದಿದ್ದರು. ಆದರೆ ಕಾಂಗ್ರೆಸ್ಸಿನವರ ಸಂಕುಚಿತ ಮನೋಭಾವದಿಂದ ರಾಜ್ಯದಲ್ಲಿ ದರಿದ್ರ ಸರ್ಕಾರ ಬಂದಿದೆ ಎಂದು ವಿಪಕ್ಷಗಳ ಮೇಲೆ ಕಿಡಿಕಾರಿದರು.

    ತಹಶೀಲ್ದಾರ್ ಗುರುಮೂರ್ತಿಗೆ ಯಲಹಂಕದಲ್ಲಿ ಪೋಸ್ಟಿಂಗ್ ಮಾಡುವಂತೆ ನಾನು ಸಿಎಂ ಆದಾಗ ಹೇಳಿದ್ದರು. 1 ಕೋಟಿ ರೂ. ಲಂಚ ಕೊಡುವ ಆಮಿಷ ಒಡಿದ್ದರು. ನಾನು ಒಪ್ಪಿಕೊಂಡಿರಲಿಲ್ಲ. ಇಂದು ಬಿಜೆಪಿ ಅವರು ಆತನಿಗೆ ಪೋಸ್ಟಿಂಗ್ ಕೊಟ್ಟಿದ್ದಾರೆ. ಬಿಜೆಪಿಗೆ ಒಂದೂವರೆ ಕೋಟಿ ಪೇಮೆಂಟ್ ಆಗಿದೆ. ಅಲ್ಲಿಯ ಶಾಸಕರಿಗೆ 50 ಲಕ್ಷ ರೂ. ಹಣ ಹೋಗಿದೆ. ಇಂಥಹ ತಹಶೀಲ್ದಾರನ ಅಮಾನತಿಗೆ ಈಗ ಶಿಪಾರಸ್ಸು ಮಾಡಲಾಗಿದೆ. ಕೆ.ಆರ್.ಪೇಟೆಯಲ್ಲಿ ಗೆದ್ದಂತೆ ಇಲ್ಲೂ ಗೆಲ್ಲುತ್ತೇವೆ ಎಂದು ಬಂದಿದ್ದಾರೆ. ಲೂಟಿ ಸರ್ಕಾರದವರು ಶಿರಾ ಗೆಲ್ಲಲು ಮುಂದಾಗಿದ್ದಾರೆ ಎಂದು ಸಿಎಂ ಪುತ್ರ ವಿಜಯೇಂದ್ರಗೆ ಟಾಂಗ್ ನೀಡಿದರು.

    ಕೆಲ ಕಾರಣಗಳಿಂದ ಕಾರ್ಯಕರ್ತರ ಸಭೆ ಮಾಡಲು ಆಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಬಹಳ ವೇಗದಲ್ಲಿ ಹೊರಟಿದೆ. ಸಭೆ ಸಮಾರಂಭ ಮಾಡಿದೆ. ಆದರೂ ಇದರಿಂದ ಕಾರ್ತಕರ್ತರು ಎದೆಗುಂದಬೇಕಿಲ್ಲ. ಈ ಕ್ಷೇತ್ರದ ಕಾಡುಗೊಲ್ಲರು ನನಗೆ ಸತ್ಕಾರ ನೀಡಿದ್ದಾರೆ. ನಾನು ಗ್ರಾಮ ವಾಸ್ತವ್ಯ ಮಾಡಿದ್ದು ಕಾಡುಗೊಲ್ಲರ ಮನೆಯಲ್ಲಿ ಎಂದು ಹೇಳುವ ಮೂಲಕ ಕಾಡುಗೊಲ್ಲರ ಮತ ಸೆಳೆಯುವಲ್ಲಿ ಕುಮಾರಸ್ವಾಮಿ ಗಮನಹರಿಸಿದರು.

    ಕಳೆದ ವಿಧಾನಸಭೆ ಫಲಿತಾಂಶ ನೋಡಿ ರಾಜಕೀಯದಿಂದ ನಿರ್ಗಮಿಸಬೇಕು ಅಂದುಕೊಂಡೆ. ಆದರೆ ಕಾಂಗ್ರೆಸ್ಸಿನವರು ತರಾತುರಿಯಲ್ಲಿ ದೇವೇಗೌಡರಿಗೆ ಫೋನ್ ಮಾಡಿ ಕರೆದರು. ಆಗ ದೇವೇಗೌಡರು ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ನಿಮ್ಮಲ್ಲಿ ಯಾರಿಗಾದರೂ ಮುಖ್ಯಮಂತ್ರಿ ಮಾಡಿ ಅಂದಿದ್ದರು. ಎಷ್ಟೇ ಹೇಳಿದರೂ ಕೇಳದೇ ನನಗೆ ಕಾಂಗ್ರೆಸ್ಸಿನವರೇ ಮುಖ್ಯಮಂತ್ರಿ ಪಟ್ಟ ಕಟ್ಟಿದರು. ನನಗೆ ಮುಖ್ಯಮಂತ್ರಿ ಆಗುವ ಆಸೆ ಇರಲಿಲ್ಲ ಎಂದು ಹೆಚ್‍ಡಿಕೆ ತಿಳಿಸಿದ್ದಾರೆ.

    ಕಾಂಗ್ರೆಸ್ಸಿನವರ ಸಹವಾಸ ಮಾಡಿದಕ್ಕೆ ಜನ ನನ್ನ ಒಪ್ಪಿಕೊಂಡಿಲ್ಲ. ಅಷ್ಟೇ ಯಾಕೆ ನನ್ನ ಕಾರ್ಯಕರ್ತರೇ ಒಪ್ಪಿಕೊಂಡಿಲ್ಲ. ಶಿರಾ ಜನರು ನನಗೆ ವಿಷ ಕೊಡುತ್ತಿರೋ ಅಥವಾ ಹಾಲು ಕೊಡುತ್ತಿರೋ ನಿಮಗೆ ಬಿಟ್ಟಿದ್ದು. ಇಲ್ಲಿಂದ ಹೊಸ ರಾಜಕೀಯ ಆರಂಭವಾಗಬೇಕು. ಸರ್ಕಾದಲ್ಲಿ ದುಡ್ಡಿಗೆ ತೊಂದರೆ ಇಲ್ಲ. ರಾಜ್ಯ ಸಂಪದ್ಭರಿತವಾಗಿದೆ ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ.

  • ಶಿರಾದಲ್ಲಿ ಬಿಜೆಪಿ ಗೆಲುವಿನ ವಾತಾವರಣ ಕಂಡು ಬರ್ತಿದೆ: ನಳಿನ್

    ಶಿರಾದಲ್ಲಿ ಬಿಜೆಪಿ ಗೆಲುವಿನ ವಾತಾವರಣ ಕಂಡು ಬರ್ತಿದೆ: ನಳಿನ್

    ಬೆಳಗಾವಿ: ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ವಾತಾವರಣ ಕಂಡು ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

    ಇತ್ತೀಚೆಗೆ ನಿಧನರಾದ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮನೆಗೆ ಇಂದು ಭೇಟಿ ನೀಡಿರುವ ನಳಿನ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಎಲ್ಲವನ್ನೂ ಗಮನಿಸಿ ಯೋಚನೆ ಮಾಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತದೆ. ನಾಲ್ಕೈದು ಹೆಸರುಗಳು ಕೇಳಿ ಬಂದಿದ್ದು, ಪರಿಶೀಲನೆ ಮಾಡುತ್ತಿದ್ದೇವೆ. ನಮ್ಮ ಕೆಲಸ ಕಾರ್ಯ ಆರಂಭವಾಗಿವೆ. ಶಿರಾದಲ್ಲಿ ಬಿಜೆಪಿ ಗೆಲುವಿನ ವಾತಾವರಣ ಕಂಡು ಬರುತ್ತಿದೆ. ಹತ್ತರಿಂದ ಹದಿನೈದು ದಿನಗಳಲ್ಲಿ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದರು.

    ಇದೇ ವೇಳೆ ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ತಿದ್ದುಪಡಿ ಹೋರಾಟ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ. ರೈತರನ್ನ ಎತ್ತಿಕಟ್ಟಿ ರಾಷ್ಟ್ರದಲ್ಲಿ ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಜಕಾರಣಕ್ಕೋಸ್ಕರ ದ್ವೇಷ ಹುಟ್ಟಿಸುವ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದು ಕಿಡಿಕಾರಿದರು.

    ಚುನಾವಣೆ ಪ್ರಣಾಳಿಕೆಯಲ್ಲೇ ಈ ಎಲ್ಲ ಕಾಯ್ದೆಗಳನ್ನ ತರಬೇಕು ಅಂತ ಹೇಳಿತ್ತು. ಅತ್ಯುತ್ತಮವಾಗಿರುವ ರೈತರ ಪರವಾಗಿರುವ ಕಾಯ್ದೆ ಇದು. ಹೋರಾಟ ಮಾಡುವವರ ಬೇಡಿಕೆ ರೈತರಿಗೆ ನೇರವಾಗಿರುವ ಮಾರುಕಟ್ಟೆ ಕೊಡಿ ಅಂತ ಇತ್ತು. ಅವರ ಬೇಡಿಕೆ ಅಂತೆ ಸರ್ಕಾರ ಕಾಯ್ದೆ ಮಾಡಿದೆ. ರೈತರಿಗೆ ಮನದಟ್ಟು ಮಾಡುವ ಕೆಲಸ ಪಕ್ಷದಿಂದ ಮಾಡುತ್ತೇವೆ ಎಂದರು.

    ಕಾಂಗ್ರೆಸ್ ಇದರ ಮಧ್ಯೆ ಬೆಂಕಿ ಹಾಕಿ ಬೆಳೆ ಬೇಯಿಸಿಕೊಳ್ಳುವ ಮಾಡದಿರಲಿ. ಕಾಂಗ್ರೆಸ್ ಅಧಿಕಾರ ಇಲ್ಲದಿದ್ದಾಗ ಬೆಂಕಿ ಹಾಕುವ ಕೆಲಸ, ಅಧಿಕಾರ ಇದ್ದಾಗ ಭ್ರಷ್ಟಾಚಾರ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಸುರೇಶ್ ಅಂಗಡಿ ಮನೆಗೆ ಭೇಟಿ ವೇಳೆ ನಳಿನ್ ಗೆ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಸ್ಥಳೀಯ ನಾಯಕರು ಸಾಥ್ ನೀಡಿದರು.