Tag: ಶಿಫ್ಟ್

  • ಮುಂಬೈಗೆ ಶಿಫ್ಟ್ ಆದ ಸಮಂತಾ : 15 ಕೋಟಿ ಬೆಲೆಯ ಮನೆಯಲ್ಲಿ ವಾಸ

    ಮುಂಬೈಗೆ ಶಿಫ್ಟ್ ಆದ ಸಮಂತಾ : 15 ಕೋಟಿ ಬೆಲೆಯ ಮನೆಯಲ್ಲಿ ವಾಸ

    ಕ್ಷಿಣದ ಖ್ಯಾತ ತಾರೆ ಸಮಂತಾ ರುತ್ ಪ್ರಭು ಹೈದರಾಬಾದ್ ತೊರೆದಿದ್ದಾರೆ. ಇನ್ಮುಂದೆ ಅವರು ಮುಂಬೈನಲ್ಲಿ ನೆಲೆಸಲಿದ್ದಾರೆ. ಅದಕ್ಕಾಗಿ ಸಮಂತಾ ದುಬಾರಿಯ ಬೆಲೆಯ ಫ್ಲ್ಯಾಟ್ ಖರೀದಿ ಮಾಡಿದ್ದು, ಅದಕ್ಕೆ 15 ಕೋಟಿ ರೂಪಾಯಿ ನೀಡಿದ್ದಾರೆ. ಅದು ಮೂರು ಬೆಡ್ ರೂಮ್ ವುಳ್ಳ ಮನೆಯಾಗಿದೆ ಎಂದು ವರದಿ ಆಗಿದೆ. ಇನ್ಮುಂದೆ ಸಮಂತಾ ಅದೇ ಮನೆಯಲ್ಲಿ ವಾಸವಿರಲಿದ್ದಾರೆ.

    ಅನಾರೋಗ್ಯದ ಕಾರಣದಿಂದಾಗಿ ಸ್ವಲ್ಪ ದಿನ ಸಿನಿಮಾ ರಂಗದಿಂದ ದೂರವಿದ್ದ ಸಮಂತಾ, ಇದೀಗ ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ವೆಬ್ ಸೀರಿಸ್ ಒಂದಕ್ಕೆ ಸಹಿ ಮಾಡಿರುವುದರಿಂದ ಮುಂಬೈನಲ್ಲೇ ಉಳಿಯಲಿದ್ದಾರೆ. ಅಲ್ಲಿಂದಲೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ:ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

    ಸಮಂತಾ ಎರಡನೇ ಹಿಂದಿ ಸಿನಿಮಾವನ್ನು ಒಪ್ಪಿಕೊಂಡಿದ್ದು, ಈ ಸಿನಿಮಾದ ಶೂಟಿಂಗ್ ಗಾಗಿಯೇ ಅವರು ಹೆಚ್ಚು ದಿನಗಳ ಕಾಲ ಮುಂಬೈನಲ್ಲಿ ಇರಬೇಕಾದ ಸನ್ನಿವೇಶ ಎದುರಾಗಿದೆ. ವರುಣ್ ಧವನ್ ಜೊತೆಗಿನ ಆ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದಾಗಿಯೇ ಅವರು ಮುಂಬೈಗೆ ಶಿಫ್ಟ್ ಆಗಿದ್ದಾರಂತೆ. ಜೊತೆಗೆ ಹೊಸ ವಾತಾವರಣವೂ ಅವರಿಗೆ ಬೇಕಾಗಿದ್ದರಿಂದ ಮುಂಬೈ ಸೂಕ್ತ ಎನಿಸಿದೆಯಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಳಿ ಬದುಕಿದ್ದ ಮನೆಯನ್ನೇ ಖಾಲಿ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್

    ಬಾಳಿ ಬದುಕಿದ್ದ ಮನೆಯನ್ನೇ ಖಾಲಿ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್

    ಬೆಂಗಳೂರಿನ ರಾಜಾಜಿನಗರದ (Rajajinagar) ಡಾ.ರಾಜ್ ಕುಮಾರ್ ರಸ್ತೆ ಅಂದಾಕ್ಷಣ ಅಲ್ಲಿ ರವಿಚಂದ್ರನ್ ಮನೆ ನೆನಪಾಗುತ್ತದೆ. ಖ್ಯಾತ ನಿರ್ಮಾಪಕರೂ, ರವಿಚಂದ್ರನ್ ಅವರ ತಂದೆಯವರೂ ಆದ ವೀರಸ್ವಾಮಿ (Veeraswamy) ಅವರಿಂದ ರವಿಚಂದ್ರನ್ ಪುತ್ರರ ತನಕ ಈ ಮನೆಯೇ ಕುಟುಂಬಕ್ಕೆ ನೆರಳಾಗಿದೆ. ಒಂದು ಕಾಲದಲ್ಲಿ ಅದು ಸಿನಿಮಾ ಇಂಡಸ್ಟ್ರಿಯ ಪ್ರಮುಖ ಸ್ಥಳವೂ ಆಗಿತ್ತು. ಅನೇಕ ಸಿನಿದಿಗ್ಗಜರು ಆ ಮನೆಗೆ ಬಂದಿದ್ದೂ ಇದೆ. ಇಂತಹ ಮನೆಯನ್ನು ರವಿಚಂದ್ರನ್ ತೊರೆದಿದ್ದಾರೆ.

    ರವಿಚಂದ್ರನ್ (Ravichandran) ಆ ಮನೆಯಲ್ಲಿ ಇಲ್ಲ ಎಂಬ ವಿಷಯ ವಾರದಿಂದ ಗಾಂಧಿನಗರದಲ್ಲಿ ಗಿರಿಕಿ ಹೊಡೆಯುತ್ತಿತ್ತು. ಕೆಲವರು ಆ ಮನೆಯನ್ನು ಮಾರಿದರು ಎಂದು ಹೇಳಿದರೆ, ಇನ್ನೂ ಕೆಲವರು ವಾಸ್ತು ಕಾರಣಕ್ಕಾಗಿ ಬಿಟ್ಟಿದ್ದಾರೆ ಎಂದೂ ಮಾತನಾಡಿಕೊಳ್ಳುತ್ತಿದ್ದರು. ರಿಪೇರಿ ಕಾರಣಕ್ಕಾಗಿ ಬೇರೆ ಮನೆಗೆ ಶಿಫ್ಟ್ ಆಗಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ರವಿಚಂದ್ರನ್ ಅವರೇ ನಿನ್ನೆ ಬನಾರಸ್ ಸಿನಿಮಾದ ಟೀಸರ್ ಬಿಡುಗಡೆಗೂ ಮುನ್ನ, ಕೆಲ ಮಾಧ್ಯಮ ಸ್ನೇಹಿತರ ಮುಂದೆ ವಾಸ್ತವ ತೆರೆದಿಟ್ಟಿದ್ದಾರೆ.

    ಅಸಲಿಯಾಗಿ ರವಿಚಂದ್ರನ್ ಸಂಪೂರ್ಣವಾಗಿ ಮನೆ ತೊರೆದಿಲ್ಲ. ಆದರೆ, ಹೊಸ ಮನೆಗೆ ಶಿಫ್ಟ್ ಆಗಿದ್ದು ನಿಜ ಎಂದಿದ್ದಾರೆ. ಮಗನ ಮದುವೆಯ ನಂತರ ಹೊಸ ಮನೆಗೆ ಹೋಗುವುದು ಎಂದು ಮೊದಲೇ ನಿರ್ಧಾರವಾಗಿತ್ತು. ಹಾಗಾಗಿ ಹೊಸ ಮನೆಗೆ ಹೋಗಿದ್ದೇವೆ. ಹಳೆ ಮನೆಯಲ್ಲೂ ನಾನು ಇರುತ್ತೇನೆ. ಸಿನಿಮಾ ಸಂಬಂಧಿ  ಕೆಲಸಗಳನ್ನು ಇಲ್ಲಿಯೇ ಮಾಡುತ್ತಿದ್ದೇನೆ. ಹೊಸಕೆರೆ ಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಸದ್ಯ ರವಿಚಂದ್ರನ್ ವಾಸವಾಗಿದ್ದಾರೆ.

    ಹೊಸ ಮನೆಗೆ ಶಿಫ್ಟ್ ಆಗಬೇಕು ಎನ್ನುವುದು ಹಲವು ವರ್ಷಗಳಿಂದ ನಡೆಯುತ್ತಲೇ ಇತ್ತು. ಅಮ್ಮನಿಗಾಗಿ ಹಳೆ ಮನೆಯಲ್ಲೇ ಇದ್ದೆವು. ಮನೋರಂಜನ್ (Manoranjan) ಮದುವೆ ನಂತರ ಹೋಗುವ ಕುರಿತು ಪ್ಲ್ಯಾನ್ ಮಾಡಲಾಗಿತ್ತು. ಅದರಂತೆಯೇ ಇದೀಗ ಹೊಸ ಮನೆಗೆ ಶಿಫ್ಟ್ ಆಗಿರುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ. ಈ ಮೂಲಕ ಹರಡಿರುವ ಗಾಸಿಪ್ ಗೆ ತೆರೆ ಎಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ಮನೆಗೆ ರಶ್ಮಿಕಾ ಶಿಫ್ಟ್  – ಮತ್ತೊಂದು ಅಪಾರ್ಟ್‍ಮೆಂಟ್ ಖರೀದಿ?

    ಹೊಸ ಮನೆಗೆ ರಶ್ಮಿಕಾ ಶಿಫ್ಟ್ – ಮತ್ತೊಂದು ಅಪಾರ್ಟ್‍ಮೆಂಟ್ ಖರೀದಿ?

    ಮುಂಬೈ: ಪುಷ್ಪ ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಮನೆಯಲ್ಲಿರುವ ವಸ್ತುಗಳನ್ನು ಪ್ಯಾಕಿಂಗ್ ಮಾಡುತ್ತಿರುವ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡಿ ಅಭಿಮಾನಿಗಳಲ್ಲಿ ರಶ್ಮಿಕಾ ಮಂದಣ್ಣ ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಾರಾ? ಮತ್ತು ಹೊಸ ಮನೆ ಖರೀದಿಸಿದ್ದಾರಾ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

    2021ರ ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿಸಿದ್ದರು. ರಶ್ಮಿಕಾ ಈಗಾಗಲೇ ಮಿಷನ್ ಮಜ್ನು ಮತ್ತು ಗುಡ್ ಬೈ ಎಂಬ ಎರಡು ಹಿಂದಿ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಹಾಗಾಗಿ ಹೋಟೆಲ್‍ಗಳಲ್ಲಿ ಉಳಿಯುವ ಬದಲು ಮುಂಬೈನಲ್ಲಿ ಸುಲಭವಾಗಿ ಕೆಲಸ ಮಾಡಲು ಹೊಸ ಮನೆ ಖರೀದಿಸಿದ್ದರು. ಇದನ್ನೂ ಓದಿ: ನಾನು Useless ಬಾಯ್‍ಫ್ರೆಂಡ್ಸ್ ಜೊತೆ ಡೇಟಿಂಗ್ ಮಾಡಿದ್ದೇನೆ: ತಾಪ್ಸಿ ಪನ್ನು

    ಇದೀಗ ಮತ್ತೆ ಅಲ್ಲಿಂದ ರಶ್ಮಿಕಾ ಮಂದಣ್ಣ ಶಿಫ್ಟ್ ಆಗುತ್ತಿರುವಂತೆ ಕಾಣಿಸುತ್ತದೆ. ಇತ್ತೀಚೆಗಷ್ಟೇ ರಶ್ಮಿಕಾ ಹೈದರಾಬಾದ್‍ನಲ್ಲಿ ಕಾಣಿಸಿಕೊಂಡಿದ್ದರು. ಫೆಬ್ರವರಿ 2ರಂದು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರವಾಸಕ್ಕೆ ತೆರಳಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ರಟ್ಟಿನ ಬಾಕ್ಸ್‌ಗಳಲ್ಲಿ ವಸ್ತುಗಳನ್ನು ತುಂಬುತ್ತಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಶಿಫ್ಟಿಂಗ್ ಬಹಳ ಸುಲಭವಲ್ಲ. ಆದರೆ ನನ್ನ ಕೆಲಸವನ್ನು ನಾನೇ ಮಾಡುತ್ತೇನೆ. ಹಾಗಂತ ನಾನು ಹುಡುಗರಿಗೆ ಅಣುಕಿಸುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗಷ್ಟೇ ನಟ ಅಲ್ಲು ಅರ್ಜುನ್‍ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಟಾಲಿವುಡ್ ಬಾಕ್ಸ್ ಆಫೀಸ್‍ನಲ್ಲಿ ಭಾರೀ ಸದ್ದು ಮಾಡಿತ್ತು. ಜೊತೆಗೆ ಸಿನಿಪ್ರಿಯರ ಮನಸ್ಸನ್ನು ಗೆದ್ದಿತ್ತು. ಈ ಸಿನಿಮಾದ ಮುಂದುವರಿದ ಭಾಗ ಡಿಸೆಂಬರ್ 2022ರಲ್ಲಿ ತೆರೆ ಮೇಲೆ ಬರಲಿದೆ. ಸದ್ಯ ರಶ್ಮಿಕಾ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ನಟಿಸಿರುವ ಮಿಷನ್ ಮಜ್ನು ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ‘ಮರಳಿ ಬರುತ್ತಿದ್ದೇನೆ’ – 56ರ ಹರೆಯದಲ್ಲೂ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದಾರೆ ಸಲ್ಲು

  • ತುಂಬಿ ಹರಿಯುತ್ತಿರೋ ಸ್ವರ್ಣಾ ನದಿ- 35 ಮಂದಿ ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್

    ತುಂಬಿ ಹರಿಯುತ್ತಿರೋ ಸ್ವರ್ಣಾ ನದಿ- 35 ಮಂದಿ ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್

    ಉಡುಪಿ: ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಉಡುಪಿ ಜಿಲ್ಲೆಯ ಸುವರ್ಣ ನದಿ ಉಕ್ಕಿ ಹರಿಯುತ್ತಿದ್ದು, ತಟದ 35 ನಿವಾಸಿಗಳನ್ನು ಶಿಫ್ಟ್ ಮಾಡಲಾಗಿದೆ.

    ಸ್ವರ್ಣಾ ನದಿ ಬದಿಯಲ್ಲಿ ಬರುವ ಬಲ್ಲೆಕುದ್ರು, ಪಾಸ್ಕುದ್ರು, ಕೊಡಿಪಟ್ಲ, ಮೆಲ್ ಕೊಡಿಪಟ್ಲದಲ್ಲಿ ನಡುಗಡ್ಡೆಯ ವಾತಾವರಣ ಸೃಷ್ಟಿಯಾಗಿದೆ. ಕೆಲ ಮನೆಗಳಿಗೆ ನೀರು ನುಗ್ಗಿದೆ. ಸುವರ್ಣ ತಟದಲ್ಲಿ ಸ್ಥಳಗಳಲ್ಲಿ ಸಿಲುಕಿದ್ದ 15 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಯಿತು. ಆತಂಕದಲ್ಲಿದ್ದ ಮೂವತ್ತಕ್ಕೂ ಹೆಚ್ಚು ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬೊಟ್ ಮುಖಾಂತರ ರಕ್ಷಿಸಿ ದಡಕ್ಕೆ ತರಲಾಗಿದೆ.

    ಉಡುಪಿಯ ತಹಶೀಲ್ದಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಬಲೇಕುದ್ರು ಎಂಬಲ್ಲಿ ಒಂದೇ ಕುಟುಂಬದ ಎಂಟು ಮಂದಿಯನ್ನು ರಕ್ಷಣೆ ಮಾಡಲಾಯಿತು. 80 ವರ್ಷದ ಅಜ್ಜಿ 8 ತಿಂಗಳ ಹಸುಗೂಸು ಸೇರಿದಂತೆ ಎತ್ತರ ಪ್ರದೇಶಕ್ಕೆ ಕುಟುಂಬವನ್ನು ಅಗ್ನಿಶಾಮಕ ಇಲಾಖಾ ಸಿಬ್ಬಂದಿ ಮೂಲಕ ಶಿಫ್ಟ್ ಮಾಡಲಾಗಿದೆ.

    ಚಿಕ್ಕಮಗಳೂರು ಶಿವಮೊಗ್ಗದ ಗಡಿಭಾಗದಲ್ಲಿ, ಪಶ್ಚಿಮಘಟ್ಟದ ತಪ್ಪಲಿನಲ್ಲಿ ಭಾರೀ ಮಳೆ ಬಿದ್ದಿದ್ದರಿಂದ ನೀರಿನ ಮಟ್ಟ ಉಡುಪಿ ಜಿಲ್ಲೆಯ ನದಿಗಳಲ್ಲಿ ಏರಿಕೆಯಾಗಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು ಮಳೆ ಮುಂದುವರಿಯುವ ಸಾಧ್ಯತೆ ಇದೆ.

  • ಬೈಪಾಸ್‍ಗೆ ಮನೆ ಬಲಿಯಾಗುತ್ತೆಂದು 35 ಲಕ್ಷ ಕೊಟ್ಟು ಮನೆಯನ್ನೇ ಶಿಫ್ಟ್ ಮಾಡಿಸಿದ್ರು

    ಬೈಪಾಸ್‍ಗೆ ಮನೆ ಬಲಿಯಾಗುತ್ತೆಂದು 35 ಲಕ್ಷ ಕೊಟ್ಟು ಮನೆಯನ್ನೇ ಶಿಫ್ಟ್ ಮಾಡಿಸಿದ್ರು

    – ಹಾಸನದಲ್ಲಿ 120 ಮೀಟರ್ ಮುಂದಕ್ಕೆ ಮನೆ ಶಿಫ್ಟ್

    ಹಾಸನ: ಅದು ತುಂಬಾ ಪ್ರೀತಿಯಿಂದ ಕಟ್ಟಿದ ಸುಂದರವಾದ ಮನೆ. ಸುಂದರ ನೆನಪುಗಳಿರುವ ಆ ಮನೆ ಬೈಪಾಸ್ ಕಾರಣಕ್ಕೆ ಒಡೆಯುತ್ತಾರೆ ಎಂಬ ಸುದ್ದಿ ಕೇಳಿ ಮನೆಯ ಯಜಮಾನ ಅಕ್ಷರಶಃ ನೊಂದು ಹೋಗಿದ್ದರು. ಹೇಗಾದರೂ ಮಾಡಿ ಪ್ರೀತಿಯ ಮನೆ ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿದ ಮನೆಯ ಯಜಮಾನ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆಯನ್ನೇ 120 ಅಡಿ ಮುಂದಕ್ಕೆ ಶಿಫ್ಟ್ ಮಾಡಿಸುತ್ತಿದ್ದಾರೆ.

    ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯವರಾದ ಲೋಕೇಶ್ 2003ರಲ್ಲಿ ಸುಮಾರು ಒಂದು ಕೋಟಿಯಷ್ಟು ಹಣ ಖರ್ಚು ಮಾಡಿ ಬಾಳ್ಳುಪೇಟೆಯಲ್ಲಿ ಒಂದು ಸುಂದರ ಮನೆ ಕಟ್ಟಿಕೊಂಡಿದ್ದರು. ರಸ್ತೆ ಪಕ್ಕದಲ್ಲೇ ಇವರ ವಿಶಾಲವಾದ ಜಾಗವಿತ್ತು. ಒಂದು ವೇಳೆ ರಸ್ತೆ ಅಗಲೀಕರಣ ಆದರೆ ಮನೆ ಒಡೆಯುವ ಸಂದರ್ಭ ಬರಬಾರದೆಂದು, ರಸ್ತೆಯಿಂದ ಸುಮಾರು 100 ಮೀಟರ್ ಬಿಟ್ಟು ಮನೆ ಕಟ್ಟಿದ್ದರು.

    ಅದೇ ಮನೆಯಲ್ಲಿ ಲೋಕೇಶ್ ಅವರ ಮಕ್ಕಳು ಬೆಳೆದು ದೊಡ್ಡವರಾಗಿದ್ರು. ಉತ್ತಮವಾಗಿ ಓದಿ ಒಳ್ಳೇ ಪದವಿ ಪಡೆದಿದ್ದರು. ಲೋಕೇಶ್ ಆ ಮನೆಯಲ್ಲೇ ಮಕ್ಕಳ ಮದುವೆ ಕೂಡ ಮಾಡಿದ್ದರು. ಇಷ್ಟೆಲ್ಲ ಸುಂದರ ನೆನಪುಗಳಿರುವ ಮನೆಯನ್ನು ರಾಷ್ಟ್ರೀಯ ಹೆದ್ದಾರಿ 75ರ ಹಾಸನದಿಂದ ಬಿಸಿ ರೋಡ್‍ವರೆಗೆ ಬೈಪಾಸ್ ರಸ್ತೆ ನಿರ್ಮಿಸುವ ಸಲುವಾಗಿ ಒಡೆಯಬೇಕು ಎಂಬ ವಿಷ್ಯ ಕೇಳಿ ಮನೆ ಯಜಮಾನ ಲೋಕೇಶ್ ನೊಂದು ಹೋಗಿದ್ದರು. ಸಿಕ್ಕ ಸಿಕ್ಕ ಅಧಿಕಾರಿಗಳು, ರಾಜಕಾರಣಿಗಳ ಬಳಿ ತೆರಳಿ ಮನೆ ಉಳಿಸಿಕೊಳ್ಳಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ಆದರೆ ಅಂತಿಮವಾಗಿ ಬೈಪಾಸ್ ರಸ್ತೆಯ ನಕ್ಷೆ ಬದಲಿಸಲು ಸಾಧ್ಯವಿಲ್ಲ ಎಂದು ತಿಳಿದ ಲೋಕೇಶ್ ಈಗ ಪ್ರೀತಿಯ ಮನೆ ಉಳಿಸಿಕೊಳ್ಳಲು ಮನೆಯನ್ನೇ ಮುಂದಕ್ಕೆ ಶಿಫ್ಟ್ ಮಾಡಿಸುತ್ತಿದ್ದಾರೆ.

    ಲೋಕೇಶ್ ಅವರ ಮನೆಯಯನ್ನು ಅದು ಇದ್ದ ಜಾಗದಿಂದ ಸುಮಾರು 120 ಅಡಿ ಮುಂದಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಸುಮಾರು 35 ಲಕ್ಷ ವೆಚ್ಚದಲ್ಲಿ ಟಿಡಿಬಿಡಿ ಕಂಪೆನಿಯವರು ಮನೆ ಶಿಫ್ಟ್ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಮನೆ ಶಿಫ್ಟ್ ಮಾಡುವಾಗ ಏನಾದರು ಸಮಸ್ಯೆ ಆದರೆ ಅದಕ್ಕೆ ಕಂಪೆನಿಯವರೇ ಸಂಪೂರ್ಣ ಹೊಣೆ ಹೊರಬೇಕಾಗುತ್ತೆ. ಇಷ್ಟುದಿನ ಕೊರೊನಾ ಕಾರಣದಿಂದ ಮನೆ ಶಿಫ್ಟಿಂಗ್ ತಡವಾಗಿದ್ದು ಈಗ ಮನೆ ಶಿಫ್ಟ್ ಕಾರ್ಯ ಸಂಪೂರ್ಣಗೊಳ್ಳುವ ಹಂತ ತಲುಪಿದೆ.

    ಇನ್ನೇನು ತುಂಬಾ ಪ್ರೀತಿಯಿಂದ ಕಟ್ಟಿದ ಮನೆ ಬೈಪಾಸ್ ರಸ್ತೆ ಕಾರಣಕ್ಕೆ ನಾಶವಾಗಿ ಹೋಗುತ್ತೆ ಎಂಬ ನೋವಿನಲ್ಲಿದ್ದ ಲೋಕೇಶ್ ಕುಟುಂಬಕ್ಕೆ ಮನೆ ಶಿಫ್ಟ್ ಮಾಡಿಸುತ್ತಿರುವುದು ಸಂತಸ ತಂದಿದೆ. ತಮ್ಮ ಸಾವಿರಾರು ಸುಂದರ ನೆನಪುಗಳೊಂದಿಗೆ ಮತ್ತೆ ತಮ್ಮ ಪ್ರೀತಿಯ ಹಳೆ ಮನೆಯಲ್ಲೇ ವಾಸ ಮಾಡಲು ಸಾಧ್ಯವಾಗಿದ್ದು ಅವರ ಸಂತಸ ಇಮ್ಮಡಿಗೊಳಿಸಿದೆ.

  • ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲು ಸಜ್ಜಾದ ಸಿಎಂ – ಜನ್ಮದಿನದಂದೇ ವಿಶೇಷ ಪೂಜೆ

    ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲು ಸಜ್ಜಾದ ಸಿಎಂ – ಜನ್ಮದಿನದಂದೇ ವಿಶೇಷ ಪೂಜೆ

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲು ತಯಾರಿ ಆರಂಭಿಸಿದ್ದಾರೆ. ಸದ್ಯ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ವಾಸವಿರುವ ಸಿಎಂ ಬಿಎಸ್‍ವೈ ಸದ್ಯದಲ್ಲೇ ಕಾವೇರಿ ನಿವಾಸಕ್ಕೆ ಅಧಿಕೃತವಾಗಿ ಸ್ಥಳಾಂತರವಾಗಲಿದ್ದಾರೆ.

    ಈಗಾಗಲೇ ಕಳೆದ ಕೆಲವು ದಿನಗಳಿಂದ ಕಾವೇರಿ ನಿವಾಸದಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. ನವೀಕರಣ ಕಾರ್ಯವನ್ನು ಬೇಗನೇ ಮುಗಿಸಲು ಡಿಪಿಎಆರ್ ಇಲಾಖೆ ಸಿಬ್ಬಂದಿಗೆ ಸೂಚಿಸಿರುವ ಸಿಎಂ ಯಡಿಯೂರಪ್ಪ, ಎಷ್ಟು ಬೇಗ ನವೀಕರಣ ಮುಗಿಯುತ್ತೋ ಅಷ್ಟು ಬೇಗ ಕಾವೇರಿ ನಿವಾಸಕ್ಕೆ ಶಿಫ್ಟಾಗಲು ನಿರ್ಧರಿಸಿದ್ದಾರೆ.

    ಯುಗಾದಿಗೂ ಮುನ್ನ ಸಿಎಂ ಯಡಿಯೂರಪ್ಪ ಧವಳಗಿರಿ ನಿವಾಸದಿಂದ ಕಾವೇರಿ ನಿವಾಸಕ್ಕೆ ತಮ್ಮ ವಾಸ್ತವ್ಯ ಬದಲಾಯಿಸಲಿದ್ದಾರೆ. ಸಾಧ್ಯವಾದರೆ ಮಾರ್ಚ್ 5 ರಂದು ಬಜೆಟ್ ಪುಸ್ತಕವನ್ನು ಕಾವೇರಿ ನಿವಾಸದಿಂದಲೇ ಕೊಡೊಯ್ಯುವ ಕುರಿತು ಸಿಎಂ ಚಿಂತನೆ ನಡೆಸುತ್ತಿದ್ದಾರೆ. ಹೀಗಾಗಿಯೇ ಶನಿವಾರ ಪ್ರಥಮ ಬಾರಿಗೆ ಸಿಎಂ ಯಡಿಯೂರಪ್ಪ ಯಾರಿಗೂ ಹೇಳದೇ ಕಾವೇರಿ ನಿವಾಸಕ್ಕೆ ತೆರಳಿ ನವೀಕರಣ ಕಾರ್ಯದ ಪ್ರಗತಿ ಪರಿಶೀಲಿಸಿದ್ದರು.

    ಕಾವೇರಿಯಲ್ಲಿ ವಿಶೇಷ ಪೂಜೆ
    ಇದೇ ಫೆಬ್ರವರಿ 27 ರಂದು ಸಿಎಂ ಯಡಿಯೂರಪ್ಪ ಅವರು 77 ವಸಂತಗಳನ್ನು ಪೂರೈಸಿ 78ಕ್ಕೆ ಕಾಲಿಡಲಿದ್ದಾರೆ. ತಮ್ಮ ಜನ್ಮದಿನದಂದೇ ಸಿಎಂ ಯಡಿಯೂರಪ್ಪ ಕಾವೇರಿ ಸರ್ಕಾರಿ ನಿವಾಸದಲ್ಲಿ ವಿಶೇಷ ಪೂಜೆ, ಹೋಮ-ಹವನಗಳನ್ನು ಹಮ್ಮಿಕೊಂಡಿದ್ದಾರೆ. ಬಿಎಸ್‍ವೈ ತಮ್ಮ ಕುಟುಂಬದ ಸದಸ್ಯರ ಜೊತೆ ಅಂದು ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಿದ್ದಾರೆ.

  • ಕೈ ಶಾಸಕರ ರೆಸಾರ್ಟ್ ವಾಸ್ತವ್ಯ ಬದಲಾವಣೆ

    ಕೈ ಶಾಸಕರ ರೆಸಾರ್ಟ್ ವಾಸ್ತವ್ಯ ಬದಲಾವಣೆ

    ರಾಮನಗರ: ಒಂದು ಕಡೆ ಸದನದಲ್ಲಿ ವಿಶ್ವಾಸ ಮತಯಾಚನೆ ಬಗ್ಗೆ ವಾದ ಪ್ರತಿವಾದ ನಡೆಯುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕರು ತಮ್ಮ ರೆಸಾರ್ಟ್ ವಾಸ್ತವ್ಯವನ್ನು ಬದಲಾವಣೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

    ವಿಂಡ್ ಪ್ಲವರ್ ಪ್ರಕೃತಿ ರೆಸಾರ್ಟಿನಿಂದ ಈಗಲ್ ಟನ್ ರೆಸಾರ್ಟಿಗೆ ಕಾಂಗ್ರೆಸ್ ನಾಯಕರು ಶಿಫ್ಟ್ ಆಗುವ ಸಾಧ್ಯತೆಯಿದೆ. ಕೈ ಶಾಸಕರು ಇಲ್ಲಿವರೆಗೂ ದೇವನಹಳ್ಳಿ ಸಮೀಪದಲ್ಲಿನ ವಿಂಡ್ ಪ್ಲವರ್ ಪ್ರಕೃತಿ ರೆಸಾರ್ಟಿನಲ್ಲಿದ್ದರು. ಇದೀಗ ರಾಮನಗರ ತಾಲೂಕಿನ ಬಿಡದಿ ಸಮೀಪದ ಈಗಲ್ ಟನ್ ರೆಸಾರ್ಟಿಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.

    ಕೆಪಿಸಿಸಿ ವತಿಯಿಂದ ಈಗಾಗಲೇ ಈಗಲ್ ಟನ್ ರೆಸಾರ್ಟಿನಲ್ಲಿ 14 ರೂಮ್‍ಗಳನ್ನು ವೇಯ್ಟಿಂಗ್ ಲೀಸ್ಟ್ ನಲ್ಲಿ ಇಡಲಾಗಿದೆ. ಇಂದು ಸಂಜೆ ವೇಳೆಗೆ ಕಾಂಗ್ರೆಸ್ಸಿನ ಕೆಲ ಶಾಸಕರು ಈಗಲ್ ಟನ್ ರೆಸಾರ್ಟಿಗೆ ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಸದ್ಯಕ್ಕೆ 14 ರೂಂಗಳು ಮಾತ್ರವೇ ಈಗಲ್ ಟನ್ ರೆಸಾರ್ಟಿನಲ್ಲಿ ಖಾಲಿ ಇವೆ. ಹೀಗಾಗಿ ರೆಸಾರ್ಟಿನಲ್ಲಿ ಖಾಲಿಯಿರುವ ರೂಮ್‍ಗಳನ್ನು ಬುಕ್ ಮಾಡಲಾಗಿದೆ. ವಿಂಡ್ ಪ್ಲವರ್ ಪ್ರಕೃತಿ ರೆಸಾರ್ಟಿನಲ್ಲಿ ಕಾಂಗ್ರೆಸ್ ನಾಯಕರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಈಗಲ್ ಟನ್ ರೆಸಾರ್ಟಿನಲ್ಲಿ ಭದ್ರತೆ ಇರುತ್ತದೆ ಎನ್ನುವ ಕಾರಣಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

     

  • ವಾಸ್ತು ದೋಷಕ್ಕೆ ಹೆದರಿ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಧ್ರುವ ಶಿಫ್ಟ್?

    ವಾಸ್ತು ದೋಷಕ್ಕೆ ಹೆದರಿ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಧ್ರುವ ಶಿಫ್ಟ್?

    ಬೆಂಗಳೂರು: ಶೀಘ್ರವೇ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಾಸ್ತು ದೋಷಕ್ಕೆ ಹೆದರಿ ಮನೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಈಗ ಸ್ಯಾಂಡಲ್‍ವುಡ್‍ನಲ್ಲಿ ಹರಿದಾಡುತ್ತಿದೆ.

    ನಟ ಧ್ರುವ ಸರ್ಜಾ ಬನಶಂಕರಿಯ ಕೆ.ಆರ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಈಗ ವಾಸ್ತು ದೋಷದಿಂದ ಬನಶಂಕರಿಯ ಕೆ.ಆರ್ ರಸ್ತೆಯಿಂದ ಸದಾಶಿವನಗರದಲ್ಲಿರುವ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಎಂಟ್ರಿಯಾಗಲಿದ್ದಾರೆ. ಡಿಸೆಂಬರ್ 9ರ ನಿಶ್ಚಿತಾರ್ಥದ ನಂತರ ಧ್ರುವ ತಮ್ಮ ಮನೆ ಶಿಫ್ಟ್ ಮಾಡಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: `ದ್ರಾಕ್ಷಿ’, `ಗೋಡಂಬಿ’ ಒಟ್ಟಿಗೆ ಬೇಕೆಂದ ಪ್ರಥಮ್ – ಆಸೆ ಈಡೇರಿಸಿದ ಧ್ರುವ ಸರ್ಜಾ

    ಧ್ರುವ ಹಾಗೂ ಪ್ರೇರಣಾ ತುಂಬಾ ಸಿಂಪಲ್ ಆಗಿ ಹಿಂದೂ ಸಂಪ್ರದಾಯದಂತೆ ಡಿಸೆಂಬರ್ ಮೊದಲ ವಾರದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ.

    ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಅವರ ನಿಶ್ಚಿತಾರ್ಥದಲ್ಲಿ ಅರುಣ್ ಸಾಗರ್ ಆಂಜನೇಯನ ಮೂರ್ತಿಯ ಸೆಟ್ ಹಾಕಲಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಶನ್ ಕಮಲದ ಭೀತಿಯಿಂದ ಮತ್ತೊಂದು ಹೋಟೆಲ್‍ಗೆ ಜೆಡಿಎಸ್ ಶಾಸಕರು ಶಿಫ್ಟ್!

    ಆಪರೇಶನ್ ಕಮಲದ ಭೀತಿಯಿಂದ ಮತ್ತೊಂದು ಹೋಟೆಲ್‍ಗೆ ಜೆಡಿಎಸ್ ಶಾಸಕರು ಶಿಫ್ಟ್!

    ಚಿಕ್ಕಬಳ್ಳಾಪುರ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಲಿ ಮೆರಿಡಿಯನ್ ಹೋಟೆಲ್‍ನಲ್ಲಿ ತಂಗಿದ್ದ ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗೋಲ್ಡನ್ ಶೈರ್ ವಿಲ್ಲಾಸ್‍ಗೆ ಶಿಫ್ಟ್ ಆಗಿದ್ದಾರೆ.

    ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುವವರೆಗೂ ಜೆಡಿಎಸ್ ಶಾಸಕರನ್ನು ಕ್ಷೇತ್ರಗಳಿಗೆ ಕಳಿಸದೇ ಶಾಸಕರು ಒಟ್ಟಾಗಿ ಇರುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ದೇವನಹಳ್ಳಿ ನಂದಿಬೆಟ್ಟ ರಸ್ತೆಯಲ್ಲಿರುವ ಪ್ರೆಸ್ಟಿಜ್ ಗಾಲ್ಫ್ ರೆಸಾರ್ಟ್‍ನಲ್ಲಿ 38 ರೂಂಗಳನ್ನ ಬುಕ್ ಮಾಡಲಾಗಿದೆ. ಈ ಹಿನ್ನಲೆ ಕಳೆದ ರಾತ್ರಿ 35 ಜೆಡಿಎಸ್ ಶಾಸಕರು ರೆಸಾರ್ಟ್‍ಗೆ ಆಗಮಿಸಿದ್ದು, ಕೆಲ ಶಾಸಕರು ತಮ್ಮ ಕುಟುಂಬಸ್ಥರ ಜೊತೆ ವಿಲ್ಲಾಗಳಲ್ಲಿ ತಂಗಿದ್ದಾರೆ.

    ಇನ್ನೂ ಎರಡು ಮೂರು ದಿನಗಳ ಕಾಲ ಜೆಡಿಎಸ್ ಶಾಸಕರು ವಿಲ್ಲಾಗಳಲ್ಲೇ ಉಳಿಯಲಿದ್ದು, ಜೆಡಿಎಸ್ ಶಾಸಕರು ತಮ್ಮ ಕುಟುಂಬದ ಜೊತೆ ಕಾಲ ಕಳೆಯಲಿದ್ದಾರೆ. ವಿಶ್ವಾಸ ಮತಯಾಚನೆಗೂ ಮುನ್ನ ಆಪರೇಶನ್ ಕಮಲದ ಭೀತಿಯಿಂದ ಪಾರಾಗಲು ಕುಮಾರಸ್ವಾಮಿಯವರು ಈ ರೀತಿಯ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ಇನ್ನೂ ಇಂದು ಬೆಳಗ್ಗೆಯಿಂದಲೂ ರೆಸಾರ್ಟ್‍ಗೆ ತೆರಳುವ ಸಿಬ್ಬಂದಿಯನ್ನು ತಪಾಸಣೆ ಮಾಡುತ್ತಿರುವ ಪೊಲೀಸರು ಹಾಗೂ ವಿಲ್ಲಾಸ್ ಭದ್ರತಾ ಸಿಬ್ಬಂದಿ ಯಾರಿಗೂ ಒಳಗೆ ಪ್ರವೇಶವನ್ನು ಕಲ್ಪಿಸಿಕೊಟ್ಟಿಲ್ಲ. ಜೊತೆಗೆ ಇಂದು ಬೆಳಗ್ಗೆ 11 ಗಂಟೆ ನಂತರ ಹಾಸನದಿಂದ ಕುಮಾರಸ್ವಾಮಿಯವರು ರೆಸಾರ್ಟ್‍ಗೆ ಆಗಮಿಸುವ ನಿರೀಕ್ಷೆಯಿದ್ದು, ಶಾಸಕರ ಜೊತೆ ಉಭಯ ಕುಶಲೋಪರಿ ನಡೆಸಿ ನಂತರ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ಹೆಚ್‍ಡಿಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

  • ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು- ಜಯದೇವ ಹೃದ್ರೋಗ ಆಸ್ಪತ್ರೆಗೆ ಶಿಫ್ಟ್ ಮಾಡೋ ಸಾಧ್ಯತೆ

    ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು- ಜಯದೇವ ಹೃದ್ರೋಗ ಆಸ್ಪತ್ರೆಗೆ ಶಿಫ್ಟ್ ಮಾಡೋ ಸಾಧ್ಯತೆ

    ಬೆಂಗಳೂರು: ರವಿ ಬೆಳಗೆರೆ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಉಸಿರಾಟದ ತೊಂದರೆ ಮತ್ತು ತೀವ್ರ ಬೆನ್ನು ನೋವು ಹಿನ್ನೆಲೆಯಲ್ಲಿ ಅವರನ್ನ ಆಸ್ಪತ್ರೆಗೆ ಶಿಫ್ಟ್ ಮಾಡೋ ಸಾಧ್ಯತೆಯಿದೆ.

    ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಮಂಗಳವಾರ ಜೈಲಾಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವೈದ್ಯರು ರವಿ ಬೆಳಗೆರೆಯವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಅಗತ್ಯವಿಲ್ಲ. ರಕ್ತಪರೀಕ್ಷೆ ವರದಿ ಬಂದ ಬಳಿಕ ನೋಡೋಣ ಎಂದು ಹೇಳಿ ವಾಪಸ್ ಕಳುಹಿಸಿದ್ದರು.

    ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ರವಿ ಬೆಳಗೆರೆ ಪರಪ್ಪನ ಅಗ್ರಹಾರ ಸೇರಿದ್ದರು. ಆರೋಗ್ಯದಲ್ಲಿ ಮೊದಲೇ ಏರುಪೇರು ಆಗಿದ್ದರಿಂದ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಇಂದು ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ರವಾನಿಸುವ ಸಾಧ್ಯತೆಯಿದೆ.

    ಅತ್ತ ಜಾಮೀನಿಗಾಗಿ ಚೇತನಾ ಬೆಳಗೆರೆ ಅರ್ಜಿಯನ್ನು ಸಲ್ಲಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೇತನಾ ಬೆಳಗೆರೆ, ನಮ್ಮ ತಂದೆಯವರಿಗೆ ಮೊದಲೇ ಆರೋಗ್ಯ ಸರಿಯಿಲ್ಲ. ಇದರ ಮಧ್ಯೆ ಅವರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದರು.