Tag: ಶಿಡ್ಲಘಟ್ಟ ಪೊಲೀಸ್‌

  • ಚಿಕ್ಕಬಳ್ಳಾಪುರ | ಬಾರ್‌ ಬಳಿ ಯುವಕನಿಂದ ಹಲ್ಲೆ – ಒಂದೇ ಏಟಿಗೆ ಕುಸಿದು ಬಿದ್ದ ವ್ಯಕ್ತಿ

    ಚಿಕ್ಕಬಳ್ಳಾಪುರ | ಬಾರ್‌ ಬಳಿ ಯುವಕನಿಂದ ಹಲ್ಲೆ – ಒಂದೇ ಏಟಿಗೆ ಕುಸಿದು ಬಿದ್ದ ವ್ಯಕ್ತಿ

    ಚಿಕ್ಕಬಳ್ಳಾಪುರ: ಹಳೆಯ ದ್ವೇಷದಿಂದ ಬಾರ್ ಬಳಿ ವ್ಯಕ್ತಿಯೊಬ್ಬನ ಮೇಲೆ ಯುವಕ ದೊಣ್ಣೆಯಿಂದ ಬಲವಾಗಿ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಗ್ರಾಮದ ಬಳಿಯ ಎನ್‌ಕೆ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ನಡೆದಿದೆ.

    ಅಂದಹಾಗೆ ಅನೆಮಡುಗು ಗ್ರಾಮದ ವಿಜಿ ಎಂಬಾತ ಧನಮಿಟ್ಟೇನಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬಾತನ ಮೇಲೆ ದೊಣ್ಣೆಯಿಂದ ಬಲವಾಗಿ ಹಲ್ಲೆ ಮಾಡಿದ್ದಾನೆ. ಘಟನೆಯ ದೃಶ್ಯ ಬಾರ್‌ನ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು ದೃಶ್ಯ ಭಯಾನಕವಾಗಿದೆ. ಇದನ್ನೂ ಓದಿ: ಚಾಮುಂಡೇಶ್ವರಿ ನಮ್ಮ ನಾಡಿನ ಅಧಿದೇವತೆ, ಆಕೆಯ ದರ್ಶನ ಎಲ್ಲರ ಹಕ್ಕು: ಡಿಕೆಶಿ ಸ್ಪಷ್ಟನೆ

    ಅಸಲಿಗೆ ಈ ಹಿಂದೆ ಶ್ರೀನಿವಾಸ್ ಬೇರೋಬ್ಬರ ಜೊತೆ ಜಗಳವಾಡುತ್ತಿದ್ದ ಸಮಯದಲ್ಲಿ ಶ್ರೀನಿವಾಸ್ ಜಗಳ ಬಿಡಿಸಿ ಬುದ್ಧಿವಾದ ಹೇಳಿ ಬೈದಿದ್ದನಂತೆ. ಅದೇ ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಕಾರುತ್ತಿದ್ದ ವಿಜಿ ಬಾರ್‌ನಲ್ಲಿ ಶ್ರೀನಿವಾಸ್ ಕಂಡ ಕೂಡಲೇ ಆತನ ಜೊತೆ ಜಗಳಕ್ಕಿಳಿದಿದ್ದಾನೆ. ನಂತರ ಹೊರಗಡೆ ಬಂದ ಕೂಡಲೇ ಏಕಾಏಕಿ ಬಾರ್‌ನ ಹೊರಗಡೆಯಿದ್ದ ದೊಣ್ಣೆ ತಂದು ಒಂದೇ ಏಟು ಎಂಬಂತೆ ಶ್ರೀನಿವಾಸ್ ಕುತ್ತಿಗೆಗೆ ಹಾಕಿದ್ದಾನೆ. ಇದ್ರಿಂದ ಕ್ಷಣ ಮಾತ್ರದಲ್ಲಿ ಶ್ರೀನಿವಾಸ್ ಪ್ರಜ್ಞಾಹೀನನಾಗಿ ಕುಸಿದು ಬಿದ್ದಿದ್ದಾನೆ. ಇದನ್ನೂ ಓದಿ: ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮತ್ತೆ ಭೂಕುಸಿತ – ಸಾವಿನ ಸಂಖ್ಯೆ 30ಕ್ಕೆ ಏರಿಕೆ

    ಈ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರೂ ಕೇವಲ ಎನ್‌ಸಿಆರ್‌ ಮಾಡಿ ಕೈತೊಳೆದುಕೊಂಡಿದ್ದಾರಂತೆ, ಪ್ರಭಾವಿ ಸಚಿವರೊಬ್ಬರ ಸಂಬಂಧಿ ಎಂಬ ಕಾರಣಕ್ಕೆ ಕೊಲೆ ಯತ್ನ ಪ್ರಕರಣ ದಾಖಲಿಸದೇ ಆರೋಪಿಯನ್ನ ಬಿಟ್ಟು ಕಳುಹಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಸದ್ಯ ಗಾಯಾಳು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ (Sidlaghatta Hospital) ಚಿಕಿತ್ಸೆ ಪಡೆಯುತ್ತಿದ್ದು, ಗಾಯಾಳು ಬಳಿ ಶಿಡ್ಲಘಟ್ಟ ಸಿಪಿಐ ಶ್ರೀನಿವಾಸ್ ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡದೆದುಕೊಂಡು ಮರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆಗೆ ಬಿಬಿಎಂಪಿಯಿಂದ 41 ಕೆರೆ, 489 ತಾತ್ಕಾಲಿಕ ಸಂಚಾರಿ ಕಲ್ಯಾಣಿ ವ್ಯವಸ್ಥೆ

  • ತನಗಿಂತ 2 ವರ್ಷ ಕಿರಿಯವನನ್ನ ಪ್ರೀತಿಸಿ ಮದ್ವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ

    ತನಗಿಂತ 2 ವರ್ಷ ಕಿರಿಯವನನ್ನ ಪ್ರೀತಿಸಿ ಮದ್ವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಕುಟುಂಬದವರ ವಿರೋಧದ ನಡುವೆಯೂ ತನಗಿಂತ ಎರಡು ವರ್ಷ ಕಿರಿಯವನನ್ನ ಪ್ರೀತಿಸಿ ಮದುವೆಯಾಗಿದ್ದ (Marriage) ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ.

    ಶಿಡ್ಲಘಟ್ಟ ನಗರದ (Sidlaghatta City) ಮಯೂರ ವೃತ್ತದ ಬಳಿ ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ವಿವಾಹಿತೆ ನಾಗಮಣಿ (23) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಬಿಜೆಪಿಗರು ಪ್ರಾಮಾಣಿಕರಾಗಿದ್ದರೆ ನ್ಯಾಯಾಂಗ ತನಿಖೆ ಬಗ್ಗೆ ಭಯವೇಕೆ? – ಡಿಕೆಶಿ ಪ್ರಶ್ನೆ

    ಖಾಸಗಿ ಕ್ಲಿನಿಕ್ ಒಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಜಾತವಾರಹೊಸಹಳ್ಳಿ ಗ್ರಾಮದ ನಾಗಮಣಿ, ಕಳೆದ ಒಂದೂವರೆ ವರ್ಷದ ಹಿಂದೆ ತಾತಹಳ್ಳಿ ಗ್ರಾಮದ ಪವನ್ (21) ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಪವನ್ ಕುಟುಂಬದವರು ಯುವತಿ ಬೇರೆ ಸಮುದಾಯ ಎಂಬ ಕಾರಣಕ್ಕೆ ಮನೆಗೆ ಸೇರಿಸಿರಲಿಲ್ಲ. ಹೀಗಾಗಿ ಇಬ್ಬರು ಶಿಡ್ಲಘಟ್ಟ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ಮಧ್ಯೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು, ಇಂದು ಮಹಿಳೆ ನೇಣಿಗೆ ಶರಣಾಗಿದ್ದಾಳೆ.

    ಶಿಡ್ಲಘಟ್ಟ ಪೊಲೀಸರು ಮೃತದೇಹವನ್ನ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಆದ್ರೆ ಯುವತಿ ಹಾಗೂ ಯುವಕನ ಕಡೆಯವರು ರಾಜೀ ಪಂಚಾಯತಿಗೆ ಮಾತುಕತೆ ನಡೆಸಿದ್ದಾರೆ. ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಲಕ್ಷ್ಮಿ ಹೆಬ್ಬಾಳ್ಕರ್

    Web Stories

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]