Tag: ಶಿಗ್ಗಾಂವ್

  • 25 ಲಕ್ಷ ರೂ.ಗೆ 2 ಕೆಜಿ ನಕಲಿ ಚಿನ್ನ ನೀಡಿ ವಂಚನೆ – ಇಬ್ಬರು ಅರೆಸ್ಟ್

    25 ಲಕ್ಷ ರೂ.ಗೆ 2 ಕೆಜಿ ನಕಲಿ ಚಿನ್ನ ನೀಡಿ ವಂಚನೆ – ಇಬ್ಬರು ಅರೆಸ್ಟ್

    ಹಾವೇರಿ: 25 ಲಕ್ಷ ರೂ.ಗೆ 2 ಕೆಜಿ ಚಿನ್ನ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬನಿಗೆ ವಂಚಿಸಿದ್ದ ಆರೋಪಿಗಳನ್ನು ಶಿಗ್ಗಾಂವ್ (Shiggaon) ಪೊಲೀಸರು (Police) ಬಂದಿಸಿದ್ದಾರೆ. ಆರೋಪಿಗಳು ಮೊದಲು ಎರಡು ಚಿನ್ನದ ನಾಣ್ಯಗಳನ್ನು ನೀಡಿ ಹಣ ಪಡೆದು, ಬಳಿಕ ನಕಲಿ ಚಿನ್ನವನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಕರಣ್ ಮತ್ತು ಪ್ರವೀಣ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬೆಂಗಳೂರು (Bengaluru) ಮೂಲದ ಲಕ್ಷ್ಮಣ್ ಚೆನ್ನಬಸಯ್ಯ ಎಂಬವರಿಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿದ್ದರು. ಮೊದಲಿಗೆ ಚಿನ್ನದ ನಾಣ್ಯ ನೀಡಿ 25 ಲಕ್ಷ ರೂ. ಪಡೆದು ಬಳಿಕ ನಕಲಿ ಚಿನ್ನದ ನಾಣ್ಯಗಳನ್ನು ನೀಡಿದ್ದರು. ಇದನ್ನೂ ಓದಿ: ನಾಗೋರ್ನೊ-ಕರಾಬಖ್ ಇಂಧನ ಡಿಪೋ ಸ್ಫೋಟ – 20 ಮಂದಿ ಸಾವು

    ಆರೋಪಿಗಳು ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಹರಪನಹಳ್ಳಿಯ ಹೊಳಲು ಗ್ರಾಮದ ಬಳಿ ಲಕ್ಷ್ಮಣ್‍ನನ್ನು ಕರೆಸಿದ್ದರು. ಇಲ್ಲಿಯೇ ನಾಣ್ಯಗಳನ್ನು ನೀಡಿ ಹಣ ಪಡೆದಿದ್ದರು. ಬಳಿಕ ಇದನ್ನು ಪರೀಕ್ಷಿಸಿದಾಗ ನಕಲಿ ಎಂಬುದು ತಿಳಿದು ಬಂದಿತ್ತು.

    ಈ ಸಂಬಂಧ ಶಿಗ್ಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಧಿತ ಆರೋಪಿಗಳಿಂದ 12 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಸಂತೋಷ್ ಮತ್ತು ಪ್ರಕಾಶ್ ಎಂಬ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ಬೆಂಬಲ – ಇಬ್ಬರು ಮಹಿಳೆಯರು, ಓರ್ವ ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಳ ಮೀಸಲಾತಿಗೆ ವಿರೋಧ ಬಂಜಾರ ಸ್ವಾಮೀಜಿ ಆತ್ಮಹತ್ಯೆ ಯತ್ನ

    ಒಳ ಮೀಸಲಾತಿಗೆ ವಿರೋಧ ಬಂಜಾರ ಸ್ವಾಮೀಜಿ ಆತ್ಮಹತ್ಯೆ ಯತ್ನ

    ಹಾವೇರಿ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳಮೀಸಲಾತಿ (Reservation) ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕ್ಷೇತ್ರದಲ್ಲಿ ಬಂಜಾರ (Banjara) ಸಮುದಾಯದ ಪ್ರತಿಭಟನೆ ವೇಳೆ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

    ಸರ್ಕಾರದ ನಡೆಯನ್ನು ಖಂಡಿಸಿ ತಹಶೀಲ್ದಾರ್  ಕಚೇರಿ (AC office) ಬಳಿ ಬಂಜಾರ ಸಮುದಾಯದ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಸಿದ್ದಾರೆ. ತಕ್ಷಣ ಅಲ್ಲಿದ್ದ ಜನ ಅವರನ್ನು ರಕ್ಷಿಸಿದ್ದಾರೆ. ಸ್ವಾಮೀಜಿಯವರನ್ನು ಗುಂಡೂರು (Gunduru) ಗ್ರಾಮದ ತಿಪ್ಪೆಸ್ವಾಮಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 47 ಜನ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ಪ್ರಯಾಣಿಕರು ಬಚಾವ್

    ಶಿಗ್ಗಾಂವ್ ತಾಲೂಕು ಆಸ್ಪತ್ರೆಯಲ್ಲಿ ಸ್ವಾಮಿಜಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆ ಜನರಿಗೂ ಹೆಚ್‌ಡಿಕೆ ಭರವಸೆ ಮೇಲೆ ನಂಬಿಕೆಯಿಲ್ಲ – ಚಲುವರಾಯಸ್ವಾಮಿ

  • ಜ್ಞಾನ ದೀವಿಗೆ ಅಭಿಯಾನ- ತಮ್ಮ ಹುಟ್ಟೂರಿನ 500 ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ ಸುಧಾಮೂರ್ತಿ

    ಜ್ಞಾನ ದೀವಿಗೆ ಅಭಿಯಾನ- ತಮ್ಮ ಹುಟ್ಟೂರಿನ 500 ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದ ಸುಧಾಮೂರ್ತಿ

    ಹಾವೇರಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಆರಂಭವಾಗಿರುವ ಜ್ಞಾನ ದೀವಿಗೆ ಅಭಿಯಾನಕ್ಕೆ ಇನ್ಫೋಸಿಸ್ ಪೌಂಡೇಶನ್ ಕೈ ಜೋಡಿಸಿದೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ನೀಡಿದ ಟ್ಯಾಬ್‍ಗಳನ್ನು ಇಂದು ಜಿಲ್ಲೆಯ ಶಿಗ್ಗಾಂವ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

    ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಆರಂಭವಾಗಿರುವ ಜ್ಞಾನ ದೀವಿಗೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಸಾವಿರಾರು ದಾನಿಗಳು ಕೈ ಜೋಡಿಸಿದ್ದಾರೆ. ಅದೇ ರೀತಿ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಟ್ಯಾಬ್ ವಿತರಣೆ ಅಭಿಯಾನಕ್ಕೆ ಇನ್ಫೋಸಿಸ್ ಫೌಂಡೇಶನ್ ಕೈ ಜೋಡಿಸಿ 500 ವಿದ್ಯಾರ್ಥಿಗಳಿಗೆ ಟ್ಯಾಬ್ ದೇಣಿಗೆ ನೀಡಿದೆ. ಇನ್ಫೋಸಿಸ್ ಪೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ದೇಣಿಗೆ ನೀಡಿದ 250 ಟ್ಯಾಬ್‍ಗಳನ್ನು ಇಂದು ವಿತರಿಸಲಾಯಿತು.

    ಸುಧಾಮೂರ್ತಿಯವರ ಹುಟ್ಟೂರು ಶಿಗ್ಗಾಂವ, ಹೀಗಾಗಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂದು ಮೊದಲ ಹಂತದಲ್ಲಿ 91 ಟ್ಯಾಬ್ ವಿತರಣೆ ಮಾಡಲಾಯಿತು. ಶಿಗ್ಗಾಂವ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ 50, ಶಿಗ್ಗಾಂವ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 67 ಹಾಗೂ ಹಿರೇಬೆಂಡಿಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 64 ಮಕ್ಕಳಿಗೆ ಹಾವೇರಿ ಜಿಲ್ಲಾ ಡಿಡಿಪಿಐ ಅಂದಾನಪ್ಪ ವಡಿಗೇರಿ, ಶಿಗ್ಗಾಂವನ ಪ್ರಭಾರಿ ಬಿಇಓ ಅಶೋಕ್ ಕುಂಬಾರ್ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿದರು.

    ಟ್ಯಾಬ್ ವಿತರಣೆ ಮಾಡಿ ಮಾತನಾಡಿದ ಡಿಡಿಪಿಐ ಅಂದಾನಪ್ಪ ವಡಿಗೇರ, ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ಯಾಬ್ ವಿತರಿಸುವ ಮೂಲಕ ಆಧುನಿತ ತಂತ್ರಜ್ಞಾನದ ಬಳಸಿ ಶಿಕ್ಷಣ ನೀಡಲು ಮುಂದಾಗಿರುವುದು ಶಾಘ್ಲಂನೀಯ. ಈ ಅಭಿಯಾನದ ಮೂಲಕ ಎಸ್‍ಎಸ್‍ಎಲ್‍ಸಿ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಲು ಸಹಕಾರಿಯಾಗಲಿದೆ. ಇನ್ಫೋಸಿಸ್ ಪೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ಉನ್ನತ ಸ್ಥಾನಕ್ಕೆ ಬೆಳೆದರೂ ಹುಟ್ಟೂರು ಮರೆತಿಲ್ಲ. ತಾವು ಹುಟ್ಟಿ ಬೆಳೆದ ಶಿಗ್ಗಾಂವ ತಾಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ಯಾಬ್ ದೇಣಿಗೆ ನೀಡಿದ್ದಾರೆ ಎಂದರು.

    ಮಕ್ಕಳಿಗೆ ಟ್ಯಾಬ್ ವಿತರಿಸಿದ ಬಳಿಕ ಪ್ರಭಾರಿ ಬಿಇಓ ಅಶೋಕ್ ಕುಂಬಾರ್ ಮಾತನಾಡಿ, ಕೋವಿಡ್ ವೇಳೆ ಶಾಲೆಗಳು ಬಂದ್ ಆದಾಗ ಮಕ್ಕಳಿಗೆ ಟ್ಯಾಬ್ ಮೂಲಕ ಸಿದ್ಧ ಪಠ್ಯಪೊರೈಸುವ ಮೂಲಕ ಮಕ್ಕಳು ಮನೆಯಲ್ಲೇ ಕುಳಿತು ಪಾಠ ಕಲಿಯಲು ಟ್ಯಾಬ್ ಅಭಿಯಾನ ಆರಂಭಿಸಿರುವುದು ನಿಜಕ್ಕೂ ಮಹಾಯಜ್ಞವಾಗಿದೆ. ಪಬ್ಲಿಕ್ ಟಿವಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಿಗ್ಗಾಂವ, ಹಿರೇಮಣಕಟ್ಟಿ, ಹಿರೇಬೆಂಡಿಗೇರಿ ಗ್ರಾಮದ ಶಾಲೆಯ ಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.