Tag: ಶಿಗೇರು ಇಶಿಬಾ

  • ರಾಜೀನಾಮೆ ಘೋಷಿಸಿದ ಜಪಾನ್‌ ಪ್ರಧಾನಿ ಶಿಗೇರು ಇಶಿಬಾ

    ರಾಜೀನಾಮೆ ಘೋಷಿಸಿದ ಜಪಾನ್‌ ಪ್ರಧಾನಿ ಶಿಗೇರು ಇಶಿಬಾ

    ಟೊಕಿಯೊ: ಜಪಾನ್‌ ಪ್ರಧಾನಿ ಶಿಗೇರು ಇಶಿಬಾ (Shigeru Ishiba) ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಅಧಿಕಾರಕ್ಕೇರಿ ಒಂದು ವರ್ಷ ಅವಧಿ ಪೂರೈಸುವುದಕ್ಕಿಂತ ಮೊದಲೇ ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತ ಕಳೆದುಕೊಂಡು ರಾಜೀನಾಮೆ ಘೋಷಿಸಿದ್ದಾರೆ.

    ವಿಶ್ವದ 4ನೇ ಅತೀ ದೊಡ್ಡ ಆರ್ಥಿಕತೆಯಾಗಿರುವ ಜಪಾನ್‌ನಲ್ಲಿ (Japan) ಆಹಾರ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕಾರು ಉದ್ಯಮದ ಮೇಲೆ ಅಮೆರಿಕ ಹೇರಿದ ಸುಂಕವು ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ಈ ನಡುವೆಯೆ ಪ್ರಧಾನಿ ಶಿಗೇರು ರಾಜೀನಾಮೆ ಘೋಷಿಸಿದ್ದಾರೆ. ಈಗ ವಿಶ್ವದ 4ನೇ ಆರ್ಥಿಕತೆಯಾದ ಜಪಾನ್‌ ಅನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಕುತೂಹಲ ಹುಟ್ಟಿಕೊಂಡಿದೆ. ಇದನ್ನೂ ಓದಿ: ಮೋದಿ ನನ್ನ ಒಳ್ಳೆಯ ಸ್ನೇಹಿತ: ಮತ್ತೆ ಯೂಟರ್ನ್‌ ಹೊಡೆದ ಟ್ರಂಪ್‌

    ಸದ್ಯ ಅಮೆರಿಕದ ಸುಂಕದ ಕ್ರಮಗಳ ಕುರಿತ ಮಾತುಕತೆಗಳು ಒಂದು ತೀರ್ಮಾನಕ್ಕೆ ಬಂದಿವೆ. ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಪಕ್ಕಕ್ಕೆ ಸರಿದು ಮುಂದಿನ ತಲೆಮಾರಿಗೆ ದಾರಿ ಮಾಡಿಕೊಡಲು ತೀರ್ಮಾನಿಸಿದ್ದೇನೆ ಎಂದು ಇಶಿಬಾ ಹೇಳಿದ್ದಾರೆ. ಇದನ್ನೂ ಓದಿ: PublicTV Explainer: ಮತ್ತೊಮ್ಮೆ ಇಂಡೋ-ಚೀನಾ ಭಾಯಿ ಭಾಯಿ- ಭಾರತಕ್ಕೆ ಚೀನಾ ಯಾಕೆ ಬೇಕು?

    ಇಶಿಬಾ ರಾಜೀನಾಮೆ ಏಕೆ?
    ದೀರ್ಘಕಾಲದ ವರೆಗೆ ಜಪಾನ್‌ ಆಳಿದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (LDP)ಯಿಂದ ಇಶಿಬಾ ಪ್ರಧಾನಿ ಹುದ್ದೆಗೇರಿದ್ದರು. ಈಗ ಸಂಸತ್ತಿನ ಎರಡೂ ಸದನಗಳಲ್ಲಿ ಬಹುಮತ ಕಳೆದುಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ತಮ್ಮದೇ ಪಕ್ಷದ ಕೆಲ ಬಲಪಂಥೀಯ ನಾಯಕರು ಇಶಿಬಾ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಒತ್ತಾಯಿಸುತ್ತಿದ್ದರು. ಆದ್ರೆ ಇಶಿಬಾ ಈ ಒತ್ತಾಯವನ್ನ ವಿರೋಧಿಸುತ್ತಲೇ ಬಂದಿದ್ದರು. ಆ ಬಳಿಕ ಹೊಸ ನಾಯಕನನ್ನ ಮತ ಚಲಾವಣೆ ಮೂಲಕ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕೆ ಇನ್ನೂ ಒಂದು ದಿನ ಬಾಕಿಯಿರುವಾಗಲೇ ಇಶಿಬಾ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷ ವಿಭಜನೆ ತಪ್ಪಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

  • ಜಪಾನ್‌ ಪ್ರಧಾನಿ, ಅವರ ಪತ್ನಿಗೆ ವಿಶೇಷ ಗಿಫ್ಟ್‌ ಕೊಟ್ಟ ಮೋದಿ – ಚಂದ್ರಶಿಲೆಯ ಬಟ್ಟಲು, ಪಶ್ಮಿನಾ ಶಾಲಿನ ವಿಶೇಷತೆ ಏನು?

    ಜಪಾನ್‌ ಪ್ರಧಾನಿ, ಅವರ ಪತ್ನಿಗೆ ವಿಶೇಷ ಗಿಫ್ಟ್‌ ಕೊಟ್ಟ ಮೋದಿ – ಚಂದ್ರಶಿಲೆಯ ಬಟ್ಟಲು, ಪಶ್ಮಿನಾ ಶಾಲಿನ ವಿಶೇಷತೆ ಏನು?

    ಟೊಕಿಯೊ: ಎರಡು ದಿನಗಳ ಜಪಾನ್ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಿದರು. ತಮ್ಮ ಭೇಟಿಯ ಸಮಯದಲ್ಲಿ, ಭಾರತ ಮತ್ತು ಜಪಾನ್ ನಡುವೆ 13 ಪ್ರಮುಖ ಒಪ್ಪಂದಗಳು ಮತ್ತು ಘೋಷಣೆಗಳನ್ನು ಮಾಡಿಕೊಂಡಿದ್ದು ಹಲವಾರು ಪರಿವರ್ತನಾ ಉಪಕ್ರಮಗಳ ಪ್ರಾರಂಭವನ್ನ ಘೋಷಿಸಲಾಯಿತು.

    ಇನ್ನೂ ಜಪಾನ್‌ಗೆ (Japan) ಭೇಟಿ ನೀಡಿದ್ದ ವೇಳೆ ಮೋದಿ ಅವರು ಜಪಾನ್ ಪ್ರಧಾನಿ ಶಿಗೇರು ಇಶಿಬಾ (Shigeru Ishiba) ಮತ್ತು ಅವರ ಪತ್ನಿ ಯೋಶಿಕೊ ಇಶಿಬಾಗೆ ವಿಶೇಷ ಉಡುಗೊರೆಯನ್ನ ನೀಡಿದ್ದಾರೆ. ಯೋಶಿಕೊ ಇಶಿಬಾ ಅವರಿಗೆ ಪಶ್ಮಿನಾ ಶಾಲು ನೀಡಿದ್ದಾರೆ. ಹಾಗೆಯೇ ಶಿಗೇರು ಇಶಿಬಾ ಅವರಿಗೆ ಚಾಪ್‌ಸ್ಟಿಕ್‌ಗಳೊಂದಿಗೆ ರಾಮೆನ್ ಬೌಲನ್ನ ಉಡುಗೊರೆಯಾಗಿ ನೀಡಿದ್ದಾರೆ.

    ಈ ಉಡುಗೊರೆಯ ವಿಶೇಷತೆ ಏನು?
    ಸಿಲ್ವರ್ ಚಾಪ್‌ಸ್ಟಿಕ್‌ಗಳೊಂದಿಗೆ ನೀಡಲಾದ ವಿಂಟೇಜ್ ಪ್ರೆಷಸ್ ಸ್ಟೋನ್‌ ರಾಮೆನ್‌ ಬೌಲ್‌ಗಳು (Ramen Bowls) ಭಾರತೀಯ ಕಲಾತ್ಮಕತೆ ಮತ್ತು ಜಪಾನೀಸ್ ಪಾಕಪದ್ಧತಿಯ ಪ್ರತೀಕವಾಗಿದೆ. 4 ಸಣ್ಣ ಚಾಪ್‌ಸ್ಟಿಕ್‌ಗಳು ಮತ್ತು ಬೆಳ್ಳಿ ಚಾಪ್‌ಸ್ಟಿಕ್‌ಗಳೊಂದಿಗೆ ದೊಡ್ಡ ಕಂದು ಚಂದ್ರಶಿಲೆಯ ಬಟ್ಟಲನ್ನು ಒಳಗೊಂಡಿರುವ ಇದು ಜಪಾನ್‌ನ ಡಾನ್‌ಬುರಿ ಮತ್ತು ಸೋಬಾ ಆಚರಣೆಗಳಿಂದ ಸ್ಫೂರ್ತಿ ಪಡೆದಿದೆ.

    ಆಂಧ್ರಪ್ರದೇಶದಿಂದ ತರಲಾದ ಈ ಚಂದ್ರಶಿಲೆಯು ಸುಂದರ ಹೊಳಪು ನೀಡುತ್ತದೆ. ಪ್ರೀತಿ, ಸಮತೋಲನ ಮತ್ತು ರಕ್ಷಣೆಯನ್ನು ಇದು ಸಂಕೇತಿಸುತ್ತದೆ. ಇನ್ನೂ ಯೋಶಿಕೊ ಇಶಿಬಾ ಅವರಿಗೆ ಪಶ್ಮಿನಾ ಶಾಲು ಲಡಾಖ್‌ನಲ್ಲಿರುವ ಚಾಂಗ್‌ಥಂಗಿ ಆಡಿನ ಉತ್ತಮ ಉಣ್ಣೆಯಿಂದ ತಯಾರಿಸಲಾಗುತ್ತದೆ. ಇದು ಹಗುರ, ಮೃದುವಾಗಿರುತ್ತದೆ. ಕಾಶ್ಮೀರಿ ಕುಶಲಕರ್ಮಿಗಳು ಕೈಯಿಂದ ನೇಯ್ದಿರುತ್ತಾರೆ. ಇದು ಶತಮಾನಗಳಷ್ಟು ಹಳೆಯದಾದ ಸಂಪ್ರದಾಯದವನ್ನು ಸಂಕೇತಿಸುತ್ತದೆ. ಶಾಲು ಮತ್ತು ಪೆಟ್ಟಿಗೆ ಒಟ್ಟಾಗಿ ಕಾಶ್ಮೀರದ ಕಲಾತ್ಮಕತೆ, ಪರಂಪರೆ ಮತ್ತು ಕಾಲಾತೀತ ಸೊಬಗನ್ನು ಪ್ರತಿನಿಧಿಸುತ್ತವೆ.

    ಇದಕ್ಕೂ ಮುನ್ನ ಟೋಕಿಯೊದ ದೇವಾಲಯದ ಅರ್ಚಕರೊಬ್ಬರು ಪ್ರಧಾನಿ ಮೋದಿ ಅವರಿಗೆ ದರುಮಾ ಗೊಂಬೆಯನ್ನ ಉಡುಗೊರೆಯಾಗಿ ನೀಡಿದರು, ಇದನ್ನು ಜಪಾನ್‌ನಲ್ಲಿ ವಿಶೇಷವೆಂದು ಪರಿಗಣಿಸಲಾಗಿದೆ.